Home Blog Page 2055

ಕುಮಾರವ್ಯಾಸರ ಹೆಸರಿನಲ್ಲಿ `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಮಹಾನ್ ವ್ಯಕ್ತಿ ಮತ್ತು ಸಂಸ್ಥೆ ಪರಿಚಯಿಸಲು `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆಯನ್ನು ಬಿಡುಗಡೆ ಮಾಡುವುದರಿಂದ ಸಾಧ್ಯವಾಗಲಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಜಯದೇವ ಕಡಗಿ ಅಭಿಪ್ರಾಯಪಟ್ಟರು.

ಭಾರತೀಯ ಅಂಚೆ ಇಲಾಖೆಯು ಗದುಗಿನ ಶ್ರೀ ವೀರನಾರಯಣ ದೇವಾಲಯದಲ್ಲಿ ಮಂಗಳವಾರ ಕರ್ನಾಟಕ ಸಂಭ್ರಮ-50 ಮಹೋತ್ಸವ ಹಿನ್ನೆಲೆಯಲ್ಲಿ ಕುಮಾರವ್ಯಾಸ ಹೆಸರಿನಲ್ಲಿ `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆಯ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ವೀರನಾರಾಯಣ ದೇವಸ್ಥಾನ ಕಮಿಟಿ ಅಧ್ಯಕ್ಷ ಡಾ. ಕುಶಾಲ ಗೋಡ್ಕಂಡಿ ಮಾತನಾಡಿ, ಕರ್ನಾಟಕ ಕಥಾ ಮಂಜರಿಯನ್ನು ಕುಮಾರವ್ಯಾಸರು ಗದುಗಿನ ವೀರನಾರಾಯಣ ಸನ್ನಿಧಿಯಲ್ಲಿ ರಚಿಸಿರುವ ಮತ್ತು ನಮ್ಮ ನಾಡಿಗೆ `ಕರ್ನಾಟಕ’ ಎಂದು ನಾಮಕರಣ ಮಾಡಲು ಮೂಲ ಪ್ರೇರಣೆ ನೀಡಿದ ಕುಮಾರವ್ಯಾಸರಿಗೆ ಶ್ರೇಯಸ್ಸು ಸಲ್ಲುತ್ತದೆ. ಕುಮಾರವ್ಯಾಸರ ಗಮಕ ಸಾಹಿತ್ಯದ ಕೊಡುಗೆ ನಮಗೆ ಹೆಮ್ಮೆಯ ವಿಷಯವಾಗಿತ್ತು. ಇದೀಗ ಈ ಸಾಲಿಗೆ ಕುಮಾರವ್ಯಾಸರ `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆಯ ಲೋಕಾರ್ಪಣೆ ನಾಡಿನ ಜನರಿಗೆ ಸಂತಸ ತಂದಿದೆ ಎಂದರು.

ನಾಡಿನ ಎಲ್ಲೆಡೆ ಪ್ರಖ್ಯಾತಿ ಪಡೆದುಕೊಂಡಿರುವ ಗದುಗಿನ ವೀರನಾರಾಯಣ ಮತ್ತು ಕುಮಾರವ್ಯಾಸರ ಕೀರ್ತಿ ಬೆಳೆಯಲು ಪ್ರಮುಖ ಅಂಶಗಳನ್ನು ಈ ಮುದ್ರೆ ಹೊಂದಿದೆ. ಇಂತಹ ಅಂಚೆಚೀಟಿ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ದೊರಕಲು ಸಹಕಾರಿಯಾಗಿದೆ ಎಂದರು.

ಅಂಚೆ ಚೀಟಿ ಸಂಗ್ರಹಕಾರರಾದ ಎ.ಬೇಲೇರಿ, ಶ್ರೀನಿವಾಸ ದ್ವಾರಪಾಲಕ ಮಾತನಾಡಿದರು. ಅಂಚೆ ಚೀಟಿ ಸಂಗ್ರಹಕರರಾದ ಸಯಂ ಬಾಗಮಾರ ಹಾಗೂ ಗದಗ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀಕಾಂತ ಜಾದವ, ಸುನೀಲಕುಮಾರ ವಿ, ರೋಣ ಉಪ ವಿಭಾಗದ ಅಂಚೆ ಸಹಾಯಕ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ, ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ, ಉಪ ಅಂಚೆ ಪಾಲಕ ದೊಡ್ಡಪ್ಪ ಇಟಗಿ, ಸಹಾಯಕ ಅಂಚೆ ಪಾಲಕ ಡಿ.ಜಿ. ಮ್ಯಾಗೇರಿ ಹಾಗೂ ಅಂಚೆ ಇಲಾಖೆ ಮಾರುಕಟ್ಟೆ ವ್ಯವಸ್ಥಾಪಕರಾದ  ವೆಂಕಟೇಶ ಆಕಳವಾಡಿ, ಬಸವರಾಜ  ಶೇಡದ, ಅನಿತಾ ಪಿ.ಕುರಿ, ಮೇಘನಾ ಕುಲಕರ್ಣಿ, ಶ್ರೀಕಾಂತ್ ತೆರ್ದಾಳ್, ಅರುಣಕುಮಾರ ಗಂಗಾವತಿ, ಸಿದ್ಧಲಿಂಗೇಶ ಯಂಡಿಗೇರಿ, ಉಮೇಶ ಸಂದಿಮನಿ, ಅಮರೇಶ ರಾಠೋಡ, ಸರೋಜಾ ಪಟ್ಟಣಶೆಟ್ಟರ, ವಿದ್ಯಾ ಗದಗ, ವಾಣಿ ಮಾಂಡ್ರೆ, ಬಸವರಾಜ ಮೊರಬದ, ರಾಘವೇಂದ್ರ ಕಮ್ಮಾರ, ಶಿವಣ್ಣ ಸುಳ್ಳದ ಮತ್ತಿತರು ಸಿಬ್ಬಂದಿ ಪಾಲ್ಗೊಂಡಿದ್ದರು. ನಿಂಗಪ್ಪ ಹೂಗಾರ ನಿರೂಪಿಸಿ, ವಂದಿಸಿದರು.

