Home Blog Page 2066

ಪ್ರಿಯಾಂಕ ಗಾಂಧಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯದ ಮೂರು ಕ್ಷೇತ್ರ ಸೇರಿದಂತೆ ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಭರ್ಜರಿ ಗೆಲುವನ್ನು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಮ್ಮ ಅಭ್ಯರ್ಥಿಗಳಿಗೆ ಗೆಲುವನ್ನು ತಂದುಕೊಟ್ಟಿದ್ದಾರೆ. ಬಿಜೆಪಿಯವರು ಸರಕಾರದ ಬಗ್ಗೆ ಅಪಪ್ರಚಾರವನ್ನು ಮಾಡುವ ಮೂಲಕ ಗೆಲ್ಲಲು ಮುಂದಾಗಿದ್ದರು. ಆದರೆ ಮೂರು ಕ್ಷೇತ್ರಗಳ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಜಾರ್ಖAಡ್‌ನಲ್ಲಿಯೂ ಕಾಂಗ್ರೆಸ್ ಸರಕಾರ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ವಯನಾಡಿನಲ್ಲಿ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಗೆಲ್ಲುವ ಮೂಲಕ ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಸರಕಾರ ನಾಡಿನ ಜನ ಮೆಚ್ಚುವ ರಿತಿಯಲ್ಲಿ ತನ್ನ ಆಡಳಿತವನ್ನು ನಡೆಸಲಿದೆ ಎಂದರು.

ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಯೂಸುಪ್ ಇಟಗಿ, ಅಂದಪ್ಪ ಬಿಚ್ಚೂರ, ಸಂಗು ನವಲಗುಂದ, ಅಪ್ಪು ಗಿರಡ್ಡಿ, ಆನಂದ ಚಂಗಳಿ, ಶಿವು ಹುಲ್ಲೂರ, ಮೌನೇಶ ಹಾದಿಮನಿ, ದುರ್ಗಪ್ಪ ಹಿರೇಮನಿ, ಕುಮಾರ ಗೌಡನ್ನವರ, ಮಲಿಕ ಯಲಿಗಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ನಿರ್ಣಾಯಕನಾದ ಮತದಾರ ಅರ್ಹ ನಾಯಕನ ಆಯ್ಕೆಗೆ ಆದ್ಯತೆ ನೀಡಬೇಕು: ಲೋಹಿತ್ ನೆಲವಿಗಿ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಭಾರತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನದ ಮೂಲಕ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ನಿರ್ಣಾಯಕನಾದ ಮತದಾರ ಯೋಗ್ಯ, ಸುಶಿಕ್ಷಿತ, ಅರ್ಹ ನಾಯಕನ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಲೋಹಿತ್ ನೆಲವಿಗಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ.ಪೂ), ಮತದಾರರ ಸಾಕ್ಷರತಾ ಕ್ಲಬ್ ಇವರ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶನಿವಾರ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ (ಎನ್‌ವಿಡಿ) ರಸಪ್ರಶ್ನೆ, ಭಿತ್ತಿಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನತೆ ಈ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು, ಅದರಲ್ಲೂ ಯುವ ಮತದಾರರು ದೇಶದ ಭವಿಷ್ಯ. ನಾವು ಮುಂದೆ ಬಂದು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ. ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡುವದರಿಂದ ಅರ್ಹ ವ್ಯಕ್ತಿ ಆಯ್ಕೆಯಾಗುತ್ತಾರೆ. ಮುಂಬರುವ ಪೀಳಿಗೆಗೆ ತಪ್ಪದೇ ಮತ ಚಲಾಯಿಸಲು ಬಲವಾದ ಜಾಲವನ್ನು ನಿರ್ಮಿಸಲು ನಾವು ಪ್ರೋತ್ಸಾಹಿಸಬೇಕು ಎಂದ ಅವರು, ೧೮ ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊAಡು ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಸರಕಾರಿ ಪ.ಪೂ ಕಾಲೇಜು ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಮಾತನಾಡಿ, ವ್ಮತದಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಂತರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ರಸಪ್ರಶ್ನೆ, ಭಿತ್ತಿಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ವಿಜೇತರು ಸ್ಪರ್ಧೆ ಮಾಡುವಂತೆ ಅವಕಾಶಗಳಿದ್ದು, ಅದಕ್ಕಾಗಿ ಉತ್ತಮವಾಗಿ ಸಿದ್ಧರಾಗಿ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತರುವ ಕಾರ್ಯವನ್ನು ಮಾಡುವಂತೆ ಹೇಳಿದರು.

ಸಭೆಯಲ್ಲಿ ಎಸ್‌ಎಂಜೆವಿಜೆ ಕಾಲೇಜು ಪ್ರಾಚಾರ್ಯ ಜಾನಾ ನಾಯಕ್, ಉಪನ್ಯಾಸಕಿ ಸತ್ಯಮ್ಮ ಭಜಂತ್ರಿ, ಪ್ರಾಚಾರ್ಯ ಡಿ.ಎಸ್. ಪ್ಯಾಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಶಿಂಗಟಾಲೂರ ನಿರೂಪಿಸಿದರು.

