Home Blog Page 2045

ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ: ಆರ್‌.ಅಶೋಕ್‌

0

ಬೆಂಗಳೂರು: ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಆಗಿರುವುದರಿಂದ 50% ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈಗ ಜಗಜ್ಜಾಹೀರಾಗಿದೆ. ಈ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ.

ಇಷ್ಟು ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ ಎಂದು ಅಶೋಕ್ ಆಗ್ರಹಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಏರಿಕೆಯಾಗಿದೆ. ಆಸ್ಪತ್ರೆಗಳೇ ವಸೂಲಿ ಕೇಂದ್ರಗಳಾಗಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಕುರಿತು ವರದಿ ತರಿಸಿಕೊಳ್ಳುತ್ತೇನೆ ಎಂದು ಅಶೋಕ್ ಹೇಳಿದರು.

ಮೂತ್ರ ವಿಸರ್ಜನೆಗೆ ಹೋಗಿದ್ದ ಬಾಲಿಕಿಗೆ ವಿದ್ಯುತ್ ವೈರ್ ತಗುಲಿ ಸ್ಥಳದಲ್ಲೇ ಸಾವು.!

0

ಉತ್ತರ ಕನ್ನಡ: ತುಂಡಾದ ವಿದ್ಯುತ್ ಸರ್ವಿಸ್ ವೈರ್ ತಗುಲಿ ಬಾಲಕಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸಾನ್ವಿ ಬಸವರಾಜ ಗೌಳಿ(8) ಮೃತ ವಿದ್ಯಾರ್ಥಿನಿಯಾಗಿದ್ದು,

ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದಳು. ಬೋರ್‌ವೆಲ್ ಅಳವಡಿಸಲು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದ್ದು, ವೈರ್ ತುಂಡಾಗಿ ಶಾಲೆಯ ಶೌಚಾಲಯ ಒಳಗೆ ಬಿದ್ದಿತ್ತು.

ಆದ್ರೆ, ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ಸಾನ್ವಿ ಆ ತುಂಡಾಗಿ ಬಿದ್ದಿದ್ದ ವೈರ್ ತಗುಲಿ ಸಾವನ್ನಪ್ಪಿದ್ದಾಳೆ. ಹೆಸ್ಕಾಂ ಹಾಗೂ ಮುಖ್ಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಹಶೀಲ್ದಾರ್ ಪ್ರವೀಣ್ ಹುಚ್ಚನ್ನವರ್ ಭೇಟಿ ನೀಡಿ ಪರಿಶೀಲಿಸಿದರು.

ನನ್ನ ವಿರುದ್ಧ ಮಾತನಾಡಿದವರ ಬಣ್ಣ ಬಯಲು ಮಾಡುತ್ತೇನೆ: DVSಗೆ ಎಚ್ಚರಿಕೆ ಕೊಟ್ಟ ಶಾಸಕ ಯತ್ನಾಳ್

0

ವಿಜಯಪುರ: ನನ್ನ ವಿರುದ್ಧ ಮಾತನಾಡಿದವರ ಬಣ್ಣ ಬಯಲು ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಸದಾನಂದಗೌಡಗೆ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾನಂದಗೌಡರು ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತನಾಡಿರುವುದನ್ನು ನಾನು ಬಿಚ್ಚಿಡುತ್ತೇನೆ. ನನಗಿಂತ ಕೆಟ್ಟದಾಗಿ ಮಾತನಾಡಿದ್ದಾರೆ. ದೀಪ ಆರಿದವರ ಬಗ್ಗೆ ನಾನು ಮಾತನಾಡಲ್ಲ.

