Home Blog Page 3181

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬುಧವಾರದಂದು ನೀರು ಪೂರೈಕೆ ಎಲ್ಲೆಲ್ಲಿ?

ನಗರಸಭೆ ಪೌರಾಯುಕ್ತರ ಪ್ರಕಟಣೆ…

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಆಗಸ್ಟ್ 9 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ:

ವಾರ್ಡ್- ನಂ. 22ರ ಅಮರೇಶ್ವರ ನಗರ, ವಾರ್ಡ್- ನಂ. 03ರ ಜಮಾದಾರ ಲೈನ್, ಬಾಳಿಕಾಯಿ ಲೈನ್, ಮಸೀದಿ ಲೈನ್, ಬಾರಕೇರ ಲೈನ್, ವಾರ್ಡ್- ನಂ. 28ರ 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, 6ನೇ ಕ್ರಾಸ್ ಪಂಚಾಕ್ಷರಿ ನಗರ, ನಾಗರಕಟ್ಟಿಯವರ ಲೈನ್, ಅಕ್ಕಿಯವರ ಲೈನ್, ದೇವಗಿರಿ ಮಾಸ್ತರ್ ಲೈನ್, ಪಂಪ ಹೌಸ್, ಕಿರಾಣಿ ಲೈನ್, ಎಸ್.ಎಸ್. ಪಾಟೀಲ, ಕಾಗದಗಾರ ಲೈನ್,

ವಾರ್ಡ್- ನಂ. 21, 22, 23, ರಲ್ಲಿ ಗಣಪತಿ ಲೈನ್, ಗೆಳೆಯರ ಬಳಗ, ಅಕ್ಕಿಯವರ ಲೈನ್, ಜಂತ್ಲಿ ಹಳೆಲೈನ್, ಹೊಸ ಲೈನ್, ಕಣಗಿನಹಾಳ ಹಾರೂಗೇರಿ ಭಾಗ-1, ಭಾಗ-2 ಹೊನ್ನತ್ತೆಮ್ಮನ ಗುಡಿ ಭಾಗ-1, ಭಾಗ-2 ಸೋಮನಗೌಡ್ರ ಹೆಬಸೂರ ಲೈನ್, ಬನ್ನಿಕಾಳಮ್ಮ, ಕಮತರ ಲೈನ್,

ವಾರ್ಡ್- ನಂ. 27 ಫಾರಂ ಓಣಿ, ಕಾಶಿ ವಿಶ್ವನಾಥ ನಗರ, ಸಂಭಾಪೂರ ರೋಡ್, ವಾರ್ಡ್- ನಂ. 30ರ ಟಿ.ವಿ.ಎಸ್ ಶೋ ರೂಮ್, ಅಬ್ಬಿಗೇರಿ ಲೇಔಟ್, ಮುತ್ತಿನಪೆಂಡಿಯವರ ಲೈನ್, ಕಾಶಿಯವರ ಲೈನ್, ವಾರ್ಡ್- ನಂ. 6, 7 ಮಳಲಿಯವರ ಲೈನ್, ಪೂಜಾರ ಲೈನ್, ತಟ್ಟಿಯವರ ಲೈನ್, ಪಂಚರತ್ನ ಬಡಾವಣೆ

ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ನೀರು ಪೂರೈಕೆಯ ಸ್ಥಳಗಳು

ನಗರಸಭೆ ಆಯುಕ್ತರ ಪ್ರಕಟಣೆ…..

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಆಗಸ್ಟ್ 8ರ ಮಂಗಳವಾರ ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ ಪಾದಚಾರಿಗಳಿಗೆ ಕಾರ್ ಡಿಕ್ಕಿ; ಇಬ್ಬರು ಸ್ಥಳದಲ್ಲಿಯೇ ಸಾವು, ಪರಾರಿಯಾಗಿದ್ದ ಕಾರ್ ಚಾಲಕ ಅರ್ಧಗಂಟೆಯಲ್ಲಿ ಸೆರೆ…!

ಸ್ಥಳಗಳ ವಿವರ

ವಾರ್ಡ್-ನಂ. 14ರ ವಕೀಲರ ಚಾಳ ಭಾಗ-1, 2 ಸ್ಟೇಷನ್ ರಸ್ತೆ, ಗೋಮ್ಸ್ ಬಿಲ್ಡಿಂಗ್, ಸ್ಟೇಡಿಯಂ, ಮುಲ್ಲಾ ಚಾಳ, ಕಾತರಕಿ ಚಾಳ, ಪಂಚಾಕ್ಷರಿನಗರ ಭಾಗ-1, ಭಾಗ-2, ಭಾಗ-3

