Home Blog Page 2110

ಎಲ್ಐಸಿಯೊಂದಿಗೆ ಜೀವನವನ್ನು ಭದ್ರಪಡಿಸಿಕೊಳ್ಳಲು ಜನರಿಗೆ ಸಲಹೆ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವ ವಿಮಾ ನಿಗಮ ಧಾರವಾಡ ವಿಭಾಗ ಮಟ್ಟದ ಪ್ರತಿನಿಧಿಗಳಿಗೆ ಸ್ಪರ್ಧೆ, ನಮ್ಮ ನಡೆ ಪ್ರತಿನಿಧಿಗಳ ಮನೆಯ ಕಡೆ ಭೇಟಿ ಕಾರ್ಯಕ್ರಮದ ಅಂಗವಾಗಿ ಗದಗ ೧ನೇ ಶಾಖೆಯಿಂದ ೧೩ ಪ್ರತಿನಿಧಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರವರ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ತಿಮ್ಮಾಪೂರ ಗ್ರಾಮದ ವಿಮಾ ಪ್ರತಿನಿಧಿಯಾದ ಯಲ್ಲಪ್ಪ ಎಚ್.ಬಾಬರಿ ಅವರ ಮನೆಗೆ ಭೇಟಿ ನೀಡಿ ದಂಪತಿಗಳನ್ನು ಸನ್ಮಾನಿಸಿ ಧಾರವಾಡ ವಿಭಾಗದ ಎಸ್‌ಡಿಎಂ ಬಿ.ಎಸ್. ಚಕ್ರವರ್ತಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲೇ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಅದು ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಇದೀಗ ತನ್ನ ಎಲ್ಲಾ ಪಾಲಿಸಿಗಳನ್ನು ಹೊಸದಾಗಿ ನವೀಕರಿಸಿದ್ದು, ಗ್ರಾಹಕರು ತಮ್ಮ ಮುಂದಿನ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಿ ಎಂದು ಹೇಳಿದರು.

ಎಂಎA ರತ್ನಪ್ರಭಾ ಮಾತನಾಡಿ, ಧಾರವಾಡ ವಿಭಾಗದಲ್ಲಿ ಗದಗ ೧ನೇ ಶಾಖೆಯ ವತಿಯಿಂದ ೧೩ ಪ್ರತಿನಿಧಿಗಳು ಆಯ್ಕೆಯಾಗಿದ್ದು ಸಂತಸದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಎಂ.ಎಸ್. ಚಿದಾನಂದ, ಗದಗ ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ, ಉಪಶಾಖಾಧಿಕಾರಿ ಮಹಾಂತೇಶ ಪಾಲ್ಗೊಂಡಿದ್ದರು. ಪ್ರತಿನಿಧಿಗಳಾದ ಮಲ್ಲೇಶ ಬಸರಿಮರದ, ಉಮೇಶ್ ನವಲಗುಂದ, ವೀರೇಶ್ ಗುಗ್ರಿ, ಶಿವಾನಂದ ಮರಿಗೌಡ್ರು, ರಮೇಶ್ ಹಾದಿಮನಿ, ಫಕ್ರುದ್ದೀನ್ ಬಾಬು ಖಾನ್, ಆರ್.ಎಫ್. ಗಾಣಿಗೇರ, ಬಿ.ಆರ್. ಕುಲಕರ್ಣಿ, ಜ್ಯೋತಿ ಹಿರೇಮಠ, ರಾಜೇಶ್ವರಿ ಕುಲಾಲ್, ರಾಘವೇಂದ್ರ ಹೊಸಮನಿ, ಹನುಮಪ್ಪ ವಾಲ್ಮೀಕಿ ಇವರನ್ನು ಸನ್ಮಾನಿಸಲಾಯಿತು.

ಜನಜಾಗೃತಿಗಾಗಿ ಆಧುನಿಕ ಗಾಂಧಿ ಮುತ್ತಣ್ಣ ತಿರ್ಲಾಪೂರರಿಂದ ಪಾದಯಾತ್ರೆ

0

ವಿಜಯಸಾಕ್ಷಿ ಸುದ್ದಿ, ಗದಗ:ಸ್ವಚ್ಚತೆ, ದೇಹದಾನ, ರಕ್ತದಾನ, ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಆಧುನಿಕ ಗಾಂಧೀಜಿಯಾದ ಮುತ್ತಣ್ಣ ತಿರ್ಲಾಪೂರ ಅವರ ಹೋರಾಟದ ಆಂದೋಲನಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಹೇಳಿದರು.

ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಗುರುವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಜನಜಾಗೃತಿಗಾಗಿ ಜಿಮ್ಸ್ನಿಂದ ಕಿಮ್ ವರೆಗೆ ಪಾದಯಾತ್ರೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಈ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಅಧುನಿಕ ಗಾಂಧೀಜಿಯವರಾದ ಮುತ್ತಣ್ಣ ತಿರ್ಲಾಪೂರ ಅವರು ಒಂದು ವಾರ ಇದ್ದು ರೋಗಿಗಳಿಗೆ ಹಾಗೂ ಪಾಲಕರಿಗೆ ಸ್ವಚ್ಛತೆ, ಶೌಚಾಲಯ ಬಳಕೆ ಕುರಿತು  ಜಾಗೃತಿ ಮೂಡಿಸಿದ್ದಾರೆ. ಇಷ್ಟೊಂದು ವಯಸ್ಸಾದರೂ ಅವರಲ್ಲಿರುವ ಸಾಮಾಜಿಕ ಕಳಕಳಿ ಹಾಗೂ ಉತ್ಸಾಹ ನೋಡಿದರೆ ನಮಗೆಲ್ಲರಿಗೂ ಹೆಮ್ಮೆ ಎನಿಸುತ್ತದೆ. ಅವರು ನಮ್ಮ ರಾಜ್ಯದ ಮತ್ತು ದೇಶದ ಆಸ್ತಿ ಎಂದು ಹೇಳಿದ ಅವರು, ನಮ್ಮ ಆಸ್ಪತ್ರೆಯಲ್ಲಿ ಪ್ರತಿ ಗುರುವಾರ ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದರೊಂದಿಗೆ ಶ್ರಮದಾನದ ಮೂಲಕ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಆಧುನಿಕ ಗಾಂಧೀಜಿ  ಮುತ್ತಣ್ಣ ತಿರ್ಲಾಪೂರ ಮಾತನಾಡಿ, ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಾಡಿನ ಜನರಿಗೆ ದೇಹದಾನ, ಅಂಗಾAಗದಾನ, ರಕ್ತದಾನ, ನೇತ್ರದಾನ, ಭ್ರೂಣ ಹತ್ಯೆಯ ಬಗ್ಗೆ ಅರಿವು ಮೂಡಿಸಲು ಗದುಗಿನ ಜಿಮ್ಸ್ನಿಂದ ಹುಬ್ಬಳ್ಳಿ–ಧಾರವಾಡದ ಕಿಮ್ಸ್ವರೆಗೆ ಮೂರು ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ. ದೇಹವು ನಮ್ಮ ಆಸ್ತಿ. ಅದನ್ನು ಇನ್ನೊಬ್ಬರಿಗೆ ದಾನ ಮಾಡಿದರೆ ಹಲವಾರ ಜನರ ಪ್ರಾಣ ಉಳಿಸಬಹುದು. ದೇಹವು ಇಟ್ಟರೆ ಕೊಳೆಯುತ್ತದೆ. ಸುಟ್ಟರೆ ಬೂದಿಯಾಗುತ್ತದೆ. ದೇಹ ಮಣ್ಣಾಗುವ ಮೊದಲು ಇನ್ನೊಬ್ಬರಿಗೆ ದಾನ ಮಾಡುವ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಬೇಕು. ಅಂಗಾAಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ ಎಂದು ಮುತ್ತಣ್ಣ ತಿರ್ಲಾಪೂರ ತಿಳಿಸಿದರು.

ಜಿಮ್ಸ್ನ ಹಿರಿ-ಕಿರಿಯ ವೈದ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾದಯಾತ್ರೆಗೆ ಬೆಂಬಲ ಸೂಚಿಸಿ ಆಧುನಿಕ ಗಾಂಧೀಜಿಯವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು. ಇದಕ್ಕೂ ಮುನ್ನು ಜಿಮ್ಸ್ ಆವರಣದಲ್ಲಿ   ಕಸದ ವಾಹನ ಹಾಗೂ ಕಂಟೇನರ್‌ಗಳನ್ನು ಅವರು ಉದ್ಘಾಟಿಸಿದರು.

Curry Leaves Juice: ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ..?

