Home Blog Page 2065

ನಿಮಗೆ ಗೊತ್ತೆ..? ಮಧುಮೇಹ ಆರಂಭವಾಗುವ ಲಕ್ಷಣಗಳು ಹೀಗಿರುತ್ತವಂತೆ! ಇಲ್ಲಿದೆ ನೋಡಿ

0

ಒಮ್ಮೆ ಮಧುಮೇಹ ಬಂದರೆ ಅದರ ಹಿಂದೆ ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆ ಸಹ ಬೆನ್ನಟ್ಟಿ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಸುಮಾರು 422 ಮಿಲಿಯನ್ ಜನರು ಮಧುಮೇಹ ಸಮಸ್ಯೆಯಿಂದ ಬಳಸಲುತ್ತಿದ್ದಾರೆ. ಇದಲ್ಲದೇ, ಪ್ರತಿ ವರ್ಷ 1.5 ಮಿಲಿಯನ್ ಸಾವುಗಳು ನೇರವಾಗಿ ಮಧುಮೇಹದ ಕಾರಣಕ್ಕೆ ಎನ್ನುವ ಆಘಾತಕಾರಿ ಅಂಶ ಸಹ ಬಹಿರಂಗವಾಗಿದ್ದು,

ಇದು ನಿಜಕ್ಕೂ ಚಿಂತಿಸುವ ವಿಚಾರ ಎಂದರೆ ತಪ್ಪಲ್ಲ. ಇದೊಂದು ಒಂದು ದೊಡ್ಡ ಆರೋಗ್ಯ ಅಪಾಯವಾಗಿದ್ದರೂ, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು, ನಿಮಗೆ ಇರುವ ಇತರ ಆರೋಗ್ಯ ಸಮಸ್ಯೆಗಳನ್ನು ಸಹ ಹೆಚ್ಚು ಮಾಡುತ್ತದೆ. ಇದು ಕಣ್ಣು ಮತ್ತು ಮೂತ್ರಪಿಂಡಗಳಂತಹ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.

ಹೌದು ಬಹಳಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಜೀವನಶೈಲಿಯಲ್ಲಿನ ಬದಲಾವಣೆಗಳು ಈ ಕಾಯಿಲೆಗೆ ಕಾರಣವೆಂದು ಅನೇಕ ವೈದ್ಯಕೀಯ ತಜ್ಞರು ನಂಬುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸದಿರುವುದು ಮತ್ತು ತಿನ್ನುವ ಆಹಾರದಲ್ಲಿ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳದ ಕಾರಣ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಮಧುಮೇಹದಿಂದ ಬಳಲುತ್ತಿದ್ದಾರೆ.

ಮೂತ್ರಪಿಂಡಗಳ ಮೇಲೆ ಹೆಚ್ಚಿನ ಪರಿಣಾಮ..

ಮೂತ್ರಪಿಂಡದ ಕಾಯಿಲೆಗೆ ಮಧುಮೇಹವು ಮುಖ್ಯ ಕಾರಣವಾಗಿದೆ. ಇದು ಮಧುಮೇಹ ಹೊಂದಿರುವ ಮೂರನೇ ಒಂದು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಮಧುಮೇಹದ ಗಂಭೀರ, ಮಾರಣಾಂತಿಕ ತೊಡಕು. ಕಾಲಾನಂತರದಲ್ಲಿ, ಅಧಿಕ ರಕ್ತದ ಸಕ್ಕರೆಯ ಮಟ್ಟವು ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಇರುವವರಿಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುತ್ತದೆ. ಇದು ಮೂತ್ರಪಿಂಡದೊಳಗಿನ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು. ಇದರಿಂದಾಗಿ ಮೂತ್ರಪಿಂಡಗಳಿಗೆ ಮತ್ತಷ್ಟು ಹಾನಿಯಾಗುವ ಅಪಾಯವಿದೆ.

ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ..

