Home Blog Page 2064

ಗೌತಮ್ ಅದಾನಿ, ಸಾಗರ್ ಅದಾನಿಗೆ ಸಮನ್ಸ್ ಜಾರಿ: 21 ದಿನದಲ್ಲಿ ಉತ್ತರಿಸಲು ಸೂಚನೆ

0

ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಆರೋಪ ಕೇಳಿಬಂದಿದೆ. ಗೌತಮ್‌ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ ಹೆಚ್ಚು ಲಂಚದ ಭರವಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ವಿವರಣೆ ಕೋರಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಅಹ್ಮದಾಬಾದ್ ನಲ್ಲಿರುವ ಅದಾನಿ ಅವರ ಶಾಂತಿವನ ನಿವಾಸಕ್ಕೆ ಮತ್ತು ಅದೇ ನಗರದಲ್ಲಿನ ಅವರ ಸೋದರಳಿಯ ಸಾಗರ್ ಅವರ ನಿವಾಸಕ್ಕೆ ಸಮನ್ಸ್ ಕಳುಹಿಸಲಾಗಿದೆ. ಈ ಸಮನ್ಸ್ ನೀಡಿದ 21 ದಿನಗಳಲ್ಲಿ ನೀವು ಕಡ್ಡಾಯವಾಗಿ ಉತ್ತರವನ್ನು ಸಲ್ಲಿಸಬೇಕು ಎಂದು ನ್ಯೂಯಾರ್ಕ್ ಪೂರ್ವ ಜಿಲ್ಲಾ ನ್ಯಾಯಾಲಯ ನೋಟಿಸ್ ನಲ್ಲಿ ಉಲ್ಲೇಖಿಸಿದೆ.

ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ನಿರ್ದೇಶಕರಾಗಿರುವ ಅವರ ಸೋದರಳಿಯ ಸಾಗರ್ ಸೇರಿದಂತೆ ಇತರ 7 ಆರೋಪಿಗಳು 2020 ಮತ್ತು 2024ರ ನಡುವೆ ಸೌರ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಅದಾನಿ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

ಒಂದು ವರ್ಷದ ಮಗು ಅಪಹರಣ ಪ್ರಕರಣ ಸುಖಾಂತ್ಯ: ತಾಯಿ ಮಡಿಲಿಗೆ ಸೇರಿದ ಮಗು

0

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದ ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಖಾಂತ್ಯ ಕಂಡಿದೆ. ನಿನ್ನೆ ಬೆಳಿಗ್ಗೆ 11-30 ರ ಸುಮಾರಿಗೆ ವಾರ್ಡ್ ನಂಬರ್ 123 ರ ಬಳಿಯಿಂದ ಅಪರಿಚಿತ ವ್ಯಕ್ತಿ ಮಗುವನ್ನು ಎತ್ತೊಯ್ದಿದ್ದನು. ನಂತರ ಇಂದು ಮದ್ಯಾಹ್ನ 1-30 ರ ಸುಮಾರಿಗೆ ಜಿಲ್ಲಾಸ್ಪತ್ರೆಗೆ ಬಂದ ಅನಾಮಿಕ ಮಗುವನ್ನು ಒಪ್ಪಿಸಿದ್ದಾನೆ.

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಹರಿಜನ ಎಂಬ ವ್ಯಕ್ತಿಯು ಮಗುವನ್ನು ಆಟವಾಡಿಸಲು ಎತ್ತುಕೊಂಡಿದ್ದಾಗ ಕಾಲ್ ಬಂದಿತ್ತು. ಮಾತನಾಡುತ್ತಾ ಹಾಗೇ ಮಗುವನ್ನು ಕರೆದುಕೊಂಡು ಹೋದೆ ಎಂದು ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಸದ್ಯ ಮಗು ತಾಯಿಯ ಮಡಿಲು ಸೇರಿದ್ದು,  ರವಿ ಹರಿಜನ ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಗುವಿನ ಅಪಹರಣ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ 50 ಲಕ್ಷ ಹಿಂಬಾಲಕರಿದ್ದರು ಹೊಂದಿರುವ ನಟ ಗಳಿಸಿದ್ದ 131 ಮತ:ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಅಜಾಜ್ ಖಾನ್

ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ, ಬಾಲಿವುಡ್ ನಟ ಅಜಾಜ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಈ ಬಾರಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟ ಭರ್ಜರಿ ಪ್ರಚಾರ ಮಾಡಿದ್ದರು. ಆದ್ರೆ ಇದೀಗ ಹೀನಾಯವಾಗಿ ಸೋಲು ಕಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಮಾರು 50 ಲಕ್ಷ ಹಿಂಬಾಲಕರನ್ನು ಹೊಂದಿರುವ ನಟ ಚುನಾವಣೆಯಲ್ಲಿ ಗಳಿಸಿರುವುದು ಕೇವಲ 131 ಮತ.

