Home Blog Page 3

ವಿಶ್ವ ಸಾಹಿತ್ಯಕ್ಕೆ ವಚನಗಳ ಕೊಡುಗೆ ಅಪಾರ : ಗಂಗಾಂಬಿಕೆ ಅಕ್ಕನವರು

0

ವಿಜಯಸಾಕ್ಷಿ ಸುದ್ದಿ, ಗದಗ : ಬಸವಾದಿ ಶರಣರ ವಚನಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ವಿಶ್ವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ವಚನ ಸಾಹಿತ್ಯದ ನಾಯಕ ಬಸವಣ್ಣನವರು ಭಾರತದ ಸಾಂಸ್ಕೃತಿಕ ನಾಯಕರಾಗುವ ಕಾಲ ಬಹಳ ದೂರವಿಲ್ಲ. ಅಲ್ಲದೇ ವಿಶ್ವಕ್ಕೆ ಪ್ರಜಾಪ್ರಭುತ್ವವನ್ನು ಮೊಟ್ಟಮೊದಲು ಕೊಟ್ಟ ಕೀರ್ತಿ ಬಸವಣ್ಣನವರದ್ದು. ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಸಮಾನತೆಗಾಗಿ, ರಾಜಕೀಯವಾಗಿ, ನ್ಯಾಯಯುತವಾಗಿ, ಹೀಗೆ ಹತ್ತು ಹಲವಾರು ಕ್ರಾಂತಿಗಳನ್ನು ಮಾಡಿದವರು ಬಸವಣ್ಣ ಎಂದು ಶರಣೆ ಗಂಗಾಂಬಿಕೆ ಅಕ್ಕನವರು ಅಭಿಪ್ರಾಯಪಟ್ಟರು.

ಅವರು ಗದುಗಿನ ಶಿವಾನಂದ ನಗರದ ಬಸವ ಸಮುದಾಯಭವನದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಬಸವದಳದ 1593ನೇ ಶರಣ ಸಂಗಮದಲ್ಲಿ `ಶರಣರು ಕಂಡ ಬಸವಣ್ಣ’ ವಿಷಯದ ಕುರಿತು ಮಾತನಾಡುತ್ತಿದ್ದರು.

ಅತಿಥಿಗಳಾಗಿ ಆಗಮಿಸಿದ ಭದ್ರಾವತಿಯ ಶರಣ ಎಚ್.ಎಸ್. ಬಸವರಾಜಪ್ಪ, ಅಧ್ಯಕ್ಷತೆ ವಹಿಸಿದ್ದ ಶರಣ ವಿ.ಕೆ. ಕರೇಗೌಡ್ರ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರು ವೇದಿಕೆಯ ಮೇಲಿದ್ದರು.

ಶರಣೆ ಮಂಜುಳಾ ಹಾಸಿಲಕರ ವಚನ ಪ್ರಾರ್ಥನೆ ಹಾಡಿದರು. ಶರಣ ಕೆ.ಎಸ್. ಬಾಳಿಕಾಯಿ ಸ್ವಾಗತಿಸಿದರು.

ಪ್ರಾಸ್ತಾವಿಕವಾಗಿ ಪ್ರಕಾಶ ಅಸುಂಡಿಯವರು ಮಾತನಾಡಿದರು. ಗೌರಕ್ಕ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿದರೆ, ಶರಣು ಸಮರ್ಪಣೆಯನ್ನು ಮಂಗಳಕ್ಕ ಕಾಮಣ್ಣವರ ನೆರವೇರಿಸಿದರು.

