Home Blog Page 2081

ದೆಹಲಿಗೆ ಬಂದು ಚಾಡಿ ಹೇಳುವ ಕೆಲಸವನ್ನು ನಾನು ಮಾಡುವುದಿಲ್ಲ: ಬಿವೈ ವಿಜಯೇಂದ್ರ

0

ನವದೆಹಲಿ: ದೆಹಲಿಗೆ ಬಂದು ಚಾಡಿ ಹೇಳುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದೇವಾಲಯಗಳಿಗೂ ವಕ್ಫ್ ನೋಟಿಸ್ ನೀಡಿದ್ದಾರೆ. ವಕ್ಫ್​ ವಿರುದ್ಧ ಮೂರು ತಂಡ ಮಾಡಿ ಅಹವಾಲು ಸ್ವೀಕರಿಸುತ್ತಿದ್ದೇವೆ.

ಹೈಕಮಾಂಡ್ ನಾಯಕರು ನನಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ದೆಹಲಿಗೆ ಬಂದು ಚಾಡಿ ಹೇಳುವ ಕೆಲಸವನ್ನು ನಾನು ಮಾಡುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ದೂರು ನೀಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಈಗಾಗಲೇ ಸೋಲೊಪ್ಪಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಶಿಗ್ಗಾಂವಿಯಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಭರತ್ ಗೆಲ್ಲುತ್ತಾರೆ. ಸಂಡೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಜಯೇಂದ್ರ ಹೇಳಿದರು.

ಜಮೀರ್ ವಿರುದ್ಧ ಕ್ರಮ ಜರುಗಿಸುವ ಕೆಲಸ ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು: ಜಿ ಪರಮೇಶ್ವರ್

0

ಮೈಸೂರು: ಜಮೀರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕೆಲಸ ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಲ್ಲ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.

ಎಕ್ಸಿಟ್ ಪೋಲ್ ಗಳ ಸಮೀಕ್ಷೆ ಬೇರೆ ಇರಬಹುದು ಆದರೆ ಎಲ್ಲರೂ ಆಶ್ಚರ್ಯಪಡುವ ರೀತಿಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪರಮೇಶ್ವರ್ ಹೇಳಿದರು.  ಜಮೀರ್ ಅಹ್ಮದ್ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕೆಲಸ ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಹೇಳಿದರು.

ಧಾರವಾಡ: ನೋಡು ನೋಡುತ್ತಿದ್ದಂತೆ ರಸ್ತೆಯಲ್ಲೇ ಹೊತ್ತಿ ಉರಿದ ಕ್ಯಾಂಟರ್!

0

ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ ಹತ್ತಿ ಬೀಜ ಹೊತ್ತು ಸಾಗುತ್ತಿದ್ದ ಕ್ಯಾಂಟರ್ ಹೊತ್ತಿ ಉರಿದ ಘಟನೆ ಜಿಲ್ಲೆಯ ಬೈಪಾಸ್‌ನಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ಈ ಕ್ಯಾಂಟ‌ರ್ ವಾಹನ ಹೋಗುತ್ತಿತ್ತು. ಈ ವೇಳೆ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಾಹನ ನಡು ರಸ್ತೆಯಲ್ಲೇ ಹೊತ್ತಿ ಉರಿದಿದೆ.

ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಹಾಗೂ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು. ಅಷ್ಟರಲ್ಲಾಗಲೇ ವಾಹನ ಭಾಗಶಃ ಸುಟ್ಟಿತ್ತು. ಇನ್ನೂ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಬಿಜೆಪಿ ರಾಜಕೀಯ ಬಿಟ್ಟು ಬೇರೇನೂ ಮಾಡುತ್ತಿಲ್ಲ: ಸಚಿವ ಎಂಬಿ ಪಾಟೀಲ್

