Home Blog Page 2044

Udupi: ಫಾಲ್ಸ್ ನಲ್ಲಿ ಈಜಲು ಹೋಗಿ ನೀರು ಪಾಲಾದ ವಿದ್ಯಾರ್ಥಿ!

0

ಉಡುಪಿ:- ಫಾಲ್ಸ್ ನಲ್ಲಿ ಈಜಲು ಹೋಗಿ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಕಾರ್ಕಳ ತಾಲೂಕಿನಲ್ಲಿ ಜರುಗಿದೆ.

ಉಡುಪಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ಗ್ಲಾಸನ್ ಜೋಯ್ ಡಾಯಾಸ್ ನೀರು ಪಾಲಾದ ದುರ್ದೈವಿ ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿ ತನ್ನ ಸ್ನೇಹಿತರ ಜೊತೆ ದುರ್ಗಾ ಫಾಲ್ಸ್ಗೆ ಈಜಲು ಹೋಗಿದ್ದ. ಫಾಲ್ಸ್ನಲ್ಲಿ ಈಜಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗೋ.ರು.ಚ ಅವರ ಸೇವೆ ಅನುಪಮ: ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜನಪದ ಮತ್ತು ಶರಣ ಸಾಹಿತ್ಯ ಪರಿಷತ್ತಿಗೆ ಗೋ.ರು. ಚನಬಸಪ್ಪ ಅವರ ಸೇವೆ ಅನುಪಮ ಎಂದು ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು.

ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳ ಆಶ್ರಯದಲ್ಲಿ ನಡೆದ ಗೋ.ರು. ಚನಬಸಪ್ಪ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನ ಉದ್ದಗಲಕ್ಕೂ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ನಡೆಯುವಂತೆ ಮಾಡಿದ ಕೀರ್ತಿ ಗೋ.ರು. ಚನಬಸಪ್ಪ ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಕಾರ್ಯಗಳು ಇಂದಿಗೂ ಜೀವಂತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಂಡ್ಯದಲ್ಲಿ ನಡೆಯಲಿರುವ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.

ಉಪನ್ಯಾಸ ನೀಡಿದ ಶಿಕ್ಷಕ ಎಂ.ಕೆ. ಲಮಾಣಿ, ಗೋ.ರು. ಚನಬಸಪ್ಪ ಅವರು ಕ್ನನಡ ಹೆಮ್ಮೆಯಾಗಿದ್ದು, ಸಾಹಿತ್ಯ ಪರಿಷತ್ತಿಗೆ ಜೀವಕಳೆ ನೀಡುವ ಕಾರ್ಯ ಮಾಡಿದರು. ಗೋಟಗೋಡಿಯಲ್ಲಿನ ಜಾನಪದ ವಿಶ್ವವಿದ್ಯಾಲಯ ಸ್ಥಾಪನಾ ಕಾರ್ಯದಲ್ಲಿ ಗೋ.ರು.ಚನಬಸಪ್ಪ ಅವರು ಮಹತ್ತರ ಪಾತ್ರವಹಿಸಿದ್ದರು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಗೋ.ರು. ಚನಬಸಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅಮೋಘವಾದುದು ಎಂದು ಹೇಳಿದರು. ತಾಲೂಕಾ ಶಸಾಪ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಪ್ರಾಸ್ತಾವಿಕ ನುಡಿದರು.

ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಬಸಣ್ಣ ಬೆಂಡಿಗೇರಿ, ಡಾ. ಎಸ್.ಜಿ. ಹೂವಿನ, ನಿರ್ಮಲಾ ಅರಳಿ, ಕರಿಯಪ್ಪ ಶಿರಹಟ್ಟಿ, ಜಿ.ಎಸ್. ರಾಮಶೆಟ್ಟರ, ರೇಖಾ ವಡಕಣ್ಣವರ, ಎಂ.ಎನ್. ಗೊರವರ, ಪ್ರತಿಮಾ ಮಹಾಜನಶೆಟ್ಟರ, ಅನ್ನಪೂರ್ಣ ಓದುನವರ ಸೇರಿ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಇದ್ದರು.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು: ಜಯ ಕರ್ನಾಟಕ ಸಂಘಟನೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ವನ್ಯಜೀವಿಧಾಮ ಕಾಯ್ದೆ ಅನ್ವಯ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ. ಆದಾಗ್ಯೂ ಕೆಲ ಗಣಿ ಕಂಪನಿಗಳು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೋರಿ ಪದೇ ಪದೇ ಪ್ರಸ್ತಾವನೆ ಸಲ್ಲಿಸುತ್ತಿವೆ. ಕಪ್ಪತಗುಡ್ಡದ ವನ್ಯಜೀವಿಧಾಮದ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಗಣಿ ಕಂಪನಿಗಳಿಗೆ ಗುತ್ತಿಗೆ ನೀಡುವ ದುರುದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ಮಾಡಿ, 10 ಕಿ.ಮೀ.ನಿಂದ 1 ಕಿ.ಮೀಗೆ ಇಳಿಕೆ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ, ಯಾವುದೇ ಕಾರಣಕ್ಕೂ 10 ಕಿ.ಮೀ. ಒಳಗೆ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡ 65 ಕಿ.ಮೀ. ವ್ಯಾಪಿಸಿದೆ. ಅಪರೂಪದ ಔಷಧೀಯ ಸಸ್ಯಗಳ ಆಗರವಾಗಿದೆ. ಅನೇಕ ಬಗೆಯ ಪ್ರಾಣಿ-ಪಕ್ಷಿಗಳ ವಾಸಸ್ಥಾನವಾಗಿದೆ. ಇಂಥಹ ಅತ್ಯಮೂಲ್ಯ ವನ್ಯ ಸಂಪತ್ತನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಬಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ, ರಮೇಶ ರಾಠೋಡ, ನವೀನ ಭಂಡಾರಿ, ದಾದು ಮುಂಡರಗಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಸಾದಿಕಗುಳಗುಂದಿ, ನಿಜಾಮ ಹುಬ್ಬಳ್ಳಿ, ವಿಕಾಸ ಕ್ಷೀರಸಾಗರ, ಅಶ್ರಫ್ ಇಬ್ರಾಹಿಂ, ರಶೀದ್ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.

ಮೃತ ಪೇದೆ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಶಸಸ್ತ್ರ ಮೀಸಲು ಪಡೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಬಸವರಾಜ ವಿಟ್ಲಾಪುರ ಇವರು ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಹುಲಕೋಟಿ ಶಾಖೆಯ ವತಿಯಿಂದ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಅನ್ವಯ ಅವರ ಕುಟುಂಬದವರಿಗೆ 10 ಲಕ್ಷ ರೂ. ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪ ಅಧೀಕ್ಷಕ ವಿ.ವಿ. ನಾಯಕ್, ಬ್ಯುಸಿನೆಸ್ ಡೆವಲಪಮೆಂಟ್ ಮ್ಯಾನೇಜರ್ ಚಿನ್ನರಾವ್ ಹುಲಕೋಟಿ, ಬ್ಯಾಂಕ್ ಆಫ್ ಬರೋಡ ಶಾಖೆಯ ಮ್ಯಾನೇಜರ್ ಟಿ. ಶಿವ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗ್ರಾಹಕರ ಸೇವೆಯೇ ‘ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್’ನ ಧ್ಯೇಯ

0

ವಿಜಯಸಾಕ್ಷಿ ಸುದ್ದಿ, ಗದಗ: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಸುದೀರ್ಘ ೧೧೯ ವರ್ಷಗಳ ಇತಿಹಾಸ ಹೊಂದಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೇ ಮಹಾರಾಷ್ಟç, ಗೋವಾದಲ್ಲಿಯೂ ಶಾಖೆಗಳನ್ನು ತೆರೆಯುವ ಮೂಲಕ ರಾಷ್ಟ್ರಮಟ್ಟದ ಬ್ಯಾಂಕ್ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಹೇಳಿದರು.

ಇಲ್ಲಿನ ಎಪಿಎಂಸಿ ರಸ್ತೆಯ ಮಾನ್ವಿ ಬಿಲ್ಡಿಂಗ್‌ನಲ್ಲಿ ಗುರುವಾರ ನಡೆದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ 20ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಗಣ್ಯ ಉದ್ಯಮಿ ಪ್ರಕಾಶ ಭೂಮಾ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಯಾದ ಬಸವೇಶ್ವರ ಖಾನಾವಳಿ ಮಾಲೀಕರು ಆದಿಯಾಗಿ ಅನೇಕರು ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ಸಾಲ ಪಡೆದು ವ್ಯವಹಾರವನ್ನು ವಿಸ್ತರಿಸಿ ಅಭಿವೃದ್ಧಿ ಹೊಂದಿದ್ದಾರೆ. ರಾಷ್ಟ್ರೀಯ ಬ್ಯಾಂಕಿಗಿಂತ ಹೆಚ್ಚು ಅನುಕೂಲ ಕಲ್ಪಿಸುತ್ತಿರುವ ಈ ಬ್ಯಾಂಕ್, ಗದಗ ಪರಿಸರದಲ್ಲಿಯೂ ಉತ್ತಮ ಸೇವೆ ನೀಡುವ ವಿಶ್ವಾಸವಿದೆ ಎಂದರು.

