Home Blog Page 2095

ಸಿಲಿಕಾನ್ ಸಿಟಿಯಲ್ಲಿ ಮರೆಯಾದ ಮಳೆ, ಹೆಚ್ಚಾಯ್ತು ವಿಪರೀತ ಚಳಿ: ಸ್ವೆಟರ್ ಮೊರೆ ಹೋದ ಸಿಟಿ ಮಂದಿ!

0

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಪರೀತ ಚಳಿ ಹೆಚ್ಚಳವಾಗಿದೆ. ಸಂಜೆ ಆಗುತ್ತಿದ್ದಂತೆ ಬರುವ ಚುಮುಚುಮು ಚಳಿಗೆ ಸಿಟಿ ಮಂದಿ ಸ್ವೆಟರ್ ಮೊರೆ ಹೋಗಿದ್ದಾರೆ.

ಈ ಬಾರಿ ಸತತವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹವಾಮಾನ ಪರಿಸ್ಥಿತಿ ಬದಲಾಗಿದ್ದು, ಈ ಬಾರಿ ಅಧಿಕ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನೂ ಚಳಿಗಾಲ ಆರಂಭಕ್ಕೂ ಮುನ್ನವೇ ಚಳಿ ಹೆಚ್ಚಾಗಿದ್ದು, ವಾತಾವರಣ ಬದಲಾವಣೆಯಿಂದ ನಮ್ ಬೆಂಗಳೂರು ಮಂದಿ ಈಗಾಗಲೇ ಸ್ವೆಟರ್, ಸ್ಕಾರ್ಫ್, ಮಪ್ಲರ್, ಜರ್ಕಿನ್ ಹಾಗೂ ದೊಡ್ಡ ದೊಡ್ಡ ಕಂಬಳಿಯ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಮಾರ್ಕೆಟ್‌ಗೆ ಸ್ವೇಟರ್ ಗಳು ಲಗ್ಗೆ ಇಟ್ಟಿವೆ.

ಈ ಬಾರಿ ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8ಗಂಟೆಯವರೆಗೂ ಶೀತದ ವಾತವರಣ ಇರುತ್ತಿರುವುದಿರಿಂದ ಶೀತ -ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉಸಿರಾಟ, ಎಲುಬು ಕೀಲು ನೋವು ಇರುವವರು ಆದಷ್ಟು ಬೆಚ್ಚಗೆ ಇರುವಂತೆ ಮತ್ತು ಚಳಿಗಾಲ ಮುಗಿಯೋ ವರೆಗೆ ಉಗುರು ಬೆಚ್ಚಗಿನ ನೀರು ಬಿಸಿ ಆಹಾರ ಸೇವಿಸುವಂತೆ ಹವಾಮಾನ ಇಲಾಖೆ ತಜ್ಞರು ಸೂಚನೆ ನೀಡಿದ್ದಾರೆ.

ಇನ್ನೂ ಈ ಪರಿಸ್ಥಿತಿಗೆ ಮುಖ್ಯ ಕಾರಣ ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶವು ಕಡಿಮೆ ಇರಲಿದ್ದು, ಇದಕ್ಕೆ ಲಾ-ನಿನ್ ಪರಿಸ್ಥಿತಿ ಎಂದು ಕರೆಯುತ್ತಾರೆ. ಈ ಲಾ-ನಿನ್ ಪರಿಸ್ಥಿತಿಯಿಂದ ಚಳಿಗಾಲವು ಮಾರ್ಚ್ ವರೆಗೂ ಮುಂದುವರೆಯುತ್ತದೆ.

