Home Blog Page 2056

ಮೂರು ಉಪಚುನಾವಣೆಗಳಲ್ಲಿ ನಿರೀಕ್ಷೆ ಮೀರಿ ನಮಗೆ ಹಿನ್ನಡೆಯಾಗಿದೆ: ಬಿಎಸ್ ಯಡಿಯೂರಪ್ಪ

0

ಬೆಂಗಳೂರು: ಮೂರು ಉಪಚುನಾವಣೆಗಳಲ್ಲಿ ನಿರೀಕ್ಷೆ ಮೀರಿ ನಮಗೆ ಹಿನ್ನಡೆಯಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಉಪಚುನಾವಣಾ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಮೂರು ಉಪಚುನಾವಣೆಗಳಲ್ಲಿ ನಿರೀಕ್ಷೆ ಮೀರಿ ನಮಗೆ ಹಿನ್ನಡೆಯಾಗಿದೆ.

ಏನು ಕೊರತೆ ಆಗಿದೆ ಎನ್ನುವ ಕುರಿತು ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ಇನ್ನೂ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎನ್ನುವ ಪ್ರಶ್ನೆ ಬರಲ್ಲ. ಎಲ್ಲರೂ ಸೇರಿ ಜವಾಬ್ದಾರಿ ಹೊರಬೇಕಾಗುತ್ತದೆ. ಏನು ಲೋಪ ಆಗಿದೆ ಎಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಇನ್ನೂ ಸಂವಿಧಾನ ದಿನದ ಬಗ್ಗೆ ಮಾತನಾಡಿ, ಇಂದು ಸಂವಿಧಾನ ದಿನ. ಇದು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ. ಇಡೀ ವಿಶ್ವವೇ ಅಚ್ಚರಿ ಪಡುವಂತಹ ಸಂವಿಧಾನವನ್ನು ಅಂಬೇಡ್ಕರ್ ನಮಗೆ ಕೊಟ್ಟಿದ್ದಾರೆ. ಆದ ಕಾರಣ ನಾವು ದೇಶದಲ್ಲಿ ಸಂವಿಧಾನ ದಿನ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರಿಯಕರ‌ನಿಂದಲೇ ಪ್ರೇಯಸಿಯ ಬರ್ಬರ ಹತ್ಯೆ! ಆರೋಪಿ ಎಸ್ಕೇಪ್

0

ಬೆಂಗಳೂರು: ಪ್ರಿಯಕರ‌ನಿಂದಲೇ ಪ್ರೇಯಸಿಯ ಬರ್ಬರ ಹತ್ಯೆಯಾಗಿರುವ ಘಟನೆ ಇಂದಿರಾನಗರ ರಾಯಲ್ ಇನ್ ಅಪಾರ್ಟ್ಮೆಂಟ್ ಅಲ್ಲಿ ನಡೆದಿದೆ. ಮಾಯಾ ಗೊಗಾಯ್ ಕೊಲೆಯಾದ ಯುವತಿಯಾಗಿದ್ದು, ಆರವ್ ಅನಾಯ್ ಕೊಲೆ ಆರೋಪಿಯಾಗಿದ್ದಾನೆ.

ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮೂಲತಃ ಕೇರಳದವನಾದ ಆರೋಪಿ ದಿ ರಾಯಲ್  ಲಿವಿನ್ಸ್ ನಲ್ಲಿ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ‌ ಇಂದಿರಾ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಿಷೇಧಿತ ಡ್ರಗ್ಸ್‌ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್.!

0

ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ ಸಪ್ಲೈ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಅರೆಸ್ಟ್‌ ಮಾಡಿದ್ದಾರೆ. ಕೌಸಾಕಿ ಜೂಲ್ಸ್ ಎನ್ ಹುಸೇನ್ ಬಂಧಿತ ಆರೋಪಿಯಾಗಿದ್ದು,

ಬೆಂಗಳೂರಿನಲ್ಲಿ ಒಂದು ಗ್ರಾಂ ಎಂಡಿಎಂಎ ಕ್ರಿಸ್ಟಲ್ ಗೆ 15000 ಸಾವಿರಕ್ಕೆ ಎಂಬಂತೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಯಿಂದ 515 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬಾಂಗ್ಲಾದಲ್ಲಿ ಮತ್ತೆ ಪ್ರತಿಭಟನೆ ಕಾವು: ಬೀದಿಗಿಳಿದ ವಿದ್ಯಾರ್ಥಿಗಳು, ವಾಹನಗಳಿಗೆ ಬೆಂಕಿ

