ವಿಜಯಸಾಕ್ಷಿ ಸುದ್ದಿ, ನರಗುಂದ : ಎಲ್ಲ ಕಾಲಕ್ಕೂ ಹೇಗೆ ಯುಗ ಪುರುಷರು ಇರುತ್ತಾರೆಯೋ ಅದೇ ರೀತಿ ಈಗಿನ ಕಾಲದ ಯುಗ ಪುರುಷರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಎಂದು ಶಿರೋಳ ತೋಂಟದಾರ್ಯ ಮಠದ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ನುಡಿದರು.
ಅವರು ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ಎರಡನೇ ದಿನದ `ನಮ್ಮ ನಡೆ-ಆಧ್ಯಾತ್ಮದ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತತ ಒಂದು ತಿಂಗಳ ಕಾಲ ಮೌನ ಲಿಂಗಾನುಷ್ಠಾನದಲ್ಲಿ ತೊಡಗಿದ್ದ ಶಿರೋಳ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಶಾಂತಲಿಂಗ ಮಹಾಸ್ವಾಮಿಗಳು ಆಗಸ್ಟ್ ೫ರಂದು ಮೌನಲಿಂಗಾನುಷ್ಠಾನ ಮಂಗಲೋತ್ಸವ ದಿನ ಡಾ. ಸಿದ್ದರಾಮ ಮಹಾಸ್ವಾಮಿಗಳಿಂದ “ನಮ್ಮ ನಡೆ ಆಧ್ಯಾತ್ಮದ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಎಡೆಯೂರು ಸಿದ್ದಲಿಂಗೇಶ್ವರ ದರ್ಶನ ಪಡೆದು ವಾಪಸಾದ ಬಳಿಕ ಆಗಸ್ಟ್ 10ರಿಂದ ಆಗಸ್ಟ್ 31ರವರೆಗೆ `ನಮ್ಮ ನಡೆ-ಆಧ್ಯಾತ್ಮದ ಕಡೆ’ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಜನರನ್ನು ಆಧ್ಯಾತ್ಮ ಚಿಂತನದತ್ತ ಸೆಳೆಯುತ್ತಿದ್ದಾರೆ ಎಂದರು.
ಸವಿತಾ ಹಾದಿಮನಿ ಪ್ರಾರ್ಥನೆ ಹಾಡಿದರು. ಬಾಪುಗೌಡ ತಿಮ್ಮನಗೌಡ್ರ ತೋಂಟದ ಸಿದ್ಧಲಿಂಗ ಶ್ರೀಗಳ ಕುರಿತಾಗಿ ಉಪನ್ಯಾಸವನ್ನು ನೀಡಿದರು. ಸ್ನೇಹಾ ಮುದಕವಿಮಠ, ಕಾವ್ಯ ಜಂಗಿನ, ಶ್ರೇಯಾ ಮುಲ್ಕಿಪಾಟೀಲ ಸೇರಿದಂತೆ ಅನೇಕ ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು.
ಈ ಸಂದರ್ಭದಲ್ಲಿ ಅಭಿನವ ಎಚ್ಚರಸ್ವಾಮಿಗಳು, ಕಿತ್ತಲಿಯ ಮಂಜುನಾಥ ಸ್ವಾಮಿಗಳು, ಅಕ್ಕಮಹಾದೇವಿ ಅಮ್ಮನವರು, ಹಿರೇಮಠದ ಅಪ್ಪಯ್ಯ ಹಿರೇಮಠ, ರುದ್ರಯ್ಯ ಹಿರೇಮಠ ಸೇರಿದಂತೆ ಬಸವೇಶ್ವರ ದೇವಸ್ಥಾನದ ಈರಣ್ಣ ಮರಿಗುದ್ದಿ, ರವಿ ದೊಡಮನಿ, ಉಮೇಶ ಮರಿಗುದ್ದಿ, ಮೂರುಗಯ್ಯ ವಸ್ತçದ, ಮಂಜುನಾಥ ಬೂದಿಹಾಳ, ಲಾಲಸಾಬ ಅರಗಂಜಿ ಅಭಿಮಾನಿ ಬಳಗದ ಅಕ್ಷಯ ಗಡೆಕಾರ, ರಾಜೇಸಾಬ ಚಳ್ಳಮರದ, ಮುತ್ತು ಆಲಗುಂಡಿ ಉಪಸ್ಥಿತರಿದ್ದರು.