Home Blog Page 3171

KEA ಪರೀಕ್ಷೆ ಅಕ್ರಮ- ಆರೋಪಿ RD ಪಾಟೀಲ್ ಗೆ ಆಶ್ರಯ, ಇಬ್ಬರ ಬಂಧನ

0

ಲಬುರಗಿ;- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಆಶ್ರಯ ನೀಡಿದ್ದ ಇಬ್ಬರನ್ನ ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಅಪಾರ್ಟ್‌ಮೆಂಟಿನ ಮಾಲಿಕ ಶಂಕರಗೌಡ & ಮ್ಯಾನೇಜರ್ ದಿಲೀಪ್ ಬಂಧಿತರು.

ಪೋಲೀಸ್ ದಾಳಿವೇಳೆ RD ಪಾಟೀಲ್ ಕೈಗೆ ಸಿಗದೇ ಜಸ್ಟ್ ಮಿಸ್ ಆಗಿದ್ದ.ಆ ವೇಳೆ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ CCTV ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಕಿಂಗ್ ಪಿನ್ ಗೆ ಅಪಾರ್ಟಮೆಂಟ್ ದಲ್ಲಿ ಬಾಡಿಗೆ ಆಧಾರದ ಮೇಲೆ ಆಶ್ರಯ ಕೊಟ್ಟ ಆರೋಪದ ಹಿನ್ನಲೆ ಇದೀಗ ಇಬ್ಬರು ಲಾಕ್ ಆಗಿದ್ದಾರೆ ಎನ್ನಲಾಗಿದೆ..

ಗೊಂಬೆ ಮಾಸ್ಕ್ ಧರಿಸಿ ಪುಂಡರ ಪುಂಡಾಟ: 15 ವಾಹನಗಳಿಗೆ ಹಾನಿ

0

ಬೆಂಗಳೂರು:- ಗೊಂಬೆ ಮಾಸ್ಕ್ ಧರಿಸಿ ಪುಂಡರು ಪುಂಡಾಟ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಏರಿಯಾ ಒಂದರಲ್ಲಿ ಮನೆ ಮುಂದೆ ನಿಲ್ಲಿಸಿದ್ದ 15 ವಾಹನಗಳ ಗಾಜನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಲಗ್ಗೆರೆ ರಾಜೀವ್ ಗಾಂಧಿನಗರ ಬಳಿ ಘಟನೆ ಜರುಗಿದೆ.

ಡಿಯೋ ದ್ವಿಚಕ್ರ ವಾಹನದಲ್ಲಿ ಬಂದು ಲಾಂಗು ಮಚ್ಚಿನಿಂದ ಅಟ್ಯಾಕ್‌ ನಡೆದಿದೆ. 15 ವಾಹನಗಳಿಗೆ ಹಾನಿ ಮಾಡಿ ಪುಂಡರು ಪರಾರಿ ಆಗಿದ್ದಾರೆ.

ಮದ್ಯ ರಾತ್ರಿ ಮೂವರು ಪುಂಡರಿಂದ ಕೃತ್ಯ ನಡೆದಿದೆ. ರಾಜಗೋಪಾಲ್‌ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆದಿದ್ದು, ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಸಿರುಗಟ್ಟಿಸಿ ಮಹಿಳೆಯ ಕೊಲೆ: ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಸಿಕ್ರೇಟ್ ಬಯಲು

0

ಬೆಂಗಳೂರು: ಉಸಿರುಗಟ್ಟಿಸಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೂಡ್ಲು ಬಳಿಯ ನಂಜಾರೆಡ್ಡಿ ಲೇಔಟ್ ನಲ್ಲಿ ನಡೆದಿದೆ. ಅನುರಾಧ ಅಲಿಯಾಸ್ ಅಲೀಮಾ ಅಸಹಜ ರೀತಿಯಲ್ಲಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ರಾಜಶೇಖರ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿ,  ಆರಂಭದಲ್ಲಿ ಈ ಘಟನೆ ಸಂಬಂಧಿಸಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೇ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಸಾವಿನ ಸಿಕ್ರೇಟ್ ಬಯಲಾಗಿದೆ.