ನಿಮ್ಮ ದೀಪ ಈಗಾಗಲೆ ಆರಿಹೋಗಿದೆ. ನಾನು ಯಾರು ಜೊತೆನೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನನ್ನ ವಿರುದ್ಧ ಮಾತನಾಡಿದವರ ಬಣ್ಣ ಬಯಲು ಮಾಡುತ್ತೇನೆ. ನೀವು ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದೀರಿ, ಇಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಆಣೆಪ್ರಮಾಣಕ್ಕೆ ಪಂಥಾಹ್ವಾನ ನೀಡಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ: ಸಚಿವ ಈಶ್ವರ್ ಖಂಡ್ರೆ

0

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಜೊತೆ ಯಾರೂ ಈ ಬಗ್ಗೆ ಚರ್ಚೆ ಮಾಡಿಲ್ಲ. ಅಧ್ಯಕ್ಷರ ಬದಲಾವಣೆ ವಿಚಾರ ಸಿಎಂ, ಡಿಸಿಎಂ, ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ನಾನು ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತಾಡಿದ್ದು ಇಲಾಖೆ ಬಗ್ಗೆ, ನಮ್ಮ ಕ್ಷೇತ್ರದ ಬಗ್ಗೆ. ಡಿಕೆ ಶಿವಕುಮಾರ್ ಅವರು ಬದಲಾವಣೆ ಬಗ್ಗೆ ಪ್ರಸ್ತಾಪ ಮಾಡಬಹುದು. ಅವರು ಪಕ್ಷದ ಅಧ್ಯಕ್ಷರು. ಅಂತಿಮವಾಗಿ ಹೈಕಮಾಂಡ್ ಎಲ್ಲವೂ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಪಕ್ಷದಲ್ಲಿ ಆಗುತ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ: ಡಿವಿ ಸದಾನಂದ ಗೌಡ

0

ಬೆಂಗಳೂರು: ಪಕ್ಷದಲ್ಲಿ ಆಗುತ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಜಗಳವೇ ಆಯ್ತು.ಇವರಿಂದ ಸರ್ಕಾರವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ. ಇಗೋ ಸಮಸ್ಯೆಯಿಂದ ಬಿಜೆಪಿಗೆ ದೊಡ್ಡ ಹಾನಿಯಾಗುತ್ತಿದೆ. ಇಷ್ಟೆಲ್ಲಾ ಪಕ್ಷದಲ್ಲಿ ಆಗುತ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.

ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್‌ಗೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು. ಕರ್ನಾಟಕ ಬಿಜೆಪಿ ಬಗ್ಗೆ ನಾನು ವರಿಷ್ಠರಿಗೆ ಎರಡು ಪತ್ರ ಬರೆದಿದ್ದೇನೆ. ನಾನು ಅಧ್ಯಕ್ಷ ಇದ್ದಾಗಲೂ ಇದಕ್ಕಿಂತ ದೊಡ್ಡ ಗುಂಪುಗಳಿದ್ದವು. ಪಕ್ಷದ ಕಟ್ಟಿದ್ದು ನಾವು ಅಂತ ಅನಂತ್‌ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಪ್ರಬಲವಾಗಿ ಸೆಣಸಾಡುತ್ತಿದ್ದವು. ಆದರೆ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಯಾವತ್ತೂ ಬೀದಿಗೆ ಇಳಿದಿರಲ್ಲ ಎಂದರು.

Egg Benefits: ನಿತ್ಯ ಮೊಟ್ಟೆ ತಿನ್ನುತ್ತಾ ಬಂದ್ರೆ ದೇಹದಲ್ಲಾಗುತ್ತೆ ಸಾಕಷ್ಟು ಬದಲಾವಣೆ!

0

ಪ್ರತಿಯೊಬ್ಬರೂ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಮೊಟ್ಟೆಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಶೇಷವಾಗಿ, ಇದು ಪ್ರೋಟೀನ್ನಿಂದ ಸಮೃದ್ಧವಾಗಿದೆ, ಇದು ಸ್ನಾಯುಗಳನ್ನು ಬಲಪಡಿಸಲು ಮತ್ತು ಸರಿಪಡಿಸಲು ಅವಶ್ಯಕವಾಗಿದೆ.