ಮಧುಮೇಹದಲ್ಲಿ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಯಾವುದೇ ರೋಗಲಕ್ಷಣಗಳಿಲ್ಲದೆ ಆಕ್ರಮಣವನ್ನು ಪ್ರಾರಂಭಿಸುತ್ತದೆ. ಆರಂಭಿಕ ಹಂತಗಳಲ್ಲಿ ಗುರುತಿಸಬಹುದಾದ ರೋಗಲಕ್ಷಣಗಳಿರುವುದಿಲ್ಲ. ಆದಾಗ್ಯೂ, ರೋಗವು ಮುಂದುವರೆದಂತೆ, ರೋಗಿಗಳು ಕಾಲುಗಳಲ್ಲಿ ಊತ, ಉಸಿರಾಟದ ತೊಂದರೆ, ಮೂಳೆ ರೋಗ, ಚಯಾಪಚಯ ಸಮಸ್ಯೆ, ಆಮ್ಲವ್ಯಾಧಿ ಮುಂತಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಆಹಾರ ಮತ್ತು ವ್ಯಾಯಾಮದ ವಿಷಯದಲ್ಲಿ ಸರಿಯಾದ ಜೀವನಶೈಲಿಯಿಂದ ಈ ರೋಗವನ್ನು ನಿಯಂತ್ರಿಸಬಹುದು.

ಮಧುಮೇಹದ ಆರಂಭಿಕ ಲಕ್ಷಣಗಳು..

ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವುದು ಮತ್ತು ರಾತ್ರಿ ಭಯವು ಹೆಚ್ಚು ತೊಂದರೆ ಉಂಟುಮಾಡುತ್ತದೆ. ಹಠಾತ್ ತೂಕ ನಷ್ಟದಂತೆ ಕಾಣುತ್ತದೆ. ಕಣ್ಣಿನ ದೃಷ್ಟಿ ಕ್ಷೀಣಿಸುತ್ತದೆ. ಕೈಗಳು ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಸುಡುವ ಸಂವೇದನೆ ಇರುತ್ತದೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಿದರೆ ತುಂಬಾ ಸುಸ್ತಾಗುವ ಲಕ್ಷಣ. ಚರ್ಮವು ಶುಷ್ಕವಾಗಿರುತ್ತದೆ. ಆದ್ದರಿಂದ, ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸಾಮಾನ್ಯ ಮಟ್ಟದಲ್ಲಿರಿಸುವುದು ಬಹಳ ಮುಖ್ಯ. ಇದನ್ನು ಮಾಡಲು, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಪ್ರತಿದಿನ ಪರೀಕ್ಷಿಸುವುದು ಉತ್ತಮ.

EVM ಹ್ಯಾಕ್‌ʼನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ: ಸಚಿವ ಜಿ. ಪರಮೇಶ್ವರ್‌

0

ಬೆಂಗಳೂರು: EVM ಹ್ಯಾಕ್‌ʼನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ.

ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ. ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನೂ ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ. ಅದಕ್ಕೆ ಬಿಟ್ಟರು, ಹ್ಯಾಕ್ ಮಾಡೋದ್ರಲ್ಲಿ ಬಿಜೆಪಿಗರು ನಿಪುಣರು, ಜಾರ್ಖಂಡನಲ್ಲಿ ಜೆಎಂಎಂ ಬರುತ್ತೆ ಅಂತ ಬಿಟ್ಟರು. ಕಾಂಗ್ರೆಸ್ ಬರುತ್ತೆ ಅಂತಿದ್ರೆ ಅಲ್ಲೂ ಮಾಡ್ತಿದ್ರು. ಇವಿಎಂ ಬೇಡ ಅಂತ ನಾವು ಸುಪ್ರೀಂ ಕೋರ್ಟ್ ಹೋದರೂ ಆಗಲಿಲ್ಲ. ಅವರು ಸಹ ಎಲೆಕ್ಷನ್ ಕಮೀಷನ್ ಹೇಳಿದ್ದನ್ನ ಒಪ್ಪಿಕೊಂಡರು ಎಂದು ಹೇಳಿದರು.

IPL 2025: ಐಪಿಎಲ್ ಮೆಗಾ ಹರಾಜು: ಸಮಯ, ಸ್ಥಳ ಕುರಿತಾದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ!