**ಬಾಕ್ಸ್**

ವಿಶೇಷ ವ್ಯಕ್ತಿ ಮತ್ತು ವಿಶೇಷ ಸಂದರ್ಭದಲ್ಲಿ ಇಂತಹ ಶಾಶ್ವತ ಚಿತ್ರಾತ್ಮಕ ಮುದ್ರೆಗಳು ಲೋಕಾರ್ಪಣೆಯಾಗಲಿವೆ. ನಾಡಿನ ಪ್ರಖ್ಯಾತ ಪ್ರವಾಸಿ ತಾಣ ಪರಿಚಯಿಸಲು ಮತ್ತು ಗ್ರಾಹಕರಿಗೆ ತಮ್ಮ ನೆಚ್ಚಿನ ಚಿತ್ರ ಕಳುಹಿಸಲು ಉಪಯೋಗಿಸಬಹುದಾಗಿದೆ. ಇಂತಹ ಮಹತ್ವದ ಶಾಶ್ವತ ಚಿತ್ರಾತ್ಮಕ ಮುದ್ರೆಗಳು ದೇಶದ ಎಲ್ಲೆಡೆ ನಮ್ಮ ನಾಡಿನ ಹೆಮ್ಮೆಯ ಸಾಧಕರ, ಐತಿಹಾಸಿಕ ಮಹತ್ವ, ಅಂತಾರಾಷ್ಟಿçÃಯ ಮಟ್ಟದಲ್ಲಿ ಪ್ರಚಾರ, ಪ್ರಸಿದ್ಧಿ ಪ್ರಚುರಪಡಿಸಲು ಅಂಚೆ ಇಲಾಖೆಯ ಮುದ್ರೆಗಳು ಅತ್ಯಂತ ಸಹಕಾರಿಯಾಗಿದೆ ಎಂದು ಜಯದೇವ ಕಡಗಿ ನುಡಿದರು.

Yatnal: ನಮ್ಮ ಹೋರಾಟ ರೈತರಿಗಾಗಿಯೇ ವಿನಹ ಯಾವುದೇ ಕುಟುಂಬದ ವಿರುದ್ಧವಲ್ಲ: ಯತ್ನಾಳ್!

0

ಕಲಬುರ್ಗಿ:- ನಮ್ಮ ಹೋರಾಟ ಇರುವುದು ವಕ್ಫ್ ವಿರುದ್ಧವೇ ಹೊರತು, ಯಾವುದೇ ಕುಟುಂಬದ ವಿರುದ್ಧವಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ನಾವು ರಾಜ್ಯದ ರೈತರಿಗಾಗಿ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಯಾವುದೇ ಕುಟುಂಬದ ವಿರುದ್ಧವಾಗಿ ಅಲ್ಲ. ನಾವೇನೂ ಮುಖ್ಯಮಂತ್ರಿಯಾಗಲು ಹೋರಾಟ ನಡೆಸುತ್ತಿಲ್ಲ. ರಾಜ್ಯದ ರೈತರಿಗೆ ಸಂಕಷ್ಟ ಬಂದಿದೆ. ಸಂಕಷ್ಟಕ್ಕೆ ಕಾರಣವಾಗಿರುವ ವಕ್ಫ್ ವಿರುದ್ಧ ಜನಜಾಗೃತಿಗಾಗಿ ಹೋರಾಟ ನಡೆಸಲಾಗುತ್ತಿದೆ ಹೊರತು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಆಗಿರುವ ಸೋಲಿನ ಹೊಣೆಯನ್ನು ಎಲ್ಲಾ ನಾಯಕರು ಹೊರಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗೆದ್ದರೆ ಅವರು ಹೊರಬೇಕು. ಸೋತರೆ ನಾವು ಹೊರಬೇಕು. ಹಿರಿಯರು ಹೇಳಿದ ಮಾತ್ರಕ್ಕೆ ನಾವೆಲ್ಲ ಕೇಳಬೇಕು ಎಂದು ವ್ಯಂಗ್ಯವಾಡಿದರು.

