HomeGadag Newsವಿವಿಧ ಘಟಕಗಳಿಂದ ಪ್ಯಾಕೇಜ್ ಟೂರ್

ವಿವಿಧ ಘಟಕಗಳಿಂದ ಪ್ಯಾಕೇಜ್ ಟೂರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ಮಳೆಗಾಲದ ದಿನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಪ್ರಸಿದ್ಧ ಸ್ಥಳಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗಗಳ ವಿವಿಧ ಘಟಕಗಳಿಂದ ಭಾನುವಾರ ಮತ್ತು ರಜಾ ದಿನಗಳಂದು ವಿಶೇಷ ಪ್ಯಾಕೇಜ್ ಟೂರ್ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸದರಿ ವಿಶೇಷ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ: ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಜೋಗಫಾಲ್ಸ್ಗೆ ಬೆಳಿಗ್ಗೆ 0.30ಕ್ಕೆ ರಾಜಹಂಸ, 8 ಗಂಟೆಗೆ ವೋಲ್ವೋ ಮಲ್ಟಿ ಆಕ್ಸೆಲ್ ಸಾರಿಗೆ ಕಾರ್ಯಾಚರಣೆಗೊಳ್ಳಲಿವೆ. ಜೋಗಫಾಲ್ಸ್ ವೀಕ್ಷಿಸಿ 9 ಗಂಟೆಗೆ ಹುಬ್ಬಳ್ಳಿಗೆ ಹಿಂತಿರುಗಲಿವೆ. ಮಾರ್ಗ ಮಧ್ಯದಲ್ಲಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ:7760991682, 7760991674ಗೆ ಸಂಪರ್ಕಿಸಬಹುದಾಗಿದೆ.

ಧಾರವಾಡ ವಿಭಾಗದಿಂದ ವೇಗದೂತ ಸಾರಿಗೆ: ಧಾರವಾಡ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7.30 ಗಂಟೆಗೆ ಹೊರಟು ದಾಂಡೇಲಿ-ಮೊಸಳೆ ಪಾರ್ಕ್, ಮೌಳಂಗಿ ಫಾಲ್ಸ್, ಕೊಳಗಿ ನೇಚರ್ ಪಾರ್ಕ್, ಉಳವಿ ಚನ್ನಬಸವೇಶ್ವರ ದೇವಸ್ಥಾನಗಳನ್ನು ವೀಕ್ಷಿಸಿ ಮರಳಿ 7 ಗಂಟೆಗೆ ಧಾರವಾಡಕ್ಕೆ ಹಿಂತಿರುಗಲಿದೆ.

ಧಾರವಾಡ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 7:30 ಗಂಟೆಗೆ ಹೊರಟು ನವಿಲುತೀರ್ಥ, ಸೊಗಲ ಕ್ಷೇತ್ರ, ಗೋಕಾಕ ಫಾಲ್ಸ್, ಹಿಡಕಲ್ ಡ್ಯಾಮ್ ವೀಕ್ಷಿಸಿ 7 ಗಂಟೆಗೆ ಧಾರವಾಡಕ್ಕೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ:7760991688, 7760991679, 7760982552ಗೆ ಸಂಪರ್ಕಿಸಬಹುದಾಗಿದೆ.

ಚಿಕ್ಕೋಡಿ ವಿಭಾಗದಿಂದ ವೇಗದೂತ ಸಾರಿಗೆ: ಚಿಕ್ಕೋಡಿ ಬಸ್ ನಿಲ್ದಾಣದಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 9 ಗಂಟೆಗೆ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ ಫಾಲ್ಸ್ ವೀಕ್ಷಿಸಿ 6 ಗಂಟಗೆ ಚಿಕ್ಕೋಡಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ-7760991875 ಸಂಪರ್ಕಿಸಬಹುದಾಗಿದೆ.

