Home Blog Page 3173

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ ಮಹಾದೇವಪ್ಪ

0

ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಸಪ್ತಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವ ಮಹಾದೇವಪ್ಪ ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು.

ಅಲ್ಲದೇ ಊಟದ ವ್ಯವಸ್ಥೆ ಬಗ್ಗೆಯೂ ವಿದ್ಯಾರ್ಥಿಗಳ ವಿಚಾರಿಸಿ, ವಿದ್ಯಾರ್ಥಿಗಳಿಂದ ಅಹವಾಲು ಕೂಡ ಸ್ವೀಕರಿಸಿದರು.

ಹಾಸ್ಟೆಲ್‌ಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿದ ನಂತರ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಸಚಿವ ಮಹಾದೇವಪ್ಪ ಅವರು ತಮ್ಮ ಅಂಗರಕ್ಷಕನಿಂದಲೇ ಶೂ ಹಾಕಿಸಿಕೊಂಡ ಪ್ರಸಂಗ ನಡೆಯಿತು.

ಮಂಡ್ಯದಲ್ಲಿ ನಾಲೆಗೆ ಕಾರು ಉರುಳಿದ ಪ್ರಕರಣ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದೇನು!?

0

ಮಂಡ್ಯ- ನಗರದಲ್ಲಿ ನಾಲೆಗೆ ಕಾರು ಉರುಳಿದ ಕೇಸ್ ಸಂಬಂಧಿಸಿದಂತೆ ಅವಘಡಕ್ಕೆ ಕಾರಣ ಬಹಿರಂಗವಾಗಿದೆ. ಕಾರಿನಲ್ಲಿದ್ದ ಓರ್ವನ‌ ಮೊಬೈಲ್ ರಿಂಗ್ ಆಗ್ತಿತ್ತು. ಮೊಬೈಲ್ ನಲ್ಲಿ ಓರ್ವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಐವರು ಬೇರೆ ಬೇರೆ ಕಡೆಯವರು. ತಿಪಟೂರು, ಚನ್ನರಾಯಪಟ್ಟಣ, ಭದ್ರಾವತಿ, ಶಿವಮೊಗ್ಗದವರು ಎನ್ನಲಾಗ್ತಿದೆ.

ಕಾರಿನಲ್ಲಿ ಊಟ, ಬಾಳೆ ಹಣ್ಣು ಕೂಡ ಪತ್ತೆಯಾಗಿದೆ. ಕಾರಿನಲ್ಲಿ ಊಟ ಕೊಂಡೋಗುತ್ತಿದ್ದದ್ದು ಪತ್ತೆಯಾಗಿದೆ. ಪಕ್ಕದಲ್ಲೆ ಹೊಸ ಸೇತುವೆ ನಿರ್ಮಾಣ ಆಗ್ತಿದೆ. ಘಟನೆ ನಡೆದಿರುವ ಸ್ಥಳದಲ್ಲಿ ಸೂಚನಾ ಫಲಕ, ತಡೆಗೋಡೆ ಇಲ್ಲದಿರುವುದು ಘಟನೆಗೆ ಕಾರಣ ಎನ್ನಲಾಗಿದೆ.

ತಡೆಗೋಡೆ ಮತ್ತು ಸೂಚನ ಫಲಕ ಅಳವಡಿಕೆಗೆ ತಾಕೀತು ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದೇನೆ.
ಘಟನಾ ಸ್ಥಳದಲ್ಲಿಯೆ ಖುದ್ದು ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಧ್ಯಮಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ ನೀಡಿದ್ದಾರೆ.

ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ: ಸಚಿವ ಎಚ್. ಸಿ.ಮಹದೇವಪ್ಪ

0

ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಎಲ್ಲ ವರ್ಗದವರಿಗೆ ಮೀಸಲಾತಿ ಕೊಡಲಾಗುವುದು ಎಂದು ಹೇಳಿ ಚಾಕಲೇಟ್ ಹಂಚಿಕೆ ಮಾಡಿದ ಹಾಗೇ ಬಿಜೆಪಿಯವರು ಮಾಡಿ ಹೋದರು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ಗಂಭೀರ ಸ್ವರೂಪದ ಆರೋಪ ಮಾಡಿದರು.

ಡಾ.ಸದಾಶಿವ ಆಯೋಗ ಜಾರಿ ವಿಚಾರ ಕುರಿತು ಮಾತನಾಡಿದ ಅವರು, ಡಾ. ಸದಾಶಿವ ಆಯೋಗ ವರದಿ ಜಾರಿ ಮಾಡುವುದು ನಮ್ಮ ಆದ್ಯ ಕರ್ತವ್ಯ. ಡಾ.ಸದಾಶಿವ ವರದಿ ಜಾರಿ ಮಾಡುವುದು 2-3 ದಶಕಗಳ ಕಾಲದ್ದು ಈಗಿನದು ಅಲ್ಲಾ ಎಂದರು.

