Home Blog Page 2085

ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಜೃಂಭಣೆಯ ಕನ್ನಡೋತ್ಸವ, ಗೌರಿ ಹುಣ್ಣಿಮೆ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಗದಗ ಮತ್ತು ಮಹಾಂತ ಕಲಾ ಬಳಗ ಗದಗ ಇವುಗಳ ಸಹಯೋಗದಲ್ಲಿ ಕನ್ನಡೋತ್ಸವ ಮತ್ತು ಗೌರಿ ಹುಣ್ಣಿಮೆ ಆಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಕನ್ನಡದ ಗ್ರಾಮೀಣ ಹಬ್ಬವಾದ ಗೌರಿ ಹುಣ್ಣಿಮೆಯನ್ನು ಸಕ್ಕರೆ ಆರತಿ ಬೆಳಗುವುದರೊಂದಿಗೆ ಟ್ಯಾಗೋರ ರಸ್ತೆಯ ನಿವಾಸಿಗಳು ಅತಿಥಿಗಳನ್ನು ಬರಮಾಡಿಕೊಂಡು ವಿನೂತನವಾಗಿ ಕನ್ನಡದ ದೀಪವನ್ನು ಹಚ್ಚಿದರು. ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮದಲ್ಲಿ ಕವಿಗಳಾದ ಶರಣಪ್ಪ ಹೊಸಂಗಡಿ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಪಾಟೀಲ, ನಗರಸಭೆಯ ಸದಸ್ಯ ಪ್ರಕಾಶ ಅಂಗಡಿ, ಮಾಧ್ಯಮಿಕ ಶಾಲಾ ಸಂಘದ ಅಧ್ಯಕ್ಷ ಬಸನಗೌಡ ನಿಂಬನಗೌಡ ಅವರನ್ನು ಸನ್ಮಾನಿಸಲಾಯಿತು. ಗದಗ ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಕಾರ್ಯಕ್ರಮದ ಅಧ್ಯಕ್ಷಯೆ ವಹಿಸಿದ್ದರು.

ಪವಿತ್ರಾ ಮುದಗಲ್ಲ ಅತಿಥಿಗಳನ್ನು ಸ್ವಾಗತಿಸಿದರು. ನೀಲಮ್ಮ ಅಂಗಡಿ ಪ್ರಾರ್ಥಿಸಿದರು. ಸುನಂದಾ ನಿಂಬನಗೌಡರ ಜನಪದ ಹಾಡುಗಳನ್ನು ಹಾಡಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಸೌಮ್ಯ ಉರುಳಿ ಮತ್ತು ರವಿ ಹೊಸೂರ ಅತಿಥಿಗಳನ್ನು ಪರಿಚಯಿಸಿದರು. ಕೋಶಾಧ್ಯಕ್ಷರಾದ ಪಾರ್ವತಿ ಬೇವಿನಮರದ ಗೌರಿ ಪದಗಳನ್ನು ಹಾಡಿದರೆ, ವಿಶ್ವನಾಥ ಬೇಂದ್ರೆಯವರು ನಾಟಕಗಳನ್ನು ನಿರ್ದೇಶಿಸಿದರು. ಡಿ.ಎಸ್. ನಾಯಕ ನಾಟಕದ ಸಂಭಾಷಣೆಗಳನ್ನು ಹೇಳಿದರು. ಕೊನೆಯಲ್ಲಿ ವಂದನಾ ಅಂಗಡಿ ವಂದಿಸಿದರು.

ಸಂಘಟನಾ ಕಾರ್ಯದರ್ಶಿ ಪುಷ್ಪಾ ಭಂಡಾರಿ, ಮೋಹನ ಮುದಗಲ್ಲ, ಚೇತನ ಅಂಗಡಿ, ರಮೇಶ ಉರುಳಿ, ಶರಣು ದೊಡ್ಡೂರ, ಮಹಾಂತೇಶ ಪೂಜಾರ, ಸಿದ್ಧಲಿಂಗಪ್ಪ ಹಗರನ್ನವರ, ಪ್ರೇಮಲತಾ ಕೊಠಾರಿ, ಗಡಾದ ಸಹೋದರರು, ಪಂಡಿತಯ್ಯ ಬಣ್ಣನೂಲಮಠ, ರತ್ನ ಮುಗಳಿ, ಎಂ.ಎಸ್. ಅಂಗಡಿ, ಪ್ರದೀಪ ಕಡದಾಳ, ಮಂಜುನಾಥ ದೇಸಾಯಿ, ಸುರೇಶ ಬಳಗಾರ, ಕಾಳಮ್ಮ ಕಮ್ಮಾರ ಉಪಸ್ಥಿತರಿದ್ದರು.

ಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕು: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಶ್ರವಣವು ಒಂದು ಉತ್ತಮ ಸಾಧನವಾಗಿದ್ದು, ಇದರಿಂದ ಮನುಷ್ಯನಿಗೆ ವಿಶೇಷ ಶಕ್ತಿ ದೊರಕುತ್ತದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ನಡೆದಿರುವ ಶ್ರೀ ಹಾನಗಲ್ಲ ಗುರುಕುಮಾರೇಶ್ವರ ಪುರಾಣದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ತನ್ನ ಆಯುಷ್ಯವನ್ನು ಸಮರ್ಪಕವಾಗಿ ಕಳೆಯಬೇಕು. ಯಾವಾಗಲೂ ಸದಾಚಾರ ಸಂಪನ್ನನಾಗಿ ತನ್ನ ಆಯುಷ್ಯ ಕಳೆಯಲು ಪ್ರಯತ್ನಿಸಬೇಕು. ಮನುಷ್ಯ ತನ್ನ ನಡೆ-ನುಡಿಗಳಿಂದ, ಆಚಾರ-ವಿಚಾರಗಳಿಂದ, ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಗುಣದಿಂದ ಆತ ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ. ಆದ್ದರಿಂದ ಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕೆಂದು ಶ್ರೀಗಳು ತಿಳಿಸಿದರು.

ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ, ಹಾನಗಲ್ಲ ಗುರುಕುಮಾರ ಶಿವಯೋಗಿಗಳು ಸಮಾಜಕ್ಕೆ ಅಪಾರವಾದ ಕಾಣಿಕೆಯನ್ನು ನೀಡಿದ್ದಾರೆ. ಆಚಾರಕ್ಕೆ ಪರಿಭಾಷೆಯನ್ನು ಬೆರದವರು ಹಾನಗಲ್ಲ ಗುರು ಕುಮಾರೇಶ್ವರರು. ಯಾವನಲ್ಲಿ ದಾನ, ಜ್ಞಾನ ಮತ್ತು ಸೇವೆಯ ಗುಣಗಳಿರುತ್ತವೆಯೋ ಆತ ಈ ಸಮಾದಲ್ಲಿ ಎಲ್ಲರಿಂದಲೂ ಪೂಜಿಸಲ್ಪಡುತ್ತಾನೆ. ಎಲ್ಲರಲ್ಲಿಯೂ ಈ ಮೂರೂ ಗುಣಗಳಿರಲು ಸಾಧ್ಯವಿಲ್ಲ. ಇವು ಒಂದೊಂದು ರತ್ನಗಳಾಗಿದ್ದು, ಇದರಲ್ಲಿ ಯಾವುದಾದರೊಂದು ಇದ್ದರೂ ಅವನು ಸರ್ವಮಾನ್ಯನಾಗುತ್ತಾನೆ ಎಂದರು.

ಹಾನಗಲ್ಲ ಕುಮಾರ ಶಿವಯೋಗಿಗಳು ವೀರ ವೈರಾಗ್ಯ ಚಕ್ರವರ್ತಿಗಳು. ಅವರಲ್ಲಿ ಸನ್ಯಾಸತ್ವವು ಅತ್ಯಂತ ಉನ್ನತ ಮಟ್ಟದಲ್ಲಿತ್ತು. ಸ್ವತಃ ತಾಯಿಯೇ ತಮ್ಮನ್ನು ಭೇಟಿಯಾಗಲು ಬಂದಾಗಲೂ ಸಹ ಅವರು ಅವರನ್ನು ಭೇಟಿಯಾಗದೆ ಬೆನ್ನು ತಿರುಗಿಸಿ ಹೋದ ಮಹಾ ಮಹಿಮರು. ಸಾರ್ವಜನಿಕ ಜೀವನದ ಹಣವನ್ನು ಎಂದಿಗೂ ಸ್ವಂತಕ್ಕೆ ಬಳಸದ ಅವರು, ಸಮಾಜದ ಉದ್ಧಾರಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಶ್ರೇಷ್ಠ ಮಹಾತ್ಮರು ಎಂದರು.

