Home Blog Page 2063

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿಗೆ ಬೆದರಿಕೆ ಹಾಕಿ ಸಿಕ್ಕಿಬಿದ್ದ ದರ್ಶನ್ ಬಾಡಿಗಾರ್ಡ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಕೊಂಚ ಸುಳಿವು ಸಿಕ್ಕರು ಅದನ್ನು ಬಿಡದೆ ಹುಡುಕಿ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಹಲವನ್ನು ವಿಚಾರಣೆ ನಡೆಸಿದ್ದು ಆರೋಪಿಗಳಿಗೆ ಶಿಕ್ಷೆ ನೀಡಿಯೇ ಸಿದ್ದ ಎಂದು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಪ್ರಕರಣದಲ್ಲಿ ಯಾವುದೇ ಪ್ರಮುಖ ವ್ಯಕ್ತಿಗಳು ಬಂದರು ಪೊಲೀಸರು ಮಾತ್ರ ಕೊಂಚವು ಹಿಂಜರಿಯದೆ ಇಂಚಿಂಚೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೊಲೆ ಕೇಸ್ ನಲ್ಲಿ ಈಗಾಗಲೇ ಪೊಲೀಸರ ಕೈಗೆ ಹಲವು ಪ್ರಮುಖ ಮಾಹಿತಿ ಸಿಕ್ಕಿದೆ. ಮೊಬೈಲ್ ನಲ್ಲಿ ಡಿಲೀಡ್ ಮಾಡಲಾದ ಪ್ರತಿಯೊಂದು ಸಾಕ್ಷಿಯನ್ನು ರಿಟ್ರೀವ್ ಮಾಡಿದ್ದಾರೆ. ಈ ಮಧ್ಯೆ ಇದೀಗ ದರ್ಶನ್ ಗ್ಯಾಂಗ್‌ ಕೇಸ್‌ಗೆ ಮತ್ತೊಂದು ಸ್ಫೋಟಕ ಸಾಕ್ಷ್ಯ ಪೊಲೀಸರ ಕೈ ಸೇರಿದ್ದು ಇದರಿಂದ ದರ್ಶನ್ ಎಂಡ್ ಗ್ಯಾಂಗ್ ಗೆ ಮತ್ತಷ್ಟು ಸಮಸ್ಯೆಯಾಗುವುದು ಕನ್ಪಾರ್ಮ್ ಆಗಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಬಿಟ್ಟ ಮೇಲೆ ದರ್ಶನ್ ಗ್ಯಾಂಗ್‌ನಿಂದ ಸಾಕ್ಷಿ ನಾಶಕ್ಕೆ ಸಾಕಷ್ಟು ಪ್ರಯತ್ನಗಳು ನಡೆದಿದೆ. ದರ್ಶನ್ ಬಾಡಿಗಾರ್ಡ್‌ನಿಂದಲೇ ಸಾಕ್ಷಿ ನಾಶಕ್ಕೆ ಹುನ್ನಾರ ನಡೆದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಏನ್ ಸಿ ಆರ್ ದಾಖಲಾಗಿತ್ತು.

ದರ್ಶನ್ ಬಾಡಿಗಾರ್ಡ್ ನಾಗೇಶ್ ಸಾಕ್ಷಿ ಹೇಳದಂತೆ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದರಂತೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿ ಬಾಡಿಗಾರ್ಡ್ ನಾಗೇಶ್ ವಿರುದ್ಧ ದೂರು ನೀಡಿದ್ದಾರೆ. ಆ ವ್ಯಕ್ತಿ ದರ್ಶನ್ ಗ್ಯಾಂಗ್‌ನಿಂದ ನಾಶ ಮಾಡಲಾಗಿದ್ದ ಬಟ್ಟೆ ಸಂಬಂಧ ಸಾಕ್ಷಿ ನುಡಿಯಲು ಬಂದಿದ್ದರು. ಈ ವೇಳೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ 100 ಮೀಟರ್ ದೂರದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕೃತ್ಯದ ವೇಳೆ ಬಿಸಾಡಿದ್ದ ಬಟ್ಟೆಗಳ ಕುರಿತು ಬಾಯಿ ಬಿಡದಂತೆ ಸಾಕ್ಷಿಗೆ ಬಾಡಿಗಾರ್ಡ್‌ ನಾಗೇಶ್ ಬೆದರಿಕೆ ಹಾಕಿದ್ದಾರೆ. ಬಟ್ಟೆ ಬಗ್ಗೆ ಬಾಯಿ ಬಿಟ್ಟರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದಿದ್ದು ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿತ್ತು. ನಾಗೇಶ್ ನನ್ನು ಕರೆಸಿಕೊಂಡು ವಿಚಾರಣೆ ಮಾಡಿದ್ದ ಪೊಲೀಸರು ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ವಾಪಸ್ ಕಳುಹಿಸಿದ್ದಾರಂತೆ.

