Home Blog Page 2067

ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ: ಬಸವರಾಜ್ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಶಿಗ್ಗಾವಿ- ಸವಣೂರು ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ ಎಂದು ಮಾಜಿ ಸಿಎಂ ಹಾಗೂ  ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬಂದ ನಂತರ  ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಅಲ್ಲಿಯ ಜನರ ಸ್ಪಂದನೆ ನೋಡಿದರೆ ನಮಗೆ ಗೆಲ್ಲುವ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಸರ್ಕಾರ ಅವರದ್ದೇ ಇದೆ, ಆಡಳಿತ ಪಕ್ಷ ಅಂತ ಕಾಂಗ್ರೆಸ್  ಶಾಸಕರನ್ನು ಜನ ಆಯ್ಕೆ ಮಾಡಿದ್ದಾರೆ ಎಂದರು.

ನಾವು ಶಿಗ್ಗಾವಿ, ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ರ‍್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇನೆ. ಚುನಾವಣೆಯಲ್ಲಿ 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು, ಮಾಜಿ ಶಾಸಕರು ಬಂದು ಇಲ್ಲಿಯೇ ಕುಳಿತು ಪ್ರಚಾರ ಮಾಡಿದರು. ಸರ್ಕಾರ ವರ್ಸಸ್ ಬೊಮ್ಮಾಯಿ ಎಂದೇ ಬಿಂಬಿತವಾಯಿತು. ಅವರು ಸರ್ಕಾರದ ಯಂತ್ರ, ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿದರು.

ಶಿಗ್ಗಾವಿಯಲ್ಲಿ ಎಂಪಿ ಚುನಾವಣೆ ನಂತರ ನಾವು ಚನ್ನಾಗಿ ಕೆಲಸ ಮಾಡಿದ್ದೇವು. ಆದರೆ ಇಡೀ ರ‍್ಕಾರನೇ ಬಂತು. ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅನುಕೂಲ ಇರುತ್ತದೆ‌. ನಾವು ಕೂಡ ಒಂದು ಕಾಲದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೇವು. ಈ ಸರ್ಕಾರದ  ಕೆಲಸದ  ಮೇಲೆ ಮತ ಬಂದಿದೆ ಅಂತೇನಿಲ್ಲ. ನಾವು ಉಪ ಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದು ಅದಾದ ಮೇಲೆ ರ‍್ಕಾರ ಕಳೆದುಕೊಂಡಿದ್ದೇವು. ಹೀಗಾಗಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷ ಆಡಳಿತಕ್ಕೆ ಸರ್ಟಿಫಿಕೇಟ್ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಳ್ಮೆಯ ಪ್ರತಿರೂಪ: ಡಾ. ಕಲ್ಲಯ್ಯಜ್ಜ

ವಿಜಯಸಾಕ್ಷಿ ಸುದ್ದಿ, ಗದಗ: ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಾಕಷ್ಟು ಕಷ್ಟ ಬಂದರೂ ಧೃತಿಗೆಡದೇ ಕಠೋರ ತಪಸ್ಸು ಮಾಡುವ ಮೂಲಕ ಶಿವನೊಲುಮೆಯನ್ನು ಪಡೆದು ಸಮಾಜದ ಉದ್ಧಾರಕ್ಕಾಗಿ ಬಾಳಿ ಬದುಕಿ ಇಡೀ ಮಾನವ ಕುಲಕ್ಕೆ ಮತ್ತು ಸರ್ವ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದಾಳೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಕಲ್ಲಯ್ಯಜ್ಜನವರು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ರಡ್ಡಿ ಸಮಾಜ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ತಿಕ ಮಾಸದ ದೀಪೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಅಗಾಧವಾದ ಕೊಡುಗೆ ನೀಡಿದ್ದಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಲ್ಲಮ್ಮನ ಕಾಯಕನಿಷ್ಠೆ, ದೈವಭಕ್ತಿ ಮತ್ತು ಆದರ್ಶಮಯ ಜೀವನದ ಬಲದಿಂದ ಇಂದು ನಾವು ನೀವೆಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ ಎಂದರು.