ರಾಜಶೇಖರನ ಜೊತೆ ಅನುರಾಧ ಎರಡನೇ ಮದುವೆಯಾಗಿದ್ದಳು. ರಾಜಶೇಖರಗೆ ಬೇರೊಬ್ಬ ಮಹಿಳೆ ಜೊತೆಗೆ ಸಂಬಂಧ ಇದೆ ಅನ್ನೋ ವಿಚಾರಕ್ಕೆ ಗಲಾಟೆ ತೀವ್ರಗೊಂಡು, ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್​​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಅವನೇ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಪೊಲೀಸ್ ಠಾಣೆಗೆ ಅಗಮಿಸಿದ ಆರೋಪಿ ಆತ್ಮಹತ್ಯೆ ಎಂದು ಪೊಲೀಸರನ್ನು ನಂಬಿಸಿದ್ದಾನೆ. ಇದರ ಪ್ರಕಾರ ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲು ಮಾಡಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು ಬಲವಂತವಾಗಿ ಕುತ್ತಿಗೆ ಹಿಸುಕಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ರಾಜಶೇಖರನನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ನವರಸನ್ ಸಾರಥ್ಯದ MMB legacy ಗೆ ಮೊದಲ ವರ್ಷದ ಸಡಗರ

0

ಕನ್ನಡ ಚಿತ್ರರಂಗದ ಇವೆಂಟ್ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸುಸಜ್ಜಿತವಾದ ಸಭಾಂಗಣ MMB legacy ಆರಂಭವಾಗಿ ಒಂದು ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಎಂ.ಎಂ.ಬಿ ಲೆಗಸಿಯ ಮುಖ್ಯಸ್ಥ ನವರಸನ್ ಅದ್ದೂರಿ ಸಮಾರಂಭ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಮೈ ಮೂವೀ ಬಜಾರ್ ಪ್ರಶಸ್ತಿ ಲೋಗೊ ಸಹ ಅನಾವರಣವಾಯಿತು.

ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ ಸೇರಿ ಮೈ ಮೂವೀ ಬಜಾರ್ ನ‌ ಪ್ರಶಸ್ತಿ ಅನಾವರಣ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರಮೇಶ್ ರೆಡ್ಡಿ, ದೇವೇಂದ್ರ, ಭಾ.ಮ.ಗಿರೀಶ್, ಜಗದೀಶ್, ಕೃಷ್ಣ ಸಾರ್ಥಕ್, ರಾಜೇಶ್, ಗಿರೀಶ್ ಕುಮಾರ್, ಗೋವಿಂದರಾಜು, ಚೇತನ್ ಗೌಡ, ರವಿರಾಜ್, ಶ್ರೀನಿವಾಸ್ (ಹೈದರಾಬಾದ್) ಹಾಗೂ ನಿರ್ದೇಶಕರಾದ ಹರಿ ಸಂತು, ಮಹೇಶ್ ಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಪ್ರೋತ್ಸಾಹದ ಮಾತುಗಳ ಮೂಲಕ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ನವರಸನ್, MMB legacy ಕಳೆದವರ್ಷ ನವೆಂಬರ್ ನಲ್ಲಿ ಆರಂಭವಾಗಿತ್ತು. ಈ ಒಂದು ವರ್ಷದಲ್ಲಿ ಪತ್ರಿಕಾಗೋಷ್ಠಿಗಳು ಹಾಗೂ ಹಲವಾರು ಇವೆಂಟ್ ಗಳು ಸೇರಿದಂತೆ 216 ಕಾರ್ಯಕ್ರಮಗಳು ನಡೆದಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಅನುಕೂಲವಾಗುವಾಗಲೆಂದು ಯೋಚಿಸಿ ಈ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಸಭಾಂಗಣ ನಿರ್ಮಿಸಲು ಜಾಗ ನೀಡಿದ ಆನಂದ್ ಅವರಿಗೆ, ಸಹಕಾರ ನೀಡುತ್ತಿರುವ ಚಿತ್ರೋದ್ಯಮದ ಗಣ್ಯರಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ಧನ್ಯವಾದ. ಇಂತಹ ಸುಂದರ ಸಭಾಂಗಣಗಳನ್ನು ಬೆಂಗಳೂರು ಅಷ್ಟೇ ಅಲ್ಲದೇ ಮುಂಬೈ ಮುಂತಾದ ಕಡೆ ತೆರೆಯುವ ಆಲೋಚನೆ ಇದೆ.