ಬಾಂಗ್ಲಾದೇಶದಲ್ಲಿ ಸರ್ಕಾರ ವಿರುದ್ಧ ಅಲ್ಲಿನ ಜನ ಸಾಮಾನ್ಯರು ಪ್ರತಿಭಟನೆ ನಡೆಸಿ ಕೆಲ ತಿಂಗಳಷ್ಟೇ ಕಳೆದಿದೆ. ಇದೀಗ  ಅಲ್ಲಿನ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ.  ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣಕ್ಕೆ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಡೆಂಗ್ಯೂಯಿಂದ ಬಳಲುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬನನ್ನು ಢಾಕಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದು ಆತ ನವೆಂಬರ್ 18ರಂದು ಸಾವನ್ನಪ್ಪಿದ್ದಾನೆ.

ವಿದ್ಯಾರ್ಥಿಯ ಸಾವಿಗೆ ಆಸ್ಪತ್ರೆಯಲ್ಲಿ ನೀಡಿದ ತಪ್ಪು ಚಿಕಿತ್ಸೆ ಕಾರಣ ಎಂದು ಆತನ ಸ್ನೇಹಿತರು  ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಳೆದ 3 ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ.

ಢಾಕಾದ ಶಾಹಿದ್ ಸುಹ್ರವರ್ದಿ ಸರ್ಕಾರಿ ಕಾಲೇಜಿಗೆ ನುಗ್ಗಿದ ವಿದ್ಯಾರ್ಥಿಗಳ ಗುಂಪು 6 ವಾಹನಗಳನ್ನು ಜಖಂಗೊಳಿಸಿ ದಾಂಧಲೆ ನಡೆಸಿದೆ. ಬಳಿಕ ಢಾಕಾ ವೈದ್ಯಕೀಯ ಕಾಲೇಜು ಹಾಗೂ ಇತರ ಕಾಲೇಜಿಗೆ ನುಗ್ಗಲು ವಿದ್ಯಾರ್ಥಿಗಳ ಗುಂಪು ಯತ್ನಿಸಿದಾಗ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಘರ್ಷಣೆ ನಡೆದು 30 ಮಂದಿ ಗಾಯಗೊಂಡಿದ್ದಾರೆ.

ಸುಹ್ರವರ್ದಿ ಕಾಲೇಜಿನ ಸುತ್ತಮುತ್ತ ಇರುವ ಅಂಗಡಿಗಳನ್ನು ವಿದ್ಯಾರ್ಥಿಗಳ ಗುಂಪು ಲೂಟಿ ಮಾಡಿದ ಹಿನ್ನೆಲೆಯಲ್ಲಿ ಢಾಕಾದ ಕಾಲೇಜುಗಳು, ಹಾಸ್ಟೆಲ್‍ಗಳು ಹಾಗೂ ಪ್ರಾರ್ಥನಾ ಸ್ಥಳಗಳ ಬಳಿ ಸೇನೆಯನ್ನು ನಿಯೋಜಿಸಲಾಗಿದೆ.

ಮುಡಾ ಹಗರಣ CBIಗೆ ವಹಿಸುವಂತೆ ಅರ್ಜಿ: ವಿಚಾರಣೆ ಡಿ.10 ಕ್ಕೆ ಮುಂದೂಡಿದ ಹೈಕೋರ್ಟ್!

0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆದಿದೆ. ಸಿದ್ದರಾಮಯ್ಯ ವಿರುದ್ದದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಿಕೆ ಮಾಡಿದೆ.

ಆರೋಪಿ ದೇವರಾಜು ಪರ ವಕೀಲರು ವಾದ ಮಂಡಿಸಿ, ವಿಭಾಗೀಯ ಪೀಠದಲ್ಲಿ ಡಿ.5 ಕ್ಕೆ ವಿಚಾರಣೆ ಬಾಕಿ ಇದೆ. ಹೀಗಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಮುಕ್ತಾಯದ ಬಳಿಕ ಇಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ನೇಹಮಯಿ ಕೃಷ್ಣ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದರು. ಆ ಅರ್ಜಿ ಸಂದರ್ಭದಲ್ಲಿ ಇದನ್ನು ಮುಂದೂಡಬೇಕು ಅಂತ ಹೇಳಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್ ತಿಳಿಸಿದರು.