ಸಮಾರಂಭದಲ್ಲಿ ಶರಣರಾದ ಎಸ್.ಎನ್. ಹಕಾರಿ, ಎನ್.ಎಚ್. ಹಿರೇಸಕ್ಕರಗೌಡ್ರ, ಬಿ.ವಿ. ಕಾಮಣ್ಣವರ, ಎನ್.ಎಸ್. ಬಡಿಗಣ್ಣವರ, ಎಸ್.ಎ. ಮುಗದ, ಎಂ.ಬಿ. ಲಿಂಗಧಾಳ, ಮೃತ್ಯುಂಜಯ ಜಿನಗಾ, ಮಂಜುನಾಥ ಅಸುಂಡಿ, ಶರಣು ಅಂಗಡಿ, ಮಲ್ಲಣ್ಣ ಜಿನಗಾ, ಸೋಮು ಪುರಾಣಿಕ, ಅನಿಲ ಬುರ್ಲಿ, ಮಹಾಂತೇಶ ಅಂಗಡಿ, ಹಳ್ಳಿಕೇರಿ, ಬಂಡಿ, ಶರಣೆಯರಾದ ಗಿರಿಜಕ್ಕ ಧರ್ಮರಡ್ಡಿ, ಪಾರ್ವತೆಮ್ಮ ಬುರ್ಲಿ, ಜಯಶ್ರೀ ಹಳ್ಳಿಕೇರಿ, ಶಕುಂತಲಾ ಗುಡಗೇರಿ, ಬಸವಶ್ರೀ, ಶಿಲ್ಪಾ ಬುರ್ಲಿ, ಲೀಲಾವತಿ ಬಳ್ಳೊಳ್ಳಿ, ನಾಗರತ್ನ ಅಸುಂಡಿ, ಲಕ್ಷ್ಮೀ ಅಂಗಡಿ, ರೇಣುಕಾ ಹಾಸಿಲಕರ, ಗಿರಿಜಾ ಹಿರೇಮಠ, ರೂಪಾ ಕಾಮಣ್ಣವರ, ಗಂಗಮ್ಮ ಹೂಗಾರ ಮುಂತಾದವರು ಭಾಗವಹಿಸಿದ್ದರು.

ದಿವ್ಯ ಚೇತನ ಶಾಲೆಗೆ ಉತ್ತಮ ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸಮೀಪದ ನೀಲಗುಂದ ಗ್ರಾಮದ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆಯು 2023/24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದೆ.

SSLC ExamSSLC ExamSSLC ExamSSLC Exam

ರವಿ ಎಂ.ಮರಿಲಿಂಗಪ್ಪನವರ ಶೇ 96.84, ವಿನಾಯಕ ಆರ್.ಕಂಬಳಿ ಶೇ 95.84, ಪ್ರತಿಭಾ ಆರ್.ಕುರ್ತಕೋಟಿ ಶೇ 93.6, ಸಂಜನಾ ವಿ.ಪೂಜಾರ ಶೇ 92.8, ಕೆ.ಎಸ್. ಪ್ರತಾಪರೆಡ್ಡಿ ಶೇ 92.64 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಅಭಿನಂದಿಸಿದ್ದಾರೆ.

ಯೋಗ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆ ಫಲಿತಾಂಶ

0

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರ ಸಂಯೋಜನೆಯಲ್ಲಿ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ನಡೆಸಿದ 2022-2023ನೇ ಸಾಲಿನ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಸ್ (CYS) ಕೋರ್ಸ್ನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬಸವ ಯೋಗ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 30 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ವಿಶೇಷ ಉನ್ನತ ಶ್ರೇಣಿ (First Class with Distinctions)ಯಲ್ಲಿ ಉತ್ತೀರ್ಣರಾಗಿದ್ದಾರೆ.

Gadag, gadaganews, latestnews, updatenews, Gadag, gadaganews, latestnews, updatenews,

ಇವರಲ್ಲಿ ಶ್ರೀಕೃಷ್ಣ ಆವಟಿ, ಭೀಮಾಂಬಿಕಾ ಪಾಟೀಲ, ಪವಿತ್ರಾ ಎಂ.ಡಿ. ಇವರು ಹೆಚ್ಚಿನ ಅಂಕ ಗಳಿಸಿ ಕೇಂದ್ರಕ್ಕೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

ಯೋಗ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದ ಮತ್ತು ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಬಸವ ಯೋಗ ಕೇಂದ್ರದ ಅಧ್ಯಕ್ಷರಾದ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಚೇರಮನ್ ಪ್ರೊ. ಎಸ್.ವಿ. ಸಂಕನೂರ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಆಯ್.ಬಿ. ಕೊಟ್ಟೂರಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ರೋಣದಲ್ಲಿ ಜೆಟಿಟಿಸಿ ತರಬೇತಿ ಆರಂಭ

