Home Blog Page 2050

ಡಿ.1 ರಂದು ಶ್ರೀ ಗಡ್ಡದೇವರಮಠದಲ್ಲಿ ಕಾರ್ತಿಕೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಶ್ರೀ ಗುರು ಗಡ್ಡದೇವರಮಠದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಕಾರ್ತಿಕೋತ್ಸವ ಕಾರ್ಯಕ್ರಮ ಡಿ.1ರಂದು ಸಂಜೆ6.30ಕ್ಕೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಶ್ರೀಮಠದ ವಂಶಸ್ಥರು ಹಾಗೂ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ತಿಳಿಸಿದರು.

ಅವರು ಈ ಕುರಿತು ಬುಧವಾರ ಗುರುಗಡ್ಡದೇವರ ಮಠದ ಆವರಣದಲ್ಲಿ ಮಾಹಿತಿ ನೀಡಿ, ಶ್ರೀಮಠವು ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿದ್ದು, ಈ ಭಾಗದ ಜನರ ಶೃದ್ಧಾ-ಭಕ್ತಿ ಕೇಂದ್ರವಾಗಿದೆ. ಇದು ಜಾಗೃತ ಮಠವಾಗಿದ್ದು, ಶ್ರೀಮಠದ ಭಕ್ತರು ತಾಲೂಕಿನ ಗೋವನಾಳ, ಗುಲಗಂಜಿಕೊಪ್ಪ, ಹರ್ಲಾಪೂರ ಮುಂತಾದ ಕಡೆ ಇದ್ದಾರೆ. ಗುರುಗಡ್ಡದ್ದೇವರಮಠ ಶ್ರೀಗಳು ಇಲ್ಲಿಯೇ ನೆಲೆನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಸಂಪ್ರದಾಯದಂತೆ ಡಿ.1ರಂದು ಶ್ರೀಮಠದಲ್ಲಿ ಸಹಸ್ರ ದೀಪಗಳೊಂದಿಗೆ ಕಾರ್ತಿಕೋತ್ಸವವನ್ನು ವೈಭವದಿಂದ ಆಚರಿಸುವುದಾಗಿ ಹೇಳಿದರು.

ಕಾರ್ತಿಕ ದೀಪೋತ್ಸವದ ನಂತರ ಚನ್ನಮ್ಮನವನ ಕಲ್ಯಾಣ ಮಂಠಪದಲ್ಲಿ ಜರುಗುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಬನ್ನಿಕೊಪ್ಪ/ಮೈಸೂರಿನ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ವಹಿಸಲಿದ್ದಾರೆ. ಲಕ್ಮೇಶ್ವರದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಅನೇಕ ಗಣ್ಯರು, ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬಳಿಕ ಕೊತಬಾಳದ ರಾಚಯ್ಯ ಅವರ ತಂಡ ಹಾಗೂ ಹರ್ಲಾಪುರ ಸಾಂಬಯ್ಯ ಹಿರೇಮಠ ಅವರ ತಂಡದಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಗಡ್ಡಯ್ಯಸ್ವಾಮಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಬೆಂಡಿಗೇರಿ, ರಾಜೀವ ಕುಂಬಿ, ಪದ್ಮರಾಜ ಪಾಟೀಲ, ಜಯಕ್ಕ ಕಳ್ಳಿ, ಈರಣ್ಣ ಅಂಕಲಕೋಟಿ, ಬಾಬಣ್ಣ ಅಳವಂಡಿ, ವಿರೂಪಾಕ್ಷಪ್ಪ ಪಡಗೇರಿ, ರಮೇಶ ಗಡದವರ, ಕಿರಣ ನವಲೆ, ಶಿವಜೋಗೆಪ್ಪ ಚಂದರಗಿ, ಮಹೇಶ ಲಿಂಬಯ್ಯ ಸ್ವಾಮಿಮಠ, ರಾಮಣ್ಣ ರಿತ್ತಿ, ಛಾಯಪ್ಪ ಬಸಾಪುರ, ಸಾಹೇಬಜಾನ ಹವಾಲ್ದಾರ, ವಿರೂಪಾಕ್ಷಪ್ಪ ಆದಿ, ಶಿವಯೋಗಿ ಗಡ್ಡದೇವರಮಠ, ಶೇಖಪ್ಪ ಹುರಕಡ್ಲಿ, ಮಲ್ಲಯ್ಯ ಭಕ್ತಿಮಠ, ಫಕ್ಕೀರೇಶ ನಂದೆಣ್ಣವರ, ವೆಂಕಟೇಶ ಮಾತಾಡೆ, ಪ್ರಕಾಶ ಕೊಂಚಿಗೇರಿಮಠ, ಮಲ್ಲನಗೌಡ ಪಾಟೀಲ, ಸಿದ್ದು ದುರಗಣ್ನವರ ಸೇರಿದಂತೆ ಮಠದ ಭಕ್ತರು ಇದ್ದರು.

ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ: ಏಕನಾಥ್‌ ಶಿಂಧೆ

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಒಗ್ಗಟ್ಟಿಗೆ ಮತ್ತೊಮ್ಮೆ ಅದೃಷ್ಟ ಒಲಿದು ಬಂದಿದೆ. ಮ್ಯಾಜಿಕ್ ನಂಬರ್ ದಾಟಿ ದಾಖಲೆಯ ಗೆಲುವು ಪಡೆದ ಮಹಾಯುತಿ ಮೈತ್ರಿ ನೂತನ ಸರ್ಕಾರ ರಚನೆಯ ಕಸರತ್ತು ನಡೆಸ್ತಿದೆ. ಇದರ ಬೆನ್ನಲ್ಲಿಯೇ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಏಕನಾಥ್‌ ಶಿಂಧೆ, ನಾನು ಯಾವತ್ತೂ ಮುಖ್ಯಮಂತ್ರಿ ಆಗುತ್ತೇನೆ  ಎಂದುಕೊಂಡಿರಲಿಲ್ಲ. ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನಸಹಕಾರ ಯಾವಾಗಲೂ ಇರುತ್ತದೆ ಎಂದರು.

ನನ್ನ ಪ್ರಕಾರ ಸಿಎಂ ಎಂದರೆ ಕಾಮನ್ ಮ್ಯಾನ್. ನಾವು ತೆಗೆದುಕೊಂಡ ನಿರ್ಧಾರಗಳು ಇತಿಹಾಸ ಪುಟದಲ್ಲಿ ಸೇರಿವೆ. ನನಗೆ ಮೇಲೆ ಯಾರ ಸಿಟ್ಟಿಲ್ಲ. ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಾನು ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ. ಸಾಮಾನ್ಯನಂತೆ ಕೆಲಸ ಮಾಡಿದ್ದೇನೆ.  ಮಹಾಯುತಿ ಒಕ್ಕೂಟ ಯಾರನ್ನೂ ಆಯ್ಕೆ ಮಾಡುತ್ತದೋ ಅವರಿಗೆ ನನ್ನ ಬೆಂಬಲ ಇರಲಿದೆ ಎಂದು ತಿಳಿಸಿದರು. ನನಗೆ ಪ್ರಧಾನಿ ಮೋದಿ ಕರೆ ಮಾಡಿದ್ದರು. ಏನೇ ಆಗಲಿ ಜೊತೆಗೆ ಇರುತ್ತೇನೆ ಎಂದು ಹೇಳಿದ್ದೇನೆ. ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ. ಮೋದಿ ಅವರು ಕೈಗೊಳ್ಳುವ ನಿರ್ಧಾರಗಳೇ ಅಂತಿಮ ಎಂದು ಹೇಳಿದರು.

ಗಮನಿಸಿ.. ಸೂರ್ಯಕಾಂತಿ ಬೀಜ ಸೇವಿಸಿದರೆ ಈ ಸಮಸ್ಯೆಗಳಿಂದ ಮುಕ್ತರಾಗಬಹುದು!

0

ಸೂರ್ಯಕಾಂತಿ ಎಣ್ಣೆಯನ್ನು ನಮ್ಮ ದೇಶದಲ್ಲಿ ಅಡುಗೆ ಮಾಡಲು ಬಳಸಲಾಗುತ್ತದೆ. ಈ ಎಣ್ಣೆಯನ್ನು ಸೂರ್ಯಕಾಂತಿ ಬೀಜಗಳಿಂದ ತಯಾರಿಸಲಾಗುತ್ತದೆ. ಇದು ಆಹಾರಕ್ಕೆ ಉತ್ತಮ ರುಚಿಯನ್ನು ನೀಡುತ್ತದೆ. ಆದರೆ ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸಲು ಬಳಸುವ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ಸೂರ್ಯಕಾಂತಿ ಬೀಜಗಳು ಪೌಷ್ಟಿಕಾಂಶದ ಉತ್ತಮ ಮೂಲವೆಂದು ಹೇಳಬಹುದು. ಇತರ ಬೀಜಗಳಂತೆ, ಅವು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಈ ಬೀಜಗಳು ಪ್ರೋಟೀನ್, ಕ್ಯಾಲ್ಸಿಯಂನಂತಹ ಅಂಶಗಳಲ್ಲಿ ಸಮೃದ್ಧವಾಗಿವೆ. ಹಾಗಾದರೆ ಸೂರ್ಯಕಾಂತಿ ಬೀಜಗಳ ಪ್ರಯೋಜನಗಳನ್ನು ತಿಳಿಯೋಣ.