ವಾರ್ಡ್-ನಂ. 26 ಕೃಷ್ಣಾ ಟಾಕೀಜ್, ಕಲಾಮಂದಿರ ರಸ್ತೆ, ಅಕ್ಕನಬಳಗ, ಜೆ.ಟಿ.ಮಠ ರಸ್ತೆ, ಅಂಗಡಿಯವರ ಲೈನ್, ಗೊಡಚಿಯವರ ಲೈನ್, ಗವಳಿಯವರ ಲೈನ್, ಜನತಾ ಕಿರಾಣಿ ಲೈನ್, ಸೋಡಾ ಅಂಗಡಿ ಲೈನ್, ಬಂಗಾರ ಶೆಟ್ಟರ ಲೈನ್, ಚಳ್ಳಮರದ ಅವರ ಲೈನ್, ಲಕ್ಷ್ಮೀ ಚಾಳ, ವಾರ್ಡ್-ನಂ 12, 28, ತೋಪಿಯವರ ಲೈನ್, ಮಾಸ್ತರ್ ಲೈನ್, ಉಪ್ಪಿನವರ ಲೈನ್, ಪಟ್ಟಣಶೆಟ್ಟಿ ಅವರ ಲೈನ್, ಗುಳಬಾಳ ಡಾ|| ಲೈನ್, ಶಿವನಗುತ್ತಿ ಲೈನ್,

ವಾರ್ಡ್- ನಂ. 27ರ ಮೇರವಾಡೆ ಮಾಸ್ತರ್ ಲೈನ್, ಬುರಬುರೆ ಲೈನ್, ಉದ್ದಾರ ಮಾಸ್ತರ್ ಲೈನ್, ವಾರ್ಡ್- ನಂ.16ರಲ್ಲಿ ಡೋರಗಲ್ಲಿ, ಡಿ.ಸಿ.ಮಿಲ್ ರಸ್ತೆ, ಡೋರಗಲ್ಲಿ ಭಾಗ-1, ಭಾಗ-2, ವಾರ್ಡ್- ನಂ. 22 ದಖನಿ ಲೈನ್, ಈಶ್ವರ್ ಗುಡಿಲೈನ್, ಗಿರಣಿ ಲೈನ್, ಧಾರವಾಡದವರ ಲೈನ್, ವಾರ್ಡ್- ನಂ. 35ರಲಿ ಆದರ್ಶನಗರ ಜೋಶಿಯವರ ಲೈನ್, ದೊಡ್ಡ ಸರ್ ಮನೆಯವರ ಲೈನ್, 1ನೇ ಕ್ರಾಸ್,

ವಾರ್ಡ್- ನಂ. 20 ಅಂಗನವಾಡಿ ಲೈನ, ಶೌಚಾಲಯ ಲೈನ್, ನಾಗಲಿಂಗ ನಗರ ಭಾಗ-1, ಭಾಗ-2 ಲ, ವಾರ್ಡ್- ನಂ.23 ಮಡಿವಾಳರ ಲೈನ್, ಲಕ್ಕುಂಡಿ ಅವರ ಲೈನ್, ಮಾನ್ವಿಯವರ ಲೈನ್, ಬಾಳಿಕಾಯಿ ಅವರ ಲೈನ್, ಗಣಪತಿ ಗುಡಿ ಲೈನ್, ಜಕ್ಕಲಿಯವರ ಲೈನ್,

ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ಪ್ರಕಟಣೆ ತಿಳಿಸಿದೆ.

ಬಸವೇಶ್ವರ ದೇವಸ್ಥಾನದಲ್ಲಿ ಬೃಹತ್ ನಾಗರಹಾವು ಪ್ರತ್ಯಕ್ಷ

0

ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಉರಗತಜ್ಞ ಸುರೇಶ್…..

ವಿಜಯಸಾಕ್ಷಿ ಸುದ್ದಿ, ಗದಗ

ಇವತ್ತು ಸೋಮವಾರ ಬಸವಣ್ಣನ ದರ್ಶನಕ್ಕೆ ಹೋಗಿದ್ದ ಭಕ್ತರಿಗೆ ನಾಗರಹಾವು ಕಂಡು ಕೆಲಕಾಲ ಗಾಬರಿಬಿದ್ದ ಘಟನೆ ನಡೆದಿದೆ.

ಇದನ್ನೂ ಓದಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ನೀರು ಪೂರೈಕೆಯ ಸ್ಥಳಗಳು

ಗದಗ ತಾಲೂಕಿನ ಚಿಂಚಲಿ ಗ್ರಾಮದ ಗುಡ್ಡದಲ್ಲಿ ಇರುವ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದ ಭಕ್ತರಿಗೆ ಬೃಹತ್ ಆಕಾರದ ನಾಗರಹಾವು ಕಂಡಿದೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಕೆಲಕಾಲ ತೀವ್ರ ಆತಂಕಗೊಂಡರು.

