ಬೆಂಗಳೂರು: ರೈತರ ಪಂಪ್ ಸೆಟ್ʼಗೆ ಕೊಡ್ತಿದ್ದ 25 ಸಾವಿನ ಸಬ್ಸಿಡಿ ಕಟ್ ಮಾಡಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರದಲ್ಲಿ PF ಡ್ಯೂ ಇತ್ತು ಅದಕ್ಕೆ 1,200 ಕೋಟಿ ಬಿಡುಗಡೆ ಮಾಡಿದ್ದರು. ಡಿಸೇಲ್ ಬಾಕಿಗೆ 800 ಕೋಟಿ ರಿಲೀಸ್ ಮಾಡಿದ್ರು. ಬಿಜೆಪಿ ಸರ್ಕಾರದಲ್ಲಿ 500 ಕೋಟಿ ಬಸ್ ಖರೀದಿಗೆ ಅನುಮತಿ ಕೊಟ್ಟಿತ್ತು. ಇವರು ದುಡ್ಡು ರಿಲೀಸ್ ಮಾಡಿದ್ದಾರೆ. ಆದರೆ ಅದಕ್ಕೆ ಅನುಮೋದನೆ ಕೊಟ್ಟಿದ್ದು ಬಿಜೆಪಿ.
ರಾಜ್ಯದಲ್ಲಿ ಈಗ ಯಾರದ್ದೋ ಮದುವೆಯಲ್ಲಿ ಉಂಡವನೇ ಜಾಣ ಅಂತ ಆಗಿದೆ. ರಾಜ್ಯದ ಜನ ಹೇಗೆ ಇದ್ದರು ಪರವಾಗಿಲ್ಲ ನಮ್ಮ ನಾಟಕ ನಾವು ಮಾಡೋಣ ಅಂತ ಈ ಸರ್ಕಾರದವರು ನಿರ್ಧಾರ ಮಾಡಿದ್ದಾರೆ. ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ. ರೈತರ ಪಂಪ್ ಸೆಟ್‌ಗೆ ಕೊಡ್ತಿದ್ದ 25 ಸಾವಿನ ಸಬ್ಸಿಡಿ ಕಟ್ ಮಾಡಿದ್ದಾರೆ.
ಕರೆಂಟ್ ಬಿಲ್, ಹಾಲಿನ ರೇಟ್, ಬಾಂಡ್ ಪೇಪರ್ ಹೆಚ್ಚಾಗಿದೆ. ಆಹಾರ ಪದಾರ್ಥಗಳು ಎಲ್ಲವೂ ಹೆಚ್ಚು ಮಾಡಿದ್ದಾರೆ. ಆದರು ಸಾರಿಗೆ ನಿಗಮಕ್ಕೆ ಹಣ ಕೊಟ್ಟಿಲ್ಲ. ಸಾರಿಗೆ ನೌಕರರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಕೊಡಲಿದೆ. ಕೂಡಲೇ ಬಾಕಿ ಹಣ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.