Death: ಪಾರ್ಕ್‌ನಲ್ಲಿ ಮಲಗಿದ್ದ ವೇಳೆ ಬೃಹತ್ ಮರ ಬಿದ್ದು 31ರ ಯುವಕ ಸಾವು!

0

ಬೆಂಗಳೂರು:- ರಾಜಾಜಿನಗರದ ನವರಂಗ್ ಬಳಿ ಇರುವ ಪಾಲಿಕೆ ಪಾರ್ಕ್‌ನಲ್ಲಿ ಮಲಗಿದ್ದವನ ಮೇಲೆ ಬೃಹತ್ ಮರ ಬಿದ್ದ ಪರಿಣಾಮ 31 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಜರುಗಿದೆ.

ಲಕ್ಷ್ಮಣ್ ಮೃತ ದುರ್ದೈವಿ ಎನ್ನಲಾಗಿದೆ. ಲಕ್ಷ್ಮಣ್ ಪಾಲಿಕೆಯ ಕಸದ ಗಾಡಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಭಾನುವಾರ ಸಂಜೆ ಕೆಎಎಲ್‌ಇ ಮೈದಾನದ ಬಳಿ ಇರುವ ಬಿಬಿಎಂಪಿ ಪಾರ್ಕ್‌ನಲ್ಲಿ ಮಲಗಿದ್ದ ವೇಳೆ ಬೃಹತ್ ಮರ ಬಿದ್ದಿದೆ.

ಮರ ಬಿದ್ದ ಪರಿಣಾಮ ಲಕ್ಷ್ಮಣ್ ಎದೆ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋವಿನಿಂದಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಧರ್ಮ ಕೀರ್ತಿರಾಜ್: ಕಣ್ಣೀರು ಹಾಕಿದ ಸಹ ಸ್ಪರ್ಧಿಗಳು

ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದ ನಟ ಧರ್ಮ ಕೀರ್ತಿರಾಜ್ 9ನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಈ 9 ವಾರಗಳ ಕಾಲ ತಮ್ಮ ಸೈಲೆಂಟ್ ನೇಚರ್ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದ ಧರ್ಮ ಕೀರ್ತಿರಾಜ್ ಆಟದಲ್ಲಾಗಲೀ, ಮನರಂಜನೆ ನೀಡುವುದರಲ್ಲಾಗಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಎಡವಿದ್ದರು. ಇದೀಗ ಧರ್ಮ ಕೀರ್ತಿರಾಜ್ ಬಿಗ್​ಬಾಸ್​ ಮನೆಯಿಂದ ಬೇಸರದ ಮನಸ್ಸಿನಿಂದಲೇ ಹೊರ ಬಂದಿದ್ದಾಋಎ.

ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್​ ಆಗಿದ್ದರು. ಕೊನೆಯ ಕ್ಷಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಧರ್ಮ ಕೀರ್ತಿರಾಜ್​ ಮಾತ್ರ ಉಳಿದುಕೊಂಡಿದ್ದರು. ಇದಾದ ಬಳಿಕ ಕಿಚ್ಚ ಸುದೀಪ್​ ಮನೆಯಿಂದ ಆಚೆ ಬರೋ ಸ್ಪರ್ಧಿ ಎಂದು ಧರ್ಮ ಕೀರ್ತಿರಾಜ್ ಅವರ ಹೆಸರು ಹೇಳಿದ್ದರು.

ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಹೇಳುತ್ತಿದ್ದಂತೆ ಎಲ್ಲಾ ಸ್ಪರ್ಧಿ ಬೇಸರಗೊಂಡರು. ಅಲ್ಲದೇ ಐಶ್ವರ್ಯ, ತ್ರಿವಿಕ್ರಮ್​, ಭವ್ಯಾ ಗೌಡ ಕಣ್ಣೀರು ಹಾಕಿದ್ದಾರೆ. ಇದಾದ ಬಳಿಕ ಬಿಗ್​ಬಾಸ್​ ಮನೆಯಿಂದ ಆಚೆ ಬಂದು ಕಿಚ್ಚ ಸುದೀಪ್​ ಅವರನ್ನು ಭೇಟಿಯಾಗಿಯೂ ಧರ್ಮ ಅವರು ಬೇಸರ ಹೊರ ಹಾಕಿದ್ದಾರೆ.

ಈ ವಾರ ಧರ್ಮ ಕೀರ್ತಿರಾಜ್​ ಅವರೇ ಹೊರಗೆ ಹೋಗುತ್ತಾರೆ ಎಂದು ವೀಕ್ಷಕರು ಕೂಡ ಊಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ಪ್ರೋಮೋದಲ್ಲಿ ಕೂಡ ಧರ್ಮ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದರೆ, ಅವರು ಹೈಲೈಟ್​ ಆಗುವಂತಹ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಅವರು ಎಲಿಮಿನೇಟ್​ ಆಗಿದ್ದರಲ್ಲಿ ಅಚ್ಚರಿ ಇಲ್ಲ ಎಂದು ವೀಕ್ಷಕರು ಹೇಳಿದ್ದಾರೆ.

‘ಕಾಂತಾರ’ ಚಿತ್ರದ ಕಲಾವಿದರು ತೆರಳುತ್ತಿದ್ದ ಮಿನಿ ಬಸ್ ಪಲ್ಟಿ: 6 ಜನರಿಗೆ ಗಂಭೀರ ಗಾಯ

ಡಿವೈನ್ ಸ್ಟಾರ್ ರಿಷಬ್ ​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬ್ಯುಸಿ ಶೆಡ್ಯೂಲ್ ನಲ್ಲಿ ಶೂಟಿಂಗ್ ನಡೆಸುತ್ತಿರುವ ಕಾಂತಾರ ಚಿತ್ರತಂಡಕ್ಕೆ ಶಾಕಿಂಗ್ ನ್ಯೂಸ್ ಕೇಳಿ ಬಂದಿದೆ. ಕಾಂತಾರ ಸಿನಿಮಾ ತಂಡದವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿದೆ. ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಕಾಂತಾರಾ ಶೂಟಿಂಗ್ ಗಾಗಿ ಜ್ಯೂನಿಯರ್​ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್​ ಪಲ್ಟಿ ಆಗಿದೆ. ಬಸ್​ನಲ್ಲಿ 20 ಜನ ಪ್ರಯಾಣಿಸುತ್ತಿದ್ದು ಅವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರಾವಳಿ ಸುತ್ತಮುತ್ತ ಕಾಂತಾರ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಜೂನಿಯರ್ ಕಲಾವಿದರನ್ನು ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. 20 ಜ್ಯೂನಿಯರ್ ಕಲಾವಿದರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದು ಆ ಪೈಕಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್​ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್​ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್​ ಆಗಿ ‘ಕಾಂತಾರ: ಚಾಪ್ಟರ್​ 1’ ಸಿನಿಮಾ ಮೂಡಿಬರುತ್ತಿದೆ. ಬಸ್​ ಪಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದ್ದು ಸದ್ಯದ ಮಟ್ಟಿಗೆ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ.

ಮುಂದಿನ ತಿಂಗಳು ಆಪರೇಷನ್ ಗಾಗಿ ಯುಎಸ್ಎಗೆ ಹೋಗುತ್ತಿದ್ದೇನೆ: ನಟ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಆರೋಗ್ಯದ ಕುರಿತು ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಶಿವರಾಜ್ ಕುಮಾರ್ ವಿದೇಶದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಸ್ಪಷ್ಟನೆನೀಡಿದ್ದು ಮುಂದಿನ ತಿಂಗಳು ಆಪರೇಷನ್ ಇದ್ದು ಯುಎಸ್‌ಎಗೆ ಹೋಗುತ್ತಿದ್ದೇನೆ. ಸದ್ಯ ಆರೋಗ್ಯ ಸುಧಾರಿಸಿದೆ ಎಂದಿದ್ದಾರೆ.