ರಾಜ್ಯ ತಂಡದಿಂದ ನರೇಗಾ ಕಾಮಗಾರಿ ಪರಿಶೀಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಸಾಮಗ್ರಿ ಬಿಲ್‌ಗಳ FTOಗಳ ಪರಿಶೀಲನೆ ಕುರಿತು ಅಯುಕ್ತಾಲಯದಿಂದ ಆಗಮಿಸಿದ ರಾಜ್ಯ ತಂಡ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿತು.

ಜಂಟಿ ನಿರ್ದೇಶಕರಾದ ಲಲಿತಾ ರೆಡ್ಡಿ (ಕೃಷಿ) ನೇತೃತ್ವದಲ್ಲಿ ಸದಸ್ಯರಾದ ತನುಜಾ, ಯಶವಂತ ಜಿ.ಎಲ್ ಅವರು ಜಂಟಿಯಾಗಿ ಗ್ರಾ.ಪಂಗಳಿಗೆ ಭೇಟಿ ನೀಡಿ ಕಾಮಗಾರಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರು. ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಂಡು ಸಾಮಗ್ರಿ ಪಾವತಿಗೆ ಸೃಜನೆ ಮಾಡಲಾದ FTO ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಅನುಷ್ಠಾನಗೊಂಡಿರುವ ವೈಯಕ್ತಿಕ ಕಾಮಗಾರಿಗಳ ಕುರಿತು ಪರಿಶೀಲಿಸಿದ ಅವರು, ಯೋಜನೆಯಡಿ ಫಲಾನುಭವಿಗಳು ಪಡೆದುಕೊಂಡ ಸವಲತ್ತುಗಳನ್ನು ಪರಿಶೀಲಿಸಿ ಯೋಜನೆಯಡಿ ಫಲಾನುಭವಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆಯೇ ಎಂಬುದರ ಕುರಿತು ಫಲಾನುಭವಿಗಳ ಜೊತೆಗೆ ಸಮಾಲೋಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ.ಕಂದಕೂರ, ಜಿಲ್ಲಾ ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ ಕಿರಣಕುಮಾರ ಎಸ್.ಎಚ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ, ಬಸವರಾಜ ಶೃಂಗೇರಿ, ನರೇಗಾ ವಿಭಾಗದ ತಾಲೂಕು ಐಇಸಿ ಸಂಯೋಜಕ ಮಂಜುನಾಥ, ತಾಂತ್ರಿಕ ಸಹಾಯಕ ಪ್ರವೀಣ ಸೂಡಿ, ಗ್ರಾ.ಪಂ ಸಿಬ್ಬಂದಿ ವರ್ಗ ಹಾಗೂ ತಾ.ಪಂ ನರೇಗಾ ಸಿಬ್ಬಂದಿಗಳು ಹಾಜರಿದ್ದರು.

ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ‘ಬೇಟಿ ಬಚಾವೊ ಬೇಟಿ ಪಡಾವೊ’ ಅರಿವು ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಗದಗ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ಮಿಷನ್ ಶಕ್ತಿ ಯೋಜನೆಯ `ಬೇಟಿ ಬಚಾವೋ ಬೇಟಿ ಪಡಾವೋ’ ಅರಿವು ಮೂಡಿಸುವ ಕಾರ್ಯಕ್ರಮವು ಸರಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಜರುಗಿತು.

