Home Blog Page 2047

ಸುದೀಪ್ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್: ‘ಮ್ಯಾಕ್ಸ್’ ರಿಲೀಸ್ ಡೇಟ್ ಅನೌನ್ಸ್

ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ನಟನೆಯ ಮುಂದಿನ ಸಿನಿಮಾಗೆ ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದು ಚಿತ್ರ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಮ್ಯಾಕ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ತಂಡದಿಂದ ಬಿಗ್ ಅಪ್​ಡೇಟ್​ ಸಿಕ್ಕಿದೆ. ‘ಸರೆಗಮ ಕನ್ನಡ’ ಯೂಟ್ಯೂಬ್​​ನಲ್ಲಿ ಟೀಸರ್​ ಬಿಡುಗಡೆ ಮಾಡುವ ಮೂಲಕ ರಿಲೀಸ್​ ಡೇಟ್​ ಬಗ್ಗೆ ಅಪ್​ಡೇಟ್​ ನೀಡಲಾಗಿದೆ. ನವೆಂಬರ್​ 27ರಂದು ‘ಮ್ಯಾಕ್ಸ್​’ ಸಿನಿಮಾ ಬಗ್ಗೆ ದೊಡ್ಡ ಅನೌನ್ಸ್​ಮೆಂಟ್​ ಆಗಲಿದೆ ಎಂದು ನಿರ್ಮಾಪಕರು ಇತ್ತೀಚೆಗೆ ತಿಳಿಸಿದ್ದರು. ಅದರಂತೆ, ಇಂದು ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್​ 25ರಂದು ವಿಶ್ವಾದ್ಯಂತ ‘ಮ್ಯಾಕ್ಸ್’ ಸಿನಿಮಾ ರಿಲೀಸ್​ ಆಗಲಿದೆ.

2022ರ ಜುಲೈನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಸುದೀಪ್​ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಇಷ್ಟು ದೊಡ್ಡ ಗ್ಯಾಪ್ ಆಗಿದ್ದಕ್ಕೆ ಸುದೀಪ್ ಅವರ ಅಭಿಮಾನಿಗಳಿಗೆ ಬೇಸರ ಇದೆ. ‘ವಿಕ್ರಾಂತ್ ರೋಣ’ ಬಳಿಕ ಸುದೀಪ್​ ಒಪ್ಪಿಕೊಂಡ ಸಿನಿಮಾ ‘ಮ್ಯಾಕ್ಸ್​’. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಒಂದಷ್ಟು ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಗಿದ್ದು ಇದೀಗ ರಿಲೀಸ್ ಗೆ ರೆಡಿಯಾಗಿದೆ.

ಸುದೀಪ್​ ನಟನೆಯ ಮ್ಯಾಕ್ಸ್ ಪಕ್ಕಾ ಮಾಸ್ ಆಕ್ಷನ್‌ ಸಿನಿಮಾವಾಗಿದ್ದು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ.  ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಪ್ರತಿಸ್ಪರ್ಧಿಗಳನ್ನು ಪ್ರಾವೀಣ್ಯತೆಯಿಂದ ಗೆಲ್ಲಬೇಕೇ ವಿನಃ ಮರ್ದನದಿಂದಲ್ಲ : ಡಾ. ಪಾವಗಡ ಪ್ರಕಾಶ್ ರಾವ್

0

ವಿಜಯಸಾಕ್ಷಿ ಸುದ್ದಿ, ಗದಗ: ಯಾವುದೇ ವ್ಯಕ್ತಿ ನಮಗೆ ಪ್ರತಿಸ್ಪರ್ಧಿಯಾಗಿ ಕಂಡರೆ ಅವರಿಗಿಂತ ಪ್ರಾವೀಣ್ಯತೆ ಸಾಧಿಸಬೇಕೇ ವಿನಃ ಅವರನ್ನು ದ್ವೇಷಿಸುತ್ತಾ ಮರ್ದನಕ್ಕೆ ಮುಂದಾಗಬಾರದು ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 14ನೇ ದಿನದ ಪ್ರವಚನ ನೀಡಿ ಮಾತನಾಡಿ,

ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಕೌರವರ ನಡೆಗಳನ್ನು ಸಮರ್ಥಿಸಿಕೊಳ್ಳಲಿಲ್ಲವಾದರೂ ಮೌನವಾಗಿ ಇದ್ದು ತಮ್ಮ ಕೀರ್ತಿಯನ್ನು ಕುಂದಿಸಿಕೊಂಡರು. ಅದೇ ರೀತಿ ಪ್ರಜ್ಞಾವಂತ ನಾಗರಿಕರಾದ ನಾವು ಈ ದೇಶದ, ಸಮಾಜದ ಆರೋಗ್ಯಕ್ಕಾಗಿ ಧ್ವನಿ ಎತ್ತದೇ‌ ಹೋದಲ್ಲಿ ದೇಶ ಹಾನಿಗೆ ಒಳಗಾಗುತ್ತದೆ.