ಭಾರತೀಯ ಜನತಾ ಪಕ್ಷದವರು ಡಾ. ಸದಾಶಿವ ಆಯೋಗ ವರದಿ ತಿರಸ್ಕಾರ ಮಾಡಿದ್ದಾರೆ. ಅವರು ಮೀಸಲಾತಿ ವಿಚಾರದಲ್ಲಿ ಕಾಟಾಚಾರಕ್ಕೆ ಮೀಸಲಾತಿ ಜಾರಿ ಮಾಡಿದ್ದಾರೆ.  ನಾವು ಚುನಾವಣಾ ಸಂದರ್ಭದಲ್ಲಿ ಮಾತು ಕೊಟ್ಟಿದ್ದೇವೆ. ಈ ಕುರಿತು ಚಿತ್ರದುರ್ಗದ ಸಮಾವೇಶದಲ್ಲಿ ಡಾ.‌ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿ ಮಾಡುತ್ತೇವೆ ಅಂತಾ ಮಾತುಕೊಟ್ಟಿದ್ದೇವು. ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ ಅಂತಾ ಹೇಳಿದರು.

ಮೀಸಲಾತಿ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಏಳು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಆಗಿದ್ದು  ಮೀಸಲಾತಿ ಜಾರಿ ವಿಚಾರದಲ್ಲಿ ಕಾನೂನು ಸಲಹೆ ಅಗತ್ಯವಾಗಿದ್ದು, ಕಾನೂನು, ಸಂವಿಧಾನದ ವ್ಯಾಪ್ತಿಯಲ್ಲಿ ಚರ್ಚೆ ಆಗಬೇಕು.

ಈ ಕುರಿತು ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ಕಾನೂನು ತಜ್ಞರು ಹಿರಿಯರ ಜೊತೆಗೆ ಚರ್ಚೆ ಮಾಡಬೇಕಾಗಿದೆ. ಯಾವುದೇ ರೀತಿಯ ಕಾನೂನು ತೊಡಕುಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.

ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆ ವಂಚಿಸ್ತಿದ್ದ ಆರೋಪಿ ಅರೆಸ್ಟ್

0

ಬೆಂಗಳೂರು;- ಪೊಲೀಸರಿಗೆಯೇ ಪೊಲೀಸ್ ಇನ್ ಫಾರ್ಮರ್ ಎಂದು ಹೇಳಿ ವಂಚನೆ ಮಾಡ್ತಿದ್ದ ಖತರ್ನಾಕ್ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್​ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ, ಹಾಯಾದ ಜೀವನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲೊಂದು ದಂಧೆ ನಡೀತಿದೆ, ನಾನು ಅಲ್ಲಿಗೆ ಹೋಗಿ ಲೊಕೇಶನ್ ಕಳಿಸ್ತೀನಿ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡ್ತಿನಿ ಎಂದು ಪೊಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ.

ಪೊಲೀಸರು ಈಗ್ಲೇ ಬರ್ತೀವಿ ಅಂದ್ರೆ ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸ್ತೀನಿ ಅಂತಿದ್ದ. ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಡ್ಮೂರು ಸಾವಿರ ಫೋನ್ ಪೇ ಮಾಡಿ ಅಂತಿದ್ದ.

ಇದನ್ನು ನಂಬಿ ಪೊಲೀಸರು ಹಣ ಹಾಕಿದ್ರೆ ಹಣ ಬಂದ ಕೆಲವೇ ಕ್ಷಣಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗ್ತಿದ್ದ. ಹೀಗೆ ಹಲವು ಸಿಸಿಬಿ ಹಾಗೂ ಲಾ ಆಂಡ್ ಆರ್ಡರ್ ಪೊಲೀಸರಿಗೆ ಆರೋಪಿ ವಸೀಂ ಯಾಮಾರಿಸಿದ್ದಾನೆ.

ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಎತ್ತಂಗಡಿ

0

ಬೆಂಗಳೂರು;- ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರು ಶಿವಮೊಗ್ಗದಿಂದ ವರ್ಗಾವಣೆ ಮಾಡಲಾಗಿದೆ. ಕೋಲಾರಕ್ಕೆ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೆರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಾಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿಯಿದ್ದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ಕರ್ತವ್ಯ ಸ್ಥಾನದಲ್ಲಿರದೇ ಹೆಚ್ಚಾಗಿ ಬೆಂಗಳೂರಿನಲ್ಲಿಯೇ ಇರುತ್ತಾರೆನ್ನುವ ಆರೋಪ ಕೇಳಿಬಂದಿತ್ತು. ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಹೆಚ್ಚಿನ ಕೆಲಸ ಇಲ್ಲದ್ದರಿಂದ ಶಿವಮೊಗ್ಗದ ಬದಲಿ ಬೆಂಗಳೂರಿನಲ್ಲಿಯೇ ಅವರು ಹೆಚ್ಚಿನ ಸಮಯ ಕಳೆಯುತ್ತಿದ್ದರೆಂದು ಹೇಳಲಾಗಿತ್ತು.

ಶಿವಮೊಗ್ಗದ ಲೆಕ್ಕಪರಿಶೋಧನೆ ಇಲಾಖೆಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಕ್ಷರಿ ಕಚೇರಿಗೆ ಬರದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಿದೆ. ಅಷ್ಟೇ ಅಲ್ಲ, ಹೆಚ್ಚಿನ ಕೆಲಸದ ಒತ್ತಡವಿರುವ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರನ್ನಾಗಿ ನೇಮಕ ಮಾಡಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರ ಜೊತೆ ಷಡಾಕ್ಷರಿ ನಿಕಟ ಸಂಪರ್ಕದಲ್ಲಿದ್ದರು ಎನ್ನುವ ಆರೋಪವೂ ಕೇಳಿ ಬಂದಿತ್ತು. ಕಳೆದ ವಿಧಾನಭೆ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್​ಗೂ ಸಹ ಪ್ರಯತ್ನ ನಡೆಸಿದ್ದರೂ ಎಂದು ಹೇಳಲಾಗಿತ್ತು.

ಬರ ಪರಿಹಾರಕ್ಕೆ ಜಮೀನಿನ ಮಾಹಿತಿ ಒದಗಿಸಬೇಕು: ಸಚಿವ ಕೃಷ್ಣ ಬೈರೇಗೌಡ

0

ಗದಗ;- ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಮಾಹಿತಿ ನೀಡಿದ್ದು ಬರ ಪರಿಹಾರಕ್ಕೆ ಜಮೀನಿನ ಮಾಹಿತಿ ಒದಗಿಸಬೇಕು ಎಂದು ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಬೇಕು. ರೈತರು ತಮ್ಮ ಹೆಸರು, ಬ್ಯಾಂಕ್‌ ಖಾತೆ ವಿವರಗಳನ್ನು ಈಗಾಗಲೇ ದಾಖಲು ಮಾಡಿದ್ದಾರೆ.

ಆದರೆ, ಒಬ್ಬ ರೈತನ ಬಳಿ ಎಷ್ಟು ಎಕರೆ ಜಮೀನು ಇದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರ ಬರ ಪರಿಹಾರ ಪಾವತಿಸುವಾಗ ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ಎರಡು ಎಕರೆ ನಮೂದಿಸಿದ್ದರೆ ಪರಿಹಾರ ಅಷ್ಟಕ್ಕೆ ಮಾತ್ರ ಸಿಗಲಿದೆ.

ಒಬ್ಬ ರೈತನಿಗೆ ಐದು ಎಕರೆ ಜಮೀನು ಇದ್ದು, ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ್ದರೆ ಐದು ಎಕರೆಗೂ ಪರಿಹಾರ ಸಿಗಲಿದೆ. ಆದಕಾರಣ, ಎಲ್ಲ ರೈತರು ಕೃಷಿ ಇಲಾಖೆಗೆ ತೆರಳಿ ತಮ್ಮ ಜಮೀನಿನ ಮಾಹಿತಿಯನ್ನು ನವೆಂಬರ್‌ ಅಂತ್ಯದ ಒಳಗೆ ನಮೂದಿಸಬೇಕು’ ಎಂದು ತಿಳಿಸಿದರು.

ಕಾಡಾನೆ ದಾಳಿ: ತೋಟದ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಸಾವು

0

ಚಿಕ್ಕಮಗಳೂರು: ಕಾಡಾನೆ  ದಾಳಿಗೆ ಮಹಿಳೆ ಬಲಿಯಾದ ಘಟನೆ ಜಿಲ್ಲೆಯ ಆಲ್ದೂರು ಸಮೀಪದ ಹೆಡೆದಾಳು ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ವೀಣಾ (45) ಎಂದು ಗುರುತಿಸಲಾಗಿದೆ. ಮಹಿಳೆ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಆನೆ ದಾಳಿ ನಡೆಸಿದೆ. ಈ ವೇಳೆ ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗಿಲ್ಲ.

