Home Blog Page 2100

ರಾಜ್ಯ ವಕ್ಫ್ ಮಂಡಳಿ ಚುನಾವಣೆ-2024

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಚುನಾವಣಾ ಪ್ರಚಾರಾರ್ಥವಾಗಿ ಹುಬ್ಬಳ್ಳಿಯ ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ ಹಾಗೂ ಗದಗಿನ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ಸೇರಿ, ಗದಗ ಜಿಲ್ಲೆಯ ಎಲ್ಲಾ 17 ಜಮಾತಿನ ಮುತ್ವವಲ್ಲಿಗಳ ಸಭೆ ಸೇರಿ ರಾಜ್ಯ ವಕ್ಫ್ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿದ ಅನ್ವರ್ ಬಾಷಾ ಹಾಗೂ ಸರ್ವರ್ ಬೇಗ್ ಇವರಿಗೆ ಮತ ಚಲಾಯಿಸಬೇಕೆಂದು ಎಲ್ಲಾ ಮತದಾರ ಬಾಂಧವರಲ್ಲಿ ವಿನಂತಿಸಿದರು.

ನ. 19ರಂದು ಬೆಳಗಾವಿಯ ಜಿಲ್ಲಾಧಿಕಾರಿ ಆವರಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯುವ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಮತ ಚಲಾಯಿಸಬೇಕೆಂದು ವಿನಂತಿ ಮಾಡಿಕೊಂಡರು.

ಅದರಂತೆ ಗದಗ ಜಿಲ್ಲಾ ವಕ್ಫ್ ಅಡೈಜರಿ ಕಮಿಟಿ ಚೇರಮನ್ ಜಿ.ಎಂ. ದಂಡಿನವರು ಸಹ ನಮ್ಮ ಗದಗ ಜಿಲ್ಲೆಯ ಅಭಿವೃದ್ಧಿಗಾಗಿ ಅನ್ವರ್ ಬಾಷಾ ಹಾಗೂ ಸರ್ವರ್ ಬೇಗ್ ಅವರಿಗೆ ಮತ ಚಲಾಯಿಸಿವಂತೆ ಕೇಳಿಕೊಂಡರು. ಡಿ.ಆರ್ ಪಾಟೀಲರು ಸಹ ಎಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸಬೇಕೆಂದು ಕೇಳಿಕೊಂಡರು.

ಸಚಿವ ಡಾ. ಹೆಚ್.ಕೆ. ಪಾಟೀಲರ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸುತ್ತೇವೆಂದು ಎಲ್ಲ ಮುತುವಲ್ಲಿಗಳು ಭರವಸೆ ನೀಡಿದರು. ಕೊನೆಗೆ ಎಂ.ಸಿ. ಶೇಖ ವಂದಿಸಿದರು.

ಪುರಾಣಗಳು ಮನುಷ್ಯನ ಬದುಕನ್ನು ಹಸನು ಮಾಡುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ತಿಳಿಸುತ್ತವೆ: ಮಲ್ಲಿಕಾರ್ಜುನ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವೀರಶೈವ ಪರಂಪರೆಯಲ್ಲಿ ಪುರಾಣಗಳಿಗೆ ಮಹತ್ವವಿದೆ. ಈ ಪುರಾಣಗಳು ಮನುಷ್ಯನ ಬದುಕನ್ನು ಹಸನು ಮಾಡುವುದರ ಜೊತೆಗೆ ಅಂದಿನ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ತಿಳಿಸುತ್ತವೆ. ಅಷ್ಟು ವರ್ಷಗಳ ಹಿಂದಿನ ದಿನಮಾನಗಳಿಗೆ ನಮ್ಮನ್ನು ಕೊಂಡೊಯ್ದು ಆ ದಿನಗಳನ್ನು ನಮಗೆ ಪರಿಚಯಿಸುತ್ತವೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ತೆಲುಗಿನಲ್ಲಿ ಪಾಲ್ಕುರಿಕೆ ಸೋಮನಾಥ ಬರೆದ ಬಸವ ಪುರಾಣ ವೀರಶೈವ ಪರಂಪರೆಯ ಮೊದಲ ಪುರಾಣವಾಗಿದ್ದು, ಕನ್ನಡದಲ್ಲಿ ವೀರಶೈವ ಪರಂಪರೆಯ ಪುರಾಣವನ್ನು ಬರೆದವರು ಭೀಮ ಕವಿ. ಅವರು ಬರೆದ ಬಸವ ಪುರಾಣವೇ ಕನ್ನಡದ ಮೊದಲ ಪುರಾಣವಾಗಿದೆ. ಪುರಾಣವನ್ನು ಆಲಿಸುವ ಮೂಲಕ ಇಂದಿನ ನಮ್ಮ ಜೀವನ ಶೈಲಿಯನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಅಂದಿನವರ ಚರಿತ್ರೆ ನಮಗೆ ಇಂದಿಗೂ ಮಾರ್ಗದರ್ಶಕ ಎಂದರು.