ವಿಜಯಸಾಕ್ಷಿ ಸುದ್ದಿ, ರೋಣ : ರಾಜ್ಯ ಸರಕಾರ ತನ್ನ ಮೊದಲ ಬಜೆಟ್‌ನಲ್ಲಿ ರೋಣ ನಗರಕ್ಕೆ 50 ಕೋಟಿ ರೂ ವೆಚ್ಚದ ಜೆಟಿಟಿಸಿ ತರಬೇತಿ ಕೇಂದ್ರವನ್ನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರಂಭವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗುರುವಾರ ರೋಣ ನಗರಕ್ಕೆ ಜೆಟಿಟಿಸಿ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳ ವಿಕ್ಷಣೆಗೆ ಆಗಮಿಸಿದ ಸಂಧರ್ಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರೋಣ ನಗರ ಸೇರಿದಂತೆ ತಾಲೂಕಿನಲ್ಲಿ ತರಬೇತಿ ಶಿಕ್ಷಣ ಕೇಂದ್ರಗಳ ಆವಶ್ಯಕತೆಯಿದೆ ಎಂಬುದನ್ನು ಮನಗಂಡು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದೆ. ಸರಕಾರ ನನ್ನ ಮನವಿಗೆ ಸ್ಪಂದಿಸಿ ತಾಲೂಕಿಗೆ ಜೆಟಿಟಿಸಿ ಮಹಾವಿದ್ಯಾಲಯವನ್ನು ಮಂಜೂರು ಮಾಡಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿಯಾಗಿ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮಹಾವಿದ್ಯಾಲಯದ ಹಿರಿಯ ಅಧಿಕಾರಿ ಲಕ್ಷ್ಮಿಕಾಂತ ಮಾತನಾಡಿ, ಜೆಟಿಟಿಸಿ ಕೇಂದ್ರದಲ್ಲಿ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿಯೂ ಮಾನ್ಯತೆ ಇರಲಿದೆ. ಅಲ್ಲದೆ, ಸರಕಾರದ ಸಂಸ್ಥೆಯಾಗಿರುವುದರಿಂದ ಮಹಾವಿದ್ಯಾಲಯದೊಂದಿಗೆ 365 ಪ್ರತಿಷ್ಠಿತ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ದೂರಾಗಲಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ 35 ಜೆಟಿಟಿಸಿ ಕೇಂದ್ರ ವಿದ್ಯಾರ್ಥಿಗಳಿಗೆ ಅನೇಕ ಮಹತ್ತರ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದ್ದು, ಶಾಸಕರ ಇಚ್ಛೆಯಂತೆ ರೋಣ ನಗರದಲ್ಲಿ ತನ್ನ ಕೇಂದ್ರವನ್ನು ಈ ಸಾಲಿನಿಂದ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಸಿಗುವ ಶೈಕ್ಷಣಿಕ ಚಟುವಟಿಕೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದ ಅವರು, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಬದಾಮಿ ರಸ್ತೆಯ ಗಿರಡ್ಡಿ ಮಹಾವಿದ್ಯಾಲಯದಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ಐ.ಎಸ್. ಪಾಟೀಲ, ಅರವಿಂದ್, ಕೆ.ವಿ. ನಾರಾಯಣ್, ಮಾರುತಿ ಭಜಂತ್ರಿ, ಬಸವರಾಜ ನವಲಗುಂದ ಉಪಸ್ಥಿತರಿದ್ದರು.

 

ಜೆಟಿಟಿಸಿಯಲ್ಲಿ ಸದ್ಯ ನಾಲ್ಕು ಕೋರ್ಸ್ಗಳನ್ನು ಆರಂಭಿಸಲಾಗುತ್ತಿದ್ದು, 260 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಇನ್ನು ನಾಲ್ಕು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿದ ತಕ್ಷಣ ಒಡಂಬಡಿಕೆ ಮಾಡಿಕೊಂಡ ಕಂಪನಿಗಳಲ್ಲಿ 15ರಿಂದ 20 ಸಾವಿರ ಭತ್ಯೆ ಪಡೆದು ಮತ್ತಷ್ಟು ತರಬೇತಿ ಪಡೆಯುವ ಅವಕಾಶವಿದೆ. ಜೊತೆಗೆ ವಿದೇಶದಲ್ಲಿಯೂ ಕಾರ್ಯನಿರ್ವಹಿಸಲು ಜೆಟಿಟಿಸಿ ಸಹಕರಿಸಲಿದೆ.
– ಲಕ್ಷ್ಮಿಕಾಂತ.
ಜೆಟಿಟಿಸಿ ಹಿರಿಯ ಅಧಿಕಾರಿ.

