ತುಮಕೂರು: ಕೆ.ಎನ್. ರಾಜಣ್ಣ ವಜಾ ಬೆನ್ನಲ್ಲೇ ಮಧುಗಿರಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ರಾಜಣ್ಣ ವಜಾ ಪ್ರಕರಣದ ವಿರುದ್ಧ ಇಂದು ಮಧ್ಯಾಹ್ನ 1 ಗಂಟೆಯಿಂದ ಮಧುಗಿರಿಯಲ್ಲಿ ಸ್ವಯಂಪ್ರೇರಿತ ಬಂದ್ ಮಾಡಲು ಕಾಂಗ್ರೆಸ್ ಮುಖಂಡರು ಕರೆ ನೀಡಿದ್ದಾರೆ.
Advertisement
ಕಾಂಗ್ರೆಸ್ ಮುಖಂಡ ಎಂಕೆ ನಂಜುಂಡರಾಜು ಮಾತನಾಡಿ, ಇದು ತುಮಕೂರು ಜಿಲ್ಲೆಗೆ ಆದ ದೊಡ್ಡ ಅನ್ಯಾಯ. ಸಿಎಂ ತಕ್ಷಣ ನಿರ್ಧಾರ ಮರಪರಿಶೀಲಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಧುಗಿರಿಯ ಎಲ್ಲಾ ಅಂಗಡಿಗಳು, ಮುಂಗಟ್ಟುಗಳು ಬಂದ್ ಮಾಡಲು ತೀರ್ಮಾನಿಸಲಾಗಿದ್ದು, ಇದು ಆರಂಭವಷ್ಟೆ, ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.