Home Blog Page 2089

Crime News: ಮದುವೆಗೆ ವಲ್ಲೆ ಎಂದ ಶಿಕ್ಷಕಿ: ಶಾಲೆಯಲ್ಲೇ ಚಾಕು ಇರಿದ ದುಷ್ಕರ್ಮಿ!

0

ಚೆನ್ನೈ:- ಮದುವೆಗೆ ವಲ್ಲೆ ಎಂದ ಶಿಕ್ಷಕಿಗೆ ದುಷ್ಕರ್ಮಿಯೋರ್ವ ಶಾಲೆಯಲ್ಲೇ ಚಾಕು ಇರಿದ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜರುಗಿದೆ.

ರಮಣಿ ಎಂಬ ಶಿಕ್ಷಕಿಗೆ ಮದನ್ ಎಂಬ ವ್ಯಕ್ತಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಮದನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ರಮಣಿ ಮತ್ತು ಮದನ್ ಪ್ರೇಮಿಗಳಾಗಿದ್ದರು. ಇದಕ್ಕೆ ರಮಣಿ ಅವರ ಕುಟುಂಬ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗೆ ಮದನ್‌ನ ಮದುವೆಯ ಪ್ರಸ್ತಾಪವನ್ನು ರಮಣಿ ತಿರಸ್ಕರಿಸಿದ ನಂತರ ಇಬ್ಬರ ನಡುವೆ ಜಗಳ ಹೆಚ್ಚಾಯಿತು. ಇದು ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದು, ಕೋಪದ ಭರದಲ್ಲಿ ಮದನ್ ರಮಣಿಗೆ ಇರಿದಿದ್ದಾನೆ.

ತೀವ್ರವಾಗಿ ಗಾಯಗೊಂಡಿರುವ ರಮಣಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಆಕೆಯನ್ನು ಹೊತ್ತೊಯ್ದ ವಿಡಿಯೋ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶಿಕ್ಷಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಮದನ್‌ನನ್ನು ಹಿಡಿದು ತನಿಖೆ ಆರಂಭಿಸಿದ್ದಾರೆ.

ವಸ್ತು ಪ್ರದರ್ಶನದಲ್ಲಿ ಮನೋರಮಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆದರ್ಶ ಶಿಕ್ಷಣ ಸಮಿತಿ ಕಾಮರ್ಸ್ ಕಾಲೇಜಿನಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ಕಾಮರ್ಸ್ ಎಕ್ಸಪೋ-2024 ನಿಮಿತ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಮನೋರಮಾ ಕಾಲೇಜಿನ ವಿದ್ಯಾರ್ಥಿಗಳ ತಂಡ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಪ್ರಥಮ ಸ್ಥಾನ ಪಡೆದ ಜಿಎಸ್‌ಟಿ ಮಾದರಿ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಾದ ಸಂಜನಾಕ್ಷಯ ಕುರಾ, ಮಧು ಹಾದಿಮನಿ, ಸುನೈನಾ ಕಡಕೋಳ, ಶ್ರಾವಣಿ ಖಾನಾಪೂರ ಪ್ರಥಮ ಸ್ಥಾನ ಪಡೆದರೆ, ಭಾರತದ ಆರ್ಥಿಕತೆ ವಿಷಯದ ಕುರಿತ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರಗತಿ ಕಾಟಿಗಾರ, ಗಗನ ಬದಿ, ಕೋಮಲ ಬಾಂಡಗೆ, ಶಬನಮ್ ಹೊಂಬಳ ದ್ವಿತೀಯ ಸ್ಥಾನ ಪಡೆದರು.