ವರ್ಸೋವಾ ಕ್ಷೇತ್ರದಲ್ಲಿ ಶೇ.42ರಷ್ಟು ಮತದಾನವಾಗಿದ್ದು ಶಿವಸೇನೆಯ ಯುಬಿಟಿ ಬಣದ ಹರೂನ್ ಖಾನ್ ಜಯಗಳಿಸಿದ್ದಾರೆ. ಅಜಾಜ್ 131 ಮತ ಪಡೆದರೆ, ನೋಟಾಗೆ 1022 ಮತ ಬಂದಿವೆ. ಇದು ಅಜಾಜ್‌ಗೆ ಸಿಕ್ಕ ಮತಕ್ಕಿಂತ 6 ಪಟ್ಟು ಅಧಿಕ.

ಏಜಾಜ್ ಖಾನ್ 2003 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಬಹುತೇಕ ವಿಲನ್ ಪಾತ್ರಗಳಲ್ಲಿಯೇ ಏಜಾಜ್ ಖಾನ್ ಹೆಚ್ಚಾಗಿ ನಟಿಸಿದ್ದಾರೆ. ‘ರಕ್ತ ಚರಿತ್ರ’, ಜೂ ಎನ್​ಟಿಆರ್ ನಟನೆಯ ‘ಬಾದ್​ಶಾ’, ‘ಟೆಂಪರ್’, ರಾಮ್ ಚರಣ್ ನಟನೆಯ ‘ವಿನಯ ವಿಧೇಯ ರಾಮ’ ಕನ್ನಡದಲ್ಲೂ ಬಿಡುಗಡೆ ಆಗಿದ್ದ ‘ರೋಗ್’ ಇನ್ನೂ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. 2018 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದ ಏಜಾಜ್ ಖಾನ್ 26 ತಿಂಗಳ ಕಾಲ ಜೈಲು ವಾಸ ಸಹ ಅನುಭವಿಸಿದ್ದಾರೆ.

ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾಗುವ ವೇಳೆಗೆ ತಮ್ಮ ವಿಡಿಯೋ, ಭಾಷಣ, ವಿವಾದಗಳ ವಿಡಿಯೋಗಳನ್ನು ಹಂಚಿಕೊಂಡು ಭಾರಿ ಸಂಖ್ಯೆಯ ಫಾಲೋವರ್​ಗಳನ್ನು ಏಜಾಜ್ ಖಾನ್ ಪಡೆದುಕೊಂಡಿದ್ದಾರೆ. 56 ಲಕ್ಷ ಜನ ಏಜಾಜ್ ಖಾನ್ ಅವರನ್ನು ಫಾಲೋ ಮಾಡುತ್ತಾರೆ. ಆದರೆ ಚುನಾವಣೆಯಲ್ಲಿ ಅವರಿಗೆ ಕೇವಲ 155 ಮತಗಳು ಮಾತ್ರ ಸಿಕ್ಕಿವೆ. ಅದೇ ಕ್ಷೇತ್ರದಲ್ಲಿ ನೋಟಾಗೆ ಅವರಿಗಿಂತಲೂ ಹತ್ತು ಪಟ್ಟು ಹೆಚ್ಚು ಮತಗಳು ದೊರೆತಿವೆ. ನೋಟಾಗೆ 1298 ಮತಗಳು ಬಂದಿವೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಏಜಾಜ್ ಖಾನ್​ಗಿಂತಲೂ ಕಡಿಮೆ ಮತ ಪಡೆದ ಐದು ಅಭ್ಯರ್ಥಿಗಳಿದ್ದಾರೆ. ಒಟ್ಟು 19 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಶಿವಸೇನೆಯ ಹರೂನ್ ಖಾನ್ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.