ಜೊತೆಗೆ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ 8ರಿಂದ 10ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಹಾಗೂ ಬೆಂಗಳೂರಲ್ಲಿ 12ರಿಂದ 14ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ: ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೇವಸ್ಥಾನ, ಹಬ್ಬಹರಿದಿನ, ಸಂಪ್ರದಾಯ, ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಷ್ಟೇ ಅಲ್ಲದೇ ಪರಸ್ಪರ ಸಹೋದರತ್ವ, ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಬಿತ್ತುವದರೊಂದಿಗೆ ಸಮಾಜವನ್ನು ಸನ್ಮಾರ್ಗದತ್ತ ಸಾಗಿಸುವ ಚೈತನ್ಯ ಶಕ್ತಿಯಾಗಿವೆ ಎಂದು ಕನ್ನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಲಕ್ಷ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ. ಇಲ್ಲಿ ದೀಪ ದೀಪದಿಂದ ಬೆಳಗಿಸುವ ಜತೆಗೆ ಮನಸ್ಸಿಂದ ಮನಸ್ಸನ್ನು ಬೆಳಗುವ ಧರ್ಮ ಮತ್ತು ಆಧ್ಯಾತ್ಮದ ದೀಪ ಬೆಳಗಿಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ವೇಷ-ಭೂಷಣ, ಭಾಷೆ, ಆಹಾರ, ಪ್ರದೇಶ ಭಿನ್ನವಾಗಿದ್ದರೂ ನಮ್ಮಲ್ಲಿರುವ ಸಂಪ್ರದಾಯ, ಸಂಸ್ಕೃತಿಗಳು ಇಡಿ ಜಗತ್ತಿಗೆ ಶ್ರೇಷ್ಠವಾಗಿವೆ. ದೇವಸ್ಥಾನ, ಹಬ್ಬಹರಿದಿನಗಳು, ಜಾತ್ರೆಗಳು ಮನುಷ್ಯರಷ್ಟೇ ಅಲ್ಲದೇ ಪಶು-ಪಕ್ಷಿ, ನಿಸರ್ಗದೊಂದಿಗೆ ಬೆಸೆಯುತ್ತವೆ. ಹಬ್ಬಗಳು ಮನಸ್ಸುಗಳನ್ನು ಜೋಡಿಸುತ್ತವೆ. ಮನುಷ್ಯನಲ್ಲಿ ಪ್ರೀತಿ, ನಿಸ್ವಾರ್ಥ ಭಾವನೆ ಇದ್ದರೆ ನೀರು ತೀರ್ಥವಾಗುತ್ತದೆ, ಅನ್ನ ಪ್ರಸಾದವಾಗುತ್ತದೆ ಎಂದು ನುಡಿದರು.

ದೀಪ ಬೆಳಗುವದು ಕಲ್ಯಾಣ, ಆರೋಗ್ಯ, ಸಂಪತ್ತು, ಶತ್ರುಬುದ್ಧಿ ವಿನಾಶ ಮಾಡುತ್ತದೆ. ದೀಪವೆಂದರೆ ಪ್ರಕಾಶ ಮತ್ತು ಜ್ಞಾನ. ಈ ಜ್ಞಾನದ ದೀಪ ನಮ್ಮಲ್ಲಿ ಬೆಳಗಿದರೆ ಯಾರನ್ನೂ ತಪ್ಪು ತಿಳಿಯುವದಿಲ್ಲ. ಅದಕ್ಕಾಗಿ ಇಂತಹ ದೀಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಪೂರ್ವದಲ್ಲಿ ಇರುವ ಶಿಕ್ಷಣ ಪದ್ಧತಿಗೂ ಈಗಿನ ಶಿಕ್ಷಣ ಪದ್ಧತಿಗೂ ಸಾಕಷ್ಟು ಬದಲಾವಣೆಗಳಾಗಿದ್ದು, ಸುಶಿಕ್ಷಿತ ಸಮಾಜದಿಂದಲೇ ಹಬ್ಬಗಳು ತೆರೆಮೆರೆಗೆ ಸರಿಯುತ್ತಿವೆ. ಲಕ್ಮೇಶ್ವರ ಒಂದು ಪವಿತ್ರವಾದ ಕ್ಷೇತ್ರವಾಗಿದ್ದು, ರಾಘವಾಂಕ ಕವಿ ಈ ಸೋಮೇಶ್ವರ ಚರಿತ್ರೆಯನ್ನು ಬರೆದ ಇತಿಹಾಸವಿದೆ. ಈ ಕ್ಷೇತ್ರದ ಮಹತ್ವ ಎಲ್ಲರಿಗೂ ತಿಳಿಯುವಂತಾಗಲಿ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುತ್ತಿರಲಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕರುಗಳಾದ ಡಿ.ಆರ್. ಪಾಟೀಲ ಮಾತನಾಡಿ, ಇತಿಹಾಸ ಪ್ರಸಿದ್ಧ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನವನ್ನು ಇನ್ಫೋಸಿಸ್ ಪೌಂಢೇಶನ್‌ನ ಡಾ. ಸುಧಾಮೂರ್ತಿ ಅವರು ೫ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ 5 ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಲಕ್ಷದೀಪೋತ್ಸವ ಆಚರಿಸಲಾಗಿತ್ತು. ಅಂದು ಹಿರಿಯರೆಲ್ಲರೂ ತೆಗೆದುಕೊಂಡ ನಿರ್ಣಯದಂತೆ ಇದು 3ನೇ ಲಕ್ಷ ದೀಪೋತ್ಸವವಾಗಿದೆ. ಈ ಪುಣ್ಯ ಕಾರ್ಯ ನಿರಂತರ ನಡೆಯಲು ಭಕ್ತರೆಲ್ಲರ ಸಹಕಾರ ಅಗತ್ಯ ಎಂದರು.