ಅಲ್ಲದೇ, ಇಂದು ಲೋಕಾಯುಕ್ತ ವರದಿ ಪಡೆಯಿರಿ ಎಂದು ರಾಘವನ್ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಇವತ್ತು ಅರ್ಜಿ ವಿಚಾರಣೆ ನಡುತ್ತಿಲ್ಲ. ಹೀಗಾಗಿ ಡಿ.10 ಕ್ಕೆ ಮುಂದೂಡಲಾಗುವುದು ಎಂದು ಆದೇಶಿಸಿದರು. ಡಿಸೆಂಬರ್ 10ರ ಮಧ್ಯಾಹ್ನ 2:30 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಅವತ್ತೇ ವಾದ-ಪ್ರತಿವಾದ ಮುಕ್ತಾಯ ಮಾಡಬೇಕು ಎಂದು ಸೂಚಿಸಿದರು.

ರೇಣುಕಾಸ್ವಾಮಿ ಕೊಲೆ ಕೇಸ್: ಇಂದು ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ!

0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನ ದರ್ಶನ್, ಪವಿತ್ರಾಗೌಡ ಸೇರಿ ಆರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ನಟ ದರ್ಶನ್, ಪವಿತ್ರಾಗೌಡ, ನಾಗರಾಜ್, ಅನುಕುಮಾರ್, ಲಕ್ಷ್ಮಣ್ ಮತ್ತು ಜಗದೀಶ್ ಸೇರಿ ಒಟ್ಟು ಆರು ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ಮಧ್ಯಂತರ ಜಾಮೀನಿಮ ಮೇಲೆ ನಟ ದರ್ಶನ್‌ ಹೊರಗಡೆ ಇದ್ರೆ, ಇತ್ತ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿದ್ದಾರೆ.

ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್, ಈವರೆಗೂ ಸರ್ಜರಿ ಮಾಡಿಸಿಲ್ಲ. ಈ ಬಗ್ಗೆ ಎಸ್​ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು. ದರ್ಶನ್ ಅನಾರೋಗ್ಯ ಸಂಬಂಧ ಹೈಕೋರ್ಟ್​ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿಸಲಾಗಿದೆ. ದಾಸನ ಪರ ಹಿರಿಯ ವಕೀಲ ಸಿ‌.ವಿ.ನಾಗೇಶ್ ಅವರಿಂದ ವೈದ್ಯಕೀಯ ವರದಿ ಸಲ್ಲಿಕೆ ಮಾಡಲಾಗಿದ್ದು,

ಮೆಡಿಕಲ್ ರಿಪೋರ್ಟ್ ಮೇಲೆ ಇಂದು ಎಸ್​ಪಿಪಿ ಪ್ರಸನ್ನ ಕುಮಾರ್ ವಾದಿಸಲಿದ್ದಾರೆ. ಕೊಲೆ ಪ್ರಕರಣದಲ್ಲಿ 131 ದಿನ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ.

ಟ್ರೈನ್ ನಲ್ಲಿ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಪೆಡ್ಲರ್ ಅರೆಸ್ಟ್.!

0

ಬೆಂಗಳೂರು: ಟ್ರೈನ್ ನಲ್ಲಿ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಪೆಡ್ಲರ್ ಅನ್ನು ಮಾರತಹಳ್ಳಿ ಪೊಲೀಸರು ಬಂದಿಸಿದ್ದಾರೆ. ಅಬುಲ್ ಪಾಷಾ(34) ಬಂಧಿತ ಆರೋಪಿಯಾಗಿದ್ದು, ಆಟೋ ಡ್ರೈವರ್ ಅಗಿದ್ದ ಅಬುಲ್ ಪಾಷಾ 5 ವರ್ಷದಿಂದ ಬೆಂಗಳೂರಲ್ಲಿ ವಾಸವಾಗಿದ್ದನು.

ಲೇಬರ್ ಶೆಡ್ ನಲ್ಲಿ ಪ್ಯಾಕೇಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡಿದ್ದು, ಬಂಧಿತನಿಂದ 7.5 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾ ವಶಕ್ಕೆ ಪಡೆದು, ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಮಡಗಾಸ್ಕರ್ ನಲ್ಲಿ ವಲಸಿಗರ ದೋಣಿ ಮುಳುಗಿ 22 ಮಂದಿ ಸಾವು

ಮಡಗಾಸ್ಕರ್: ಭಾನುವಾರ ಮಡಗಾಸ್ಕರ್ ಕರಾವಳಿ ಬಳಿ ವಲಸಿಗರ ಎರಡು ದೋಣಿಗಳು ಮುಳುಗಿ ಕನಿಷ್ಟ 22 ವಲಸಿಗರು ಮೃತಪಟ್ಟಿದ್ದಾರೆ.

