Home Blog Page 2061

ವಕ್ಫ್ ವಿರುದ್ಧ ಹೋರಾಟಕ್ಕೆ ನಾನು ದುಮುಕಿದ್ದೇನೆ: ಜಯಮೃತ್ಯುಂಜಯ ಸ್ವಾಮೀಜಿ

0

ಕೊಪ್ಪಳ: ವಕ್ಫ್ ವಿರುದ್ಧ ಹೋರಾಟಕ್ಕೆ ನಾನು ದುಮುಕಿದ್ದೇನೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ರೈತರ ಜಮೀನಲ್ಲಿ ವಕ್ಫ್ ಹೆಸರು ಸೇರಿದ ವಿಚಾರವಾಗಿ ಕೊಪ್ಪಳದಲ್ಲಿ ಮಾತನಾಡಿದ ಅವರು, ವಕ್ಫ್ ವಿರುದ್ಧ ಹೋರಾಟಕ್ಕೆ ನಾನು ದುಮುಕಿದ್ದೇನೆ. ಈಗಾಗಲೇ ಹಲವು ಮನವಿಗಳನ್ನು ಕೊಟ್ಟಿದ್ದೀವಿ. ಸಿಎಂ ಅವರು ವಕ್ಫ್ ವಾಪಸ್ ತೆಗೆದುಕೊಂಡಿದ್ದಾರೆ. ಆದರೆ ಪಹಣಿಯಲ್ಲ ಹೆಸರು ತೆಗೆದಿಲ್ಲ. ವಿಜಯಪುರದಲ್ಲಿ ಮಾತ್ರ ಬಂದ್ ಆಗಿದೆ ಬೇರೆ ಕಡೆ ಆಗುತ್ತಿದೆ ಎಂದು ಹೇಳಿದರು.

ಇನ್ನೂ ಸರ್ಕಾರ ನಮ್ಮ ಸಮುದಾಯದಿಂದಲೇ ಅಧಿಕಾರಕ್ಕೆ ಬಂದಿದೆ. ಈಗಾಗಲೇ ನಾವು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ನಮ್ಮ ಸಮುದಾಯದ ಶಾಸಕರು ಇದುವರೆಗೂ ಯಾವುದೇ ರೀತಿಯ ಧ್ವನಿ ಎತ್ತಿಲ್ಲ. ಈಗ ನಡೆಯುವ ಅಧಿವೇಶನದಲ್ಲಿ ಧ್ವನಿ ಎತ್ತಿ, ಇಲ್ಲವಾದರೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ. ಬೆಳಗಾವಿಯಲ್ಲಿ ಹೋರಾಟಕ್ಕೆ ಮುತ್ತಿಗೆ ಹಾಕಲು ರೂಪ ರೇಷಗಳನ್ನು ಹಾಕಲಾಗುತ್ತಿದೆ ಎಂದರು.

ನಾಡದೇವಿ ಮೈಸೂರಿನ ಚಾಮುಂಡಿಗೆ ಚಿನ್ನದ ರಥ: ಗ್ರೀನ್ ಸಿಗ್ನಲ್ ಕೊಟ್ಟ ಸಿಎಂ ಸಿದ್ದರಾಮಯ್ಯ!

0

ಮೈಸೂರು:- ಸಿಎಂ ಸಿದ್ದರಾಮಯ್ಯ ಅವರು ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. ಈ ಮೂಲಕ ಚಾಮುಂಡೇಶ್ವರಿ ಭಕ್ತಾದಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಎಸ್, ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ.ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬ ಭಕ್ತರ, ಬೇಡಿಕೆಯನ್ನು ಅರಿತು, ಸಂಕಲ್ಪ ಮಾಡಿಕೊಂಡು ಪ್ರಯತ್ನಿಸಲಾಗಿತ್ತು. ಸಿಎಂ ಆದೇಶದಿಂದ ಈಗ ಆ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತಾಗಿದೆ.

ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತ ಕೋಟಿಯ ಬೇಡಿಕೆಯಾಗಿತ್ತು. ಈ ಹಿನ್ನೆಲೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ನೀಡಿದ್ದರು.

ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಮದನ್ ಪಟೇಲ್ ಅಭಿನಯದ, ಮಯೂರ್ ಪಟೇಲ್ ನಿರ್ದೇಶನದ “ತಮಟೆ” ಚಿತ್ರ ನವೆಂಬರ್ 29 ರಂದು ಬಿಡುಗಡೆ!

0

ವಂದನ್ ಎಂ ನಿರ್ಮಾಣದ, ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ತಮಟೆ” ಚಿತ್ರದ ಟೀಸರ್ ಹಾಗೂ ಹಾಡನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಮೊದಲ ಕುಲಪತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್ ಬಿಡುಗಡೆ ಮಾಡಿದರು. ದಿನಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮದನ್ ಪಟೇಲ್ ಅವರು ನನ್ನ ಬಹುಕಾಲದ ಗೆಳೆಯರು. ಅವರು ಬರೆದಿರುವ “ತಮಟೆ” ಕಾದಂಬರಿ ಇಂದು ಸಿನಿಮಾ ರೂಪ ಪಡೆದುಕೊಂಡಿದೆ. ಮಯೂರ್ ಪಟೇಲ್ ಅವರು ನಿರ್ದೇಶಿಸಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಮದನ್ ಪಟೇಲ್ ಅವರೆ ಅಭಿನಯಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಈ ಚಿತ್ರ ನವೆಂಬರ್ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು ಮಲ್ಲೇಪುರಂ ಜಿ ವೆಂಕಟೇಶ್.

“ತಮಟೆ” ವಾದ್ಯಗಾರನೊಬ್ಬನ ಜೀವನಾಧಾರಿತ ಈ ಸಿನಿಮಾದಲ್ಲಿ ನಾನೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ.‌ ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತವನ್ನು ನೀಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದ “ತಮಟೆ” ಚಿತ್ರ ನವೆಂಬರ್ 29 ರಾಜ್ಯಾದ್ಯಂತ ನವೆಂಬರ್ 29ರಂದು ಬಿಡುಗಡೆಯಾಗುತ್ತಿದೆ. ಇಂದು ಟೀಸರ್ ಹಾಗೂ ಬಿಡುಗಡೆ ಮಾಡಿಕೊಟ್ಯ ಮಲ್ಲೇಪುರಂ ಜಿ ವೆಂಕಟೇಶ್ ಅವರಿಗೆ ಧನ್ಯವಾದ.

ಮಯೂರ್ ಪಟೇಲ್ ಅವರು ದುಬೈ ರಾಜ್ ಕಪ್ ಪಂದ್ಯಾವಳಿಯಲ್ಲಿ ಭಾಗಿಯಾಗಿರುವುದರಿಂದ ಇಂದಿನ ಸಮಾರಂಭದಲ್ಲಿ ಅವರು ಉಪಸ್ಥಿತರಿಲ್ಲ ಎಂದು ತಿಳಿಸಿದ ಮದನ್ ಪಟೇಲ್ ಅವರು ಚಿತ್ರರಂಗಕ್ಕೆ ಇಂದು ಅವಶ್ಯಕತೆಯಿರುವ ಹಲವಾರು ವಿಷಯಗಳ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿರುವುದಾಗಿ ಹೇಳಿದರು. ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ. ಒಳ್ಳೆಯ ಪಾತ್ರ ನೀಡಿದ ಮದನ್ ಪಟೇಲ್ ಅವರಿಗೆ ಧನ್ಯವಾದ ಎಂದರು ನಟಿ ತೇಜಸ್ವಿನಿ. ಅತಿಥಿಗಳಾಗಿ ಆಗಮಿಸಿದ್ದ ದಿನಕರ್ ಅವರು ಸಹ ಚಿತ್ರಕ್ಕೆ ಯಶಸ್ವಿಯಾಗಲೆಂದು ಹಾರೈಸಿದರು.

ಮದ್ಯಪಾನ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಅಬಕಾರಿ ಇಲಾಖೆ..!