ನಿಪ್ಪಾಣಿಯಿಂದ ಗೋಕಾಕ ಫಾಲ್ಸ್ಗೆ ನಿಪ್ಪಾಣಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 8:30 ಗಂಟೆಗೆ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ ಫಾಲ್ಸ್ ವೀಕ್ಷಿಸಿ 6 ಗಂಟೆಗೆ ನಿಪ್ಪಾಣಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ-7760991879 ಸಂಪರ್ಕಿಸಬಹುದಾಗಿದೆ.

ಸಂಕೇಶ್ವರದಿಂದ ಗೋಕಾಕ ಫಾಲ್ಸ್ ಗೆ ಬೆಳಿಗ್ಗೆ 9:30 ಗಂಟೆಗೆ ಸಂಕೇಶ್ವರ ಬಸ್ ನಿಲ್ದಾಣದಿಂದ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ ಫಾಲ್ಸ್ ವೀಕ್ಷಿಸಿ 6 ಗಂಟೆಗೆ ಸಂಕೇಶ್ವರಕ್ಕೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ-7760991877 ಸಂಪರ್ಕಿಸಬಹುದಾಗಿದೆ.

ಬೆಳಗಾವಿ ವಿಭಾಗದಿಂದ ವೇಗದೂತ ಸಾರಿಗೆ: ಬೆಳಗಾವಿಯಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ ಫಾಲ್ಸ್ ವೀಕ್ಷಿಸಿ ಮರಳಿ 7 ಗಂಟೆಗೆ ಬೆಳಗಾವಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ-7760991625ಗೆ ಸಂಪರ್ಕಿಸಬಹುದಾಗಿದೆ.

ಹಾವೇರಿ ವಿಭಾಗದಿಂದ ವೇಗದೂತ ಸಾರಿಗೆ: ಹಾವೇರಿಯಿಂದ ಜೋಗ ಪಾಲ್ಸ್ಗೆ ಬೆಳಿಗ್ಗೆ 8 ಗಂಟೆಗೆ ಹಾವೇರಿ ಬಸ್ ನಿಲ್ದಾಣದಿಂದ ಹೊರಟು ಶಿರಸಿ, ಸಿದ್ದಾಪೂರ ಮಾರ್ಗವಾಗಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನ ದರ್ಶನ ಪಡೆದು ಜೋಗ ಫಾಲ್ಸ್ ವೀಕ್ಷಿಸಿ ಮರಳಿ 7.30 ಗಂಟೆಗೆ ಹಾವೇರಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ-7760991925ಗೆ ಸಂಪರ್ಕಿಸಬಹುದಾಗಿದೆ.

ರಾಣೇಬೆನ್ನೂರನಿಂದ ಜೋಗ ಫಾಲ್ಸ್ಗೆ ಬೆಳಿಗ್ಗೆ 8 ಗಂಟೆಗೆ ರಾಣೇಬೆನ್ನೂರ ಬಸ್ ನಿಲ್ದಾಣದಿಂದ ಹೊರಟು ಹಿರೆಕೇರೂರ, ಶಿರಾಳಕೊಪ್ಪ, ಸೊರಬ, ಸಿದ್ದಾಪೂರ ಮಾರ್ಗವಾಗಿ ಜೋಗ ಫಾಲ್ಸ್ ವೀಕ್ಷಿಸಿ ಮರಳಿ 7.30 ಗಂಟೆಗೆ ರಾಣೇಬೆನ್ನೂರ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ-7760991927ಗೆ ಸಂಪರ್ಕಿಸಬಹುದಾಗಿದೆ.

ಸದರಿ ವಿಶೇಷ ಪ್ಯಾಕೇಜ್ ಸಾರಿಗೆಗಳ ಮುಂಗಡ ಟಿಕೆಟ್ ಬುಕಿಂಗ್‌ಗಾಗಿ www.ksrtc.in ವೆಬ್‌ಸೈಟ್ ಅಥವಾ ಬಸ್ ನಿಲ್ದಾಣದ ರಿಸರ್ವೇಶನ್ ಕೌಂಟರ್‌ಗಳ ಮೂಲಕ ಆಸನಗಳನ್ನು ಕಾಯ್ದಿರಿಸಬಹುದು. ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಭಾ.ಆ.ಸೇ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!