 

ಬಿಜೆಪಿಯಲ್ಲಿ ಕಾಂಗ್ರೆಸ್ʼಗಿಂತ ಡಬಲ್ ಕುಟುಂಬ ರಾಜಕಾರಣ ಇದೆ: ಬಿ.ಕೆ.ಹರಿಪ್ರಸಾದ್

0

ಮಂಗಳೂರು: ಬಿಜೆಪಿಯಲ್ಲಿ ಕಾಂಗ್ರೆಸ್ʼ​​ಗಿಂತ ಡಬಲ್​ ಕುಟುಂಬ ರಾಜಕಾರಣ ಇದೆ ಎಂದು ಕಾಂಗ್ರೆಸ್ ಎಂಎಲ್​ಸಿ ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಕಾಂಗ್ರೆಸ್​​ಗಿಂತ ಡಬಲ್​ ಕುಟುಂಬ ರಾಜಕಾರಣ ಇದೆ. ಒಂದೊಂದು ಕುಟುಂಬದಲ್ಲಿ 10 ಜ‌ನರು ರಾಜಕಾರಣದಲ್ಲಿ ಇದ್ದಾರೆ. ಕಾಂಗ್ರೆಸ್​ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಾರೆ.

ಬಿಜೆಪಿಯವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡದೆ, ನಮ್ಮ ತಟ್ಟೆಯ ನೊಣ ನೋಡುತ್ತಿದ್ದಾರೆ. ನಾವು ಕೊಟ್ಟಿರುವ ಕಾರ್ಯಕ್ರಮಗಳಿಂದ ಶಿಗ್ಗಾಂವಿಯಲ್ಲಿ ಗೆದ್ದಿದ್ದೇವೆ. ನಾವು ಕಾಂಗ್ರೆಸ್​​ ಪಕ್ಷದವರು ಗೂಬೆ ಅಲ್ಲ ಅಂತ ಬಿಜೆಪಿಗೆ ಗೊತ್ತಿಲ್ಲ. ಇಡಿ, ಐಟಿ ಬಳಸಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಸಿಎಂ ಬದಲಾಗುತ್ತಾರೆ ಅಂತಾ ಕೆಲವರು ತಿರುಕನ ಕನಸು ಕಾಣುತ್ತಿದ್ದರು. ಅಪ್ಪನ ತೆಕ್ಕೆಯಲ್ಲಿ ಬೆಳೆದವರು ಹೇಳಿದ ಹಾಗೆ ಆಗಲ್ಲ. ಸಿಎಂ ಬದಲಾವಣೆ ಯಡಿಯೂರಪ್ಪನವರ ಸಹಿ ಮಾಡಿದ ಹಾಗೇ ಅಲ್ಲ. ಚುನಾವಣಾ ಆಯೋಗ ಬಿಜೆಪಿಯ ಅಂಗವಾಗಿ ಬಿಟ್ಟಿದೆ ಎಂದು ಹೇಳಿದ್ದಾರೆ.

ಯಾದಗಿರಿ: ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ..! ಗ್ರಾಮಸ್ಥರಲ್ಲಿ ಆತಂಕ

0

ಯಾದಗಿರಿ: ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದಲ್ಲಿ ನಡೆದಿದೆ. ಬೃಹತ್ ಗಾತ್ರದ ಮೊಸಳೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಮೊಸಳೆ ಸೆರೆ ಹಿಡಿಯಲು ಗ್ರಮಸ್ಥರು ಹರಸಾಹಸ ಪಟ್ಟಿದ್ದಾರೆ.

ಮೀನುಗಾರರ ಸಹಾಯದಿಂದ ಗ್ರಾಮಸ್ಥರು ಮೊಸಳೆ ಸೆರೆಹಿಡಿದ್ದಾರೆ. ನಂತರ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಣಿಡಿ ಪರಿಶೀಲನೆ ನಡೆಸಿದ್ದಾರೆ. ತದನಂತರ ಮೊಸಳೆಯನ್ನು ರಕ್ಷಿಸಿ ನಾರಾಯಣಪುರ ಜಲಾಶಯಕ್ಕೆ ಬಿಟ್ಟಿದ್ದಾರೆ.ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಸಿ.ಪಿ.ಯೋಗೇಶ್ವರ್ ಗೆಲುವಿಗೆ JDS, BJPಯವರು ಬೆಂಬಲಿಸಿದ್ದಾರೆ: ಡಿಕೆ ಶಿವಕುಮಾರ್ ಹೊಸ ಬಾಂಬ್‌

