Home Blog Page 3186

ಗದಗ ಜಿಲ್ಲಾಡಳಿತ ಭವನ ಸೆಲ್ಫಿ, ಫೋಟೊ ಶೂಟ್ ಸ್ಪಾಟ್

0

ಗದಗ: ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಂತಹ ಹಿನ್ನೆಲೆಯಲ್ಲಿ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗುತ್ತಿದೆ.

ಐವತ್ತು ವರ್ಷಗಳ ಹಿಂದೆ ಜರುಗಿದ ಕರ್ನಾಟಕ ನಾಮಕರಣ ಸಂಭ್ರಮೋತ್ಸವದ ಐತಿಹಾಸಿಕ ಕಾರ್ಯಕ್ರಮದ ಮರುಸೃಷ್ಟಿಯ ಕಾರ್ಯಕ್ರಮಕ್ಕೆ ಗದಗ-ಬೆಟಗೇರಿ ಇಡೀ ನಗರ ದೀಪಾಲಂಕಾರ ಹಾಗೂ ಚಿತ್ತಾರಗಳೊಂದಿಗೆ ಮದು ಮಗಳೇ ನಾಚುವಂತೆ ಸಿಂಗಾರಗೊಂಡಿದೆ.

ಅವಳಿ ನಗರದ ವೃತ್ತಗಳು, ಬೀದಿಗಳು, ಜಿಲ್ಲಾಡಳಿತ ಭವನ ಸೇರಿದಂತೆ ಸರಕಾರಿ ಕಚೇರಿಗಳು ದೀಪಾಲಂಕರಗಳೊಂದಿಗೆ ಝಗಮಗಿಸುತ್ತಿವೆ.ಜಿಲ್ಲಾಡಳಿತ ಭವನಕ್ಕೆ ಅಳವಡಿಸಿದ ವಿದ್ಯುತ ದೀಪಾಲಂಕಾರ ಈಗ ಅವಳಿ ನಗರದ ಜನತೆಗೆ ಫೋಟೋ ಹಾಗೂ ಸೆಲ್ಫಿ ಸ್ಟಾಟ್ ಆಗಿದೆ.

ತಡರಾತ್ರಿಯವರೆಗೂ ಅವಳಿ ನಗರದ ಸಾರ್ವಜನಿಕರು ಕುಟುಂಬ, ಸ್ನೇಹಿತರು ತಂಡೊಪತಂಡವಾಗಿ ಜಿಲ್ಲಾಡಳಿತ ಭವನದ ಆಗಮಿಸಿ ಸೆಲ್ಫಿ ಹಾಗೂ ಫೋಟೊ ಶೂಟ್ ಮಾಡಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ನಮ್ಮಲ್ಲಿ ಯಾವುದೇ ಬಣ ಇಲ್ಲ, ಕಾಂಗ್ರೆಸ್ ಬಣ ಅಷ್ಟೇ: ಬೋಸರಾಜು

0

ಮಡಿಕೇರಿ ;- ನಮ್ಮಲ್ಲಿರುವುದು, ಕಾಂಗ್ರೆಸ್ ಬಣವಷ್ಟೇ ಎಂದು ಸಚಿವ ಬೋಸರಾಜು ಹೇಳಿದ್ದಾರೆ. ನಾನು ಸಿದ್ದರಾಮಯ್ಯನವರ ಬಣ ಎಂಬ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇರುವಂತಹ ಶಿಸ್ತೇ ಅಂತಿಮ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆದುಕೊಳ್ಳುತ್ತಾರೆ ಅಷ್ಟೇ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್‌ಗೆ ತಿರುಗೇಟು ನೀಡಿದರು.