0

ದಕ್ಷಿಣ ಭಾರತದ ಅಡುಗೆಗಳಲ್ಲಿ ಕರಿಬೇವು ಧಾರಾಳವಾಗಿ ಬಳಸುತ್ತಾರೆ. ನಿಜಕ್ಕೂ ಕರಿಬೇವು ಔಷಧೀಯ ಗುಣಗಳಿಂದ ತುಂಬಿರುವ ಗಿಡ. ಹೊಟ್ಟೆ ಸಮಸ್ಯೆಗಳಿಗೆ ರಾಮಬಾಣ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಕರಿಬೇವಿನಲ್ಲಿ ಆ್ಯಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕರಿ ಬೇವಿನ ಚಟ್ನಿ, ಪುಡಿ ಮಾಡಿಕೊಂಡು ತಿನ್ನಬಹುದು. ಇದು ರುಚಿಕರವೂ ಹೌದು. ಪ್ರತಿದಿನ ಬೆಳಿಗ್ಗೆ ಕರಿಬೇವಿನ ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕರಿಬೇವಿನ ಎಲೆಯ ರಸವು ತೂಕ ಇಳಿಸಲು ಸಹಾಯ ಮಾಡುತ್ತದೆ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸವನ್ನು ಕುಡಿದರೆ ನಿಮ್ಮ ಬೊಜ್ಜು ಶೀಘ್ರವಾಗಿ ಕಡಿಮೆಯಾಗುತ್ತದೆ. ದೇಹದಲ್ಲಿ ಸಂಗ್ರಹವಾದ ಕೊಬ್ಬು ನಿಧಾನವಾಗಿ ಕರಗಲು ಪ್ರಾರಂಭಿಸುತ್ತದೆ. ವಿಟಮಿನ್ ಮತ್ತು ಖನಿಜಾಂಶಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ, ಇದು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ

ಕರಿಬೇವಿನ ರಸವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಸೋಂಕನ್ನು ಹೋಗಲಾಡಿಸುತ್ತದೆ. ಕರಿಬೇವಿನ ಎಲೆಗಳಲ್ಲಿರುವ ಕಬ್ಬಿಣ ಮತ್ತು ಫೋಲಿಕ್ ಆಮ್ಲವು ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ.

ನೀವು ರಕ್ತಹೀನತೆಯ ರೋಗಿಗಳಾಗಿದ್ದರೆ, ಕರಿಬೇವಿನ ಎಲೆಗಳ ರಸವನ್ನು ಪ್ರತಿದಿನ ಸೇವಿಸುವುದರಿಂದ ದೇಹವನ್ನು ನಿರ್ವಿಷಗೊಳಿಸಲು ಮತ್ತು ಕೆಟ್ಟ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಇದು ಗ್ಯಾಸ್, ಅಸಿಡಿಟಿ ಮತ್ತು ಮಲಬದ್ಧತೆಯಿಂದಲೂ ಪರಿಹಾರ ನೀಡುತ್ತದೆ. ಕೂದಲಿನ ಬೆಳವಣಿಗೆಗೂ ಕರಿಬೇವಿನ ಎಲೆಗಳು ಪ್ರಯೋಜನಕಾರಿ.

ಕರಿಬೇವಿನ ಸೊಪ್ಪಿನ ಜ್ಯೂಸ್ ಮಾಡುವುದು ಹೇಗೆ?

ಮೊದಲನೆಯದಾಗಿ, ಬಾಣಲೆಯಲ್ಲಿ 2 ಗ್ಲಾಸ್ ನೀರನ್ನು ಕುದಿಸಿ ಮತ್ತು ಅದರಲ್ಲಿ 1 ಬೌಲ್ ತೊಳೆದ ಕರಿಬೇವಿನ ಎಲೆಗಳನ್ನು ಸೇರಿಸಿ. ಈಗ ಅರ್ಧದಷ್ಟು ನೀರು ಉಳಿಯುವವರೆಗೆ ಅದನ್ನು ಕುದಿಸಿ, ನಂತರ ಅದನ್ನು ಜರಡಿ ಮೂಲಕ ಫಿಲ್ಟರ್ ಮಾಡಿ. ಈಗ ಅದರಲ್ಲಿ 1 ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ನಿಂಬೆ ರಸವನ್ನು ಹಿಂಡಿ.
ನೀವು ಬಯಸಿದರೆ, ನೀವು ಕರಿಬೇವಿನ ಎಲೆಗಳನ್ನು ರುಬ್ಬುವ ಮೂಲಕ ರಸವನ್ನು ತೆಗೆಯಬಹುದು. ಇದಕ್ಕಾಗಿ ಹೆಚ್ಚೇನು ಮಾಡಬೇಕಿಲ್ಲ ಕರಿಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಿ. ಈಗ ಅದರ ರಸವನ್ನು ಜರಡಿ ಮೂಲಕ ಶೋಧಿಸಿ ಅದರಲ್ಲಿ ಕಪ್ಪು ಉಪ್ಪು ಮತ್ತು ನಿಂಬೆ ಮಿಶ್ರಣ ಮಾಡಿ ಕುಡಿಯಿರಿ.

