ವಿಜಯಸಾಕ್ಷಿ ಸುದ್ದಿ, ಗದಗ: ತಮಿಳುನಾಡು, ಕೊಯಿಮತ್ತೂರಿನಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆಯಲಿರುವ 4ನೇ ರಾಷ್ಟ್ರಮಟ್ಟದ ವಿಕಲಚೇತನರ ಸಿಟ್ಟಿಂಗ್ ಥ್ರೋ ಬಾಲ್ ಕ್ರೀಡಾಕೂಟಕ್ಕೆ ಗದಗ ಜಿಲ್ಲೆಯಿಂದ 5 ಜನ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
Advertisement
ಮಹಾಂತೇಶ್ ಬೇವೂರ್, ಖಾಜಾಹುಸೇನ್ ಕಾತರಕಿ, ಸೋಮಶೇಖರ ಬಿಚಗಲ್ಲ, ಆನಂದ್ ಬೇಂದ್ರೆ ಮತ್ತು ಮಾಲತಿ ಇನಾಮತಿ ಅವರು ತಂಡಕ್ಕೆ ಆಯ್ಕೆಯಾಗಿದ್ದು, ಜೆ.ಎಮ್.ಜೆ ವರ್ಲ್ಡ್ ಸ್ಪೋರ್ಟ್ಸ್ ಕ್ಲಬ್‌ನ ಮುಖ್ಯ ತರಬೇತುದಾರ ರಿಚರ್ಡ್ ಧರ್ಮದಾಸ ತರಬೇತಿ ನೀಡಿದ್ದರು. ಗದಗ, ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಚರ್ಮರೋಗ ತಜ್ಞ ಡಾ. ತುಕಾರಾಮ ಸೂರಿ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.