ಕಾಲೇಜಿಗೆ ಕೀರ್ತೀ ತಂದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಉಪನ್ಯಾಸಕರಿಗೆ ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ ಹಾಗೂ ಕಾಲೇಜಿನ ಸಂಯೋಜಕರುಗಳಾದ ಅಲ್ವಿನಾ ಡಿ, ಸವಿತಾ ಪೂಜಾರ, ಚೈತ್ರಾ ಡಿ, ಶಾಹಿದಾ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಪದವಿ ಕಾಲೇಜುಗಳಿಗೆ ಆಯ್ಕೆಯಾದ 18 ಸಹಾಯಕ ಪ್ರಾಧ್ಯಾಪಕರಿಗೆ ವಿ.ಪ ಸದಸ್ಯ ಎಸ್.ವಿ. ಸಂಕನೂರರಿಂದ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 3  ವರ್ಷಗಳ ಹಿಂದೆ ರಾಜ್ಯದ ಪದವಿ ಕಾಲೇಜುಗಳಿಗೆ 1200 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಗದಗ ಜಿಲ್ಲೆಯಿಂದ 18 ಅಭ್ಯರ್ಥಿಗಳು ಸರ್ಕಾರದಿಂದ ನೇಮಕಾತಿ ಆದೇಶ ಪತ್ರ ಪಡೆದದ್ದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಂಕನೂರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶ ಮಾಡಿ ಪರೀಕ್ಷೆ ನಡೆಸಿದ್ದರು. ಪರೀಕ್ಷೆಗೆ ಒಟ್ಟು 33 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಅದರಲ್ಲಿ ೧೨೦೦ ಅಭ್ಯರ್ಥಿಗಳ ಆಯ್ಕೆಯಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿಯಾದರೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದ್ದು ಅಭಿನಂದನಾರ್ಹ. ಅದರಲ್ಲಿ ಗದಗ ಜಿಲ್ಲೆಯಿಂದ18 ಜನ ಸಹಾಯಕ ಪ್ರಾಧ್ಯಾಪಕರಾಗಿದ್ದು ಗದಗ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ನಿವೃತ್ತ ಪ್ರಾಚಾರ್ಯರಾದ ಎಸ್.ಎಫ್. ಸಿದ್ನೆಕೊಪ್ಪ, ಉಮೇಶ ಅರಹುಣಸಿ, ಹಾಗೂ ಎಸ್.ಎಲ್. ಗುಳೇದಗುಡ್ಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನವಾಗಿ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕರಿಗೆ ಶುಭ ಹಾರೈಸಿ ಅನುಭವದ ನುಡಿಗಳ ಮೂಲಕ ಸಲಹೆ-ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ, ಪ್ರಾಚಾರ್ಯರಾದ ಕೆ.ಆರ್. ಬೆಲ್ಲದ, ವಾಯ್.ಆರ್. ಬೇಲೇರಿ, ರವಿ ಕುಲಕರ್ಣಿ, ಉಪನ್ಯಾಸಕರಾದ ವಿ.ಎಸ್. ದಲಾಲಿ, ಶಶಿಧರ ಕುರಿ ಉಪಸ್ಥಿತರಿದ್ದರು. ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಮ್.ಸಿ. ಕಟ್ಟಿಮನಿ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಎನ್.ವಿ. ಜೋಷಿ ವಂದಿಸಿದರು.

ನ.25ರಂದು ಸರ್ವಧರ್ಮ ಸಮನ್ವಯ ಪೀಠದ ಕಟ್ಟಡ ಉದ್ಘಾಟಿಸಲಿರುವ ಚನ್ನಬಸವ ಶ್ರೀಗಳ

0

ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಮಾರನಬಸರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮುರುಘರಾಜೇಂದ್ರ ಶ್ರೀಮಠದ ಸರ್ವಧರ್ಮ ಸಮನ್ವಯ ಪೀಠದ ಕಟ್ಟಡವು ನಿಡಗುಂದಿಕೊಪ್ಪ ಶ್ರೀಮಠದ ಪೂಜ್ಯರಾದ ಚನ್ನಬಸವ ಶ್ರೀಗಳ ನೇತ್ರತ್ವದಲ್ಲಿ ನ.25ರಂದು ಉದ್ಘಾಟನೆಯಾಗಲಿದೆ ಎಂದು ಶಿವಮೊಗ್ಗ ಜಿಲ್ಲೆಯ ಹಿರೇಮಾಗಡಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಹೇಳಿದರು.

ಅವರು ಬುಧವಾರ ಮಾರನಬಸರಿ ಗ್ರಾಮದ ಶ್ರೀಮಠದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷಯ ಪ್ರಸ್ತಾಪಿಸಿದರು.