0

ವಿಜಯಪುರ: ಬಿಜೆಪಿ ರಾಜಕೀಯ ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜಕೀಯ ಬಿಟ್ಟು ಬೇರೇನೂ ಮಾಡುತ್ತಿಲ್ಲ, ಇಷ್ಟು ವರ್ಷ ಕುಂಭಕರ್ಣ ನಿದ್ರೆಯಲ್ಲಿದವರು ಈಗ ಎಚ್ಚೆತ್ತುಕೊಂಡಿದ್ದಾರೆ, ಗೆಜೆಟ್ ನೋಟಿಫೀಕೇಶ್ 1974ರಿಂದ ಇದೆ,

ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಅದನ್ನು ರದ್ದು ಮಾಡಲಿಲ್ಲ? ಮುಸ್ಲಿಂ ಸಮುದಾಯದವರಿಗೂ ನೋಟೀಸ್ ಜಾರಿಯಾಗಿವೆ, ಕೇವಲ ಹಿಂದೂಗಳಿಗೆ ಮಾತ್ರವಲ್ಲ, ವಕ್ಫ್ ಬೋರ್ಡ್ ನಿಂತ ತಪ್ಪಾಗಿದ್ದರೆ ಅದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರೈತರಿಗೆ ಅನ್ಯಾಯವಾಗಿರೋದು ಬಿಜೆಪಿ ಆಡಳಿತದ ಸಂದರ್ಭದಲ್ಲಿ: ಸಚಿವ ಚಲುವರಾಯಸ್ವಾಮಿ

0

ಮಂಡ್ಯ: ರೈತರಿಗೆ ಅನ್ಯಾಯವಾಗಿರೋದು ಬಿಜೆಪಿ ಆಡಳಿತದ ಸಂದರ್ಭದಲ್ಲಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ವಿಶೇಷವಾದ ತೀರ್ಮಾನ ತೆಗೆದುಕೊಂಡು ಕಾರ್ಡ್ ರದ್ದು ಮಾಡಿಲ್ಲ.

ನಾವು ಜನರ ಪರ ಇದ್ದೇವೆ. ಬಿಜೆಪಿಯವರದ್ದು ಮೊಸರಿನಲ್ಲಿ‌ ಕಲ್ಲು ಹುಡುಕುವ ಕೆಲಸ ಎಂದರು. ಬಿಜೆಪಿ  ಅವರ ಕಾಲದಲ್ಲೇ ವಕ್ಫ್ ಖಾತೆ ಬದಲಾವಣೆ ಆಗಿದೆ. ಅವರು ಕಾಲದಲ್ಲಿ ನಿರ್ದೇಶನದ ಮೇರೆಗೆ ಖಾತೆ ಬದಲಾವಣೆ ಆಗಿದೆ. ರೈತರಿಗೆ ಅನ್ಯಾಯವಾಗಿರೋದು ಬಿಜೆಪಿ ಆಡಳಿತದ ಸಂದರ್ಭದಲ್ಲಿ ಎಂದು ಹೇಳಿದರು.

ಇನ್ನೂ ಕೇಂದ್ರದ ಎನ್ ಡಿಎ ರೈತರ ಪರ ಅಂತ ಹೇಳುತ್ತಾರೆ. ರಾಜ್ಯದ ಅಭಿವೃದ್ಧಿ, ಜನಪರವಾದ ಕಾರ್ಯಕ್ರಮ ಮಾಡಿಲ್ಲ. ಅವರು ಐದು‌ ಗ್ಯಾರಂಟಿಗೆ  ಸರಿಸಮಾನವಾದ ಒಂದು ಕಾರ್ಯಕ್ರಮ ಕೊಟ್ಟರೇ ನಾವು ಒಪ್ಪುತ್ತೇವೆ. ಕೇಂದ್ರದಿಂದ ಅಕ್ಕಿ ಕೊಡದೇ ರಾಜಕಾರಣ ಮಾಡಿದರು ಎಂದು ಕಿಡಿಕಾರಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಗೆ ಮತ್ತೊಂದು ಸಂಕಷ್ಟ: ಶವದ ಮುಂದೆ ನಿಂತಿರುವ ಫೋಟೊ ರಿಟ್ರೀವ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐದು ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಇದೀಗ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಬೆನ್ನು ನೋವಿನ ಕಾರಣದಿಂದ ಚಿಕಿತ್ಸೆಗಾಗಿ ದರ್ಶನ್ ಗೆ ಆರು ವಾರಗಳ ಕಾಲ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.