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸಿ, ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ: ಉಮರ ಫಾರೂಕ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಚನ್ನಪಟ್ಟಣ, ಶಿಗ್ಗಾಂವ, ಸಂಡೂರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಗದಗ ಜಿಲ್ಲಾ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದ ಜನತೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಒಲವನ್ನು ತೋರಿಸಿ, ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ವಿಜಯೋತ್ಸವದಲ್ಲಿ ಗದಗ ಶಹರ ಘಟಕದ ಉಪಾಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ ನಾಮನಿರ್ದೇಶಿತ ಸದಸ್ಯ ಮಹಮ್ಮದ ಎನ್.ಶಾಲಗಾರ, ಎಂ.ಬಿ. ನದಾಫ್ ವಕೀಲರು, ಸಮಾಜ ಸೇವಕರಾದ ಅನ್ವರ ಶಿರಹಟ್ಟಿ, ವೀರಯ್ಯ ಬರದೂರಮಠ, ಹಾಜೀ ಜೀವನಸಾಬ ಮಂಗಳೂರು, ಇಮಾಮಸಾಬ ಜಾಫರ ಢಾಲಾಯತ, ಶಂಕರಗೌಡ್ರು, ನಾಗರಾಜ ಖೋಡೆ, ಶಿವು ಮಧುರಕರ, ಇಲಿಯಾಸ ಹುಬ್ಬಳ್ಳಿ, ಆಸಿಫ್ ಹುಬ್ಬಳ್ಳಿ ಮುಂತಾದವರು ಭಾಗವಹಿಸಿದ್ದರು.

ಸರ್ದಾರ್ ಪಟೇಲ ಸ್ಮರಣಾರ್ಥ ಏಕತಾ ಓಟ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ನೆಹರು ಯುವ ಕೇಂದ್ರ ಗದಗ ಮತ್ತು ಶ್ರೀ ಎಫ್.ಬಿ. ಪೂಜಾರ್ ಸರಕಾರಿ ಪದವಿಪೂರ್ವ ಕಾಲೇಜು, ರಾಷ್ಟಿçÃಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಸವರಾಜ್ ಮ.ಕೊಂಚಿಗೇರಿ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಏಕತೆಗಾಗಿ ಓಟ ಮತ್ತು ಸಂಕಲ್ಪ @2047 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಭೂದಾನಿಗಳಾದ ವೈದ್ಯ ಚನ್ನವೀರಪ್ಪ ಕೊಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಕನಕಮ್ಮ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಲಹೆಗಳನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ತಿಪ್ಪಣ್ಣ ಕೊಂಚಿಗೇರಿ, ಹೇಮಾ ಹರ್ಲಾಪುರ, ಸಂಗಮೇಶ ನೀರಲಗಿ, ವೀರೇಂದ್ರ ಗೌಡ ಪಾಟೀಲ್, ಈರಯ್ಯ ಪಾಟೀಲ್, ಸಿದ್ಧಲಿಂಗ ಅಂಗಡಿ, ಬಸವರಾಜ್ ಗಿರಿತಮ್ಮನವರ್, ಕೊಟ್ರಯ್ಯ ಹೊಂಬಾಲಮಠ, ರವಿಕುಮಾರ್ ಹೊಂಬಾಳಿ ಪಾಲ್ಗೊಂಡಿದ್ದರು.

ಲಿAಗರಾಜ್ ಯತ್ನಹಳ್ಳಿ ಸ್ವಾಗತಿಸಿದರೆ, ಶರಣಪ್ಪ ಕಲಗುಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಯೋತಿ ಅಡವಿ ವಂದಿಸಿದರು. ಪರಸಪ್ಪ ತಳವಾರ್, ಮಂಜುನಾಥ್ ಹಾರ್ಲಾಪುರ, ರವಿ ನರೇಗಲ್ ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಸವ ಯೋಗ ಕೇಂದ್ರಕ್ಕೆ `ಬೆಳ್ಳಿ ಹಬ್ಬ’ದ ಸಂಭ್ರಮ

ಮಾನವ ಕುಲದ ಒಳಿತಿಗಾಗಿ ನಮ್ಮ ಪೂರ್ವಜರು, ಋಷಿ-ಮುನಿಗಳು, ಸಾಧು-ಸಂತರು, ಮಹಾತ್ಮರು, ಮೇಧಾವಿಗಳು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಯೋಗವು ಮಹತ್ವಪೂರ್ಣ, ಅದ್ವಿತೀಯ, ಅಪ್ರತಿಮ ಕೊಡುಗೆಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿ-ಪರAಪರೆ, ದರ್ಶನಗಳಲ್ಲಿ ಯೋಗವು ಅಗ್ರಮಾನ್ಯವಾಗಿದೆ. ಎಲ್ಲಕ್ಕೂ ಮಿಗಿಲಾಗಿ ಯೋಗವು ಪ್ರಾಯೋಗಿಕ ವೈದ್ಯಶಾಸ್ತçವಾಗಿದ್ದು, ಜನತೆಯ ಯೋಗಕ್ಷೇಮ ಸಂರಕ್ಷಿಸುವ ಆರೋಗ್ಯದ ಖಜಾನೆಯಾಗಿದೆ.