ಭೀಷ್ಮಾಚಾರ್ಯರು ತ್ಯಾಗಕ್ಕೆ‌ ಹಾಗೂ ಪರಮಭಕ್ತಿಗೆ ಸಂಕೇತವಾಗಿದ್ದು, ಮಹಾಭಾರತ ಯುದ್ಧದ ಸಮಯದಲ್ಲಿ ಅವರ ಹಾಗೂ ಕೃಷ್ಣರ ನಡುವೆ ನಡೆಯುವ ಪ್ರಹಸನ ಹೃದಯಂಗಮವಾಗಿದೆ. ದ್ರೋಣಾಚಾರ್ಯರಿಗೆ ಪೂಜ್ಯವಾದ ಸ್ಥಾನ ಇದ್ದರೂ ಸಹ ಏಕಲವ್ಯನ ವಿಷಯ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ದ್ರೋಣಾಚಾರ್ಯರಿಂದ ಕಲಿಯಬಾರದ ಪಾಠಗಳೂ‌ ಇವೆ. ಕುರುಕ್ಷೇತ್ರದ ಅನೇಕ ಪ್ರಹಸನಗಳಲ್ಲಿ ಕ್ಷಾತ್ರ ಸಂಬಂಧಗಳನ್ನು ಮರೆಸುತ್ತದೆ ಎಂದರು.

ಸಾವಿರಾರು ವರ್ಷಗಳ ಇತಿಹಾಸ ಅವಲೋಕಿಸಿದರೆ ಭಾರತ‌ ಯುದ್ಧ ಪಿಪಾಸು ರಾಷ್ಟ್ರವಲ್ಲ ಎಂಬುದು ಸಾಬೀತಾಗಿದೆ, ಆದರೆ ತಮ್ಮ ಮೇಲೆ ಎರಗಿ ಬಂದವರನ್ನು ಬಡಿದೋಡಿಸುವ ಕ್ಷಾತ್ರವನ್ನೂ ಭಾರತ ತೋರಿದೆ ಎಂದರು.

ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್ ಪಾಟೀಲ, ಗುರಣ್ಣ ಬಳಗಾನೂರ, ಡಾ.ಎಸ್.ಎಸ್ ಶೆಟ್ಟರ್, ಡಾ.ಜಿ.ಬಿ ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ.ಎಸ್.ಡಿ ಯರಿಗೇರಿ, ಡಾ.ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಶ್ರೀಮತಿ ಬಿ.ವಿ ಹಿರೇಮಠ, ಡಾ.ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಪೇಜಾವರ ಶ್ರೀಗಳಿಂದ ಸಂವಿಧಾನಕ್ಕೆ ಅಪಮಾನ: ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನದಿಮದ ಭಾರತಕ್ಕೆ ವಿಶೇಷ ಗೌರವ ಲಭಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನ ಪ್ರಜಾಪ್ರಭುತ್ವದ ಹಿರಿಮೆಯನ್ನು ಸಾರಿದೆ. ಸಂವಿಧಾನ ದೇಶದಲ್ಲಿರುವ ಎಲ್ಲರನ್ನೂ ಗೌರವಿಸುತ್ತಿದ್ದು, ಎಲ್ಲ ಧರ್ಮ, ಧಾರ್ಮಿಕ ಭಾವನೆಗಳನ್ನು ಗೌರವಿಸುವ ಕೆಲಸವನ್ನು ಸಂವಿಧಾನ ಮಾಡಿದೆ. ಆದರೆ, ಪೇಜಾವರ ಶ್ರೀಗಳು ಸಂವಿಧಾನಕ್ಕೆ ಅಪಮಾನ ಮಾಡಿದ್ದು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್‌ಎಸ್‌ಎಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಬಿಜೆಪಿಯಲ್ಲಿರುವ ಮಂತ್ರಿಗಳು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈಗ ತನ್ನ ಅಂಗ ಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಸಮಾವೇಶ ನಡೆಸಿ ಶ್ರೀಗಳ ಮೂಲಕ ಸಂವಿಧಾನ ವಿರೋಧಿ ಹೇಳಿಕೆ ಹೇಳಿಸಲಾಗುತ್ತಿದೆ. ಸಂತರ ಸಮಾವೇಶದಲ್ಲಿ ಸಂವಿಧಾನ ಬದಲಿಸುವ ಹೇಳಿಕೆ ಆತಂಕಕಾರಿಯಾದ ಬೇಳವಣಿಕೆಯಾಗಿದೆ. ಬಿಜೆಪಿಯ ಮುಖಂಡರು ಸಂವಿಧಾನವೇ ಉಸಿರು ಎಂದು ಹೇಳುತ್ತಿದ್ದರೆ, ಇತ್ತ ಪೇಜಾವರ ಶ್ರೀಗಳು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಆರ್‌ಎಸ್‌ಎಸ್‌ನ ದ್ವಿಮುಖ ನೀತಿ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪೇಜಾವರ ಶ್ರೀಗಳು ದೇಶದ ಜನರಿಗೆ ಗೌರವ ನೀಡುವುದನ್ನು ಕಲಿಯಬೇಕು. ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಭಾರತ ಹಿಂದೂ ರಾಷ್ಟ್ರವಾಗಿತ್ತು ಎಂಬ ಹೇಳಿಕೆ ನೀಡುತ್ತಾರೆ. ಅದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ ಎಂದು ಪ್ರಶ್ನಿಸಿದ ಬಸವರಾಜ ಸೂಳಿಭಾವಿ, ಧಾರ್ಮಿಕ ಸಂಸ್ಥೆಗಳು ದೇಶವನ್ನು ಒಡೆಯುವ ಕೆಲಸ ಮಾಡಿದರೆ ಸಂವಿಧಾನ ದೇಶವನ್ನು ಒಂದೂಗೂಡಿಸುವಂತೆ ಮಾಡಿದೆ. ಹಿಂದೂ ಧರ್ಮದಲ್ಲಿ ನೂರಾರು ಜಾತಿಗಳಿದ್ದು, ಅವೆಲ್ಲವುಗಳನ್ನು ಸೇರಿಸುವ ಕೆಲಸ ಸಂವಿಧಾನ ಮಾಡಿದೆ. ಇಂತಹ ಸಂವಿಧಾನ ಬದಲಾವಣೆ ಬಯಸುವುದು ಸರಿಯಾದ ಕ್ರಮವಲ್ಲ. ಆರ್‌ಎಸ್‌ಎಸ್‌ನ ಮೂಲ ಉದ್ದೇಶವನ್ನು ಶ್ರೀಗಳು ಹೇಳಿದ್ದು, ಇದು ಅತ್ಯಂತ ಅಪಾಯಕಾರಿ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶೇಖಣ್ಣ ಕವಳಿಕಾಯಿ, ಬಾಲರಾಜ ಅರಬರ, ಆನಂದ ಶಿಂಗಾಡಿ, ಶರೀಫ ಬಿಳೆಯಲಿ, ಶಿವಾನಂದ ತಮ್ಮಣ್ಣನವರ, ನಾಗರಾಜ ಗೋಕಾವಿ, ಪರಸುರಾಮ ಕಾಳೆ, ಅನಿಲ ಕಾಳೆ ಉಪಸ್ಥಿತರಿದ್ದರು.

ಲೋಪಗಳಿಲ್ಲದಂತೆ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿ: ರಮಣದೀಪ ಚೌಧರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೇ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿರ್ವಹಿಸಬೇಕು. ಪರಿಷ್ಕರಣಾ ಕಾರ್ಯವನ್ನು ಪಾರದರ್ಶಕವಾಗಿ, ವ್ಯವಸ್ಥಿತವಾಗಿ ಜರುಗಿಸಿ ಅಂತಿಮ ಮತದಾರರ ಪಟ್ಟಿ ತಯಾರಿಕೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ರಮಣದೀಪ ಚೌಧರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪರಿಶೀಲನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವೀಕೃತವಾದ ಅರ್ಜಿಗಳಲ್ಲಿ ಮರಣ ಹೊಂದಿದವರ, ಹೆಸರುಗಳ ತಿದ್ದುಪಡಿ, ವರ್ಗಾವಣೆಗೆ ಸಂಬAಧಿಸಿದAತೆ ಸಂಬAಧಿತ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮೋದನೆ ನೀಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ವಿಳಂಬಕ್ಕೆ ಆಸ್ಪದ ನೀಡದೇ ಜಾಗರೂಕತೆಯಿಂದ ವಿಲೇವಾರಿ ಮಾಡಲು ತಿಳಿಸಿದರು.

