Home Blog Page 2073

CPY ಭರ್ಜರಿ ಗೆಲುವು: ಹೊಳೆ ಆಂಜನೇಯನ ಹರಕೆ ತೀರಿಸಿದ ಪತ್ನಿ ಶೀಲಾ ಯೋಗೇಶ್ವರ್!

0

ಮಂಡ್ಯ: ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದ್ದಾರೆ.

ಆದ್ದರಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರಸಿದ್ಧ ಕ್ಷೇತ್ರ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಿಪಿ ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಭೇಟಿ ನೀಡಿದ್ದಾರೆ. ತಮ್ಮ ಪತಿ ಗೆಲುವಿನ ಬೆನ್ನಲ್ಲೇ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಶೀಲಾ ಯೋಗೇಶ್ವರ್, ದೇವರ ಹರಕೆ ತೀರಿಸಿದ್ರು.

ಹೌದು ಚನ್ನಪಟ್ಟಣ ಉಪ ಚುನಾವಣೆ ಪೂರ್ವದಲ್ಲಿ ಹೊಳೆ ಆಂಜನೇಯ ದೇಗುಲಕ್ಕೆ ಯೋಗೇಶ್ವರ್ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ಪತಿ ಯೋಗೇಶ್ವರ್ ಗೆಲುವಿಗಾಗಿ ಶೀಲಾ ಯೋಗೇಶ್ವರ್ ಹೊಳೆ ಆಂಜನೇಯನಿಗೆ ಒಂದು ಕಾಲು ರೂಪಾಯಿ ಕಟ್ಟಿ ಹರಕೆ ಕಟ್ಟಿಕೊಂಡಿದ್ದರು. ಈಗ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ..

ಅಂತರರಾಜ್ಯ ಕಳ್ಳನ ಮೇಲೆ ಪೊಲೀಸ್ ಫೈರಿಂಗ್: ಇರಾನಿ ಗ್ಯಾಂಗ್ ನ ಕಳ್ಳ ಅಂದರ್

0

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣ ಸಮೀಪದ ಕುರಹಟ್ಟಿ ಕಾಲುವೆ ಬಳಿ ಅಂತರರಾಜ್ಯ ಕಳ್ಳನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಈ ಹಿಂದೆ ಜೂನ್ 6, 2024ರಂದು ಗಂಗಾವತಿ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಇರಾನಿ ಗ್ಯಾಂಗ್‌ನ ಪ್ರಮುಖ ಅಂತರರಾಜ್ಯ ಕಳ್ಳನನ್ನು ಗದಗ ಜಿಲ್ಲೆಯ ಬೆಟಗೇರಿ ಪೊಲೀಸರು ಹೊಳೆಆಲೂರ ರೇಲ್ವೆ ನಿಲ್ದಾಣದಿಂದ ಬಂಧಿಸಿ ಕರೆತರುವ ಸಂದರ್ಭದಲ್ಲಿ ಆರೋಪಿ ಬಗರ್‌ಅಲಿ ಅಮ್ಜದ್‌ಅಲಿ ಇರಾನಿ, ಕುರಹಟ್ಟಿ ಗ್ರಾಮದ ಬಳಿ ಪೊಲೀಸರನ್ನು ಯಾಮಾರಿಸಿ, ವಾಹನದಿಂದ ಜಿಗಿದು ಓಡಿ ಹೊಗುತ್ತಿರುವಾಗ ಪೊಲೀಸ್ ಸಿಬ್ಬಂದಿಗಳು ತಡ ಮಾಡದೆ ಬೆನ್ನು ಹತ್ತಿದ್ದಾರೆ.ಈ ಸಂದರ್ಭದಲ್ಲಿ ಆರೋಪಿಯು ಹನುಮಂತಪ್ಪ ಓಲೇಕಾರ, ಅಶೋಕ ಗದಗ ಎಂಬ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಸಿಪಿಐ ಧೀರಜ್ ಶಿಂಧೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಆರೋಪಿ ಬಗ್ಗದಿದ್ದಾಗ, ಆರೋಪಿಯ ಎಡ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಆರೋಪಿಗೆ ರೋಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.ಘಟನೆಯ ವಿಷಯ ತಿಳಿಯುತ್ತಿದ್ದಂತೆ ರೋಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗಾಯಗೊಂಡ ಪೊಲೀಸ್ ಸಿಬ್ಬಂದಿಗಳ ಆರೋಗ್ಯವನ್ನು ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದರು.ಡಿವಾಯ್‌ಎಸ್ಪಿ ಪ್ರಭುಗೌಡ ಕಿರದಳ್ಳಿ, ಡಿವಾಯ್‌ಎಸ್ಪಿ ಮಹಾಂತೇಶ ಸಜ್ಜನ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ಸಿಬ್ಬಂದಿಗಳಿದ್ದರು.

ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ್ದಾರೆ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊAಕುಗಳನ್ನು ತಿದ್ದಿದ್ದಾರೆ. ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.

ತೋಂಟದಾರ್ಯ ಮಠದಲ್ಲಿ ಜರುಗಿದ 2720ನೇ ಶಿವಾನುಭವ ಕಾರ್ಯಕ್ರಮದದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಕನ್ನಡ ನಾಡ-ನುಡಿ, ಸಂಸ್ಕೃತಿಯಲ್ಲಿ ಬೆರೆತು ಹೋದ ಒಬ್ಬ ಶ್ರೇಷ್ಠ ದಾಸವರೇಣ್ಯ ಕನಕದಾಸರು. ಕನಕದಾಸರ ಬದುಕು ಮತ್ತು ಆದರ್ಶಗಳು ಸಾರ್ವಕಾಲಿಕ. ಶರಣರ ವಚನ ಮತ್ತು ದಾಸರ ಪದಗಳು ಸಮಾಜದಲ್ಲಿ ಜಾತಿ, ಮತ, ಪಂಥ ಬೇಧಗಳನ್ನು ಅಳಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ ಎಂದರು.

ಕನಕದಾಸ ಜಯಂತಿಯ ನಿಮಿತ್ತ `ಸಂತ ಶ್ರೇಷ್ಠ ಕನಕದಾಸರು’ ಎಂಬ ವಿಷಯದ ಕುರಿತು ಧಾರವಾಡ ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ವಡಿಗೇರಿಯವರು ಅವರ ಕೀರ್ತನೆಗಳ, ಮುಂಡಿಗೆಗಳ, ಕೃತಿಗಳ ಕುರಿತು ತಮ್ಮ ಉಪನ್ಯಾಸದಲ್ಲಿ ಬೆಳಕು ಚೆಲ್ಲಿದರು.

`ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಈ ವಿಷಯವಾಗಿ ಗದುಗಿನ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಮಾತನಾಡಿ, ನಿತ್ಯ ಜೀವನದಲ್ಲಿ ಹಾಸ್ಯ ಹೇಗೆ ಹಾಸುಹೊಕ್ಕಾಗಿದೆ ಎಂದು ತಮ್ಮ ಮನೆಯಿಂದ ಹಿಡಿದು ಸುತ್ತಮುತ್ತಲಿನ ವಾತಾವರಣದಲ್ಲಿ ಹಾಸ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ತಿಳಿಸುತ್ತಾ ನಗೆಯ ಹೊನಲನ್ನು ಹರಿಸಿದರು. ನಗು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಗಬೇಕು ಮತ್ತೆ ಮತ್ತೆ ನಗಬೇಕು ಎಂದು ಹೇಳಿದರು.