ಮಧ್ಯಂತರ ಜಾಮೀನು ಸಿಕ್ಕ ಖುಷಿಯಲ್ಲಿರುವ ದರ್ಶನ್ ಈಗ ಫುಲ್ ಟೆನ್ಷನ್ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಮತ್ತೊಂದು ಪ್ರಬಲ ಸಾಕ್ಷಿ ಬೆಳಕಿಗೆ ಬಂದಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ನಿಂತಿರುವ ಚಿತ್ರ ಇದೀಗ ಪೊಲೀಸರಿಗೆ ಲಭ್ಯವಾಗಿದ್ದುಅದನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಕೇಳಿ ಬಂದಿತ್ತು. ದರ್ಶನ್, ರೇಣುಕಾ ಸ್ವಾಮಿಗೆ ಕೋಪದಲ್ಲಿ ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೋದಲ್ಲಿ ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿದ್ದಾರೆ. ಪ್ರಕರಣದ ಆರೋಪಿಯೊಬ್ಬರ ಮೊಬೈಲ್​ನಿಂದ ಈ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೊರೆತ ಸಾಕ್ಷ್ಯಗಳನ್ನು ಪರೀಕ್ಷೆಗಾಗಿ ಹೈದರಾಬಾದ್ ಹಾಗೂ ಬೆಂಗಳೂರಿನ ಎಫ್​ಎಸ್​ಎಲ್ ಕೇಂದ್ರಗಳಿಗೆ ಕಳಿಸಿದ್ದರು. ಹೈದರಾಬಾದ್​ನಿಂದ ಕೆಲವು ವರದಿಗಳು ಬರುವುದು ಬಾಕಿ ಇದ್ದವು. ಅವು ಈಗ ಬಂದಿದ್ದು, ಆರೋಪಿ ಪವನ್​ ಅವರ ಮೊಬೈಲ್​ನಿಂದ ಕ್ಲಿಕ್ಕಿಸಲಾದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ. ರೇಣುಕಾ ಸ್ವಾಮಿ ಶವನದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಚಿತ್ರವನ್ನು ಪವನ್ ಕ್ಲಿಕ್ಕಿಸಿದ್ದರಂತೆ. ಆ ನಂತರ ಅವನ್ನು ಡಿಲೀಟ್ ಮಾಡಿದ್ದರು. ಆದರೆ ಎಫ್​ಎಸ್​ಎಲ್​ ಕೇಂದ್ರದವರು ತಂತ್ರಜ್ಞಾನ ಬಳಸಿ ಆ ಫೋಟೊಗಳನ್ನು ರಿಟ್ರೀವ್ ಮಾಡಿದ್ದಾರೆ.

ಈಗ ಲಭ್ಯವಾಗಿರುವ ಚಿತ್ರದಲ್ಲಿ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿ ದರ್ಶನ್ ನಿಂತಿರುವ ಚಿತ್ರವಿದೆ. ಚಿತ್ರದಲ್ಲಿ ಪ್ರಕರಣ ಇತರೆ ಕೆಲವು ಆರೋಪಿಗಳು ಸಹ ಇದ್ದಾರೆ. ಚಿತ್ರದಲ್ಲಿ ರೇಣುಕಾ ಸ್ವಾಮಿಯ ಶವವೂ ಇದೆ. ಈ ಚಿತ್ರವನ್ನು ಪವನ್ ತೆಗೆದಿದ್ದಾರೆ. ಪವನ್ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.