ಗಣ್ಯ ಉದ್ಯಮಿ ಕಿರಣ ಭೂಮಾ ಮಾತನಾಡಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಕರ್ನಾಟಕದ ಅಗ್ರ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ. ದೇಶದ ತುಂಬೆಲ್ಲಾ ಇದರ ಶಾಖೆಗಳು ಆರಂಭವಾಗಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾರುದ್ರಪ್ಪ ಭೂಸ್ತ, ಕುಮಾರ ಮಾನ್ವಿ ಶುಭ ಕೋರಿದರು.  ಈ ಸಂದರ್ಭದಲ್ಲಿ ಸಂತೋಷ ಪಂಡಿತ, ನಿತಿನ್ ಕಾಸರಕೋಡ, ಮಿಲಿಂದ ಪಂಡಿತ, ಮೋಹನ ಪ್ರಭು, ಸದಾನಂದ ನಾಯ್ಕ, ಟಿ.ಎಸ್. ಬಾಲಮಣಿ, ರಾಮಕೃಷ್ಣ ಪಾಲೇಕರ, ಸುವರ್ಣಾ ಪ್ರಭು, ಸುರೇಂದ್ರ ರೇವಣಕರ, ವರೀಂದ್ರ ಕಾಮತ, ಪ್ರಕಾಶ ಪೈ, ಸೂರ್ಯಕಾಂತ ದೇವಳಿ, ಕೆ.ಎನ್. ಹೊಸಮನಿ, ಸಂತೋಷ ಉಡ್ಲಿಕರ್, ವಂದನಾ ಕಾಮತ, ರಾಜೇಶ ಧಾಕಪ್ಪ, ಬ್ರುನೋ ಮಸ್ಕರೆನಸ್, ಟಿ. ಶ್ರೀಧರಮೂರ್ತಿ, ಸುಬ್ರಾವ್ ಗಾಯತೊಂಡೆ, ಕೆ.ಎಸ್. ಶ್ರೀನಿವಾಸ, ಸತೀಶ ಬಾಡಗಾಂವಕರ್, ರಾಮಚಂದ್ರ ಕಿಣಿ ಮುಂತಾದವರು ಉಪಸ್ಥಿತರಿದ್ದರು.

ದುಡಿಮೆಯ ಕೊಂಚ ಹಣವನ್ನು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ದಾನ ಮಾಡಿ: ಡಾ.ಚಂದ್ರಶೇಖರ ಶಿವಾಚಾರ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತ್ರಿವಿಧ ದಾಸೋಹ ಸೇವೆಯಲ್ಲಿ ಮಠಮಾನ್ಯಗಳ ಪಾತ್ರ ಅಗ್ರಗಣ್ಯವಾಗಿದೆ. ತುಲಾಭಾರ ಸೇವೆಯಿಂದ ಬರುವ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ವಿನಯೋಗಿಸಲಾಗುತ್ತಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾಂದಗಳವರು ನುಡಿದರು.