ಶ್ರೀ ಮಠದ ಉಧ್ಘಾಟನೆಯ ನಿಮಿತ್ತ ನ.21ರಿಂದ 25ರವರೆಗೆ ಐದು ದಿನಗಳ ಕಾಲ ಸಂಜೆ 7ರಿಂದ 9ರವರೆಗೆ ಶ್ರೀ ಗದಿಗೆಯ್ಯ ದೇವರ ವಿರಕ್ತಮಠ, ಬಟಕುರ್ಕಿ ಇವರಿಂದ ಧಾರ್ಮಿಕ ಪ್ರವಚನ ಕಾರ್ಯ ನಡೆಯಲಿದ್ದು, ಭಾವೈಕ್ಯತೆ, ಕೃಷಿ, ಹಾನಗಲ್ಲ ಕುಮಾರೇಶ್ವರ ಶ್ರೀಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನ.21ರಂದು ಧಾರ್ಮಿಕ ಕಾರ್ಯದ ಸಾನ್ನಿಧ್ಯವನ್ನು ಚನ್ನಬಸವ ಶ್ರೀಗಳು, ಸಮ್ಮುಖವನ್ನು ಶಿವಯೋಗಿ ದೇವರು ವಹಿಸುವರು. ಉಧ್ಘಾಟನೆಯನ್ನು ಮಾಜಿ ಶಾಸಕ ಕಳಕಪ್ಪ ಬಂಡಿ ನೆರವೇರಿಸುವರು. ಅಧ್ಯಕ್ಷತೆಯನ್ನು ವೀರಣ್ಣ ಮರಡಿ ವಹಿಸಲಿದ್ದು, ಶಿಕ್ಷಣದ ಕುರಿತು ಪ್ರೊ. ದೊಡ್ಡನಗೌಡ ಉಪನ್ಯಾಸ ನೀಡುವರು. ಸಂಯುಕ್ತ ಬಂಡಿ, ಉಮ್ಮಯ್ಯಜ್ಜ ಕಂಬಾಳಿಹಿರೇಮಠ, ಶಿವಕುಮಾರ ದಿಂಡೂರ, ಶಿವಪ್ಪ ಜಾಲಿಹಾಳ, ಈರಣ್ಣ ನಿಡಗುಂದಿ, ಕಾಶೀಮಸಾಬ ದೋಟಿಹಾಳ, ಭರತಕುಮಾರ ಹಾದಿಮನಿ ಉಪಸ್ಥಿತರಿರುವರು.

ನ.22ರ ಕೃಷಿ ಗೋಷ್ಠಿಯ ಸಾನ್ನಿಧ್ಯವನ್ನು ಚನ್ನಬಸವ ಶ್ರೀಗಳು, ಸಮ್ಮುಖವನ್ನು ಷಣ್ಮುಖಪ್ಪಜ್ಜನವರು ವಹಿಸುವರು. ಅಧ್ಯಕ್ಷತೆಯನ್ನು ಚಂದ್ರು ಮಾರನಬಸರಿ ವಹಿಸುವರು. ಕೃಷಿ ಕುರಿತು ಪ್ರೊ. ವಸಂತರಾವ ಗಾರ್ಗಿ ಉಪನ್ಯಾಸ ನೀಡುವರು. ಚನ್ನಯ್ಯಜ್ಜನವರು ಹಿರೇಮಠ, ಸಂಗಪ್ಪ ಹಾದಿಮನಿ, ಮರ್ತುಜಸಾಬ ಮೋತೆಖಾನ್, ಹನಮಂತಪ್ಪ ಹುಯಿಲಗೋಳ, ಅಲ್ಲಾಸಾಬ ಮೋತೆಖಾನ್ ಉಪಸ್ಥಿತರಿರುವರು.