ಸಂಧಿವಾತಕ್ಕೆ ಪರಿಣಾಮಕಾರಿ ಸಂಧಿವಾತ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಸೂರ್ಯಕಾಂತಿ ಎಣ್ಣೆಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎಣ್ಣೆಯ ಬಳಕೆಯು ಸಂಧಿವಾತದ ಸಮಸ್ಯೆಗೆ ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ ವಿಟಮಿನ್-ಸಿ, ವಿಟಮಿನ್-ಇ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಸೂರ್ಯಕಾಂತಿ ಬೀಜಗಳಲ್ಲಿ ಕಂಡುಬರುತ್ತವೆ, ಇದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಅವರು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಹೃದಯವನ್ನು ಆರೋಗ್ಯವಾಗಿರಿಸುತ್ತದೆ ಇಂದಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಿದೆ. ಸೂರ್ಯಕಾಂತಿ ಬೀಜಗಳಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಕಂಡುಬರುತ್ತದೆ, ಇದು ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ನೀವು ಈ ಬೀಜಗಳನ್ನು ನಿಯಮಿತವಾಗಿ ಸೇವಿಸಿದರೆ, ನೀವು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಬಹುದು.

ಒತ್ತಡವನ್ನು ಕಡಿಮೆ ಮಾಡುತ್ತದೆ ಸೂರ್ಯಕಾಂತಿ ಬೀಜಗಳು ಮನಸ್ಸನ್ನು ಶಾಂತವಾಗಿಡಲು ಸಹಕಾರಿ. ಇದರಲ್ಲಿರುವ ಮೆಗ್ನೀಸಿಯಮ್ ಮೆದುಳಿಗೆ ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ ಸೂರ್ಯಕಾಂತಿ ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 3. ಮೂಳೆಗಳಿಗೆ ಪ್ರಯೋಜನಕಾರಿ ಮೆಗ್ನೀಷಿಯಂ, ವಿಟಮಿನ್-ಇ ಮತ್ತು ಅನೇಕ ಪೋಷಕಾಂಶಗಳು ಈ ಬೀಜಗಳಲ್ಲಿ ಕಂಡುಬರುತ್ತವೆ, ಇದು ಮೂಳೆಗಳನ್ನು ಆರೋಗ್ಯಕರವಾಗಿರಿಸುತ್ತದೆ.

ನಿಖಿಲ್ʼನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ: ಶಾಸಕ ಹೆಚ್ ಡಿ ರೇವಣ್ಣ

0

ಬೆಂಗಳೂರು: ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ ಎಂದು ಶಾಸಕ ಹೆಚ್ ಡಿ ರೇವಣ್ಣ ಹೇಳಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ದಯನೀಯ ಸೋಲು ಕಂಡಿಲ್ಲವೇ? ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ,

ವಿಧಿಯಿಲ್ಲದೆ ಅವನನ್ನು ಸ್ಪರ್ಧೆಗಿಳಿಸಬೇಕಾಯಿತು ಅಂತ ಕುಮಾರಸ್ವಾಮಿ ಹೇಳಿಲ್ಲವೇ? ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ 85,000 ವೋಟು ಪಡೆದಿದ್ದಾನೆ, ಅದು ಸಾಧನೆಯಲ್ಲವೇ? ಅವನ ಭಾಷಣಗಳನ್ನು ಕೇಳಿದ್ದೇನೆ, ಉತ್ತಮ ಸಂಸದೀಯ ಪಟುಗಳ ಹಾಗೆ ಮಾತಾಡುತ್ತಾನೆ, ಸೋಲಿನಿಂದ ಅವನು ಧೃತಿಗೆಟ್ಟಿಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಎಂದು ಹೇಳಿದರು. ಇನ್ನೂ ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,

2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು. ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು.

ಕೇಂದ್ರ ಸರ್ಕಾರ ನಮಗೆ ಬರಬೇಕಾದ ಹಣವನ್ನು ಸರಿಯಾಗಿ ನೀಡುತ್ತಿಲ್ಲ: ಡಾ.ಜಿ.ಪರಮೇಶ್ವರ್

0

ಬೆಂಗಳೂರು: ಕೇಂದ್ರ ಸರ್ಕಾರ ನಮಗೆ ಬರಬೇಕಾದ ಹಣವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹಿಂದಿನ ಸರ್ಕಾರ ಲಕ್ಷಾಂತರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿತ್ತು.

ಅದನ್ನೆಲ್ಲ ನಾವು ಭರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ರೂ. ಹೆಚ್ಚುವರಿ ಖರ್ಚಾಗಿದೆ. ಬಜೆಟ್ ಅಮೌಂಟ್ 3.27 ಲಕ್ಷ ಕೋಟಿಯಿಂದ, 3.75 ಲಕ್ಷ ಕೋಟಿಗೆ ಹೆಚ್ಚಾಗಿದೆ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟರು, ಹೆಚ್ಚಿನ ಹಣ ದೊರಕುತ್ತದೆ ಎಂದರು.