ಮಹಾಯೋಗಿ ವೇಮನ ಅವರು ತ್ಯಾಗ ಜೀವನ ನಡೆಸುವ ಮೂಲಕ ಹಾಗೂ ವಚನ ಸಾಹಿತ್ಯಕ್ಕೆ ಬಹು ದೊಡ್ಡ ಆದರ್ಶದ ಕೊಡುಗೆಯನ್ನು ನೀಡುವ ಮೂಲಕ ಸಮಾಜದ ಸನ್ಮಾರ್ಗಕ್ಕೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.

ಗದಗ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ರಡ್ಡಿ ಸಂಘ ಸಮಾಜಮುಖಿ, ಜನಮುಖಿಯಾಗಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದರಲ್ಲದೆ, ಸಮಾಜದ ಮುಂಚೂಣಿಯಲ್ಲಿರುವ ಹಿರಿಯರು, ಮಹಿಳೆಯರು, ಯುವಕರು ಸಮಾಜದ ಬಲವರ್ಧನೆಗೆ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಎರಡೂ ಸಂಘಟನೆಯ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು: BJPಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ – ಹೆಚ್ ಕೆ ಪಾಟೀಲ್

0

ಗದಗ: ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ. ರಾಜ್ಯದ ಉಪಚುನಾವಣೆ ಬಹಳ ಮಹತ್ವದ್ದಾಗಿತ್ತು. ರಾಜ್ಯದ ಹಲವಾರು ಬೆಳೆವಣಿಗೆಗಳಿಗೆ ಸಮರ್ಪಕ ಉತ್ತರ ನೀಡಿ ಮಂಗಳಾರತಿ ಮಾಡಿದ್ದಾರೆ ಎಂದಿದ್ದಾರೆ.

ವಕ್ಫ್ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದರು. ಸಮಾಜ ಒಡೆಯುವ ದೊಡ್ಡ ಹುನ್ನಾರ ಮಾಡಿದ್ದರು. ಗ್ಯಾರಂಟಿ ನಿಲ್ಲಿಸುತ್ತೇವೆ ಅಂತ ಪ್ರಧಾನಿವರಿಗೂ ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದರು. ಮುಖ್ಯಮಂತ್ರಿ ತೇಜೋವಧೆ ಮಾಡಿ ಸರ್ಕಾರ ಉಳಿಯೋದಿಲ್ಲ ಅಂತ ಹೇಳಿದ್ರು. ಆದರೆ ಜಾಗೃತ ಮತದಾರ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವ್ಯಂಗವಾಡಿದ್ದಾರೆ.

ಚುನಾವಣೆ ಸೋಲಿನಿಂದ ಬಿಜೆಪಿ ಸುಳ್ಳು ನಡೆಯಲ್ಲ ಅಂತ ಅರಿತುಕೊಳ್ಳಬೇಕು. ಸಮಾಜ ಒಡೆಯುವ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಶಾಸ್ತಿ ಆಗಿದೆ. ವೈ ನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಿಯಾಂಕಾ ಗಾಂಧಿ ಆಯ್ಕೆ ಆಗಿದ್ದಾರೆ. ಈ ಚುನಾವಣೆ ಪರಿಣಾಮಗಳು ಬಿಜೆಪಿಯನ್ನ ಅಷ್ಟೇ ಸೋಲಿಸಿಲ್ಲ, ಸುಳ್ಳು ಹೇಳುವ ಪ್ರವೃತ್ತಿಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾ ಅವರನ್ನ ಸೋಲಿಸಿದೆ ಎಂದು ಹೇಳಿದರು.

ಇನ್ನೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಆಗಿರೋ ಪರಿಣಾಮ ಎಲ್ಲರಿಗೂ ಆಶ್ಚರ್ಯ ತಂದಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಜೊತೆಗೆ ಎಣಿಕೆ ಕಾರ್ಯದಲ್ಲಿ ಅನುಮಾನ ಬಂದಿದೆ. ಈ ಬಗ್ಗೆ ರಾಜಕೀಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ನನಗೆ ಸಂಪೂರ್ಣ ಮಾಹಿತಿ ಇಲ್ಲ ಈ ಬಗ್ಗೆ ಆದ್ದರಿಂದ ಈ ಬಗ್ಗೆ ಕಾಯ್ದು ನೋಡಿ ಅವಲೋಕನ ಮಾಡ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಮುಖಂಡರಾದ ಬಿ‌ ಬಿ ಅಸೂಟಿ, ಪ್ರಭು ಬುರಬುರೆ ಹಾಗೂ ಅಶೋಕ ಮಂದಾಲಿ ಸೇರಿದಂತೆ ಇತರರು ಇದ್ದರು.

