Home Blog Page 2093

ರೆಹಮಾನ್ ಗೆ ಸೈರಾ ಸಿಕ್ಕಿದ್ದು ಹೇಗೆ: ವಿಡಿಯೋ ವೈರಲ್

ಎ ಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಬಾನು ಡಿವೋರ್ಸ್ ನೀಡುವ ಮೂಲಕ 29 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಯಾಗಿಸಿದ್ದಾರೆ. ರೆಹಮಾನ್, ಸೈರಾ ವಿಚ್ಚೇದನದ ಸುದ್ದಿ ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ಈ ಮಧ್ಯೆ ರೆಹಮಾನ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ.

ಸುಮಾರು ಮೂರು ದಶಕಗಳ ಕಾಲ ಸಂಸಾರ ನಡೆಸಿದ್ದ ರೆಹಮಾನ್ ಹಾಗೂ ಸೈರಾ ಮಧ್ಯೆ ಪ್ರೀತಿ ಹಾಗೂ ಹೊಂದಾಣಿಕೆ ಇತ್ತು. ಆದರೆ, ಈ ಹೊಂದಾಣಿಕೆ ಈಗ ಮುರಿದಿದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ.

‘1994ರಲ್ಲಿ ನಾನು ಸುಮಾರು ಇಪ್ಪತ್ತೇಳು ವರ್ಷದವನಾಗಿದ್ದೆ. ನಾನು ಮದುವೆಯಾಗಲು ನಿರ್ಧರಿಸಿದೆ. ನನಗೆ ವಯಸ್ಸಾಯಿತು ಎಂದು ಅನಿಸುತ್ತಿತ್ತು. ನಾನು ಯಾವಾಗಲೂ ತುಂಬಾ ನಾಚಿಕೆಪಡುತ್ತಿದ್ದೆ ಮತ್ತು ಹುಡುಗಿಯರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವು ಕೆಲಸ ಮಾಡುವಾಗ ನನ್ನ ಸ್ಟುಡಿಯೋದಲ್ಲಿ ನಾನು ಅನೇಕ ಯುವ ಮಹಿಳಾ ಗಾಯಿಕಿಯಕರನ್ನು ಭೇಟಿಯಾದೆ. ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಅಲ್ಲಿ ಇದ್ದ ಯಾರನ್ನೂ ಮದುವೆ ಆಗಬೇಕು ಎಂಬ ದೃಷ್ಟಿಯಿಂದ ನೋಡಿಲ್ಲ. ಹುಡುಗಿಯರ ಬಗ್ಗೆ ಯೋಚಿಸಲು ನನಗೆ ಸಮಯವಿರಲಿಲ್ಲ. ನಾನು ಹಗಲಿರುಳು ಕೆಲಸ ಮಾಡುತ್ತಿದ್ದೆ’ ಎಂದಿದ್ದರು ರೆಹಮಾನ್.

‘ಅವಳು ಸುಂದರ ಮತ್ತು ಸೌಮ್ಯವಾಗಿದ್ದಳು. ನಾವು ಮೊದಲ ಬಾರಿಗೆ 6 ಜನವರಿ 1995ರಂದು ನನ್ನ ಇಪ್ಪತ್ತೆಂಟನೇ ಹುಟ್ಟುಹಬ್ಬದಂದು ಭೇಟಿಯಾದೆವು. ಆ ಬಳಿಕ ನಾವು ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ನನ್ನನ್ನು ಮದುವೆಯಾಗಲು ಬಯಸುತ್ತೀರಾ ಎಂದು ನಾನು ಅವಳನ್ನು ಇಂಗ್ಲಿಷ್‌ನಲ್ಲಿ ಕೇಳಿದ್ದೆ. ಆ ದಿನಗಳಲ್ಲಿ ಸಾಯಿರಾ ತುಂಬಾ ಶಾಂತವಾಗಿದ್ದಳು. ಈಗಲೂ ಅವಳು ಸುಮ್ಮನಿರುತ್ತಾಳೆ’ ಎಂದಿದ್ದರು ರೆಹಮಾನ್.