ಕೇಂದ್ರ ಸರ್ಕಾರ ನಮಗೆ ಬರಬೇಕಾದ ಹಣವನ್ನು ಸರಿಯಾಗಿ ನೀಡುತ್ತಿಲ್ಲ. ಒತ್ತಾಯ ಮಾಡಿ ಹಣ ತಂದು, ಸಂಪನ್ಮೂಲ ಕ್ರೂಢೀಕರಣವನ್ನು ಜಾಸ್ತಿ ಮಾಡಲಾಗಿದೆ. ಹಣಕಾಸಿನ ಸ್ಥಿತಿಗತಿಯನ್ನು ಬ್ಯಾಲೆನ್ಸ್ ಮಾಡಲು ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಎರಡು ಬಾರಿ ನಮಗೆಲ್ಲ ಹೇಳಿದ್ದಾರೆ. ಯಾವುದೂ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

RCB ತಂಡವನ್ನೇ ಖರೀದಿಸಲು ಸಿದ್ಧರಾದ ಮಂಡ್ಯ ಫ್ಯಾನ್ಸ್: 1000 ಕೋಟಿ ಹೊಂದಿಸೋ ಪ್ಲ್ಯಾನ್ ಹೇಗಿದೆ ಗೊತ್ತಾ!?

0

RCB ಅನ್ನೋದು ಅದೊಂದು ಹೆಸರಲ್ಲ ಮರ್ರೆ ಎಮೋಷನಲ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL ನಲ್ಲಿ ಇದುವರೆಗೂ ಒಂದು ಟ್ರೋಫಿ ಗೆದ್ದಿಲ್ಲ. ಆದ್ರೂ ಅಭಿಮಾನಿಗಳ ಕ್ರೇಜ್ ಎಂದೂ ಕಮ್ಮಿ ಆಗಿಲ್ಲ.

ಫೀಲ್ಡ್ ನಲ್ಲಿ RCB ಫ್ಯಾನ್ಸ್ ಕೊಡೋ ಎನರ್ಜಿ ನೆಕ್ಸ್ಟ್ ಲೆವೆಲ್. ಇದು ಯಾವ ತಂಡದ ಅಭಿಮಾನಿಗಳಿಂದಲೂ ಸಾಧ್ಯವಾಗಿಲ್ಲ. ಸೋತರೂ, ಗೆದ್ದರೂ ಒಂದೇ ಕ್ರೇಜ್ ಹೊಂದಿರುವ ಅವರು, ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಮಾತ್ರ ನಿಲ್ಲಿಸಿಲ್ಲ. ಇದು RCB ತಂಡದ ಮೇಲಿನ ಅಭಿಮಾನ ತೋರಿಸತ್ತೆ.

ಆದರೆ 2025 ರ IPL ಹರಾಜು ಬಳಿಕ ಪ್ರಾಂಚೈಸಿ ನಿರ್ಧಾರದ ಬಗ್ಗೆ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಸಾಕಷ್ಟು ಆಟಗಾರರನ್ನು ಹರಾಜಿನಲ್ಲಿ ಖರೀದಿಸದೆ ಬೇರೆ ತಂಡಕ್ಕೆ ಬಿಟ್ಟುಕೊಟ್ಟ ಹಿನ್ನೆಲೆ ಫ್ಯಾನ್ಸ್ ಆಕ್ರೋಶ ಹೊರ ಹಾಕಿದ್ದಾರೆ.

ಹೀಗಾಗಿ, ತಂಡವೂ ನಮ್ಮದೇ, ಕಪ್ಪು ನಮ್ಮದೇ, ಬನ್ನಿ ಆರ್‌ಸಿಬಿ ಮಾಲೀಕತ್ವ ಪಡೆಯೋಣ ಎಂದು ಕರೆ ಕೊಟ್ಟಿದ್ದಾರೆ. ಆಲ್​ ಇಂಡಿಯಾ ಆರ್​ಸಿಬಿ ಫ್ಯಾನ್ಸ್​ ಅಸೋಸಿಯೇಷನ್​ ವೇದಿಕೆ ಸಿದ್ದವಾಗಿದೆ.

ನೋಂದಣಿಗೆ ವೇದಿಕೆ ಸಿದ್ಧವಾಗಿದೆ. ಆರ್​ಸಿಬಿ ಮಲೀಕತ್ವ ಪಡೆಯೋಣ ಎಂಬ ಪೋಸ್ಟರ್​​ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

10 ಲಕ್ಷ ಆರ್‌ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರದಂತೆ ಹಣ ಸಂಗ್ರಹ ಮಾಡೋಣ. ಸಂಗ್ರಹವಾದ 1000 ಕೋಟಿ ಹಣದಲ್ಲಿ ತಂಡದ ಆಟಗಾರರನ್ನು ನಾವೇ ಖರೀದಿಸೋಣ.