ದೇಶದ ಎಲ್ಲಾ ಚಿತ್ರರಂಗಗಳ ಬಗ್ಗೆ ಮಾಹಿತಿಯನ್ನು ನೀಡುವ APP ಒಂದನ್ನು ಬಿಡುಗಡೆ ಮಾಡುವ ಸಿದ್ದತೆ ಕೂಡ ನಡೆಯುತ್ತಿದೆ. ಡಿಸೆಂಬರ್ 16 ರಂದು ಬಿಡದಿ ಬಳಿಯ ಜಾಲಿವುಡ್ ನಲ್ಲಿ ಮೈ ಮೂವೀ ಬಜಾರ್ ನ ಮೊದಲ ವರ್ಷದ ಪ್ರಶಸ್ತಿ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳೆದ‌ ನಲವತ್ತು, ಐವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿರುವ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈಗಿನ ಕಲಾವಿದರು ಹಿರಿಯ ನಟರನ್ನು ಗೌರವಿಸಲಿದ್ದಾರೆ ಎಂದು ತಿಳಿಸಿದರು.

ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಸಂಘಟಿತ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಬೇಕು ಅಂತ 226 ಕೋಟಿ ರೂ. ಧನಸಹಾಯ ಮಾಡ್ತಿದ್ದೇವೆ. 9.60 ಲಕ್ಷ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದ್ದೇವೆ. ರಾಜ್ಯದಲ್ಲಿ 83% ಅಸಂಘಟಿತ ಕಾರ್ಮಿಕರು ಇದ್ದಾರೆ. ಕೃಷಿ ಇಲಾಖೆ ಬಿಟ್ಟರೆ ಕಾರ್ಮಿಕರೇ ಹೆಚ್ಚು ಈ ದೇಶದಲ್ಲಿ ಇರೋದು.

ಯಾವುದೇ ರಾಷ್ಟ್ರದ ಶಕ್ತಿ ಕಾರ್ಮಿಕರು ಅಂತ ಅಂಬೇಡ್ಕರ್ ಹೇಳಿದ್ದರು ಎಂದು ನುಡಿದರು. ಶಕ್ತಿ ಯೋಜನೆ ಅಡಿ 88 ಕೋಟಿ ಹೆಣ್ಣುಮಕ್ಕಳು ಓಡಾಡಿದ್ದಾರೆ. ಶಕ್ತಿ ಯೋಜನೆ ಮಾಡಿದ ಮೇಲೆ ಧರ್ಮಸ್ಥಳಕ್ಕೆ ಬರೋರು ಜಾಸ್ತಿ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಾರೆ ಅಂತ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ನುಡಿದಿದ್ದಾರೆ.

ಸಾಮಾನ್ಯ ಸಭೆಯಲ್ಲಿ ಮದುವೆ ಆಮಂತ್ರಣ ಹಂಚಿ ಶಿಷ್ಟಾಚಾರ ಉಲ್ಲಂಘನೆ

0

ವಿಜಯನಗರ: ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮದುವೆ ಆಮಂತ್ರಣ ಹಂಚುವ ಮೂಲಕ ಮಾಜಿ ಸಂಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿಲಾಗಿದೆ.

ಮಾಜಿ ಸಚಿವ ಶ್ರೀ ರಾಮುಲು ಪುತ್ರಿ ಮದುವೆ ಆಮಂತ್ರಣವನ್ನು ಮಾಜಿ ಸಂಸದೆ ಜೆ. ಶಾಂತ  ಹಂಚಿದ್ದಾರೆ. ಮದುವೆಯ ಆಮಂತ್ರಣ ಪತ್ರ ಹಂಚೋದ್ರ ಜತೆಗೆ ಮದುವೆಗೆ ಬನ್ನಿ ಅಂತ ಮೈಕ್ ನಲ್ಲೇ ಆಮಂತ್ರಣ ಕೊಟ್ಟಿದ್ದಾರೆ.