ವೃದ್ಧಾಪ್ಯದಲ್ಲಿಯೂ ನಿಮ್ಮ ಜ್ಞಾಪಕ ಶಕ್ತಿಯನ್ನು ಬಲವಾಗಿಡಲು ನೀವು ಬಯಸಿದರೆ, ನೀವು ಮೊಟ್ಟೆಗಳನ್ನು ಸೇವಿಸಬೇಕು ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಮೊಟ್ಟೆಗಳು ಪ್ರೋಟೀನ್‌, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ನಿಮ್ಮ ಡಯಟ್‌ಗೆ ಇದು ಆರೋಗ್ಯಕರವಾದ ಸೇರ್ಪಡೆಯಾಗಿದೆ ಅಂತ ಹೇಳಲಾಗುತ್ತದೆ.

ನೀವು ಈ ಮೊಟ್ಟೆಗಳನ್ನು ಕುದಿಸಿಕೊಂಡು ಅಥವಾ ಆಮ್ಲೆಟ್ ಮಾಡಿಕೊಂಡು ಸಹ ಸೇವಿಸಬಹುದು. ಇದನ್ನು ಹೇಗೆ ಸೇವಿಸಿದರೂ ಸಹ ಇದರೊಳಗಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಿಕ್ಕೆ ಸಿಗುತ್ತವೆ. ಆದ್ದರಿಂದಲೇ ಇದನ್ನು ವಿಶ್ವದ ಪೌಷ್ಟಿಕಾಂಶದ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಒಂದು ಮೊಟ್ಟೆ ಸುಮಾರು 77 ಕ್ಯಾಲೋರಿಗಳನ್ನು ಹೊಂದಿದ್ದು, ಅದರಲ್ಲಿ 6 ಗ್ರಾಂ ಪ್ರೊಟೀನ್, 5 ಗ್ರಾಂ ಆರೋಗ್ಯಕರ ಕೊಬ್ಬು, ವಿಟಮಿನ್ ಎ, ಡಿ, ಇ ಮತ್ತು ಬಿ12 ಅನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಮೊಟ್ಟೆ ಒಳಗಿರುವ ಹಳದಿ ಬಣ್ಣದ ಪದಾರ್ಥವು ಚೋಲೈನ್ ಅನ್ನು ಹೊಂದಿರುತ್ತದೆ.

ಈ ಅಂಶವು ಮಿದುಳಿನ ಮತ್ತು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿರುತ್ತದೆ. ಅನೇಕರಿಗೆ ಇಂತಹ ಪೌಷ್ಟಿಕಭರಿತ ಆಹಾರ ಪದಾರ್ಥವನ್ನು ಪ್ರತಿ ದಿನ ತಿನ್ನವುದರಿಂದ ಏನೆಲ್ಲಾ ಪ್ರಯೋಜನಗಳಿರುತ್ತವೆ ಅನ್ನೋದು ಅಷ್ಟಾಗಿ ತಿಳಿದಿರುವುದಿಲ್ಲ.

ಸ್ನಾಯುಗಳ ಆರೋಗ್ಯ: ಮೊಟ್ಟೆಯನ್ನು ಪ್ರತಿ ದಿನ ತಿನ್ನುವುದರಿಂದ ತುಂಬಾನೇ ಮುಖ್ಯವಾದ ಪ್ರಯೋಜನ ಎಂದರೆ ಇದರಲ್ಲಿರುವ ಪ್ರೋಟೀನ್ ಅಂಶ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ ಅಂತ.

ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ಎಲ್ಲಾ 9 ಅಮೈನೋ ಆಸಿಡ್‌ಗಳನ್ನು ಹೊಂದಿದೆ. ಇದು ಜಿಮ್‌ಗೆ ಹೋಗಿ ತಾಲೀಮು ಮಾಡುವವರಿಗೆ ಸ್ನಾಯುಗಳನ್ನು ಬಲಗೊಳಿಸಲು ಮತ್ತು ಅದರ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಸಹಾಯ ಮಾಡುತ್ತದೆ.

ಎಲ್ಲಾ ವಯೋಮಾನದವರೂ ಸಹ ಮೊಟ್ಟೆ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ಮೂಳೆಗಳ ಆರೋಗ್ಯ: ಮೊಟ್ಟೆಗಳು ವಿಟಮಿನ್ ಡಿ ಅನ್ನು ಹೊಂದಿರುತ್ತದೆ, ಇದು ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಡಿ ಅಂಶವು ಕ್ಯಾಲ್ಸಿಯಮ್ ಅಂಶವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಬಹುದು.