ಗೋಡೆ ಏರಲು ನಾಗರಹಾವು ಪ್ರಯತ್ನ ಮಾಡುತ್ತಲೇ ಇದ್ದರೆ, ಕೆಲ ಯುವಕರು ಅದರ ವಿಡಿಯೋ ಮಾಡುತ್ತಿದ್ದರು. ಅದರಲ್ಲಿ ಒಬ್ಬರು ಪಕ್ಕದ ಕಳಸಾಪೂರ ತಾಂಡಾದ ಉರಗ ತಜ್ಞ ಸುರೇಶನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ.

ಸುರೇಶ್ ಸ್ಥಳಕ್ಕೆ ಬಂದು ಬಸವಣ್ಣನ ಗರ್ಭಗುಡಿಯಲ್ಲಿ ಇದ್ದ ಬೃಹತ್ ನಾಗರಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

ಕಾರ್ ಡಿಕ್ಕಿ; ಇಬ್ಬರು ಸ್ಥಳದಲ್ಲಿಯೇ ಸಾವು, ಪರಾರಿಯಾಗಿದ್ದ ಕಾರ್ ಚಾಲಕ ಅರ್ಧಗಂಟೆಯಲ್ಲಿ ಸೆರೆ…!

ಅಪಘಾತದ ಸುದ್ದಿ ತಿಳಿದು ಸ್ಥಳೀಯರಿಂದ ಪ್ರತಿಭಟನೆ, ಆಕ್ರೋಶ…

ವಿಜಯಸಾಕ್ಷಿ ಸುದ್ದಿ, ಹಾವೇರಿ

ರಸ್ತೆ ಪಕ್ಕದಲ್ಲಿ ನಿಂತವರ ಮೇಲೆ ಕಾರ್ ಹರಿದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಜರುಗಿದೆ.

ಇದನ್ನೂ ಓದಿ ಖಾಸಗಿ ಬಸ್ಸಿನ ಲಗೇಜ್ ಬಾಕ್ಸ್ ನ ಡೋರ್ ಬೈಕ್ ಗೆ ತಾಗಿ ಅಪಘಾತ; ಸ್ಥಳದಲ್ಲಿಯೇ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ನಡೆದ ಈ ದುರ್ಘಟನೆಯಲ್ಲಿ ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದ ಚಿದಾನಂದ ಹಾಗೂ ವಿರೂಪಾಕ್ಷಪ್ಪ ಎಂಬುವರು ಮೃತಪಟ್ಟಿದ್ದಾರೆ.

ಶಿಗ್ಗಾವಿ ಪಟ್ಟಣಕ್ಕೆ ಹೋಗಲು ವಾಹನಕ್ಕೆ ಕಾಯುತ್ತಿದ್ದಾಗ ಏಕಾಏಕಿ ಹಾವೇರಿ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಅಪಘಾತ ಪಡಿಸಿದ ಕಾರ್ ಪರಾರಿಯಾಗಿತ್ತು.  ಮಿಂಚಿನ ಕಾರ್ಯಾಚರಣೆ ನಡೆಸಿದ ಶಿಗ್ಗಾವಿ ಪೊಲೀಸರು ಚಾಲಕನನ್ನು ಅರ್ಧ ಗಂಟೆಯಲ್ಲಿಯೇ ಬಂಧಿಸಿದ್ದಾರೆ.

ಇದನ್ನೂ ಓದಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಯತ್ನ; ಸಿಕ್ಕಿಬಿದ್ದ ಎಂಟು ಜನರ ಗ್ಯಾಂಗ್ …! ಆರು ಜನರ ಬಂಧನ- ಎಸ್ಪಿ

ಕಾರು ಬೆಳಗಾವಿ ಮೂಲದ್ದು ಎಂದು ಪೊಲೀಸರು ತಿಳಿಸಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಜಮಾವಣೆಗೊಂಡು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ  ಓದಿ  ಹಣಕಾಸಿನ‌ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!

ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ನೀರು ಪೂರೈಕೆ ಮಾಡುವ ಸ್ಥಳಗಳು….

ನಗರಸಭೆ ಪೌರಾಯುಕ್ತರಿಂದ ಮಾಹಿತಿ…..