ನಾವೀಗ ನಿತ್ಯವೂ ಕೇಳುತ್ತಿರುವ ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣದಲ್ಲಿ ಬರುವ ಶ್ರೀ ಕುಮಾರೇಶ್ವರರು ಸಿದ್ಧಾಂತ ಶಿಖಾಮಣಿಯಲ್ಲಿನ ಅನೇಕ ಸಂಗತಿಗಳಿಗೆ ಪೂರಕವಾಗಿ ತಮ್ಮ ಜೀವನವನ್ನು ಸಾಗಿಸಿದರು. ಅದಕ್ಕಾಗಿ ಎಲ್ಲರೂ ಯೋಗ ಜೀವನದ ಬಗ್ಗೆ ಸಾರುವ ಸಿದ್ಧಾಂತ ಶಿಖಾಮಣಿ ಗ್ರಂಥದ ಅಧ್ಯಯನವನ್ನು ಮಾಡಬೇಕೆಂದು ಶ್ರೀಗಳು ತಿಳಿಸಿದರು.

ಕುಮಾರೇಶ್ವರರ ಪುರಾಣ ಪ್ರಾರಂಭಿಸಿದ ಪಂ. ಅನ್ನದಾನ ಶಾಸ್ತಿçಗಳು ಮಾತನಾಡಿ, ಮನಸ್ಸಿಗೆ ಆಗಿರುವ ನೋವುಗಳನ್ನು ಮಠಗಳು ಶಮನ ಮಾಡುತ್ತವೆ. ಹಾನಗಲ್ಲ ಗುರು ಕುಮಾರೇಶ್ವರರು ಮಠಗಳನ್ನು ಕಟ್ಟದಿದ್ದರೂ, ಮಠಗಳಿಗೆ ಯೋಗ್ಯರಾದ ಪೀಠಾಧೀಶರನ್ನು ತಯಾರು ಮಾಡುವ ಶಿವಯೋಗಮಂದಿರವನ್ನು ನಿರ್ಮಿಸಿ ನಾಡಿನ ಹಿತವನ್ನು ಬಯಸಿದರು. ನಮ್ಮ ಮನದಲ್ಲಿಯೆ ಮಹಾದೇವನಿದ್ದಾನೆ. ಮನಸ್ಸಿನಲ್ಲಿರುವ ವಿಷಯ ಎಂಬ ಧೂಳನ್ನು ಅತ್ತ ಸರಿಸಿದರೆ ಮಹಾದೇವ ನಮ್ಮ ಅಂತರAಗಕ್ಕೆ ನಿಚ್ಚಳವಾಗಿ ಕಾಣುತ್ತಾನೆ. ಶ್ರೀ ಕುಮಾರೇಶ್ವರರು ಅಂತಹ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದು, ಸಮಾಜ ಸೇವೆ ಮತ್ತು ಸಂಘಟನೆಯ ಮೂಲಕವೆ ಈ ಸಮಾಜಕ್ಕೆ ಬೆಳಕಾದರು ಎಂದರು. ಈಶ್ವರ ಬೆಟಗೇರಿ ನಿರ್ವಹಿಸಿದರು.

27 ವರ್ಷಗಳ ಬಳಿಕ ಒಂದಾದ ಗುರುಗಳು-ವಿದ್ಯಾರ್ಥಿಗಳು: ಸಂಭ್ರಮದಿಂದ ನಡೆದ ಗುರುವಂದನಾ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಮಾಧ್ಯಮಿಕ ಶಾಲೆಯ ೧೯೯೬-೯೭ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿತು.

ಮುಖ್ಯ ಅತಿಥಿಗಳಾಗಿ ಗುರುಗಳಾದ ವಿ.ವಿ. ಮರಡ್ಡಿಯವರು ಪಾಲ್ಗೊಂಡು ಮಾತನಾಡಿ, ತಾವು ಎಲ್ಲರೂ 27 ವರ್ಷದ ನಂತರ ಕೂಡಿ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಚಾರ. ತಮ್ಮಲ್ಲೆರ ಬಾಳು ಬೆಳಗಲಿ ಎಂದು ಹಾರೈಸಿದರು.