ಸಮಾಜದಲ್ಲಿ ಲಿಂಗ ಸಮಾನತೆ, ಹೆಣ್ಣು ಮಕ್ಕಳ ಪೋಷಣೆ, ಭ್ರೂಣ ಹತ್ಯೆ ತಡಗಟ್ಟುವಿಕೆ, ಹೆಣ್ಣು ಮಕ್ಕಳ ಸ್ಥಿತಿ-ಗತಿ ಹೆಚ್ಚಿಸಲು ಹಾಗೂ ಹೆಣ್ಣು ಮಗು ಶೈಕ್ಷಣಿಕವಾಗಿ ಸದೃಢವಾಗಲು, ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ನೀತಿಯನ್ನು ಹೋಗಲಾಡಿಸುವ ಕುರಿತು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಜಿಲ್ಲಾ ಮಹಿಳಾ ಸಬಲೀಕರಣ ಸಂಯೋಜಕರಾದ  ಮಧುಶ್ರೀ, ರಾಜೇಶ್ವರಿ, ಪಿ.ಡಿ.ಒ ರಾಜಕುಮಾರ ಭಜಂತ್ರಿ, ತುಕಾರಾಮ ಹುಲಗಣ್ಣವರ, ಅಂಗನವಾಡಿ ಮೇಲ್ವಿಚಾರಕಿ ಸಾಹೀದಬೇಗಂ ಹತ್ತಿವಾಲೆ, ಮುಖ್ಯೋಪಾಧ್ಯಾಯ ಎಸ್.ಎಸ್.ಕಂಬಳಿ, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ಎಚ್.ಕೆ. ಪಾಟೀಲ ಸೇವಾ ತಂಡದ ಸಂಯೋಗದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ವತಿಯಿಂದ ಡಾ. ಎಚ್.ಕೆ. ಪಾಟೀಲ ಸೇವಾ ತಂಡದ ಸಂಯೋಗದಲ್ಲಿ ಗದಗ-ಬೆಟಗೇರಿ ನಗರಸಭ್ಯ ವಾರ್ಡ್ ನಂ. ೫ರ ನರಸಾಪೂರ ಆಶ್ರಯ ಕಾಲೋನಿಯಲ್ಲಿ ಉಚಿತ ನೇತ್ರ ತಪಾಸಣೆ ನಡೆಸಿ, 15ಕ್ಕೂ ಹೆಚ್ಚು ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಎಚ್.ಕೆ. ಪಾಟೀಲ ಸೇವಾ ತಂಡದ ಕ್ಯಾಪ್ಟನ್‌ರಾದ ಶಕೀರ ಕಾತರಕಿ ಮಾತನಾಡಿ, ಬಡವರ ಆರೋಗ್ಯ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ಶುಗರ್ ಇತರೆ ಕಾಯಿಲೆಗಳ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಬಡವರಿಗೆ ಅತ್ಯಂತ ಉಪಯೋಗದಾಯಕವಾಗಿದೆ. ಅಲ್ಲದೇ ಕಣ್ಣಿನಲ್ಲಿ ದೋಷವಿದ್ದವರಿಗೆ ಕಣ್ಣಿನ ಶಸ್ತçಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಇದೆಲ್ಲವನ್ನೂ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಇದು ನಮ್ಮ ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಹೆಚ್.ಕೆ. ಪಾಟೀಲರವರ ಜನಪರ ಕಾಳಜಿ ಎಂದರು.

ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಮುಂಚೂಣಿ ಘಟಕದ ಅಧ್ಯಕ್ಷರಾದ ಸಂಗಮೇಶ ಹಾದಿಮನಿ ಮಾತನಾಡಿ, ಬಡವರ ಪಾಲಿನ ಕಣ್ಮಣಿಯಾದ ಎಚ್.ಕೆ. ಪಾಟೀಲ ಜನಪರ ವೈದ್ಯಕೀಯ ಸೇವೆಯೊಂದಿಗೆ ಇತರೆ ಸೇವೆಗಳನ್ನು ತಲಪುಸುತ್ತಿರುವುದು ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ನಾಗರಾಜ ಮುಳ್ಳಾಳ, ಸಾಗರ ಪವಾಡಶೆಟ್ಟರ್ ಸೇರಿದಂತೆ ಬಡಾವಣೆಯ ಯುವಕರು, ಹಿರಿಯರು ಉಪಸ್ಥಿತರಿದ್ದರು.

ಮನೆಯಲ್ಲಿ ಗೆದ್ದಲು ಹುಳುಗಳ ಕಾಟವೇ!? ಹಾಗಿದ್ರೆ ಇದನ್ನು ತಪ್ಪದೇ ಮಾಡಿ! ಸಮಸ್ಯೆ 100% ಪರಿಹಾರ!

0

ಸಾಮಾನ್ಯವಾಗಿ ಗೆದ್ದಲು ಹುಳಗಳ ಕಾಟವನ್ನು ಪ್ರತಿಯೊಬ್ಬರು ಅನುಭವಿಸಿರಬಹುದು. ಹಳೆಯ ಪುಸ್ತಕಗಳು, ತುಕ್ಕು ಹಿಡಿದ ವಸ್ತುಗಳ ಜೊತೆಗೆ ಮನೆಯ ಪೀಠೋಪಕರಣಗಳು ಮಳೆಗಾಲದಲ್ಲಿ ತುಕ್ಕು ಹಿಡಿಯುತ್ತವೆ. ಇವು ಒಳಗಿನಿಂದ ತುಕ್ಕು ಹಿಡಿಯಲು ಪ್ರಾರಂಭಿಸುತ್ತವೆ. ಆದರೆ ಈ ವಸ್ತುಗಳು ತುಕ್ಕು ಹಿಡಿಯುವವರೆಗೆ ನಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ಮಳೆಗಾಲದಲ್ಲಿ ಮನೆಗಳಲ್ಲಿ ಹೆಚ್ಚಾಗಿ ಗೆದ್ದಲು ಹುಳುಗಳನ್ನು ನೀವು ಕಾಣಬಹುದು.

ಈ ಸಮಸ್ಯೆ ನೀವು ಅನುಭವಿಸಿದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ!