ಇದರಲ್ಲಿ ಮುಂದು ಹಿಂದು ಎನ್ನುವ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಅಧಿನಾಯಕರು ಏನು ಹೇಳುತ್ತಾರೆ ಅದರಂತೆ ಎಲ್ಲರೂ ನಡೆದುಕೊಳ್ಳುತ್ತಾರೆ. ಬೇರೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ವಿಚಾರ ಅದೆಲ್ಲವೂ ವಿರೋಧ ಪಕ್ಷದವರ ಸೃಷ್ಟಿ ಅಷ್ಟೇ. ನಮ್ಮ ಸರ್ಕಾರ ಸುಭದ್ರವಾಗಿದೆ. ಎಲ್ಲಾ ಯೋಜನೆಗಳು ಸುಸೂತ್ರವಾಗಿ ಜಾರಿಯಾಗುತ್ತಿವೆ. ಆದರೆ ರಾಜಕೀಯವಾಗಿ ಉಪದ್ರವ ನೀಡುವ ಕೆಲಸಗಳು ಆಗುತ್ತಲೇ ಇರುತ್ತವೆ ಎಂದರು. ಬಿಜೆಪಿ, ಜೆಡಿಎಸ್‌ನವರ ಕುತಂತ್ರಗಳಿಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಜೂಜಾಟ; ಏಳು ಜನರ ಬಂಧನ

0

ಹುಬ್ಬಳ್ಳಿ; ಜೂಜಾಟ ಅಡ್ಡೆಗಳ ಮೇಲೆ ತಾಲ್ಲೂಕಿನ ಕಂಪ್ಲಿಕೊಪ್ಪ ಹಾಗೂ ಕಿರೇಸೂರ ಗ್ರಾಮಗಳಲ್ಲಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.ಕಂಪ್ಲಿಕೊಪ್ಪ ಗ್ರಾಮದ ಕೆರೆ ಬಳಿ ಆರು ಜನ ಜೂಜಾಟದಲ್ಲಿ ತೊಡಗಿದ್ದರು. ಅವರಿಂದ ₹47,210 ಮತ್ತು ಕಿರೇಸೂರ ಗ್ರಾಮದಲ್ಲಿ ಒಬ್ಬನನ್ನು ಬಂಧಿಸಿ ₹5,150 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಎಂ.ಆರ್. ಚನ್ನಣ್ಣವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಪಿಎಸ್‌ಐಗಳಾದ ಸಚಿನ್ ಆಲಮೇಲಕರ, ಚಾಮುಂಡೇಶ್ವರಿ ಡಿ., ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಡಿಕೆಶಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

0

ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬೆಂಗಳೂರಿನಲ್ಲಿರುವ ನನ್ನ ನಿವಾಸಕ್ಕೆ ಗುಂಡಾಗಳನ್ನು ಕಳುಹಿಸಿ ದಬ್ಬಾಳಿಕೆ ಮಾಡಿದ್ದಾನೆ. ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಮಂಗಳವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊತ್ವಾಲ್ ರಾಮಚಂದ್ರನ ಶಿಷ್ಯನಾಗಿ ರಾಜ್ಯದ ಜನರಿಗೆ ತೋರಿಸಿ ಕೊಟ್ಟಿದ್ದಾನೆ. ಈಗಾಗಲೇ ನನ್ನ ಮನೆಯ ಮೇಲೆ ಡಿ.ಕೆ.ಶಿವಕುಮಾರ ಮೇಲೆ ಗೋಕಾಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.

ನನ್ನ ಸಿಡಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಇ- ಮೇಲ್ ಮಾಡಿದ್ದೇನೆ ಎಂದರು.ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ದಾಖಲಾತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ನನ್ನ ಸಿಡಿ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ, ವಿಷ ಕನ್ಯೆ ಹಾಗೂ ಇನ್ನೊಬ್ಬ ವ್ಯಕ್ತಿ ಇದ್ದಾನೆ. ಇದು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ನನ್ನ ಹನಿಟ್ರ‍್ಯಾಪ್ ಮಾಡಿಸಲು ನರಸಿಂಹಮೂರ್ತಿ ಎಂಬುವರನ್ನು ಡಿ.ಕೆ.ಶಿವಕುಮಾರ ಕರೆಸಿದ್ದ ಅವನನ್ನು ಇಲ್ಲಿಯವರೆಗೂ ಕರೆದು ವಿಚಾರಣೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸಿಲ್ಲ, ಜಿಲ್ಲಾಡಳಿತ ವಿಫಲವಾಗಿದೆ: ಕೊತ್ತೂರು ಮಂಜುನಾಥ್