ಅಭಿಮಾನಿಗಳ ಮತದಾನದ ಮೂಲಕ ಆಟಗಾರರ ಖರೀದಿ ಮಾಡಿ, ಪ್ರತಿ ಸದಸ್ಯರಿಗೆ ಸೀಸನ್​ನಲ್ಲಿ ಆರ್‌ಸಿಬಿ ಆಡುವ ಒಂದು ಪಂದ್ಯವನ್ನು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ ನೀಡೋಣ.

ಅಭಿಮಾನಿಗಳೇ ಬನ್ನಿ ಆರ್‌ಸಿಬಿ ಮಾಲೀಕರಾಗೋಣ ಎಂದು ಆಲ್​ ಇಂಡಿಯಾ ಆರ್​ಸಿಬಿ ಫ್ಯಾನ್ಸ್​ ಅಸೋಸಿಯೇಷನ್ ಕರೆ ಕೊಟ್ಟಿದೆ. ತಂಡವನ್ನು ಆಯ್ಕೆ ಮಾಡಲು ಕೈ ಜೋಡಿಸಿ ಎಂದು ಮನವಿ ಮಾಡಿದೆ.

ವೈರಲ್​ ಆದ ಪೋಸ್ಟರ್​ನಲ್ಲಿ ಏನಿದೆ?

ಹಾಲಿ RCB ಮಾಲೀಕರಿಂದ ತಂಡವನ್ನು ಅಭಿಮಾನಿಗಳ ಸಂಘಕ್ಕೆ ಖರೀದಿ ಮಾಡಿಕೊಳ್ಳುವ ಮಹತ್ವದ ಗುರಿಯನ್ನು ಹೊಂದಲಾಗಿದೆ.

10 ಲಕ್ಷ ಅಭಿಮಾನಿಗಳಿಂದ ತಲಾ 10 ಸಾವಿರ ರೂ. ಹಣವನ್ನು ಚೇರಿನ ರೂಪದಲ್ಲಿ ಸಂಗ್ರಹಿಸುವ ಮೂಲಕ 1000 ಕೋಟಿ ಹಣ ಸಂಗ್ರಹಿಸುವ ಗುರಿ.

ಸಂಗ್ರಹವಾದ ಹಣದಿಂದ RCB ತಂಡದ ಮಾಲೀಕತ್ವವನ್ನು ಅಭಿಮಾನಿಗಳ ಸಂಘವೇ ಖರೀದಿಸಿ ತಂಡದಲ್ಲಿ ಯಾವ್ಯಾವ ಆಟಗಾರರನ್ನು ಆಡಿಸಬೇಕೆಂಬುದನ್ನು ಅಭಿಮಾನಿಗಲೇ ವೋಟ್ ಮೂಲಕ ಆಯ್ಕೆ ಮಾಡಿ ಅಂತಹ ಆಟಗಾರರನ್ನು ನಿಯಮದಂತೆ ಬಿಡ್ಡಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದೇ ಸಂಘದ ಉದ್ದೇಶ.

ಅಭಿಮಾನಿಗಳ ಸಂಘದ 1 ಲಕ್ಷ ಸದಸ್ಯರಲ್ಲಿ 10 ಮಂದಿಯನ್ನು 2 ವರ್ಷಕ್ಕೊಮ್ಮೆ ಚುನಾವಣೆಯ ಮೂಲಕ ಆಯ್ಕೆ ಮಾಡಿ ಬಿಡ್ಡಿಂಗ್‌ನಲ್ಲಿ ತಂಡವನ್ನು ಆಯ್ಕೆ ಮಾಡುವ ಅಧಿಕಾರ ನೀಡುವುದು.

ಸಂಘದ ಪ್ರತಿ ಸದಸ್ಯರಿಗೂ ಒಂದು ಬಾರಿ RCB ಆಡುವ ಯಾವುದಾದರೂ ಪಂದ್ಯವನ್ನು ವೀಕ್ಷಿಸಲು ಉಚಿತವಾಗಿ ಅವಕಾಶ ನೀಡಲಾಗುವುದು.

ಆಯ್ಕೆ ಮಂಡಲಿಯ ಬೇಜವಾಬ್ದಾರಿ ವಿರುದ್ಧ ಮಳವಳ್ಳಿ RCB ಅಭಿಮಾನಿಗಳಿಂದ/ ಕ್ರಾಂತಿಕಾರಿ ನಿರ್ಧಾರ. ನಮ್ಮ ತಂಡ. ನಮ್ಮದೇ ಮಾಲೀಕತ್ವ ಎಂದು ಕರೆ ಕೊಟ್ಟಿದ್ದಾರೆ.