ಗುರುಗಳಾದ ಜಿ.ಪಿ. ದೇಶಪಾಂಡೆ ಮಾತನಾಡಿ, ನೀವು ಮಾಡುತ್ತಿರುವ ಗುರುವಂದನಾ ಕಾರ್ಯಕ್ರಮಕ್ಕೆ ಸಾರ್ಥಕತೆ ಬರಬೇಕಾದರೆ ಸಂಸ್ಥೆಯ ಸಂಸ್ಥಾಪಕರನ್ನು ಹಾಗೂ ಗುರುಗಳನ್ನು ಸ್ಮರಿಸುವುದು ಸೂಕ್ತ. ನೀವು ನನಗೆ ಮಾಡಿದ ಸನ್ಮಾನವನ್ನು ನನಗೆ ಕಲಿಸಿದ ಗುರುವಿಗೆ ಅರ್ಪಿಸುತ್ತೇನೆೆ ಎಂದರು.

ಪಾಪಳೆ ಗುರುಗಳು ಮಾತನಾಡಿ, 27 ವರ್ಷಗಳ ನಂತರ ನಮ್ಮನ್ನೆಲ್ಲಾ ನೆನಪು ಮಾಡಿಕೊಂಡು ಗುರು ನಮನ ಸಲ್ಲಿಸುತ್ತಿರುವುದು ಗುರು-ಶಿಷ್ಯರ ಪರಂಪರೆಯಾಗಿದೆ. ತಾವೆಲ್ಲರೂ ಜವಾಬ್ದಾರಿಯುತ ಸ್ಥಾನದಲ್ಲಿರುವುದು ಸಂತಸದ ವಿಚಾರ ಎಂದರು.

ಗುರುಮಾತೆಯರಾದ ಅಸುಂಡಿ ಹಾಗೂ ಅಳಗುಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ಗುರುಗಳಾದ ಆರ್.ಎಸ್. ಬಂಡಿ, ರಾಂಪೂರ, ಡಿ ದರ್ಜೆ ನೌಕರರಾದ ರಾಮಣ್ಣ ಚೌಡಕಿ, ದಾಸರ ಉಪಸ್ಥಿತರಿದ್ದರು.

ದೇವಸ್ಥಾನಗಳು ನಾಡಿನ ಸಂಸ್ಕೃತಿ, ಶ್ರೀಮಂತ ಪರಂಪರೆಯ ಪ್ರತೀಕವಾಗಿವೆ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿಶಿಷ್ಟ ಪ್ರಾಚೀನ ಶಿಲ್ಪಕಲೆ, ಪರಂಪರೆ, ಧಾರ್ಮಿಕ, ಸಾಂಸ್ಕೃತಿಕ ವೈಭವಗಳ ಇತಿಹಾಸ ಹೊಂದಿರುವ ಪುಲಿಗೆರೆ ಶ್ರೀ ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ. ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವ ಸಮಾರಂಭದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ದೇವಸ್ಥಾನಗಳು ನಮ್ಮ ನಾಡಿನ ಸಂಸ್ಕೃತಿ, ಶ್ರೀಮಂತ ಪರಂಪರೆಯ ಪ್ರತೀಕವಾಗಿವೆ. ಸೋಮೇಶ್ವರ ದೇವಸ್ಥಾನದ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ಈಗಾಗಲೇ ಒಂದಷ್ಟು ಅನುದಾನ ಕಲ್ಪಿಸಲಾಗಿದೆ. ಮುಖ್ಯವಾಗಿ ಉತ್ತರ ದ್ವಾರ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.

ರಾಜ್ಯದಲ್ಲಿ ನಮ್ಮ ನಾಡಿನ ಇತಿಹಾಸ, ಪರಂಪರೆ ಬಿಂಬಿಸುವ ೨೫ ಸಾವಿರಕ್ಕೂ ಹೆಚ್ಚು ಪುರಾತನ ದೇವಸ್ಥಾನ, ಶಿಲಾಶಾಸನಗಳು ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯಿಂದ ಹೊರಗುಳಿದಿವೆ. ಕೇವಲ ೮೫೧ ಸಂರಕ್ಷಿತ ತಾಣವೆಂದು ಗುರುತಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿದ್ದು, ಇದೇ ವರ್ಷ ೨೫೦ ಪ್ರಾಚೀನ ದೇವಸ್ಥಾನಗಳನ್ನು ಪ್ರಾಚ್ಯವಸ್ತು ಇಲಾಖೆಗೊಳಿಸಲಾಗುವುದು ಎಂದರು.

