ಹುಬ್ಬಳ್ಳಿ: ಪಾಕ್ʼಗೆ ಪಾಠ ಕಲಿಸಲು ನಮ್ಮ ಸೇನೆಗೆ ಎಲ್ಲಾ ಸ್ವಾತಂತ್ರ್ಯ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಭಯೋತ್ಪಾದನೆಯನ್ನ ಪೋಷಣೆ ಮಾಡುತ್ತಾ ಇರುತ್ತೆ.
ಪಾಕ್ಗೆ ಪಾಠ ಕಲಿಸಲು ನಮ್ಮ ಸೇನೆಗೆ ಎಲ್ಲಾ ಸ್ವಾತಂತ್ರ್ಯ ನೀಡಲಾಗಿದೆ. ಯುದ್ಧದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿವೆ. ನಾವು ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬೆರೆಸಲ್ಲ. ಪಾಕಿಸ್ತಾನಕ್ಕೆ ಯಾವ ರೀತಿ ಉತ್ತರ ಕೊಡಬೇಕು ಕೊಡಲಾಗಿದೆ ಎಂದು ಹೇಳಿದ್ದಾರೆ.
ಭಾರತ ಪಾಕಿಸ್ತಾನ ಯುದ್ಧ ವಿಚಾರವಾಗಿ ಪಾಕ್ ಡಬಲ್ ಸ್ಟ್ಯಾಂಡರ್ಡ್ ನೀತಿ ವಿಚಾರವಾಗಿ ಮಾತನಾಡಿದ ಅವರು, ಇದೊಂದು ಪಾಕಿಸ್ತಾನದ ಇಬ್ಬಗೆಯ ನೀತಿ. ಯುದ್ಧ ಆರಂಭವಾದಾಗಿನಿಂದ ಪಾಕ್ಗೆ ಭಾರತ ತಕ್ಕ ಉತ್ತರ ನೀಡಿದೆ. ವಿಶ್ವ ಮಟ್ಟದಲ್ಲಿ ಕೆಲವು ಕ್ರಮ ಕೈಗೊಳ್ಳಬೇಕಾಗುತ್ತದೆ. ಕದನ ವಿರಾಮ ಬಳಿಕವೂ ಪಾಕ್ ದಾಳಿ ಸರಿಯಾದ ಕ್ರಮವಲ್ಲ. ಪಾಕ್ ಮಿಲಿಟರಿ ಪಡೆ ಸರ್ಕಾರದ ಮಾತು ಕೇಳಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.