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು..?

0

ರಾಮನಗರ: ಸೋಲಿನ ಹೊಣೆ ನಾನೇ ಹೊರುತ್ತೇನೆ, ನೆಮ್ಮದಿಯಿಂದ ಮಲಗುತ್ತೇನೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ.

ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.

ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.

ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗೆ ಬೆಟಗೇರಿ ಸಿಪಿಐ ಸಿಂಧೆ ಗುಂಡೇಟು!

0

ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗೆ ಗುಂಡು ಹಾರಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ನಡೆದಿದೆ. ಬಗರ್ ಅಲಿ ಅಮ್ಜದ್ ಅಲಿ ಇರಾನಿ(28) ಎಂಬ ಆರೋಪಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸಿಪಿಐ ಧೀರಜ್ ಸಿಂಧೆಯಿಂದ ಗುಂಡಿನ ದಾಳಿ ನಡೆದಿದೆ.ಆರೋಪಿ ಬಗರ್ ಅಲಿ ಮೊಣಕಾಲಿಗೆ ಗಾಯವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಡಾವಣೆ ಪೊಲೀಸ್ ಠಾಣೆ ಪೊಲೀಸರಾದ ಹನಮಂತ ಓಲೇಕಾರ, ಅಶೋಕ್ ಗಡದ ಮೇಲೆ ಆರೋಪಿ ಹಲ್ಲೆ ಮಾಡಿದ್ದು, ಈ‌ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದು, ರೋಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಂಗಾವತಿ ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದು, ಪೊಲೀಸರ ಹಲ್ಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಆರೋಪಿಯು, ಗದಗ ನಗರದ ಹೆಲ್ತ್ ಕ್ಯಾಂಪ್ ಬಳಿ ಕಳ್ಳತನದ ಆರೋಪದ ಮೇಲೆ ಗಂಗಾವತಿ ಪೊಲೀಸರು ಕರೆದೊಯ್ಯುವಾಗ ಜೂನ್ 28 ರಂದು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದನು.

ಹಲ್ಲೆ ಬಳಿಕ ಸ್ಕೂಟಿಯಲ್ಲಿ ಹೊಳೆಆಲೂರ ಗ್ರಾಮಕ್ಕೆ ಆರೋಪಿ ಹೋಗಿದ್ದನು. ನಂತರ ಹೊಳೆಆಲೂರನಿಂದ ಟ್ರೈನ್ ಮೂಲಕ‌ ಮಹಾರಾಷ್ಟ್ರಕ್ಕೆ ಹೋಗಿದ್ದ. ಇಂದು ಬಡಾವಣೆ ಪೊಲೀಸರು ಹೊಳೆಆಲೂರಗೆ ಪಂಚನಾಮೆ ಹೋಗಿ ವಾಪಸ್‌ ಬರುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗುವಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.

ಅಪ್ರಾಪ್ತೆ ಬಾಲಕಿ ಗರ್ಭಿಣಿ: ಸ್ವಂತ ಮಾವನಿಂದಲೇ ನೀಚ ಕೃತ್ಯ!

0

ನೆಲಮಂಗಲ:- ಸ್ವಂತ ಮಾವನಿಂದಲೇ ಅಪ್ರಾಪ್ತೆ ಬಾಲಕಿ ಗರ್ಭಿಣಿ ಆಗಿರುವ ಘಟನೆ ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಬಾಲಕಿ ತಾಯಿ ದೂರಿನ ಆಧಾರದ ಮೇಲೆ ನೆಲಮಂಗಲ ಟೌನ್ ಠಾಣೆಯಲ್ಲಿ ಬಿಎನ್​ಎಸ್ ಜೊತೆಗೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಯುವತಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗುತ್ತಿರಲಿಲ್ಲ. ಹೀಗಾಗಿ ಮಗಳನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ತಪಾಸಣೆ ಮಾಡಿಸಿದ್ದಾರೆ.