ಹನುಮನಹಳ್ಳಿ ಶ್ರೀಗಳು ಮತ್ತು ಇಷ್ಟಲಿಂಗ ಶ್ರೀಗಳು ಉಪಸ್ಥಿತರಿದ್ದರು. ಐ್ರ‍್ರಸ್ಟ್ ಅಧ್ಯಕ್ಷ  ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಮುಂತಾದವರಿದ್ದರು. ಶಂಕರ ಬಾಳಿಕಾಯಿ ಸ್ವಾಗತಿಸಿದರು, ಈಶ್ವರ ಮೆಡ್ಲೇರಿ ನಿರೂಪಿಸಿದರು.

ರಸ್ತೆ ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾದ ಪ್ರಕರಣ: ಚಿಕಿತ್ಸೆ ಫಲಿಸದೇ ಇಬ್ಬರು ದುರ್ಮರಣ!

0

ನೆಲಮಂಗಲ: ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೇ ಇಬ್ಬರು ಯುವಕರು ಆಸ್ಪತ್ರೆಯಲ್ಲೇ ದುರ್ಮರಣ ಹೊಂದಿದ ಘಟನೆ ನೆಲಮಂಗಲ ಸಮೀಪದ ಮಲ್ಲರಬಾಣವಾಡಿ ಕ್ರಾಸ್ ಬಳಿ ಜರುಗಿದೆ.

ವೇಗವಾಗಿ ಬೈಕ್ ಚಲಾಯಿಸಿ, ಯುವಕನೋರ್ವ ಬೃಹತ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಲಾರಿಯ ಕೆಳಭಾಗ ಬೈಕ್ ಸೇರಿದೆ. ಬೈಕ್ ನಲ್ಲಿದ್ದ ಇಬ್ಬರು ಯುವಕರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನೆಲಮಂಗಲ ಸಮೀಪದ ಶ್ರೀನಿವಾಸಪುರ ಗ್ರಾಮದವವರಾದ ಜೀವನ್ ಮತ್ತು ಆದಿತ್ಯ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ನ.23ರಿಂದ ಡಿ. 1ರವರೆಗೆ ಶರಣೆ ದಾನಮ್ಮ ದೇವಿಯ ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನ. 23ರಿಂದ ಡಿ. 1ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಶ್ರೀ ಶರಣೆ ದಾನಮ್ಮದೇವಿಯ 18ನೇ ವರ್ಷದ ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಶ್ರೀ ವೀರಭದ್ರ ದೇವಸ್ಥಾನ ಟ್ರಸ್ಟ ಕಮಿಟಿ, ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ ಕಮಿಟಿ ಹಾಗೂ ದಾನೇಶ್ವರಿ ಮಹಿಳಾ ಮಂಡಳ, ಯುವಕ ಮಂಡಳದ ಸಂಯುಕ್ತ ಆಶ್ರಯದಲ್ಲಿ ಜರುಗಲಿರುವ ಪುಟ್ಟರಾಜ ಕವಿ ಗವಾಯಿಗಳವರು ವಿರಚಿತ ದಾನಮ್ಮದೇವಿ ಪುರಾಣ ಪ್ರವಚನ ಮಾಲಿಕೆಗೆ ಅಡ್ನೂರ-ರಾಜೂರ ಗದುಗಿನ ಬ್ರಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನ. 23ರಂದು ಸಂಜೆ 6 ಗಂಟೆಗೆ ಉದ್ಘಾಟನೆ ನೆರವೇರಿಸಿ ಸಮಾರಂಭದ ಸಾನ್ನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂತೋಷ ಕೊಡೇಕಲ್, ಬಿ.ಡಿ. ಕಿಲಬನವರ, ಡಾ. ಕಲ್ಲೇಶ ಮೂರಶಿಳ್ಳಿ ಆಗಮಿಸುವರು. ಬೆಳ್ಳಟ್ಟಿ-ಗದುಗಿನ ವೇ.ಫಕೀರೇಶ್ವರ ಶಾಸ್ತ್ರೀಗಳು ಹಿರೇಮಠ ಅವರ ಪುರಾಣ ಪ್ರವಚನಕ್ಕೆ ಹಿರಿಯ ಕಲಾವಿದ ವೀರೇಶ ಕಿತ್ತೂರ, ಶಾಮರಾವ ಪುಲಾರೆ ಅವರ ಸಂಗೀತವಿದೆ.