ಯೋಗದ ಮಹತ್ವವನ್ನು ಜನತೆಗೆ ತಲುಪಿಸಬೇಕೆಂಬ ಸಂಕಲ್ಪದಿAದ ತ್ರಿವಿಧ ದಾಸೋಹಿ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಎಡೆಯೂರು ಶ್ರೀ ಜಗದ್ಗರು ತೋಂಟದಾರ್ಯ ಸಂಸ್ಥಾನ ಮಠಕ್ಕೆ ಪೀಠಾಧಿಪಾತಿಗಳಾದ ಮೇಲೆ ಮೊದಲಿಗೆ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆ ಸ್ಥಾಪಿಸಿದರು. ಸ್ಥಾಪನೆಯಾದಂದಿನಿAದ ಈ ತನಕ ಯೋಗ ಪಾಠಶಾಲೆಯು ಯೋಗದ ಪ್ರಸಾರ ಪ್ರಚಾರ ಸೇವೆ ಸಲ್ಲಿಸುತ್ತಿದೆ.

ಇಂದು ನಮ್ಮ ನಾಡಿಗೆ ಬೇಕಾಗಿರುವುದು ಅಖಂಡ ಆತ್ಮವಿಶ್ವಾಸ ಹೊಂದಿರುವ ಯುವ ಜನಾಂಗ. ಆದರೆ ನಾಡಿನ ಬೆನ್ನೆಲುಬಾದ ಯುವ ಜನತೆ ಇಂದು ತನ್ನ ತೇಜವನ್ನೆಲ್ಲ ಹೆಚ್ಚಿನಾಂಶ ನಿರುಪಯುಕ್ತ ಕಾರ್ಯಗಳಲ್ಲಿ ಹ್ರಾಸಗೊಳಿಸುತ್ತಿರುವುದನ್ನು ನಿಯಂತ್ರಿಸಲು ಯೋಗವು ಒಂದು ಮಹಾನ್ ಅಸ್ತçವಾಗಿದೆ ಎಂದು ನಂಬಿದ ಪೂಜ್ಯಶ್ರೀಗಳು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಅಂಗ ಸಂಸ್ಥೆಯನ್ನಾಗಿ ಬಸವ ಯೋಗ ಕೇಂದ್ರ ಸ್ಥಾಪಿಸಿದರು.

ಎಲ್ಲ ವಿದ್ಯೆಗಳಲ್ಲಿ ಯೋಗ ವಿದ್ಯೆ ಶ್ರೇಷ್ಠವಾಗಿದೆ. ಈ ವಿದ್ಯೆಯನ್ನು ಸರ್ವ ಜನಾಂಗಕ್ಕೆ ದೊರಕಿಸುವ ನಿಟ್ಟಿನಲ್ಲಿ ಬಸವ ಯೋಗ ಕೇಂದ್ರವು ಕರ್ನಾಟಕ ಸರಕಾರ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆಯಲ್ಲಿ ೨೦೦೦-೨೦೦೧ನೇ ಶೈಕ್ಷಣಿಕ ವರ್ಷದಿಂದ ಒಂದು ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಸ್ ನಡೆಸುತ್ತಲಿದೆ.

ಯೋಗ ಶೈಕ್ಷಣಿಕ ಕ್ಷೇತ್ರವನ್ನು ಇನ್ನೂ ಹೆಚ್ಚು ಬಲಪಡಿಸುವ ಉದ್ದೇಶದಿಂದ ಬಸವ ಯೋಗ ಕೇಂದ್ರವು ೨೦೧೯-೨೦೨೦ನೇ ಶೈಕ್ಷಣಿಕ ವರ್ಷದಿಂದ ಒಂದು ವರ್ಷ ಅವಧಿಯ ಪಿ.ಜಿ ಡಿಪ್ಲೋಮಾ ಇನ್ ಯೋಗ ಸ್ಟಡೀಸ್ ಎಂಬ ಸ್ನಾತಕೋತ್ತರ ಪದವಿ ಕೋರ್ಸ್ನ್ನು ಪ್ರಾರಂಭಿಸಿ ಯುವಕರಲ್ಲಿ ಯೋಗ ಶಿP್ಷÀಣದ ಕಲಿಕಾ ಆಸಕ್ತಿಯನ್ನು ಇಮ್ಮಡಿಗೊಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇಂದು ಯೋಗ ಸರ್ಟಿಫಿಕೆಟ್ ಮತ್ತು ಡಿಪ್ಲೋಮಾ ಕೋರ್ಸ್ ಪಡೆದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ, ಆಯುಷ್ ಇಲಾಖೆಗಳಲ್ಲಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರವು ಕೇವಲ ಯೋಗ ಶಿಕ್ಷಣ ಪ್ರಸಾರ ಸೇವೆಗೆ ಸೀಮಿತವಾಗಿರದೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿದೆ. ಶಾಲಾ-ಕಾಲೇಜ ವಿದ್ಯಾರ್ಥಿಗಳಲ್ಲಿ ಯೋಗಾಸಕ್ತಿ ಹೆಚ್ಚಿಸಲು ಯೋಗಾಸನ ಸ್ಪರ್ಧೆ, ಯೋಗ ಶಿಬಿರ, ಕಾರ್ಯಾಗಾರ, ವಿಚಾರ ಸಂಕಿರಣ, ಯೋಗ ರಸಪ್ರಶ್ನೆ ಎಂದು ಮುಂತಾಗಿ ಸಂಘಟನೆ, ಸಂಶೋಧನೆ, ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