ರೆಹಮಾನ್ ಹಾಗೂ ಸೈರಾ 1995ರ ಮಾರ್ಚ್ 12ರಂದು ಮದುವೆ ಆದರು. ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಎ.ಆರ್. ರೆಹಮಾನ್ ಅವರಿಗೆ ಬೇಡಿಕೆ ಇದೆ. ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಯ ಸಿನಿಮಾಗಳಿಗೆ ರೆಹಮಾನ್ ಬ್ಯುಸಿಯಾಗಿದ್ದಾರೆ.

‘ಕಟ್ಲೆ’ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಿದ ಡಾರ್ಲಿಂಗ್ ಕೃಷ್ಣ

ಹಾಸ್ಯನಟ ಕೆಂಪೇಗೌಡ ನಟನೆಯ, ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದ ʼಕಟ್ಲೆʼ ಚಿತ್ರದ ಮೊದಲ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ʼಯಾರೋ ನಾ ಕಾಣೆ. ಚಂದಾಗೌಳೆ ಶಾಣೆʼ ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ನಾನು ಆಭಾರಿ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಶ್ರೀವಿದ ಅವರು “ಕಟ್ಲೆ” ಚಿತ್ರಕ್ಕೆ ಅದ್ಭುತವಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಬರೆದು ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದರು.

ಈ ಚಿತ್ರ ಉತ್ತಮವಾಗಿ ಮೂಡಿಬರಲು ಮುಖ್ಯ ಕಾರಣ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ಭರತ್ ಗೌಡ‌ ಅವರು. ಅವರು ನಮ್ಮ‌ ಮೇಲೆ ನಂಬಿಕೆಯಿಟ್ಟು ಬಂಡವಾಳ ಹಾಕಿರುವುದೇ ನಮ್ಮ ಕನಸು ನನಸಾಗಲು ಕಾರಣ. ಅವರಿಗೆ ಹಾಗೂ ನನ್ನ‌ ತಂಡಕ್ಕೆ ನನ್ನ ಧನ್ಯವಾದ. ನಮ್ಮ ಚಿತ್ರದ ಪ್ರಥಮ ಹಾಡು ಇಂದು ಬಿಡುಗಡೆಯಾಗಿದೆ.  ಸದ್ಯದಲ್ಲೇ “ಕಟ್ಲೆ” ಸೆನ್ಸಾರ್ ವೀಕ್ಷಿಸಲಿದ್ದು, ಡಿಸೆಂಬರ್ ವೇಳೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಶ್ರೀವಿದ ತಿಳಿಸಿದರು.

ಶ್ರೀವಿದ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಭರತ್ ಗೌಡ ಹೇಳಿದರು‌.

ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು: ಡಿವೋರ್ಸ್ ಬಗ್ಗೆ ಮೌನ ಮುರಿದ ಎ.ಆರ್.ರೆಹಮಾನ್

ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.ಇನ್ನೆನ್ನೂ ಕೆಲವೇ ದಿನಗಳಲ್ಲಿ 30ನೇ ವರ್ಷದ ವೈವಾಹಿಕ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ದಂಪತಿ ದೂರ ದೂರವಾಗಿದ್ದಾರೆ. ರೆಹಮಾನ್ ಹಾಗೂ ತಾವು ದೂರ ದೂರವಾಗ್ತಿರೋ ಬಗ್ಗೆ ಸೈರಾ ಬಾನು ಖಚಿತಪಡಿಸಿದ್ದರು. ಈಗ ಎಆರ್​ ರೆಹಮಾನ್ ಕೂಡ ಈ ಬಗ್ಗೆ ಮೌನ ಮುರಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರೋ ರೆಹಮಾನ್ ಅವರು, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ  ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ.