0

ಕೋಲಾರ: ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸಿಲ್ಲ, ಜಿಲ್ಲಾಡಳಿತ ವಿಫಲವಾಗಿದೆ,ನಾವು ಒಪ್ಪಿಕೊಳ್ಳುತ್ತೇವೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಗಡಿ ಜಿಲ್ಲೆ ಅದ್ದೂರಿಯಾಗಿ ಮಾಡಬೇಕಿತ್ತು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿಲ್ಲ. ಸಚಿವ ಭೈರತೀ ಸುರೇಶ್ ಅವರಿಗೆ ಹುಷಾರಿಲ್ಲದ ಕಾರಣ ಬಂದಿಲ್ಲ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ 136 ಜನ ಶಾಸಕರಿದ್ದೇವೆ. ಆಪರೇಷನ್ ಕಮಲ, ಗಿಡ ,ಮರ ಏನೂ ಇಲ್ಲ. ಕಾಂಗ್ರೆಸ್ ಸರ್ಕಾರ ಬೀಳಿಸುವ ಕನಸ್ಸು ಕಾಣೋದು ಬೇಡ ಎಂದು ವ್ಯಂಗ್ಯವಾಡಿದರು.

ರವಿ ಗಾಣಿಗಾ ಅವರಿಗೆ ಆಫರ್ ಬಂದಿರುವ ವಿಚಾರ ಗೊತ್ತಿಲ್ಲ. ನನಗೆ ಆಫರ್ ಕೊಡಲು ಯಾರು ಮುಂದೆ ಬರೋದಿಲ್ಲ ಯಾಕಂದ್ರೆ ನನ್ನ ರೇಟ್ ಬೇರೆ ಇದೆ, ತೆಗೆದುಕೊಳ್ಳುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ, ಅಂತಹವರು ನನ್ನ ಬಳಿ ಬಂದ್ರೆ ಬೀಜ ಕ್ಯೂದು ಹಾಕುತ್ತೇನೆ ಎಂದರು. ಸಚಿವ ಸ್ಥಾನ ಬೇಕು ಅನ್ನೋರು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಲಿ. ಜನ ಆಯ್ಕೆ ಮಾಡಿರೋದು ಕೆಲಸ ಮಾಡೋಕೆ.

ಅನುದಾನ ನಮಗೆ ಕೊಡುತ್ತಿದ್ದಾರೆ, PWD ಇಲಾಖೆಯಿಂದ 20 ಕೋಟಿ ಕೊಟ್ಟಿದ್ದಾರೆ. ನನಗೆ ನಿಗಮ ಮಂಡಳಿ ಬೇಡ,ಮಂತ್ರಿ ಸ್ಥಾನವು ಬೇಡ. 2 ವರೆ ವರ್ಷ ಬಳಿಕ ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಮಾಡೋರು ಮೂರು ಜನ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಡಿಕೆ ಶಿವಕುಮಾರ್ ಮೂವರಿಗೆ ಮಾತ್ರ ಅಧಿಕಾರವಿದೆ. ಅದಲ್ಲದೆ ಸಿಎಂ ಬದಲಾವಣೆ ಪ್ರಶ್ನೆನೇ ಇಲ್ಲ, 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಹೇಳಿದರು.