0

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.

2025ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದು ವಿದೇಶದಲ್ಲಿ ನಡೆಯುತ್ತಿರುವ ಎರಡನೇ ಹರಾಜು. ಹರಾಜಿನಲ್ಲಿ ಒಟ್ಟು 1,574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ಫ್ರಾಂಚೈಸಿಗಳ ಸೂಚನೆಯ ಮೇರೆಗೆ ಬಿಸಿಸಿಐ 577 ಆಟಗಾರರನ್ನು ಶಾರ್ಟ್​ಲಿಸ್ಟ್​ ಮಾಡಿದೆ. ಈ ಪೈಕಿ 204 ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಸಿದ್ಧವಾಗಿವೆ.

ಇದರಲ್ಲಿ 70 ವಿದೇಶಿ ಆಟಗಾರರು ಇರಲಿದ್ದಾರೆ.ಈ ಮೆಗಾ ಈವೆಂಟ್ ಬಗ್ಗೆ ಪ್ರಮುಖ ವಿವರಗಳನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.ಇಂದು ಮಧ್ಯಾಹ್ನ 3:30 ಕ್ಕೆ ಹರಾಜು ಪ್ರಾರಂಭವಾಗಲಿದೆ. ಒಂದೂವರೆ ಗಂಟೆಗಳ ಸುದೀರ್ಘ ಹರಾಜಿನ ನಂತರ 45 ನಿಮಿಷಗಳ ಊಟದ ವಿರಾಮ ಇರುತ್ತದೆ. ಭಾರತೀಯ ಕಾಲಮಾನ ರಾತ್ರಿ 10:30 ರವರೆಗೆ ಹರಾಜು ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
ಈ ಬಾರಿಯ ಮೆಗಾ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್​ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.

ಹರಾಜು ಪಟ್ಟಿಯಲ್ಲಿರುವ ಆಟಗಾರರೆಷ್ಟು?
ಈ ಬಾರಿಯ ಮೆಗಾ ಹರಾಜಿಗೆ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅದರಂತೆ ಫೈನಲ್ ಲಿಸ್ಟ್​ನಲ್ಲಿ 577 ಆಟಗಾರರು ಸ್ಥಾನ ಪಡೆದಿದ್ದಾರೆ.

ವಿದೇಶಿ ಆಟಗಾರರ ಸಂಖ್ಯೆ ಎಷ್ಟು?
577 ಆಟಗಾರರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರಿದ್ದಾರೆ.

ಒಟ್ಟು ಹರಾಜು ಮೊತ್ತವೆಷ್ಟು?
ಈ ಬಾರಿಯ ಮೆಗಾ ಹರಾಜಿಗಾಗಿ ಒಟ್ಟು 120 ಕೋಟಿ ರೂ. ಅನ್ನು ನಿಗದಿಪಡಿಸಲಾಗಿದೆ. ಇದೀಗ 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇನ್ನುಳಿದ ಮೊತ್ತದಲ್ಲಿ ಪ್ರತಿ ಫ್ರಾಂಚೈಸಿಗಳು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

ನಿಖಿಲ್ ಸೋಲಿನಿಂದ ಅಭಿಮಾನಿಗೆ ಶಾಕ್:‌ ವಿಷ ಸೇವಿಸಿ ಆತ್ಮಹತ್ಯೆ ಯತ್ನ!

0

ರಾಮನಗರ: ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್​ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಅದರೊಂದಿಗೆ, ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್​​ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ.

ಅತ್ತ ನಿಖಿಲ್​ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ. ಆದ್ದರಿಂದ ನಿಖಿಲ್ ಕುಮಾರಸ್ವಾಮಿ ಕಂಡಿದ್ದಾರೆಂದು ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣದ ಕೂಡ್ಲೂರು ಬಳಿಯ ಶ್ರೀರಾಂಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದು, ನಾನು ನಿಖಿಲ್ ಅಭಿಮಾನಿ. ನನ್ನ ಸಾವಿಗೆ ನಾನೇ ಕಾರಣ. ಜೈ ಜೆಡಿಎಸ್ ಎಂದು ಪತ್ರ ಪರೆದಿಟ್ಟು ವಿಷ ಸೇವಿಸಿದ್ದಾನೆ. ಈತನನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಧ್ಯಕ್ಕೆ ಪ್ರಾಣಪಾಯದಿಂದ ಪರಾಗಿದ್ದಾನೆ. ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲು ಕಂಡಿದ್ದಾರೆ. ಅವರ ಸೋಲಿನಿಂದ ಕಂಗಾಲಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