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ದಿ.07-08-23 ರಂದು ಈ ಕೆಳಗಿನ ಸ್ಥಳಗಳಲ್ಲಿ ನೀರು ಪೂರೈಕೆ ಮಾಡಲಾಗುವುದು. ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳಗಳ ವಿವರ

ವಾರ್ಡ್ ನಂ 16, 17, 18ರಲ್ಲಿ ನಮಾಜಿ ಲೈನ್, ಮಣ್ಣಮ್ಮನವರ ಲೈನ್, ಕೋನೇರಿ ಹೊಂಡ ಲೈನ್, ಮೀನದ ಮಾರ್ಕೆಟ್‌ ಲೈನ್, ಚವ್ಹಾಣದವರ ಲೈನ್, ಬಜಾರ್ ಲೈನ್,

ವಾರ್ಡ್ ನಂ 5, ಮತ್ತು 6ರಲ್ಲಿ ಎಸ್.ಬಿ.ನಗರ, ಬಾಳಿಕಾಯಿ ಅವರ ಲೈನ್, ಹೊನ್ನಪ್ಪನವರ ಲೈನ್, ಪಾಟೀಲರ ಲೈನ್, ಕೊಟಗಿ ಮಾಸ್ತರ್ ಲೈನ್, ಚನ್ನಪ್ಪಗೌಡ್ರ ಲೈನ್, ಹಳ್ಳಿಕೇರಿ ಪ್ಲಾಟ್, ಗಣೇಶನಗರ ಭಾಗ-1, 2, 3, 4, ಶಿವನಾಗನಗರ ಭಾಗ-1, 2, 3, 4,

ವಾರ್ಡ್: ನಂ 21, 22, 23ರಲ್ಲಿ ಕಮತರ ಪ್ಲಾಟ್, ಅಕ್ಕಿಯವರ ಪ್ಲಾಟ್, ಮುನವಳ್ಳಿ ಅವರ ಲೈನ್, ಶರಣಪ್ಪರ ಲೈನ್, ಪಾಟೀಲರ ಲೈನ್, ನಾಗಪ್ಪನ ಕಟ್ಟಿ ಲೈನ್, ರಾಚೋಟೇಶ್ವರ ದೇವಸ್ಥಾನದ ಲೈನ್ ಮಡಿವಾಳರ ಲೈನ್, ಜಕ್ಕಲಿಯವರ ಲೈನ್,

ವಾರ್ಡ್ ನಂ 29ರಲ್ಲಿ ಸಾಯಿ ನಗರ, ಪಠಾಣಗಲ್ಲಿ, ವಾರ್ಡ್ ನಂ 33, 35ರಲ್ಲಿ ರಾಮನಗರ, ರಾಧಾಕೃಷ್ಣನಗರ, ವಾರ್ಡ್ ನಂ 35ರಲ್ಲಿ ದೋಭಿಘಾಟ್, 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, ಇ.ಡಬ್ಲ್ಯೂ.ಎಸ್.

(ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ನಗರಸಭೆ ಪ್ರಕಟಣೆಯಲ್ಲಿ ಕೋರಲಾಗಿದೆ.)

ಖಾಸಗಿ ಬಸ್ಸಿನ ಲಗೇಜ್ ಬಾಕ್ಸ್ ನ ಡೋರ್ ಬೈಕ್ ಗೆ ತಾಗಿ ಅಪಘಾತ; ಸ್ಥಳದಲ್ಲಿಯೇ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ

ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ….

ವಿಜಯಸಾಕ್ಷಿ ಸುದ್ದಿ, ರೋಣ

ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬರು ಗಾಯಗೊಂಡ ಘಟನೆ ಬಾದಾಮಿ ರಸ್ತೆಯಲ್ಲಿ ಭಾನುವಾರ ರಾತ್ರಿ ಜರುಗಿದೆ.

ರೋಣ ಪಟ್ಟಣದ ಬಾದಾಮಿ ರಸ್ತೆಯ ಸಾಧು ಅಜ್ಜನ ಮಠದ ಹತ್ತಿರ ಈ ಘಟನೆ ಜರುಗಿದ್ದು, ರೋಣ ಪಟ್ಟಣದ ಶಾಹಿದ್ ಎಂಬ 18 ವರ್ಷದ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸುಮಯ್ಯಬಾನು ಎಂಬ ಯುವತಿ ಗಾಯಗೊಂಡಿದ್ದಾಳೆ.

ಇದನ್ನೂ ಓದಿ ಚಾಲಾಕಿ ಕಳ್ಳರ ಕರಾಮತ್ತು; ಹಿಂಬಾಗಿಲು ಮೂಲಕ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣಗಳು ಲೂಟಿ….!

ಸುಗಮಾ ಖಾಸಗಿ ಬಸ್ಸಿನ ಲಗೇಜ್ ಬಾಕ್ಸ್‌ ನ ಡೋರ್ ಲಾಕ್ ಆಗದೇ ಕ್ರಾಸ್ ನಲ್ಲಿ ಬಸ್ ಟರ್ನ್ ಮಾಡುವಾಗ ಡೋರ್ ಬೈಕ್ ಗೆ ಬಡಿದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಯತ್ನ; ಸಿಕ್ಕಿಬಿದ್ದ ಎಂಟು ಜನರ ಗ್ಯಾಂಗ್ …! ಆರು ಜನರ ಬಂಧನ- ಎಸ್ಪಿ

ಸುದ್ದಿ ತಿಳಿದ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಚಾಲಾಕಿ ಕಳ್ಳರ ಕರಾಮತ್ತು; ಹಿಂಬಾಗಿಲು ಮೂಲಕ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣಗಳು ಲೂಟಿ….!