ನ.23ರ ಭಾವೈಕ್ಯತಾ ಸಮಾರಂಭದ ಸಾನ್ನಿಧ್ಯವನ್ನು ಚನ್ನಬಸವ ಶ್ರೀಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ವಿಶ್ವನಾಥ ಗುರುಭಟ್ಟ ವೈದ್ಯ ವಹಿಸುವರು. ಭಾವೈಕ್ಯತೆ ಕುರಿತು ಪ್ರೊ. ಆರ್.ಕೆ. ಭಗವಾನ್ ಉಪನ್ಯಾಸ ನೀಡುವರು. ಶೇಖರಗೌಡ ಪಾಟೀಲ, ಮುತ್ತಪ್ಪ ಭಜಂತ್ರಿ, ಫಾತೀಮಾ ಸವಡಿ, ಉಮಾ ಚಿಗರಿ, ಚಂದ್ರವ್ವ ಬೆನಹಾಳ, ಯಲ್ಲಪ್ಪ ಡೊಳ್ಳಿನ ಉಪಸ್ಥಿತರಿರುವರು.

ನ.25ರಂದು ಬೆಳಿಗ್ಗೆ ಹೋಮ, ಹವನ, ವಾಸ್ತು ಶಾಂತಿ ನೆರವೇರುವುದು. ಧಾರ್ಮಿಕ ಕಾರ್ಯದಲ್ಲಿ ಶಾಸಕ ಜಿ.ಎಸ್. ಪಾಟೀಲ ದಂಪತಿ ಭಾಗಿಯಾಗುವರು. ಸಂಜೆ 7ಕ್ಕೆ ನಡೆಯುವ ಧರ್ಮಸಭೆಗೆ ಶಿರಹಟ್ಟಿ ಶ್ರೀಮಠದ ಫಕೀರ ದಿಂಗಾಲೇಶ್ವರ ಶ್ರೀಗಳು, ಹಾಲಕೆರೆ ಶ್ರೀಮಠದ ಮುಪ್ಪಿನ ಬಸವಲಿಂಗ ಶ್ರೀಗಳು, ಬಳಗಾನೂ ಶ್ರೀಮಠದ ಶಿವಶಾಂತವೀರ ಶರಣರು, ನಿಡಗುಂದಿಕೊಪ್ಪ ಶ್ರೀಮಠದ ಚನ್ನಬಸವ ಶ್ರೀಗಳು, ನರೆಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀಗಳು ಆಗಮಿಸಲಿದ್ದು, ಅದ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸುವರು. ಶಂಕರಗೌಡ ಪಾಟೀಲ, ಸುರೇಶ ಪಲ್ಲೇದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದ ಶ್ರೀಗಳು, ಇದೇ ಸಂಧರ್ಭದಲ್ಲಿ ಭೂ ದಾನಿಗಳಿಗೆ ಹಾಗೂ ದಾಸೋಹ ಸೇವೆ ಮಾಡಿದ ಭಕ್ತರಿಗೆ ಸನ್ಮಾನಿಸಲಾಗುವುದು ಎಂದರು.

ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರೈತ ಬಾಂಧವರ ನೇತೃತ್ವದಲ್ಲಿ ಬೃಹತ್ ಹೋರಾಟ

0

ವಿಜಯಸಾಕ್ಷಿ ಸುದ್ದಿ, ಗದಗ: ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ. ೨೨ರ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ನಗರದ ಗಾಂಧಿ ವೃತ್ತದಲ್ಲಿ ಮಾಜಿ ಸಚಿವರು, ಹಾಲಿ ಶಾಸಕ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಸ್ಭೆರಿದಂತೆ ಪಕ್ಷದ ಎಲ್ಲ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗದಗ ಜಿಲ್ಲೆಯ ಸಮಸ್ತ ರೈತ ಬಾಂಧವರ ನೇತೃತ್ವದಲ್ಲಿ ಹೋರಾಟ ನಡೆಸಿ, ಅಹವಾಲು ಸ್ವೀಕರಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ತಿಳಿಸಿದ್ದಾರೆ.

ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಶೋಷಣೆಗೊಳಗಾದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು, ರೈತರು, ಮಠ-ಮಂದಿರಗಳು, ಶಾಲೆಗಳ ಹಾಗೂ ಸಾರ್ವಜನಿಕ ಆಸ್ತಿಗಳ ಕುರಿತು ಅಹವಾಲು ಸ್ವೀಕರಿಸಲಾಗುವುದು. ಸಮಸ್ಯೆಯ ಗಂಭೀರತೆಯನ್ನು ಜಿಲ್ಲೆಯ ಎಲ್ಲ ತಾಲೂಕುವಾರು ಪರಾಮರ್ಶೆ ಮಾಡುತ್ತೇವೆ. 3 ತಂಡಗಳನ್ನು ರಾಜ್ಯಾಧ್ಯಕ್ಷರು ಈಗಾಗಲೇ ಪ್ರಕಟಿಸಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದ ಒಂದು ತಂಡ, ವಿಪಕ್ಷ ನಾಯಕರಾದ ಆರ್.ಅಶೋಕ್, ಚಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತವೆ. ಈ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. ಈ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.

ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ ಈ ತಂಡ ರಚಿಸಲಾಗಿದೆ. ನೋಟಿಸ್ ಹಿಂಪಡೆಯುವಂತೆ ಮುಖ್ಯಮಂತ್ರಿಗಳು ಹೇಳಿದ್ದು ಕೇವಲ ಮಹಾರಾಷ್ಟ ಮತ್ತು ಜಾರ್ಖಂಡ್ ಚುನಾವಣೆಯ ಕಣ್ಣೋರೆಸುವ ತಂತ್ರವೇ?  ರೈತರ ಕುರಿತು ಕಾಂಗ್ರೇಸ್ಸಿನದು ಮೊಸಳೆ ಕಣ್ಣೀರಲ್ಲವೇ? 1974 ವಕ್ಫ್ ಆಸ್ತಿ ಕುರಿತು ಗಜೇಟ್ ಅನ್ನು ಹಿಂಪಡೆಯಲು ರಾಜ್ಯದ ಕಾಂಗ್ರೇಸ್ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸುವುದೇ? ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ತೋಟಪ್ಪ(ರಾಜು) ಕುರುಡಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಫಕ್ಕೀರೇಶ ರಟ್ಟಿಹಳ್ಳಿ, ಪ್ರಮುಖರಾದ ಅಶೋಕ ಸಂಕಣ್ಣವರ, ರಮೇಶ ಸಜ್ಜಗಾರ, ಸುರೇಶ ಮರಳಪ್ಪನವರ ಉಪಸ್ಥಿತರಿದ್ದರು.

ಶ್ರೀ ಶಾಖಾಂಬರಿ ಸಮುದಾಯ ಭವನಕ್ಕೆ 2 ಲಕ್ಷ ದೇಣಿಗೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಿಗ್ಲಿ ಗ್ರಾಮದ ಶ್ರೀ ಶಾಖಾಂಬರಿದೇವಿ ದೇವಸ್ಥಾನದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಸಂಸ್ಥೆಯ ವತಿಯಿಂದ 2 ಲಕ್ಷ ರೂ ಮೊತ್ತದ ಡಿಡಿಯನ್ನು ತಾಲೂಕಾ ಯೋಜನಾಧಿಕಾರಿ ಪುನೀತ ಓಲೇಕಾರ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಜೊತೆಗೆ ಮಹಿಳಾ ಸಬಲೀಕರ, ಧಾರ್ಮಿಕ ಆಚರಣೆಗಳ ಮಹತ್ವ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಕೊಪ್ಪಳ ಪ್ರಾದೇಶಿಕ ವಿಭಾಗದ ಸಿ.ಎಸ್.ಸಿ ಯೋಜನಾಧಿಕಾರಿ ನಾಗೇಶ ನಾಯಕ ಮಾತನಾಡಿ, ಸಿ.ಎಸ್.ಸಿ ಕಾರ್ಯಕ್ರಮದಲ್ಲಿ ಸರಕಾರ ಮಾಡುವ ಆಯುಷ್ಮಾನ ಕಾರ್ಡ್, ಇ-ಶ್ರಮ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವಾರು ಸೇವೆಗಳನ್ನು ಸ್ಥಳೀಯ ಸದಸ್ಯರ ಮನೆ ಬಾಗಿಲಿಗೆ ಹೋಗಿ ನೀಡುತ್ತೇವೆ. ಸದಸ್ಯರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಫಕ್ಕೀರೇಶ ಮ್ಯಾಟೆಣ್ಣನವರ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ಡಾ. ವೀರೇಂದ್ರ ಹೆಗ್ಗಡೆಯವರು ಹತ್ತು ಹಲವರು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವುದು ಶ್ಲಾಘನೀಯ ಎಂದರು.