CPY ಭರ್ಜರಿ ಗೆಲುವು: ಹೊಳೆ ಆಂಜನೇಯನ ಹರಕೆ ತೀರಿಸಿದ ಪತ್ನಿ ಶೀಲಾ ಯೋಗೇಶ್ವರ್!

0

ಮಂಡ್ಯ: ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದ್ದಾರೆ.

ಆದ್ದರಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರಸಿದ್ಧ ಕ್ಷೇತ್ರ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಿಪಿ ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಭೇಟಿ ನೀಡಿದ್ದಾರೆ. ತಮ್ಮ ಪತಿ ಗೆಲುವಿನ ಬೆನ್ನಲ್ಲೇ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಶೀಲಾ ಯೋಗೇಶ್ವರ್, ದೇವರ ಹರಕೆ ತೀರಿಸಿದ್ರು.

ಹೌದು ಚನ್ನಪಟ್ಟಣ ಉಪ ಚುನಾವಣೆ ಪೂರ್ವದಲ್ಲಿ ಹೊಳೆ ಆಂಜನೇಯ ದೇಗುಲಕ್ಕೆ ಯೋಗೇಶ್ವರ್ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ಪತಿ ಯೋಗೇಶ್ವರ್ ಗೆಲುವಿಗಾಗಿ ಶೀಲಾ ಯೋಗೇಶ್ವರ್ ಹೊಳೆ ಆಂಜನೇಯನಿಗೆ ಒಂದು ಕಾಲು ರೂಪಾಯಿ ಕಟ್ಟಿ ಹರಕೆ ಕಟ್ಟಿಕೊಂಡಿದ್ದರು. ಈಗ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ..

ಅಂತರರಾಜ್ಯ ಕಳ್ಳನ ಮೇಲೆ ಪೊಲೀಸ್ ಫೈರಿಂಗ್: ಇರಾನಿ ಗ್ಯಾಂಗ್ ನ ಕಳ್ಳ ಅಂದರ್

0

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣ ಸಮೀಪದ ಕುರಹಟ್ಟಿ ಕಾಲುವೆ ಬಳಿ ಅಂತರರಾಜ್ಯ ಕಳ್ಳನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಈ ಹಿಂದೆ ಜೂನ್ 6, 2024ರಂದು ಗಂಗಾವತಿ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಇರಾನಿ ಗ್ಯಾಂಗ್‌ನ ಪ್ರಮುಖ ಅಂತರರಾಜ್ಯ ಕಳ್ಳನನ್ನು ಗದಗ ಜಿಲ್ಲೆಯ ಬೆಟಗೇರಿ ಪೊಲೀಸರು ಹೊಳೆಆಲೂರ ರೇಲ್ವೆ ನಿಲ್ದಾಣದಿಂದ ಬಂಧಿಸಿ ಕರೆತರುವ ಸಂದರ್ಭದಲ್ಲಿ ಆರೋಪಿ ಬಗರ್‌ಅಲಿ ಅಮ್ಜದ್‌ಅಲಿ ಇರಾನಿ, ಕುರಹಟ್ಟಿ ಗ್ರಾಮದ ಬಳಿ ಪೊಲೀಸರನ್ನು ಯಾಮಾರಿಸಿ, ವಾಹನದಿಂದ ಜಿಗಿದು ಓಡಿ ಹೊಗುತ್ತಿರುವಾಗ ಪೊಲೀಸ್ ಸಿಬ್ಬಂದಿಗಳು ತಡ ಮಾಡದೆ ಬೆನ್ನು ಹತ್ತಿದ್ದಾರೆ.ಈ ಸಂದರ್ಭದಲ್ಲಿ ಆರೋಪಿಯು ಹನುಮಂತಪ್ಪ ಓಲೇಕಾರ, ಅಶೋಕ ಗದಗ ಎಂಬ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಸಿಪಿಐ ಧೀರಜ್ ಶಿಂಧೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಆರೋಪಿ ಬಗ್ಗದಿದ್ದಾಗ, ಆರೋಪಿಯ ಎಡ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಆರೋಪಿಗೆ ರೋಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.ಘಟನೆಯ ವಿಷಯ ತಿಳಿಯುತ್ತಿದ್ದಂತೆ ರೋಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗಾಯಗೊಂಡ ಪೊಲೀಸ್ ಸಿಬ್ಬಂದಿಗಳ ಆರೋಗ್ಯವನ್ನು ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದರು.ಡಿವಾಯ್‌ಎಸ್ಪಿ ಪ್ರಭುಗೌಡ ಕಿರದಳ್ಳಿ, ಡಿವಾಯ್‌ಎಸ್ಪಿ ಮಹಾಂತೇಶ ಸಜ್ಜನ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ಸಿಬ್ಬಂದಿಗಳಿದ್ದರು.

ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ್ದಾರೆ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊAಕುಗಳನ್ನು ತಿದ್ದಿದ್ದಾರೆ. ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.

ತೋಂಟದಾರ್ಯ ಮಠದಲ್ಲಿ ಜರುಗಿದ 2720ನೇ ಶಿವಾನುಭವ ಕಾರ್ಯಕ್ರಮದದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಕನ್ನಡ ನಾಡ-ನುಡಿ, ಸಂಸ್ಕೃತಿಯಲ್ಲಿ ಬೆರೆತು ಹೋದ ಒಬ್ಬ ಶ್ರೇಷ್ಠ ದಾಸವರೇಣ್ಯ ಕನಕದಾಸರು. ಕನಕದಾಸರ ಬದುಕು ಮತ್ತು ಆದರ್ಶಗಳು ಸಾರ್ವಕಾಲಿಕ. ಶರಣರ ವಚನ ಮತ್ತು ದಾಸರ ಪದಗಳು ಸಮಾಜದಲ್ಲಿ ಜಾತಿ, ಮತ, ಪಂಥ ಬೇಧಗಳನ್ನು ಅಳಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ ಎಂದರು.

ಕನಕದಾಸ ಜಯಂತಿಯ ನಿಮಿತ್ತ `ಸಂತ ಶ್ರೇಷ್ಠ ಕನಕದಾಸರು’ ಎಂಬ ವಿಷಯದ ಕುರಿತು ಧಾರವಾಡ ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ವಡಿಗೇರಿಯವರು ಅವರ ಕೀರ್ತನೆಗಳ, ಮುಂಡಿಗೆಗಳ, ಕೃತಿಗಳ ಕುರಿತು ತಮ್ಮ ಉಪನ್ಯಾಸದಲ್ಲಿ ಬೆಳಕು ಚೆಲ್ಲಿದರು.

`ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಈ ವಿಷಯವಾಗಿ ಗದುಗಿನ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಮಾತನಾಡಿ, ನಿತ್ಯ ಜೀವನದಲ್ಲಿ ಹಾಸ್ಯ ಹೇಗೆ ಹಾಸುಹೊಕ್ಕಾಗಿದೆ ಎಂದು ತಮ್ಮ ಮನೆಯಿಂದ ಹಿಡಿದು ಸುತ್ತಮುತ್ತಲಿನ ವಾತಾವರಣದಲ್ಲಿ ಹಾಸ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ತಿಳಿಸುತ್ತಾ ನಗೆಯ ಹೊನಲನ್ನು ಹರಿಸಿದರು. ನಗು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಗಬೇಕು ಮತ್ತೆ ಮತ್ತೆ ನಗಬೇಕು ಎಂದು ಹೇಳಿದರು.