ಇದು ಆಸ್ಟಿಯೋಪೊರೋಸಿಸ್ ಮತ್ತು ಮೂಳೆ ಮುರಿತಗಳ ಗಾಯಗಳನ್ನು ವಾಸಿ ಮಾಡುತ್ತದೆ. ಪ್ರತಿ ದಿನ ಮೊಟ್ಟೆ ತಿಂದರೆ ನಿಮ್ಮ ದೇಹದಲ್ಲಿರುವ ಮೂಳೆಗಳು ತುಂಬಾನೇ ಬಲವಾಗುತ್ತವೆ.

ಮೆದುಳಿನ ಆರೋಗ್ಯ: ಲುಟೀನ್, ಜಿಯಾಕ್ಸಾಂತಿನ್ ಎಂಬ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ ಈ ಮೊಟ್ಟೆಗಳು. ಇದು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮೊಟ್ಟೆಯಲ್ಲಿರುವ ಇನ್ನೊಂದು ಅಂಶವಾದ ಚೋಲೈನ್ ಮಿದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಪ್ರತಿ ದಿನ ಮೊಟ್ಟೆ ತಿನ್ನುವುದು ನಮ್ಮ ಮನಸ್ಥಿತಿಯನ್ನು ಸಹ ಚೆನ್ನಾಗಿರುಸುತ್ತದೆ ಅಂತ ಹೇಳಲಾಗುತ್ತದೆ.

ದೇಹದ ತೂಕ ನಿರ್ವಹಣೆ: ಮೊಟ್ಟೆಯು ನಿಮ್ಮ ದೇಹದ ತೂಕವನ್ನು ಸಹ ನಿರ್ವಹಿಸಿಕೊಳ್ಳಲು ಸಹಾಯ ಮಾಡುತ್ತದೆ. ಎಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಹೊಟ್ಟೆ ತುಂಬಿಸಿದ ಅನುಭವ ಸಹ ಇದು ನೀಡುತ್ತದೆ. ಹಾಗಾಗಿ ಹೊಟ್ಟೆ ಹಸಿವಾಗುವುದಿಲ್ಲ ಮತ್ತು ಏನನ್ನು ಸಹ ಊಟದ ಮಧ್ಯೆ ತಿನ್ನಲು ಹೋಗುವುದಿಲ್ಲ. ಹಾಗಾಗಿ ಇದು ತೂಕ ಕಡಿಮೆ ಮಾಡಿಕೊಳ್ಳುವ ಜನರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.

ಅಧಿಕೃತವಾಗಿ ವಿಚ್ಛೇದನ ಪಡೆದ ಧನುಷ್- ಐಶ್ವರ್ಯಾ ರಜನಿಕಾಂತ್

ತಮಿಳು ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಅವರಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ.

ಹಲವು ವರ್ಷಗಳ ಕಾಲ ಪ್ರೀತಿಸಿದ್ದ ಧನುಷ್ ಹಾಗೂ ಐಶ್ವರ್ಯಾ 2004ರ ನವೆಂಬರ್ 18ರಂದು ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ 2022ರ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಬಳಿಕ, ಕಾನೂನಾತ್ಮಕವಾಗಿ ಬೇರೆಯಾಗಲು, ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನವೆಂಬರ್ 27 ರಂದು ಅಧಿಕೃತವಾಗಿ ಇವರಿಗೆ ವಿಚ್ಛೇದನ ದೊರೆತಿದೆ.