ಚಳಿಗಾಲದಲ್ಲಿ ನಿಮ್ಮ ತುಟಿಗಳು ಬಿರುಕು ಬಿಡುತ್ತಿದ್ಯಾ? ಚಿಂತೆ ಬಿಡಿ, ಈ ಟಿಪ್ಸ್ ಫಾಲೋ ಮಾಡಿ!

0

ಗುಲಾಬಿ ರಂಗಿನ ತುಟಿಗಳು ಚಳಿಗಾಲ ಬಂತೆಂದರೆ ಸಾಕು ಹೆದರಿ ಬಾಡಿ ಹೋಗುತ್ತವೆ. ಕೊರೆಯುವ ಚಳಿ ಮತ್ತು ಒಣ ಗಾಳಿ ನಮ್ಮ ಸೂಕ್ಷ್ಮ ತುಟಿಯ ಮೇಲೆ ಹಾನಿಯನ್ನುಂಟು ಮಾಡುತ್ತದೆ. ತುಟಿಗಳು ಒಣಗಿ, ಬಿರುಕು ಬಿಡುತ್ತದೆ ಮತ್ತು ಸಿಪ್ಪೆ ಏಳುತ್ತದೆ, ಇದು ತೀವ್ರ ನೋವನ್ನುಂಟುಮಾಡುತ್ತದೆ ಮಾತ್ರವಲ್ಲ ನಮ್ಮ ಮುಖದ ಅಂದವನ್ನು ಹಾಳುಮಾಡುತ್ತದೆ.

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚು ಗಮನ ಕೊಡಬೇಕು. ಎಷ್ಟೇ ಕಾಳಜಿ ವಹಿಸಿದರೂ ತುಟಿ, ಕೈಕಾಲುಗಳ ಚರ್ಮವು ಬಿರುಕು ಬಿಡುತ್ತದೆ. ಅದರಲ್ಲೂ ತುಟಿಯೂ ಒಡೆಯುವುದರಿಂದ ನೋವಿನಿಂದ ಕೂಡಿರುತ್ತದೆ.

ಅದಲ್ಲದೇ, ಈ ಬಿರುಕು ತುಟಿಯ ಅಂದವನ್ನು ಹಾಳು ಮಾಡುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುವ ಬದಲು ಅಡುಗೆ ಮನೆಯಲ್ಲಿ ಸಿಗುವ ಈ ಸಾಮಗ್ರಿಗಳಿಂದ ತುಟಿಯ ಅಂದವನ್ನು ಹೆಚ್ಚಿಸಬಹುದು.

* ಜೇನುತುಪ್ಪ : ಅಡುಗೆ ಮನೆಯಲ್ಲಿರುವ ಜೇನುತುಪ್ಪವನ್ನು ಒಡೆದಿರುವ ತುಟಿಗಳಿಗೆ ಲೇಪಿಸಬೇಕು. ಈ ರೀತಿ ಮಾಡುವುದರಿಂದ ಒಡೆದ ತುಟಿಗಳ ನೋವು ಕೂಡ ಕಡಿಮೆಯಾಗುತ್ತದೆ. ತುಟಿಗಳು ಮೃದುವಾಗುವುದಲ್ಲದೇ ಅಂದವು ಹೆಚ್ಚಾಗುತ್ತದೆ.

* ಬಾದಾಮಿ ಎಣ್ಣೆ: ಚಳಿಗಾಲದಲ್ಲಿ ತುಟಿಗಳು ಒಡೆಯುತ್ತಿದ್ದರೆ, ಪ್ರತಿದಿನ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಬಾದಾಮಿ ಎಣ್ಣೆಯಿಂದ ತುಟಿಗಳನ್ನು ಐದು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡುವುದರಿಂದ ತುಟಿಗಳು ಮೃದುವಾಗುತ್ತದೆ.

* ಅಲೋವೆರಾ ಜೆಲ್ : ಅಲೋವೆರಾ ಆರೋಗ್ಯವನ್ನು ಕಾಪಾಡುವಲ್ಲಿಯೂ ಉಪಯುಕ್ತವಾಗಿದೆ. ಇದರಲ್ಲಿರುವ ಉರಿಯೂತ ಗುಣವು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಸ್ವಲ್ಪ ಅಲೋವೆರಾ ಜೆಲ್ ಅನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಒಡೆಯುವ ತುಟಿಗಳ ಸಮಸ್ಯೆಯಿಂದ ಪಾರಾಗಬಹುದು.