ಮತದಾರರ ಪಟ್ಟಿಯಿಂದ ವಿವಿಧ ಕಾರಣಗಳಿಂದ ಹೆಸರುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಕುರಿತು  ಸಂಬAಧಿತ ಅಧಿಕಾರಿಗಳು ಪುನರ್ ಪರಿಶೀಲನೆ ಕೈಗೊಂಡು ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ವ್ಯವಸ್ಥಿತವಾಗಿ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಿರ್ದೇಶನ ನೀಡಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ವಿವಿಧ ಕಾರಣಗಳಿಂದ ವಲಸೆ ಹೋಗಿರುವ, ನಿಧನ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ಸಂಬAಧಿತ ಅಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 29-10-2024ರವರೆಗೆ ಕರಡು ಮತದಾರರ ಪಟ್ಟಿಯ ಪ್ರಕಾರ  2,98,283 ಮತದಾರರಿದ್ದಾರೆ. ಆ ಪೈಕಿ 4,47,418 ಪುರುಷ ಮತದಾರರು, 4,50,865 ಮಹಿಳಾ  ಮತದಾರರಿರುತ್ತಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಫಾರ್ಮ್ ನಂ.6, ಫಾರ್ಮ್ ನಂ. 7, ಫಾರ್ಮ್ ನಂ. 8ರ ಕುರಿತು ಮಾಹಿತಿ ನೀಡಿದರು. ಕರಡು ಮತದಾರರ ಯಾದಿಗಳನ್ನು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ನೇದ್ದರಲ್ಲಿ  ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಹೊಸೂರ ಸರಕಾರಿ ಪ್ರೌಢಶಾಲೆ ರಾಜ್ಯದಲ್ಲಿಯೇ ಮಾದರಿ ಶಾಲೆಯಾಗಲಿ: ಆರ್.ಎಸ್. ಬುರಡಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿ ವಿದ್ಯಾರ್ಥಿಗೆ ಗುಣಮಟ್ಟದ ಕಲಿಕೆಯಲ್ಲಿ ತೊಡಗಿಸುವುದರ ಜೊತೆಗೆ ಗುಣಮಟ್ಟದ ಸೌಲಭ್ಯ ಕೊಡುವುದರ ಮೂಲಕ ಉತ್ತಮ ಶಿಕ್ಷಣವನ್ನು ಹೊಂದುವಂತೆ ಮಾಡಲು ಶಿಕ್ಷಕರು ಮತ್ತು ಪಾಲಕರ ಸಹಕಾರ ಅಗತ್ಯವಾಗಿದೆ. ಸರಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಗದಗ ಜಿಲ್ಲಾ ಉಪನಿದೇರ್ಶಕ ಆರ್.ಎಸ್. ಬುರಡಿ ಹೇಳಿದರು.

ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಬಸಪ್ಪ ಮಲ್ಲಪ್ಪ ಹೊಸೂರ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ `ಮಕ್ಕಳ ಕನ್ನಡ ಕಲರವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯ ಶಿಕ್ಷಕವೃಂದ ವಿದ್ಯಾರ್ಥಿಗಳ ಕಲಿಕಾ ವೃದ್ಧಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯ. ಆ ಹಿನ್ನೆಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಶಾಲೆ ಎಂದು ಗುರುತಿಸುವಂತಾಗಲಿ ಎಂದು ಆಶಿಸಿದರು.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ ಮಾತನಾಡಿ, ಮಕ್ಕಳ ಕನ್ನಡ ಕಲರವ ವ್ಯಕ್ತಪಡಿಸುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಮಕ್ಕಳ ಪ್ರತಿಭೆಗೆ ನೀರೆರೆದು ಬೆಳೆಸುವ ಹೊಣೆ ನಮ್ಮ ಶಿಕ್ಷಣ ಇಲಾಖೆ ಹಾಗೂ ಪಾಲಕರ ಮೇಲಿದೆ. ಯಾವ ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತದೆಯೋ ಆ ವಿಷಯದ ಕುರಿತು ಆ ಮಗುವಿಗೆ ಅಗತ್ಯವಿರುವ ತರಬೇತಿ, ಕಲಿಕೆ ನೀಡಬೇಕು ಎಂದರು.