 

 

APL, BPL ಕಾರ್ಡ್‌ʼದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಆಹಾರ ಇಲಾಖೆ!

0

ಬೆಂಗಳೂರು: ಬಿಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ಬಂದಿದೆ. ಹೌದು ರೇಷನ್ ಕಾರ್ಡ್‌ಗೆ ದೃಢೀಕರಣ ಮಾಡದೆ ಇರುವುದರಿಂದ  ಬಿಪಿಎಲ್‌, ಎಪಿಎಲ್‌ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ಲಕ್ಷಾಂತರ ಎಪಿಎಲ್ ಕಾರ್ಡ್‌ಗಳು ರದ್ದಾಗಿದ್ದು 60 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಶಿಫ್ಟ್‌ ಮಾಡಲಾಗಿದೆ.

ರೇಷನ್‌ ಅಂಗಡಿಗೆ ತೆರಳಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆಹಾರ ಇಲಾಖೆ ಈಗ ಎಪಿಎಲ್ ಕಾರ್ಡ್​ದಾರರಿಗೂ ಬಿಸಿ ಮುಟ್ಟಿಸಿದೆ.

2019-2022ರ ವರೆಗೆ ರೇಷನ್ ಕಾರ್ಡ್ ಗೆ ಮತ್ತೆ e-KYC ಪ್ರಕ್ರಿಯೆ ಮಾಡಿಸುವಂತೆ ಇಲಾಖೆ ನಿಯಮ ಜಾರಿ ಮಾಡಿತ್ತು. ಈ ಸಂಧರ್ಭದಲ್ಲಿ ಶೇ. 80ರಷ್ಟು APL ಫಲಾನುಭವಿಗಳು e-KYC ಮಾಡಿಕೊಂಡಿದ್ದರು. ಇನ್ನುಳಿದ ಶೇ. 20 ರಷ್ಟು ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ e-KYC ಮಾಡಿಕೊಂಡಿರಲಿಲ್ಲ. ಅಂತವರ ಕಾರ್ಡ್ ಗಳು ರದ್ದಾಗಿವೆ.

 

ಕೋವಿಡ್ ತನಿಖೆಯಿಂದಲೂ ನಿಮಗೆ ಮುಖಭಂಗವೇ ಕಟ್ಟಿಟ್ಟ ಬುತ್ತಿಯಾಗಲಿದೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಕಿಡಿ

0

ಬೆಂಗಳೂರು: ಕೋವಿಡ್ ತನಿಖೆಯಿಂದಲೂ ನಿಮಗೆ ಮುಖಭಂಗವೇ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನೀಡುತ್ತಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ.

ಆದರೆ, ಇದೀಗ ತಮ್ಮ ಕರಾಳತೆಯ ಭ್ರಷ್ಟ ಮುಖವನ್ನು ಮುಚ್ಚಿಕೊಳ್ಳಲು ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಮಧ್ಯಂತರ ವರದಿಯನ್ನು ತರಾತುರಿಯಲ್ಲಿ ತರಿಸಿಕೊಂಡು ಎಸ್​ಐಟಿ ರಚಿಸಲು ಹೊರಟಿದ್ದೀರಿ. ಈ ತನಿಖೆಯಿಂದಲೂ ನಿಮಗೆ ಮುಖಭಂಗವೇ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಹೇಳಿದ್ದಾರೆ.

ಇನ್ನೂ ಕರ್ನಾಟಕದ ಜನತೆ ವಂಚಿಸಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅಧಿಕಾರದಿಂದ ಕೆಳಗಿಳಿದು ಕರ್ನಾಟಕದ ಜನತೆಯ ಕ್ಷಮೆ ಕೋರಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ನಾವು ಸರ್ಕಾರದ ಮೇಲೆ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸಿದ್ದೇವೆ: ಪ್ರಧಾನಿ ಮೋದಿ

0

ನವದೆಹಲಿ: ನಾವು ಸರ್ಕಾರದ ಮೇಲೆ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಂದುಸ್ತಾನ್ ಟೈಮ್ಸ್ ಲೀಡರ್​ಶಿಪ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರಕಾರಗಳು ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸುತ್ತಿದ್ದರೆ, ಈಗಿನ ಸರ್ಕಾರವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ ಎಂದು ಹೇಳಿದ್ದಾರೆ.