0

ಬೆಂಗಳೂರು: ರಾಜ್ಯದಲ್ಲಿ ಮದ್ಯವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದ್ದರಿಂದಲೇ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ಪ್ರತಿವರ್ಷ ಚಳಿಗಾಲದಲ್ಲಿ ಬಿಯರ್‌‌ ಮಾರಾಟ ಕುಸಿತ ಆಗುತ್ತದೆ. ಇಂಥ ಸಂದರ್ಭದಲ್ಲಿ ಬಿಯರ್‌ ದರ ಏರಿಕೆ ಮಾಡಿದ್ರೆ ಆದಾಯದಲ್ಲಿ ನಷ್ಟ ಉಂಟಾಗಲಿದೆ. ಹೀಗಾಗಿ ಚಳಿಗಾಲ ಶುರುವಾಗುತ್ತಿದ್ದಂತೆ ಬಿಯರ್‌‌ ಬಗ್ಗೆ ಅಬಕಾರಿ ಇಲಾಖೆಗೆ ಟೆನ್ಷನ್‌‌ ಶುರುವಾಗಿದೆ.

ಯಾಕೆಂದರೆ ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚಾಗಿ ಬಿಯರ್‌‌ ಕುಡಿಯಲ್ಲ. ಇದರಿಂದ ಬಿಯರ್‌‌ ಮಾರಾಟ ಕುಸಿತವಾಗುವ ಆತಂಕ ಎದುರಾಗಿದೆ. ಶೇಕಡಾ 10 ರಿಂದ 20 ರಷ್ಟು ಬಿಯರ್‌‌ ಮಾರಾಟದಲ್ಲಿ ಕುಸಿತ ಸಾಧ್ಯತೆ ಇದೆ. ಜನವರಿವರಿಗೆ ರಾಜ್ಯದಲ್ಲಿ ಅತಿ ಹೆಚ್ಚು ಚಳಿ ಇರುತ್ತೆ, ಈ ವೇಳೆ ಬಿಯರ್ ಕುಡಿಯುವ ಸಂಖ್ಯೆ ಕಡಿಮೆ. ಈ ಕಾರಣದಿಂದ ಜನವರಿವರಿಗೆ ಬಿಯರ್ ದರ ಪರಿಷ್ಕರಣೆ ಮಾಡದಿರಲು ನಿರ್ಧಾರ ಮಾಡಲಾಗಿದೆಯಂತೆ.

 

ಯತ್ನಾಳ್ ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ: ಮಾಜಿ ಶಾಸಕ ಪಿ.ರಾಜೀವ್

0

ಬೆಂಗಳೂರು: ಯತ್ನಾಳ್ ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ನಾಯಕರಿಂದ, ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ.

ಹಾಗಾಗಿ, ಅದು ಪಕ್ಷದ ಹೋರಾಟ ಆಗುವುದಿಲ್ಲ ಎಂದರು.ಇನ್ನೂ ಯತ್ನಾಳ್ ಮಾಡುವ ಹೋರಾಟ ಪಕ್ಷದ ಅಶಿಸ್ತು ಕೂಡ ಆಗುತ್ತದೆ. ಇಲ್ಲಿನವರೆಗೆ ರಾಜ್ಯದ ಹಂತದಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಳ್ಳಲಿಲ್ಲ. ಯತ್ನಾಳರ ಈ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ಹೇಳಿದರು.

ಎಲ್ಲಾವನ್ನೂ ಮರೆತು ಯೋಗೇಶ್ವರ್ʼಗೆ ಟಿಕೆಟ್ ನೀಡಲು ಕುಮಾರಣ್ಣ ತಯಾರಾಗಿದ್ದರು: ಸಾರಾ ಮಹೇಶ್

0

ಮೈಸೂರು: ಎಲ್ಲಾವನ್ನೂ ಮರೆತು ಯೋಗೇಶ್ವರ್​ಗೆ ಟಿಕೆಟ್ ನೀಡಲು ಕುಮಾರಣ್ಣ ತಯಾರಾಗಿದ್ದರು ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಸಿಪಿ ಯೋಗೇಶ್ವರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಅಂತ ಗೊತ್ತಿದ್ದರೂ,