ಅಕ್ಷರ ದಾಸೋಹ ಅಧಿಕಾರಿ ಶಂಕರ ಹಡಗಲಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಎ.ಎಲ್. ಬಿಜಾಪುರ ಮಾತನಾಡಿ, ಶಾಲಾ ಪ್ರಾರಂಭದಿಂದ 20 ಅಂಶಗಳ ಶೈಕ್ಷಣಿಕ ಪರಿಣಾಮಕಾರಿ ಚಟುವಟಿಕೆಯನ್ನು ಮಾಡಲಾಗಿದ್ದು, ಮತ್ತೆ ಈ ಬಾರಿ ಉತ್ತಮ ಫಲಿತಾಂಶವನ್ನು ಪಡೆಯುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಪಾಟೀಲ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಶಕುಂತಲಾ ಸಂಕಣ್ಣವರ, ದ್ಯಾಮಣ್ಣ ಹುಲ್ಲಣ್ಣವರ, ಪ್ರಕಾಶ ಸಂಕಣ್ಣವರ, ಮುತ್ತಣ್ಣ ಹೊಸೂರ, ಆನಂದ ಪಾಟೀಲ, ಶಂಕರ ಬಡ್ನಿ, ಪ್ರಭು ಕಾರಪುಡಿ, ಸುವರ್ಣ ಹೊಸೂರ, ಬಸವರಾಜ ನರೆಗಲ್ಲ, ಮುತ್ತು ಹಿರೇಮಠ, ಮಲ್ಲನಗೌಡ ಪಾಟೀಲ್, ಉಡಚಣಗೌಡ ಪಾಟೀಲ, ಸಂಗೀತ ಪಾಟೀಲ, ಜಿ.ಡಿ. ಗದಗಿನ, ಬಿ.ಎನ್. ಉಕ್ಕುಂದ, ಬಿ.ಡಿ. ಅರ್ಜನಾಳ, ಎಸ್.ಸಿ. ಕಂಪನಾಯಕ, ವಿಜಯ ಕಿರೇಸೂರ, ಶಂಕರಗೌಡ ಹೊಸಮನಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಇದ್ದರು.

ನ.30ರಂದು SSLC ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಾಗೂ ಶೈಕ್ಷಣಿಕ ಸಮಾವೇಶವನ್ನು ನ. 30ರಂದು ಬೆಳಗ್ಗೆ 10.30ಕ್ಕೆ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ರಾಜ್ಯ ಹಾಗೂ ಜಿಲ್ಲಾ ಘಟಕ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಹಯೋಗದಲ್ಲಿ ಅನುದಾನಿತ, ಅನುದಾನ ರಹಿತ ಮತ್ತು ಸರಕಾರಿ ಪ್ರೌಢಶಾಲಾ ಶಿಕ್ಷಕರಿಗಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳ ಶೈಕ್ಷಣಿಕ ಉನ್ನತಿಯ ಧ್ಯೇಯ ಇಟ್ಟುಕೊಂಡು ಆರಂಭವಾದ ಸಂಘ, ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಕಳೆದ ಬಾರಿ ಜಿಲ್ಲೆಯ ಫಲಿತಾಂಶ ಕಡಿಮೆಯಾಗಿದೆ. ಹೀಗಾಗಿ ಮುಂಬರುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರನ್ನು ಮತ್ತಷ್ಟು ಸಜ್ಜುಗೊಳಿಸಲು ಈ ಕಾರ್ಯಾಗಾರ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ, ಬಿ.ಕೆ. ನಿಂಬನಗೌಡರ, ಜಿ.ಡಿ. ಯರಗೊಪ್ಪ, ಬೂದಪ್ಪ ಅಂಗಡಿ, ಡಿ.ಎನ್. ಮರಡ್ಡಿ, ನವೀನ ಬಸವರೆಡ್ಡಿ, ಬಿ.ಸಿ. ಗುಳೇದ, ಆರ್.ಬಿ. ಗೊಂಡಬಾಳ, ಗಿರೀಶ ನರಗುಂದ, ಉಪಸ್ಥಿತರಿದ್ದರು.