ಇಂದು ಭಾರತವು ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ. ನಾವು ಈ ಆಕಾಂಕ್ಷೆಗಳನ್ನು ನಮ್ಮ ನೀತಿಗಳ ಮೂಲಾಧಾರವಾಗಿಸಿದ್ದೇವೆ. ನಮ್ಮ ಸರ್ಕಾರವು ಜನರ, ಜನರಿಂದ ಮತ್ತು ಜನರಿಗಾಗಿ ಪ್ರಗತಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಸ್ವಾತಂತ್ರ್ಯಾ ನಂತರ 70 ವರ್ಷಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ಕಳೆದ 10 ವರ್ಷಗಳಲ್ಲಿ ನೀಡಿದ್ದೇವೆ. ಜನರಿಗಾಗಿ ಹೆಚ್ಚು ಖರ್ಚು ಮಾಡುವುದು, ಜನರಿಗಾಗಿ ಹೆಚ್ಚು ಉಳಿಸುವುದು ನಮ್ಮ ಸರ್ಕಾರದ ವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಶಾಸಕರು‌‌ ಬರ್ತಾರೆ ಅಂದರೂ ನಮಗೆ ಬೇಡ: ಸಿಎಂಗೆ ತಿರುಗೇಟು ಕೊಟ್ಟ ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು: ಆರ್ಥಿಕ ತುರ್ತುಪರಿಸ್ಥಿತಿ ಹೇರಲು ತುದಿಗಾಲಲ್ಲಿ‌ ನಿಂತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ‌ ಬರಲಿದೆ, ಆರ್ಥಿಕ ದಿವಾಳಿಯ ಕಾರಣ, ‌ಆರ್ಥಿಕ ತುರ್ತು ಪರಿಸ್ಥಿತಿ ಹೇರಲು‌ ಮುಂದಾಗಿತ್ತು.

ಆದ್ರೆ‌ ಚುನಾವಣೆ‌ ಬಂದಿದ್ದಕ್ಕೆ ಮಾಡಲಿಲ್ಲ.ಅದನ್ನ ಅವಿತಿಟ್ಟರು. ಈಗ ಮಾಡಲು‌ ಬೆಳಗಾವಿ ಅಧಿವೇಶನ ಎದುರಾಗಿದೆ. ಆರ್ಥಿಕ ತುರ್ತುಪರಿಸ್ಥಿತಿ ಹೇರಲು ತುದಿಗಾಲಲ್ಲಿ‌ ನಿಂತಿದ್ದಾರೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಇನ್ನೂ 50 ಕೋಟಿ‌ ಕೈ ಶಾಸಕರಿಗೆ ಅಮಿಷ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಛಲವಾದಿ ಅವರು, ಸಿಎಂ‌ ಅವರು ಈ ಹೇಳಿಕೆಗೆ ಪುರಾವೆ ಕೊಡಬೇಕು. ದಾರಿಹೋಕರ ರೀತಿ ಮತಾಡಿದ್ದೀರಿ,

ನಿಮ್ಮ ಶಾಸಕರು ದನ‌ಕರುಗಳಾ? ಖರೀದಿ ಮಾಡಲು ಬಂದವರು ಯಾರು? ಎಂದು ಪ್ರಶ್ನಿಸಿದ್ದಾರೆ. ಕೋಟಿ ರೂ ಗೆ ನಿಮ್ಮ ಶಾಸಕರು‌‌ ಬರ್ತಾರೆ ಅಂದರೂ ನಮಗೆ ಬೇಡ. ಚುನಾವಣೆಗೆ ಹೋಗಿ ಸರ್ಕಾರ ಮಾಡ್ತೇವೆ ಹೊರತು, ನಿಮ್ಮ ಶಾಸಕರನ್ನ ಖರೀದಿ ಮಾಡಿ ಸರ್ಕಾರ ಮಾಡಲ್ಲ. ನಿಮ್ಮನ್ನ ಕೆಳಗಿಳಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡೋರು ನಿಮ್ಮಲ್ಲೇ ಇದ್ದಾರೆ. ಚೆಕ್ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಟಕ್ಕರ್‌ ಕೊಟ್ಟಿದ್ದಾರೆ.

ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ: ಬಿ.ಎಸ್ ಯಡಿಯೂರಪ್ಪ ವಿಶ್ವಾಸ

0

ಶಿವಮೊಗ್ಗ: ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಕಾಲದಲ್ಲಿ ನಾವು ಜೀವ ಉಳಿಸುವ ಕೆಲಸ ಮಾಡಿದ್ದೇವೆ.