ಗದಗನಲ್ಲಿ ಮತ್ತೊಂದು ಭಾರಿ ಮನೆಕಳ್ಳತನ ಪ್ರಕರಣ ಬೆಳಕಿಗೆ…..

ವಿಜಯಸಾಕ್ಷಿ ಸುದ್ದಿ, ಗದಗ

ಹಿಂಬಾಗಿಲಿನ ಬೀಗ ತೆಗೆದು ಒಳಹೊಕ್ಕು ಕಳ್ಳರು, ಬೆಡ್ ರೂಮ್ ನಲ್ಲಿದ್ದ ವಾರ್ಡ್ರೋಬ್ ಡ್ರಾದಲ್ಲಿ ಇಟ್ಟಿದ್ದ ಟ್ರಝರಿಯ ಕೀ ತೆಗೆದುಕೊಂಡು ಕಬ್ಬಿಣದ ಟ್ರಝರಿಯ ಬಾಗಿಲು ತಗೆದು 12 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಗದಗ ನಗರದಲ್ಲಿ ಜರುಗಿದೆ.

ಇಲ್ಲಿನ ಕೇಶವ ನಗರದ ಮೂರನೇ ಕ್ರಾಸ್ ನಲ್ಲಿ ಇರುವ ಶ್ರೀಮತಿ ಪ್ರೇಮಾ ಕೋ ಪರ್ವತಗೌಡ ಗೌಡರ ಎಂಬುವವರ ಮನೆಯೇ ಕಳ್ಳತನವಾಗಿದ್ದು, ಚಾಲಾಕಿ ಕಳ್ಳರು, ಮನೆಯ ಹಿಂಬಾಗಿಲಿನ ಮೂಲಕ ಎಂಟ್ರಿ ಹೊಡೆದು ಈ ದುಷ್ಕೃತ್ಯ ನಡೆಸಿದ್ದಾರೆ.

ಗುರುವಾರ ಮಧ್ಯರಾತ್ರಿ 2 ಗಂಟೆಯಿಂದ 6;30. ನಡುವಿನ ಅವಧಿಯಲ್ಲಿ ಈ ಕೃತ್ಯ ಎಸೆಗಿರುವ ಕಳ್ಳರು, ಹಿತ್ತಲು ಬಾಗಿಲಿಗೆ ಹಾಕಿದ ಕೀಲಿಯನ್ನು ಕಿಟಕಿಯ ಬಾಜು ಇಟ್ಟ ಕೀ ಎತ್ತಿ ಬೀಗ ತಗೆದು ಒಳಹೊಕ್ಕಿದ್ದಾರೆ.

ಬೆಡರೂಮ್ ನಲ್ಲಿನ ಟ್ರಝರಿಯ ಬಾಗಿಲು ತಗೆದು ಅದರಲ್ಲಿದ್ದ ಎರಡು ಲಕ್ಷ ರೂ ಮೌಲ್ಯದ 60 ಗ್ರಾಂ ತೂಕದ ಬಂಗಾರದ ಪಾಟ್ಲಿ, ತಲಾ ಒಂದು ಲಕ್ಷ ಎಂಬತ್ತು ಸಾವಿರ ರೂ. ಮೌಲ್ಯದ ಎರಡು- 40 ಗ್ರಾಂ ತೂಕದ ಕಂಗನ್ ಹಾಗೂ ತಾಳಿ ಸರ, ತಲಾ ಒಂದು ಲಕ್ಷ. ಇಪ್ಪತ್ತು ಸಾವಿರ ರೂ. ಮೌಲ್ಯದ ಮೂವತ್ತು ಗ್ರಾಂ ತೂಕದ ಎರಡು ತಾಳಿ ಸರ, ಎಂಬತ್ತು ಸಾವಿರ ರೂ. ಮೌಲ್ಯದ ಇಪ್ಪತ್ತು ಗ್ರಾಂ ತೂಕದ ಎರಡು ಬಂಗಾರದ ನೆಕ್ಲೆಸ್, ಮತ್ತೊಂದು ಒಂದು ಲಕ್ಷ, ಇಪ್ಪತ್ತು ಸಾವಿರ ರೂ. ಮೌಲ್ಯದ ಮೂವತ್ತು ಗ್ರಾಂ ತೂಕದ ನೆಕ್ಲೆಸ್, ನಲವತ್ತು ಸಾವಿರ ರೂ. ಮೌಲ್ಯದ ಹತ್ತು ಗ್ರಾಂ ತೂಕದ ಬಂಗಾರದ ಹವಳದ ಸರ, ಎಂಬತ್ತು ಸಾವಿರ ರೂ. ಮೌಲ್ಯದ ಇಪ್ಪತ್ತು ಗ್ರಾಂ ತೂಕದ ಬಂಗಾರದ ಏಳು ಜೊತೆ ಕಿವಿಯ ರಿಂಗ್, ಇಪ್ಪತ್ತು ಸಾವಿರ ರೂ. ಮೌಲ್ಯದ ಐದು ಗ್ರಾಂ ತೂಕದ ಬಂಗಾರದ ಉಂಗುರಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