1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ವಿವಾಹ ಮದುವೆಯಾದರು. ಮನೆಯವರು ನೋಡಿದ ಹುಡುಗಿಯನ್ನೇ ರೆಹಮಾನ್ ಕೈ ಹಿಡಿದಿದ್ದರು. ಮದುವೆ ಆದಾಗ ರೆಹಮಾನ್ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕರು. ಮೊದಲು ಹಿಂದೂ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಈ ಕಾರಣಕ್ಕೆ ಮುಸ್ಲಿಂ ಹುಡುಗಿಯನ್ನೇ ಅವರು ಮದುವೆ ಆಗಿದ್ದರು.

ಬೇರೆಯವರಿಗೆ ಬೈಕ್, ಕಾರು ಕೊಡ್ತಿದ್ರೆ ಹುಷಾರ್: ಅವರಿಂದ ಈ ತಪ್ಪಾದ್ರೆ ನಿಮ್ಮ ಮೇಲೆ ಬೀಳತ್ತೆ FIR!

0

ಬೆಂಗಳೂರು:- ಸ್ನೇಹಿತರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಕೇಳ್ತಾರೆ ಅಂತ ಹಿಂದೆ ಮುಂದೆ ನೋಡದೇ ಬೈಕ್, ಕಾರು ಕೊಡೋ ಮುನ್ನ ಈ ಸ್ಟೋರಿ ನೋಡಿ.

ನಗರದಲ್ಲಿ ಓಡಾಡುತ್ತಿರುವ ಕೋಟ್ಯಂತರ ವಾಹನ ಚಾಲಕರಲ್ಲಿ ಹಲವರ ಬಳಿ ಡ್ರೈವಿಂಗ್ ಲೈಸನ್ಸ್ ಇರುವುದೇ ಇಲ್ಲ. ಹಾಗೆಯೇ ಸುಮ್ಮನೇ ವಾಹನಗಳನ್ನು ತೆಗೆದುಕೊಂಡು ಸುತ್ತಾಡುತ್ತಿರುತ್ತಾರೆ. ಅಂಥವರಲ್ಲಿ ಕೆಲವರು ಡ್ರಂಕ್ ಆ್ಯಂಡ್ ಡ್ರೈವ್ ಮಾಡುತ್ತಿರುತ್ತಾರೆ‌.

ಹೀಗೆ ಕುಡಿದು ವಾಹನ ಚಾಲನೆ ಮಾಡುವುದರಿಂದಾಗಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಷ್ಟು ದಿನ ಡ್ರಂಕ್ ಆ್ಯಂಡ್ ಡ್ರೈವ್ಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ, ಈಗ ಕುಡಿದು ವಾಹನ ಚಾಲನೆ ಮಾಡುವವರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದೇ ಹೋದರೆ ಎಫ್ಐಆರ್ ದಾಖಲಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ.

ಕೇವಲ ವಾಹನ ಚಾಲನೆ ಮಾಡುವವರಿಗೆ ಮಾತ್ರ ಈ ಶಿಕ್ಷೆಯಲ್ಲ. ವಾಹನದ ಆರ್‌ಸಿ ಯಾರ ಹೆಸರಲ್ಲಿ‌ ಇದೆಯೋ ಅವರ ಮೇಲೂ ಕೇಸ್ ಹಾಕಲಾಗುತ್ತಿದೆ. ಸದ್ಯ ಈ ಪ್ರಕ್ರಿಯೆ ಬೆಂಗಳೂರಲ್ಲಿ ಶುರುವಾಗಿದ್ದು, ಪ್ರತಿ ದಿನ ಹತ್ತಾರು ಎಫ್ಐಆರ್ ದಾಖಲಾಗುತ್ತಿವೆ.

ಹೀಗಾಗಿ ವಾಹನ‌ ಮಾಲೀಕರು ಹುಷಾರಾಗಿಲ್ಲದಿದ್ದರೆ ಕಷ್ಟವಿದೆ. ಸ್ನೇಹಿತರು, ಸಂಬಂಧಿಕರು, ಪರಿಚಯದವರು ಕೇಳಿದರೆಂದು ಹಿಂದೆಮುಂದೆ ವಿಚಾರಿಸದೆ ವಾಹನ ಕೊಟ್ಟರೆ ನಾಳೆ ಕೋರ್ಟ್ಗೆ ಅಲೆಯಬೇಕಾಗಬಹುದು.