ಸೋಮೇಶ್ವರ ದೇವಸ್ಥಾನ ದರ್ಶನ ಪಡೆದು ದೇವಸ್ಥಾನ ವೀಕ್ಷಿಸಿ ಮಾಹಿತಿ ಪಡೆದ ಸಚಿವರನ್ನು ದೇವಸ್ಥಾನ ಭಕ್ತರ ಕಮಿಟಿ ಮತ್ತು ಹಿರಿಯರು ಸನ್ಮಾನಿಸಿದರು. ಈ ವೇಳೆ ಚಂಬಣ್ಣ ಬಾಳಿಕಾಯಿ, ವಿ.ಎಲ್. ಪೂಜಾರ, ಚನ್ನಪ್ಪ ಜಗಲಿ, ಸುಜಾತಾ ದೊಡ್ಡಮನಿ, ಬಸವೇಶ ಮಹಾಂತಶೆಟ್ಟರ, ಗುರಣ್ಣ ಪಾಟೀಲ ಕುಲಕರ್ಣಿ, ಆನಂದ ಮೆಕ್ಕಿ, ಅಶೋಕ ಬಟಗುರ್ಕಿ, ಪೂರ್ಣಾಜಿ ಖರಾಟೆ, ಶಂಕರ ಬಾಳಿಕಾಯಿ, ಶಿವಯೋಗಿ ಅಂಕಲಕೋಟಿ, ಸುಭಾ ಸಓದುನವರ, ಸೋಮೇಶ ಉಪನಾಳ, ಫಕ್ಕೀರೇಶ ಮ್ಯಾಟಣ್ಣವರ, ವಿರೂಪಾಕ್ಷ ಆದಿ, ಸುರೇಶ ರಾಚನಾಯ್ಕರ, ಫಕ್ಕಿರೇಶ ನಂದೆಣ್ಣವರ, ಬಸವರಾಜ ಮೆಣಸಿನಕಾಯಿ ಪ್ರಾಚ್ಯವಸ್ತು ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ತಹಸೀಲ್ದಾರ ವಾಸುದೇವ ಸ್ವಾಮಿ, ಮುಖ್ಯಾಧಿಕಾರಿ ಮಹೇಶ ಹಡಪದ ಸೇರಿ ಅನೇಕರಿದ್ದರು.

ಕಾಂಗ್ರೆಸ್ ಶಾಸಕರ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತೆ: ಸಿ.ಟಿ ರವಿ

0

ಬೆಂಗಳೂರು: ಕಾಂಗ್ರೆಸ್ ಶಾಸಕರ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಅವರು ನಮ್ಮ ಮೇಲೆ ಶಾಸಕರ ಖರೀದಿ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಗಂಭೀರವಾಗಿದ್ದು, ಖುದ್ದು ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಿದೆ.

ಸಿಎಂ ಹೇಳಿಕೆ ಮೇಲೆ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಇನ್ನೂ ಗಣಿಗ ರವಿ ಸೇರಿ ಯಾರ‍್ಯಾರು ಶಾಸಕರು ತಮಗೆ ಆಫರ್ ಬಂದಿದೆ ಎಂದು ಹೇಳ್ತಿದ್ದಾರೋ ಆ ಎಲ್ಲ ಶಾಸಕರ ಮಂಪರು ಪರೀಕ್ಷೆ ಮಾಡಿಸಬೇಕು. ಕಾಂಗ್ರೆಸ್ ಶಾಸಕರ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತೆ ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಬಿಜೆಪಿಯಿಂದ ಯಾರು ಇವರನ್ನ ಸಂಪರ್ಕಿಸಿದ್ರು, ಯಾವಾಗ, ಏನು ಆಫರ್ ಕೊಟ್ಟಿದ್ದರು ಅನ್ನೋದು ಮಂಪರು ಪರೀಕ್ಷೆಯಲ್ಲಿ ಗೊತ್ತಾಗುತ್ತೆ. ಸಿಎಂ ಇಂಥ ಗಂಭೀರ ಆರೋಪ ಮಾಡಿ ಯಾಕೆ ಸುಮ್ಮನಿದ್ದಾರೆ? ಅವರ ಹೇಳಿಕೆಗೆ ಆಧಾರ ಇಲ್ಲ ಅಂತ ಸಿಎಂ ಸುಮ್ಮನಿದ್ದಾರಾ? ಸಿಎಂ ತಾವೇ ಮಾಡಿರುವ ಆರೋಪ ಬಗ್ಗೆ ತನಿಖೆ ನಡೆಸಲಿ, ಎಸ್‌ಐಟಿ ರಚಿಸಿ ತನಿಖೆಗೆ ಕೊಡಲಿ ಎಂದು ಹೇಳಿದ್ದಾರೆ.