ಸಭೆಯನ್ನುದ್ದೇಶಿಸಿ ವರ್ತಕ ಮುತ್ತಣ್ಣ ಪಲ್ಲೇದ ಮಾತನಾಡಿದರು. ವೇದಿಕೆಯ ಮೇಲೆ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಡಾ. ಆರ್.ಕೆ. ಗಚ್ಚಿನಮಠ ಉಪಸ್ಥಿತರಿದ್ದರು. ಶಿವಯೋಗಿ ಜಕ್ಕಲಿ ನಿರೂಪಿಸಿದರು.

ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ: ದಿನೇಶ್ ಗುಂಡೂರಾವ್

0

ಮಂಗಳೂರು: ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವುದಿಲ್ಲ.

ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಅಷ್ಟಕ್ಕೂ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.ಇನ್ನೂ ಮೂರು, ನಾಲ್ಕು ವರ್ಷಗಳಿಗೊಮ್ಮೆ ಶುಲ್ಕ ಪರಿಷ್ಕರಣೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿಗಳಿಗೆ ತಳುಕು ಹಾಕಿ ನೋಡುವುದು ಸರಿಯಲ್ಲ.

ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದ ಹಣವನ್ನು ಆಯಾ ಆಸ್ಪತ್ರೆಗಳ ಎಆರ್‌ಎಸ್ ಸಮಿತಿಗಳು ಚರ್ಚೆ ನಡೆಸಿ ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡುತ್ತವೆ. ಆಸ್ಪತ್ರೆಯ ಎಆರ್‌ಎಸ್ ಫಂಡ್ ಹೆಸರಲ್ಲಿ ಅನುದಾನ ಲಭ್ಯವಿರುತ್ತದೆ. ಆಸ್ಪತ್ರೆಯ ಸ್ವಚ್ಛತೆ, ದುರಸ್ಥಿ ಕಾರ್ಯಗಳು ಸೇರಿದಂತೆ ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ಬಳಕೆ ಮಾಡಲಾಗುತ್ತದೆ. ಸರ್ಕಾರ ಕೇವಲ ಅನುಮತಿ ನೀಡುತ್ತದೆ ಅಷ್ಟೇ ಎಂದು ಹೇಳಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನ್ ಗೆ ಕೋರ್ಟ್ ಆರು ವಾರಗಳ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮಧ್ಯೆ ಇಂದು ಹೈಕೋರ್ಟ್‌ ಏಕಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.

ಪ್ರಕರಣದ ನಟ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಾಯಿತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ. ವಾದ, ಪ್ರತಿವಾದದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಯ್ತು.

ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು ದರ್ಶನ್​ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲವ ಎಂದು ವಾದ ಮಂಡಿಸಿದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಇದೇ ವೇಳೆ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್​ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ತಿಳಿಸಿಲ್ಲವೆಂದು ಎಸ್​ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಕೆ ಮಾಡಿದರು.

ಅದೇ ವೈದ್ಯಕೀಯ ವರದಿಯ ಪ್ರತಿಯನ್ನು ಎಸ್​ಪಿಪಿ ಪ್ರಸನ್ನ ಕುಮಾರ್ ಅವರಿಗೆ ನೀಡಲಾಯ್ತು. ವರದಿ ಪರಿಶೀಲಿಸಿ ಪ್ರತಿಕ್ರಿಯಿಸಲು ಸೂಚನೆ ನೀಡಿದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಯಾಗಿರುವ ನಟ ದರ್ಶನ್‌, ಅವರ ಗೆಳತಿ ಪವಿತ್ರಾ ಗೌಡ ಸೇರಿ 5 ಮಂದಿಯ ಸಾಮಾನ್ಯ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ನ.26 ಕ್ಕೆ ಮುಂದೂಡಿದೆ. ಕೊಲೆ ಕೇಸ್‌ನ ದರ್ಶನ್, ಪವಿತ್ರಾಗೌಡ ಸೇರಿ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಾಯಿತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.

