ಒರಿಗಾಮಿ ಫ್ಯಾಕ್ಟರಿಯಲ್ಲಿ ಅವಘಡ: 4 ಮಹಿಳಾ ಕಾರ್ಮಿಕರಿಗೆ ಗಾಯ

0
Spread the love

ದೊಡ್ಡಬಳ್ಳಾಪುರ : ಒರಿಗಾಮಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ನಾಲ್ವರು ಮಹಿಳೆಯರು ಗಾಯಗೊಂಡಿದ್ದು, ಒರ್ವ ಮಹಿಳಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಗಾಯಗೊಂಡಿರುವ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ಕೊಡಸದೆ ನಿರ್ಲಕ್ಷ್ಯತೆ ವಹಿಸಿದೆ ಎಂದು ಕನ್ನಡಪರ ಹೋರಾಟಗಾರರು ಅಕ್ರೋಶ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರದ ಅಪೆರಲ್ಸ್ ಪಾರ್ಕ್‌ನಲ್ಲಿರುವ ಒರಿಗಾಮಿ ಸೆಲ್ಯೂಲೋ ಪ್ರೈವಿಟ್ ಲಿಮಿಟೆಡ್ ಟಿಶ್ಯೂ ಪೇಪರ್ ತಯಾರಿಸುತ್ತದೆ, ಫ್ಯಾಕ್ಟರಿಯಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರಿದ್ದು ಹೆಚ್ಚಾಗಿ ಮಹಿಳಾ ಕಾರ್ಮಿಕರು ಇದ್ದಾರೆ.

ನಿನ್ನೆ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ವೇಳೆ ಶೀಟ್ ಜಾರಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಮೇಲೆ ಬಿದ್ದಿದೆ, ನಾಲ್ವರು ಮಹಿಳೆಯರು ಗಾಯಗೊಂಡಿದ್ದು, ಒರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆಯನ್ನ ಒರಿಗಾಮಿ ಫ್ಯಾಕ್ಟರಿಯ ಆಡಳಿತ ಮಂಡಳಿ ನೀಡಿಲ್ಲ, ಸೀಜ್ ಮಾಡಲಾಗಿರುವ ಆಸ್ಪತ್ರೆಯಲ್ಲಿ ದಾಖಲು ಮಾಡಿ ಕಾರ್ಮಿಕರನ್ನ ಕೀಳಾಗಿ ನೋಡಿದ್ದಾರೆ, ಗಾಯಗೊಂಡ ಕಾರ್ಮಿಕರಿಗೆ ವಾಹನ ಸೌಲಭ್ಯ ನೀಡದೆ ಉದಾಸೀನತೆ ತೋರಿದ್ದಾರೆ, ಪ್ರಕರಣವನ್ನ ಫ್ಯಾಕ್ಟರಿಯಲ್ಲೇ ಮುಚ್ಚಿ ಹಾಕಲು ಪೊಲೀಸರಿಗಾಗಲಿ, ಕಾರ್ಮಿಕ ಅಧಿಕಾರಿಗಾಗಲಿ ಯಾವುದೇ ಮಾಹಿತಿ ನೀಡಿಲ್ಲ, ಗಾಯಗೊಂಡಿರುವ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಫ್ಯಾಕ್ಟರಿ ಮುಂದೆ ಪ್ರತಿಭಟನೆ ಮಾಡುವುದ್ದಾಗಿ ರಾಜಘಟ್ಟ ರವಿ ಎಚ್ಚರಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here