ಒಟ್ಟು 12 ಲಕ್ಷ, 60 ಸಾವಿರ ರೂ.ಗಳ ಮೌಲ್ಯದ 305 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿವೆ ಎಂದು ಶ್ರೀಮತಿ ಪ್ರೇಮಾ ಕೋ ಪರ್ವತಗೌಡ ಗೌಡರ ಎಂಬುವರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0108/2023-IPC1860( U/s-457, 380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಯತ್ನ; ಸಿಕ್ಕಿಬಿದ್ದ ಎಂಟು ಜನರ ಗ್ಯಾಂಗ್ …! ಆರು ಜನರ ಬಂಧನ- ಎಸ್ಪಿ

ಸಾಹುಕಾರ್ ಕುಟುಂಬದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಮಾರಾಟಕ್ಕೆ ನಿಂತಿದ್ದ ಚೀಟರ್ಸ್…

ವಿಜಯಸಾಕ್ಷಿ ಸುದ್ದಿ, ಗದಗ

ಯಾರದೋ ಆಸ್ತಿ ಮತ್ತೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಎಂಟು ಜನರಲ್ಲಿ ಆರು ಜನರನ್ನು ಬಂಧಿಸಿಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಭವನದ ಬಳಿ ಇರುವ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿಕೊಡುವ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದು, ಸಬ್ ರಿಜಿಸ್ಟ್ರಾರ್ ಈ ಕುರಿತು ಮೂಲ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಂಟು ಜನ ಆರೋಪಿಗಳಲ್ಲಿ ಆರು ಜನರನ್ನು ಬಂಧಿಸಲಾಗಿದೆ. ತನಿಖೆ ನಡೆಸಿ, ಈ ಪ್ರಕರಣದಲ್ಲಿ ಭಾಗವಹಿಸಿದ ಎಲ್ಲರನ್ನೂ ಬಂಧಿಸಲಾಗುವುದು ಎಂದರು.

ಪ್ರಕರಣದ ವಿವರ

ಕೋಟ್ಯಾಂತರ ರೂ. ಮೌಲ್ಯದ ಜಮೀನನ್ನು ನಮ್ಮದೇ ಜಮೀನು ಎನ್ನುವಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಮತ್ತೊಬ್ಬರಿಗೆ ಮಾರಾಟಕ್ಕೆ ಹೊಂಚು ಹಾಕಿದ್ದ ಗ್ಯಾಂಗ್ ವೊಂದು ಸಬ್ ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ ಹಾಗೂ ಪರಿಚಿತ ವ್ಯಕ್ತಿಗಳ ಸಮಯ ಪ್ರಜ್ಞೆ ಯಿಂದ ಸಿಕ್ಕಿಬಿದ್ದ ಘಟನೆ ಜರುಗಿದೆ.

ಗದಗ ನಗರದ ಪ್ರಸಿದ್ಧ ಮನೆತನವಾದ ಸಾಹುಕಾರ್ ಕುಟುಂಬಕ್ಕೆ ಸೇರಿದ ಹುಬ್ಬಳ್ಳಿ ರಸ್ತೆಯ ಜಿಲ್ಲಾಡಳಿತ ಭವನದ ಹಿಂದೆ ಇರುವ ಕೋಟ್ಯಾಂತರ ರೂ. ಮೌಲ್ಯದ ಜಮೀನನ್ನು ತಮ್ಮದೇ ಜಮೀನು ಅಂತ ಮಾರಾಟಕ್ಕೆ ಮುಂದಾದಾಗ ಸಿಕ್ಕಿ ಬಿದ್ದಿದ್ದಾರೆ.