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಅವರಿಗೆ ಜೆಡಿಎಸ್ ಪಕ್ಷದ ಬಿ ಫಾರ್ಮ್ ಕೊಡಲು ವರಿಷ್ಠರು ರೆಡಿಯಿದ್ದರು, ಅವರು ಕಾಂಗ್ರೆಸ್ ಸೇರಿ ಗೆದ್ದಿದ್ದಾರೆ, ಮುಂದಿನ 3 ವರ್ಷ ಕಾಲ ಕ್ಷೇತ್ರದ ಅಭಿವೃದ್ಧಿ ಕಡೆ ಅವರು ಗಮನ ಹರಿಸಲಿ ಎಂದು ಹೇಳಿದರು.

ಇನ್ನೂ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಜಿ.ಟಿ. ದೇವೇಗೌಡರನ್ನು ವರಿಷ್ಠ ದೇವೇಗೌಡರೇ ಫೋನ್‌ ಮಾಡಿ ಕರೆದಿದ್ದರು. ನಾವು ಚುನಾವಣೆಗೂ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ. ನಾನಾ ಕಾರಣದಿಂದ ಸೋಲಾಗಿದೆ ಎಂದು ಹೇಳಿದರು.

ವಕೀಲೆ ಎಸ್‌. ಜೀವಾ ಆತ್ಮಹತ್ಯೆ ಪ್ರಕರಣ: CCBಗೆ ವರ್ಗಾವಣೆ ಮಾಡಿದ ಪೊಲೀಸ್ ಕಮಿಷನರ್!

0

ಬೆಂಗಳೂರು : ವಕೀಲೆ ಎಸ್‌. ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸದಂತೆ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಇತ್ತೀಚಿಗೆ ಬೋವಿ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸಿದ್ದ 33 ವರ್ಷದ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜೀವಾ ಬರೆದಿಟ್ಟಿರುವ 13 ಪುಟಗಳ ಡೆತ್‌ನೋಟ್‌ ಪತ್ತೆಯಾಗಿತ್ತು.

ಈ  ಡೆತ್‌ನೋಟ್​​ನಲ್ಲಿ, ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಿಐಡಿ ತನಿಖಾಧಿಕಾರಿಗಳು ಹಲವು ಬಾರಿ ವಿಚಾರಣೆಗೆ ಕರೆಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ತನಿಖಾಧಿಕಾರಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ ಜೀವಾ ಉಲ್ಲೇಖಿಸಿದ್ದರು. ಡೆತ್‌ನೋಟ್‌ ಹಾಗೂ ಜೀವಾ ಸಹೋದರಿ ಸಂಗೀತಾ ನೀಡಿದ ದೂರಿನ ಅನ್ವಯ DySP ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅನ್ವಯ FIR ದಾಖಲಾಗಿತ್ತು.

ಇದೀಗ ಜೀವಾ ಆತ್ಮಹತ್ಯೆ ಪ್ರಕರಣವನ್ನು ಪ್ರಕರಣದ ಮುಂದಿನ ತನಿಖೆಯನ್ನ ಸಿಸಿಬಿಗೆ ವಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಸಿಸಿಬಿಯ ಎಸಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ಪ್ರಕರಣದ ಪ್ರಾಥಮಿಕ ತನಿಖೆಯ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ.

 

