ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಬಸವೇಶ್ವರ ನಗರದ ಶ್ರೀ ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ವತಿಯಿಂದ 133ನೇ ವರ್ಷದ ಸಾರ್ವಜನಿಕ ಹಾಗೂ ನಮ್ಮ ಮಂಡಳಿಯ 27ನೇ ವರ್ಷದ ಗಣೇಶೋತ್ಸವ-2025ರ ಅಂಗವಾಗಿ ಸೆ.2ರ ಸಂಜೆ 7ಕ್ಕೆ ಗಣೇಶನಿಗೆ ಪ್ರಿಯವಾದ ಪಡಿ ಪೂಜೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಪೂಜಾ ಕಾರ್ಯಕ್ರವನ್ನು ಶ್ರೀ ಸೋಮೇಶ್ವರ ದೇವಸ್ಥಾನದ ಅರ್ಚಕರಾದ ಪ್ರದೀಪ ಹಿರೇಮಠ, ರಾಚಯ್ಯ ಬಾಗಲಕೋಟಮಠ ಅವರ ನೇರವೆರಿಸಿಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ಕೆ ಶ್ರೀ ಸೋಮೇಶ್ವರ ಸೇವಾ ಸಮಿತಿ ಸಹಕಾರ ನೀಡಲಿದೆ. ಅವಳಿ ನಗರದ ಸಕಲ ಸದ್ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಮಂಡಳಿ ಅಧ್ಯಕ್ಷ ರಾಜು ರೊಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