ಐಶ್ವರ್ಯಾ ರೈ, ಅಭಿಷೇಕ್ ನಡುವೆ ಮನಸ್ತಾಪ: ಕೊನೆಗೂ ಸ್ಪಷ್ಟನೆ ನೀಡಿದ ಅಮಿತಾಬ್ ಬಚ್ಚನ್

ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವೂ ಸರಿ ಇಲ್ಲ. ಇದೇ ಕಾರಣಕ್ಕೆ ಐಶ್ವರ್ಯಾ ಮಗಳು ಹಾಗೂ ತಾಯಿಯೊಂದಿಗೆ ವಾಸವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಇತ್ತೀಚೆಗೆ ಐಶ್ವರ್ಯಾ ಮಗಳು ಆರಾಧ್ಯ ಹುಟ್ಟುಹಬ್ಬ ಆಚರಿಸಿದ್ದರು ಬಚ್ಚನ್ ಕುಟುಂಬದ ಯಾರೊಬ್ಬರು ಅದರಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಈ ಜೋಡಿ ಮಧ್ಯೆ ಮನಸ್ತಾಪ ಇದೆ ಅನ್ನೋದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಇದುವರೆಗೂ ಐಶ್ ಅಥವಾ ಬಚ್ಚನ್ ಕುಟುಂಬವಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ.ಇದೀಗ ಮೊದಲ ಭಾರಿಗೆ ವದತಿಗಳಿಗೆ ಅಮಿತಾಭ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ.

ಅಮಿತಾಭ್ ಬಚ್ಚನ್ ಇದೀಗ ಹೊಸ ಬ್ಲಾಗ್ ಬರೆದುಕೊಂಡಿದ್ದಾರೆ. ಇದರಲ್ಲಿ ಅವರು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಏಕೆಂದರೆ ಅದು ಖಾಸಗಿ ವಿಚಾರ. ಊಹಾಪೋಹಗಳು ಯಾವಾಗಲೂ ಊಹಾಪೋಹಗಳೇ. ಪರಿಶೀಲನೆ ಮಾಡದೇ ಇರುವ ವಿಚಾರ ಅಸತ್ಯವೇ’ ಎಂದಿದ್ದಾರೆ.

‘ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭ ಆಗಬಹುದು. ಆದರೆ, ನನ್ನ ಗಮನ ಕುಟುಂಬದ ಮೇಲೆ ಇರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ ಸಂಸಾರದಲ್ಲಿ ಸಮಸ್ಯೆ ಇದೆಯೇ ಎನ್ನುವ ವಾಕ್ಯವನ್ನು ಪ್ರಶ್ನೆ ಹಾಕಿ ಬರೆಯಲಾಗುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ ಅಮಿತಾಭ್ ಬಚ್ಚನ್.

‘ನಿಮಗೆ ಏನಿಷ್ಟವೋ ಅದನ್ನು ಬರೆದುಕೊಳ್ಳಿ. ನೀವು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬರೆದಾಗ ನೀವು ಬರೆದಿದ್ದೂ ಪ್ರಶ್ನೆ ಆಗಬಹುದು. ಇದನ್ನು ಅವರು ನಂಬುತ್ತಾರೆ ಮತ್ತು ಅದನ್ನು ವಿಸ್ತರಿಸುತ್ತಾರೆ. ಇದರಿಂದ ನಿಮ್ಮ ಬರವಣಿಗೆಗೆ ಬೆಲೆ ಬರುತ್ತದೆ. ಅಸತ್ಯ ವಿಚಾರಗಳಿಗೆ ಓದುಗ ಪ್ರತಿಕ್ರಿಯೆ ನೀಡುತ್ತಾನೆ ಎಂದರೆ ವಿಚಾರ ಮತ್ತೂ ವಿಸ್ತಾರ ಆಗುತ್ತದೆ. ಇದು ವಿಚಾರದಲ್ಲಿರುವ ವ್ಯಕ್ತಿ ಮೇಲೆ ಪ್ರಭಾವ ಬೀರುತ್ತದೆ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ.

ಊರಿಗೆ ಹೋಗಲು ಸಿಗದ ಬಸ್: ಕೋಪಗೊಂಡು ಕಲ್ಲು ಎಸೆದ ಪ್ರಯಾಣಿಕ ಅರೆಸ್ಟ್!