ಮಧ್ಯರಾತ್ರಿ ಜೆಸಿಬಿಗಳ ಘರ್ಜನೆ: ರಾಯಚೂರಲ್ಲಿ ಶಿವನ ದೇವಸ್ಥಾನ ನೆಲಸಮ!

0

ರಾಯಚೂರು:- ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿಗಳು ಘರ್ಜಿಸಿದ್ದು, ಅಕ್ರಮವಾಗಿ ಸಿ.ಎ.ಸೈಟ್ ನಲ್ಲಿ ನಿರ್ಮಿಸಿದ ಶಿವ ಮತ್ತು ಗಣೇಶನ ದೇಗುಲ ತೆರವು ಮಾಡಲಾಗಿದೆ.

ಸಂತೋಷ್ ನಗರದಲ್ಲಿನ ಶಿಕ್ಷಣ ಇಲಾಖೆಯ ಸ್ಥಳದಲ್ಲಿ ಅನಧಿಕೃತವಾಗಿ ಶಿವನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಡಳಿತ ನೆಲಸಮ ಮಾಡಿದೆ.

ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ನಗರದ ಸಂತೋಷ್ ನಗರದಲ್ಲಿ ಮಧ್ಯರಾತ್ರಿ ನಗರಸಭೆ ಪೌರಾಯುಕ್ತ, ಹೆಚ್ಚುವರಿ ಎಸ್ ಪಿ ಶಿವಕುಮಾರ್, ಹರೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್​ನಲ್ಲಿ ಜಿಲ್ಲಾಡಳಿತ ಶಿವನ ದೇವಸ್ಥಾನವನ್ನು ನೆಲಸಮ ಮಾಡಿದೆ.

ಮಧ್ಯೆರಾತ್ರಿ ಜೆಸಿಬಿಗಳು ಶಿವನ ದೇವಾಲಯವನ್ನು ಕೆಡವಿವೆ. ಶಿಕ್ಷಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ದೇವಾಲಯ ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ.

ಜಿಲ್ಲಾಧಿಕಾರಿ ನಿತೀಶ್ ದೇವಸ್ಥಾನ ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ದೇವಾಲಯವನ್ನು ತೆರವು ಮಾಡಲಾಗಿದೆ. ಈ ವೇಳೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ಆದರೆ ಸ್ಥಳೀಯರ ಮಾತುಗಳನ್ನು ಲೆಕ್ಕಿಸಿದ ಪೊಲೀಸರು ಹಾಗೂ ಜಿಲ್ಲಾಡಳಿತ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ:-

ರಾಯಚೂರಿನ ಸಂತೋಷ ನಗರದಲ್ಲಿನ ದೇಗುಲದ CA ಸೈಟ್ 2022 ರಲ್ಲಿ ಫ್ರೌಢಶಾಲೆ ಕಟ್ಟಡಕ್ಕೆ ಮಂಜೂರಾಗಿತ್ತು. ಜಾಗ ಮಂಜೂರಾದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು.

ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆದ್ರೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಖಾಕಿ ಬಂದೋಬಸ್ತ್ ನಲ್ಲಿ ತೆರವು ಮಾಡಲಾಗಿದೆ.

ಬೆಂಗಳೂರು ನಿವಾಸಿಗಳ ಗಮನಕ್ಕೆ: ಈ ಏರಿಯಾಗಳಲ್ಲಿ ಇಂದು ಪವರ್ ಕಟ್!

0

ಬೆಂಗಳೂರು:- ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ ಇಂದು ಬೆಂಗಳೂರಿನ ಹಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ.

ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿ ಬ್ಯಾಂಕ್​, ಎಂಬೆಸ್ಸಿ ಹೈಟ್ಸ್, ಆಭರಣ್ ಜ್ಯೂವೆಲರ್ಸ್. ಹರ್ಬನ್ ಲೈಫ್, ಆರ್‌ಎಂಝಡ್, ಅಶೋಕ್ ನಗರ, ಗರುಡ ಮಾಲ್, ದೊಮ್ಮಲೂರು,

ಆಸ್ಪಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಅಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರಸ್ತೆ,

ಸೇಂಟ್ ಮಾರ್ಕ್ ರಸ್ತೆ, ವೈ.ಜಿ.ಪಾಳ್ಯ, ಕೆಎಸ್​ಆರ್​ಪಿ, ಐಟಿಸಿ ಹೋಟೆಲ್​, ರಿಚ್ಮಂಡ್‌ ರಸ್ತೆ, ವನ್ನಾರ್‌ಪೇಟೆ, ಎಂ.ಜಿ.ರಸ್ತೆ, ಹೇಯ್ ರಸ್ತೆ, ಕಾನ್ವೆಂಟ್ ರಸ್ತೆ, ಎಸ್.ಎಲ್. ಅಪಾರ್ಟ್‌ಮೆಂಟ್, ರಿಚ್ಚಂಡ್ ಟೌನ್, ನಂಜಪ್ಪ ವೃತ್ತ, ಸ್ಪೇನ್ ಗಾರ್ಡನ್, ರಿಜ್‌ಮಂಡ್ ಪಾರ್ಕ್,

ಲಾಂಗ್‌ಫೋರ್ಡ್ ರಸ್ತೆ, ಬ್ರೆಟ್ ಸ್ಪೀಟ್. ಫುಡ್‌ವರ್ಲ್ಡ್ ರಸ್ತೆ, ಜಾನ್ಸನ್ ಮಾರುಕಟ್ಟೆ, ಅಶೋಕನಗರ, ಮಾರ್ಕಮ್ ರಸ್ತೆ, ಬ್ರಿಗೇಡ್ ರಸ್ತೆ, ವಾಣಿಜ್ಯ ಕಾಲೇಜು, ರಿಚ್ಯಂಡ್ ವೃತ್ತ, ವಿಠಲ ಮಲ್ಕ ರಸ್ತೆ, ಸಿದ್ದಯ್ಯ ರಸ್ತೆ, ವುಡ್‌ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ, ಬಿಎಂಆರ್‌ಸಿಎಲ್ ಸುತ್ತಮುತ್ತಲಿನ ಪ್ರದೇಶಗಲ್ಲಿ ವಿದ್ಯುತ್​​ ಕಡಿತವಾಗಲಿದೆ.

ಬಿಜೆಪಿ ವಿರುದ್ಧ ಕೆಂಪಣ್ಣ ಮಾಡಿದ್ದ ಕಮಿಷನ್ ಆರೋಪ ಸತ್ಯ: ಜಗನ್ನಾಥ ಶೇಗಜಿ

0

ಕಲಬುರಗಿ:- ಹಿಂದಿನ ಬಿಜೆಪಿ ಸರ್ಕಾರದ ವಿರುದ್ದದ 40 ಪರ್ಸೆಂಟ್ ಆರೋಪ ಸುಳ್ಳು ಎನ್ನೋ ಲೋಕಾ ವರದಿ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಮಾಜಿ ಅಧ್ಯಕ್ಷ ದಿ‌.ಕೆಂಪಣ್ಣ ಮಾಡಿದ್ದ ಆರೋಪ ಸತ್ಯ. ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ವಿಜಯೇಂದ್ರ ನಮ್ಮ ಸಂಘದ ಹೆಸರು ತೆಗೆದುಕೊಂಡು ಕೆಂಪಣ್ಣರವ ಹೆಸರು ತೆಗೆದುದಕೊಂಡು ಲಘವಾಗಿ ಮಾತನಾಡಿದ್ದಾರೆ.