2022 ರಲ್ಲಿ ಈ ಜೋಡಿ ತಾವು ಪರಸ್ಪರ ದೂರಾಗುತ್ತಿರುವುದಾಗಿ ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ರಜನೀಕಾಂತ್​ಗೆ ಅನಾರೋಗ್ಯ ಇದ್ದ ಸಮಯದಲ್ಲಿಯೇ ಈ ಘೋಷನೆ ಬಂದಿತ್ತು. ಮಕ್ಕಳನ್ನು ಒಟ್ಟಿಗೆ ಸಾಕುವುದಾಗಿ ದಂಪತಿಗಳು ಘೋಷಿಸಿದ್ದರು. ಆದರೆ ಅದಾದ ಬಳಿಕ ಮತ್ತೆ ಈ ಜೋಡಿ ಒಂದಾಗಲಿದೆ. ರಜನೀಕಾಂತ್ ಸಂಧಾನ ನಡೆಸಿದ್ದು ಈ ಜೋಡಿ ಮತ್ತೆ ಒಟ್ಟಿಗೆ ಬಾಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಅದು ಸುಳ್ಳಾಗಿದೆ. ನವೆಂಬರ್ 21 ರಂದು ಕೊನೆಯ ವಿಚಾರಣೆಗಾಗಿ ಚೆನ್ನೈನ ಫ್ಯಾಮಿಲಿ ಕೋರ್ಟ್​ಗೆ ಈ ಜೋಡಿ ಹಾಜರಾಗಿದ್ದು, ನವೆಂಬರ್ 27 ರಂದು ನ್ಯಾಯಾಲಯವು ಈ ದಂಪತಿಗಳಗೆ ವಿಚ್ಛೇದನ ನೀಡಿದೆ. ಈ ಮೂಲಕ ಇಬ್ಬರು ಅಧಿಕೃತವಾಗಿ ದೂರವಾಗಿದ್ದಾರೆ.

ತಾಯಿ, ಶಿಶು ಮರಣ ಪ್ರಮಾಣ ಏರಿಕೆ: ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚನೆ

0

ದಾವಣಗೆರೆ: ಕರ್ನಾಟಕವು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೂ, ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣ ಕಳವಳ ಹುಟ್ಟಿಸುವಂತಿದೆ.‌ ಆದ್ದರಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಅವರು ಸಭೆ ನಡೆಸಿದ್ದಾರೆ. ಈ ವೇಳೆ ನವಜಾತ ಶಿಶುಗಳ ಮರಣ ಹಾಗೂ ಬಾಣಂತಿಯರ ಸಾವಿನ ಬಗ್ಗೆ ತೀವ್ರ ನಿಗವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ಏಳು ತಿಂಗಳಲ್ಲಿ 135 ನವಜಾತು ಶಿಶುಗಳು ಹಾಗೂ 28 ತಾಯಂದಿರ ಸಾವಾಗಿದೆ. ಖಾಸಗಿ ಆಸ್ಪತ್ರೆಗಳಿಗಿಂತ, ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲೇ ಮರಣ ಪ್ರಮಾಣ ಏರಿಕೆಯಾಗಿದೆ. ಪ್ರತಿ ತಿಂಗಳು 600 ರಿಂದ 700 ಹೆರಿಗೆ ಆಗುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಾಗುತ್ತಿದೆ. ಇನ್ನೂ ಕಡೇ ಕ್ಷಣದಲ್ಲಿ ತೀವ್ರ ತುರ್ತು ಸಂದರ್ಭಗಳಲ್ಲಿ ಬರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ.

ಬಹುತೇಕ ಬಡವರೇ ಆಗಮಿಸುವ ಜಿಲ್ಲಾಸ್ಪತ್ರೆಗಳಲ್ಲಿ ನವಜಾತು ಶಿಶುಗಳ ಸಾವಿನ ಸಂಖ್ಯೆ ಏರಿಕೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇನ್ನೂ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ 72%ನಷ್ಟು ಸಿಜೇರಿಯನ್ ನಡೆಯುತ್ತಿದೆ. ಈ ಎಲ್ಲಾ ವಿಚಾರವಾಗಿ, ಮಧ್ಯ ಕರ್ನಾಟಕದ ಹಾವೇರಿ, ಚಿತ್ರದುರ್ಗ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಅಲ್ಲದೇ ಪ್ರಾಥಮಿಕ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾವಹಿಸುವಂತೆ ಡಿಹೆಚ್‍ಓಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ನಾನು ನನ್ನ ಮಗ ಅರೆಸ್ಟ್‌ʼವಾಗುವಂತಹ ಯಾವ ಅಪರಾಧವೂ ಮಾಡಿಲ್ಲ: ಜಿ.ಟಿ.ದೇವೇಗೌಡ