0

ರಾಯಚೂರು:- ಶಕ್ತಿ ಯೋಜನೆ ಜಾರಿ ಆದ ಮೇಲೆ ಬಸ್ ನಲ್ಲಿ ಓಡಾಡೋದೆ ಕಷ್ಟ ಆಗಿಬಿಟ್ಟಿದೆ. ಒಂದು ಸರಿಯಾದ ಸಮಯಕ್ಕೆ ಬಸ್ ಇಲ್ಲ, ಮತ್ತೊಂದು ಕಡೆ ಬರುವ ಬಸ್ ಗಳೆಲ್ಲಾ ತುಂಬು ರಶ್ ನಲ್ಲೇ ಬರುತ್ತಿದ್ದು, ಪ್ರಯಾಣಿಕರನ್ನು ಕೆರಳಿಸುವಂತೆ ಮಾಡಿದೆ.

ಅದರಂತೆ ಊರಿಗೆ ಹೋಗಲು ಬಸ್ ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ತಿಮ್ಮಣ್ಣ ಬಂಧಿತ ಆರೋಪಿ. ಲಿಂಗಸುಗೂರಿನ ಗೋಲಪಲ್ಲಿಯ ಗ್ರಾಮದ ಬಳಿ ನ.19ರ ಬೆಳಗಿನ ಜಾವ 2ರ ವೇಳೆ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿದ್ದವು. ಅಲ್ಲದೇ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಈ ಘಟನೆ ಪೊಲೀಸರಿಗೆ ತಲೆನೋವಾಗಿತ್ತು. ಕಳ್ಳತನ ಮಾಡಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿ ತನ್ನ ಅಕ್ಕ, ಬಾವನನ್ನ ಬೆಂಗಳೂರಿಗೆ ಕಳುಹಿಸಲು ಬಸ್ ಸಿಗದೆ ಬೇಸರಗೊಂಡಿದ್ದ. ಬಳಿಕ ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೆಳಗಿನ ಜಾವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು.

ಸಧ್ಯ ಓರ್ವರನ್ನು ಬಂಧಿಸಿದ್ದು, ಉಳಿದವರು ಎಸ್ಕೇಪ್ ಆಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ.

Power Cut: ಇಂದು ಬೆಂಗಳೂರಿನಲ್ಲಿ ಪವರ್ ಕಟ್! ಯಾವ ಏರಿಯಾ, ಎಷ್ಟು ಗಂಟೆಗೆ ವಿದ್ಯುತ್ ಕಡಿತ; ಇಲ್ಲಿದೆ ಡೀಟೈಲ್ಸ್!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ ಪವರ್ ಕಟ್ ಇರಲಿದೆ. ಬೆಳಗ್ಗೆ 10:30ರಿಂದ ಮಧ್ಯಾಹ್ನ 3:30ರ ತನಕ ನಗರದ ಶಿವನಹಳ್ಳಿ, ಶ್ರೀನಿಧಿ ಲೇಔಟ್, ಪುಟ್ಟೇನಹಳ್ಳಿ, ಪಾವನಿ, ಸಿಆರ್​ಪಿಎಫ್​, ರಾಮಗೊಂಡನಹಳ್ಳಿ, ಐವಿಆರ್​ಐ, ಶಿರ್ಕೆ ಅಪಾರ್ಟ್ ಮೆಂಟ್, ಬಿಎಂಎಸ್ ಹಾಸ್ಟೆಲ್, 5ನೇ ಹಂತ ಯಲಹಂಕ, ಹೊಸಪಟ್ಟಣ ಅನಂತಪುರ, ಪುಟ್ಟೇನಹಳ್ಳಿ ಪಾವನಿ,