ಬೋರಿಕ್ ಆಮ್ಲವನ್ನು ಬಳಸಿ:

ಬೋರಿಕ್ ಆಮ್ಲದ ಸಹಾಯದಿಂದ ನೀವು ಗೆದ್ದಲುಗಳನ್ನು ತೊಡೆದುಹಾಕಬಹುದು. ಬೋರಿಕ್ ಆಸಿಡ್ ಸಿಂಪಡಿಸುವುದರಿಂದ ಗೆದ್ದಲು ದೂರವಾಗುತ್ತದೆ. ನೀವು ಮನೆಯಲ್ಲಿ ಬೋರಿಕ್ ಆಮ್ಲವನ್ನು ಸಿಂಪಡಿಸಲು ಬಯಸಿದರೆ, ಒಂದು ಕಪ್ ನೀರಿನಲ್ಲಿ ಕೇವಲ ಒಂದು ಚಮಚ ಬೋರಿಕ್ ಆಮ್ಲವನ್ನು ಬೆರೆಸಿ ಮತ್ತು ಗೆದ್ದಲು ಇರುವಲ್ಲಿ ಸಿಂಪಡಿಸಿ. ನೀವು ಬೋರಿಕ್ ಆಮ್ಲವನ್ನು ಸಿಂಪಡಿಸಿದಾಗ, ಕಪ್ಪು ಕನ್ನಡಕ, ಮುಖವಾಡ ಮತ್ತು ಕೈಗವಸುಗಳನ್ನು ಧರಿಸಿ ಎಂಬುದನ್ನು ನೆನಪಿನಲ್ಲಿಡಿ. ಬೋರಿಕ್ ಆಮ್ಲವನ್ನು ಸಿಂಪಡಿಸುವಾಗ ಜಾಗರೂಕರಾಗಿರಿ.

ವಿನೆಗರ್ ಪರಿಣಾಮಕಾರಿ:

ನೀವು ಗೆದ್ದಲುಗಳನ್ನು ತೊಡೆದುಹಾಕಲು ಬಯಸಿದರೆ, ವಿನೆಗರ್ ನಿಮಗೆ ಪರಿಣಾಮಕಾರಿ. ವಿನೆಗರ್ ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಕಂಡುಬರುವ ವಸ್ತುವಾಗಿದೆ. ಎರಡು ನಿಂಬೆಹಣ್ಣಿನ ರಸವನ್ನು ಹಿಂಡಿ ನಂತರ ಅದಕ್ಕೆ ಅರ್ಧ ಕಪ್ ವಿನೆಗರ್ ಸೇರಿಸಿ. ಮನೆಯಲ್ಲಿ ಗೆದ್ದಲು ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಸಿಂಪಡಿಸಿ. ಸ್ವಲ್ಪ ಸಮಯದ ನಂತರ ಗೆದ್ದಲು ತನ್ನ ಸ್ಥಳವನ್ನು ತೊರೆಯುತ್ತದೆ.

ಕಾರ್ಡ್​ಬೋರ್ಡ್​ ಟೇಪ್ ಅಂಟಿಸಿ:

ಗೆದ್ದಲುಗಳನ್ನು ದೂರವಿಡಲು ನೀವು ರಟ್ಟಿನ ಕಾರ್ಡ್​ಬೋರ್ಡ್​ ಟೇಪ್ ಅಂಟಿಸಬಹುದು, ಇದಕ್ಕಾಗಿ, ಮೊದಲು ಹಲಗೆಯನ್ನು ನೀರಿನಿಂದ ತೇವಗೊಳಿಸಿ. ಇದರ ನಂತರ, ಗೆದ್ದಲುಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ ಈ ಒದ್ದೆಯಾದ ಕಾರ್ಡ್ಬೋರ್ಡ್ ಟೇಪ್ ಅನ್ನು ಇರಿಸಿ. ಹಲಗೆಯಲ್ಲಿ ಗೆದ್ದಲು ಮುತ್ತಿಕೊಳ್ಳುವುದನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ಇದರ ನಂತರ, ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಿರಿ ಮತ್ತು ಗೆದ್ದಲು ಸೋಂಕಿತ ರಟ್ಟನ್ನು ಸುಟ್ಟುಹಾಕಿ. ಹೀಗೆ ಮಾಡುವುದರಿಂದ ಗೆದ್ದಲು ನಿವಾರಣೆಯಾಗುತ್ತದೆ.