೨೦೨೧-೨೨ ಮತ್ತು ೨೦೨೨-೨೩ನೇ ಸಾಲಿನ ಪಿ.ಜಿ.ಡಿಪ್ಲೋಮಾ ಇನ್ ಯೋಗ ಸ್ಟಡೀಸ್ ಕೋರ್ಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಗೀತಾ ಸಾವುಕಾರ, ಸುಧಾ ಪಾಟೀಲ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದು ಸಾಕ್ಷಿ ಸ್ವರೂಪರಾಗಿರುವರು. ಯೋಗಾಸನ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲದೆ ಸಿಬ್ಬಂದಿಯವರು ಕೂಡಾ ಪ್ರತಿಭಾವಂತರಿದ್ದು, ಪ್ರಾಚಾರ್ಯ ಕೆ.ಎಸ್. ಪಲ್ಲೇದ ಅಧ್ಯಾಪಕರಾದ ಚೇತನ ಚುಂಚಾ, ಬೀಸಪ್ಪ ಬಿ., ಭಾರತಿ ಪಾಟೀಲ ಸ್ವತಃ ಯೋಗಾಸನ ಕ್ರೀಡಾಪಟುಗಳು, ರಾಷ್ಟಿçÃಯ ಯೋಗಾಸನ ಕ್ರೀಡಾ ನಿರ್ಣಾಯಕರೂ ಆಗಿದ್ದಾರೆ.

ಪ್ರಸ್ತುತ ದಿನಮಾನದಲ್ಲಿ ಆರ್ಥಿಕವಾಗಿ ಶ್ರೀಮಂತರಿದ್ದರೂ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಿಲ್ಲದೆ, ನೆಮ್ಮದಿ ಮತ್ತು ಒತ್ತಡ ಮುಕ್ತ ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಆರೋಗ್ಯಯುತ, ಶಾಂತಿಯುತ, ಒತ್ತಡ ಮುಕ್ತ, ನೆಮ್ಮದಿ ಸುಖಕರ ಜೀವನ ಅನ್ವೇಷಣೆಯಲ್ಲಿದ್ದಾರೆ. ಇವರೆಲ್ಲರ ಅನ್ವೇಷಣೆಗೆ ಉತ್ತಮ ಪ್ರತಿಫಲ ನೀಡಲು ಬಸವ ಯೋಗ ಕೇಂದ್ರವು ಸದಾ ಶ್ರಮಿಸುತ್ತಲಿದೆ.

ಯೋಗಾಯೋಗ ಎನ್ನುವಂತೆ ಪರಮ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಎಡೆಯೂರು ಶ್ರೀ ಜಗ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಇವರು ಯೋಗ ಪಾಠಶಾಲೆಗೆ ನೀಡಿದ ೨ ಎಕರೆ ಸ್ಥಳದಲ್ಲಿ ಸುಸಜ್ಜಿತ ಭವ್ಯ ಯೋಗ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಯೋಜನೆ ಕೈಗೊಂಡು ಇತ್ತೀಚಿಗೆ ಪೂಜ್ಯರ ಸಾನ್ನಿಧ್ಯದಲ್ಲಿ ಡಿ.ಆರ್. ಪಾಟೀಲ, ಎಸ್.ವಿ. ಸಂಕನೂರ ಮುಂತಾದ ಗಣ್ಯರ ನೇತೃತ್ವದಲ್ಲಿ ಯೋಗ ಮಹಾವಿದ್ಯಾಲಯದ ನಿಯೋಜಿತ ಕಟ್ಟಡದ ಭೂಮಿ ಪೂಜೆ ಕಾರ್ಯ ನೆರವೇರಿದೆ.

ವಿಶೇಷವಾಗಿ ಬಸವ ಯೋಗ ಕೇಂದ್ರಕ್ಕೆ `ಬಸವÀ ಯೋಗ ಮಹಾವಿದ್ಯಾಲಯ’ ಎಂದು ಮರುನಾಮಕರಣೋತ್ಸವ, ಕರ್ನಾಟಕ ಸಂಭ್ರಮ-೫೦, ಸಾಧಕರಿಗೆ ಸನ್ಮಾನ, ಯೋಗ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಷ್ಟç ಪ್ರಗತಿಗೆ ಪೂರಕವಾಗಿರುವ ಅಭೂತಪೂರ್ವ ಈ ಕಾರ್ಯಕ್ರಮಕ್ಕೆ ಯೋಗಾಭಿಮಾನಿ, ಯೋಗಾಸಕ್ತರೆಲ್ಲರೂ ಆಗಮಿಸಿ ಶೋಭೆ ತನ್ನಿ.

`ಯೋಗವೇ ಜೀವನ-ಯೋಗ ಕಲಿಯಿರಿ-ಯೋಗ ಕಲಿಸಿರಿ’

-ಭಾರತಿ ಪಾಟೀಲ.

ಯೋಗ ಶಿಕ್ಷಕಿ, ಬಸವ ಯೋಗ ಕೇಂದ್ರ,

ಗದಗ.