ನ. 24ರಂದು ಸಂಜೆ 6 ಗಂಟೆಗೆ ಶರಣೆ ದಾನಮ್ಮತಾಯಿಯ ತೊಟ್ಟಿಲೋತ್ಸವ, ನಾಮಕರಣ ಸಮಾರಂಭದ ಅಧ್ಯಕ್ಷತೆಯನ್ನು ಲಲಿತಾ ತಡಸದ ವಹಿಸುವರು. ಅತಿಥಿಗಳಾಗಿ ಸಾವಿತ್ರಿ ಬೇವಿನಮರದ, ಪುಷ್ಪಾವತಿ ಬಳ್ಳಾರಿ, ವಿಜಯಲಕ್ಮೀ ಬೆಂಗಳೂರು, ಸುರೇಖಾ ಪಿಳ್ಳಿ, ಮಹಾನಂದ ಯಂಡಿಗೇರಿ ಆಗಮಿಸುವರು.

ನ24ರಂದು ಸಂಜೆ 6 ಗಂಟೆಗೆ ಶರಣೆ ದಾನಮ್ಮ ತಾಯಿ ಹಾಗೂ ಸೋಮಲಿಂಗ ವಿವಾಹ ಸಮಾರಂಭವನ್ನು ಗಂಗಾಧರ ಹಿರೇಮಠ ನೆರವೇರಿಸುವರು. ಅಧ್ಯಕ್ಷತೆಯನ್ನು ಶೋಭಾ ಗುಗ್ಗರಿ ವಹಿಸುವರು. ಅತಿಥಿಗಳಾಗಿ ಶಿವಲೀಲಾ ತಡಸದ, ಶಾರದಾ ಸಂಬರಗಿ, ಲಕ್ಷ್ಮೀ ಗುರಿಕಾರ, ಸುಧಾ ಕೆರೂರ, ಮಂಜುಳಾ ಡಂಬಳ, ರೂಪಾ ಯಂಡಿಗೇರಿ ಆಗಮಿಸುವರು.

ದೇವಸ್ಥಾನದ ಟ್ರಸ್ಟಿಗಳಾದ ರಾಚಪ್ಪ ಮಿಣಜಗಿ, ಶಿವಬಸಪ್ಪ ಯಂಡಿಗೇರಿ, ಪ್ರದೀಪ ಕೊಡೇಕಲ್, ಜಗದೀಶ ಯಚ್ಚಲಗಾರ, ಶಿವಕುಮಾರ ಬೇವಿನಮರದ, ಶಂಭು ಕಾರದಕಟ್ಟಿ, ಸುರೇಶ ಶಿರಗಣ್ಣವರ, ಅರುಣಕುಮಾರ ಮುನವಳ್ಳಿ, ಪುರಾಣ ಸಮಿತಿಯ ಅಧ್ಯಕ್ಷೆ ಲಲಿತಾ ತಡಸದ, ಗೌರವಾಧ್ಯಕ್ಷೆ ಶೈಲಜಾ ಕೊಡೇಕಲ್, ಸುರೇಖಾ ಪಿಳ್ಳಿ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾತರಕಿ, ಶೋಭಾ ಗುಗ್ಗರಿ ಉಪಸ್ಥಿತರಿರುವರು.

ಬಸವೇಶ್ವರ ನಗರದ ಸಮಾಳ ಮೇಳ ಯುವಕ ತಂಡದವರಿಂದ ನಂದಿಕೋಲ, ಕರಡಿ ಮಜಲು ಜರುಗಲಿದ್ದು, ಭಕ್ತಾಧಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಬೇಕೆಂದು ಅಧ್ಯಕ್ಷೆ ಲಲಿತಾ ತಡಸದ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾತರಕಿ ವಿನಂತಿಸಿದ್ದಾರೆ.