ಅವರು ಗುರುವಾರ ಪಟ್ಟಣದ ವಿದ್ಯಾರಣ್ಯ ವೃತ್ತದ ಹತ್ತಿರ ಲಿಂ.ಶ್ರೀ ರುದ್ರಯ್ಯ ಹಿರೇಮಠ ಇವರ ಸ್ಮರಣಾರ್ಥವಾಗಿ ತುಲಾಭಾರ ಹಾಗೂ ಪಾದಪೂಜಾ ಕಾರ್ಯಕ್ರಮದಲ್ಲಿ ನೀಡಿದ ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಕಾಶಿ ಪೀಠ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಭಕ್ತರ ತುಲಾಭಾರ ಸೇವೆಯಿಂದ ಬರುವ ಹಣವನ್ನು ತ್ರಿವಿಧ ದಾಸೋಹದ ಜೊತೆಗೆ ಪ್ರತಿ ತಿಂಗಳು ಸುಮಾರು 500 ವಿದ್ಯಾರ್ಥಿಗಳಿಗೆ 1000 ರೂಗಳಂತೆ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ದುಡಿಮೆಯ ಕೊಂಚ ಹಣವನ್ನು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ನೀಡುವುದರಿಂದ ಅದಕ್ಕೆ ಶ್ರೇಷ್ಠವಾದ ಫಲ ಪ್ರಾಪ್ತಿಯಾಗುತ್ತದೆ ಮತ್ತು ಬದುಕಿನ ಸಾರ್ಥಕತೆಗೆ ಕಾರಣವಾಗುತ್ತದೆ. ಲಿಂ.ರುದ್ರಯ್ಯ ಹಿರೇಮಠ ಅವರ ಸ್ಮರಣಾರ್ಥ ಅವರ ಕುಟುಂಬವರ್ಗದವರು ನೀಡಿದ ತುಲಾಭಾರ ಸೇವೆ ಸದ್ವಿನಿಯೋಗವಾಗುವದರ ಜೊತೆಗೆ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ದದೇವರಮಠ, ರಾಜೀವ ಕುಂಬಿ, ಶಂಕ್ರಪ್ಪ ಗುರಿಕಾರ, ಶಿವಲೀಲಾ ಹಿರೇಮಠ, ಗಂಗಾಧರ ಹಿರೇಮಠ, ಸುಮಾ ಹಿರೇಮಠ, ಪಂಚಯ್ಯ ಹಿರೇಮಠ, ಚನ್ನಪ್ಪ ಕೋಲಕಾರ, ಮಹೇಶ ಲಿಂಬಯ್ಯ ಸ್ವಾಮಿಮಠ, ಜೆ.ಡಿ. ಲಮಾಣಿ, ಸಂತೋಷ ಬಾಳಿಕಾಯಿ, ಬಿ.ಟಿ. ಪಾಟೀಲ, ಚಂದ್ರು ಹಿರೇಮಠ, ವೀರಣ್ಣ ಪವಾಡದ, ಕುಮಾರ ಕುಂಬಾರ, ಮುರುಘೇಂದ್ರಸ್ವಾಮಿ ಹಿರೇಮಠ ಮುಂತಾದವರಿದ್ದರು. ಶ್ರೀಕಾಂತ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

ಹ್ಯಾಟ್ರಿಕ್ ಗೆಲುವು: 3ನೇ ಬಾರಿಗೆ ಗದಗ ನೌಕರರ ಸಂಘದ ಅಧ್ಯಕ್ಷರಾಗಿ ರವಿ ಗುಂಜೀಕರ್ ಆಯ್ಕೆ!

0

ಗದಗ:- ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂರನೇ ಬಾರಿಗೆ ಜಿಲ್ಲಾ ಅಧ್ಯಕ್ಷರಾಗಿ ರವಿ ಗುಂಜೀಕರ್ ಆಯ್ಕೆ ಆಗಿದ್ದು, ಈ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

2024-29ರ ಅವಧಿಗೆ ನಡೆದ ಚುನಾವಣೆ ಇದಾಗಿದ್ದು, ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾಗಿದ್ದ ರವಿ ಗುಂಜೀಕರ್ ಅವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಇನ್ನೂ ಜಿಲ್ಲಾ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿ ಗುಂಜೀಕರ್‌ಗೆ ನೌಕರರು ಸನ್ಮಾನಿಸಿ ಗೌರವಿಸಿದರು. ಅಲ್ಲದೇ ಬಣ್ಣ ಹಚ್ಚಿ ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು.