ಅಂಬಿಕಾಪತಿ ದೂರು ನಮ್ಮ ಅಸೋಸಿಯೇಷನ್ ನಿಂದ ಹೋಗಿಲ್ಲ. ಅಂಬಿಕಾಪತಿ ನೀಡಿದ ದೂರಿಗೂ ನಮ್ಮ ಸಂಘಕ್ಕೂ ಸಂಬಂಧವಿಲ್ಲ. ಒಂದೇ ಒಂದು ಪತ್ರ ಲೋಕಾಯುಕ್ತಕ್ಕೆ ನೀಡಿಲ್ಲ. ಅದರ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಎಂದರು.

ಇನ್ನೂ ನ್ಯಾ.ನಾಗಮೋಹನ ದಾಸ್ ಕಮಿಟಿಗೆ ನೀಡಿದ್ದೇವೆ. ನ್ಯಾಯಯುತವಾಗಿ ತನೀಖೆಯಾಗಬೇಕು‌. ಇಲ್ಲಾಂದ್ರೆ ನಾವು ನ್ಯಾಯಲಯದ ಮೊರೆ ಹೋಗ್ತೆವೆ. ನ್ಯಾ.ನಾಗಮೋಹನ್ ದಾಸ್ ಕಮಿಟಿಯದ್ದು ನಾಳೆ ಫೈನಲ್ ಹೇರಿಂಗ್ ಇದೆ. ನಾಳೆ ಎಲ್ಲಾ ದಾಖಲೆ ನೀಡುತ್ತೆವೆ‌. ಒಂದು ವೇಳೆ ನಮ್ಮ ಆರೋಪ ಸುಳ್ಳು ಎಂದಾದ್ರೆ, ನಾವು ಯಾವುದೇ ಶಿಕ್ಷೆಗೂ ತಯಾರಿದ್ದೇವೆ.

31 ಜಿಲ್ಲೆಯಲ್ಲಿ ನಡೆದ ಪರ್ಸೆಂಟೆಜ್ ಬಗ್ಗೆ ದಾಖಲೆ ನೀಡಿದ್ದೇವೆ. ನಾಳೆ ಮತ್ತೊಮ್ಮೆ ನ್ಯಾ,ನಾಗಮೋಹನ್ ದಾಸ್ ಎದರು ದಾಖಲೆ ನೀಡ್ತೆವೆ. ಸಧ್ಯದ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲಾ‌ಪಕ್ಷದ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಖ್ಯಾತ ಗಾಯಕ ಎ ಆರ್ ರೆಹಮಾನ್ ಸಂಸಾರದಲ್ಲಿ ಬಿರುಗಾಳಿ: 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಎ.ಆರ್.ರೆಹಮಾನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸೈರಾ ಭಾನು ಜೊತೆಗಿನ 29 ವರ್ಷಗಳ ದಾಂಪತ್ಯಕ್ಕೆ ರೆಹಮಾನ್ ಅಂತ್ಯ ಹಾಡಿದ್ದಾರೆ. ರೆಹಮಾನ್ ಹಾಗೂ ಸೈರಾ ಬಾನು ವಿಚ್ಚೇದನ ಘೋಷಿಸಿರುವ ಅಭಿಮಾನಿಗಳಿಗೆ ಶಾಕ್ ಆಗಿದೆ.

ವಿಚ್ಛೇದನದ ವಿಚಾರವನ್ನು ಸೈರಾ ಭಾನು ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. 1995ರಲ್ಲಿ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ವಿವಾಹ ಆಗಿದ್ದರು. ಅವರದ್ದು ಅರೇಂಜ್ ಮ್ಯಾರೇಜ್. ಸಿನಿಮಾದಲ್ಲಿ ಬ್ಯುಸಿ ಆಗಿದ್ದ ರೆಹಮಾನ್ ಅವರಿಗೆ ಹುಡುಗಿ ನೋಡುವಷ್ಟು ಸಮಯ ಇರಲಿಲ್ಲ. ಹಾಗಾಗಿ ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆಗಿದ್ದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ರೆಹಮಾನ್ ಮತ್ತು ಸೈರಾ ಬಾನು ಜೋಡಿಗೆ ಮೂವರು ಮಕ್ಕಳಿದ್ದಾರೆ.

ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್​. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ‘ಸಂಬಂಧದಲ್ಲಿನ ಭಾವನಾತ್ಮಕವಾಗಿ ಸಂಕಟದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರ ನಡುವೆ ದೊಡ್ಡ ಅಂತರ ಸೃಷ್ಟಿ ಆಗಿದೆ’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸೈರಾ ಬಾನು ತಿಳಿಸಿದ್ದಾರೆ.

ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಎ.ಆರ್​. ರೆಹಮಾನ್ ಅವರಿಗೆ ಬೇಡಿಕೆ ಇದೆ. ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಯ ಸಿನಿಮಾಗಳಿಗೆ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಆಸ್ಕರ್​ ಪ್ರಶಸ್ತಿ ಪಡೆದಿರುವ ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಒಂದು ಸಾಂಗ್ ಹಾಡಲು ಅವರು ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೂ ಕೂಡ ಅವರು ಎಲ್ಲ ಹಾಡುಗಳನ್ನು ಒಪ್ಪಿಕೊಳ್ಳುವುದಿಲ್ಲ. ಗಾಯನಕ್ಕಿಂತಲೂ ಸಂಗೀತ ನಿರ್ದೇಶನದಲ್ಲಿ ಅವರು ಹೆಚ್ಚು ತೊಡಗಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡಲ್ಲ: ಮತ್ತೊಮ್ಮೆ ಸ್ಪಷ್ಟನೆ ಕೊಟ್ಟ ಸಚಿವ ಮುನಿಯಪ್ಪ!

0

ಬೆಂಗಳೂರು:- ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡಲ್ಲ, ಬಡವರು ಆತಂಕ ಪಡಬೇಡಿ ಎಂದು ಸಚಿವ ಮುನಿಯಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಹಾಗೂ ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದರು.

20-25% ಅರ್ಹರಲ್ಲದವರು ಬಿಪಿಎಲ್ ಗೆ ಸೇರಿಕೊಂಡಿದ್ದಾರೆ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವಾ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್‌ನವರು ಯಾರೂ ಕೂಡ ಭಯ ಪಡಬೇಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಾಂತ್ರಿಕ ಯುಗದಲ್ಲೂ ಸಾವಿರಾರು ಭಕ್ತರು ಮೃತ್ಯುಂಜಯ ಶ್ರೀಗಳ ಪ್ರವಚನದಲ್ಲಿ ಪಾಲ್ಗೊಂಡಿರುವುದು ಪ್ರಶಂಸನೀಯ: ಹುಕ್ಕೇರಿಮಠದ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮಠಗಳು ನಿರಂತರವಾಗಿ ಧಾರ್ಮಿಕ ಆಚಾರ-ವಿಚಾರಗಳ ಸಂಸ್ಕಾರ ನೀಡುವುದಲ್ಲದೆ, ಹಲವು ಮಠಗಳ ಮೂಲಕ ಶಿಕ್ಷಣ ಕ್ರಾಂತಿ, ಗದಗಿನ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಸಂಗೀತ ಕ್ರಾಂತಿ, ಜಾತಿ, ಮತ, ಪಂಥ ಹೋಗಲಾಡಿಸಲು ಜಾತ್ಯಾತೀತ ತತ್ವದ ಮೂಲಕ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠಗಳ ಕಾರ್ಯ ನಿರಂತರ ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು  ಹೇಳಿದರು.

ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳ ಜಯಂತ್ಯುತ್ಸವ ಹಾಗೂ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಟಿವಿ, ಮೊಬೈಲ್ ಬಳಕೆಯ ತಾಂತ್ರಿಕ ಯುಗದಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಭಿನವ ಮೃತ್ಯುಂಜಯ ಶ್ರೀಗಳ ಪ್ರವಚನದಲ್ಲಿ ಪಾಲ್ಗೊಂಡು ಸದ್ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿರುವುದು ಪ್ರಶಂಸನೀಯ ಎಂದು ಹೇಳಿದರು.