Hair Care: ಸೀಳು ಕೂದಲಿನ ಸಮಸ್ಯೆಯೇ!? ಹಾಗಿದ್ರೆ ಈ ಮನೆಮದ್ದು ಫಾಲೋ ಮಾಡಿ!

0

ಪ್ರೋಟೀನ್‌ ಕೊರತೆಯಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ. ಒಣ ಕೂದಲು, ಕಪ್ಪಾದ ಕೂದಲ ಬದಲಾಗಿ ಕೂದಲಿನ ಬಣ್ಣ ಕೆಂಪಗಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅಲ್ಲದೇ ಅನೇಕರಲ್ಲಿ ಕೂದಲಿನ ತುದಿಯಲ್ಲಿ ಎರಡು ಸೀಳುಕಂಡುಬರುತ್ತವೆ. ಇದನ್ನು ಸೀಳು ಕೂದಲು ಅಥವಾ ಸ್ಪ್ಲಿಟ್‌ ಹೇರ್‌ ಎನ್ನುತ್ತಾರೆ. ಕೂದಲನ್ನು ಸರಿಯಾಗಿ ಪೋಷಣೆ ಮಾಡದೇ ಇದ್ದರೆ ಈ ರೀತಿ ಸೀಳು ಕೂದಲು ಉಂಟಾಗುತ್ತದೆ.

ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಉದ್ದ ಕೂದಲು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಏಕೆಂದರೆ ಕೂದಲು ಅಂದವನ್ನು ಹೆಚ್ಚಿಸುತ್ತದೆ. ಹಾಗಾದರೆ ಈ ಸೀಳು ಕೂದಲಿನ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು, ಕೂದಲಿನ ರಕ್ಷಣೆ ಹೇಗೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಲಹೆ.

ತೆಂಗಿನೆಣ್ಣೆ:
ತೆಂಗಿನೆಣ್ಣೆಯು ಒಡೆದ ತುದಿಗಳನ್ನೂ ಹೋಗಲಾಡಿಸುತ್ತದೆ. ಕೂದಲಿಗೆ ತೆಂಗಿನ ಎಣ್ಣೆಯನ್ನು ಅನ್ವಯಿಸುವುದರಿಂದ ಕೂದಲನ್ನು ಸರಿಪಡಿಸುತ್ತದೆ ಮತ್ತು ಅದನ್ನು ಬಲಪಡಿಸುತ್ತದೆ. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಕೂದಲಿಹೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ. ಸುಮಾರು ಎರಡು ಗಂಟೆಗಳ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಕೂದಲು ಟ್ರಿಮ್ಮಿಂಗ್:
ನೀವು ಒಡೆದ ತುದಿಗಳನ್ನು ತೊಡೆದುಹಾಕಲು ಬಯಸಿದರೆ, ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡಿ. ಇದು ವಿಭಜಿತ ತುದಿಗಳನ್ನು ಕಡಿಮೆ ಮಾಡುತ್ತದೆ, ಆದರೆ ಅವುಗಳ ಒಡೆಯುವಿಕೆ ಮತ್ತು ಪತನವನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ.

ಬಾಳೆಹಣ್ಣಿನ ಪ್ಯಾಕ್:
ಬಾಳೆಹಣ್ಣು ಒಡೆದ ತುದಿಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಿಂದ ಮಾಡಿದ ಹೇರ್ ಪ್ಯಾಕ್ ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ಮೊಸರು, ನಿಂಬೆ ರಸ ಮತ್ತು ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪ್ಯಾಕ್​ ಅನ್ನು ಸಂಪೂರ್ಣ ಕೂದಲಿಗೆ. ಸುಮಾರು ಒಂದು ಗಂಟೆಯ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಪಪ್ಪಾಯಿ ಹೇರ್ ಪ್ಯಾಕ್:
ಪಪ್ಪಾಯಿ ಕೂದಲಿಗೆ ಪೋಷಣೆ ನೀಡುವ ಕೆಲಸ ಮಾಡುತ್ತದೆ. ಇದು ಕಳೆದುಹೋದ ಕೂದಲಿನ ಹೊಳಪನ್ನು ಮರಳಿ ತರಬಹುದು. ಇದನ್ನು ಮಾಡಲು, ಪಪ್ಪಾಯಿಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ಅದರಲ್ಲಿ ಮೊಸರು ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಮೊಟ್ಟೆಯ ಪ್ಯಾಕ್:
ಮೊಟ್ಟೆಯು ಕೂದಲಿಗೆ ಉತ್ತಮ ಸ್ಥಿತಿ ನೀಡುತ್ತದೆ. ಮೊಟ್ಟೆಯಲ್ಲಿ ಆಲಿವ್ ಎಣ್ಣೆ ಮತ್ತು 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಕೂದಲಿನ ಉದ್ದಕ್ಕೆ ಅನುಗುಣವಾಗಿ ಹಚ್ಚಿ ಮತ್ತು ಕನಿಷ್ಠ 30 ನಿಮಿಷಗಳ ಕಾಲ ಇರಿಸಿ. ಇದರ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.

