ಬೆಂಗಳೂರು;- 13ನೇ ವರ್ಷಕ್ಕೆ ನಮ್ಮ ಮೆಟ್ರೋ ಕಾಲಟ್ಟಿದೆ. ಶುಕ್ರವಾರ 13 ನೇ ವರ್ಷಕ್ಕೆ ಮೆಟ್ರೋ ಕಾಲಿಟ್ಟಿದ್ದು, ಇತ್ತೀಚೆಗೆ ಪ್ರಾರಂಭವಾದ ಪೂರ್ಣ ನೇರಳೆ ಮಾರ್ಗದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಂಚರಿಸುತ್ತಿದ್ದಾರೆ. ಅದರ ಒಟ್ಟಾರೆ ನೆಟ್ವರ್ಕ್ 73.81 ಕಿಮೀಗೆ ವಿಸ್ತರಿಸಿದೆ. ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 7 ಲಕ್ಷ ದಾಟುತ್ತಿದೆ. ಅಕ್ಟೋಬರ್ 13 ರಂದು 7.5 ಪ್ರಯಾಣಿಕರು ಸಂಚರಿಸಿದ್ದಾರೆ.
ಈ ಬಗ್ಗೆ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್, ಈ ವರ್ಷ ಹಬ್ಬದ ಸೀಸನ್ ಮುಗಿದು, ಎಲ್ಲಾ ಐಟಿ ಕಂಪನಿಗಳು ಕಚೇರಿಯಿಂದ ಕೆಲಸ ಮಾಡಲು ಒತ್ತಾಯಿಸಿದಾಗ ಪ್ರಯಾಣಿಕರ ಸಂಖ್ಯೆ 8.5 ಲಕ್ಷವನ್ನು ಮುಟ್ಟುವ ನಿರೀಕ್ಷೆಯಿದೆ. ಇದು 2024 ಜನವರಿ ಮತ್ತು ಮಾರ್ಚ್ ನಡುವೆ ಯಾವುದೇ ಸಮಯದಲ್ಲಿ ಸಂಭವಿಸಬಹುದು ಎಂದು ಅವರು ಹೇಳಿದರು.
ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಕೆಆರ್ ಪುರಕ್ಕೆ ಸಂಪರ್ಕ ಕಲ್ಪಿಸಿದ ನಂತರ 75,000 ಪ್ರಯಾಣಿಕರು ಸಂಚರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈಗ ಸುಮಾರು 80,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆರ್ ವಿ ರಸ್ತೆ-ಬೊಮ್ಮಸಂದ್ರ ಕಾರ್ಯಾರಂಭವಾದಗ ಪ್ರಯಾಣಿಕರ ಸಂಖ್ಯೆಯಲ್ಲಿ ಇನ್ನೂ 1.5 ರಿಂದ 2 ಲಕ್ಷ ಹೆಚ್ಚಾಗಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದು 10 ಲಕ್ಷ ದಾಟಲಿದೆ ಎಂದು ತಿಳಿಸಿದರು.