ಈಗ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡ್ತಾ ಇದ್ದೀವಿ. ಇನ್ನೂ ನಮಗೆ ಆರೋಗ್ಯದ ಬಗ್ಗೆ ವರದಿ ಸಿಕ್ಕಿಲ್ಲ. ಒಂದು ವಾರದಲ್ಲಿ ಕೋರ್ಟ್‌ಗೆ ಹಾಕಿದ್ದಾರೆ. ಸೀಲ್ಡ್ ಕವರ್ ಅಲ್ಲಿ ನೀಡಿದ್ದಾರೆ. ನಮಗೆ ಗೊತ್ತಾಗ್ತಿಲ್ಲ ಎಷ್ಟು ದಿನ ಚಿಕಿತ್ಸೆ ಮುಂದುವರೆಯಬೇಕು ಅಂತ ನಮಗೂ ಒಂದು ಕಾಪಿ ನೀಡಬಹುದಲ್ವಾ ಎಂದ ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದರು.

ಈ ವೇಳೆ ದರ್ಶನ್ ಪರ ವಾದ ಮಂಡಿಸಿದ ಸಿ.ವಿ.ನಾಗೇಶ್, ಹೊಸದಾಗಿ ಮತ್ತೊಂದು ರಿಪೋರ್ಟ್ ನೀಡಿದರು. ಅಲ್ಲದೇ, ಶನಿವಾರಕ್ಕೆ ವಾದ ಮಂಡನೆಗೆ ಅವಕಾಶ ಕೋರಿದರು. ವರದಿ ಪರಿಶೀಲಿಸಿ ಪ್ರತಿಕ್ರಿಯಿಸಲು ಸೂಚನೆ ನೀಡಿದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.

ವರದಕ್ಷಿಣೆ ಕಿರುಕುಳ: ಡೆತ್‌ ನೋಟ್‌ ಬರೆದಿಟ್ಟು 6 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ!

0

ದೊಡ್ಡಬಳ್ಳಾಪುರ: ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಡೆತ್‌ ನೋಟ್‌ ಬರೆದಿಟ್ಟು 6 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ರೂಪ (29) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. 2 ವರ್ಷಗಳ ಹಿಂದೆಯಷ್ಟೇ ಸುರೇಶ್‌ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸುರೇಶ್‌ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

2 ವರ್ಷಗಳ ಹಿಂದೆ ರೂಪಾ ಕುಟುಂಬದವರು ಸುರೇಶ್‌ನೊಂದಿಗೆ ಮದುವೆ ಮಾಡಿಸಿದ್ದರು. ಮದುವೆ ಸಮಯದಲ್ಲಿ 100 ಗ್ರಾಂ ಒಡವೆ ಸಹ ನೀಡಿದ್ದರು. ಆದ್ರೆ ಸುರೇಶ್‌ ಕುಟುಂಬಸ್ಥರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆ ಹಣವನ್ನು ತೆಗೆದುಕೊಂಡು ಬಾ ಎಂದು ಆಕೆಗೆ ಕಿರುಕುಳ ನೀಡುತ್ತಿದ್ದರು.

ಇದರಿಂದ ಬೇಸತ್ತ ರೂಪ ಡೆತ್‌ ನೋಟ್‌ ಬರೆದಿಟ್ಟು, ಅದರಲ್ಲಿ ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆದಿದ್ದಾರೆ. ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ತಲೆಮರಿಸಿಕೊಂಡಿರುವ ಸುರೇಶ್‌ ತಂದೆ ತಾಯಿಗಾಗಿ ಶೋಧ ನಡೆಸಿದ್ದಾರೆ. ಸದ್ಯ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಯಾವ ಬಿಪಿಎಲ್‌ ಅರ್ಹರಿಗೆ ಅನ್ಯಾಯವಾಗಲು ಸರ್ಕಾರ ಬಿಡಲ್ಲ: ಡಿಕೆ ಶಿವಕುಮಾರ್