ರೆಹಮಾನ್ ವಜ್ರದಂತೆ, ಅವರ ವಿರುದ್ಧ ಕೆಟ್ಟದ್ದನ್ನು ಹೇಳಬೇಡಿ: ಸೈರಾ ಬಾನು

ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಮತ್ತು ಗಾಯಕ ಎ. ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ಮೂಲಕ 29 ವರ್ಷಗಳ ದಾಂಪತ್ಯ ಜೀವನ ಕೊನೆಯಾಗಿಸಿದ್ದಾರೆ. ಅಲ್ಲದೆ ಸೈರಾ ಬಾನು ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಸುದ್ದಿ ತಿಳಿಸುತ್ತಿದ್ದಂತೆ ರೆಹಮಾನ್ ಅವರ ಬ್ಯಾಂಡ್ ನ ಸದಸ್ಯೆ ಮೋಹನಿ ಡೇ ಕೂಡ ತಮ್ಮ ಪತಿಗೆ ಡಿವೋರ್ಸ್ ನೀಡಿರುವುದಾಗಿ ಹೇಳಿದ್ದಾರೆ. ಹಾಗಾಗಿ ರೆಹಮಾನ್ ಸೈರಾಬಾನು ದೂರ ದೂರವಾಗಲು ಮೋಹಿನಿ ಕಾರಣ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಇದೀಗ ಸೈರಾ ತಮ್ಮ ಪಿಆರ್‌ ಮೂಲಕ ವಾಯ್ಸ್ ನೋಟ್ ಬಿಡುಗಡೆ ಮಾಡಿ ತಮ್ಮ ಪತಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಸೈರಾ ಬಾನು ಕೆಲವು ದಿನಗಳಿಂದ ಚಿಕಿತ್ಸೆಗಾಗಿ ಮುಂಬೈನಲ್ಲಿದ್ದಾರೆ. ‘ಎಆರ್ ರೆಹಮಾನ್ ಓರ್ವ ವ್ಯಕ್ತಿಯಾಗಿ ವಜ್ರ ಇದ್ದಂತೆ. ಅವರು ಈ ಜಗತ್ತಿನಲ್ಲಿ ಅತ್ಯುತ್ತಮ ವ್ಯಕ್ತಿ. ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಚೆನ್ನೈ ಬಿಟ್ಟು ಹೋಗಬೇಕಾಯಿತು. ಅವರ ವಿರುದ್ಧ ಕೆಟ್ಟದ್ದನ್ನು ಹೇಳಬೇಡಿ ಎಂದು ನಾನು ಯೂಟ್ಯೂಬ್‌ಗಳು ಮತ್ತು ತಮಿಳು ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ. ನನ್ನ ಜೀವನದಲ್ಲಿ ನಾನು ಅವನನ್ನು ಹೆಚ್ಚು ನಂಬಿದ್ದೇನೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಹಾಗಾಗಿ ಅವರ ಮೇಲೆ ಸುಳ್ಳು ಆರೋಪ ಮಾಡಬೇಡಿ’’ ಎಂದು ಸೈರಾ ಮನವಿ ಮಾಡಿದ್ದಾರೆ.

ಚಿಕಿತ್ಸೆ ಮುಗಿಸಿ ಚೆನ್ನೈಗೆ ಮರಳುವವರೆಗೂ ಕಾಯುವಂತೆ ಅವರು ಕೋರಿದ್ದಾರೆ. ‘ನಾವು ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಅವರ ಹೆಸರನ್ನು ಹಾಳು ಮಾಡಬೇಡಿ. ಇದೆಲ್ಲ ತುಂಬಾ ಮೂರ್ಖತನ. ರೆಹಮಾನ್ ವಜ್ರದಂತಿದ್ದಾರೆ’ ಎಂದು ಅವರು ಹೇಳಿದ್ದಾರೆ. ರೆಹಮಾನ್ ಮತ್ತು ಸೈರಾ ತಮ್ಮ ವಕೀಲ ವಂದನಾ ಶಾ ಮೂಲಕ ವಿಚ್ಛೇದನವನ್ನು ಘೋಷಿಸಿದರು. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಡಿವೋರ್ಸ್ ಬಗ್ಗೆ ತಿಳಿಸಿದ್ದರು. ಇಬ್ಬರು ದೂರ ದೂರವಾಗುತ್ತಿರುವ ಸುದ್ದಿ ಕೇಳಿ ಸಾಕಷ್ಟುಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಮುಸಲ್ಮಾನರ ವೋಟು ಕೇಳುವ ಹಕ್ಕನ್ನು ಕುಮಾರಸ್ವಾಮಿ ಕಳೆದುಕೊಂಡಿದ್ದಾರೆ: ಡಿ.ಕೆ ಶಿವಕುಮಾರ್

0

ಬೆಂಗಳೂರು: ಮುಸಲ್ಮಾನರ ವೋಟು ಕೇಳುವ ಹಕ್ಕನ್ನು ಕುಮಾರಸ್ವಾಮಿ ಕಳೆದುಕೊಂಡಿದ್ದಾರೆ ಎಂದು  ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಮುಸ್ಲಿಂ ಮತಗಳು ಕೈ ಕೊಟ್ಟ ಕಾರಣ ಚನ್ನಪಟ್ಟಣದಲ್ಲಿ ಸೋಲು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಪಾಪ ಆ ಜನ ಮತ ಹಾಕಿದ್ದರು.