ಇದನ್ನು ತನಿಖೆ ಮಾಡಲು ದುರುದ್ದೇಶದಿಂದ ಎಸ್‍ಐಟಿ ರಚನೆ ಮಾಡಲಾಗಿದೆ. ಜನರ ಗಮನ ಬೇರೆಡೆ ತಿರುಗಿಸಲು ಹಗರಣ ನಡೆದಿದೆ ಎಂಬ ಮಾತು ಹೇಳ್ತಿದ್ದಾರೆ. ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೂ ವಕ್ಫ್ ಬೋರ್ಡ್ ವಿರುದ್ಧ ಕಮಿಟಿ ರಚನೆ ವಿಚಾರವಾಗಿ, ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ವಿರುದ್ಧ ಬಿಜೆಪಿ ಕಮಿಟಿ ರಚನೆ ಮಾಡಿದ್ದೇವೆ. ಈ ಕಮಿಟಿ ರಾಜ್ಯದಲ್ಲಿ ಪ್ರವಾಸ ಮಾಡಿ ಬಳಿಕ ವರದಿ ಕೊಡಲಿದೆ. ವರದಿಯನ್ನು ಪಡೆದ ನಂತರ ಮುಂದಿನ ಹೋರಾಟ ನಿರ್ಧಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಹೊಲಿಗೆ ಕಲಿಕೆ ತರಬೇತಿಗೆ ಅಷ್ಟೇ ಸೀಮಿತ ಮಾಡಿಕೊಳ್ಳದೆ ಅದನ್ನು ವೃತ್ತಿಯಾಗಿ ಸ್ವೀಕರಿಸಬೇಕು: ಜಿಲ್ಲಾ ನಿರ್ದೇಶಕ ಯೋಗೀಶ್

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹೊಲಿಗೆ ಕಲಿಕೆ ತರಬೇತಿಗೆ ಅಷ್ಟೇ ಸೀಮಿತ ಮಾಡಿಕೊಳ್ಳದೆ ಅದನ್ನು ವೃತ್ತಿಯಾಗಿ ಸ್ವೀಕರಿಸಬೇಕು ಎಂದು ಎಸ್.ಕೆ.ಡಿ.ಆರ್.ಡಿ.ಪಿ ಗದಗ ಜಿಲ್ಲಾ ನಿರ್ದೇಶಕ ಯೋಗೀಶ್ ಎ ಹೇಳಿದರು.

ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳು ಉಚಿತವಾಗಿ ನಡೆದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹೊಲಿಗೆ ವೃತ್ತಿಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವವರಿಗೆ ಯಾವತ್ತಿಗೂ ವೃತ್ತಿ ಕೈಹಿಡಿಯುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಬೇರೆ ಬೇರೆ ಸ್ವ-ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತಿದೆ. ಇವತ್ತು ಲಕ್ಷಾಂತರ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಸಹಭಾಗಿತ್ವದಲ್ಲಿ ರುಡ್ ಸೆಟ್ ಹಾಗೂ ಆರ್ ಸೆಟ್ ಎನ್ನುವ ತರಬೇತಿ ಸಂಸ್ಥೆಗಳಿದ್ದು, ಪ್ರತಿ ತಿಂಗಳು ಇಲ್ಲಿ ಉಚಿತ ಊಟ-ವಸತಿಯೊಂದಿಗೆ ತರಬೇತಿಯನ್ನು ಕೊಟ್ಟು ಸದಸ್ಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ.

ಈಗಾಗಲೇ ಹಲವಾರು ಮಹಿಳೆಯರು ಬೇರೆ ಬೇರೆ ಊರುಗಳ ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗ ನಡೆಸುತ್ತಿದ್ದಾರೆ. ಕಳೆದ ೧5 ವರ್ಷಗಳಿಂದ ಯಶಸ್ವಿಯಾಗಿ ಯೋಜನೆ ತಾಲೂಕಿನಲ್ಲಿ ಕಾರ್ಯಗತಗೊಂಡಿದೆ. ಹಣಕಾಸು ವಹಿವಾಟಿನ ಜೊತೆಗೆ ಸಮಾಜಮುಖಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ಮುನ್ನಡೆಯತ್ತಾ ಬಂದಿದೆ ಎಂದರು.