ನಗರಸಭೆ ಸದಸ್ಯರು, ಮಾಜಿ ಸದಸ್ಯರು, ನಗರಸಭೆ ಸಿಬ್ಬಂದಿಗೆ ಆಮಂತ್ರಣ ಪತ್ರ ಹಂಚಿಕೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರಸಭೆಯಲ್ಲಿ ಮದುವೆ ಆಮಂತ್ರಣ ಹಂಚಿಕೆ ಮಾಡಲಾಗಿದ್ದು, ಇದ್ದರಿಂದ ಶಿಷ್ಟಾಚಾರ ಉಲ್ಲಂಘನೆ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

 

ಡಿಕೆ ಸುರೇಶ್ʼಗೆ ಕೈಮುಗಿದು ಕೇಳ್ತಿನಿ, ಅನುದಾನ ವಾಪಸ್ ಕೊಡಿಸಿ: ಶಾಸಕ ಮುನಿರತ್ನ

0

ಬೆಂಗಳೂರು: ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 126 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದ ಕಾಮಗಾರಿಗಳನ್ನು ರದ್ದುಪಡಿಸಿ, 126 ಕೋಟಿ ಹಣವನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಸತ್ಯಾಗ್ರಹ ಮಾಡಿ ಮನವಿ ಮಾಡಿದರೂ ಸಹ ಈವರೆಗೆ ಕ್ಷೇತ್ರದ 126 ಕೋಟಿ ಅನುದಾನ ನನಗೆ ಹಿಂತಿರುಗಿಸಿಲ್ಲ ಎಂದು ಶಾಸಕ ಮುನಿರತ್ನ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನನ್ನ ಬಳಿ ಅನುದಾನ ಹಿಂತಿರುಗಿಸಿದ್ದಾರ ಎಂದು ಕೇಳಿದ ಸಂದರ್ಭ ನಾನು ಇಲ್ಲ ಎಂದು ಹೇಳಿದ್ದೆ. ನಾನು ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತೇನೆ. ಕಾಮಗಾರಿ ವೀಕ್ಷಣೆಗೆ ದಿನಾಂಕ ನಿಗದಿ ಮಾಡುವಂತೆ ಯಡಿಯೂರಪ್ಪ ಸೂಚಿಸಿದ್ದರು. ಅದರ ಪ್ರಕಾರ ಇವತ್ತು ವೀಕ್ಷಣೆ ಮಾಡಿದ್ದಾರೆ ಎಂದರು.

ನಮ್ಮ ಕ್ಷೇತ್ರದ ಅನುದಾನ ಹಿಂತಿರುಗಿಸುವಂತೆ ಸಂಸದ ಡಿಕೆ ಸುರೇಶ್ ಅವರಿಗೆ ಮನವಿ ಮಾಡುತ್ತೇನೆ. ಯಾವ ಕಾಮಗಾರಿಗೆ ನಾವು ಅನುದಾನ ತಂದಿದ್ದೆವೋ ಅದನ್ನು ಮತ್ತೆ ನಮಗೆ ಕೊಡಿ. ಇದು ನಿಮ್ಮ ಲೋಕಸಭಾ ವ್ಯಾಪ್ತಿಗೆ ಬರುವಂತಹ ಅನುದಾನ. ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ. ವೈಯಕ್ತಿಕವಾಗಿ ನಾನು ಯಾವುದಕ್ಕೂ ಬರಲ್ಲ ಎಂದು ಹೇಳಿದರು.

ಭೀಕರ ಬರದಿಂದ ಕಂಗಾಲಾದ ರೈತರಿಗೆ ಗದಗ ಜಿಲ್ಲಾಡಳಿತದಿಂದ ಶಾಕ್…?