ದೇವಸ್ಥಾನದ ಅಧ್ಯಕ್ಷ, ಸುಭಾಷ ಹುಯಿಲಗೋಳ, ಮೇಲ್ವಿಚಾರಕ ನಾಮದೇವ ಸಾವಂತ, ದೇವಸ್ಥಾನ ಕಮಿಟಿ ಸದಸ್ಯರು, ಊರಿನ ಹಿರಿಯರು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಗದಗ-ಬೆಟಗೇರಿ ನಗರಸಭೆಯ 33ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಏಷ್ಯನ್ ಮಾಲ್ ಹತ್ತಿರದ ರಿ.ಸ ನಂ.209ರಲ್ಲಿ ಹೊಸ ಕಾಂಕ್ರೀಟ್ ರಸ್ತೆಯ ನಿರ್ಮಾಣಕ್ಕೆ ಭೂಮಿಪೂಜೆ ಜರುಗಿತು.

ವಾರ್ಡಿನ ನಗರಸಭೆ ಸದಸ್ಯರಾದ ಅನಿತಾ ಗಡ್ಡಿ ಹಾಗೂ ವಿಜಯಕುಮಾರ ಗಡ್ಡಿ ದಂಪತಿಗಳು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್.ಕೆ. ಖಟವಟೆ, ಸೂರ್ಯಕಾಂತ ಮೆಣಸಿನಕಾಯಿ, ಶ್ರೀಕಾಂತ್ ಖಟವಟೆ, ಮೋಹನ್ ಕುರ್ತಕೋಟಿ, ಶ್ರೀಕಾಂತ ಲಕ್ಕುಂಡಿ, ಬಿ.ಎನ್. ಹೆಬಸೂರ ಸಹೋದರರು, ಸಿದ್ದಣ್ಣ ಮಾರನಬಸರಿ, ಬಸಣ್ಣ ಹೆರಕಲ್, ಕಾಂಟ್ರ‍್ಯಾಕ್ಟರ್ ಮೋಸಿನ್ ದ್ಯಾಮನವರ, ಬಸವರಾಜ ಬಂಗಾರ ಶೆಟ್ರ, ವಕೀಲರಾದ ವಡಕಣ್ಣವರ ಸೇರಿದಂತೆ ವಾರ್ಡಿನ ಹಿರಿಯರು ಉಪಸ್ಥಿತರಿದ್ದರು.

ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬುಧವಾರ ಶಿರಹಟ್ಟಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅನಿರೀಕ್ಷಿತ ಭೇಟಿ ನೀಡಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಪಟ್ಟಣ ಪಂಚಾಯಿತಿ ಕಚೇರಿ ಮತ್ತು ತಹಸೀಲ್ದಾರ ಕಚೇರಿಗೆ ಭೇಟಿ ನಂತರ ಪಟ್ಟಣ ಪಂಚಾಯಿತಿಗಳ ನಿವೇಶನಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಶಿರಹಟ್ಟಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆಗೆ ಆಗಮಿಸಿದ್ದು, ಕಾಮಗಾರಿಗಳ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಳಂಬವಾದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸರಕಾರದ ಅನುದಾನ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳಲು ಹೇಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಅನಿಲ ಬಡಿಗೇರ, ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ವಕ್ಫ್ ಜೀವಂತವಾಗಿ ಉಳಿಯಲು ನಾವು ಬಿಡಲ್ಲ: ಯತ್ನಾಳ್!