* ತುಪ್ಪ: ತುಪ್ಪದಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಚರ್ಮದ ಜೀವಕೋಶಗಳಿಗೆ ತೇವಾಂಶ ನೀಡುತ್ತವೆ. ಒಡೆದ ತುಟಿಗಳಿಗೆ ತುಪ್ಪವನ್ನು ಹಚ್ಚುತ್ತಾ ಬಂದರೆ ಬಿರುಕು ಬಿಡುವುದು ಬೇಗನೇ ಗುಣಮುಖವಾಗಿ, ತುಟಿಗಳನ್ನು ಮೃದುವಾಗಿಸುತ್ತದೆ.

* ತೆಂಗಿನೆಣ್ಣೆ : ತೆಂಗಿನ ಎಣ್ಣೆಯಲ್ಲಿ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ತಕ್ಷಣವೇ ಹೈಡ್ರೇಟ್ ಮಾಡುತ್ತದೆ. ತೆಂಗಿನೆಣ್ಣೆಯನ್ನು ದಿನನಿತ್ಯ ತುಟಿಗಳಿಗೆ ಲೇಪಿಸುವುದರಿಂದ ಸೋಂಕುಗಳಿಂದ ತುಟಿಗಳನ್ನು ರಕ್ಷಿಸಿ, ಮೃದುವಾಗಿಸುತ್ತದೆ.

Bomb threat: HSBC ಬ್ಯಾಂಕ್ʼಗೆ ಬಾಂಬ್ ಬೆದರಿಕೆ! ಸ್ಥಳಕ್ಕೆ ಪೊಲೀಸರ ಆಗಮನ

0

ಬೆಂಗಳೂರು: ಇತ್ತೀಚೆಗೆ ಬಾಂಬ್​ ಬೆದರಿಕೆ ಕೇಸ್​ಗಳು ಹೆಚ್ಚಾಗುತ್ತಲೇ ಇದೆ. ದೆಹಲಿ, ಶಾಲಾ-ಕಾಲೇಜು, ಆಸ್ಪತ್ರೆ ಸೇರಿ ಹೀಗೆ ಬಾಂಬ್ ಬೆದರಿಕೆಗಳು ಬರುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನ ಚ್​ಎಸ್​ಬಿಸಿ ಬ್ಯಾಂಕ್​ನ ಎಂಜಿ ರಸ್ತೆ ಶಾಖೆಯಲ್ಲಿ ಬಾಂಬ್ ಬೆದರಿಕೆ ಬಂದಿದೆ.

ಬ್ಯಾಂಕ್​ನಲ್ಲಿ ಬಾಂಬ್ ಇಡಲಾಗಿದೆ ಎಂದು ಬದರಿಸುವ ಇಮೇಲ್​ವೊಂದನ್ನು ಬ್ಯಾಂಕ್​ಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಕಚೇರಿಯ ಎಲ್ಲಾ ಸಿಬ್ಬಂದಿ ಹಾಗು ಗ್ರಾಹಕರನ್ನು ಹೊರ ಕಳುಹಿಸಲಾಯಿತು. ಹಲಸೂರು ಠಾಣೆಯ ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಕೆಲವು ತಿಂಗಳುಗಳ ಹಿಂದೆ  ಬೆಂಗಳೂರನ್ನು ಬೆಚ್ಚಿಬೀಳಿಸಿದ ಬೆದರಿಕೆ ಇಮೇಲ್‌ಗಳು ನಗರದ ಜನಪ್ರಿಯ ‘ರಾಮೇಶ್ವರನ ಕೆಫೆ’ಯಲ್ಲಿ ಸ್ಫೋಟ ಸಂಭವಿಸಿದ ಕೆಲವೇ ತಿಂಗಳುಗಳ ನಂತರ ಬಂದಿವೆ.

ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಆರೋಪ: ‘ಪುಷ್ಪ’ ಸಿನಿಮಾದ ನಟನ ವಿರುದ್ಧ ದೂರು ದಾಖಲು

ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದಲ್ಲದ್ದೆ ತನ್ನಿಂದ 20 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿ ‘ಪುಷ್ಪ’ ಸಿನಿಮಾದಲ್ಲಿ ನಟಿಸಿದ್ದ ತೆಲುಗು ನಟ ಶ್ರೀತೇಜ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರ ನೀಡಿದ್ದು ಸದ್ಯ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಶ್ರೀತೇಜ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

‘ಶ್ರೀ ತೇಜ್ ಮದುವೆ ಆಗುವುದಾಗಿ ನಂಬಿಸಿದ್ದರು. ಆದರೆ, ಈಗ ಮದುವೆ ಆಗಲು ಒಪ್ಪುತ್ತಿಲ್ಲ. ನನ್ನಿಂದ ಹಣ ಪಡೆದಿದ್ದಾರೆ. ಅಲ್ಲದೆ  ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ. ಸದ್ಯ ಕ್ರಿಮಿನಲ್ ಬ್ರ್ಯಾಂಚ್​ನವರು ಶ್ರೀ ತೇಜ್​ನ ವಿಚಾರಣೆ ಮಾಡುತ್ತಿದ್ದಾರೆ.

