ನಮ್ಮ ಸಿಎಂ ಇನೋಸೆಂಟ್, ಲೀಗಲ್​ನಲ್ಲಿ ಟಾಪ್!- ಸಿದ್ದು ಪರ ಎಸ್​ಎಸ್ ಮಲ್ಲಿಕಾರ್ಜುನ್ ಬ್ಯಾಟಿಂಗ್!

0
Spread the love

ದಾವಣಗೆರೆ:- ನಮ್ಮ ಸಿಎಂ ಮುಗ್ದ, ಲೀಗಲ್​ನಲ್ಲಿ ಟಾಪ್ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪರ ಎಸ್​ಎಸ್ ಮಲ್ಲಿಕಾರ್ಜುನ್ ಬ್ಯಾಟಿಂಗ್ ಮಾಡಿದ್ದಾರೆ.

Advertisement

ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು, ಸಿಎಂ ನಿರಪರಾಧಿ, ಬಿಜೆಪಿಯವರು ರಾಜಕೀಯ ಷ್ಯಡ್ಯಂತ್ರ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮುಗ್ಧರು ಆದರೆ ಲೀಗಲ್​ನಲ್ಲಿ ಟಾಪ್ ಇದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.

ಲೋಕಾಯುಕ್ತದಲ್ಲಿ ಎಫ್ ಐಆರ್ ಆಗಿದೆ, ನಾವು ಲೀಗಲಿ ಫೈಟ್ ಮಾಡುತ್ತೇವೆ. ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ​ ಅರೆಸ್ಟ್ ವಾರೆಂಟ್ ಆಗಿತ್ತು, ಹಾಗಾಗಿ ಬಂಧನ ಮಾಡಿದ್ದರು. ಈಗ ಸಿಎಂ ಮೇಲೆ ಆರೋಪ ಮಾತ್ರ ಇದೆ. ಕೋರ್ಟ್ ಆದೇಶ ಹಿನ್ನಲೆ ಎಫ್ ಐಆರ್ ಆಗಿದೆ ಅಷ್ಟೆ, ಮುಂದೇ ಏನು ಮಾಡಬೇಕೆಂಬುದನ್ನ ಯೋಚನೆ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ರಾಜೀನಾಮೆ ನೀಡಬೇಕು, ಪಕ್ಷಕ್ಕೆ ಮುಜುಗರ ಆಗಬಾರದು ಎಂದೆಲ್ಲಾ ಹೇಳಿಕೆ ನಿಡಿದ್ದ ಮಾಜಿ ಸ್ಪೀಕರ್, ಕೋಳಿವಾಡ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಅವರು, ಕೋಳಿವಾಡ್​ಗೆ ವಯಸ್ಸಾಗಿದೆ, ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ನಾನು ಮಾತನಾಡೋಲ್ಲ. 136 ಜನ ಶಾಸಕರು ಗಟ್ಟಿಯಾಗಿದ್ದು ಸಿಎಂಗೆ ಬೆಂಬಲ‌ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಇಲ್ಲವೇ ಇಲ್ಲ ಎಂದು ಗಟ್ಟಿಯಾಗಿ ಹೇಳಿದರು.

ಕ್ಯಾಬೆನೆಟ್ ನಲ್ಲಿ ಸಿಬಿಐಗೆ ಮೂಗುದಾರ ಹಾಕಿರುವ ವಿಚಾರಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿ, ರಾತ್ರೋರಾತ್ರಿ ನೋಟೀಸ್ ಕೊಟ್ರೆ ನೋಡಿಕೊಂಡು ಸುಮ್ಮನಿರಬೇಕಾ? ಅದಕ್ಕೆ ಲೀಗಲ್ ಆಗಿ ಹೋಗಬೇಕೆಂಬ ನಿಯಮ ಮಾಡಿದ್ದೇವೆ. ಮುಖ್ಯ ಕಾರ್ಯದರ್ಶಿಯಿಂದ ಕ್ಯಾಬಿನೆಟ್ ಗೆ ಬಂದು ಪಾಸ್ ಆಗುತ್ತೆ ಎಂದು ಉತ್ತರಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರ ಯೋಜನೆ ತಂದಿದ್ದಕ್ಕೆ ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಹಾಗಾಗಿ ಈ ರೀತಿಯಾಗಿ ಷ್ಯಡ್ಯಂತ್ರ ಮಾಡಿದ್ದಾರೆ ಎಂದು ಎಸ್ ಎಸ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದರು.


Spread the love

LEAVE A REPLY

Please enter your comment!
Please enter your name here