ಗದಗ: ಗದಗ ನಗರಕ್ಕೆ ಆಗಮಿಸಿದ ಮರಾಠಾ ಸಮಾಜದ ರಾಷ್ಟ್ರೀಯ ಮುಖಂಡರಾದ ಪಿ.ಜಿ.ಆರ್. ಸಿಂದ್ಯಾ ಅವರನ್ನು ಮರಾಠಾ ವಿದ್ಯಾವರ್ಧಕ ಸಂಘ ಗದಗ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಗದಗ, ಮಾತೋಶ್ರೀ ರಾಜಮಾತಾ ಜಿಜಾವು ಸ್ವಸಹಾಯ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮರಾಠಾ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಅರುಣಕುಮಾರ ಚವ್ಹಾಣ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ಡಾ. ರಾಜೀವ ರೋಖಡೆ, ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ ಉಪಸ್ಥಿತರಿದ್ದರು.