ದೆಹಲಿಯಯ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಾಲ ಕವಿಯತ್ರಿ ಪ್ರಣತಿ ರಾಜೇಂದ್ರ ಗಡಾದ ಇವರನ್ನು ಮಕ್ಕಳ ದಿನಾಚರಣೆ ನಿಮಿತ್ತ ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರವರು ಸಂಗೀತ ಸೇವೆ ನೆರವೇರಿಸಿದರು. ಧರ್ಮ ಗ್ರಂಥ ಪಠಣವನ್ನು ಸಂಕೇತ ಎಸ್.ತಕ್ಕಡಿ ಹಾಗೂ ವಚನ ಚಿಂತನವನ್ನು ಭುವನ್ ಎಸ್. ಅಕ್ಕಮ್ಮನವರ ಮಾಡಿದರು. ದಾಸೋಹ ಸೇವೆಯನ್ನು ಶರಣ ಹುಚ್ಚಣ್ಣ ಶಹಾಪೂರ, ಹಾಲೇಶ್ವರ ಟ್ರೇಡಿಂಗ್ ಕಂಪನಿ ಗದಗ ಇವರು ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಶರಣ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿಗಳಾದ ವೀರಣ್ಣ ಗೋಟಡಕಿ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸನ್ಮಾನಿತರನ್ನು ಪರಿಚಯಿಸಿದರು. ವಿಧ್ಯಾ ಗಂಜಿಹಾಳ ಸ್ವಾಗತಿಸಿದರೆ, ಗೌರಕ್ಕ ಬಡಿಗಣ್ಣವರ ನಿರೂಪಿಸಿದರು.

ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ: ಸಚಿವ ಎಚ್.ಕೆ. ಪಾಟೀಲ ಭರವಸೆ

0

ವಿಜಯಸಾಕ್ಷಿ ಸುದ್ದಿ, ಗದಗ: ಒಳಮೀಸಲಾತಿ ವಿರೋಧೀಸುವ ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಗದಗ ನಗರದಲ್ಲಿ ಒಳಮೀಸಲಾತಿ ವಿರೋಧಿಸಿ ಪರಿಶಿಷ್ಟ ಜಾತಿಯ ಹಲವು ಸಮುದಾಯಗಳು ಶುಕ್ರವಾರ ಧರ್ಮಗುರುಗಳ ನೇತೃತ್ವದಲ್ಲಿ ಒಳಮೀಸಲಾತಿ ವಿರೋಧೀಸುವ ಪರಿಶಿಷ್ಟ ಜಾತಿ ಸಮುದಾಯಗಳ ರಾಜ್ಯ ಸಮಿತಿ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕು ನಿಮಗೆ ಮೀಸಲಾತಿ ತಪ್ಪಬಾರದು. ಮೀಸಲಾತಿ ತಪ್ಪುವ ಪ್ರಶ್ನೆಯೇ ಇಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ತಿದ್ದುವುದು, ತಗೆದು ಹಾಕಲು ನಮ್ಮ ದೇಶದಲ್ಲಿ ಯಾರಿಗೂ ಹಾಗೂ ಯಾವುದೇ ಸರ್ಕಾರಕ್ಕೂ ನಾವು ಬೀಡುವುದಿಲ್ಲ. ನಾನು ನಿಮ್ಮವನಾಗಿ ನಿಮ್ಮ ವಾದವನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು, ನಿಮ್ಮೊಂದಿಗೆ ಇರುತ್ತೇನೆ. ನಿವೃತ್ತ ನ್ಯಾ. ನಾಗಮೋಹನದಾಸ ಅವರೊಂದಿಗೆ ಚರ್ಚಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಪಾದಯಾತ್ರೆಯ ವೇಳೆ ಧರ್ಮಗುರುಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗಸುಗೂರು, ಕುಮಾರ ಮಹಾರಾಜರು ಬಾಗಲಕೋಟ, ಸರ್ದಾರ ಸೇವಾಲಾಲ ಮಹಾರಾಜ ಚಿತ್ರದುರ್ಗ, ಮುರಾಹರಿ ಮಹಾರಾಜ ಗುಲ್ಬರ್ಗಾ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಸಮಾಜ ಮುಖಂಡ ರಾಘವೇಂದ್ರ ನಾಯಕ ಇವರುಗಳು ತಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಹಾಗೂ ಒಳಮೀಸಲಾತಿಯ ಕುರಿತು ಹಕ್ಕೊತ್ತಾಯ ಮಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಲವು ಪ.ಜಾತಿಯ ಭಾದಿತ ಸಮುದಾಯದ ಜನರು, ರಸ್ತೆಯುದ್ದಕ್ಕೂ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ, ತಮ್ಮ ಸಮುದಾಯದ ಧ್ವಜವನ್ನು ಬಿತ್ತರಿಸುತ್ತಾ ಸಾಗಿದರು. ಕೆಲ ಸಮಯಗಳಕಾಲ ರಸ್ತೆ ಬ್ಲಾಕ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಪಾದಯಾತ್ರೆಯಲ್ಲಿ ಹಲವು ಸಮುದಾಯದ ಮುಖಂಡರು ಭಾಗಿಯಾಗಿ ಒಳಮೀಸಲಾತಿ ವಿರೋಧಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಧರ್ಮಗುರುಗಳಾದ ಶ್ರೀ ಶಿವಪ್ರಕಾಶ ಮಹಾರಾಜರು ಕೊಟ್ಟೂರು, ಶ್ರೀ ಮಹಾದೇವ ಮಹಾರಾಜ್ ಮಿಂಚನಾಳ, ಶ್ರೀ ಭಿಮಸಿಂಗ ಮಹಾರಾಜ್ ಇಂಟಗಿಯಾಳ, ಶ್ರೀ ತಿಪ್ಪೇಸ್ವಾಮಿ ಸುರಪುರ, ಶ್ರೀ ಶಿವಾನಂದ ಮಹಾರಾಜ್ ನಿಲಾನಗರ, ಶ್ರೀ ಗೋಸಾವಿ ಮಹಾರಾಜ ಕೊಪ್ಪಳ, ಪ್ರಮುಖರಾದ ಕೆ.ಸಿ. ನಭಾಪುರ, ನೀಲು ರಾಠೋಡ, ಪಾಂಡು ಚವ್ಹಾಣ, ಚಂದ್ರಕಾಂತ ಚವ್ಹಾಣ, ಪರಮೇಶ ನಾಯಕ, ಅನಿಲ ಕಾರಭಾರಿ, ಭರತ ನಾಯಕ, ಹನುಮಂತ ನಾಯಕ, ಆಂಜನೇಯ ಕಟಗಿ, ನಾಗರೆಡ್ಡಿ ನಿಡಗುಂದಿ, ಉದಯಕುಮಾರ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ವಿಠ್ಠಲ ತೋಟದ, ಸುಭಾಷ ಗುಡಿಮನಿ, ಶ್ರೀನಿವಾಸ್ ಬೇವಿನಕಟ್ಟಿ, ಚಂದ್ರಾ ನಾಯಕ, ಅನಿಲ ಕಾರಭಾರಿ, ಐ.ಎಸ್. ಪೂಜಾರ, ದಯಾನಂದ ಪವಾರ್, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಧನುರಾಮ ತಂಬೂರಿ, ತುಕಾರಾಮ ಲಮಾಣಿ, ಜಾನು ಲಮಾಣಿ, ಈರಣ್ಣ ಲಮಾಣಿ, ಭಿಮಸಿಂಗ ರಾಠೋಡ, ಆಂಜನೇಯ ಕಟಗಿ, ಮೋಹನ ಭಜಂತ್ರಿ, ಸೋಮು ಲಮಾಣಿ, ರಾಘವೇಂದ್ರ, ದೇವಪ್ಪ ಲಮಾಣಿ, ತಾವರೆಪ್ಪ ಲಮಾಣಿ, ಕುಬೇರಪ್ಪ ರಾಠೋಡ, ಸೋಮರೆಡ್ಡಿ, ಧನಸಿಂಗ ಲಮಾಣಿ, ಗೋಪಾಲ ಪೂಜಾರ, ಪರಶುರಾಮ ರಾಠೋಡ, ಪುರಪ್ಪ ನಾಯಕ, ನುರಪ್ಪ ನಾಯಕ, ಚಂದ್ರಾ ನಾಯಕ, ಟಿ.ಡಿ. ಪೂಜಾರ, ಸುರೇಶ್ ಮಹಾರಾಜ್, ಎಲ್.ಆರ್. ಚವ್ಹಾಣ, ಖಿಮಪ್ಪ ನಾಯಕ ಮುಂತಾದವರಿದ್ದರು.