ಇಲ್ಲಿನ ಜಿಲ್ಲಾಡಳಿತ ಭವನದ ಹತ್ತಿರ ಇರುವ ಕೋಟ್ಯಾಂತರ ರೂ ಮೌಲ್ಯದ ರಿ.ಸ ನಂ 298-20ಎಕರೆ 34 ಗುಂಟೆ ಕೃಷಿ ಜಮೀನನ್ನು, ಪ್ರಕರಣದ ಮುಖ್ಯ ರೂವಾರಿಗಳಾದ ಹಾತಲಗೇರಿ ಗ್ರಾಮದ ಕೃಷ್ಣಗೌಡ ತಂದೆ ಮಲ್ಲನಗೌಡ ಪಾಟೀಲ, ಬಸವರಾಜ್ ತಂದೆ ಸೋಮಪ್ಪ ಮೇಲ್ಮನಿ ಎಂಬುವರು, ಹಾತಲಗೇರಿ ಗ್ರಾಮದ ರಂಗನಗೌಡ ತಂದೆ ಮಲ್ಲನಗೌಡ ಪಾಟೀಲ, ಗದಗ ತಾಲೂಕಿನ ಕದಡಿ ಗ್ರಾಮದ, ಹಾಲಿ ವಸ್ತಿ ಗದಗ ನಿವಾಸಿ ಈಶ್ಚರಪ್ಪ ತಂದೆ ಸಂಗಪ್ಪ ಪೂಜಾರ,

ಬೆಟಗೇರಿಯ ಸುಲೇಮಾನ್ ತಂದೆ ಮೆಹಬೂಬಸಾಬ ಮಾಳೆಕೊಪ್ಪ, ಹಾತಲಗೇರಿ ಗ್ರಾಮದ ಲಕ್ಷ್ಮೀಬಾಯಿ ಕೋ ರಂಗನಗೌಡ ಪಾಟೀಲ, ಹುಬ್ಬಳ್ಳಿ ಮೂಲದ ಹಾತಲಗೇರಿ ನಿವಾಸಿ ಗಂಗಮ್ಮ ಕೋ ಶಿವಾನಂದ ಕರಿಯಣ್ಣವರ, ಹಾತಲಗೇರಿ ಗ್ರಾಮದ ಸವಿತಾ ಕೋ ನಾಗರಾಜ್ ಮೇಲ್ಮನಿ ಇವರ ಆಧಾರ ಕಾರ್ಡ್ ನಲ್ಲಿ

ಜಮೀನಿನ ಮಾಲೀಕರಾದ ಶ್ರೀಧರ್ ದಾಸ ದೇವಿದಾಸ ಸಾಹುಕಾರ್ ಹಾಗೂ ಶೀಲಾಬಾಯಿ ಸಾಹುಕಾರ್, ಯೋಗೇಶ್ ಸಾಹುಕಾರ್ ಎಂಬುವರ ಹೆಸರುಗಳನ್ನು ಎಲ್ಲಿಂದಲೂ ನಮೂದಿಸಿಕೊಂಡು ತಿದ್ದುಪಡಿ ಮಾಡಿಸಿಕೊಂಡು ತಾವೇ ಜಮೀನಿನ ಮಾಲೀಕರು ಅಂತ ಸುಳ್ಳು ಕಾಗದ ಪತ್ರಗಳನ್ನು ಸೃಷ್ಟಿಸಿಕೊಂಡು ನೈಜ ಕಾಗದಪತ್ರಗಳಂತೆ ಗದಗನ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಗೆ ಕೊಟ್ಟು ಮೋಸತನದಿಂದ ಮಾರಾಟ ಅಥವಾ ಖರೀದಿ ಮಾಡಿಸಲು ಯತ್ನಿಸಿದಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಣಕಾಸಿನ‌ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0110/2023-IPC 1860(U/s-120B, 420, 419, 465,467,468, 471 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಗೆ ಟಾಟಾ ಗೂಡ್ಸ್ ವಾಹನ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು..

ಟಾಟಾ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷ್ಯವೇ ಅಪಘಾತ ಕಾರಣ ….!

ವಿಜಯಸಾಕ್ಷಿ ಸುದ್ದಿ, ರೋಣ

ಟಾಟಾ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಶನಿವಾರ ಜರುಗಿದೆ.

ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಡಾಬಾವೊಂದರ ಬಳಿ ಈ ಅಪಘಾತ ಜರುಗಿದ್ದು, ಬೈಕ್ ಸವಾರ ಬೆಳವಣಕಿ ಗ್ರಾಮದ ಬಸವರಾಜ್ ಕುಸುಗಲ್ (39) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಇದನ್ನೂ ಓದಿ ಹಣಕಾಸಿನ‌ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!

ಟಾಟಾ ಗೂಡ್ಸ್ ವಾಹನವು ರೋಣದಿಂದ ಬೆಳವಣಕಿ ಗ್ರಾಮದ ಕಡೆಗೆ ಅತಿ ವೇಗವಾಗಿ ಬಂದು ಎದುರಿಗೆ ಬರುತ್ತಿದ್ದ ಬೈಕ್ ಗ ಡಿಕ್ಕಿಯಾಗಿದೆ. ಟಾಟಾ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಹಣಕಾಸಿನ‌ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!