Breaking News: ಕೀಟನಾಶಕ ಸೇವಿಸಿ ಸೂಸೈಡ್ ಮಾಡಿಕೊಂಡ 16 ವರ್ಷದ ಅಪ್ರಾಪ್ತ!

0

ಶಿವಮೊಗ್ಗ:– ಹೊಸನಗರ ತಾಲೂಕಿನ ಚಿಕ್ಕಮಣತಿ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

16 ವರ್ಷದ ಅನುದೀಪ್ ಮೃತ ದುರ್ದೈವಿ ಎನ್ನಲಾಗಿದೆ. ಕಳೆದ ಅ.15 ರಂದು ಅನುದೀಪ್ ಕೀಟನಾಶಕ ಸೇವಿಸಿದ್ದ. ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆತೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾನೆ.

ವಿದ್ಯಾರ್ಥಿಯ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಜಿಗೇರಿಯಲ್ಲಿ ಸಂಭ್ರಮದ ಪ್ರತಿಭಾ ಕಾರಂಜಿ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದಲ್ಲಿ ರಾಜುರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ ಅವಾರಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ದುರ್ಗಪ್ಪ ಕಟ್ಟಿಮನಿ ಹಾಗೂ ಅರ್ಜುನ್ ರಾಠೋಡ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ರಾಜೂರ ಕ್ಲಸ್ಟರಿನ ಸಿಆರ್‌ಪಿ ಎಂ.ಯು. ಗೋಡೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯ ಗುರುಗಳಾದ ಶರಣಪ್ಪಗೌಡ ಗೌಡರ್ ಸ್ವಾಗತಿಸಿದರು. ಮಮತಾ ದೊಡ್ಡಮನಿ ನಿರೂಪಿಸಿದರು. ಶರಣಪ್ಪ ಗೊಲ್ಲರ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಕ್ಲಸ್ಟರ್‌ಗಳ ಸಿಆರ್‌ಪಿಗಳು ಹಾಗೂ ಗ್ರಾಮದ ಹಿರಿಯರಾದ ಪ್ರಭು ಗುರಿಕಾರ, ರಾಜಾರಾಮ್, ಸಂಜೀವ, ದೇವಪ್ಪ, ದ್ಯಾಮಣ್ಣ ಗುರಿಕಾರ, ರವಿಕುಮಾರ್ ಗುರಿಕಾರ, ಖಾಸಿಂಸಾಬ್ ತೋಟದ ಹಾಜರಿದ್ದರು.

ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಬೆಳೆಯಲು ಸಾಧ್ಯ: ಗೋವಿಂದಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ:  ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಭಾಗದ ರೈತರನ್ನು ಕೃಷಿ ಸಂಬಂಧಿತ ವೃತ್ತಿ ಕ್ಷೇತ್ರಗಳಲ್ಲಿ ತೊಡಗಿಸಿ ಅವರ ಆರ್ಥಿಕ, ಸಾಮಾಜಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರದ ಅಗತ್ಯತೆ ಬಹಳಷ್ಟಿದೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ಪಾಟೀಲ ಹೇಳಿದರು.

