ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜಮಾತೆ ಅಹಲೇ ಸುನ್ನತ್ ಕರ್ನಾಟಕ ಗದಗ ಹಾಗೂ ಎಸ್.ಡಿ.ಪಿ.ಐ. ಸಂಘಟನೆ ಗದಗ ಇವರು ಐ.ಎಂ.ಎ. ಬ್ಲಡ್ ಬ್ಯಾಂಕ್ ಗದಗ ಇವರ ಸಹಯೋಗದಲ್ಲಿ ಈ ಹಿಂದೆ ಹುಬ್ಬಳ್ಳಿ ರಸ್ತೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ರಕ್ತದಾನವನ್ನು ಮಾಡಿದ್ದರು. ಇದಕ್ಕೆ ಕಾರಣೀಕರ್ತರಾದ ಸಂಘಟನೆಯ ಮುಖ್ಯಸ್ಥರಾದ ಜಿಷಾನ್ ಬೇಗ್ ಹಾಗೂ ಬಿಲಾಲ್ ಗೋಕಾವಿ ಇವರಿಗೆ ಐ.ಎಂ.ಎ. ಬ್ಲಡ್ ಬ್ಯಾಂಕ್ ವತಿಯಿಂದ ಡಾ. ಪ್ಯಾರ್ ಅಲಿ ನೂರಾನಿಯವರು ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಪ್ಯಾರಾಅಲಿ ನೂರಾನಿ, ಉದಾತ್ತ ಜೀವ ಉಳಿಸುವ ಉದ್ದೇಶಕ್ಕಾಗಿ ದಾನ ಮಾಡಲು 400ಕ್ಕೂ ಹೆಚ್ಚು ಯುವಕರನ್ನು ಪ್ರೇರೇಪಿಸಿದ್ದಾರೆ. ಅವರ ನಿಸ್ವಾರ್ಥ ಪ್ರಯತ್ನಗಳು ಪ್ರಶಂಸನೀಯ. ಅವರಿಗೆ ನೀಡಿದ ಪುರಸ್ಕಾರಗಳು ಮತ್ತು ಅವರ ತಂಡಗಳು ಈ ಜೀವ ಉಳಿಸುವ ಕಾರ್ಯಕ್ಕೆ ಪ್ರೇರಣೆಯಾಗಿವೆ ಎಂದರು.
ಈ ಸಂರ್ಭದಲ್ಲಿ ಐ.ಎಂ.ಎ. ಅಧ್ಯಕ್ಷ ಡಾ. ಜಿ.ಪಲ್ಲೆದ, ಬ್ಲಡ್ ಬ್ಯಾಂಕ್‌ನ ಅಧ್ಯಕ್ಷ ಡಾ. ಪವನ ಪಾಟೀಲ, ಕಾರ್ಯದರ್ಶಿ ಡಾ. ವಿರೇಶ ಹಂಚಿನಾಳ, ಡಾ. ಶ್ರೀಧರ್ ಕುರಡಗಿ, ಕಾರ್ಯದರ್ಶಿ ಡಾ. ಅವಿನಾಶ ಓದುಗೌಡರ್, ಖಜಾಂಚಿ ಡಾ. ಧನ್ನೂರ ಮುಂತಾದವರು ಉಪಸ್ಥಿತರಿದ್ದರು.