ಸಾಹಿತ್ಯ ಸಂವರ್ಧನೆಗೆ ಅಂಗಡಿಯವರ ಕೊಡುಗೆ ಅಪಾರ

0
Pada Garudiga Prof. Umesh shop memory
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪದಗಳಿಗೆ ನಾನಾ ಅರ್ಥಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಕನ್ನಡ ಭಾಷಾ ಕಲಿಕಾರ್ಥಿಗಳಲ್ಲಿ ಭಾಷಾಪ್ರೇಮವನ್ನು ಬೆಳೆಸಿದ ಉಮೇಶ ಅಂಗಡಿಯವರು ಕಾವ್ಯ, ಬರೆಹಗಳ ಮೂಲಕ ಗಮನ ಸೆಳೆದಿದ್ದಾರೆ. ಸಕಾಲದಲ್ಲಿ ಅವರ ಕೃತಿಗಳು ಪ್ರಕಟಗೊಂಡು ಓದುಗರ ಕೈಸೇರಿದ್ದರೆ ನವೋದಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುತ್ತಿದ್ದರು ಎಂದು ಸಂಶೋಧಕ, ಸಾಹಿತಿ ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ ಮತ್ತು ಸಾಹಿತ್ಯ ರಶ್ಮಿ ಪ್ರಕಾಶನ, ಗದಗ ಇವುಗಳ ಸಹಯೋದಲ್ಲಿ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಜರುಗಿದ `ಪದ ಗಾರುಡಿಗರ ಸ್ಮರಣೆ: ಪ್ರೊ. ಉಮೇಶ ಅಂಗಡಿ-ಒಂದು ನೆನಪು’ ಕಾರ್ಯಕ್ರಮದಲ್ಲಿ `ರಾಜೋಜ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಗುರು ನಮನ ಸಲ್ಲಿಸಿ ಮಾತನಾಡಿದ ಸಾಹಿತಿ ಚಂದ್ರಶೇಖರ ವಸ್ತçದ, ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಮೇಲೆ ಬೀರಿದ ಪ್ರಭಾವವನ್ನು ವಿವರಿಸಿದರು. ಅವರ ಪ್ರೋತ್ಸಾಹ ಮತ್ತು ಪ್ರೇರಣೆ ಸಾಹಿತ್ಯಿಕ ಒಲವನ್ನು ಬೆಳೆಸಿಕೊಳ್ಳಲು ಸಹಾಯಕವಾಯಿತು. ಒಬ್ಬ ಅಧ್ಯಾಪಕರಿಗೆ ಇರಬೇಕಾದ ಭಾಷಾ ಪ್ರೌಢಿಮೆ ಅವರಲ್ಲಿತ್ತು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದರು. ಹೊಸ ಹೊಸ ಶಬ್ದಗಳನ್ನು ಸೃಜಿಸುವ ವಿಶೇಷ ಗುಣ ಅವರದಾಗಿತ್ತು ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಸಿದ್ಧಲಿಂಗೇಶ ಸಜ್ಜನಶೆಟ್ಟರ, ಭಾಷೆಯನ್ನು ಪ್ರಾಯೋಗಿಕವಾಗಿ ಬಳಸುವ ಅಂಗಡಿಯವರ ಕಲೆಯನ್ನು ಅವರ ಕಾವ್ಯಗಳಲ್ಲಿ ಸಶಕ್ತವಾಗಿ ಕಾಣಬಹುದು. ಅವರ ಕಾವ್ಯಗಳನ್ನು ರಸ ವಿವೇಚನೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯತೆಯನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಅಂಗಡಿಯವರು ನಡೆದಾಡುವ ವಿಶ್ವಕೋಶವೇ ಆಗಿದ್ದರು. ಕಾವ್ಯಾತ್ಮಕ ಮಾತುಗಳ ಮೂಲಕ ಲೋಹ ಚುಂಬಕದಂತೆ ಆಕರ್ಷಿಸುತ್ತಿದ್ದರು. ಅವರ ಸಾಹಿತ್ಯ ಪ್ರಕಟನೆ ಮಾಡುವ ಮೂಲಕ ಅವರನ್ನು ಸದಾ ಜೀವಂತವಾಗಿಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ತಬಲಾ ವಾದಕ ಹುಬ್ಬಳ್ಳಿಯ ಡಾ. ನಾಗಲಿಂಗ ಮುರಗಿ ಮತ್ತು ಆಳ್ನಾವರದ ಶ್ರೀ ಜೋಕಬ್ ದೇವಾನಂದ ಅವನ್ನು ಸನ್ಮಾನಿಸಲಾಯಿತು. ಕು. ಪ್ರಣವ ಮಹಾಂತ ಮತ್ತು ಈ.ಕ. ಮಣಕವಾಡರಿಂದ ಗೀತ ಗಾಯನ ಜರುಗಿತು. ವೀರೇಶ ಅಂಗಡಿ ಮತ್ತು ಸಿದ್ಧಲಿಂಗೇಶ ಅಂಗಡಿ ಉಪಸ್ಥಿತರಿದ್ದರು.

ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಡಾ. ದತ್ತಪಸ್ರಸನ್ನ ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಮಂಗಳಾ ರಾಜೂರ, ಪ್ರೀತಿ ರಾಜೂರ, ಕೆ.ಎಚ್. ಬೇಲೂರ, ಡಾ. ಜಿ.ಬಿ. ಪಾಟೀಲ, ಸಿದ್ದು ಯಾಪಲಪರ್ವಿ, ರತ್ನಕ್ಕ ಪಾಟೀಲ, ಮಂಜುಳಾ ವೆಂಕಟೇಶಯ್ಯ, ನೀಲಮ್ಮ ಅಂಗಡಿ, ಶಾರದಾ ಬಾಣದ, ಜೆ.ಎ. ಪಾಟೀಲ, ಎಸ್.ಎನ್. ವೆಂಕಟಾಪೂರ, ಜಯಶ್ರೀ ಶ್ರೀಗಿರಿ, ಸಿದ್ಧರಾಜು ಅಂಗಡಿ, ಕೆ.ಜೆ. ಹೊನ್ನಾದೇವಿ, ಶಾರದಾ ಕಾತರಕಿ, ಆರ್.ಡಿ. ಕಪ್ಪಲಿ, ಡಾ. ಶಂಕರ ಬಾರಕೇರ, ಪ್ರ.ತೋ. ನಾರಾಯಣಪೂರ, ಡಾ. ಅಂದಯ್ಯ ಅರವಟಗಿಮಠ, ಶಿವಲಿಂಗಪ್ಪ ಅಣ್ಣಿಗೇರಿ, ದೇವೆಂದ್ರ ನಾಯಕ, ಬಸವರಾಜ ನಾಗಾವಿ, ಮಹೇಶ ಬಳಿಗಾರ, ಮಹೇಶ ಕಲ್ಯಾಣಿ, ಕೆ.ಜಿ. ವ್ಯಾಪಾರಿ, ಶಾಂತಲಾ ಹಂಚಿನಾಳ, ಜಯಲಕ್ಷ್ಮಿ ಗುಗ್ಗರಿ, ಶ್ರೀಧರ ಸುಲ್ತಾನಪೂರ, ಎಂ.ಎಫ್. ಡೋಣಿ, ಶೇಖಣ್ಣ ಕಳಸಾಪೂರಶೆಟ್ರ, ಬಿ.ಬಿ. ಪಾಟೀಲ, ಎಸ್.ಬಿ. ಗೌಡರ, ಎಸ್.ಎ. ದೇಶಪಾಂಡೆ, ಡಾ. ಅಕ್ಕಮಹಾದೇವಿ ರೊಟ್ಟಿಮಠ, ಶಾಂತಾ ಗೌಡರ, ಮಹಾಂತೇಶ ಅಂಗಡಿ, ಶರಣು ಅಂಗಡಿ, ಕೆ.ವಿ. ಪಾಟೀಲ, ಎಸ್.ಸಿ. ಹಾಲಕೇರಿ, ಗಜಾನನ ವೆರ್ಣೇಕರ, ಷಡಕ್ಷರಿ ಮೆಣಸಿನಕಾಯಿ, ಅಶೋಕ ಸುತಾರ, ಆರ್.ವಿ. ಮ್ಯಾಗೇರಿ, ಉಮಾದೇವಿ ಕಣವಿ, ಡಿ.ಎಸ್. ಬಾಪುರಿ, ಅಮರೇಶ ರಾಂಪೂರ ಮೊದಲಾದವರು ಭಾಗವಹಿಸಿದ್ದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ರಶ್ಮಿ ಅಂಗಡಿ, ತಮ್ಮ ತಂದೆಯ ಆಶಯಗಳನ್ನು ಮತ್ತು ಕನಸುಗಳನ್ನು ಹಂಚಿಕೊಂಡರು. ಅವರ ಸಾಹಿತ್ಯವನ್ನು ಪ್ರಸಾರ ಮತ್ತು ಪ್ರಚಾರ ಮಾಡುವುದಕ್ಕಾಗಿ ಸಾಹಿತ್ಯರಶ್ಮಿ ಪ್ರಕಾಶನ ಮತ್ತು `ಸಾಹಿತ್ಯರಶ್ಮಿ’ ಯುಟ್ಯೂಬ್ ನಿರಂತರವಾಗಿ ಕಾರ್ಯಪ್ರವೃತ್ತವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಪ್ರೊ. ಉಮೇಶ ಅಂಗಡಿಯವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಯೋಜನೆಯಿದೆ ಎಂದರು.


Spread the love

LEAVE A REPLY

Please enter your comment!
Please enter your name here