ವಿತೌಟ್ ದೇವೇಗೌಡ್ರು ಕುಮಾರಸ್ವಾಮಿ ಏನು.?: ಎನ್.ಚೆಲುವರಾಯಸ್ವಾಮಿ

0

ಮಂಡ್ಯ: ನಾನೇನಾದ್ರೂನು ದೇವೇಗೌಡ್ರು ಮಗ ಆಗಿದ್ರೆ ನನ್ನ ರಾಜಕೀಯ ಭವಿಷ್ಯ ಇವತ್ತೆ ಕೊನೆಯಾಗಿದ್ರು ದೇವೇಗೌಡ್ರುಗೆ ನೋವು ಕೊಟ್ಟು ರಾಜಕಾರಣ ಮಾಡ್ತಿರಲಿಲ್ಲ ಎಂದು ಹೆಚ್ಡಿಕೆ ವಿರುದ್ಧ ಮಂಡ್ಯದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಳೆಯ ಪಾರ್ಟಿ ಜೆಡಿಎಸ್, ನಾವಿದ್ದಂತಹ ಪಾರ್ಟಿ ಇವತ್ತು ಹೇಗಾಗಿದೆ.? ದೇವೇಗೌಡ್ರು ಇಲ್ಲಿವರೆಗೆ ಬಿಜೆಪಿ ಜೊತೆ ಎಂತಹ ಕಠಿಣವಾಗಿ ಮಾತನಾಡಿದನ್ನ ನಾನು ರಿಪಿಟ್ ಮಾಡಲ್ಲ.

ಆದ್ರೆ ಬಿಜೆಪಿ ಜೊತೆ ಸೇರಲ್ಲ ಅಂತ ದೇವೇಗೌಡ್ರು ಕಠಿಣವಾಗಿ ಹೇಳಿದ್ದಾರೆ. ಇವತ್ತು ಅವರನ್ನ ಇಳಿವಯಸ್ಸಿನಲ್ಲಿ ನಾನು ಅವರ ಮಗ ಆಗಿದ್ರೆ ನನ್ನ ರಾಜಕೀಯ ಭವಿಷ್ಯ ಇವತ್ತೆ ಕೊನೆಯಾಗಿದ್ರುನು ದೇವೇಗೌಡ್ರುಗೆ ನೋವು ಕೊಟ್ಟು ರಾಜಕಾರಣ ಮಾಡ್ತಿರಲಿಲ್ಲ ಎಂದು ಕಿಡಿಕಾರಿದರು. ಇನ್ನೂ ತಂದೆ ಬದುಕಿರುವುವಾಗಲೆ ಎರಡೂ ಬಾರಿ ಮುಖ್ಯಮಂತ್ರಿಯಾಗಿರುವ ಕರ್ನಾಟಕದಲ್ಲಿ ಇತಿಹಾಸ ಇದ್ಯ, ಯಾರು ಸಹ ಕೆಂಗಲ್ ಹನುಮಂತಯ್ಯರಿಂದ ಇಲ್ಲಿಯವರೆಗೆ ಬದುಕಿದ್ದಂಗೆ ಬೊಮ್ಮಯಿ ತೀರಿಕೊಂಡ ಬಳಿಕ ಬಸವರಾಜು ಬೊಮ್ಮಯಿ ಸಿಎಂ ಆಗಿದ್ದಾರೆ.

ಆದ್ರೆ ಕುಮಾರಸ್ವಾಮಿ ಮಾತ್ರ ಎರಡೂ ಸಲ ಮುಖ್ಯಮಂತ್ರಿಯಾಗಿದ್ದಾರೆ. ವಿತೌಟ್ ದೇವೇಗೌಡ್ರು ಕುಮಾರಸ್ವಾಮಿ ಏನು.? ಅಂತಹ ತಂದೆಗೆ ಮನಸ್ಸಿಗೆ ನೋವು ಮಾಡಿ ಯಾರಿಗೂ ಹೇಳದೆ ಕೇಳದೆ ಓಡೋಗಿ ಅಮಿತ್ ಷಾ ಜೊತೆ ಸೇರ್ತಾರೆ ಅಂದ್ರೆ ಬಿಜೆಪಿ ಜೆಡಿಎಸ್ ನ ಪರಿಸ್ಥಿತಿ ಏನಾಗಿದೆ ಅರ್ಥಮಾಡಿಕೊಳ್ಳಿ ಎಂದು ಹೇಳಿದರು. ನಾವು ಬಹಳ ಸ್ಟ್ರಾಂಗ್ ಇದ್ದೇವೆ. ಬಿಜೆಪಿ-ಜೆಡಿಎಸ್ ಶಕ್ತಿಹಿನರಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಾರೆ ಎಂದು ಕಿಡಿಕಾರಿದರು.

ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ

0

ಬಳ್ಳಾರಿ: ಬಳ್ಳಾರಿಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಟ್ರ್ಯಾಕ್ಟರ್ ಚಲಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಗಮನ ಸೆಳೆದರು.

ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ಸ್ಥಬ್ದ ಚಿತ್ರಗಳ ಮೆರವಣಿಗೆಯಲ್ಲಿ ಟ್ರಾಕ್ಟರ್ ಚಲಾಯಿಸಿದ ಸಚಿವರು, ತಾಯಿ ಭುವನೇಶ್ವರಿ ಭಾವಚಿತ್ರವಿದ್ದ ಟ್ರಾಕ್ಟರ್ ಅನ್ನು ಸಚಿವರು ಚಲಾಯಿಸಿದರು.

ಕೈಯಲ್ಲಿ ಕನ್ನಡದ ಬಾವುಟ ಹಿಡಿದ ಟ್ರಾಕ್ಟರ್ ಹತ್ತಿದ ಸಚಿವ ನಾಗೇಂದ್ರಗೆ ಶಾಸಕ ಭರತ್ ರೆಡ್ಡಿ ಸಾಥ್ ನೀಡಿದರು.

ಕೊನೆಗೂ 2ನೇ ದಿನದ ಕಾರ್ಯಾಚರಣೆಯಲ್ಲಿ ಚಿರತೆ ಸೆರೆ

0

ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆ ನಂತರ ಸೆರೆಹಿಡಿದಿದ್ದಾರೆ. ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದು, ಲೆಪರ್ಡ್ಸ್ ಟಾಸ್ಕ್‌ಫೋರ್ಸ್‌ ವಾಹನಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಸೆರೆ ಹಿಡಿಯುವ ವೇಳೆ ವೈದ್ಯರ ಮೇಲೆಯೇ ದಾಳಿ ನಡೆಸಲು ಮುಂದಾಗಿದೆ. ಸದ್ಯ ಚಿರತೆಗೆ ಸಂಪೂರ್ಣ ಪ್ರಜ್ಞೆ ತಪ್ಪಿಲ್ಲ. ಟಾಸ್ಕ್ಫೋರ್ಸ್ ವಾಹನಕ್ಕೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಟ್ರೇಲರ್ ನಲ್ಲೇ ಎಲ್ಲರ ಗಮನ ಸೆಳೆಯುತ್ತಿದೆ “ಅಥಿ” ಐ ಲವ್ ಯು

0

ಇತ್ತೀಚಿಗೆ ಬರುತ್ತಿರುವ ಕನ್ನಡದ ಹೊಸ ಚಿತ್ರಗಳ ಹೊಸ ಪ್ರಯತ್ನವನ್ನು ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾನೆ. ಅಂತಹುದೆ ಒಂದು ವಿಭಿನ್ನ ಕಥಾಹಂದರ ಹೊಂದಿರುವ “ಅಥಿ” ಐ ಲವ್ ಯು ಚಿತ್ರ ಟ್ರೇಲರ್ ನಲ್ಲೇ ಎಲ್ಲರ ಗಮನ ಸೆಳೆದಿದೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ನನ್ನ ನಿರ್ಮಾಣದ ಎರಡನೇ ಚಿತ್ರವಿದು. ನಿರ್ದೇಶಕ ಲೋಕೇಂದ್ರ ಸೂರ್ಯ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡಿದ್ದೇನೆ. ಸತಿಪತಿಯರ ಸಂಬಂಧದ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇನೆ. ಬಿಡುಗಡೆಯ ಸಮಯದಲ್ಲಿ ನೂತನ ಯೋಜನೆ ಹಾಕಿಕೊಂಡಿದ್ದೇನೆ. ಗಂಡ ಟಿಕೆಟ್ ತೆಗೆದುಕೊಂಡರೆ ಹೆಂಡತಿಗೆ ಟಿಕೆಟ್ ಉಚಿತ ಹಾಗೂ ಹೆಂಡತಿ ಟಿಕೆಟ್ ತೆಗೆದುಕೊಂಡರೆ ಗಂಡನಿಗೆ ಉಚಿತ ಎಂದು ನಿರ್ಮಾಪಕ ರೆಡ್ & ವೈಟ್ ಸೆವೆನ್ ರಾಜ್ ತಿಳಿಸಿದರು.