0

ಉಡುಪಿ: ಯಾವ ಬಿಪಿಎಲ್‌ ಅರ್ಹರಿಗೆ ಅನ್ಯಾಯವಾಗಲು ಸರ್ಕಾರ ಬಿಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಉಡುಪಿ ಜಿಲ್ಲೆಯ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಯಾವ ಬಿಪಿಎಲ್‌ ಅರ್ಹರಿಗೆ ಅನ್ಯಾಯವಾಗಲು ಸರ್ಕಾರ ಬಿಡಲ್ಲ. ರದ್ದಾಗಿರುವವರ ಪಟ್ಟಿ ಮಾಡಲಾಗುತ್ತಿದೆ. ಅರ್ಹರಿಗೆ ಮರು ಅರ್ಜಿ ಹಾಕಿ ಸರಿ ಮಾಡಲಾಗುತ್ತದೆ. ಗ್ಯಾರಂಟಿ ಯೋಜನೆ ಜಾರಿಗೆ ಸಮಿತಿ ಇದೆ. ಅದರ ನೆರವಿನೊಂದಿಗೆ ಅರ್ಹರಿಗೆ ಕಾರ್ಡ್‌ ಮತ್ತೆ ನೀಡುತ್ತೇವೆ. ಬಡವರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಕಾಂಗ್ರೆಸ್‌ ಸರ್ಕಾರ ಇರುವ ತನಕ ಗ್ಯಾರಂಟಿ ಯೋಜನೆಗಳು ಇರುತ್ತವೆ. ಮುಂದಿನ ಮೂರು ವರ್ಷ ಆ ಬಳಿಕ 5 ವರ್ಷ ನಾವು ಅಧಿಕಾರದಲ್ಲಿ ಇರುತ್ತೆ. ಮುಂದಿನ 8 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ರದ್ದಾಗಲ್ಲ ಎಂದು ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಈ ಹಿಂದೆ ಎಕ್ಸಿಟ್‌ ಪೋಲ್‌ಗಳ ಸಮೀಕ್ಷೆಗಳು ಸುಳ್ಳಾಗಿವೆ. ಅದೇ ರೀತಿ ಉಪ ಚುನಾವಣೆ ಸಮೀಕ್ಷೆ ಸುಳ್ಳಾಗಲಿವೆ ಎಂದು ಡಿಕೆಶಿ ಹೇಳಿದರು.

ವಿಕ್ರಂಗೌಡನ ಹತ್ಯೆ ಅತ್ಯಂತ ಖಂಡನೀಯ, ಯಾರೂ ಒಪ್ಪುವಂತದ್ದಲ್ಲ: ಮಾಜಿ ನಕ್ಸಲ್

0

ಚಿಕ್ಕಮಗಳೂರು: ವಿಕ್ರಂಗೌಡನ ಹತ್ಯೆ ಅತ್ಯಂತ ಖಂಡನೀಯ, ಯಾರೂ ಒಪ್ಪುವಂತದ್ದಲ್ಲ ಎಂದು ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಕ್ರಂ ಹತ್ಯೆ ಕಪೋಲ ಕಲ್ಪಿತವಾಗಿ ಸೃಷ್ಠಿ ಮಾಡಿರುವ ಎನ್‍ಕೌಂಟರ್ ಆಗಿದೆ. ಎಲ್ಲೋ ಹಿಡಿದು ಹಿಂಸೆ ನೀಡಿ, ಸಾಯಿಸಿ ಕೊನೆಗೆ ಪೀತಬೈಲಿಗೆ ತಂದು ಹಾಕಿದ್ದಾರೆ. ಎನ್‍ಕೌಂಟರ್ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ ಯಾರಿಗೂ ಮುಖ ತೋರಿಸದೆ ವಂಚಿಸಿದ್ದಾರೆ ಎಂದು ಮಾಜಿ ನಕ್ಸಲ್ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ.

ಇನ್ನೂ ಈ ಎನ್‍ಕೌಂಟರ್‌ ಅನ್ನು ಸಿಎಂ, ಗೃಹಸಚಿವ ಸಮರ್ಥಿಸಿಕೊಂಡಿದ್ದು ಅತ್ಯಂತ ದುರಾದೃಷ್ಠವಾಗಿದೆ. ಯಾವತ್ತಿಗೂ ಪೊಲೀಸರ ಎನ್‍ಕೌಂಟರ್ ಕಥೆಯನ್ನ ಎನ್‍ಕೌಂಟರ್ ಕಥೆ ಗೊತ್ತಿರೋರು ಒಪ್ಪಲ್ಲ, ಆರೋಪಿಯನ್ನ ಕೊಲೆ ಮಾಡಿ ಎಂದು ನಮ್ಮ ಸಂವಿಧಾನ ಕೂಡ ಹೇಳಿಲ್ಲ ಆದ್ದರಿಂದ ವಿಕ್ರಂ ಎನ್‍ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕೆಂದು ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ಆಗ್ರಹಿಸಿದ್ದಾರೆ.