ಭಾರತೀಯ ಪರಂಪರೆ ಬಗ್ಗೆ ಕೀಳರಿಮೆ ಹುಟ್ಟುಹಾಕುವ ಕೆಲಸಗಳು ನಡೆಯುತ್ತಿರುವುದು ಕಳವಳಕಾರಿ: ಡಾ. ಪಾವಗಡ ಪ್ರಕಾಶ್ ರಾವ್

0

ವಿಜಯಸಾಕ್ಷಿ ಸುದ್ದಿ, ಗದಗ: ಭಗವದ್ಗೀತೆಯನ್ನು ನೂರಾರು ವರ್ಷಗಳಿಂದ ಅನೇಕ ವಿದ್ವಾಂಸರು ಅಧ್ಯಯನ ಮಾಡಿ ತಮ್ಮದೇ ವಿಧಾನದಲ್ಲಿ ಅರ್ಥೈಸಿದ್ದು, ಭಗವದ್ಗೀತೆಯ ಪ್ರತಿ ಅಧ್ಯಯನದಲ್ಲೂ ಹೊಸ ವ್ಯಾಖ್ಯಾನ ಸಿಗುತ್ತದೆ ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 11ನೇ ದಿನದ ಪ್ರವಚನ ನೀಡಿ ಮಾತನಾಡುತ್ತಿದ್ದರು.

ಮೋಕ್ಷಕ್ಕಾಗಿ ತಪಸ್ಸು ಅನಿವಾರ್ಯವಾಗಿದ್ದು, ರಾಮಾಯಣವು ಆರಂಭವಾಗುವುದೇ ತಪಸ್ಸು ಎನ್ನುವ ಪದದಿಂದ. ಅದೇ ರೀತಿ ವರ್ಧತಾಂ ಎನ್ನುವ ಪದದಿಂದ ಮುಕ್ತಾಯವಾಗುತ್ತದೆ. ಎರಡೂ ಪದಗಳನ್ನು ಸೇರಿಸಿದರೆ ತಪಸ್ಸನ್ನು ವೃದ್ಧಿಸಿ ಎಂದು ವೇದ್ಯವಾಗುತ್ತದೆ.

ಮೊಘಲ್ ದೊರೆ ಷಹಜಹಾನ್ ಮಗನಾದ ದಾರಾಶಿಖೊ ಓರ್ವ ಮುಸ್ಲಿಂ ದೊರೆಯಾಗಿದ್ದರೂ ಸಹ ಉಪನಿಷತ್ತುಗಳನ್ನು ಮೊದಲ ಬಾರಿಗೆ ಪರ್ಷಿಯನ್ ಭಾಷೆಗೆ ಪಂಡಿತರಿAದ ಅನುವಾದ ಮಾಡಿಸಿದನು. ಪರಿಣಾಮವಾಗಿ ಮುಂದೆ ಲ್ಯಾಟಿನ್ ಭಾಷೆ ಅದೇ ರೀತಿ ಆಂಗ್ಲ ಭಾಷೆಗೂ ಉಪನಿಷತ್ತುಗಳು ಅನುವಾದವಾಗಿ ಜಗತ್ತಿನಾದ್ಯಂತ ಪಸರಿಸಿದವು. ಹಿಂದೂ ದೇವತೆಗಳ ಬಗ್ಗೆ ತಾತ್ಸಾರ ಭಾವನೆ ಹೊಂದಿದ್ದ ರಾಜಾರಾಂ ಮೋಹನ್ ರಾಯ್ ಅವರೂ ಸಹ ಅನುವಾದಿತ ಉಪನಿಷತ್ತುಗಳನ್ನು ಓದಿ ಬ್ರಹ್ಮ ಸಮಾಜ ಕಟ್ಟಿದರು.

ಭಾರತೀಯ ಪರಂಪರೆಯನ್ನು ನಾಶಮಾಡುವ, ಅದರ ಕುರಿತು ಕೀಳರಿಮೆ ಹುಟ್ಟುಹಾಕುವ ಕೆಲಸಗಳು ನಡೆಯುತ್ತಿರುವುದು ಕಳವಳಕಾರಿಯಾಗಿದ್ದು, ಭಾರತೀಯರು ಪ್ರಪಂಚದಲ್ಲೇ ಬುದ್ಧಿವಂತರಾಗಿದ್ದರೂ ವಿದೇಶಿಗರು ಭಾರತೀಯ ಜ್ಞಾನ ಉಚ್ಛಾçಯ ಸ್ಥಿತಿಗೆ ಏರುವುದನ್ನು ಸಹಿಸುವುದಿಲ್ಲ ಎಂದರು.

ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಎಸ್.ಎಸ್. ಶೆಟ್ಟರ್, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಲಿಂ. ಅಭಿನವ ಅನ್ನದಾನ ಶ್ರೀಗಳು ಶೈಕ್ಷಣಿಕ ಕ್ರಾಂತಿಯ ಹರಿಕಾರರೂ ಆಗಿದ್ದರು: ಎನ್.ಆರ್. ಗೌಡರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಅವರು, ಶೈಕ್ಷಣಿಕ ಕ್ರಾಂತಿಯ ಹರಿಕಾರರೂ ಆಗಿದ್ದರು. ವಿಶೇಷವಾಗಿ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಮಹಿಳಾ ವಿಚಾರ ಸಂಕಿರಣ, ಮಹಿಳೆಯರಿಗಾಗಿ ಬೆಳ್ಳಿ ತೇರು, ಮುತ್ತೆöÊದೆಯರಿಗೆ ಉಡಿ ತುಂಬುವುದರ ಮೂಲಕ ನಿರಂತರ ಕಾರ್ಯ ನಿರ್ವಹಿಸಿರುವ ಮಹಾ ಮಹಿಮರು ಎಂದು ಎಸ್‌ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.

ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಯವರ 3ನೇ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಿಜ್ಞಾನ, ಗಣಿತ ಹಾಗೂ ಎಲ್ಲ ವಿಷಯಗಳ ಕುರಿತಾಗಿ ತಮ್ಮದೇ ಆದ ಸರಳ ಭಿತ್ತಿಪತ್ರಗಳು, ಮಾದರಿಗಳು, ಪ್ರಯೋಗಗಳನ್ನು ಪ್ರದರ್ಶಿಸಿ ಪುಣ್ಯಸ್ಮರಣೋತ್ಸವಕ್ಕೆ ಹೊಸ ಮೆರಗನ್ನು ತಂದುಕೊಟ್ಟು, ಸ್ವಾಮೀಜಿಯವರ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾದರು.

ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನಪ್ಪ ಮೆಣಸಗಿ, ನಿಂಗನಗೌಡ ಲಕ್ಕನಗೌಡ್ರ, ಎ.ಟಿ. ಮಳ್ಳಳ್ಳಿ, ಎಂ.ಎಸ್. ಅತ್ತಾರ, ಎಸ್.ಎಫ್. ಧರ್ಮಾಯತ, ಬಿ.ಡಿ. ಯರಗೊಪ್ಪ, ಎಸ್.ಶಿವಮೂರ್ತಿ, ಕೆ.ಸಿ. ಜೋಗಿ, ಆರ್.ಎಂ. ಗುಳಬಾಳ, ವಿ.ಕೆ. ಚುಳಕಿ, ಎಸ್.ಬಿ. ಕುರುಡಗಿ, ಬಸಮ್ಮ ಅಸುಂಡಿ ಸೇರಿದಂತೆ ಸಿಬ್ಬಂದಿ ಇದ್ದರು.

ಗುರು-ವಿರಕ್ತರು ಬೇರೆ ಬೇರೆಯಲ್ಲ. ಅವರು ಎಂದಿಗೂ ಒಂದಾಗಿರಬೇಕು: ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗುರು-ವಿರಕ್ತರು ಬೇರೆ ಬೇರೆಯಲ್ಲ. ಅವರು ಎಂದಿಗೂ ಒಂದಾಗಿರಬೇಕು. ಇಬ್ಬರೂ ಮಾಡುತ್ತಿರುವುದು ಒಂದೇ ಕಾರ್ಯ. ಇದರಲ್ಲಿ ಯಾವುದೇ ಭೇದ-ಭಾವ ಬೇಡ. ಇದು ಶ್ರೀ ಹಾನಗಲ್ಲ ಗುರು ಕುಮಾರೇಶ್ವರರ ಆಶಯವೂ ಆಗಿತ್ತು ಎಂದು ಹಾಲಕೆರೆ ಸಂಸ್ಥಾನದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.

ನರೇಗಲ್ಲ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ನಡೆದಿರುವ ಶ್ರೀ ಗುರು ಹಾನಗಲ್ಲ ಗುರು ಕುಮಾರೇಶ್ವರರ ಪುರಾಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಮ್ಮ ಗುರುಗಳಾಗಿದ್ದ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಕನಸೂ ಸಹ ಅದೇ ಆಗಿತ್ತು. ಅದಕ್ಕಾಗಿಯೆ ನಮ್ಮ ಪಟ್ಟಾಧಿಕಾರದ ಸಮಯದಲ್ಲಿ ಧರ್ಮ ಧ್ವಜಾರೋಹಣವನ್ನು ಅವರು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳವರಿಂದಲೆ ಮಾಡಿಸಿದ್ದರು. ಹಾನಗಲ್ಲ ಶ್ರೀಗಳವರ ಪುರಾಣವು ಎಲ್ಲ ಸ್ವಾಮಿಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಅವರು ತಮಗಾಗಿ ಎಂದಿಗೂ ಬದುಕದೆ ಸಮಾಜಕ್ಕಾಗಿ, ಸಮಾಜೋದ್ಧಾರಕ್ಕಾಗಿ ಬದುಕಿದರು. ಇವರು ಜನಿಸಿ ಬರುತ್ತಾರೆ ಎಂಬ ಭವಿಷ್ಯವನ್ನು ಗಟ್ಟಿವಾಳಯ್ಯ ಎಂಬ ಶರಣರು ಒಂಬೈನೂರು ವರ್ಷಗಳ ಹಿಂದೆಯೆ ಹೇಳಿದ್ದರು. ಅದು ನಿಜವಾಯಿತಲ್ಲದೆ ಒಡೆದು ಛಿದ್ರವಾಗಿ ಹೋದ ವೀರಶೈವ ಸಮಾಜವನ್ನು ಮತ್ತೆ ಒಂದುಗೂಡಿಸುವಲ್ಲಿ ಅವರ ಪಾತ್ರ ದೊಡ್ಡದು ಎಂದು ಶ್ರೀಗಳು ಹೇಳಿದರು.