0

ವಿಜಯಪುರ:- ಕರ್ನಾಟಕದಲ್ಲಿ ವಕ್ಫ್ ಜೀವಂತವಾಗಿ ಉಳಿಯಲು ನಾವು ಬಿಡಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ವಕ್ಫ್ ನೋಟಿಸ್ ವಾಪಸ್ ತೆಗೆದುಕೊಂಡರೆ ಸಾಲುವುದಿಲ್ಲ ಅದನ್ನು ರದ್ದುಗೊಳಿಸಬೇಕು. ಇಲ್ಲವಾದರೆ ವಕ್ಫ್ ವಿರುದ್ಧ ಅಧಿವೇಶನ ವೇಳೆ ಹೋರಾಟ ಮಾಡುತ್ತೇವೆ ಎಂದರು.

ವಕ್ಫ್ ಕರಾಳ ಕಾನೂನನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗೂ ಮನವಿ ಮಾಡಿದ್ದೇವೆ. ಮುಸ್ಲಿಮರಿಗಾಗಿ ವಕ್ಫ್ ಟ್ರಿಬ್ಯುನಲ್ ಒಪ್ಪುವುದಿಲ್ಲ. ದೇಶದಲ್ಲಿ ಇರಬೇಕಾದರೆ ನಮ್ಮ ದೇಶದ ಕಾನೂನು ಪಾಲಿಸಬೇಕು ಎಂದರು.

ನ.25 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡಲಿದ್ದೇವೆ. ನೋಟಿಸ್ ನೀಡದೆ ಇಲ್ಲಿಯವರೆಗೆ ಸೇರ್ಪಡೆಯಾದ ವಕ್ಫ್ ಹೆಸರು ರದ್ದಾಗಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ಯುತ್ತೇವೆ. ಇನ್ನೊಮ್ಮೆ ಜಂಟಿ ಸಂಸದೀಯ ಸಮಿತಿಗೆ ಮನವಿ ಮಾಡುತ್ತೇವೆ ಎಂದು ಕಿಡಿಕಾರಿದರು.

ಮೊದಲು ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು ಇದು ನಮ್ಮ ಆಗ್ರಹವಾಗಿದೆ. ಅವರದೇ ಕೋರ್ಟ್, ಅವರದೇ ನ್ಯಾಯಾಲಯ. ಕಳ್ಳರ ಬಳಿ ನ್ಯಾಯ ಬೇಡುವ ಹಾಗಾಗುತ್ತದೆ. ವಕ್ಫ್ ವಿರುದ್ಧ ನಿರಂತರ ಹೋರಾಟ ಮುಂದುವರೆಯಲಿದೆ. ವಕ್ಫ್ ಸಾಯುವವರೆಗೂ ಹೋರಾಟ ಮುಂದುವರೆಯಲಿದೆ. ಮೋದಿಯವರು 42 ಆಫರೇಶನ್ ಮಾಡುತ್ತಿದ್ದಾರೆ. ಅದರಲ್ಲಿಯೂ ವಕ್ಫ್ ಜೀವಂತವಾಗಿ ಉಳಿಯಲ್ಲ. ಜೀವಂತ ಉಳಿದರೂ ಇಂಜೆಕ್ಷನ್ ಕೊಟ್ಟು ಕೊಲ್ಲುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.