BPL ಕಾರ್ಡ್‌ ಅನ್ನು ರದ್ದು ಮಾಡಿಲ್ಲ, ಬದಲಾಯಿಸಿದ್ದೇವೆ ಅಷ್ಟೇ: ಎಂ. ಲಕ್ಷ್ಮಣ್

0

ಬೆಂಗಳೂರು: BPL ಕಾರ್ಡ್‌ ಅನ್ನು ರದ್ದು ಮಾಡಿಲ್ಲ, ಬದಲಾಯಿಸಿದ್ದೇವೆ ಅಷ್ಟೇ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದತಿ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ. ಬಿಪಿಎಲ್‌ ಕಾರ್ಡ್‌ ಅನ್ನು ರದ್ದು ಮಾಡಿಲ್ಲ, ಬದಲಾಯಿಸಿದ್ದೇವೆ ಅಷ್ಟೇ.

ಆದರೆ ಬಿಜೆಪಿಯವರು ರಾಜ್ಯದ ಜನರಿಗೆ ಈ ವಿಚಾರದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಬಿಪಿಎಲ್​ನಿಂದ ಎಪಿಎಲ್​ಗೆ ವರ್ಗಾವಣೆ ಮಾಡಲು ಐದು ಮಾನದಂಡಗಳನ್ನು ಕೇಂದ್ರ ಸರ್ಕಾರ ನೀಡಿದೆ. ಅದರಲ್ಲಿ ಐಟಿ ರಿಟರ್ನ್ಸ್ ಆಗಿರಬಾರದು. 8 ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಕಾರು ಹೊಂದಿರಬಾರದು.

ಜತೆಗೆ ವಾರ್ಷಿಕ ವರಮಾನ 2 ಲಕ್ಷ ರೂ. ಮೀರುವಂತೆ ಇರಬಾರದು ಎಂಬ ಮಾನದಂಡದಲ್ಲಿ ಬಿಪಿಎಲ್‌ ಕಾರ್ಡ್​ಗಳನ್ನು ರದ್ದು ಮಾಡುವಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರ 80 ಸಾವಿರ ಬಿಪಿಎಲ್‌ ಕಾರ್ಡ್​ಗಳನ್ನ ಎಪಿಎಲ್‌ ಕಾರ್ಡ್​ಗಳಾಗಿ ಪರಿವರ್ತನೆ ಮಾಡಿದೆ. ಇದನ್ನೇ ಇಟ್ಟುಕೊಂಡು ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅನ್ನ ಕೊಡಬೇಕಾದ ಸರ್ಕಾರ ಅನ್ನವನ್ನು ಕದಿಯುವ ಕೆಲಸ ಮಾಡಿದೆ: ಆರ್ ಅಶೋಕ್

0

ಬೆಂಗಳೂರು: ಅನ್ನ ಕೊಡಬೇಕಾದ ಸರ್ಕಾರ ಅನ್ನವನ್ನು ಕದಿಯುವ ಕೆಲಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಮಾಡಲಾಗಿದೆ ಎಂದು ಸಿಎಂ ಹೇಳುತ್ತಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 250 ಸರ್ಕಾರಿ ನೌಕರರ ಬಳಿ ಕಾರ್ಡ್ ಇತ್ತು ಎಂದರೂ ಅದ್ಹೇಗೆ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಎಂದು ಅಶೋಕ್ ಪ್ರಶ್ನಿಸಿದರು.

ಹೊಸದಾಗಿ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸಚಿವರು ಹೇಳುತ್ತಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅರ್ಜಿ ಕೊಟ್ಟಿದ್ದೀರಾ? ನೋಟಿಸ್ ಕೊಟ್ಟಿದ್ದೀರಾ? ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಶೋಕ್ ಕಿಡಿಕಾರಿದರು. ಅಲ್ಲದೆ, ಬಡವರಿಗೆ ಉಣ್ಣಲು ಅನ್ನ ಕೊಡಬೇಕಾದ ಸರ್ಕಾರ ಅನ್ನವನ್ನು ಕದಿಯುವ ಕೆಲಸ ಮಾಡಿದೆ ಎಂದು ಟೀಕಿಸಿದರು.

error: Content is protected !!