ಶ್ರವಣ ನ್ಯೂನತೆಯುಳ್ಳ ಮಕ್ಕಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90ರಷ್ಟು ಫಲಿತಾಂಶ ನೀಡಿ, ಅತ್ತುತ್ತಮ ಸಾಧನೆಗೈಯುವ ಮೂಲಕ ಸಂಸ್ಥೆಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 10 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಫಲಿತಾಂಶ ಶೇ90ರಷ್ಟು ಆಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಬಸಪ್ಪ ಸಂಗಳದ ಪ್ರಕಟಣೆಗೆ ತಿಳಿಸಿದ್ದಾರೆ.

ನಿರ್ಮಲಾ ಬಸವರಾಜ ಸೋಮಗೊಂಡ ಶೇ. 65.64 ಅಂಕಗಳೊಂದಿಗೆ ಪ್ರಥಮ ಸ್ಥಾನ, ಮಕ್ತುಮಸಾಬ ಹಳೆಮಸೂತಿ ಶೇ. 64.94 ಅಂಕದೊಂದಿಗೆ ದ್ವಿತೀಯ ಸ್ಥಾನ, ಕುಬೇರ ಮಾಳೊತ್ತರ ಶೇ. 63.05 ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಹಾಲಕೆರೆಯ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಶಾಲೆಯ ಚೇರಮನ್ ಶರಣಪ್ಪ ಕೆ. ರೇವಡಿಯವರ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಲಯನ್ಸ್ ಕ್ಲಬ್‌ನಿಂದ ನೇತ್ರದಾನದ ಜಾಗೃತಿ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಲಕ್ಷ್ಮಣಸಾ ನಗರದ ನಿವಾಸಿ ಶ್ರೀಮತಿ ಕಸ್ತೂರಿಬಾಯಿ ಪುಂಡಲೀಕಸಾ ಬದಿ(79) ಗುರುವಾರ ನಿಧನರಾದರು. ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನವರು ಮೃತರ ನೇತ್ರಗಳನ್ನು ದಾನ ಮಾಡುವಂತೆ ಪ್ರೇರಣೆ ನೀಡಿದಾಗ, ಕುಟುಂಬದವರು ಸಹಕಾರ ನೀಡುವ ಮೂಲಕ ನೇತ್ರದಾನಕ್ಕೆ ಮುಂದಾದರು. ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ಸಿಬ್ಬಂದಿಗಳು ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು.

ಲಯನ್ಸ್ ಕ್ಲಬ್ ಸಾರ್ವಜನಿಕರಲ್ಲಿ ನೇತ್ರದಾನದ ಜಾಗೃತಿ ಮೂಡಿಸುತ್ತಿರುವ ಪರಿಣಾಮವಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದು ಈ ವರ್ಷದ 17ನೇ ನೇತ್ರದಾನವಾಗಿದೆ. ಮರಣದ ನಂತರ ಮೃತ ವ್ಯಕ್ತಿಯ ಕಣ್ಣುಗಳನ್ನು ಮಣ್ಣು ಮಾಡದೇ, ಬೆಂಕಿಯಲ್ಲಿ ಸುಡದೇ ದಾನ ಮಾಡಿದರೆ ಕಣ್ಣಿಲ್ಲದವರಿಗೆ ಈ ಕಣ್ಣುಗಳನ್ನು ಕಸಿ ಮಾಡಿಸಿಕೊಂಡ ಅಂಧರ ಬಾಳಿಗೆ ಬೆಳಕು ಮೂಡಬಲ್ಲದು. ಆದ್ದರಿಂದ ಮೃತರ ಕುಟುಂಬದವರು ನೇತ್ರದಾನಕ್ಕೆ ಮುಂದಾಗಬೇಕೆಂದು ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬದಿ ಕುಟುಂಬಸ್ಥರು, ಪದ್ಮಾನಂದ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ : ಆರ್.ಎಸ್. ಬುರಡಿ

ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬಲ್ಲರು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ ಪಾಲಕರ ಮನವೊಲಿಸಿ, ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಗೆ ಹಾಜಾರಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅವರು ಗದುಗಿನ ರಾಜೀವ ಗಾಂಧಿ ನಗರದ ಎಲ್ಲ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ಮಾಡಿ ಪಾಲಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
2024ರ ಎಸ್‌ಎಸ್‌ಎಲ್‌ಸಿ-1ರಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೊಧನೆ ತರಗತಿಗಳು ಎಲ್ಲ ಪ್ರೌಢಶಾಲೆಗಳಲ್ಲಿ ಪ್ರಾರಂಭಗೊಂಡಿದ್ದು, ಮಕ್ಕಳು ವರ್ಗಗಳಿಗೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಸದರಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ. ಬಾಗೇವಾಡಿ ಮಾತನಾಡಿ, ವಿಷಯ ಶಿಕ್ಷಕರಿಂದ ವಿಷಯವಾರು ಬೋಧನೆ ನಡೆಯುತ್ತಿದ್ದು, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳನ್ನು ಕೂಡಿಸಿಕೊಂಡು ಮನೆ-ಮನೆಗೆ ಭೇಟಿ ನೀಡಿ ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿರುವುದಕ್ಕೆ ಪಾಲಕರು ಹರ್ಷ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಶಿಕ್ಷಕರಾದ ವಾಯ್.ಎಸ್. ಬೊಮ್ಮನಾಳ, ಪಿ.ಎಸ್. ಕರೆಕುಲದ, ಎಂ.ಎಸ್. ಕುಚಬಾಳ, ಪಿ.ಎಚ್. ಕೊರವರ, ಎಂ.ವ್ಹಿ. ಕುಲಕರ್ಣಿ, ಎಂ.ಬಿ. ಹರ್ತಿ, ಎಂ.ಕೆ. ಬೇವಿನಕಟ್ಟಿ, ಬಸವರಾಜ ವೀರಾಪೂರ ಸೇರಿದಂತೆ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭಗೀರಥರ ಜೀವನಕಥೆ ಸ್ಪೂರ್ತಿದಾಯಕ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಗರ ಮಹಾಚಕ್ರವರ್ತಿ, ದಿಲೀಪ ಮಹಾಚಕ್ರವರ್ತಿ, ಸತ್ಯಹರಿಶ್ಚಂದ್ರ, ಶ್ರೀರಾಮಚಂದ್ರ ಹೀಗೆ ಬಹಳಷ್ಟು ದೈವಾಂಶ ಸಂಭೂತರು, ಮಹಾತ್ಮರು ಸಿಗುತ್ತಾರೆ. ಅವರಲ್ಲಿ ಭಗೀರಥ ಮಹರ್ಷಿಯ ಜೀವನಕಥೆ ಸ್ಪೂರ್ತಿದಾಯಕ ಎಂದು ಕಂದಾಯ ನಿರೀಕ್ಷಕ ಎಚ್.ಎಂ. ಸೀತಿಮನಿ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಭಗೀರಥ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಇಕ್ಷ್ವಾಕು ವಂಶದ ಪರಂಪರೆ ಅಂದರೆ ಸೂರ್ಯವಂಶದ ಕ್ಷತ್ರಿಯರು. ಈ ಭರತಖಂಡವನ್ನು ಆಳಿದವರಲ್ಲಿ ಅನೇಕ ಖ್ಯಾತನಾಮರಿದ್ದಾರೆ. ಲೋಕ ಕಲ್ಯಾಣಕ್ಕೆ ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಸ್.ಕೆ. ದೊಡ್ಡಣ್ಣವರ, ರಮೇಶ ಹಲಗಿ, ಅಡಿವೆಪ್ಪ ಮೇಣಸಗಿ, ವಿ.ಐ. ಮಡಿವಾಳರ, ಉದಯ ಮುದೇನಗುಡಿ, ಮಹಾದೇವ ಮ್ಯಾಗೇರಿ, ಎನ್.ಬಿ. ಬೇಲೇರಿ, ಕಾವ್ಯಾ ಅರವಟಗಿಮಠ, ಪಿ.ಜಿ. ರಾಂಪೂರ, ನೀಲಪ್ಪ ಚಳ್ಳಮರದ, ಫಕ್ಕೀರೇಶ ತಮ್ಮಣ್ಣವರ, ನಿಂಗಪ್ಪ ಮಡಿವಾಳರ, ಸಿ.ವಿ. ಹೊನವಾಡ, ಜೆ.ಡಿ. ಬಂಕಾಪೂರ ಸೇರಿದಂತೆ ಇತರರು ಇದ್ದರು.