ಕಾಣದ ಕೈಗಳು ಸಮಾಜದಲ್ಲಿ ಜಾತಿ-ಧರ್ಮಗಳ ವಿಷ ಬೀಜಗಳನ್ನು ಬಿತ್ತಿ ನಾಗರಿಕ ಸಮಾಜವನ್ನು ಒಡೆಯುತ್ತಿವೆ: ದಿಂಗಾಲೇಶ್ವರ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ರೋಣ: ಸೌಹಾರ್ದತೆ, ಸಹೋದರತೆ, ಏಕತೆ ಇವುಗಳು ನಮ್ಮ ದೇಶದ ಪ್ರತೀಕವಾಗಿದ್ದು, ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದಾಗಿ ಸಹಬಾಳ್ವೆ ನಡೆಸಬೇಕು ಎಂದು ಬಾಲೆಹೊಸುರ ಹಾಗೂ ಶಿರಹಟ್ಟಿ ಫಕೀರೇಶ್ವರ ಶ್ರೀಮಠ ಪೂಜ್ಯರಾದ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಅವರು ಮಾರನಬಸರಿ ಗ್ರಾಮದಲ್ಲಿ ಸೋಮವಾರ ಜರುಗಿದ ಸರ್ವಧರ್ಮ ಸಮನ್ವಯ ಪೀಠ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಕಾಣದ ಕೈಗಳು ಇಂದಿನ ಸಮಾಜದಲ್ಲಿ ಜಾತಿ-ಧರ್ಮಗಳ ವಿಷ ಬೀಜಗಳನ್ನು ಬಿತ್ತಿ ನಾಗರಿಕ ಸಮಾಜವನ್ನು ಒಡೆಯುತ್ತಿವೆ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಹಿಂದು, ಮುಸ್ಲಿಂ, ಕ್ರೆöÊಸ್ತರೆಲ್ಲರೂ ಒಂದಾಗುವ ಮೂಲಕ ಇಂತವುಗಳನ್ನು ಎದುರಿಸಿ ಭಾವೈಕ್ಯತೆಯನ್ನು ಬೆಸೆಯಬೇಕು. ಅಂದಾಗ ಮಾತ್ರ ಸಮಾನತೆಯ ನಾಡನ್ನು ಕಟ್ಟಲು ಸಾಧ್ಯ ಎಂದರು.

ಮಠಗಳು ಕಡಿಮೆಯಾಗುತ್ತಿರುವ ಈ ಸಂಧರ್ಭಗಳಲ್ಲಿ ಸರ್ವಧರ್ಮದವರು ಕೂಡಿಕೊಂಡು ಮಠ ಸ್ಥಾಪನೆ ಮಾಡಿದ್ದು ಅಭಿನಂದನಾರ್ಹ. ಶ್ರೀಮಠ ಸರ್ವಧರ್ಮದವರ ಆಸ್ತಿಯಾಗಿ ಬೆಳೆಯಲಿ ಎಂದ ಶ್ರೀಗಳು,  ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜಮುಖಿ ಕಾರ್ಯಗಳು ಸಹ ನಡೆಯಬೇಕು. ಮುಖ್ಯವಾಗಿ ಸರ್ವಧರ್ಮ ಸಮನ್ವಯ ಪೀಠವಾಗಿ ಉಳಿದು ಎಲ್ಲ ಭಕ್ತರಿಗೂ ಧಾರ್ಮಿಕತೆಯನ್ನು ಭೋದಿಸಬೇಕು ಎಂದು ಆಶೀರ್ವದಿಸಿದರು.

ಇದೇ ಸಂಧರ್ಭದಲ್ಲಿ ಭೂ ಧಾನಿಗಳಿಗೆ ಹಾಗೂ ಸೇವೆಗೈದ ಮಹನೀಯರುಗಳಿಗೆ ಸತ್ಕರಿಸಲಾಯಿತು.

ಹಿರೇಮಾಗಡಿ ಹಾಗೂ ಸರ್ವಧರ್ಮ ಸಮನ್ವಯ ಪೀಠದ ಶಿವಮೂರ್ತಿ ಶ್ರೀಗಳು, ಶಾಖಾ ಶಿವಯೋಗ ಮಂದಿರದ ಚನ್ನಬಸವ ಶ್ರೀಗಳು, ಶಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು, ಶಿವಯೋಗಿ ದೇವರು ಸಾನ್ನಿಧ್ಯ ವಹಿಸಿದ್ದರು. ವೇ.ಮೂ. ವಿಶ್ವನಾಥ ಪಂಡಿತ ವೈದ್ಯ ಸಮ್ಮುಖ ವಹಿಸಿದ್ದರು. ಅಧ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸಿದ್ದರು.

ಶರಣಪ್ಪ ಕುರಿ, ಅಂದಪ್ಪ ಮರಡಿ, ಶೇಖರಗೌಡ ಪಾಟೀಲ, ಶಂಕ್ರಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಪಿಡಿಒ ಎಸ್.ಆರ್. ಸಂಕನೂರ, ಶರಣಪ್ಪ ಮ್ಯಾಗೇರಿ, ಸಂಜೀವ ಬಿಜಾಪೂರ, ಸುರೇಶ ಪಲ್ಲೇದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಶಿವಕುಮಾರ ದಿಂಡೂರ ಸ್ವಾಗತಿಸಿದರು. ಎಸ್.ಬಿ. ಪೂಜಾರ ನಿರೂಪಿಸಿದರು, ಭರತ ಹಾದಿಮನಿ ವಂದಿಸಿದರು.