ದೆಹಲಿಯಯ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಾಲ ಕವಿಯತ್ರಿ ಪ್ರಣತಿ ರಾಜೇಂದ್ರ ಗಡಾದ ಇವರನ್ನು ಮಕ್ಕಳ ದಿನಾಚರಣೆ ನಿಮಿತ್ತ ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರವರು ಸಂಗೀತ ಸೇವೆ ನೆರವೇರಿಸಿದರು. ಧರ್ಮ ಗ್ರಂಥ ಪಠಣವನ್ನು ಸಂಕೇತ ಎಸ್.ತಕ್ಕಡಿ ಹಾಗೂ ವಚನ ಚಿಂತನವನ್ನು ಭುವನ್ ಎಸ್. ಅಕ್ಕಮ್ಮನವರ ಮಾಡಿದರು. ದಾಸೋಹ ಸೇವೆಯನ್ನು ಶರಣ ಹುಚ್ಚಣ್ಣ ಶಹಾಪೂರ, ಹಾಲೇಶ್ವರ ಟ್ರೇಡಿಂಗ್ ಕಂಪನಿ ಗದಗ ಇವರು ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಶರಣ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿಗಳಾದ ವೀರಣ್ಣ ಗೋಟಡಕಿ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸನ್ಮಾನಿತರನ್ನು ಪರಿಚಯಿಸಿದರು. ವಿಧ್ಯಾ ಗಂಜಿಹಾಳ ಸ್ವಾಗತಿಸಿದರೆ, ಗೌರಕ್ಕ ಬಡಿಗಣ್ಣವರ ನಿರೂಪಿಸಿದರು.

ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ: ಸಚಿವ ಎಚ್.ಕೆ. ಪಾಟೀಲ ಭರವಸೆ

0

ವಿಜಯಸಾಕ್ಷಿ ಸುದ್ದಿ, ಗದಗ: ಒಳಮೀಸಲಾತಿ ವಿರೋಧೀಸುವ ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಗದಗ ನಗರದಲ್ಲಿ ಒಳಮೀಸಲಾತಿ ವಿರೋಧಿಸಿ ಪರಿಶಿಷ್ಟ ಜಾತಿಯ ಹಲವು ಸಮುದಾಯಗಳು ಶುಕ್ರವಾರ ಧರ್ಮಗುರುಗಳ ನೇತೃತ್ವದಲ್ಲಿ ಒಳಮೀಸಲಾತಿ ವಿರೋಧೀಸುವ ಪರಿಶಿಷ್ಟ ಜಾತಿ ಸಮುದಾಯಗಳ ರಾಜ್ಯ ಸಮಿತಿ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕು ನಿಮಗೆ ಮೀಸಲಾತಿ ತಪ್ಪಬಾರದು. ಮೀಸಲಾತಿ ತಪ್ಪುವ ಪ್ರಶ್ನೆಯೇ ಇಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ತಿದ್ದುವುದು, ತಗೆದು ಹಾಕಲು ನಮ್ಮ ದೇಶದಲ್ಲಿ ಯಾರಿಗೂ ಹಾಗೂ ಯಾವುದೇ ಸರ್ಕಾರಕ್ಕೂ ನಾವು ಬೀಡುವುದಿಲ್ಲ. ನಾನು ನಿಮ್ಮವನಾಗಿ ನಿಮ್ಮ ವಾದವನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು, ನಿಮ್ಮೊಂದಿಗೆ ಇರುತ್ತೇನೆ. ನಿವೃತ್ತ ನ್ಯಾ. ನಾಗಮೋಹನದಾಸ ಅವರೊಂದಿಗೆ ಚರ್ಚಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಪಾದಯಾತ್ರೆಯ ವೇಳೆ ಧರ್ಮಗುರುಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗಸುಗೂರು, ಕುಮಾರ ಮಹಾರಾಜರು ಬಾಗಲಕೋಟ, ಸರ್ದಾರ ಸೇವಾಲಾಲ ಮಹಾರಾಜ ಚಿತ್ರದುರ್ಗ, ಮುರಾಹರಿ ಮಹಾರಾಜ ಗುಲ್ಬರ್ಗಾ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಸಮಾಜ ಮುಖಂಡ ರಾಘವೇಂದ್ರ ನಾಯಕ ಇವರುಗಳು ತಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಹಾಗೂ ಒಳಮೀಸಲಾತಿಯ ಕುರಿತು ಹಕ್ಕೊತ್ತಾಯ ಮಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಲವು ಪ.ಜಾತಿಯ ಭಾದಿತ ಸಮುದಾಯದ ಜನರು, ರಸ್ತೆಯುದ್ದಕ್ಕೂ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ, ತಮ್ಮ ಸಮುದಾಯದ ಧ್ವಜವನ್ನು ಬಿತ್ತರಿಸುತ್ತಾ ಸಾಗಿದರು. ಕೆಲ ಸಮಯಗಳಕಾಲ ರಸ್ತೆ ಬ್ಲಾಕ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಪಾದಯಾತ್ರೆಯಲ್ಲಿ ಹಲವು ಸಮುದಾಯದ ಮುಖಂಡರು ಭಾಗಿಯಾಗಿ ಒಳಮೀಸಲಾತಿ ವಿರೋಧಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಧರ್ಮಗುರುಗಳಾದ ಶ್ರೀ ಶಿವಪ್ರಕಾಶ ಮಹಾರಾಜರು ಕೊಟ್ಟೂರು, ಶ್ರೀ ಮಹಾದೇವ ಮಹಾರಾಜ್ ಮಿಂಚನಾಳ, ಶ್ರೀ ಭಿಮಸಿಂಗ ಮಹಾರಾಜ್ ಇಂಟಗಿಯಾಳ, ಶ್ರೀ ತಿಪ್ಪೇಸ್ವಾಮಿ ಸುರಪುರ, ಶ್ರೀ ಶಿವಾನಂದ ಮಹಾರಾಜ್ ನಿಲಾನಗರ, ಶ್ರೀ ಗೋಸಾವಿ ಮಹಾರಾಜ ಕೊಪ್ಪಳ, ಪ್ರಮುಖರಾದ ಕೆ.ಸಿ. ನಭಾಪುರ, ನೀಲು ರಾಠೋಡ, ಪಾಂಡು ಚವ್ಹಾಣ, ಚಂದ್ರಕಾಂತ ಚವ್ಹಾಣ, ಪರಮೇಶ ನಾಯಕ, ಅನಿಲ ಕಾರಭಾರಿ, ಭರತ ನಾಯಕ, ಹನುಮಂತ ನಾಯಕ, ಆಂಜನೇಯ ಕಟಗಿ, ನಾಗರೆಡ್ಡಿ ನಿಡಗುಂದಿ, ಉದಯಕುಮಾರ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ವಿಠ್ಠಲ ತೋಟದ, ಸುಭಾಷ ಗುಡಿಮನಿ, ಶ್ರೀನಿವಾಸ್ ಬೇವಿನಕಟ್ಟಿ, ಚಂದ್ರಾ ನಾಯಕ, ಅನಿಲ ಕಾರಭಾರಿ, ಐ.ಎಸ್. ಪೂಜಾರ, ದಯಾನಂದ ಪವಾರ್, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಧನುರಾಮ ತಂಬೂರಿ, ತುಕಾರಾಮ ಲಮಾಣಿ, ಜಾನು ಲಮಾಣಿ, ಈರಣ್ಣ ಲಮಾಣಿ, ಭಿಮಸಿಂಗ ರಾಠೋಡ, ಆಂಜನೇಯ ಕಟಗಿ, ಮೋಹನ ಭಜಂತ್ರಿ, ಸೋಮು ಲಮಾಣಿ, ರಾಘವೇಂದ್ರ, ದೇವಪ್ಪ ಲಮಾಣಿ, ತಾವರೆಪ್ಪ ಲಮಾಣಿ, ಕುಬೇರಪ್ಪ ರಾಠೋಡ, ಸೋಮರೆಡ್ಡಿ, ಧನಸಿಂಗ ಲಮಾಣಿ, ಗೋಪಾಲ ಪೂಜಾರ, ಪರಶುರಾಮ ರಾಠೋಡ, ಪುರಪ್ಪ ನಾಯಕ, ನುರಪ್ಪ ನಾಯಕ, ಚಂದ್ರಾ ನಾಯಕ, ಟಿ.ಡಿ. ಪೂಜಾರ, ಸುರೇಶ್ ಮಹಾರಾಜ್, ಎಲ್.ಆರ್. ಚವ್ಹಾಣ, ಖಿಮಪ್ಪ ನಾಯಕ ಮುಂತಾದವರಿದ್ದರು.