ಭೈರತಿ ರಣಗಲ್ ಸಿನಿಮಾದ ಗ್ರಾಂಡ್ ಸಕ್ಸಸ್‌ನಲ್ಲಿರುವ ನಟ ಶಿವರಾಜ್ ಕುಮಾರ್ ಇಂದು ಪತ್ನಿ ಸಮೇತ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಗೋಪಿ ವೃತ್ತದಲ್ಲಿರುವ ಮಲ್ಲಿಕಾರ್ಜುನ್ ಚಿತ್ರಮಂದಿರಕ್ಕೆ ಆಗಮಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಭೈರತಿ ರಣಗಲ್ ಸಿನಿಮಾದ ಸಕ್ಸಸ್ ಸಂಭ್ರಮಿಸಿದ್ದಾರೆ.

ಶಿವರಾಜ್ ಕುಮಾರ್ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು ಚಿತ್ರಮಂದಿರ ಬಳಿ ಬೆಳಗ್ಗೆಯಿಂದಲೂ ಕಾಯುತ್ತಿದ್ದರು. ಬೈರತಿ ರಣಗಲ್ ಸ್ಟೈಲ್‌ನಲ್ಲಿ ಕ್ಯಾಸ್ಟ್ಯೂಮ್ ಹಾಕಿಕೊಂಡು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಆಗಮನಕ್ಕಾಗಿ ಕಾಯುತ್ತಿದ್ದ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿದರು.

ಶಿವರಾಜ್ ಕುಮಾರ್ ದಂಪತಿ ಗೋಪಿ ಸರ್ಕಲ್‌ಗೆ ಬರುತ್ತಲೇ ಅಭಿಮಾನಿಗಳು ಘೋಷಣೆಯನ್ನು ಕೂಗಿದರು. ಚಿತ್ರತಂಡದ ಜೊತೆಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಎಂಟ್ರಿಕೊಟ್ಟ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ

ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸಿನಿಮಾ ಆರಂಭಕ್ಕೂ ಮುನ್ನವೇ ಕುತೂಹಲ ಕೆರಳಿಸಿರುವ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸದ್ಯ ಮುಂಬೈನಲ್ಲಿ ನಡೆಯುತ್ತಿದೆ. ಸಿನಿಮಾದಲ್ಲಿ ನಟಿ ಕಿಯಾರಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೀಗ ಮತ್ತೋರ್ವ ಸ್ಟಾರ್ ನಟಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮುಂಬೈನಲ್ಲಿ ನಡೆಯುತ್ತಿದ್ದ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ನಟಿ ಹುಮಾ ಖುರೇಶಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ‘ಟಾಕ್ಸಿಕ್’ ಸಿನಿಮಾಗೆ ನಟಿ ಎಂಟ್ರಿ ಕೊಟ್ಟಿರುವ ಬಗ್ಗೆ ಚರ್ಚೆ ಶುರುವಾಗಿದೆ. ಸೆಟ್‌ಗೆ ಬರುತ್ತಿರುವ ನಟಿಯ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಹುಮಾ ಖುರೇಶಿ ನಟಿಸುತ್ತಿರುವ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಮಲಯಾಳಂ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಸಂಸ್ಥೆ ಜೊತೆ ಯಶ್ ಕೂಡ ಜಂಟಿಯಾಗಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಆ.8ರಂದು ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಸರಳವಾಗಿ ಜರುಗಿತ್ತು. ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಟಾಕ್ಸಿಕ್ ಸಿನಿಮಾವೂ ಡ್ರಗ್ಸ್ ಮಾಫಿಯಾ ಕುರಿತಾದ ಕಥೆ ಎನ್ನಲಾಗುತ್ತಿದೆ.

 

ಜನಾಂಗೀಯ ಹಿಂಸಾಚಾರಕ್ಕೆ ಪಾಕಿಸ್ತಾನದಲ್ಲಿ 37 ಮಂದಿ ಸಾವು

0

ಬುಡಕಟ್ಟುಗಳ ನಡುವೆ ನಡೆದ ಘರ್ಷಣೆಯಲ್ಲಿ 37 ಮಂದಿ ಮೃತಪಟ್ಟಿದ್ದು 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ನಡೆದಿದೆ.