ಸುರದೇನಪುರ, ಇಸ್ರೋ ಲೇಔಟ್, ಆಕಾಶಿನಾ, ಬೆಸ್ಕಾಂ, ಎಲ್​​ಬಿಎಸ್ ನಗರ, ವೈಎನೈ, ಎ, ಬಿ, ಸೆಕ್ಟರ್, ಆವಲಹಳ್ಳಿ, ಎಸ್.ಎನ್.ಹಳ್ಳಿ, ರಾಜಾ ನುಕುಂಟೆ, ಹೊನ್ನೇನಹಳ್ಳಿ ನಾಗೇನಹಳ್ಳಿ, ಎ.ವಿ. ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲ್ಲಿಕುಂಟೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಈ ಸಂಬಂಧ ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

Crime News: ಟೋಲ್ ಕಟ್ಟಿ ಎಂದ ಮಹಿಳಾ ಸಿಬ್ಬಂದಿಗೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ!

0

ಮಂಡ್ಯ:- ಇತ್ತೀಚಿನ ದಿನಗಳಲ್ಲಿ ಟೋಲ್ ಕಟ್ಟೋ ವಿಚಾರಕ್ಕೆ ಟೋಲ್ ಸಿಬ್ಬಂದಿಗಳು ಹಾಗೂ ವಾಹನ ಸವಾರರ ನಡುವೆ ಕಿರಿಕ್ ನಡೆಯುತ್ತಿರುತ್ತಲೇ ಇರುತ್ತದೆ.

ಸಾಮಾನ್ಯ ಸವಾರರು ಹಣ ಕಟ್ಟೋಕೆ ಹಿಂದೆ ಮುಂದೆ ನೋಡೋದು ಸಹಜ. ಆದರೆ ರಾಜಕೀಯ ಮುಖಂಡರಿಗೇನಾಗಿದೆ. ಜನರಿಗೆ ಮಾದರಿ ಆಗಬೇಕಾದವರೇ ಈ ರೀತಿ ವರ್ತನೆ ಮಾಡಿದ್ರೆ ಹೇಗೆ!? ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಎಸ್, ರಾಜಕೀಯ ಪುಡಾರಿಗಳು ಪುಂಡಾಟ ನಡೆಸಿ ಟೋಲ್ ದುಡ್ಡು ಕಟ್ಟದೇ ಧಿಮಾಕು ಪ್ರದರ್ಶನ ತೋರಿದ್ದಾರೆ. ಈ ಘಟನೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜರುಗಿದೆ.

ಟೋಲ್ ಕಟ್ಟಿ ಎಂದಿದ್ದಕ್ಕೆ ಕಾಂಗ್ರೆಸ್‌ ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿದ್ದು ಅಲ್ಲದೇ ಹಲ್ಲೆ ನಡೆಸಿದ್ದಾರೆ. ನಿನ್ನೆ ಮದ್ಯಾಹ್ನ ಕಾಂಗ್ರೆಸ್ ಪಕ್ಷದ ಸಮಿತಿ ಒಂದರ ಪದಾಧಿಕಾರಿ ಬೋರ್ಡ್‌ ಹಾಕಿದ ಕಾರು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್‌ಗೆ ಬಂದಿದೆ.

ಮೈಸೂರು ಕಡೆಗೆ ಹೊರಟಿದ್ದ ಕಾರು ಚಾಲಕ ಮತ್ತು ಅದರ ಒಳಗಡೆ ಇದ್ದ ಪ್ರಯಾಣಿಕರು ಟೋಲ್‌ ಕಟ್ಟಲು ನಿರಾಕರಿಸಿದ್ದಾರೆ. ನಂತರ ಯಾಕೆ ಕಾರನ್ನು ಬಿಡುತ್ತಿಲ್ಲ ಎಂದು ಪ್ರಶ್ನಿಸಿ ಕೈ ಮುಖಂಡ ಕಾರಿನಿಂದ ಇಳಿದು ಅವಾಜ್ ಹಾಕಿದ್ದಾನೆ.

ನಾನು ಕಾಂಗ್ರೆಸ್‌ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಟೋಲ್‌ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆ ಕೆಳಗೆ ಇಳಿದು ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

error: Content is protected !!