2025ನೇ ಸಾಲಿನ ದಸರಾ ಧರ್ಮ ಸಮ್ಮೇಳನ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧಾರ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಬಸವಕಲ್ಯಾಣ: ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಮರಸ್ಯ ಬೆಳೆಸಿಕೊಂಡು ಬರುತ್ತಿರುವ ನಾಡಿನ ಜನಮನ ಸೂರೆಗೊಂಡಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 2025ನೇ ಸಾಲಿನ ದಸರಾ ಧರ್ಮ ಸಮ್ಮೇಳನವನ್ನು ಐತಿಹಾಸಿಕ ನಗರ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಅವರು ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ದಸರಾ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇದುವರೆಗೆ ರಾಜ್ಯ, ಹೊರ ರಾಜ್ಯಗಳಲ್ಲಿ 33 ದಸರಾ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು 34ನೇ ದಸರಾ ಮಹೋತ್ಸವ ಬಸವಕಲ್ಯಾಣದಲ್ಲಿ ಜರುಗುತ್ತಿರುವುದು ಸಂತಸ ತಂದಿದೆ. ತರೀಕೆರೆ, ಜಮಖಂಡಿ, ಬಳ್ಳಾರಿ ಸೇರಿದಂತೆ ಹಲವು ನಗರಗಳಲ್ಲಿ 34ನೇ ದಸರಾಕ್ಕೆ ಬೇಡಿಕೆ ಇದ್ದಾಗ್ಯೂ ಅಬ್ಬಿಗೇರಿ ದಸರಾದಲ್ಲಿ ಶಾಸಕ ಶರಣು ಸಲಗರ ಸಂಗಡಿಗರು ಮಾಡಿದ ವಿನಂತಿಯನ್ನು ಪರಿಗಣಿಸಿ ಬಸವಕಲ್ಯಾಣಕ್ಕೆ ನೀಡಲಾಗಿದೆ. ಈ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸರ್ವ ಸಮಾಜದ ಬಾಂಧವರು ಶ್ರಮಿಸಿ ಐತಿಹಾಸಿಕ ಸಮಾರಂಭವನ್ನಾಗಿ ಮಾಡುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ 34ನೇ ದಸರಾ ಸಮ್ಮೇಳನಕ್ಕೆ ರಚಿಸಿದ ಸ್ವಾಗತ ಸಮಿತಿಗೆ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳನ್ನು ಗೌರವಾಧ್ಯಕ್ಷರನ್ನಾಗಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇವರನ್ನು ಅಧ್ಯಕ್ಷರನ್ನಾಗಿ ಹಾಗೂ ಶಾಸಕ ಶರಣು ಸಲಗರ ಇವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇನ್ನುಳಿದ ಉಪಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದೆಂದು ತಿಳಿಸಿದರು.

ಹಿರೆನಾಗಾಂವನ ಜಯಶಾಂತಲಿAಗ ಸ್ವಾಮಿಗಳು ಮಾತನಾಡಿ ದಸರಾ ಮಹೋತ್ಸವಕ್ಕೆ ಶ್ರೀ ಮಠದಿಂದ ರೂ.೨.೫ ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದು ವಿಶೇಷವಾಗಿತ್ತು. ತ್ರಿಪುರಾಂತದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಶ್ರೀಮದ್ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಂತೆ ಸಮಾರಂಭದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದರು.

ಶಾಸಕ ಶರಣು ಸಲಗರ ಮಾತನಾಡಿ, ನಾಡಿನಲ್ಲಿ ಸಕಲ ಮನುಕುಲಕ್ಕೆ ಅಭ್ಯುದಯವನ್ನು ಬಯಸುತ್ತ ಬಂದಿರುವ ಈ ಅಪೂರ್ವ ದಸರಾ ಸಮಾರಂಭಕ್ಕೆ ಸರ್ವ ಸಮಾಜದವರ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಸಹಕರಿಸಲು ವಿನಂತಿಸಿದರು. ವಿವಿಧ ಮುಖಂಡರು ಸೇರಿ ಒಟ್ಟು 51ಲಕ್ಷ ರೂ.ದೇಣಿಗೆ ವಾಗ್ದಾನ ಮಾಡಿದರು.

ಸಮಾರಂಭದಲ್ಲಿ ಶರಣಪ್ಪ ಬಿರಾದಾರ, ಬಸವರಾಜ ಕೋರಕೆ, ರಾಜಕುಮಾರ ಸಿಂಗಾಪುರ, ಸುನೀಲ ಪಾಟೀಲ್, ಮಲ್ಲಯ್ಯ ಹಿರೇಮಠ, ಸಿದ್ರಾಮಪ್ಪ ಗುದಗೆ, ಚಂದ್ರಶೇಖರ ಪಾಟೀಲ, ಮಲ್ಲಿನಾಥ ಹಿರೇಮಠ, ಸೋಮಶೇಖ ವಸ್ತçದ, ಶ್ರೀಕಾಂತ ಬಡದಾಳೆ, ಮೇಘರಾಕ ನಾಗರಾಳೆ, ವೀರಣ್ಣ ಶೀಲವಂತ, ಎಂ.ಕೆ. ನಂದಿ, ಎ.ಜಿ. ಪಾಟೀಲ್, ಸುಭಾಷ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು.

error: Content is protected !!