ಮನೆಗಳ ನಿರ್ಮಾಣ ಕಾರ್ಯಕ್ಕೆ ಸಚಿವ ಎಚ್.ಕೆ. ಪಾಟೀಲರಿಂದ ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಈ ಪ್ರದೇಶದಲ್ಲಿನ 36 ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪ್ರತಿ ಮನೆಯು 6-7ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದರೊಂದಿಗೆ ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಗದಗ ನಗರದ ವಾರ್ಡ್ ನಂ.೩೦ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಸದರಿ ಮನೆಗಳು ಬಡವರಿಗೆ ವಿತರಿಸುವ ಮನೆಗಳಾಗಿದ್ದು, ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಮನೆ ನಿರ್ಮಿಸುವ ಮೂಲಕ ಬಡವರ ಸೇವೆ ಮಾಡುವಂತೆ ಸಚಿವರು ಸೂಚಿಸಿದರು.

ಈ ಪ್ರದೇಶದ ಹಲವರ ಬೇಡಿಕೆಯಾಗಿರುವ ರೇಷನ್ ಕಾರ್ಡ್ ಸಮಸ್ಯೆ ಕುರಿತಂತೆ ಮಾತನಾಡಿದ ಸಚಿವರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಬಿ.ಬಿ. ಅಸೂಟಿಯವರು ಈ ವೇಳೆ ನಮ್ಮ ಜೊತೆಗಿದ್ದಾರೆ. ನಿಮಗೆ ಎದುರಾಗಿರುವ ರೇಷನ್ ಕಾರ್ಡ್ ಕುರಿತ ಸಮಸ್ಯೆಯನ್ನು ಅವರು ಇನ್ನೊಂದು ತಿಂಗಳ ಒಳಗಾಗಿ ಸರಿಪಡಿಸಲಿದ್ದಾರೆ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಪ್ರಭು ಬುರಬುರೆ, ನಗರ ಸಭೆ ಸದಸ್ಯೆ ಪದ್ಮಾ ಕಟಗಿ, ಆಂಜನೇಯ ಕಟಗಿ ಸೇರಿದಂತೆ ಹಲವರು ಹಾಜರಿದ್ದರು.

ಅನ್ವೇಷಣಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಡಾ.ಎಚ್.ಕೆ.ಪಾಟೀಲ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಶುಕ್ರವಾರ ಗದಗ ನಗರದ ತೆರಂಗಾ ಪಾರ್ಕ್ ನಲ್ಲಿ ಸಭೆ ನಡೆಸಿದರು.

ಲಕ್ಕುಂಡಿ ಗ್ರಾಮದಲ್ಲಿನ ಶಾಸನಗಳು, ಪ್ರಾಚ್ಯಾವಶೇಷಗಳ ಅನ್ವೇಷಣಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮ ಯಶಸ್ವಿಗೆ ಕೈಗೊಂಡಿರುವ ಯೋಜನೆಗಳ ಕುರಿತು ಮಾಹಿತಿ ಪಡೆದ ಸಚಿವರು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಅನ್ವೇಷಣೆ ಕಾರ್ಯದಲ್ಲಿ ದೊರೆತ ಶಾಸನ, ಮೂರ್ತಿಗಳಿಗೆ ಯಾವುದೇ ತರಹದ ಹಾನಿಯಾಗದಂತೆ ಸುರಕ್ಷಿತವಾಗಿ ಒಂದೆಡೆ ಸಂಗ್ರಹಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಾಮಗ್ರಿ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಾಚರಣೆ ಯಶಸ್ವಿಯಾಗಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಪ್ರಿಯಾಂಕ ಗಾಂಧಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯದ ಮೂರು ಕ್ಷೇತ್ರ ಸೇರಿದಂತೆ ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಭರ್ಜರಿ ಗೆಲುವನ್ನು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಮ್ಮ ಅಭ್ಯರ್ಥಿಗಳಿಗೆ ಗೆಲುವನ್ನು ತಂದುಕೊಟ್ಟಿದ್ದಾರೆ. ಬಿಜೆಪಿಯವರು ಸರಕಾರದ ಬಗ್ಗೆ ಅಪಪ್ರಚಾರವನ್ನು ಮಾಡುವ ಮೂಲಕ ಗೆಲ್ಲಲು ಮುಂದಾಗಿದ್ದರು. ಆದರೆ ಮೂರು ಕ್ಷೇತ್ರಗಳ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಜಾರ್ಖAಡ್‌ನಲ್ಲಿಯೂ ಕಾಂಗ್ರೆಸ್ ಸರಕಾರ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ವಯನಾಡಿನಲ್ಲಿ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಗೆಲ್ಲುವ ಮೂಲಕ ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಸರಕಾರ ನಾಡಿನ ಜನ ಮೆಚ್ಚುವ ರಿತಿಯಲ್ಲಿ ತನ್ನ ಆಡಳಿತವನ್ನು ನಡೆಸಲಿದೆ ಎಂದರು.

ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಯೂಸುಪ್ ಇಟಗಿ, ಅಂದಪ್ಪ ಬಿಚ್ಚೂರ, ಸಂಗು ನವಲಗುಂದ, ಅಪ್ಪು ಗಿರಡ್ಡಿ, ಆನಂದ ಚಂಗಳಿ, ಶಿವು ಹುಲ್ಲೂರ, ಮೌನೇಶ ಹಾದಿಮನಿ, ದುರ್ಗಪ್ಪ ಹಿರೇಮನಿ, ಕುಮಾರ ಗೌಡನ್ನವರ, ಮಲಿಕ ಯಲಿಗಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ನಿರ್ಣಾಯಕನಾದ ಮತದಾರ ಅರ್ಹ ನಾಯಕನ ಆಯ್ಕೆಗೆ ಆದ್ಯತೆ ನೀಡಬೇಕು: ಲೋಹಿತ್ ನೆಲವಿಗಿ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಭಾರತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನದ ಮೂಲಕ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ನಿರ್ಣಾಯಕನಾದ ಮತದಾರ ಯೋಗ್ಯ, ಸುಶಿಕ್ಷಿತ, ಅರ್ಹ ನಾಯಕನ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಲೋಹಿತ್ ನೆಲವಿಗಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ.ಪೂ), ಮತದಾರರ ಸಾಕ್ಷರತಾ ಕ್ಲಬ್ ಇವರ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶನಿವಾರ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ (ಎನ್‌ವಿಡಿ) ರಸಪ್ರಶ್ನೆ, ಭಿತ್ತಿಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನತೆ ಈ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು, ಅದರಲ್ಲೂ ಯುವ ಮತದಾರರು ದೇಶದ ಭವಿಷ್ಯ. ನಾವು ಮುಂದೆ ಬಂದು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ. ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡುವದರಿಂದ ಅರ್ಹ ವ್ಯಕ್ತಿ ಆಯ್ಕೆಯಾಗುತ್ತಾರೆ. ಮುಂಬರುವ ಪೀಳಿಗೆಗೆ ತಪ್ಪದೇ ಮತ ಚಲಾಯಿಸಲು ಬಲವಾದ ಜಾಲವನ್ನು ನಿರ್ಮಿಸಲು ನಾವು ಪ್ರೋತ್ಸಾಹಿಸಬೇಕು ಎಂದ ಅವರು, ೧೮ ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊAಡು ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಸರಕಾರಿ ಪ.ಪೂ ಕಾಲೇಜು ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಮಾತನಾಡಿ, ವ್ಮತದಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಂತರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ರಸಪ್ರಶ್ನೆ, ಭಿತ್ತಿಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ವಿಜೇತರು ಸ್ಪರ್ಧೆ ಮಾಡುವಂತೆ ಅವಕಾಶಗಳಿದ್ದು, ಅದಕ್ಕಾಗಿ ಉತ್ತಮವಾಗಿ ಸಿದ್ಧರಾಗಿ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತರುವ ಕಾರ್ಯವನ್ನು ಮಾಡುವಂತೆ ಹೇಳಿದರು.

ಸಭೆಯಲ್ಲಿ ಎಸ್‌ಎಂಜೆವಿಜೆ ಕಾಲೇಜು ಪ್ರಾಚಾರ್ಯ ಜಾನಾ ನಾಯಕ್, ಉಪನ್ಯಾಸಕಿ ಸತ್ಯಮ್ಮ ಭಜಂತ್ರಿ, ಪ್ರಾಚಾರ್ಯ ಡಿ.ಎಸ್. ಪ್ಯಾಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಶಿಂಗಟಾಲೂರ ನಿರೂಪಿಸಿದರು.