ಜೆಡಿಎಸ್ ಪ್ರಬಲ ಪ್ರಚಾರ ನಡೆಸಿದ್ರೂ ಕೂಡ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಸಚಿವ ಚಲುವರಾಯಸ್ವಾಮಿ

0

ಮಂಡ್ಯ: ಜೆಡಿಎಸ್ ಪ್ರಬಲ ಪ್ರಚಾರ ನಡೆಸಿದ್ರೂ ಕೂಡ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಜನರು ಸಂತೋಷಗೊಂಡಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಶಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪ್ರಬಲ ಪ್ರಚಾರ ನಡೆಸಿದರೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.

ಇನ್ನೂ ನನಗೆ ಕುಮಾರಸ್ವಾಮಿಯಂತೆ ಮಾಧ್ಯಮದವರ ಮುಂದೆ ನಾಲಗೆ ಹರಿಬಿಡಲು ಸಾಧ್ಯವಿಲ್ಲ. ಅವರು ಚರ್ಚೆಗೆ ಬರುವುದಾದರೆ ಒಂದು ವೇದಿಕೆ ಸಿದ್ಧಮಾಡಿ. ಯಾರು ಹೊಲಸು, ಕಚಡ ಎಂದು ಚರ್ಚೆ ಮಾಡೋಣ. 20 ವರ್ಷ ಅವರ ಜತೆ ಇದ್ದೆವು, ಯಾರು ಸ್ನೇಹ ಬಿಟ್ಟರು ಎಂದು ಚರ್ಚಿಸೋಣ ಎಂದರು.

 

Gadag Accident: 2 ಬೈಕ್‌ʼಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು –ಯುವತಿಗೆ ಗಾಯ

0

ಗದಗ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊರ್ವ ಸವಾರನಿಗೆ ಗಾಯಗಳಾಗಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ಸಮೀರ್ ಗುಡಿಸಲಮನಿ (20) ಹಾಗೂ ಉಳಿವೇಶ ಅಂಗಡಿ(15) ಮೃತ ದುರ್ಧೈವಿಗಳಾಗಿದ್ದು, ನೇತ್ರಾವತಿ ಹಡಪದ ಗಾಯಗೊಂಡವರು.

ಹೊಸಹಳ್ಳಿ ಗ್ರಾಮದ ಉಳಿವೇಶ ಅಂಗಡಿ ಒಂಬತ್ತನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದನು. ಇನ್ನೂ ಸಮೀರ್ ಗುಡಸಲಮನಿ ಹುಲಕೋಟಿ ಗ್ರಾಮದ ಜಿಸಿಟಿಎಮ್ ಕಾಲೋನಿ ನಿವಾಸಿಯಾಗಿದ್ದು, ಗ್ಯಾರೇಜ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದನು.  ಇಂದು ಗ್ರಾಮದ ಸರ್ವಿಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಖಿಲ್ ಕುಮಾರಸ್ವಾಮಿ ಗೆಲ್ಲುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ: ಡಾ. ಸೂರಜ್ ರೇವಣ್ಣ

0

ಹಾಸನ: ನಿಖಿಲ್ ಕುಮಾರಸ್ವಾಮಿ ಗೆಲ್ಲುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಿನದಲ್ಲಿ ಉಪ ಚುನಾವಣೆ ಫಲಿತಾಂಶ ಬರುತ್ತಿದೆ. ನಿಖಿಲ್ ಕುಮಾರಸ್ವಾಮಿ ಅವರು ನೂರಕ್ಕೆ ನೂರು ಗೆದ್ದು ಶಾಸಕರಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.