ಮನೆಗಳ ನಿರ್ಮಾಣ ಕಾರ್ಯಕ್ಕೆ ಸಚಿವ ಎಚ್.ಕೆ. ಪಾಟೀಲರಿಂದ ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಈ ಪ್ರದೇಶದಲ್ಲಿನ 36 ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪ್ರತಿ ಮನೆಯು 6-7ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದರೊಂದಿಗೆ ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಗದಗ ನಗರದ ವಾರ್ಡ್ ನಂ.೩೦ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಸದರಿ ಮನೆಗಳು ಬಡವರಿಗೆ ವಿತರಿಸುವ ಮನೆಗಳಾಗಿದ್ದು, ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಮನೆ ನಿರ್ಮಿಸುವ ಮೂಲಕ ಬಡವರ ಸೇವೆ ಮಾಡುವಂತೆ ಸಚಿವರು ಸೂಚಿಸಿದರು.

ಈ ಪ್ರದೇಶದ ಹಲವರ ಬೇಡಿಕೆಯಾಗಿರುವ ರೇಷನ್ ಕಾರ್ಡ್ ಸಮಸ್ಯೆ ಕುರಿತಂತೆ ಮಾತನಾಡಿದ ಸಚಿವರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಬಿ.ಬಿ. ಅಸೂಟಿಯವರು ಈ ವೇಳೆ ನಮ್ಮ ಜೊತೆಗಿದ್ದಾರೆ. ನಿಮಗೆ ಎದುರಾಗಿರುವ ರೇಷನ್ ಕಾರ್ಡ್ ಕುರಿತ ಸಮಸ್ಯೆಯನ್ನು ಅವರು ಇನ್ನೊಂದು ತಿಂಗಳ ಒಳಗಾಗಿ ಸರಿಪಡಿಸಲಿದ್ದಾರೆ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಪ್ರಭು ಬುರಬುರೆ, ನಗರ ಸಭೆ ಸದಸ್ಯೆ ಪದ್ಮಾ ಕಟಗಿ, ಆಂಜನೇಯ ಕಟಗಿ ಸೇರಿದಂತೆ ಹಲವರು ಹಾಜರಿದ್ದರು.

ಅನ್ವೇಷಣಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಡಾ.ಎಚ್.ಕೆ.ಪಾಟೀಲ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಶುಕ್ರವಾರ ಗದಗ ನಗರದ ತೆರಂಗಾ ಪಾರ್ಕ್ ನಲ್ಲಿ ಸಭೆ ನಡೆಸಿದರು.

ಲಕ್ಕುಂಡಿ ಗ್ರಾಮದಲ್ಲಿನ ಶಾಸನಗಳು, ಪ್ರಾಚ್ಯಾವಶೇಷಗಳ ಅನ್ವೇಷಣಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮ ಯಶಸ್ವಿಗೆ ಕೈಗೊಂಡಿರುವ ಯೋಜನೆಗಳ ಕುರಿತು ಮಾಹಿತಿ ಪಡೆದ ಸಚಿವರು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಅನ್ವೇಷಣೆ ಕಾರ್ಯದಲ್ಲಿ ದೊರೆತ ಶಾಸನ, ಮೂರ್ತಿಗಳಿಗೆ ಯಾವುದೇ ತರಹದ ಹಾನಿಯಾಗದಂತೆ ಸುರಕ್ಷಿತವಾಗಿ ಒಂದೆಡೆ ಸಂಗ್ರಹಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಾಮಗ್ರಿ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಾಚರಣೆ ಯಶಸ್ವಿಯಾಗಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

error: Content is protected !!