ಸಂತ್ರಸ್ತೆ ಏಪ್ರಿಲ್‌ನಲ್ಲಿಯೂ ಶ್ರೀತೇಜ್ ವಿರುದ್ಧ ದೂರು ದಾಖಲಿಸಿದ್ದರು. ಆ ಸಮಯದಲ್ಲಿ ನಟ ಸಂತ್ರಸ್ತೆಯನ್ನು ಪುಸಲಾಯಿಸಿದ್ದ. ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದ. ಈ ಕಾರಣಕ್ಕಾಗಿ ಸಂತ್ರಸ್ತೆ ತನ್ನ ದೂರನ್ನು ಹಿಂಪಡೆದಿದ್ದರು. ಆದರೆ ಶ್ರೀತೇಜ್ ಬದಲಾಗದ ಕಾರಣ ಮತ್ತೆ ದೂರು ನೀಡಿದ್ದಾರೆ.

ಪುಷ್ಪ ಸಿನಿಮಾ ತಂಡದ ವಿರುದ್ಧ ಪದೇ ಪದೇ ಇಂಥ ಆರೋಪಗಗಳೇ ಕೇಳಿ ಬರ್ತಿದೆ. ಜಾನಿ ಮಾಸ್ಟರ್ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾಗಿದ್ದು ಜೈಲಿಗೆ ಹೋಗಿ ಬಂದಿದ್ದರು. ಬಳಿಕ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗದೀಶ್ ಅವರು ಅರೆಸ್ಟ್ ಆಗಿದ್ದರು. ಜೂನಿಯರ್ ಆರ್ಟಿಸ್ಟ್​ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಜೈಲು ಸೇರಿದ್ದರು. ಈ ಬೆನ್ನಲ್ಲೇ ಸಿನಿಮಾ ತಂಡದ ಮತ್ತೋರ್ವ ಕಲಾವಿದ ಬಂಧನಕ್ಕೆ ಒಳಗಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆರೋಪಗಳು ಎದುರಾಗುತ್ತಿರುವುದರಿಂದ ಪುಷ್ಪಚಿತ್ರತಂಡಕ್ಕೆ ಮುಜುಗರ ಎದುರಾಗಿದೆ.

ನಾನು ಪಂಚಮಸಾಲಿ ಸಮಾಜದ ಪರವಾಗಿ ಧ್ವನಿ ಎತ್ತುವೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

0

ವಿಜಯಪುರ: ನಾನು ಪಂಚಮಸಾಲಿ ಸಮಾಜದ ಪರವಾಗಿ ಧ್ವನಿ ಎತ್ತುವೆ ಎಂದು  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಸರ್ಕಾರದ ವಿರುದ್ದ ಹೋರಾಟ ಮಾಡಿಲ್ಲ. ಸಮಾಜದ ಪರವಾಗಿ ಹೋರಾಟ ಮಾಡಿದ್ದೇವೆ.

ಪಂಚಮಸಾಲಿ ಮೀಸಲಾತಿಗಾಗಿ ನಾನು ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಬಾರಿ, ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ಭೇಟಿಯಾಗಿದ್ದೆ. ಮರ್ಯಾದೆಯ ಹದ್ದಿನಲ್ಲಿ ಹಿಂದೆ ಮಾತನಾಡಿದ್ದೇನೆ. ಮುಂದೆಯೂ ಮಾತನಾಡುವೆ. ಪಂಚಮಸಾಲಿ ಸಮಾಜದ ಪರವಾಗಿ ಧ್ವನಿ ಎತ್ತುವೆ ಎಂದರು.

ಇನ್ನೂ ಬಿಜೆಪಿ ಸರಕಾರದ ಅವಧಿಯಲ್ಲಿ‌ ಉಗ್ರ ಹೋರಾಟ ಮಾಡಿ ಈಗ ಹೋರಾಟ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲಿನಂತೆ ಹೋರಾಟವಿದೆ. ಸಚಿವೆಯಾದ ಕಾರಣ ಕೆಲಸಗಳ ಒತ್ತಡವಿರುವುದರಿಂದ ಕೆಲ ಹೋರಾಟದಲ್ಲಿ ಭಾಗಿಯಾಗಿಲ್ಲ. ಕೆಲ ಹೋರಾಟಗಳಿಗೆ ನನ್ನ ಸಹೋದರ ಹಾಗೂ ಪುತ್ರನನ್ನು ಕಳುಹಿಸಿದ್ದೇನೆ ಎಂದರು.

error: Content is protected !!