ಈ ವೇಳೆ ಬಾಲಕಿಯನ್ನ ತಪಾಸಣೆ ಮಾಡಿದ ವೈದ್ಯೆ ಡಾ.ಸೋನಿಯಾ ಅವರು ಮಗಳು ಗರ್ಭಿಣಿಯಾಗಿರುವುದು ಹೇಳಿದ್ದಾರೆ. ವಿಷಯ ತಿಳಿದ ಬಾಲಕಿಯ ತಾಯಿಗೆ ಅಘಾತವಾಗಿದೆ.ಸೆಪ್ಟೆಂಬರ್​ನಲ್ಲಿ ಆರೋಪಿ ಸೋದರ ಮಾವ ಮನೆಗೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬಲವಂತವಾಗಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣಿಗೆ ಶರಣಾದ ಕಾಪರ್ ಏಜ್ ಗ್ರೂಪ್ ಇನ್ಸ್ಟಿಟ್ಯೂಟ್ ಮಾಲೀಕ: ಕಾರಣ ನಿಗೂಢ!

0

ದಾವಣಗೆರೆ:- ಕಾಪರ್ ಏಜ್ ಗ್ರೂಪ್ ಇನ್ಸ್ಟಿಟ್ಯೂಟ್ ಮಾಲೀಕ ನೇಣಿಗೆ ಶರಣಾಗಿದ್ದು, ಸೂಸೈಡ್ ಗೆ ಕಾರಣ ತಿಳಿದು ಬಂದಿಲ್ಲ. ಘಟನೆ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

34 ವರ್ಷದ ಶರತ್‌ ಜಿ.ಎನ್ ನೇಣಿಗೆ ಶರಣಾದ ವ್ಯಕ್ತಿ. ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ‘ಕಾಪರ್ ಏಜ್ ಗ್ರೂಪ್ ಇನ್ಸ್ಟಿಟ್ಯೂಟ್’ ಮಾಲೀಕ ಶುಕ್ರವಾರ ಸ್ವಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಶರತ್, ಇತ್ತೀಚಿಗೆ ರಾಜಕೀಯದಲ್ಲಿ ಹೆಚ್ಚಿನ ಒಲವು ವ್ಯಕ್ತ ಪಡಿಸಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು.

ಶರತ್ ಹತ್ತಾರು ಕಡೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಸಂಸ್ಥೆಗಳನ್ನ ಕೂಡ ಆರಂಭಿಸಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಯ ಕಾರಣ ನಿಗೂಢವಾಗಿದೆ.

ಸರಣಿ ಅಪಘಾತ: ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಪಲ್ಟಿ! ತಪ್ಪಿದ ದುರಂತ!

0

ಮಂಗಳೂರು:- ಸರಣಿ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಉರುಳಿ ಬಿದ್ದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪರದ ಅಡ್ಡಹೊಳೆ ಎಂಬಲ್ಲಿ ಜರುಗಿದೆ.

ಬೆಳಗಿನ ಜಾವ ಹಿಂದಿನಿಂದ ಬರುತ್ತಿದ್ದ ಕಾರೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ನಂತರ ಖಾಸಗಿ ಟೂರಿಸ್ಟ್ ಬಸ್‌ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ ಎನ್ನಲಾಗಿದೆ.

ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದೆ. ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆಗೆ ಉರುಳಿದೆ. ಗಾಯಾಳುಗಳಿಗೆ ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಮಲ ಕೋಟೆ “ಕೈ” ವಶಕ್ಕೆ: ಮಾಜಿ ಸಿಎಂಗೆ ಮುಖಭಂಗ – ಯಾಸಿರ್ ಪಠಾಣ್ʼಗೆ ಜಯಭೇರಿ

0

ಹಾವೇರಿ: ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ನ.13 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ತೆರೆಬಿದ್ದಿದ್ದು, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ನ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮಗ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಸೋಲಾಗಿದೆ. ಈ ಹಿಂದೆ ಕಾಂಗ್ರೆಸ್‌ನ ಮತ್ತೋರ್ವ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್‌ ನೀಡದಿದ್ದಕ್ಕೆ ಬೇಸರಗೊಂಡಿದ್ದರು. ಆದರೆ ಅದನ್ನು ಶಮನಗೊಳಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.