ಭಗವಂತನ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರುತ್ತದೆ. ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜನರ ಆಶೀರ್ವಾದ ಮುಂದಿನ ದಿನಗಳಲ್ಲಿ ನಮ್ಮ ಮೇಲೆ ಹೆಚ್ಚು ಇರುತ್ತದೆ. ಇನ್ನು ನಮ್ಮ ಅಜ್ಜಿ ಚೆನ್ನಮ್ಮ ಅವರ ಆರೋಗ್ಯ ಸ್ವಲ್ಪ ಪರ್ವಾಗಿಲ್ಲ. ಅವರು ಎದ್ದು ಓಡಾಡಬೇಕಿದೆ, ಶ್ವಾಸಕೋಶದಲ್ಲಿ ಸೋಂಕಿತ್ತು, ಅದೆಲ್ಲ ಕ್ಲಿಯರ್ ಆಗಿದೆ. ಒಂದು ರೀತಿ ಬೆಟ್ಟರ್ ಆಗಿ ಇದ್ದಾರೆ ಎಂದು ತಿಳಿಸಿದರು.

ಬಿಜೆಪಿಗೆ ಸರ್ಕಾರ ರಚಿಸಲು ಕೆಲ ಶಾಸಕರನ್ನು ಸಿದ್ದರಾಮಯ್ಯನವರೇ ಕಳುಹಿಸಿದ್ದರು: ಸಚಿವ ಪ್ರಹ್ಲಾದ್ ಜೋಶಿ

0

ಹುಬ್ಬಳ್ಳಿ: ಬಿಜೆಪಿಗೆ ಸರ್ಕಾರ ರಚಿಸಲು ಕೆಲ ಶಾಸಕರನ್ನು ಸಿದ್ದರಾಮಯ್ಯನವರೇ ಕಳುಹಿಸಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸರ್ಕಾರ ಮಾಡಲು ಸಿದ್ದರಾಮಯ್ಯರಿಗೆ ನೈತಿಕತೆ ಇರಲಿಲ್ಲ. ಹೀಗಾಗಿ ಕೆಲ ಶಾಸಕರನ್ನು ಸಿದ್ದರಾಮಯ್ಯನವರೆ ಬಿಜೆಪಿಗೆ ಕಳುಹಿಸಿದ್ದರು, ಹೀಗಾಗಿ ನಾವು ಸರ್ಕಾರ ರಚನೆ ಮಾಡಬೇಕಾಗಿ ಬಂತು ಎಂದು ಹೇಳಿದರು.

ಇನ್ನೂ ಈ ಬಾರಿ ಕಾಂಗ್ರೆಸ್​​​ ಸರ್ಕಾರಕ್ಕೆ ಬಹುಮತ ಬಂದಿದೆ ಅದಕ್ಕೆ ಅವರು ಅಧಿಕಾರದಲ್ಲಿದ್ದಾರೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡೋಣ ಎಂದು ನಿರ್ಧರಿಸಿದ್ದೇವೆ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯನವರೇ ಶಾಸಕರನ್ನು ಕಳುಹಿಸಿದರು ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್!

0

ಬೆಂಗಳೂರು:- ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ, ಟೆಂಡರ್ ವಿಳಂಬ ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ. ನಮ್ಮ ಸರ್ಕಾರ ಬಂದ ಆರಂಭದಲ್ಲಿ ಕೇವಲ ಶೇ 40 ರಷ್ಟು ಔಷಧ ಮಾತ್ರ ಸಿಗುತ್ತಿತ್ತು. ಉಳಿದ ಔಷಧಗಳನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗುತ್ತಿತ್ತು. ಈಗ ಶೇ 75 ರಷ್ಟು ವೈದ್ಯಕೀಯ ಸರಬರಾಜು ನಿಗಮದಿಂದಲೇ ಔಷಧ ಪೂರೈಕೆಯಾಗುತ್ತಿದೆ ಎಂದರು.

ತಾಂತ್ರಿಕ ಕಾರಣದಿಂದ ಟೆಂಡರ್​ ವಿಳಂಬವಾಗಿದೆ ಎಂದ ಅವರು, ಈ ವರ್ಷವೂ ಇಂಡೆಂಟ್​ ಪ್ರಕಾರವೇ ಔಷಧ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ, ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದ ಔಷಧ ಇದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಯಾವ ಔಷಧ ಇಲ್ಲವೋ ಅಂಥವನ್ನು ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಲಾಗಿದೆ. ಈ ಮೂಲಕ, ಔಷಧ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

error: Content is protected !!