ಮೈಸೂರು: ಮೂರಕ್ಕೆ ಮೂರು ಸ್ಥಾನವನ್ನು ನಮ್ಮ NDA ಪಕ್ಷ ಗೆಲ್ಲುತ್ತದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳ ಉಪಚುನಾವಣೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಚನ್ನಪಟ್ಟಣದಲ್ಲಿ ಸಿ. ಪಿ ಯೋಗೇಶ್ವರ್ ಅವರ ಆತುರದ ನಿರ್ಧಾರದಿಂದ ಜನ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಸಂಶಯ ಸಾಮಾನ್ಯರಲ್ಲಿ ಕಾಡುತ್ತಿದೆ. ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ಜನರು ಈ ಉಪಚುನಾವಣೆ ಮೂಲಕ ನೀಡುತ್ತಾರೆ. ಮೂರಕ್ಕೆ ಮೂರು ಸ್ಥಾನವನ್ನು ನಮ್ಮ ಎನ್ಡಿಎ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು.
ಇನ್ನೂ ಯಡಿಯೂರಪ್ಪ ಪತ್ನಿ ಸಾವು ಬಗ್ಗೆ ಬೈರತಿ ಸುರೇಶ್ ಹೇಳಿಕೆಯ ಬಗ್ಗೆ ಮಾತನಾಡಿ, ಅವರು ಒಬ್ಬರು ಮಂತ್ರಿಯಾಗಿದ್ದಾರೆ. ಅವರು ಹೀಗೆ ಮಾತನಾಡುವುದು ಸರಿಯಲ್ಲ. ಶೋಭಾ ಕರಂದ್ಲಾಜೆ ಪುಟಕ್ಕಿಟ್ಟ ಚಿನ್ನ. ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ ಎಂದರು.