ಶ್ರೀ ಅನ್ನದಾನ ಸಂಸ್ಥೆಯಿAದ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾಗಲು ಹಾನಗಲ್ಲ ಕುಮಾರೇಶ್ವರರೆ ಮೂಲ ಕಾರಣ. ಅವರ ಪ್ರೇರಣೆಯಿಂದ ಬೆತ್ತದ ಅಜ್ಜನವರು ಅನುಷ್ಠಾನಕ್ಕೆ ಕುಳಿತದ್ದು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು. ಕನ್ನಡ ನಾಡಿನ ಮಠಗಳನ್ನು ಉಳಿಸಿ, ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಜೀವನದ ಪ್ರತಿ ಕ್ಷಣವನ್ನು ಸಮಾಜದ ಉದ್ಧಾರಕ್ಕಾಗಿಯೆ ತೇಯ್ದವರು ಕುಮಾರೇಶ್ವರರು. ಭೌತಿಕ ವಸ್ತುಗಳಿಂದ ಯಾವ ಸುಖವೂ ಇಲ್ಲ. ಅಂತರಂಗದಲ್ಲಿ ಪರಿವರ್ತನೆಯಾದಾಗ ಮಾತ್ರ ಮನುಷ್ಯನಲ್ಲಿ ಏನಾದರೂ ಬದಲಾವಣೆಯಾಗಲು ಸಾಧ್ಯ. ಇಂತಹ ಬದಲಾವಣೆಯನ್ನು ನಿಮ್ಮಲ್ಲಿ ತರಲು ಶ್ರೀ ಮಲ್ಲಿಕಾರ್ಜುನ ಶ್ರೀಗಳವರು ಈ ಜಾತ್ರಾ ಮಹೋತ್ಸವವನ್ನು ಏರ್ಪಡಿಸಿ, ಪುರಾಣವನ್ನು ಹಚ್ಚಿ ನಿಮ್ಮೆಲ್ಲರಿಗೂ ಸಂಸ್ಕಾರದ ರಸದೌತಣವನ್ನೇ ಉಣಬಡಿಸುತ್ತಿದ್ದಾರೆ. ಇದು ಶ್ಲಾಘನೀಯ ಎಂದರು.

ಪA. ಅನ್ನದಾನ ಶಾಸ್ತಿçಗಳು ಮಾತನಾಡಿ, ಶಿವಯೋಗ ಮಂದಿರ ಸ್ಥಾಪನೆಯಲ್ಲಿ ಕುಮಾರೇಶ್ವರರ ಪಾತ್ರ ಬಹಳಷ್ಟು ದೊಡ್ಡದಿದೆ. ನೀವು ಶಿವಯೋಗ ಮಂದಿರದ ಸೇವೆಯನ್ನು ಎಂದಿಗೂ ಮಾಡಿ ಪುಣ್ಯ ಸಂಪಾದಿಸಿಕೊಳ್ಳಿ. ಹಾನಗಲ್ಲ ಕುಮಾರೇಶ್ವರರ ಕ್ರಿಯಾಶೀಲತೆಗೆ ಶಿವಯೋಗ ಮಂದಿರವೇ ಸಾಕ್ಷಿಯಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಜೊತೆಗೆ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ: ಅಮರೀಶ ತೆಂಬದಮನಿ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕಾಂಗ್ರೆಸ್ ಪಕ್ಷದ ಜನಪರ ಆಡಳಿತವನ್ನು ಮೆಚ್ಚಿ ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನತೆ ಪಕ್ಷದ ಗೆಲುವಿಗೆ ಮತ ನೀಡಿದ್ದಾರೆ ಎಂದು ಲಕ್ಮೇಶ್ವರ ನಗರ ಘಟಕದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರೀಶ ತೆಂಬದಮನಿ ಹೇಳಿದರು.

ಅವರು ಶನಿವಾರ ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ ಬಳಿಕ ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು.

ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷದ ಮೇಲೆ ವಿನಾಕಾರಣ ಆರೋಪ ಮಾಡಿ ಪ್ರಚಾರ ಮಾಡಿದರೂ ಮತದಾರರು ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಪಕ್ಷದ ಗ್ಯಾರಂಟಿ ಯೋಜನೆಗಳ ಜತೆಗೆ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಜನ ಮನ್ನಣೆ ನೀಡಿದಂತಾಗಿದ್ದು, ಇನ್ನಾದರೂ ಬಿಜೆಪಿ ಸುಳ್ಳು ಆರೋಪ, ಅಪಪ್ರಚಾರ ಕೈಬಿಡಬೇಕು ಎಂದರು.

ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಕಾಂಗ್ರೆಸ್ ಪರ ಘೋಷಣೆ ಕೂಗಿದರು. ಈ ವೇಳೆ ಪಕ್ಷದ ಮುಖಂಡರಾದ ಪದ್ಮರಾಜ ಪಾಟೀಲ, ಸೋಮಣ್ಣ ಬೆಟಗೇರಿ, ಪುರಸಭೆ ಸದಸ್ಯ ಬಸವರಾಜ ಓದುನವರ, ನೀಲಪ್ಪ ಶರಸೂರಿ, ಯಲಪ್ಪ ಸೂರಣಗಿ, ಬಾಬಣ್ಣ ಅಳವಂಡಿ, ನಾಗರಾಜ ದೊಡ್ಡಮನಿ, ಇಸ್ಮಾಯಿಲ್ ಆಡೂರ, ನೀಲಪ್ಪ ಪಡಗೇರಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ಅಣ್ಣಪ್ಪ ರಾಮಗೇರಿ, ಶಿದ್ದಲಿಂಗಯ್ಯ ಪಶುಪತಿಮಠ, ಅಪ್ಜಲ್ ರಿತ್ತಿ, ಮಂಜಪ್ಪ ಶರಸೂರಿ, ಸೋಮಣ್ಣ ಲಮಾಣಿ, ನಂದೀಶ ಚಕ್ರಸಾಲಿ, ಹನುಮಂತ ಶರಸೂರಿ, ಎಂ.ಎA. ಗಾಡಗೊಳಿ, ರಿಯಾಜ ಡಾಲಾಯತ್ ಸೇರಿ ಕಾಂಗ್ರೆಸ್ ಕಾರ್ಯಕರ್ತರಿದ್ದರು.

ಮಹಿಳೆಯರು ಹೈನುಗಾರಿಕೆಯನ್ನು ಉದ್ಯೋಗವನ್ನಾಗಿಸಿಕೊಂಡು ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು: ಡೀನ್ ರಾಮಚಂದ್ರ ಬಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಹೈನುಗಾರಿಕೆಯನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಆ ಮೂಲಕ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದಾಗಿದೆ ಎಂದು ಗದುಗಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ರಾಮಚಂದ್ರ ಬಿ ಅಭಿಪ್ರಾಯಪಟ್ಟರು.

ಗದುಗಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ, ಗದಗ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಔಟ್‌ರಿಚ್ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಔಟ್‌ರಿಚ್ ಸಂಸ್ಥೆಯ ವಿಸ್ತರಣಾ ಕಾರ್ಯಕರ್ತರಿಗೆ ‘ವೈಜ್ಞಾನಿಕ ಹೈನುಗಾರಿಕೆ’ 2 ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ, ಕೃಷಿ ಅಧಾರಿತ ಉಪಕಸಬುಗಳು ಕೈಗೊಳ್ಳುವುದರೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಮಹಿಳಾ ಅಭಿವೃದ್ಧಿಗಾಗಿ ಹತ್ತು ಹಲವೆಂಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಆಧುನಿಕತೆಯ ಇಂದಿನ ದಿನಗಳಲ್ಲಿ ಹೈನುಗಾರಿಕೆಗೆ ಉತ್ತಮ ಅವಕಾಶಗಳಿವೆ ಸ್ವಲ್ಪು ಕಷ್ಟಪಟ್ಟರೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದರು.

ಡಾ.ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಅವರು ಆಕಳು ಮತ್ತು ಎಮ್ಮೆ ತಳಿಯ ಮಹತ್ವ, ಡಾ.ಮೋಹನ ಪಿ ‘ಪಶು ಕೃತಕ ಗರ್ಭಧಾರಣೆ, ಡಾ.ಶಿವಾನಂದ ಗೌಡರ ‘ಮೇವು ಉತ್ಪಾದನೆ ಮತ್ತು ನಿರ್ವಹಣೆ,  ಡಾ.ಅರುಣ ಸೋಮಗಂಧ ‘ಆಕಳು ಮತ್ತು ಎಮ್ಮೆಗಳ ರೋಗಗಳು ಹಾಗೂ ಹತೋಟಿ, ಡಾ.ಜಗನ್ನಾಥರಾವ್ ‘ಹಾಲು ಮತ್ತು ಹಾಲು ಉತ್ಪನ್ನಗಳು’ ವಿಷಯವಾಗಿ ಪರಿಣಾಮಕಾರಿ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಔಟ್‌ರಿಚ್ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕ ಗೋವಿಂದಯ್ಯ ಬಿ, ಕಾರ್ಯಕ್ರಮ ಸಂಯೋಜಕ ಲೋಹಿತ್ ಕಾಸರ ಮತ್ತು ರಿಲಾಯನ್ಸ್ ಪೌಂಡೇಶನ್‌ನ ಜೀರೋಂಪಿಯೋ ಉಪಸ್ಥಿತರಿದ್ದರು.

ಎರಡು ದಿನಗಳವರೆಗೆ ನಡೆದ ತರಬೇತಿ ಶಿಬಿರದಲ್ಲಿ ಔಟ್‌ರಿಚ್ ಸಂಸ್ಥೆಯ ವಿಸ್ತರಣಾ ಮಹಿಳಾ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೋಂಡು ಹಲವಾರು ವಿಷಯಗಳನ್ನು ತಿಳಿದುಕೊಂಡರು ಹಾಗೂ ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು.

error: Content is protected !!