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸಿ, ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ: ಉಮರ ಫಾರೂಕ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಚನ್ನಪಟ್ಟಣ, ಶಿಗ್ಗಾಂವ, ಸಂಡೂರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಗದಗ ಜಿಲ್ಲಾ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದ ಜನತೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಒಲವನ್ನು ತೋರಿಸಿ, ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ವಿಜಯೋತ್ಸವದಲ್ಲಿ ಗದಗ ಶಹರ ಘಟಕದ ಉಪಾಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ ನಾಮನಿರ್ದೇಶಿತ ಸದಸ್ಯ ಮಹಮ್ಮದ ಎನ್.ಶಾಲಗಾರ, ಎಂ.ಬಿ. ನದಾಫ್ ವಕೀಲರು, ಸಮಾಜ ಸೇವಕರಾದ ಅನ್ವರ ಶಿರಹಟ್ಟಿ, ವೀರಯ್ಯ ಬರದೂರಮಠ, ಹಾಜೀ ಜೀವನಸಾಬ ಮಂಗಳೂರು, ಇಮಾಮಸಾಬ ಜಾಫರ ಢಾಲಾಯತ, ಶಂಕರಗೌಡ್ರು, ನಾಗರಾಜ ಖೋಡೆ, ಶಿವು ಮಧುರಕರ, ಇಲಿಯಾಸ ಹುಬ್ಬಳ್ಳಿ, ಆಸಿಫ್ ಹುಬ್ಬಳ್ಳಿ ಮುಂತಾದವರು ಭಾಗವಹಿಸಿದ್ದರು.

ಸರ್ದಾರ್ ಪಟೇಲ ಸ್ಮರಣಾರ್ಥ ಏಕತಾ ಓಟ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ನೆಹರು ಯುವ ಕೇಂದ್ರ ಗದಗ ಮತ್ತು ಶ್ರೀ ಎಫ್.ಬಿ. ಪೂಜಾರ್ ಸರಕಾರಿ ಪದವಿಪೂರ್ವ ಕಾಲೇಜು, ರಾಷ್ಟಿçÃಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಸವರಾಜ್ ಮ.ಕೊಂಚಿಗೇರಿ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಏಕತೆಗಾಗಿ ಓಟ ಮತ್ತು ಸಂಕಲ್ಪ @2047 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಭೂದಾನಿಗಳಾದ ವೈದ್ಯ ಚನ್ನವೀರಪ್ಪ ಕೊಂಚಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಕನಕಮ್ಮ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಲಹೆಗಳನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ತಿಪ್ಪಣ್ಣ ಕೊಂಚಿಗೇರಿ, ಹೇಮಾ ಹರ್ಲಾಪುರ, ಸಂಗಮೇಶ ನೀರಲಗಿ, ವೀರೇಂದ್ರ ಗೌಡ ಪಾಟೀಲ್, ಈರಯ್ಯ ಪಾಟೀಲ್, ಸಿದ್ಧಲಿಂಗ ಅಂಗಡಿ, ಬಸವರಾಜ್ ಗಿರಿತಮ್ಮನವರ್, ಕೊಟ್ರಯ್ಯ ಹೊಂಬಾಲಮಠ, ರವಿಕುಮಾರ್ ಹೊಂಬಾಳಿ ಪಾಲ್ಗೊಂಡಿದ್ದರು.

ಲಿAಗರಾಜ್ ಯತ್ನಹಳ್ಳಿ ಸ್ವಾಗತಿಸಿದರೆ, ಶರಣಪ್ಪ ಕಲಗುಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಯೋತಿ ಅಡವಿ ವಂದಿಸಿದರು. ಪರಸಪ್ಪ ತಳವಾರ್, ಮಂಜುನಾಥ್ ಹಾರ್ಲಾಪುರ, ರವಿ ನರೇಗಲ್ ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!