ಪದೇ ಪದೇ ನಿಮಗೆ ಕಾಡುವ ಕಣ್ಣಿನ ನೋವಿಗೆ ಇಲ್ಲಿದೆ ನೋಡಿ ಪರಿಹಾರ..!

0

ಕಣ್ಣುಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅದಕ್ಕಾಗಿಯೇ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾವುದೋ ಕಾರಣದಿಂದಾದ ಕಣ್ಣುಗಳು ಅಗತ್ಯಕ್ಕಿಂತ ಹೆಚ್ಚು ಶ್ರಮಪಡಬೇಕಾಗಿ ಬರುತ್ತದೆ. ಈ ಶ್ರಮದ ಕಾರಣ ಕಣ್ಣುಗಳು ಹೆಚ್ಚು ಆಯಾಸಗೊಳ್ಳುವುದರ ಜೊತೆಗೆ ಅನೇಕ ರೀತಿಯ ತೊಂದರೆಗಳಿಗೆ ಗುರಿಯಾಗುತ್ತದೆ, ಇದರಿಂದಾಗಿ ಯುವಜನತೆಯಲ್ಲಿ ಹೆಚ್ಚಾಗಿ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಪರಿಹಾರ ಇಲ್ಲಿದೆ ನೋಡಿ..

ಬಿಸಿನೀರಿನ ಸ್ನಾನ​

ನಿಮ್ಮ ಕಣ್ಣುಗಳು ನೋಯುತ್ತಿದ್ದರೆ, ಸೋಂಕಿಗೆ ಒಳಗಾಗಿದ್ದರೆ ಅಥವಾ ಉರಿಯುತ್ತಿದ್ದರೆ, ಬೆಚ್ಚಗಿನ ಸಂಕುಚಿತಗೊಳಿಸುವಿಕೆಯು ಪರಿಹಾರವನ್ನು ನೀಡುತ್ತದೆ. ಬಿಸಿ ಸಂಕುಚಿತಗೊಳಿಸುವಿಕೆಯು ಕಣ್ಣಿನ ಫ್ಲೂ ನಿಂದ ಪರಿಹಾರವನ್ನು ನೀಡುತ್ತದೆ.

ಇದು ಕಣ್ಣಿನ ಸುತ್ತಲಿನ ಊತವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕಾಗಿ, ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ಅದನ್ನು ನಿಮ್ಮ ಕಣ್ಣಿನ ಮೇಲೆ ನಿಧಾನವಾಗಿ ಒತ್ತಿ. ನೀರು ತುಂಬಾ ಬಿಸಿಯಾಗಿರಬಾರದು ಮತ್ತು ಬಳಸುವ ಬಟ್ಟೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

​ಲವಣಯುಕ್ತ ನೀರು​

ಕಣ್ಣಿನ ಸೋಂಕಿಗೆ ಇದು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ. ಲವಣಯುಕ್ತ ನೀರು ಕಣ್ಣಿನ ಡ್ರಾಪ್ಸ್‌ಗಳಂತೆ ಕೆಲಸ ಮಾಡುತ್ತದೆ. ಇದು ನೈಸರ್ಗಿಕವಾಗಿ ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದು ಕಣ್ಣಿನ ಫ್ಲೂ ನಂತಹ ಕಣ್ಣಿನ ಸೋಂಕುಗಳಿಗೆ ಉತ್ತಮ ಪರಿಹಾರವಾಗಿದೆ.

ತಣ್ಣೀರು ಬಟ್ಟೆ ಇಡಿ​

ತಣ್ಣೀರು ಸಂಕುಚಿತಗೊಳಿಸುವಿಕೆಯು ಕಣ್ಣಿನ ಸೋಂಕನ್ನು ಗುಣಪಡಿಸುವುದಿಲ್ಲ, ಆದರೆ ಇದು ಖಂಡಿತವಾಗಿಯೂ ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ತಣ್ಣನೆಯ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ನಿಧಾನವಾಗಿ ನಿಮ್ಮ ಕಣ್ಣುಗಳ ಮೇಲೆ ಇಡಿ. ನಿಮ್ಮ ಕಣ್ಣಿನ ಮೇಲೆ ಗಟ್ಟಿಯಾಗಿ ಒತ್ತಬೇಡಿ ಅಥವಾ ಐಸ್ ಅನ್ನು ನೇರವಾಗಿ ನಿಮ್ಮ ಕಣ್ಣು ಅಥವಾ ಕಣ್ಣುರೆಪ್ಪೆಗೆ ಇಡಬೇಡಿ.