ಈ ವೇಳೆ ಅವಿರೋಧವಾಗಿ ಆಯ್ಕೆ ಮಾಡಿದ ನೌಕರರಿಗೆ ನೂತನ ಅಧ್ಯಕ್ಷ ರವಿ ಗುಂಜೀಕರ್ ಅವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಜಿಲ್ಲಾ ಸಂಘದ ಅಧ್ಯಕ್ಷ ವಾಲ್ಮೀಕಿ,
ಹಿಂದುಳಿದ ವರ್ಗಗಳ ತಾಲೂಕಾಧಿಕಾರಿ ಬಸವರಾಜ್ ಬಳ್ಳಾರಿ ಸೇರಿದಂತೆ ನೂರಾರು ನೌಕರರು ಭಾಗಿಯಾಗಿದರು.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಜಯ ಕರ್ನಾಟಕ ಸಂಘಟನೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ಪರಿಧಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸುವ ಕುರಿತು ಕೇಂದ್ರ ಸರಕಾರಕ್ಕೆ ತಕ್ಷಣ ಆಕ್ಷೇಪಣಾ ಪತ್ರ ಸಲ್ಲಿಸುವಂತೆ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಜಯ ಕರ್ನಾಟಕ ಸಂಘಟನೆಯ ಗದಗ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾAತ ಚವ್ಹಾಣ, ಕಪ್ಪತ್ತಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುತ್ತದೆ. ಪಂಚಲೋಹಗಳ ಗುಡ್ಡವಾಗಿರುವುದರಿಂದ ಇಲ್ಲಿ ಬೆಳೆಯುವ ವನಸ್ಪತಿಗಳು ನಾನಾ ರೋಗಗಳ ನಿವಾರಣೆಗೆ ಪರಿಣಾಮಕಾರಿಯಾಗಿವೆ. ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಸುಮಾರು 500ಕ್ಕೂ ಹೆಚ್ಚು ಔಷಧಿ ಸಸ್ಯರಾಶಿಯೂ ಗಿಡಮೂಲಿಕೆಗಳು ಇಲ್ಲಿವೆ.

ಜಿಲ್ಲೆಯಲ್ಲಿ ಕಪ್ಪತಗುಡ್ಡ ಸೇರಿದಂತೆ ಕೇವಲ ಶೇ.೭ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಒಂದು ವೇಳೆ ಕಪ್ಪತಗುಡ್ಡ ಕರಗಿದರೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಇಲ್ಲದಂತಾಗುತ್ತದೆ. ಇದರಿಂದ ಕೃಷಿ, ಜನ-ಜಾನುವಾರು, ವನ್ಯಜೀವಿಗಳಿಗೆ ಮರಣ ಶಾಸನ ಬರೆದಂತಾಗುತ್ತದೆ. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹುನ್ನಾರ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಉಪಾಧ್ಯಕ್ಷ ಭಾಷಾಸಾಬ ಮಲ್ಲಸಮುದ್ರ ಮಾತನಾಡಿ, ಅರಣ್ಯ ಇಲಾಖೆಗೆ ಕಂಪನಿಗಳ ಅರ್ಜಿ ತಿರಸ್ಕರಿಸಿದರೂ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಪದೇ ಪದೇ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಸಹ್ಯಾದ್ರಿ, ಜೀವವೈವಿಧ್ಯ ತಾಣ, ಅಪಾರ ಖನಿಜ ಸಂಪತ್ತಿನ ಆಗರ ಕಪ್ಪತಗುಡ್ಡ ನೆತ್ತಿ ಮೇಲೆ ಆತಂಕದ ಕತ್ತಿ ನೇತಾಡುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಪರಿಸರ ಸಮತೋಲನ ಕಾಯುವ ಕಪ್ಪತಗುಡ್ಡಕ್ಕೆ ಎದುರಾಗಿರುವ ಆತಂಕವು ನಿದ್ದೆಗೆಡಿಸಿದೆ ಎಂದರು.

Crime News: ಆಸ್ತಿ ಮತ್ತು ಕೌಟುಂಬಿಕ ವೈಷಮ್ಯ ವಿಚಾರಕ್ಕೆ ಬಿತ್ತು ವ್ಯಕ್ತಿ ಹೆಣ! ಐವರಿಂದ ಕೃತ್ಯ!

0

ದಾವಣಗೆರೆ:- ಆಸ್ತಿ ಮತ್ತು ಕೌಟುಂಬಿಕ ವೈಷಮ್ಯದಿಂದ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ಚನ್ನಗಿರಿ-ಶಿವಮೊಗ್ಗ ಹೆದ್ದಾರಿಯಲ್ಲಿ ಜರುಗಿದೆ.