ಬಳಿಕ ಕುರ್ರಮ್ ಜಿಲ್ಲೆಯಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಜನಾಂಗೀಯ ಹಿಂಸೆ ಭುಗಿಲೆದ್ದಿದೆ. ಈ ವೇಳೆ ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾದ ಪರಾಚಿನಾರ್ ನಗರದಲ್ಲಿ ಹಲವು ವಾಹನಗಳ ಮೇಲೆ ಗುಂಡಿನ ದಾಳಿ ನಡೆದಿದ್ದು 47 ಮಂದಿ ಸಾವನ್ನಪ್ಪಿದ್ದರು.

ಘಟನೆಯಲ್ಲಿ ಹಲವಾರು ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು ಸ್ಥಳೀಯರು ಸುರಕ್ಷಿತ ಪ್ರದೇಶಕ್ಕೆ ಪಲಾಯನ ಮಾಡಿದ್ದಾರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಖೈಬರ್ ಪಖ್ತೂಂಕ್ವಾದ ಕಾನೂನು ಸಚಿವ, ಸರಕಾರದ ಮುಖ್ಯ ಕಾರ್ಯದರ್ಶಿ ಐಜಿಪಿ ಹಾಗೂ ಪೊಲೀಸರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ JDS ಕಾರ್ಯಕರ್ತನ ಮನೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ!

0

ರಾಮನಗರ: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕೈ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನೂ ಗೆದ್ದೇ ಗೆಲ್ಲುತ್ತಾರೆ ಎಂದು ಕೊಂಡಿದ್ದ ನಿಖಿಲ್ ಸೋಲನ್ನ ಅನುಭವಿಸಿದ್ದು, ಭಾರೀ ಮುಖಭಂಗ ತಂದಿದೆ.

ಇನ್ನೂ ಫಲಿತಾಂಶ ಹೊರ ಬೀಳುತ್ತಿದ್ದಂತೆ ನಿಖಿಲ್ ಅಭಿಮಾನಿ ಓರ್ವ ಆತ್ಮಹತ್ಯೆಗೆ ಮುಂದಾಗಿದ್ದನು. ಇನ್ನೂ ಆತ್ಮಹತ್ಯೆಗೆ ಯತ್ನಿಸಿದ್ದ ಚನ್ನಪಟ್ಟಣದ ಶ್ರೀರಾಂಪುರ ಗ್ರಾಮದ ಮಂಜುನಾಥ್​ ನಿವಾಸಕ್ಕೆ ಭೇಟಿ ನೀಡಿದರು. ಆರೋಗ್ಯ ವಿಚಾರಿಸಿ, ಯುವಕನಿಗೆ ಧೈರ್ಯ ತುಂಬಿ, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಕಿವಿಮಾತು ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ಇಲ್ಲಿ ನಮ್ಮ ಪಕ್ಷಕ್ಕೆ ದೊಡ್ಡಮಟ್ಟದ ಅಭಿಮಾನ ಇದೇ. ಹುಚ್ಚು ಅಭಿಮಾನದಿಂದ ಜೆಡಿಎಸ್ ಪಕ್ಷವನ್ನ ಕಟ್ಟಿದ್ದಾರೆ. ಹಾಗಾಗಿ ನಾವು ಕಾರ್ಯಕರ್ತರ ಜೊತೆಗೆ ಇರುತ್ತೇವೆ. ಯಾರು ಸಹ ತಮ್ಮ ಕುಟುಂಬಕ್ಕೆ ನೋವು ಕೊಡಬೇಡಿ. ನಿಮ್ಮ ಜತೆಗೆ ಸದಾ ಇರುತ್ತೇನೆ. ಯಾರು ಸಹ ಕೆಟ್ಟ ನಿರ್ಧಾರ ಮಾಡಬೇಡಿ ಎಂದು ಮನವಿ ಮಾಡಿದರು.

ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಜಾಮೀನು ರದ್ದತಿಗೆ ಮನವಿ ಮಾಡುತ್ತೇವೆ – ಜಿ.ಪರಮೇಶ್ವರ್

0

ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿರುವ ಫೋಟೋಗಳನ್ನು ರಿಟ್ರೀವ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಫ್​ಎಸ್​ಎಲ್ ರಿಪೋರ್ಟ್​ಗೆ ಹೈದರಾಬಾದ್​ಗೆ ಕಳಿಸಿದ್ದೆವು.