​ಹರಳೆಣ್ಣೆ​

ಹರಳೆಣ್ಣೆ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕಣ್ಣುಗಳು ಊದಿಕೊಂಡಿರುವುದನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ ಬ್ಯಾಗ್

ಕಣ್ಣಿನ ಫ್ಲೂ ತೀವ್ರವಾದ ನೋವು, ಊತ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಣ್ಣುಗಳಿಗೆ ತಂಪು ನೀಡುವುದು ನಿಮಗೆ ಪರಿಹಾರವನ್ನು ನೀಡುತ್ತದೆ ಮತ್ತು ಟೀ ಬ್ಯಾಗ್‌ಗಿಂತ ಉತ್ತಮವಾದುದು ಇನ್ನೊಂದಿಲ್ಲ. ಕೆಲವು ವಿಧದ ಚಹಾವು ಉರಿಯೂತದ ಮತ್ತು ಹಿತವಾದ ಗುಣಗಳನ್ನು ಹೊಂದಿದೆ.

ಗ್ರೀನ್‌ ಟೀ, ಕ್ಯಾಮೊಮೈಲ್, ರೂಯಿಬೋಸ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಕಣ್ಣುಗಳ ಮೇಲೆ ಗ್ರೀನ್ ಟೀ ಬಳಸುವುದು ಕಣ್ಣುಗಳ ಊತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕಾಂಗ್ರೆಸ್ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಿದ್ರೆ ಶಿಸ್ತುಕ್ರಮ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

0

ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಬಾರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ಎರಡನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದರು. ಇನ್ನೂ ವಿಚಾರವಾಗಿ ನಗರದಲ್ಲಿ ಮಾತನಾಡಿದ ಡಿಕೆಶಿ,

ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಇನ್ನೂ ಗವಿಯಪ್ಪ ಹಾಗೆ ಹೇಳಿದ್ದಾರೆ ಅಂತ ನಾನು ಅಂದುಕೊಳ್ಳಲ್ಲ. ನಮ್ಮ ಪಕ್ಷ ಈಗಾಗಲೇ ಬಜೆಟ್ ಘೋಷಣೆ ಮಾಡಿದೆ.  ಅದರ ಅಡಿಯಲ್ಲಿ ಅನುದಾನ ಹಂಚಿಕೆ ಆಗುತ್ತದೆ. ಗ್ಯಾರಂಟಿ ನಿಲ್ಲಿಸುವಂತೆ ಹೇಳಿದ್ದಾರೆ ಎಂದು ನಾನು ಒಪ್ಪಲ್ಲ.

ಎಲ್ಲಾ ಶಾಸಕರಿಗೂ ಅನುದಾನವನ್ನ ನೀಡಿದ್ದೇವೆ. ಗವಿಯಪ್ಪಗೆ ಸರಿಯಾದ ಮಾಹಿತಿ ಇಲ್ಲ ಅನ್ಸುತ್ತೆ. ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ. ಗವಿಯಪ್ಪ ಜೊತೆಗೆ ನಾನು ಮಾತನ್ನಾಡುತ್ತೇನೆ. ಅವರಿಂದ ಸ್ಪಷ್ಟನೆ ಕೇಳುತ್ತೇನೆ. ಬೇರೆ ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಶಿಸ್ತು ಕ್ರಮ ಎಂದು ಎಚ್ಚರಿಕೆ ನೀಡಿದ್ದಾರೆ..

ರೇಣುಕಾಸ್ವಾಮಿ ಕೇಸ್: ದರ್ಶನ್ ಜಾಮೀನು ಅರ್ಜಿ ಮುಂದೂಡಿದ ಹೈಕೋರ್ಟ್!

0

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ದಾಸ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬೇಲ್​ ಅರ್ಜಿ ವಿಚಾರಣೆ ನಡೆಯಿತು. ಸಿವಿ ನಾಗೇಶ್ ಸತತ ವಾದ ಆಲಿಸಿದ ನ್ಯಾಯಾಧೀಶರು ನವೆಂಬರ್​ 28ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

ದರ್ಶನ್ ಪರ ವಕೀಲರು ಹೈಕೋರ್ಟ್ ಅಂಗಳದಲ್ಲಿ ಜೋರಾಗಿಯೇ ವಾದ ಮಂಡಿಸಿದ್ದಾರೆ. ತನಿಖೆ ವೇಳೆ ನಟ ದರ್ಶನ್ ವಿರುದ್ಧ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಎಂದು ವಾದ ಮಂಡಿಸಿದ್ರು. ದರ್ಶನ್ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಓದಿ ಹೇಳಿದ್ರು.

ವಾದ ಮಂಡನೆಯಲ್ಲಿ ದರ್ಶನ್ ಕೊಲೆ ಮಾಡಿಲ್ಲವೆಂದು, ರೇಣುಕಾ ಸ್ವಾಮಿಯ ಅಪಹರಣವೇ ಆಗಿಲ್ಲ ಎಂದು ವಾದ ಮಂಡಿಸಿದರು. ಅಲ್ಲದೆ ದರ್ಶನ್ ಅನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಸತತ 3 ಗಂಟೆಗಳ ಕಾಲ ದರ್ಶನ್ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ನವೆಂಬರ್​ 28 ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

error: Content is protected !!