ವಿಜಯಪುರದ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಅಧೈರ್ಯದಿಂದ ಇದ್ದಾಗ ಪ್ರವಚನದಂತಹ ನೆತ್ತಿ ತುಂಬುವ ವಿಚಾರಗಳು ಧೈರ್ಯ ತುಂಬುತ್ತವೆ. ಬದುಕಿನಲ್ಲಿ ಹೆಣ್ಣು, ಹೊನ್ನು ಮತ್ತು ಮಣ್ಣು ಕೊಡುವವರು ಇರುತ್ತಾರೆ. ಇದರ ಬದಲಾಗಿ ಸಂಸ್ಕಾರ ಕೊಡುವವರು ಬೇಕಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರವಚನದ ಮೂಲಕ ಒಳ್ಳೆಯ ಸಂಸ್ಕಾರ ಭಕ್ತರಲ್ಲಿ ಮನದಲ್ಲಿ ತುಂಬುವ ಕೆಲಸ ಮಾಡಿರುವುದು ಪ್ರಶಂಸನೀಯ ಎಂದು ಹೇಳಿದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ಸಂಸ್ಕಾರಯುತ ಬದುಕು ಕಟ್ಟಲು, ರಾಜ್ಯಾದ್ಯಂತ ಸ್ವಾಮೀಜಿಯವರ ಕಾರ್ಯಗಳು ಯುವಕರನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುತ್ತಿವೆ. ಮೃತ್ಯುಂಜಯ ಶ್ರೀಗಳು ಪವಾಡಗಳ ಮೂಲಕ ಅವರ ಭಕ್ತರಿಗೆ ಸರಿದಾರಿ ತೋರಿಸಿದ್ದರು. ಅವರು ಹಾಕಿಕೊಟ್ಟ ವಿಚಾರಗಳು ಚಿರಕಾಲ ಇರುತ್ತವೆ ಎಂದು ಹೇಳಿದರು.

ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಪ್ರವಚನಗಳ ಮೂಲಕ ಭಕ್ತರನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸುವ ಪರಮಪೂಜ್ಯ ಶ್ರೀಗಳ ಕಾರ್ಯಗಳು ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿದೆ ಎಂದು ಹೇಳಿದರು.

ಹಿರೇವಡ್ಡಟ್ಟಿಯ ಶಿವಾಚಾರ್ಯ ಶ್ರೀಗಳು, ಕೂಡಲ ನಂಜೇಶ್ವರಮಠದ ಮಹೇಶ್ವರ ಶಿವಾಚಾರ್ಯ ಶ್ರೀ, ಚನ್ನಬಸವ ದೇವರು, ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಆನಂದ ಗಡ್ಡದೇವರಮಠ, ಹೇಮಗಿರೀಶ ಹಾವಿನಾಳ, ಉದ್ದಿಮೆದಾರರಾದ ಮಂಜುನಾಥ ಹರ್ಲಾಪುರ, ರಾಜೇಶ ಹರ್ಲಾಪುರ, ಕಿರಣ ಪ್ರಕಾಶ ಬೂಮಾ, ಎಸ್.ಎಚ್. ಶಿವನಗೌಡರ, ನಾಗರಾಜ ಕಾಟರಳ್ಳಿ, ಮಂಜುನಾಥ ಕುರ್ತಕೋಟಿ, ಗುಳಪ್ಪ ಸಂಗನಾಳ, ಹನಮಪ್ಪ ಕಾಟರಳ್ಳಿ, ಶುಭಾಸರಡ್ಡಿ ಹಳ್ಳಿಗುಡಿ, ಶಿವಪ್ಪ ಅಂಕದ, ವಿರೇಶ ಜಲ್ಲಿಗೇರಿ, ಹನಮರಡ್ಡಿ ಮೇಟಿ, ಶರಣಪ್ಪ ಹಳ್ಳಿತಳವಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಇದ್ದರು.

error: Content is protected !!