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ 20ನೇ ಶಾಖೆ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: 119 ವರ್ಷಗಳ ಇತಿಹಾಸ ಹೊಂದಿರುವ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ 20ನೇ ಶಾಖೆಯು ನ. 28ರಂದು ಬೆಳಗ್ಗೆ 11 ಗಂಟೆಗೆ ಎಪಿಎಂಸಿ ರಸ್ತೆಯಲ್ಲಿನ ಮಾನ್ವಿ ಬಿಲ್ಡಿಂಗ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ದೀಪಕ ಪ್ರಭು ಹೇಳಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂತನ ಶಾಖೆಯ ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಕಾಶ ಭೂಮಾ ಹಾಗೂ ಮಹಾರುದ್ರಪ್ಪ ಭೂಸ್ತ ಆಗಮಿಸಲಿದ್ದಾರೆ. ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

1980ರಲ್ಲಿ ಯಲ್ಲಾಪುರದಲ್ಲಿ ಪ್ರಥಮ ಶಾಖೆಯನ್ನು ಆರಂಭಿಸಿತು. ಸದ್ಯ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ 13 ಶಾಖೆಗಳು, ಬೆಂಗಳೂರಿನಲ್ಲಿ 2, ಹುಬ್ಬಳ್ಳಿ, ಹಾವೇರಿ, ಕುಂದಾಪುರ ಮತ್ತು ಮಂಗಳೂರಿನಲ್ಲಿ ತಲಾ 1 ಶಾಖೆ ಹೊಂದಿದೆ. ಆ ಪೈಕಿ 10 ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದರು.

ಸದ್ಯ ಬ್ಯಾಂಕ್ ಮಾರ್ಚ್ 2024ರ ಅಂತ್ಯಕ್ಕೆ ಆರ್ಥಿಕ ವರ್ಷದಲ್ಲಿ 2055 ಕೋಟಿ ರೂ. ಹೊಂದಿದೆ 1245 ಕೋಟಿ ಠೇವಣಿ, 810ಕೋಟಿ ರೂ. ಸಾಲ, 13.75ಕೋಟಿ ರೂ. ನಿರ್ವಹಣಾ ಲಾಭ, 10.29ಕೋಟಿ ನಿವ್ವಳ ಲಾಭ ಗಳಿಸಿ, ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕುಗಳ ಅಗ್ರ 10 ಶ್ರೇಯಾಂಕದಲ್ಲಿ ಒಂದಾಗಿದೆ ಎಂದು ವಿವರಿಸಿದರು.