ಅವರು ರಾಮಗೇರಿ ಗ್ರಾಮದ ಗ್ರಾ.ಪಂ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಗದಗ, ಕೆಸಿಸಿ ಬ್ಯಾಂಕ್ ಧಾರವಾಡ, ಕೆ.ಎಂ.ಎಫ್ ಧಾರವಾಡ ಗದಗ ಉಪವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಮಗೇರಿ, ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕಿನ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಸ್ಥೆಗಳು ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಅದು ಬೆಳೆಯಲು ಸಾಧ್ಯವಾಗುತ್ತದೆ. ಸಹಕಾರಿ ಕ್ಷೇತ್ರ ಬೆಳೆಯಲು ಸಮುದಾಯಯದ ಪಾತ್ರ ಮುಖ್ಯವಾಗಿದೆ. ಸಹಕಾರಿ ಸಂಘದ ಮೂಲವೇ ಗದಗ ಜಿಲ್ಲೆಯಾಗಿದ್ದು, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸಹಕಾರಿ ಸಂಘಗಳಲ್ಲಿ ಪಾರದರ್ಶಕತೆ ಇರಬೇಕು. ಸಹಕಾರಿ ಸಂಘಗಳು ಬೆಳೆಯುವಲ್ಲಿ ಎಲ್ಲರ ಸಹಕಾರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಬಸಣ್ಣ ಬೆಟಗೇರಿ ಅವರು ಸಹಕಾರಿ ಸಂಘಗಳು ಹುಟ್ಟು ಹಾಗೂ ಬೆಳವಣಿಗೆ ಕುರಿತು ಮಾತನಾಡಿದರು. ರಾಮಗಿರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಂದ್ರ ಬೆಟಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿ.ಜಿ. ಕುಲಕರ್ಣಿ, ಗ್ರಾ.ಪಂ ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ, ಸುಷ್ಮಾ ಕಡಿವಾಣ, ಎಚ್.ಎ. ಬಂಡೆಣ್ಣವರ, ಚನ್ನಬಸಪ್ಪ ಲಿಂಗಶೆಟ್ಟಿ, ಶೇಖಣ್ಣ ಕಾಳೆ, ಕೆ.ಸಿ. ಕೂಸನೂರಮಠ, ಬಿ.ಆರ್. ನಿಡಗುಂದಿ, ವಿ.ವಿ. ಪಡಸಲಗಿ, ವಿಶ್ವನಾಥ ಲಮಾಣಿ, ಪುನೀತ್ ಓಲೆಕಾರ, ರವೀಂದ್ರ ಗೊಜಗೋಜಿ, ಪರಸಪ್ಪ ಗೊಂದಿ, ಫಕ್ಕೀರಪ್ಪ ಕಾಳೆ, ಪರಶುರಾಮ ಲಕ್ಕಣ್ಣವರ, ಶಿವಾನಂದ ಕಳ್ಳಿಮಠ, ಅಶೋಕ ಹುಣಿಸಿಮರದ, ಶಿವಾನಂದ ಕಡೆಮನಿ, ಕಲ್ಲವ್ವ ಬಾಲಣ್ಣವರ, ಲಕ್ಮೀಶ್ವರ ಬೆಟಗೇರಿ ಇದ್ದರು. ಶಿಕ್ಷಕಿ ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿದರು.

ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ನಲ್ಲಿ ಬೆಂಕಿ ಅವಘಡ: ಸುಟ್ಟು ಭಸ್ಮವಾದ ಯುವತಿ!

0

ಬೆಂಗಳೂರು:- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯುವತಿಯೋರ್ವಳು ಸಜೀವದಹನವಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

ರಾಜಧಾನಿ ಬೆಂಗಳೂರಿನ ರಾಜ್ ಕುಮಾರ್ ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣ ಭಸ್ಮವಾಗಿದೆ.

ಅವಘಡದಲ್ಲಿ ಶೋರೂಮ್‌ನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಎಂಬ ಯುವತಿ ಸಾವಿಗೀಡಾಗಿದ್ದಾಳೆ. ಶೋರೂಮ್ ಧಗಧಗಿಸುತ್ತಿದ್ದಂತೆ ಹೊರಬರಲಾಗದೆ ಯುವತಿ ಒಳಗಡೆ ಸಿಲುಕಿದ್ದಳು. ಹೊರಬರಲಾರದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಒಟ್ಟಾರೆ ಯುವತಿ ಬೆಂಕಿಗೆ ಸುಟ್ಟು ಭಸ್ಮ ಆಗಿರುವ ಹಿನ್ನೆಲೆ ಎಲ್ಲರೂ ಮರುಕ ವ್ಯಕ್ತಪಡಿಸಿದ್ದಾರೆ.