ಅಜ್ಜಿಹಳ್ಳಿಯ ನಿವಾಸಿ 50 ವರ್ಷದ ಹನಮಂತಪ್ಪ ಕೊಲೆಯಾದ ವ್ಯಕ್ತಿ. ಹನಮಂತಪ್ಪ ಬೈಕ್ ನಲ್ಲಿ ತೋಟಕ್ಕೆ ಹೋಗುವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ನಡೆದಿದೆ. ರಂಗನಾಥ್ ಅಲಿಯಾಸ್ ಮೈಕಲ್ ರಂಗನಾಥ ಹಾಗೂ ಕೊಲೆಯಾದ ವ್ಯಕ್ತಿಯ ಪುತ್ರ ಲಲಿತ್ ಸೇರಿ ಐದು ಜನರಿಂದ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಂಗನಾಥ್ ಕೊಲೆಗೀಡಾದ ಹನುಮಂತನ ಮೊದಲ ಹೆಂಡತಿ ಆಶಾಳ ಸಹೋದರ, ಲಲಿತ ಮೊದಲನೇ ಹೆಂಡತಿಯ ಮಗ ಎನ್ನಲಾಗಿದೆ. ಹನಮಂತಪ್ಪ, 2002 ರಲ್ಲಿ ಆಶಾಳನ್ನ ಮದ್ವೆ ಯಾಗಿದ್ದ. ಮದುವೆ ನಂತರ ಜಗಳ ಬಂದು ಹನುಮಂತ ಮತ್ತು ಆಶಾ ಇಬ್ಬರು ಪ್ರತ್ಯೇಕ ಆಗಿದ್ದರು.

2009 ರಲ್ಲಿ ಶೋಭಾ ಎಂಬುವರನ್ನ ಕೊಲೆಗೀಡಾದ ಹನುಮಂತ ಎರಡನೇ ಮದುವೆ ಆಗಿದ್ದ. ಮೊದಲ ಹೆಂಡತಿ ಆಶಾಳ ಸಹೋದರ ರಂಗನಾಥ್ ಹಾಗೂ ಪುತ್ರ ಲಲಿತ್ ಹನುಮಂತಪ್ಪನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದರು. ಇದೇ ವಿಚಾರಕ್ಕೆ ಅನೇಕ ಸಲ ಜಗಳ ಆಗಿತ್ತಂತೆ. ಬೆಳಿಗ್ಗೆ ತೋಟಕ್ಕೆ ಹೋಗುವ ವಿಚಾರ ತಿಳಿದುಕೊಂಡಿದ್ದ ಆರೋಪಿಗಳು ದಾಳಿ ಮಾಡಿ, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚನ್ನಗಿರಿ ‌ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಪ್ರಾಚೀನ ಸ್ಮಾರಕಗಳು ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಿವೆ: ಪ್ರಾ. ಆರ್.ಎಂ. ಕಲ್ಲನಗೌಡರ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರಾಚೀನ ಕಾಲದ ದೇವಾಲಯಗಳು, ಶಾಸನಗಳಾದಿಯಾಗಿ ಅನೇಕ ಸ್ಮಾರಕಗಳು ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಿವೆ ಎಂದು ಪ್ರಾ. ಆರ್.ಎಂ. ಕಲ್ಲನಗೌಡರ ಹೇಳಿದರು.

ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಐತಿಹಾಸಿಕ ಶಿದ್ದೇಶ್ವರ ದೇವಾಲಯದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ಭಾರತ ಹೆಚ್ಚು ಪ್ರಾಚೀನ ಸ್ಮಾರಕಗಳನ್ನು ಹೊಂದಿರುವ ದೇಶವಾಗಿದ್ದು, ಪ್ರತಿ ಹಳ್ಳಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ವೈಶಿಷ್ಟ್ಯ ಪೂರ್ಣವಾದ ಅನೇಕ ಪ್ರಾಚೀನ ಸ್ಮಾರಕಗಳಿವೆ. ಅವುಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಸ್ಮಾರಕಗಳ ಬಗ್ಗೆ ಹೆಚ್ಚು ಅಭ್ಯಾಸದ ಜೊತೆಯಲ್ಲಿ ಅವುಗಳ ಸಂರಕ್ಷಣೆಯ ಹೊಣೆಗಾರಿಕೆ ಹೊಂದಬೇಕು ಎಂದರು.

ಪ್ರಾಧ್ಯಾಪಕರಾದ ಮಾರುತಿ ಹಾಗೂ ಕೆ.ಎಂ. ಶಿರೂರ ಐತಿಹಾಸಿಕ ಸ್ಮಾರಕಗಳ ಇತಿಹಾಸ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.

error: Content is protected !!