ಒಟ್ಟು 18 ಸುತ್ತುಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹ್ಮದ್‌ ಪಠಾಣ್‌ 10,0756 ಮತ ಪಡೆದಿದ್ದು, ಬಿಜೆಪಿಯ ಭರತ್‌ ಬೊಮ್ಮಾಯಿ 87,308 ಪಡೆದಿದ್ಧಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ ವಿರುದ್ಧ 13,448 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.‌

ಅಜ್ಜಂಪೀರ್ ಖಾದ್ರಿ ಬಂಡಾಯ ಶಮನ ಆಗಿದ್ದು ಪಠಾಣ್ ಗೆ ಪ್ಲಸ್ ಆಯಿತು. ಇಷ್ಟೇ ಅಲ್ಲ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಣತಂತ್ರ ಹೆಣೆದಿದ್ದು, ವಾಲ್ಮೀಕಿ, ದಲಿತ ಮತದಾರರು ‘ಕೈ’ ಹಿಡಿದ ಲೆಕ್ಕಾಚಾರ ನಾಯಕರಿಗೆ ಇದೆ. ಸಚಿವ ಜಮೀರ್ ಮುಸ್ಲಿಂ ಮತದಾರರ ಓಲೈಕೆ ಮಾಡಿದ್ದು, ಪಠಾಣ್ ಪರ ಅಜ್ಜಂಪೀರ್ ಖಾದ್ರಿ ಪ್ರಚಾರ ಮಾಡಿದ್ದು, ಸಿಎಂ ಮುಡಾ ಸಂಕಷ್ಟದ ಅನುಕಂಪ ವರ್ಕೌಟ್ ಆಗಿದ್ದಲ್ಲದೇ, ಕುರುಬ ಸಮಾಜದ ಮತ ಕಾಂಗ್ರೆಸ್‌ಗೆ ವಾಲಿದ ನಂಬಿಕೆ ಆ ಪಕ್ಷದ ನಾಯಕರಲ್ಲಿದೆ.

ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈಗ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಅಭ್ಯರ್ಥಿಯಾಗಿದ್ದರಿಂದ ಹೆಚ್ಚು ಗಮನ ಸೆಳೆದಿತ್ತು. ಆದ್ರೆ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯಾಸೀರ್ ಪಠಾಣ್ ಗೆ 13,448 ಮತಗಳ ಅಂತರದಲ್ಲಿ ಗೆಲುವು ದೊರೆತಿದೆ. ಆದ್ರಿಂದ ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮುಖಭಂಗವಾಗಿದೆ.

Election Results: ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ʼಗೆ ಭರ್ಜರಿ ಗೆಲುವು!

0

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 25357 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತನ್ನ ರಾಜಕೀಯ ಇತಿಹಾಸದಲ್ಲೇ ದಾಖಲೆ ಮತಗಳನ್ನು ಸಿಪಿವೈ ಈ ಬಾರಿ ಪಡೆದಿದ್ದಾರೆ. ಈ ಹಿಂದೆ 5 ಬಾರಿ ಗೆದ್ದರೂ ಸಹ 85 ಸಾವಿರ ಮತಗಳನ್ನು ದಾಟಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಲಕ್ಷಕ್ಕೂ ಅಧಿಕ ಮತಗಳ ಪಡೆದು ದಾಖಲೆ ನಿರ್ಮಿಸಿದ್ದಾರೆ.

ಸದ್ಯ ಎಲ್ಲ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಗೆಲುವು ಪಡೆದಿದ್ದಾರೆ. 15ನೇ ಸುತ್ತಿನ ವೇಳೆ ಯೋಗೇಶ್ವರ್ ಅವರು 89,714 ಮತಗಳನ್ನು ಪಡೆದಿದ್ರೆ, ಇತ್ತ ನಿಖಿಲ್ ಅವರು ಕೇವಲ 64,688 ವೋಟ್ ಪಡೆದಿದ್ದರು. ಈ ಮೂಲಕ ಯೋಗೇಶ್ವರ್ ಅವರು 25,026 ಮತಗಳು ಮುನ್ನಡೆಯಲ್ಲಿದ್ದವರು ಕೊನೆವರೆಗೂ ಸತತ ಮುನ್ನಡೆಯಲ್ಲಿದ್ದರು. ನಿಖಿಲ್ ಮೊದಲು ಮುನ್ನಡೆ ಕಾಯ್ದುಕೊಂಡವರು ನಂತರ ಹಿನ್ನಡೆಗೆ ಬಂದರು.

 

error: Content is protected !!