ಹಳೆಯ ದ್ವೇಷವೂ ಕಾರಣ…..! ದೂರು, ಪ್ರತಿದೂರು ದಾಖಲು…

ವಿಜಯಸಾಕ್ಷಿ ಸುದ್ದಿ, ಗದಗ

ಹಣಕಾಸಿನ ‌ವಿಚಾರವಾಗಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ರಾತ್ರಿ ಮೈನುದ್ದೀನ ತಹಸೀಲ್ದಾರ ಹಾಗೂ ಸಬೀಲ ಬಂಕಾಪೂರ ನಡುವೆ ಹಣಕಾಸಿನ ವಿಚಾರವಾಗಿ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿ ಹೊಡೆದಾಡಿಕೊಂಡಿದ್ದಾರೆ.

ಮೈನುದ್ದೀನ ತಹಸೀಲ್ದಾರ ಹಾಗೂ ಸಬೀಲ ಬಂಕಾಪೂರ ಇವರ ನಡುವೆ ಲಕ್ಷ್ಮೇಶ್ವರದ ಬಸ್ ನಿಲ್ದಾಣ ಬಳಿ ಮೈನುದ್ದೀನ ಈತನು ಸಬೀಲನಿಗೆ ಕೊಟ್ಟ ದುಡ್ಡುನ್ನು ಮರಳಿ ಕೇಳಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.

ಹಲ್ಲೆಗೊಳಗಾದ ಮೈನುದ್ದೀನ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆಗೆ ಹೋದಾಗ ಸಬೀಲ ಬಂಕಾಪೂರನ ಸಂಬಂಧಿಕರಾದ ನೌಶಾದ್ ಮೈನುದ್ದೀನ ಆಡೂರ, ಅಬ್ದುಲ್ ಅಲಿಯಾಸ್ ಅಬ್ದುಲ್ ರಜಾಕ್ ಮೈನುದ್ದೀನ ಆಡೂರು, ಇಸ್ಮಾಯಿಲ್ ಆಡೂರ, ಅತ್ತಾರ ಅಲಿಯಾಸ್ ಅಬ್ದುಲ್ ಸತ್ತಾರ ಆಡೂರ, ಸುಲೇಮಾನ್ ಆಡೂರ ಸೇರಿದಂತೆ ಇನ್ನೂ ಅನೇಕರು ಮತ್ತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಕೈಯಲ್ಲಿ ರಾಡ್, ಚಾಕು ಹಾಗೂ ಬಡಿಗೆಗಳಿಂದ ಮೈನುದ್ದೀನ ಹಾಗೂ ಆತನ ಸಹೋದರರಾದ ಇರ್ಫಾನ್, ಶಾಬುದ್ದೀನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 0109/2023 ಕಲಂ 143,147,148, 323,307, 504, ರೆ.ವಿ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು

ಹಳೆಯ ದ್ವೇಷ ಸಾಧಿಸುತ್ತಾ ಬಂದಿರುವ ಶಾಬುದ್ದೀನ ತಂದೆ ಮಲಿಕಸಾಬ ತಹಶೀಲ್ದಾರ, ಮೈನುದ್ದೀನ ತಹಶೀಲ್ದಾರ, ಇರ್ಫಾನ್ ತಹಶೀಲ್ದಾರ, ಬರಕತ್ ಅಲಿ ಡೋಂಗರಿ‌ ಮುಳಗುಂದ, ಮಕ್ಬೂಲಸಾಬ ಮುಳಗುಂದ ಹಾಗೂ ಇತರರು ಸೇರಿ ನಮ್ಮ ಜೊತೆಗೆ ಆಗಾಗ ತಂಟೆ ತಕರಾರು ದ್ವೇಷ ಇಟ್ಟುಕೊಂಡು ಶುಕ್ರವಾರ ರಾತ್ರಿ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆ ಎದುರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾರೆ ಎಂದು ನೌಶಾದ್ ತಂದೆ ಮೈನುದ್ದೀನ ಆಡೂರ ಎಂಬುವರು ದೂರು ನೀಡಿದ್ದು, 0110/2023, ಕಲಂ 143, 147,148,323,324, 307, 504, ರೆ.ವಿ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ನಿಲ್ದಾಣದ ಬಳಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಹೊಡೆದಾಟದ ದೃಶ್ಯ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ಹೊಡೆದಾಟದಲ್ಲಿ ಗಾಯಗೊಂಡ ಕೆಲವರು ಚಿಕಿತ್ಸೆಗಾಗಿ ಲಕ್ಷ್ಮೇಶ್ವರ ಸರಕಾರಿ ಆಸ್ಪತ್ರೆಗೆ ದಾಖಲಾದರೆ, ಇನ್ನುಳಿದ ಕೆಲವರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

error: Content is protected !!