ಭಕ್ತರ ಏಳ್ಗೆಯೇ ಮಠಾಧೀಶರ ಉದ್ದೇಶ: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಾನಗಲ್ಲ ಗುರು ಕುಮಾರೇಶ್ವರ ಮಹಾಸ್ವಾಮಿಗಳು ತಮಗಿಟ್ಟ ಹೆಸರಿನಂತೆ ಬದುಕಿದವರು ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವದ ೩ನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಅನಾಚಾರವಾಗಿದ್ದ ಸಮಾಜವನ್ನು ತಮ್ಮ ನಡೆ-ನುಡಿಗಳಿಂದ ತಿದ್ದಿದವರು ಕುಮಾರೇಶ್ವರರು. ಶಿವಸ್ವರೂಪಿಯಾದವನು ಎಂದಿಗೂ ಸದಾಚಾರವನ್ನು, ಶಿವಯೋಗವನ್ನು ಬಿಡಬಾರದು. ಭಕ್ತರ ಏಳ್ಗೆಯೇ ಮಠಾಧೀಶರ ಮೂಲ ಉದ್ದೇಶವಾಗಿದ್ದು, ಇದರ ಮಹತ್ವವನ್ನು ನಿಮಗೆ ತಿಳಿಸಿ, ನಿಮ್ಮನ್ನು ಶ್ರೀಮಠದ ಕಾರ್ಯಕ್ರಮಗಳಿಗೆ ಆಮಂತ್ರಿಲೆಂದೇ ನಾವು ಸದ್ಭಾವನಾ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಪುರಾಣಿಕರಾದ ಪಂ. ಅನ್ನದಾನಶಾಸ್ತಿçಗಳು ಮಾತನಾಡಿ, ಮಹಾತ್ಮರು ಅವತರಿಸಿ ಬರುವುದು ಲೋಕೋದ್ಧಾರಕ್ಕಾಗಿ. ಹಾನಗಲ್ಲ ಗುರು ಕುಮಾರೇಶ್ವರರು ವೀರಶೈವ ಲಿಂಗಾಯತ ಧರ್ಮವನ್ನು ಉದ್ಧಾರ ಮಾಡಿದ್ದಷ್ಟೇ ಅಲ್ಲದೆ ಇಡೀ ಸಮಾಜವನ್ನು ತಿದ್ದಿದ ಗುರುಗಳಾಗಿದ್ದಾರೆ. ಅವರು ಸಮಾಜೋದ್ಧಾರವನ್ನೇ ತಮ್ಮ ಜೀವನದ ಉಸಿರನ್ನಾಗಿಸಿಕೊಂಡರು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಗಣ್ಯ ವರ್ತಕ ಮಂಜುನಾಥ ಬೇಲೇರಿ ಮಾತನಾಡಿ, ಈ ಮಠದ ಪೂಜ್ಯರು ಏನೇ ಅಪ್ಪಣೆ ಮಾಡಿದರೂ ಆ ಸೇವೆಯನ್ನು ನಿರ್ವಹಿಸಲು ನಾನು ಸದಾ ಸಿದ್ಧ ಎಂದರು. ವೇದಿಕೆಯ ಮೇಲೆ ಗದಗ ಅಡವೀಂದ್ರ ಮಠದ ಧರ್ಮದರ್ಶಿಗಳು, ಎಸ್.ಎಸ್. ಮೇಟಿ, ಅಭಿಯಂತರ ಅರುಣ ಕುಮಾರ, ನರೇಗಲ್ಲ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ನವಲಿ, ಉದ್ದಿಮೆದಾರ ಗೋವಿಂದರಾಜ ಗುಡಿಸಾಗರ ಮತ್ತಿತರರಿದ್ದರು.

ಸೋಮವಾರ ಶ್ರೀ ಕುಮಾರೇಶ್ವರರ ಜನನದ ನಿಮಿತ್ಯ ತೊಟ್ಟಿಕೋತ್ಸವ ಕಾರ್ಯಕ್ರಮವು ಸಡಗರ, ಸಂಭ್ರಮಗಳಿAದ ಜರುಗಿತು. ಸುಮಂಗಲೆಯರೆಲ್ಲರೂ ಶ್ರೀ ಕುಮಾರೇಶ್ವರರನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಸಂಭ್ರಮಪಟ್ಟರು. ರುದ್ರಮುನಿ ಶಾಸ್ತ್ರಿಗಳು ತೊಟ್ಟಿಲೋತ್ಸವದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಶಿಕ್ಷಕ ವಿ.ವಿ. ಅಣ್ಣಿಗೇರಿ ನಿರೂಪಿಸಿದರೆ, ಈಶ್ವರ ಬೆಟಗೇರಿ ವಂದಿಸಿದರು.

error: Content is protected !!