ಮುಳುಗಡೆಯಾಗಿರುವ ದೋಣಿಗಳಲ್ಲಿ ಒಟ್ಟು 70 ಸೊಮಾಲಿಯಾ ಪ್ರಜೆಗಳು ಪ್ರಯಾಣಿಸುತ್ತಿದ್ದರು. ಅವರಲ್ಲಿ 22 ಮಂದಿ ಮೃತಪಟ್ಟಿದ್ದು ಉಳಿದವರನ್ನು ರಕ್ಷಣೆ ಮಾಡಲಾಗಿದೆ ಎಂದು ಸೊಮಾಲಿಯಾ ಸರ್ಕಾರ ತಿಳಿಸಿದೆ.

ಮುಳುಗಡೆಯಾಗಿರುವ ದೋಣಿಗಳು ಹಿಂದು ಮಹಾಸಾಗರದ ಮಯೊಟ್ಟೆ ಪ್ರದೇಶಕ್ಕೆ ತೆರಳುತ್ತಿತ್ತು ಎಂದು ಸೊಮಾಲಿಯಾದ ಮಾಹಿತಿ ಸಚಿವ ದೌದ್ ಅವೀಸ್ ಹೇಳಿದ್ದಾರೆ.

ಮಡಗಾಸ್ಕರ್ ಕರಾವಳಿಯ ನೋಸಿ ಇರಾಂಜ ನಗರದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದವರು ಮುಳುಗುತ್ತಿದ್ದ ದೋಣಿಯನ್ನು ಪತ್ತೆಹಚ್ಚಿದ್ದು 15 ಮಹಿಳೆಯರ ಸಹಿತ 25 ವಲಸಿಗರನ್ನು ರಕ್ಷಿಸಿದ್ದಾರೆ. ಆದರೆ 7 ವಲಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಡಗಾಸ್ಕರ್ ನ ಕರಾವಳಿಯಲ್ಲಿ ಮುಳುಗಿದ್ದ ಮತ್ತೊಂದು ದೋಣಿಯನ್ನು ಕರಾವಳಿ ಕಾವಲು ಪಡೆ ಪತ್ತೆಹಚ್ಚಿದ್ದು 23 ವಲಸಿಗರನ್ನು ರಕ್ಷಿಸಲಾಗಿದೆ. ಆದರೆ 15 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಬಂದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಳುಗಡೆಯಾಗಿರುವ ಎರಡು ದೋಣಿಗಳಲ್ಲಿ ಒಟ್ಟು 70 ಸೊಮಾಲಿಯಾ ಪ್ರಜೆಗಳಿದ್ದರು. ಅವರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾ ಸರಕಾರದ ಮೂಲಗಳು ತಿಳಿಸಿವೆ.

ಗ್ಯಾರಂಟಿಗಳು ಕಡಿಮೆ ಮಾಡೋಕೆ ಸಿಎಂಗೆ ಹೇಳ್ತಿವಿ: ಸ್ಫೋಟಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ

0

ವಿಜಯನಗರ: ಈ ಹಿಂದೆ ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದು ಹೇಳಿದ್ದ ಶಾಸಕ ಗವಿಯಪ್ಪ ಮತ್ತೆ ಗ್ಯಾರಂಟಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ಭೂಮಿ ಪೂಜೆ ನಡೆಸಿ, ಮಾತನಾಡಿದ ಅವರು,ಬಸ್ ನಲ್ಲಿ ಓಡ್ಯಾಡೋದು ಸೇರಿದಂತೆ ಇನ್ನೆರಡು ಗ್ಯಾರಂಟಿಗಳು ಕಡಿಮೆ ಮಾಡೋಕೆ ಸಿಎಂಗೆ ಹೇಳ್ತಿವಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರೆಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಹೇಳಿದರು. ಸಿದ್ದರಾಮಯ್ಯನವರ ಸರ್ಕಾರದ ಖಜಾನೆ ಖಾಲಿಯಾಗಿದೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಕಾಂಗ್ರೆಸ್​ ಪಕ್ಷದ ಶಾಸಕರ ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