0

ರಾಮನಗರ: ಸಿ.ಪಿ.ಯೋಗೇಶ್ವರ್ ಗೆಲುವಿಗೆ ಜೆಡಿಎಸ್​, ಬಿಜೆಪಿಯವರು ಬೆಂಬಲಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್‌ ಸಿಡಿಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿನವರೂ ಸಪೋರ್ಟ್ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂದ್ರು, ಇದರ ಅರ್ಥ ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಮೇಲೆ ಈಗ ಕ್ಷೇತ್ರದ ಜನರ ಸಾಲ ಇದೆ, ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ, ನಮ್ಮೆಲ್ಲ ನಾಯಕರು, ಮತದಾರಿಗೆ ಸಲ್ಲಬೇಕು. ಕ್ಷೇತ್ರ ಖಾಲಿ ಆದಾಗಿನಿಂದ ಸಾಕಷ್ಟು ಪ್ರವಾಸ ಮಾಡಿದ್ವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಅನುಷ್ಠಾನ ಮಾಡಬೇಕು. ನಾನು ಯೋಗೇಶ್ವರ್, ಇಬ್ಬರೂ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ.

ಅಧಿಕಾರದ ದಾಹಕ್ಕೆ ದೇವೇಗೌಡರು ರಾಜಕಾರಣ ಮಾಡ್ತಿಲ್ಲ: ನಿಖಿಲ್‌ ಕುಮಾರಸ್ವಾಮಿ

0

ಬೆಂಗಳೂರು: ಅಧಿಕಾರದ ದಾಹಕ್ಕೆ ದೇವೇಗೌಡರು ರಾಜಕಾರಣ ಮಾಡ್ತಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ದೇವೇಗೌಡ್ರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿವೈ ಹೇಳಿಕೆಗೆ ಮಾತನಾಡಿದ ಅವರು, ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ. ಅವರ ವಯಸ್ಸು 92, ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ ಪ್ರಧಾನಿಯವರೇ ಹೇಳಿದ್ದಾರೆ.

ಇಲ್ಲಿ ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡ್ತಿಲ್ಲ. ಕಳೆದ 62 ವರ್ಷಗಳ ಅವರ ಪ್ರಾಮಾಣಿಕ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅವರು ನಿವೃತ್ತಿ ಹೊಂದಬೇಕಾ? ಮುಂದುವರಿಬೇಕಾ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಕೆರೆಗೆ ಹಾರಿ ಭಾರತೀಯ ಸೇನೆ ಯೋಧ ಆತ್ಮಹತ್ಯೆ!

0

ಬೆಳಗಾವಿ: ಕೆರೆಗೆ ಹಾರಿ ಭಾರತೀಯ ಸೇನೆ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕು ಪರಸನಟ್ಟಿ ಗ್ರಾಮದಲ್ಲಿ ನಡೆದಿದೆ. ಚೆನ್ನಮ್ಮನ ಕಿತ್ತೂರು ತಾಲೂಕು ದೇಗಾಂವ ಗ್ರಾಮದ ಯೋಧ ನರೇಶ ಯಲ್ಲಪ್ಪ ಆಗಸರ(28) ಮೃತ ದುರ್ಧಯವಿಯಾಗಿದ್ದು, ಕಳೆದ ಐದು ವರ್ಷದಿಂದ  ಭಾರತೀಯ ಸೇನೆಯಲ್ಲಿ ಯೋಧ ನರೇಶ ಸೇವೆ ಸಲ್ಲಿಸುತ್ತಿದ್ದರು.

ನರೇಶ ಅವರು 20 ದಿನಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು. ನಿನ್ನೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟ ಅವರು, ಕೆರೆಗೆ ಹಾರಿದ್ದಾರೆ. ವೈವಾಹಿಕ ಜೀವನದಲ್ಲಿ ಏರುಪೇರಿಂದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ‌ ಶಂಕೆಯಾಗಿದ್ದು,

ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್‌ಐ ಪ್ರವೀಣ ಗಂಗೋಳ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳಿಂದ ಮೃತದೇಹದ ಹುಡುಕಾಟ ನಡೆಯುತ್ತಿದೆ. ನಿನ್ನೆ ಸಂಜೆಯಿಂದಲೂ ಕೆರೆಯಲ್ಲಿ ಶೋಧ ಕಾರ್ಯ ಮಾಡಲಾಗುತ್ತಿದೆ.

ಇಂದು ಅಂಬಿ ಪುಣ್ಯಸ್ಮರಣೆ: ಪತಿ ನೆನೆದು ಭಾವುಕರಾದ ಸುಮಲತಾ!