0

ಗದಗ: ಭೀಕರ ಬರದಿಂದ ಕಂಗಾಲಾದ ರೈತರಿಗೆ ಗದಗ ಜಿಲ್ಲಾಡಳಿತ ಶಾಕ್ ಕೊಟ್ಟಿದೆ. ಸರ್ಕಾರದಿಂದ ಬೆಳೆ ವಿಮೆ ಹಣ ಬಂದ್ರೂ ರೈತರಿಗೆ ನೀಡದೆ ಸತಾಯಿಸುತ್ತಿದೆ. ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬಿಡುಗಡೆ ಆಗಿತ್ತು.

ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಇದರಿಂದಾಗಿ ಜಿಲ್ಲಾಡಳಿತದಿಂದ ಬರೆ ಎಳೆದಂತಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲೇ ಗದಗ ಜಿಲ್ಲೆಗೆ ಅತಿಹೆಚ್ಚು 35 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಎನ್ನುವಂತಾಗಿದೆ ರೈತರ ಸ್ಥಿತಿ.

ಬಿಡುಗಡೆಯಾಗಿ ತಿಂಗಳಾದರೂ ರೈತರ ಖಾತೆಗೆ ಹಣ ಬಂದಿಲ್ಲ. ಜಿಲ್ಲಾಡಳಿತದ ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಬಾಬರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ಅಪ್ರಾಪ್ತ ಬಾಲಕ ಹತ್ಯೆ ಪ್ರಕರಣ: ಆರೋಪಿಗಳ ಮೇಲೆ ಪೊಲೀಸರ ಪೈರಿಂಗ್

0

ಕೋಲಾರ: ಅಪ್ರಾಪ್ತ ಬಾಲಕ ಕಾರ್ತಿಕ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ‌ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ.

ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಮುಳಬಾಗಿಲು ಸಬ್ಇನ್ಸ್‌ಪೆಕ್ಟರ್ ವಿಠಲ್ ತಳವಾರ್ ಅವರಿಂದ ಆರೋಪಿಗಳ ಎರಡೂ ಕಾಲುಗಳಿಗೆ ಫೈರಿಂಗ್‌ ಮಾಡಿದ್ದಾರೆ.

ಹಲ್ಲೆ ನಡೆಸಿದ್ದರಿಂದ ಪಿಎಸ್ಐ, ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲಾ ಕಾಲೇಜು ಸಮಯಕ್ಕೆ ಬಸ್ ಬಿಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

0

ಗದಗ: ಸರಿಯಾದ ಸಮಯಕ್ಕೆ ಬಸ್ ಗಳಿಲ್ಲದೇ ತರಗತಿಗಳಿಂದ ವಿದ್ಯಾರ್ಥಿಗಳು ವಂಚಿತರಾಗ್ತಿದ್ದಾರೆ. ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಲ್ಲಿ ಶಾಲಾ-ಕಾಲೇಜು ಸಮಯಕ್ಕೆ ಸರಿಯಾದ ಬಸ್ ಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

ಸಮಯಕ್ಕೆ ಸರಿಯಾಗಿ ಬಸ್ ಗಳು ಬಾರದೇ ಇರುವುದರಿಂದ ಖಾಸಗಿ ವಾಹನಗಳಿಗೆ ದುಡ್ಡು ಕೊಟ್ಟು ಪ್ರಯಾಣಿಸೋ ಪರಿಸ್ಥಿತಿ ನಿರ್ಮಾಣವಾಗಿದೆ.

ತಂದೆ ತಾಯಿ ದುಡಿದ ದುಡ್ಡನ್ನ ಕೊಟ್ಟು ಖಾಸಗಿ ವಾಹನಗಳಲ್ಲಿ ಓಡಾಡೋ ಪರಿಸ್ಥಿತಿ ಇದೆ ಅಂತಾ ವಿದ್ಯಾರ್ಥಿಗಳ ಅಳಲು ತೊಡಿಕೊಂಡಿದ್ದಾರೆ.

ಸೀಟ್ ಗಳು ಸಿಗದಿರೋ ಕಾರಣ ಬಸ್‌ಗಳ ಬಾಗಿಲಲ್ಲಿ ನಿಂತು ಸಂಚರಿಸೋ ಪರಿಸ್ಥಿತಿ ಇದ್ದು, ಏನಾದ್ರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಶಾಲಾ ಕಾಲೇಜು ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿದ್ದಾರೆ.

error: Content is protected !!