‘ಕೋಲು ಮಂಡೆ ಜಂಗಮದೇವ’ ಖ್ಯಾತಿಯ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

‘ಕೋಲು ಮಂಡೆ ಜಂಗಮದೇವ’ ಖ್ಯಾತಿಯ ಕಂಸಾಳೆ ಖ್ಯಾತ ಕಲಾವಿದ, ಮೈಸೂರಿನ ಬಂಡಿಕೇರಿಯ ನಿವಾಸಿ ಕುಮಾರಸ್ವಾಮಿ ಅವರು ಸೋಮವಾರ ನಿಧನರಾದರು. ಜಾನಪದ ಕಲಾವಿದ ಕಂಸಾಳೆ ಮಹಾದೇವಯ್ಯ ಅವರ ಪುತ್ರರಾದ ಕುಮಾರಸ್ವಾಮಿ, ಬಾಲ್ಯದಿಂದಲೇ ತಂದೆ ಜತೆ ಕಂಸಾಳೆಯನ್ನು ಮೈಗೂಡಿಸಿಕೊಂಡು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಖ್ಯಾತಿ ಘಳಿಸಿದ್ದರು. ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇಂದು ಬೆಳಗ್ಗೆ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಗಾರದಲ್ಲಿ ಇವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮೈಸೂರಿನ ಹಿರಿಯ ಜಾನಪದ ಕಲಾವಿದ ಕುಮಾರಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತಂದೆ ಕಂಸಾಳೆ ಮಹಾದೇವಯ್ಯ ಅವರಂತೆ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಾನಪದ ಸೊಬಗನ್ನು ಕನ್ನಡಿಗರಿಗೆ ಉಣಬಡಿಸಿದ ಕುಮಾರಸ್ವಾಮಿ ಅವರ ಕಲಾಸೇವೆ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗ ಮತ್ತು ಬಂಧುಮಿತ್ರರಿಗೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

1951ರಲ್ಲಿ ವರಕೋಡು ಸಮೀಪದ ಬಡಗಲಹುಂಡಿಯಲ್ಲಿ ಜನಿಸಿದ ಕುಮಾರಸ್ವಾಮಿ ಅವರು ತಂದೆ ಕಂಸಾಳೆ ಮಹಾದೇವಯ್ಯ ಅವರಿಂದ ಕಂಸಾಳೆಯನ್ನು ಕಲಿತಿದ್ದರು. ವಿದ್ಯಾಭ್ಯಾಸವನ್ನು 7ನೇ ತರಗತಿಗೆ ನಿಲ್ಲಿಸಿ ತಂದೆಯೊಂದಿಗೆ ಪ್ರದರ್ಶನಗಳನ್ನು ನೀಡಲಾರಂಭಿಸಿದರು.ಬಳಿಕ ಅದರಲ್ಲಿಯೇ ಮುಂದುವರಿದರು.

ಶಿವರಾಜ್ ಕುಮಾರ್ ನಟನೆಯ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ ಜಂಗಮದೇವ’ ಹಾಡಿಗೆ ಕುಮಾರಸ್ವಾಮಿ ಅವರು ಕಂಸಾಳೆ ಸಂಗೀತದ ನೃತ್ಯ ಸಂಯೋಜಿಸಿದ್ದರು. ಆ ಮೂಲಕ ವರನಟ ರಾಜಕುಮಾ‌ರ್ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇವರು, ಇಟಲಿ, ರೋಂ, ಟರ್ಕಿ ಸೇರಿ ದೇಶ- ವಿದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ.

ಕಂಸಾಳೆ, ಹಾಡುಗಾರಿಕೆ, ನೃತ್ಯ ಪ್ರಕಾರ, ಬೀಸು ಕಂಸಾಳೆಯಲ್ಲಿ ಪರಿಣತಿ ಗಳಿಸಿದ್ದ ಅವರು, ವಿವಿಧ ವಿಷಯಗಳನ್ನು ಕಂಸಾಳೆಗೆ ಒಗ್ಗಿಸಿಕೊಂಡು ಪ್ರಸ್ತುತಪಡಿಸುತ್ತಿದ್ದರು. ಇವರಿಗೆ ‘ಜಾನಪದ ಲೋಕ’ ಪ್ರಶಸ್ತಿ, ಕನ್ನಡ ಜಾನಪದ ಪರಿಷತ್ತಿನ ‘ಜಾನಪದ ಪ್ರಪಂಚ’, ಕನ್ನಡ ಬಳಗದ ‘ಕಂಸಾಳೆ ಜಾನಪದ ರತ್ನ’, ಕನ್ನಡ ಕ್ರಾಂತಿ ದಳದ ‘ಕಂಸಾಳೆ ಕಂಠೀರವ’ ಬಿರುದು ಸೇರಿ ವಿವಿಧ ಬಿರುದು, ಪ್ರಶಸ್ತಿಗಳನ್ನು ಪಡೆದಿದ್ದರು. ಇವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಕಂಸಾಳೆ ಮಾದೇವ್ ಕುಮಾರ, ಪುತ್ರಿಯರಾದ ರೂಪಾ, ಪಾರ್ವತಿ ಇದ್ದಾರೆ.

error: Content is protected !!