ಇವಾಗ ಬಿಜೆಪಿ ಜೊತೆಗೆ ಹೋಗಿರುವಾಗ ಯಾಕೆ ಮತ ಹಾಕ್ತಾರೆ? ಅವರು ಮುಸ್ಲಿಮರನ್ನು ನಂಬಿಲ್ಲ. ಅವರಿಗೆ ಸೀಟ್ ಕೊಟ್ರಾ? ಮಂತ್ರಿ ಮಾಡಿದ್ರಾ? 4% ಮೀಸಲಾತಿ ಕಿತ್ತು ಹಾಕಿದ್ದಾರೆ. ಅವರ ಬಳಿ ಮತ ಕೇಳುವ ಹಕ್ಕು ಅವರಿಗೆ ಇಲ್ಲ. ಈ ಬಗ್ಗೆ ನಿಖಿಲ್ ಅಲ್ಲ, ಇದರ ಬಗ್ಗೆ ದೇವೇಗೌಡರು ಮಾತನಾಡಬೇಕು ಎಂದಿದ್ದಾರೆ.

ಇನ್ನೂ ಮುಡಾ ವಿಚಾರದಲ್ಲಿ ಐಎಎಸ್ ಅಧಿಕಾರಿಯೊಬ್ಬರು 144 ಫೈಲ್ ತಗೆದುಕೊಂಡು ಹೋಗಿದಾರೆ ಎಂಬ ವಿಚಾರವಾಗಿ, ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ತಗೆದುಕೊಂಡು ಹೋಗ್ತಾರೆ? ಸರ್ಕಾರಿ ದಾಖಲೆ ಅದು, ಅದೆಲ್ಲಾ ಹೇಗೆ ತಗೆದುಕೊಂಡು ಹೋಗೋಕೆ ಸಾಧ್ಯ? ಲೋಕಾಯುಕ್ತ ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಕಾಮೆಂಟ್: ಕ್ರಮಕ್ಕೆ ಆಗ್ರಹಿಸಿ ದೂರು ದಾಖಲು

0

ಬೆಂಗಳೂರು: ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ದೂರು ನೀಡಲಾಗಿದೆ. ದೂರು ನೀಡಿದ ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಾಘವೇಂದ್ರ ಭಟ್ ಪ್ರತಿಕ್ರಿಯೆ ನೀಡಿ, ಹೊರನಾಡು ಅನ್ನಪೋರ್ಣೇಶ್ವರಿ, ಶೃಂಗೇರಿ ಶಾರದಂಭೆ, ಮೂಕಾಂಬಿಕೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.

ಅಂಜುಮ್ ಶೇಖ್ ಎಂಬಾತ ಅವಾಶ್ಯ ಶಬ್ದಗಳಿಂದ ನಿಂದಿಸಿ ಕಾಮೆಂಟ್ ಮಾಡಿರುವುದು ನಮಗೆ ಅತ್ಯಂತ ನೋವುಂಟು ಆಗಿದೆ. ಇಂತವರ ಮೇಲೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇವೆ. ಅವರ ಧರ್ಮದ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸ್ ಠಾಣೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. ನಾವು ಅವರ ತರಹ ಬೆಂಕಿ ಹಚ್ಚುವ ಕೆಲಸ ಮಾಡಲ್ಲ, ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದೇವೆ ಅಷ್ಟೆ, ನಾವು ರಾಮನ ತರಹ ಇದ್ದೀವಿ, ಆದರೆ ಪರಶುರಾಮ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!