ಈ ವೇಳೆ ಆನೆ ದಾಳಿ ನಡೆಸಿ ಮಹಿಳೆಯ ತಲೆಯನ್ನು ತುಳಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಕಳೆದ ಕೆಲವು ದಿನಗಳಿಂದ ಸುಮಾರು 7 ಕಾಡಾನೆಗಳು ಕಾಫಿ ತೋಟದ ಸುತ್ತಮುತ್ತವೇ ಬೀಡು ಬಿಟ್ಟಿವೆ. ಇದರಿಂದ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಓಡಾಡುವುದು ಕಷ್ಟವಾಗಿದೆ. ಆನೆಗಳನ್ನು ಸ್ಥಳದಿಂದ ಓಡಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ  ಒತ್ತಾಯಿಸಿದ್ದಾರೆ.

ಬಾಲಕಿ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆ..!

0

ತುಮಕೂರುಮನೆಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.  ಲೇಖನ(7) ಚಿರತೆ ದಾಳಿಗೆ ತುತ್ತಾದ ಮಗು. ರಾಕೇಶ್, ಹರ್ಷಿತಾ ದಂಪತಿಯ ಮಗುವಾಗಿರುವ ಲೇಖನ. ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಚಿರತೆ. ಚಿರತೆ ದಾಳಿ ನಡೆಸುತ್ತಿದ್ದಂತೆ ಕಿರುಚಿಕೊಂಡ ಮಗು. ಮಗು ಮೇಲೆ ದಾಳಿ ನಡೆಸುತ್ತಿದ್ದಂತೆ ಜೋರಾಗಿ ಕೂಗಿಕೊಂಡು ದೊಣ್ಣೆಯಿಂದ ಚಿರತೆಗೆ ಬೆದರಿಸಿದ ರಾಕೇಶ್.

ಎಳೆದೊಯ್ಯಲು ಯತ್ನಿಸಿದ ಚಿರತೆ ಈ ವೇಳೆ ಧೈರ್ಯ ಕಳೆದುಕೊಳ್ಳದೇ ಚಿರತೆ ಮೇಲೆ ದೊಣ್ಣೆಯಿಂದ ದಾಳಿಗೆ ಮುಂದಾದ ತಂದೆ. ಕೂಡಲೇ ಮಗುವನ್ನು ಬಿಟ್ಟು ಓಡಿಹೋದ ಚಿರತೆ. ಸ್ವಲ್ಪ ಧೈರ್ಯಕಳೆದುಕೊಂಡಿದ್ದರೂ ಮಗುವನ್ನು ಎಳೆದೊಯ್ಯುತ್ತಿದ್ದ ಚಿರತೆ. ತಂದೆಯ ಧೈರ್ಯ, ಸಮಯಪ್ರಜ್ಞೆಯಿಂದ ಮಗು ಚಿರತೆ ದಾಳಿಯಿದಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಬಾಲಕಿಯ ಕಾಲನ್ನು ಪರಚಿರುವ ಚಿರತೆ.  ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಭೀಕರವಾಗಿ ಕೊಲೆ ಪ್ರಕರಣ: ಬ್ಲೇಡ್ ನಿಂದ ಕಾರ್ತಿಕ್ ನ ಮೃತ ದೇಹದ ಮೇಲೆ S ಮತ್ತು R ಬರೆದು ವಿಕೃತಿ

0

ಕೋಲಾರ: ಭೀಕರವಾಗಿ ಕೊಲೆಯಾಗಿದ್ದ ಬಾಲಕ ಕಾರ್ತಿಕ್ ಸಿಂಗ್ ಪ್ರಕರಣದ ತನಿಖೆ ಮುಂದುವರೆದಿದೆ. ತನಿಖೆ ವೇಳೆ ಹಂತಕರ ಹಲವು ವಿಕೃತ ಕೆಲಸಗಳು ಬೆಳಕಿಗೆ ಬಂದಿವೆ. ಬಾಲಕ ಕಾರ್ತಿಕ್ ದೇಹಕ್ಕೆ ಬರ್ಬರವಾಗಿ ಇರಿದ ಹಂತಕರು, ಆತ ನೋವಿನಿಂದ ನರಳುತ್ತಾ ಇರುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರು.