ಅತಿಥಿಯಾಗಿದ್ದ ರೋಣ ತಾಲೂಕಿನ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಮಹಿಳೆಯರು ಹೆಚ್ಚು ಉಳಿತಾಯ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಯೋಜನೆ ವತಿಯಿಂದ ಅಗರಬತ್ತಿ ತಯಾರಿಕೆ ತರಬೇತಿ ನೀಡಲಾಗುತ್ತಿದೆ. ಅದರ ತರಬೇತಿಯನ್ನು ತಾವು ಪಡೆದುಕೊಂಡು ಮನೆಯಲ್ಲಿ ಉತ್ತಮ ಗುಣಮಟ್ಟದ ಅಗರಬತ್ತಿ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಆದಾಯವನ್ನು ಪಡೆಯಬಹುದೆಂದು ವಿವರಿಸಿದರಲ್ಲದೆ, ಮಹಿಳೆಯರು ಸ್ವ-ಸಹಾಯ ಸಂಘದ ಸಾಮಾನ್ಯ ನಿಯಮ ಮತ್ತು ಪರಿಕಲ್ಪನೆಯನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ಇನ್ನೋರ್ವ ಅತಿಥಿ ವಿಎಸ್‌ಎಸ್ ಬ್ಯಾಂಕಿನ ಅಧ್ಯಕ್ಷ ಶಿವಾನಾಗಪ್ಪ ದೊಡ್ಡಮೇಟಿ ಮಾತನಾಡಿ, ಧರ್ಮಸ್ಥಳ ಸಂಘದ ಪ್ರತಿಯೊಂದು ಕಾರ್ಯಕ್ರಮಗಳೂ ಉಪಯುಕ್ತವಾಗಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಿದ ೨೫ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಟೈಲರಿಂಗ್ ತರಬೇತಿ ನೀಡಿದ ಶಿಕ್ಷಕಿ ಈರಮ್ಮ ಕಡಗದ ಶುಭ ಹಾರೈಸಿದರು. ಹೊಲಿಗೆ ತರಬೇತಿ ಪಡೆದುಕೊಂಡ ಗುರುಬಸವ್ವ ಗೆದಗೇರಿ, ಸುಮಾ ಶ್ಯಾಶೆಟ್ಟಿ, ಜ್ಯೋತಿ ಸೋಮನಕಟ್ಟಿ, ಶಶಿಕಲಾ ಕರೇಕುಲದ ಅನಿಸಿಕೆ ಹಂಚಿಕೊಂಡರು.

ಗಣ್ಯ ವ್ಯಾಪಾರಸ್ಥ ಮುತ್ತಣ್ಣ ಅಕ್ಕಿಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ವೀರಪ್ಪ ವಾಲಿ, ಬಸವರಾಜ ಶ್ಯಾಶೆಟ್ಟಿ, ಸುವರ್ಣ ತಳವಾರ, ಪತ್ರಕರ್ತ ಸಂಗಮೇಶ ಮೆಣಸಗಿ, ಮುನಿಯಪ್ಪ ಪಲ್ಲೇದ, ಚನ್ನಪ್ಪ ಮಡಿವಾಳರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಮಠಪತಿ, ವಲಯ ಮೇಲ್ವಿಚಾರಕ ರಾಘವೇಂದ್ರ ಗುಡಿ, ವಿಎಲ್‌ಇ ಪೂಜಾ ಲಿಗಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಜನಾ ಅಜರತನವರ ಪ್ರಾರ್ಥಿಸಿದರು. ಸುಮಂಗಲಾ ಶ್ಯಾಶೆಟ್ಟಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ದೇವಕ್ಕ ಪಲ್ಲೇದ ನಿರೂಪಿಸಿದರು.

ಒಳಮೀಸಲಾತಿ ಜಾರಿ ವಿರೋಧಿ ಹೋರಾಟದ ಕುರಿತು ವಿವಿಧ ಸಮುದಾಯಗಳ ಮುಖಂಡರ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಒಳಮೀಸಲಾತಿ ಜಾರಿ ವಿರೋಧಿಸಿ ಹೋರಾಟದ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಭೆ ಜರುಗಿತು.