ಘಟನಾ ಸ್ಥಳದಲ್ಲಿ ಫೋಟೋ ಸಿಕ್ಕಿದೆ. ಯಾರೋ ಜೊತೆಯಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಅದನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ ಜಾಮೀನು ರದ್ದತಿಗೆ ಮನವಿ ಮಾಡಲಾಗುವುದು. ಮುಂದಿನ ಕ್ರಮ ಕೈಗೊಳ್ಳಲು ತನಿಖೆ ಆಗ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ನಟ ದರ್ಶನ್​ಗೆ ಆಪರೇಷನ್ ಆಗದ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಆಪರೇಷನ್ ಆಗತ್ಯ ಇಲ್ಲ ಎಂದು ಗೊತ್ತಾಗ್ತಿದೆ. ಅವರು ನಾಳೆ ನಾಡಿದ್ದು ಆಪರೇಷನ್ ಮಾಡಿಲ್ಲ ಅಂದ್ರೆ ಬೆನ್ನು ಮೂಳೆ ಮುರಿದುಹೋಗುತ್ತದೆ ಅಂತ ಹೇಳಿದ್ರು. ಇಷ್ಟು ದಿನ ಆದರೂ ವೈದ್ಯರು ಆಪರೇಷನ್ ಮಾಡಿಲ್ಲ. ಕೋರ್ಟ್ ವ್ಯವಸ್ಥೆಯಲ್ಲಿ ತೀರ್ಮಾನ ಕೊಡಬೇಕು ಎಂದು ಹೇಳಿದರು.

ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಗೆ ಉಪಾಧ್ಯಕ್ಷರಿಂದಲೇ ಜೀವ ಬೆದರಿಕೆ

0

ಮನಿಲಾ ಉಪಾಧ್ಯಕ್ಷೆ ಸಾರಾ ಡ್ಯುಟರ್ಟ್ ಅವರು ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಅಧ್ಯಕ್ಷರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಸಾಕಷ್ಟು ಬಿಗಿಗೊಳಿಸಲಾಗಿದೆ ಎಂದು ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್‍ರ ಕಚೇರಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ತನ್ನ ಹತ್ಯೆಗೆ ಪಿತೂರಿ ನಡೆದಿದ್ದು ಒಂದು ವೇಳೆ ಇದರಲ್ಲಿ ಅವರು(ಪಿತೂರಿ ಮಾಡಿದವರು) ಯಶಸ್ವಿಯಾದರೆ ಅಧ್ಯಕ್ಷರನ್ನು ಕೊಲ್ಲುವಂತೆ ತನ್ನ ಭದ್ರತಾ ತಂಡಕ್ಕೆ ಸೂಚಿಸಿರುವುದಾಗಿ ಡ್ಯುಟರ್ಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

`ನನ್ನ ಭದ್ರತಾ ಸಿಬ್ಬಂದಿಯ ಜತೆ ಈಗಾಗಲೇ ಮಾತನಾಡಿದ್ದೇನೆ. ಒಂದು ವೇಳೆ ನನ್ನ ಹತ್ಯೆಯಾದರೆ ತಕ್ಷಣ ಫರ್ಡಿನಾಂಡೊ ಮಾಕ್ರೋಸ್, ಅವರ ಪತ್ನಿ ಲಿಝಾ ಅರನೆಟಾ ಮತ್ತು ಅಧ್ಯಕ್ಷರ ಸೋದರ ಸಂಬಂಧಿ ಮಾರ್ಟಿನ್ ರೊಮುಲ್ಡಜ್‍ರನ್ನು ಕೊಲ್ಲುವಂತೆ ತಿಳಿಸಿದ್ದೇನೆ. ಇದು ತಮಾಷೆಯಲ್ಲ’ ಎಂದು ಡ್ಯುಟರ್ಟ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಸುದ್ದಿಗೋಷ್ಠಿಯ ಬಳಿಕ ಪ್ರತಿಕ್ರಿಯಿಸಿರುವ ಅಧ್ಯಕ್ಷರ ಭವನದ ಸಂವಹನಾ ಕಚೇರಿ `ಈ ಸಕ್ರಿಯ ಬೆದರಿಕೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರ ಭದ್ರತಾ ಕಮಾಂಡ್‍ಗೆ ಸೂಚಿಸಲಾಗಿದೆ. ಅಧ್ಯಕ್ಷರ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅದರಲ್ಲೂ ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ, ಸ್ಪಷ್ಟವಾಗಿ ಬೆದರಿಕೆ ಒಡ್ಡಲಾಗಿದೆ’ ಎಂದಿದೆ.

error: Content is protected !!