ವಿಶಾಲ ದೇವಿಮನಿ, ಅಶ್ವಿನಕುಮಾರ ಖಾಡಿಲಕರ, ದಿನೇಶ ಪಾಲನಕರ, ವಸಂತಿ ಬಸ್ತಿಕರ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರಾಟೆ ಸ್ಪರ್ಧೆಯಲ್ಲಿ ಪೃಥ್ವಿ ಪಡಗದ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ತುಮಕೂರಿನ ಲಾಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ವತಿಯಿಂದ್ದಿತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗದುಗಿನ ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ಸಂಸ್ಥೆಯಲ್ಲಿ ಕರಾಟೆ ತರಬೇತಿ ಪಡೆದ ವಿದ್ಯಾರ್ಥಿ ಪೃಥ್ವಿ ಕೆ.ಪಡಗದ ಕರಾಟೆ ಸ್ಪರ್ಧೆಯ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈ ವಿದ್ಯಾರ್ಥಿಗೆ, ತರಬೇತಿ ನೀಡಿದ ಮುಖ್ಯ ತರಬೇತುದಾರ ಮೆಹಬೂಬ ದೊಡ್ಡಮನಿ ಮತ್ತು ರಾಯಸಾಬ ಹುಯಿಲಗೋಳ ಅವರಿಗೆ ಎಲ್ಲ ಪಾಲಕರು, ಗುರು-ಹಿರಿಯರು ಅಭಿನಂದಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕ ಪ್ರಾಂತ ಕಾರ್ಯಾಲಯ ಧರ್ಮಸಿರಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತ ಸಹಮಂತ್ರಿ ಅರುಣ ನಿಟ್ಕೆ, ಪ್ರಾಂತ ಉಪಾಧ್ಯಕ್ಷ ಡಾ. ರಾಮನಗೌಡ್ರ, ಗೋವರ್ಧನರಾವ್, ಬಸವರಾಜ ಜೀ, ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ, ವಿಭಾಗ ಕಾರ್ಯದರ್ಶಿ ರಮೇಶ ಕದಂ, ಮಹಾಬಲೇಶ್ವರ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ನಡೆದ ಧಾರವಾಡ ವಿಭಾಗ ವಿಶ್ವ ಹಿಂದೂ ಪರಿಷತ್ ಬೈಠಕನಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗದಗ ಜಿಲ್ಲಾ ಸಾಮಾಜಿಕ ಸಾಮರಸ್ಯದ ಪ್ರಮುಖರಾಗಿ ಯಶವಂತ ಕಾಂಬಳೇಕರ, ಧರ್ಮಾಚಾರ್ಯ ಸಂಪರ್ಕ ಪ್ರಮುಖರಾಗಿ ಬಸವರಾಜ ಅರಳಿ, ದುರ್ಗಾವಾಹಿನಿ ಸಂಚಾಲಕಿಯಾಗಿ ನಿಖಿತಾ ಸುತಾರ, ಗದಗ ನಗರ ತಾಲೂಕಾಧ್ಯಕ್ಷರಾಗಿ ರಾಘವೇಂದ್ರ ಬಾಂಢಗೆ, ಸಹ ಕಾರ್ಯದರ್ಶಿಯಾಗಿ ಕಾರ್ತಿಕ ಪರ್ವತಗೌಡರ, ಗದಗ (ಗ್ರಾಮಾಂತರ) ತಾಲೂಕಾಧ್ಯಕ್ಷರಾಗಿ ವಿರೇಶ ಮಡಿವಾಳರ, ಗದಗ ತಾಲೂಕಾ ಮಾತೃ ಶಕ್ತಿ ಪ್ರಮುಖರಾಗಿ ಕೌಶಲ್ಯ ಬದಿ, ಸತ್ಸಂಗ ಪ್ರಮುಖರಾಗಿ ಅರುಣಾ ಗುಂಡಗಟ್ಟಿ, ಸಹ ಸತ್ಸಂಗ ಪ್ರಮುಖರಾಗಿ ಲತಾ ದುರ್ಗಾವಾಹಿನಿ, ಸಹ ಸಂಯೋಜಕಿಯಾಗಿ ಅಮೂಲ್ಯ ಸಂಶಿ, ಕಾರ್ಯದರ್ಶಿ ಸದಸ್ಯರಾಗಿ ಸುಂದರಾಬಾಯಿ ಧರ್ಮದಾಸ ಆಯ್ಕೆಯಾದರು.

ನ.28ರಂದು ಸಾಯಂಕಾಲ 4.30ಕ್ಕೆ ಗದುಗಿನ ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರವಿರುವ ಸೇವಾ ಚೇತನದಲ್ಲಿ ಸಭೆ ಕರೆದಿದ್ದು, ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತ ಮಠ ಮಂದಿರ ಏವಂ ಅರ್ಚಕ, ಪುರೋಹಿತ ಮಂಡಳಿಯ ಪ್ರಮುಖರಾದ ಅರುಣ ನೆಟಕೆ ಮಾರ್ಗದರ್ಶನ ಮಾಡಲಿದ್ದಾರೆ. ಗದಗ ಜಿಲ್ಲೆಯ ಅರ್ಚಕ-ಪುರೋಹಿತರು, ದೇವಸ್ಥಾನ ಟ್ರಸ್ಟಿಗಳು ಭಾಗವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಏವಂ ಅರ್ಚಕ ಪುರೋಹಿತ ಪ್ರಮುಖರಾದ ಮಂಜುನಾಥ ಹೆಗಡೆ ವಿನಂತಿಸಿದ್ದಾರೆ.

ಶಂಕರಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ದೇವಾಂಗ ಸಮಾಜದಿಂದ ಕಾರ್ತಿಕೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ದೇವಾಂಗ ಸಮಾಜ ಸಮಾನ ಮಾನಸ್ಕರ ವೇದಿಕೆ ವತಿಯಿಂದ 9ನೇ ಕಾರ್ತಿಕೋತ್ಸವ ಕಾರ್ಯಕ್ರಮ ನಗರದ ಹಳೇಬನಶಂಕರಿ ದೇವಸ್ಥಾನದ ಆವರಣದಲ್ಲಿ ಶ್ರೀ ಶಂಕರಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಸಮಾಜ ಬಾಂಧವರಿಂದ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮುಕ್ಕಣ್ಣೇಶ್ವರ ಮಠದ ಶ್ರೀ ಶಂಕರಾನಂದ ಸ್ವಾಮೀಜಿಯವರ ಆಶೀರ್ವಚನ ನೀಡುತ್ತ, ದೀಪದಿಂದ ದೀಪ ಹಚ್ಚುವ ಈ ಕಾರ್ತಿಕೋತ್ಸವ ಕಾರ್ಯಕ್ರಮವು ದೇವಾಂಗ ಸಮುದಾಯದ ಸಮಾಜಮುಖಿ ಕಾರ್ಯವಾಗಿದೆ. ಇಂತಹ ಧಾರ್ಮಿಕ ಕಾರ್ಯಗಳು ಆಗಾಗ ನಡೆಯುವುದರಿಂದ ಜನತೆಯಲ್ಲಿ ಶಾಂತಿ-ಸಾಮರಸ್ಯ ಮೂಡಲು ಸಾಧ್ಯವಾಗುತ್ತಿದೆ ಎಂದರು.

ದೇವಾಂಗ ಸಮಾಜದ ಸ.ಮ.ವೇ. ಗೌರವಾಧ್ಯಕ್ಷರಾದ ರತ್ನಾ ಘಾರ್ಗಿ ದೇವಾನು ದೇವತೆಗಳಿಗೆ ವಸ್ತçವನ್ನು ನೀಡಿದ ದೇವಲ ಮಹರ್ಷಿಯ ಅವತಾರಗಳ ಬಗ್ಗೆ ವಿವರವಾಗಿ ಮಾತನಾಡಿದರು.            ಕೆ.ಜಿ.ಕೆ. ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಕವಿತಾ ಕೇಶವರಾಮ ಕೊಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಅನಸೂಯಾ ದೇವಾಂಗಮಠ, ಭಾರತಿ ಗಡ್ಡಿ, ಸುಜಾತಾ ಕಾಕಂಡಕಿ, ಸುಭಾಸಚಂದ್ರ ಪೆಂಟಾ ಮಾತನಾಡಿದರು. ವೇದಿಕೆಯ ಮೇಲೆ ರತ್ನಾ ಘಾರ್ಗಿ, ಭಾರತಿ ಗಡ್ಡಿ, ಕವಿತಾ ಕೊಳ್ಳಿ, ಡಾ. ಅನಸೂಯಾ ದೇವಾಂಗಮಠ, ಸುಜಾತಾ ಕಾಕಂಡಕಿ, ಶೋಭಾ ಭಾರದ್ವಾಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೇಶವರಾಮ ಕೊಳ್ಳಿ, ರಾಘವೇಂದ್ರ ಕೊಪ್ಪಳ, ಶಿವಾನಂದ ಗಿಡ್ನಂದಿ, ನಿರ್ಮಲ ಕೊಳ್ಳಿ, ಪುಷ್ಪಾ ಗುಗ್ಗರಿ, ಶಾಂತಾ ಗುತ್ತಿ, ಶೈಲಜಾ ಗಿಡ್ನಂದಿ, ವಜ್ರಾ ಪೆಂಟಾ, ರತ್ನಾ ಚಳಗೇರಿ ಸೇರಿದಂತೆ ಸಮಾಜದ ಎಲ್ಲ ಬಾಂಧವರು ಹಾಜರಿದ್ದರು.

ರಕ್ಷಿತಾ ಶಿವಾನಂದ ಗಿಡ್ನಂದಿ ನಿರೂಪಿಸಿದರು. ಭಾಗ್ಯಶ್ರೀ ಆರಿ ಪ್ರಾರ್ಥನೆಗೈದರು. ಶಿಲ್ಪಾ ಕೊಪ್ಪಳ ವಂದಿಸಿದರು.

 

error: Content is protected !!