ಸರ್ಕಾರದ ಇಬ್ಬಗೆಯ ನೀತಿಯ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಆಯಾ ಜಿಲ್ಲೆಗಳಲ್ಲಿ ಸಚಿವರ, ಶಾಸಕರ ಮತ್ತು ಜನಪ್ರತಿನಿದಿಗಳ ಮನೆಗಳಿಗೆ ಹೋಗಿ ಧರಣಿ ಮತ್ತು ಮುತ್ತಿಗೆ ಹಾಕಲಾಗುವುದು. ರಾಜ್ಯದ ಕಾನೂನು ಸಚಿವರಾದ ಎಚ್.ಕೆ. ಪಾಟೀಲರು ನಮಗೆ ನ್ಯಾಯ ದೊರಕಿಸಿಕೊಡುವ ಭರವಸೆಯಿದ್ದು, ಅವರಿಗೆ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ಹುಲಕೋಟಿ ಚಲೋ ಹಮ್ಮಿಕೊಳ್ಳಲಾಗಿದೆ. ಈ ಹೋರಾಟವು ಒಳಮೀಸಲಾತಿ ವಿರೋಧಿ ಸಮುದಾಯದ ಸ್ವಾಮೀಜಿಗಳು, ಮುಖಂಡರು ಮತ್ತು ಜನಪ್ರತಿನಿದಿಗಳ ನೇತೃತ್ವದಲ್ಲಿ ನಡೆಯಲಿದ್ದು, ಈ ಹೋರಾಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಾಧಿತ ಸಮುದಾಯಗಳು ಜನರು ಭಾಗವಹಿಸಿಲಿದ್ದಾರೆ ಎಂದು ಸಮಾಜದ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರಾದ ರವಿಕಾಂತ ಅಂಗಡಿ, ಕೆ.ಸಿ. ನಭಾಪುರ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ಸುಭಾಷ ಗುಡಿಮನಿ, ನೀಲೂ ರಾಠೋಡ, ಚಂದ್ರಾ ನಾಯಕ, ಈಶಪ್ಪ ರಾಠೋಡ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಧನುರಾಮ ತಂಬೂರಿ, ಜಾನು ಲಮಾಣಿ, ಈರಣ್ಣ ಲಮಾಣಿ, ತಾವರೆಪ್ಪ ಲಮಾಣಿ, ಕುಬೇರಪ್ಪ ರಾಠೋಡ, ಪರಶುರಾಮ ರಾಠೋಡ, ಕುಬೇರಪ್ಪ ಪವಾರ, ನುರಪ್ಪ ನಾಯಕ, ರಾಮಪ್ಪ ನಾಯಕ, ಲಕ್ಷö್ಮಣ ಲಮಾಣಿ, ಈರಣ್ಣ ಪಾಂಡು ಚವ್ಹಾಣ, ಪರಮೇಶ ನಾಯಕ, ಚಂದ್ರಕಾAತ ಚವ್ಹಾಣ, ಪ್ರಕಾಶ ಅಂಗಡಿ, ಶಿವು ಚವ್ಹಾಣ, ಪರಮೇಶ ಲಮಾಣಿ, ಸಂತೋಷ ಲಮಾಣಿ, ಟಿ.ಡಿ. ಪೂಜಾರ, ಗೋಪಾಲ ಪೂಜಾರ, ಕುಮಾರ ಕಟ್ಟಿಮನಿ, ದೇವೇಂದ್ರ ತೋಟದ, ಅನಿಲ ಕಾರಭಾರಿ, ಚೆನ್ನಪ್ಪ ಲಮಾಣಿ, ಲೋಕೇಶ ಕಟ್ಟಿಮನಿ, ರಮೇಶ ಲಮಾಣಿ, ಲೋಕೇಶ ಕಟ್ಟಿಮನಿ, ರಾಜಕುಮಾರ ಕಟ್ಟಿಮನಿ, ಸುರೇಶ ಗುಡಿಮನಿ,ಮಾರುತಿ ಲಮಾಣಿ, ಶೇಖರ ಲಮಾಣಿ, ಅಶೋಕ ಚವ್ಹಾಣ, ತುಕಾರಾಮ ಪೂಜಾರ, ಕೇಶಪ್ಪ ರಾಠೋಡ, ನಾಗೇಶ ತೋಟದ, ಸುನಿಲ್ ಆರ್ಕಸಾಲಿ, ಈಶ್ವರ ಪೂಜಾರ, ಕೃಷ್ಣಪ್ಪ ಲಮಾಣಿ, ಕೃಷ್ಣಪ್ಪ ಧರ್ಮಪ್ಪ ಲಮಾಣಿ, ಪಾಂಡಪ್ಪ ಭೀಮಪ್ಪ ಲಮಾಣಿ, ಮಂಜುನಾಥ್ ಚವ್ಹಾಣ, ರಮೇಶ ಲಮಾಣಿ, ರಮೇಶ ನಾಯಕ, ಗಣೇಶ ಕಟ್ಟಿಮನಿ, ಗಣೇಶ ಚವಾಣ, ರತ್ನಪ್ಪ ಪೂಜಾರ, ರಾಜು ಪವಾರ, ನಾರಾಯಣ ಪೂಜಾರ, ಟಿ.ಎಸ್. ರಾಠೋಡ. ಸೇರಿದಂತೆ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

error: Content is protected !!