`ದಶರಥ ನಂದನ ಶ್ರೀರಾಮ’ ನಾಟಕ ಪ್ರದರ್ಶನ ನಾಳೆ

0

ವಿಜಯಸಾಕ್ಷಿ ಸುದ್ದಿ, ಗದಗ : ಹಿರಿಯ ರಂಗಕರ್ಮಿ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರ ಭಕ್ತಿರಸ ಉಕ್ಕಿಸುವ ಸಂಭಾಷಣೆ,ಗಟ್ಟಿ ನಿದರ್ಶನ ಮತ್ತು ಇಂಪಾದ ಹಾಡುಗಳೊಂದಿಗೆ ಪ್ರಯೋಗಗೊಂಡು ಜನಮನ ಸೂರೆಗೊಂಡ ಗದಗ ಕಲಾವಿದರ `ದಶರಥ ನಂದನ ಶ್ರೀರಾಮ’ ನಾಟಕ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಶ್ರೀ ಶಂಕರಾಚಾರ್ಯ ಸೇವಾ ಸಮೀತಿಯವರ ಆಶ್ರಯದಲ್ಲಿ ಪ್ರಯೋಗಗೊಳ್ಳಲಿದೆ.

ಆದಿಗುರು ಶಂಕರಾಚಾರ್ಯರ ಉತ್ಸವದ ಅಂಗವಾಗಿ ಮೇ 18ರ ಸಂಜೆ 6 ಗಂಟೆಗೆ ಪ್ರಯೋಗಗೊಳ್ಳುವ ಈ ನಾಟಕ(ಸಂಗೀತ ರೂಪಕ)ದಲ್ಲಿ ರಂಗಕಲಾವಿದರಾದ ಮೌನೇಶ್ ಸಿ. ಬಡಿಗೇರ್(ನರೇಗಲ್ಲ)-ಶ್ರೀರಾಮನಾಗಿ, ಲಕ್ಷ್ಮಣ-ಉಜ್ವಲ್ ಕಬಾಡಿ, ಭರತ-ಶ್ವೇತಾ ಸುರೇಬಾನ, ಸೀತೆ- ಕೀರ್ತಿ ಗುಮಾಸ್ತೆ, ದಶರಥ-ಅಂದಾನಪ್ಪ ವಿಭೂತಿ, ವಿಶ್ವಾಮಿತ್ರ-ಮುರಲೀಧರ ಸಂಕನೂರ, ಕೈಕೇಯಿ- ಅನ್ವಿತಾ ಹುಯಿಲಗೋಳ, ಮಂಥರೆ-ರಕ್ಷಿತಾ ಕುಲಕರ್ಣಿ, ಅಹಲ್ಯೆ-ರಂಜಿತಾ ಕುಲಕರ್ಣಿ, ಶೂರ್ಪನಖಿ- ಅನಘಾ ಕುಲಕರ್ಣಿ, ರಾವಣ-ವಿಶ್ವನಾಥ್ ಬೇಂದ್ರೆ, ಶಬರಿ-ಸುರಭಿ ಮಹಾಶಬ್ದಿ, ವೇದವತಿ-ರಂಜಿತಾ ಕುಲಕರ್ಣಿ, ಅಗ್ನಿದೇವ-ಶ್ವೇತಾ ಸುರೇಬಾನ, ವಿಭೀಷಣ-ಅಮರೇಶ ರಾಮ್ ಪುರ, ಮಾರೀಚ-ಅನನ್ಯ ದೇಶಪಾಂಡೆ, ಬಾಲರಾಮ-ದೇವಾಂಸ್, ಬಾಲ ಲಕ್ಷ್ಮಣ-ಪ್ರಭು ಗೌಡ, ಲವ ಕುಶ- ಆರಾಧ್ಯ, ಅನನ್ಯಾ, ಹನುಮಂತ-ಅವನಿ ಕುಲಕರ್ಣಿ ಅಭಿನಯಿಸಲಿದ್ದಾರೆ. ರಂಗಾಸಕ್ತರು ವೀಕ್ಷಿಸಲು ಶಂಕರಾಚಾರ್ಯ ಸೇವಾ ಸಮೀತಿಯವರು ವಿನಂತಿಸಿದ್ದಾರೆ.

ಪ್ರಕಾಶ್ ಹೊಸಮನಿಯವರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಗದಗ-ಬೆಟಗೇರಿಗೆ ಧಾರವಾಡದ ಪ್ರಾದೇಶಿಕ ಕಾಲೇಜು ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ ಭೇಟಿ ನೀಡಿ, ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಫ್. ಶಿದ್ನೇಕೊಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಆರ್. ಕಲ್ಮನಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!