0

ಮಂಡ್ಯದ ಗಂಡು, ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಅವರು ನಮ್ಮನ್ನೆಲ್ಲಾ ಅಗಲಿದ ದಿನವಿಂದು. ಹೀಗಾಗಿ ಪತ್ನಿ ಸುಮಲತಾ ಅವರು ಪತಿ ಅಂಬರೀಶ್ ನೆನೆದು ಭಾವುಕರಾಗಿದ್ದಾರೆ. ಎಲ್ಲೆಲ್ಲಿಯೂ ನೀನೇ.. ಎಂದೆಂದಿಗೂ ನೀನೇ ಎಂದು ಇನ್ಸ್ಟಾಗ್ರಾಮ್‍ನಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಂಬಿ ಸ್ಮಾರಕಕ್ಕೆ ಅವರು ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಸುಮಲತಾ, ಅಂಬಿ ನೆನಪು ಎಲ್ಲಾ ಕಡೆ ಇರುತ್ತೆ. ಎಷ್ಟೋ ವರ್ಷದಿಂದ ಕಾಯ್ತಿದ್ದ, ಮರಿ ರೆಬೆಲ್ ಸ್ಟಾರ್ ಆಗಮನದಿಂದ ಸಂತೋಷ ಗೊಂಡಿದ್ದೇವೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಅಭಿಯಂತೂ ಒಂದು ಕ್ಷಣವೂ ಮಗುನಾ ಬಿಟ್ಟು ಇರಲ್ಲ ಎಂದಿದ್ದಾರೆ.

ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಉಪ ಚುನಾವಣೆಯಲ್ಲಿ ರೂಲಿಂಗ್ ಪಾರ್ಟಿ ಗೆಲ್ಲುವುದನ್ನು ನೋಡುತ್ತ ಬಂದಿದ್ದೇವೆ. ಯಾವುದೇ ಪಾರ್ಟಿ ಇರಲಿ ಗೆಲ್ಲಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೋರಾಡ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ಹೇಳಲ್ಲ. ಅವರು ಇನ್ನೂ ಯುವಕರಿದ್ದಾರೆ, ಒಳ್ಳೆಯ ಭವಿಷ್ಯ ಇದೆ ಎಂದಿದ್ದಾರೆ.

ನಟ ದರ್ಶನ್ʼಗೆ ಮತ್ತೊಂದು ಸಂಕಷ್ಟ: ಕೊಲೆ ನಡೆದ ಸ್ಥಳದಲ್ಲಿ ಪೋಸ್ ನೀಡಿದ ಪೋಟೋಗಳು ವೈರಲ್!

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಪೂರ್ಣಗೊಳಿಸಿರೋ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಸಿಹೆಚ್ 57 ನೇ ನ್ಯಾಯಾಲಯಕ್ಕೆ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯಲ್ಲಿರುವ ದರ್ಶನ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಪೋಟೊ ರಹಸ್ಯ ಬೆಳಕಿಗೆ ಬಂದಿದೆ..ಸಾಕ್ಷಿದಾರನಾಗಿರುವ ಪುನೀತ್ ಮೊಬೈಲ್ ನಲ್ಲಿ ಡಿಲೀಟ್ ಆಗಿದ್ದ ಪೋಟೊಗಳು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ..

ಹೌದು ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಸಾಕ್ಷಿದಾರನ ಮೊಬೈಲ್​ನಿಂದ ಫೋಟೋಗಳನ್ನು ರಿಟ್ರೀವ್ ಮಾಡಿದ್ದಾರೆ. ರಿಲೀಸ್​ ಆದ ಫೋಟೋದಲ್ಲಿ ದರ್ಶನ್​ ರೇಣುಕಾಸ್ವಾಮಿ ಕೇಸ್​ನಲ್ಲಿ A6 ಆರೋಪಿಯಾಗಿ ಕಿಡ್ನಾಪರ್ ಜಗದೀಶ್, A7 ಅನುಕುಮಾರ್ ಹಾಗೂ A8- ಕಾರು ಚಾಲಕ ರವಿ ಇದ್ದಾರೆ. ಸದ್ಯ ಇದೇ ತಿಂಗಳ 26 ಕ್ಕೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಿಗದಿಯಾಗಿದೆ. ರೆಗ್ಯೂಲರ್ ಬೇಲ್ ಸಿಗುತ್ತಾ.? ಇಲ್ಲ ಆರುವಾರಗಳ ಬಳಿಕ ಬಳ್ಳಾರಿ ‌ಜೈಲಿಗೆ ಹೋಗ್ತಾರ ಕಾದು ನೋಡಬೇಕು.

error: Content is protected !!