0

ಮೈಸೂರು: ನನ್ನ ಮೇಲೆ ಇದುವರೆಗೆ ಒಂದೇ ಒಂದು ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ಇಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಸೇವೆ ಮಾಡುವುದು ಮಾತ್ರ ನನ್ನ ತಲೆಯಲ್ಲಿ ಇರುವುದು. ಅದು ಬಿಟ್ಟರೆ ನನ್ನ ತಲೆಯಲ್ಲಿ ಬೇರೆ ಯೋಚನೆ ಇಲ್ಲ.

ನನ್ನ ತಂದೆ ಪಟೇಲರು. ಅವರ ಮೇಲೆ ಒಂದೇ ಒಂದು ಪೊಲೀಸ್ ಕೇಸ್ ಇರಲಿಲ್ಲ. ನಾನು ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷವಾಗಿದೆ. ನನ್ನ ಮೇಲೆ ಇದುವರೆಗೆ ಒಂದೇ ಒಂದು ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ಇಲ್ಲ. ನನ್ನ ಮಗನ ಮೇಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಜೆಡಿಎಸ್ – ಕಾಂಗ್ರೆಸ್ ಇಬ್ಬರು ಸೇರಿ ಅದರಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಮಾಡಿಸಿದ್ದರು ಅಷ್ಟೆ. ನಾನು ಇದುವರೆಗೆ ಯಾರಿಂದಲೂ ನನ್ನ ರಕ್ಷಣೆ ಮಾಡಿ ಎಂದು ದೂರವಾಣಿ ಕರೆ ಮಾಡಿಸಿಲ್ಲ. ಕುಮಾರಸ್ವಾಮಿಯಿಂದ ನಾನು ಯಾವುದೇ ಕರೆ ಮಾಡಿಸಿ ನನ್ನ ರಕ್ಷಣೆ ಮಾಡಿಸಿಕೊಂಡಿಲ್ಲ. ನಾನು ನನ್ನ ಮಗ ಬಂಧನವಾಗುವಂತಹ ಯಾವ ಅಪರಾಧವೂ ಮಾಡಿಲ್ಲ ಟಾಂಗ್ ಕೊಟ್ಟರು.

Crime News: ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!

0

ಬೆಂಗಳೂರು: ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋನಿಯಾ(24) ಮೃತ ಯುವತಿಯಾಗಿದ್ದು, ಸೋಮವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದೆಹಲಿ ಮೂಲದ ಸೋನಿಯಾ ಬೆಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

ಸೋಮವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ತನ್ನ ತಾಯಿಯ ಜೊತೆ ಮಾತನಾಡಿದ್ದ ಯುವತಿ ಮಾತುಕತೆ ಬಳಿಕ ನೇಣು ಬಿಗಿದುಕೊಂಡಿರುವ ಶಂಕೆಯಾಗಿದೆ. ಬೆಳಗ್ಗೆ ಎಂದಿನಂತೆ ಸ್ಪಾಗೆ ಬರಲಿಲ್ಲ ಎಂದು ಸ್ಪಾ ಮಾಲೀಕ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಿದ್ದಾಗ ಅನುಮಾನಗೊಂಡು ಮನೆ ಬಳಿ ಬಂದು ನೋಡಿದ್ದಾರೆ. ಮನೆ ಬಾಗಿಲು ತೆರೆಯದಿದ್ದಾಗ ಸ್ಪಾ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು,

ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಿದ್ದುಇನ್ನೂ ಮೃತ ಸೋನಿಯಾ ಪೋಷಕರು ದೆಹಲಿಯಿಂದ ಆಗಮಿಸುತ್ತಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. , ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ

error: Content is protected !!