ಅಷ್ಟೇ ಅಲ್ಲ, ಬಾಲಕನ ಮೃತ ದೇಹದ ಮೇಲೆ ‘S’ ಮತ್ತು ‘R’ ಅಕ್ಷರಗಳನ್ನು ಚಾಕುವಿನಿಂದ ಬರೆದು ವಿಕೃತಿ ಮೆರೆದಿದ್ದರು. ಇನ್ನು 6 ಮಂದಿ ಹಂತಕರ ಪೈಕಿ ಮೂವರನ್ನು ಬಂಧಿಸಲಾಗಿದೆ.

ಕಾರ್ತಿಕ್ ಸಿಂಗ್ ಮುಖ, ಕತ್ತು, ಎದೆ ಭಾಗದ ಮೇಲೆ S ಎಂದು ಹಂತಕರು ಚಾಕುವಿನಲ್ಲೇ ಬರೆದಿದ್ದಾರೆ. ಇನ್ನು ಆತನ ಎದೆಯ ಮೇಲೆ ಒಂದು ಬಾರಿ R ಎಂದು ಬರೆಯಲಾಗಿದೆ. ಕಾರ್ತಿಕ್ ಸಿಂಗ್ ಸಾವನ್ನಪ್ಪಿದ ನಂತರ, ಪದಗಳನ್ನು ಬರೆದಿರುವ ಮಾಹಿತಿ ಸಿಕ್ಕಿದೆ.

ಅಂದಹಾಗೆ ಕೊಲೆಯ ಪ್ರಮುಖ ಆರೋಪಿಗಳಾದ ದಿಲೀಪ್ @ ಶೈನು ಹಾಗೂ ರಿಷಿಕ್ ಎನ್ನುವರ ಹೆಸರಿನ ಮೊದಲ ಅಕ್ಷರಗಳನ್ನ ಬರೆದಿರುವ ಶಂಕೆ ಇದೆ. ಕಾರ್ತಿಕ್ ಸಿಂಗ್ ಕೊಲೆ ಮಾಡಿದ ಬಳಿಕ ಅವರವರ ಮನೆಯಲ್ಲಿ ಊಟ ಮಾಡಿ, ಬಳಿಕ 7 ಮಂದಿ ಆರೋಪಿಗಳೂ ಪರಾರಿಯಾಗಿದ್ದರು.

ಈ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿಗಳನ್ನ ಬಂಧಿಸಿ, 7 ಮಂದಿಯನ್ನ ವಶಕ್ಕೆ ಪಡೆದು ಕೋಲಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಉಳಗನಾಯಗನ್ 234ನೇ ಸಿನಿಮಾದ ಟೈಟಲ್ ರಿವೀಲ್

0

ಉಳಗನಾಯಗನ್ ಕಮಲ್ ಹಾಸನ್ ಹಾಗೂ ವಿಷನರಿ ಡೈರೆಕ್ಟರ್ ಮಣಿರತ್ನಂ 37 ವರ್ಷದ ಬಳಿಕ ಮತ್ತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಕಮಲ್ ನಟಿಸ್ತಿರುವ ಮಣಿರತ್ನಂ ನಿರ್ದೇಶಿಸ್ತಿರುವ ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. 2.55 ನಿಮಿಷದ ವಿಡಿಯೋ ಝಲಕ್ ಮೂಲಕ ಉಳಗನಾಯಗನ್ 234ನೇ ಸಿನಿಮಾದ ಶೀರ್ಷಿಕೆ ಏನು? ಯಾವ ಜಾನರ್ ಎಂಬ ಬಗ್ಗೆ ಸಣ್ಣದೊಂದು ಇಂಟ್ ಸಿಕ್ಕಿದೆ.

ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ಥಗ್ ಲೈಫ್ ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಅಂತಾ ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಟೈಟಲ್ ಅನೌನ್ಸ್ ಮೆಂಟ್ ವಿಡಿಯೋದಲ್ಲಿ ಹೈಲೆಟ್ ಆಗಿದೆ.

ಪಕ್ಕ ಆಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮಂಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತಿ ನಿರ್ಮಿಸುತ್ತಿದ್ದಾರೆ.

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎಆರ್ ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ ಚಂದ್ರನ್ ಛಾಯಾಗ್ರಾಹಣ ಥಗ್ ಲೈಫ್ ಸಿನಿಮಾದಲ್ಲಿದೆ. 1987ರಲ್ಲಿ ‘ನಾಯಕನ್’ ಸಿನಿಮಾ ರಿಲೀಸ್ ಆಯಿತು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನ ಇತ್ತು. ಇದಾದ ಬಳಿಕ ಇವರು ಒಟ್ಟಾಗಿ ಕೆಲಸ ಮಾಡಿಲ್ಲ. ಈಗ 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

error: Content is protected !!