ಈ ಚಿತ್ರದಲ್ಲಿರುವುದು “ಅಥಿ”ಹಾಗೂ “ವಸಂತ್” ಎಂಬ ಎರಡು ಪಾತ್ರಗಳು ಮಾತ್ರ ಎಂದು ಮಾತು ಆರಂಭಿಸಿದ ಚಿತ್ರದ ನಿರ್ದೇಶಕ ಲೋಕೇಂದ್ರ ಸೂರ್ಯ, ಇದು ಒಂದು ದಿನದಲ್ಲಿ ನಡೆಯುವ ಕಥೆ. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡ ದಿನ ರಾತ್ರಿ ವಾಪಸು ಬರುತ್ತಾನೆ. ಒಂದು ದಿನ ಇದಕ್ಕಿದಂತೆ ಗಂಡ ಮಧ್ಯಾಹ್ನ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಏನು ಮಾಡುತ್ತಿರುತ್ತಾಳೆ? ಎಂಬುದನ್ನು ತೆರೆಯ ಮೇಲೆ ನೋಡಬೇಕು. ನಮ್ಮ ಚಿತ್ರವನ್ನು ಮದುವೆಯಾದ ದಂಪತಿಗಳು ಹಾಗೂ ಪ್ರೀತಿ ಮಾಡುತ್ತಿರುವವರು ನೋಡಿ. ಚಿತ್ರದಲ್ಲಿ ಸಮಾಜಕ್ಕೆ ಒಂದೊಳ್ಳೆ ಉತ್ತಮ ಸಂದೇಶ ಕೊಡುವ ಪ್ರಯತ್ನ‌ ಮಾಡಿದ್ದೇವೆ‌. ನಾನು ನಿರ್ದೇಶನದೊಂದಿಗೆ ನಾಯಕನಾಗೂ ಅಭಿನಯಿಸಿದ್ದೇನೆ. ಸಾತ್ವಿಕ ಈ ಚಿತ್ರದ ನಾಯಕಿ. ಎರಡೇ ಪಾತ್ರಗಳು ಮಾತ್ರ ನಿಮಗೆ ತೆರೆಯ ಮೇಲೆ ಕಾಣುವುದು. ಉಳಿದ ಪಾತ್ರಗಳು ಧ್ವನಿಯ ಮೂಲಕ ಚಿತ್ರಕ್ಕೆ ಜೀವ ತುಂಬಿದೆ‌. ಕಥೆಯನ್ನು ನಾನೇ ಬರೆದಿದ್ದೇನೆ. ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಸದ್ಯದಲ್ಲೇ ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ದಂಪತಿಗಳು ಬಂದು ನೋಡಿ ತಮ್ಮ ಅಭಿಪ್ರಾಯ ತಿಳಿಸಿ ಎಂದರು.

ಸಂಗೀತ ನಿರ್ದೇಶಕ ಅನಂತ್ ಆರ್ಯನ್, ಕಲರಿಸ್ಟ್ ಜೇಕಬ್ ಮ್ಯಾಥ್ಯೂ, ಕಾಸ್ಟ್ಯೂಮ್ ಡಿಸೈನರ್ ಋತು ಚೈತ್ರ, ಕಲಾ‌ ನಿರ್ದೇಶಕ ಕ್ರಿಯೇಟಿವ್ ವಿಜಯ್, ವಿತರಕ ಜೈದೇವ್ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ “ಅಥಿ” ಚಿತ್ರದ ಕುರಿತು ಮಾತನಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ ಖಂಡಿಸಿ ಪ್ರೊಟೆಸ್ಟ್, ಅರೆಸ್ಟ್

0

ಕಲಬುರ್ಗಿ;- ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ ಆರೋಪ ಇದೀಗ ಕೇಳಿ ಬಂದಿದೆ. ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ ಹಿನ್ನಲೆ, ಕಲಬುರಗಿಯಲ್ಲಿ ಎಂಎಸ್ ಪಾಟೀಲ್ ಸೇರಿ ಹಲವರನ್ನು ಬಂಧಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಪಾಟೀಲ್ ಅವರು, ಸರ್ದಾರ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದರು.

error: Content is protected !!