Home Blog Page 3191

ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದ ಸಿದ್ದರಾಮಯ್ಯ

0

ಬೆಂಗಳೂರು: ಮಾಜಿ ಉಪ ಪ್ರಧಾನಿ  ದಿವಂಗತ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ “ರಾಷ್ಟ್ರೀಯ ಏಕತಾ ದಿವಸ” ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಪ್ರತಿಜ್ಞಾ ವಚನ ಬೋಧಿಸಿದರು.

ಇದೇ ವೇಳೆ, ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮನ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪರೀಕ್ಷಾ ಅಕ್ರಮದಲ್ಲಿ ಡೀಲ್ ಆಗಿ ಸರ್ಕಾರಕ್ಕೂ ಪಾಲು ಹೋಗಿದೆ: ರಾಜಕುಮಾರ ಪಾಟೀಲ್ ತೆಲ್ಕೂರ್

0

ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಪ್ರತಿಕ್ರಿಯೇ ನೀಡಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಡೀಲ್ ಆಗಿ ಸರ್ಕಾರಕ್ಕೂಪಾಲು ಹೋಗಿದೆ. ಯಾರ್ಯಾರಿಗೆ ಎಷ್ಪೆಷ್ಟು ಪಾಲು ಹೋಗಿದೆ ಎಲ್ಲ ವಿಚಾರಕ್ಕೂ ತನಿಖೆ ಆಗ್ಲಿಬೇಕು ಆಗ ಸತ್ಯಾಂಶ ಹೊರಗೆ ಬರುತ್ತದೆ ಎಂದರು.

ಇನ್ನೂ ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿದ ನೀವು ಈಗ್ಯಾಕೆ ಮೌನವಾಗಿದ್ದಿರಾ.? ಆಡಳಿತ ಸರಿಪಡಿಸೋದು ಅಂದ್ರೆ ಈ ರೀತಿ ಅಕ್ರಮ ಮಾಡೋದಾ? ಪ್ರಕರಣದ ಕಿಂಗ್ ಪಿನ್ ಬಂಧಿಸಿ ಮಂಪರು ಪರೀಕ್ಷೆ ಮಾಡಿ ಗೊತ್ತಾಗುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿದ್ಯುತ್ ಕೊರತೆ: ನಾಟಲು ತಂದಿಟ್ಟಿದ್ದ ಸಾವಿರಾರು ಬೆಲೆಯ ಉಳ್ಳಾಗಡ್ಡಿ ಸಸಿಗಳು ನಾಶ

0

ಕಲಬುರಗಿ: ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ರೈತ ನಾಟಲು ತಂದಿಟ್ಟಿದ್ದ ಸಾವಿರಾರು ಬೆಲೆಯ ಉಳ್ಳಾಗಡ್ಡಿ ಸಸಿಗಳು ಹಾಳಾದ ಘಟನೆ ಕಲಬುರಗಿಯ ಜಂಬಗಾ ಗ್ರಾಮದಲ್ಲಿ ನಡೆದಿದೆ.

ರೈತ ಗಿರೆಪ್ಪಗೌಡ ತನ್ನ ತೋಟದಲ್ಲಿ ನಾಟಿ ಮಾಡಲು ಎರಡು ಸಾವಿರ ಈರುಳ್ಳಿ ಸಸಿ ತಂದಿದ್ದ.. ಆದ್ರೆ ನಾಟಲು ನೀರಿರಬೇಕು ನೀರು ಹರಿಸಬೇಕು ಅಂದ್ರೆ ಕರೆಂಟ್ ಇರಬೇಕು.

ಆದ್ರೆ ರೈತರ ಪಂಪಸೆಟ್ ಗಳಿಗೆ ಸರ್ಕಾರ ರಾತ್ರಿಯಲ್ಲಿ ವಿದ್ಯುತ್ ಸರಬರಾಜು ಮಾಡ್ತಿದೆ.

ರಾತ್ರಿ ತೋಟಕ್ಕೆ ಹೋಗಲು ವಿಷಜಂತುಗಳು ಹಾಗು ಕಾಡುಪ್ರಾಣಿಗಳ ಕಾಟ.. ಹೀಗಾಗಿ ಹಗಲು ಕರೆಂಟ್ ಕೊಟ್ಟರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಎನ್ನುತ್ತೆ ರೈತ ಬಳಗ.. ಇವೆಲ್ಲ ಕಾರಣಕ್ಕೆ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಸಸಿ ನಾಟುವ ಮುನ್ನವೇ ಒಣಗಿದೆ ಎನ್ನಲಾಗ್ತಿದೆ…

ಟ್ಯಾಂಕರ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರು ಪೂರೈಸುತ್ತಿರುವ ರೈತರು

0

ಬಳ್ಳಾರಿ: ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಕಳೆದ ಒಂದು ವಾರದ ಹಿಂದೆ ಬಿದ್ದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಆಕಾಶ ನೋಡುವಂತಾಗಿದೆ. ಇನ್ನೇನು ಬಿತ್ತನೆಯಾಗಿ ಒಳ್ಳೆಯ ಬೆಳೆ ಬರಬಹುದೆಂದಿದ್ದ ರೈತರಿಗೆ ದಿಕ್ಕೇ ಈಗ ತೋಚದಂತಾಗಿದೆ. ಬಿತ್ತಿದ್ದ ಬೆಳೆ ಚಿಗುರೊಡೆಯದೇ ನೆಲದಲ್ಲೇ ಕಮರುತ್ತಿದೆ. ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಗಣಿನಾಡಿನ ರೈತರು ಹರಸಾಹಸ ಪಡುತ್ತಿದ್ದು, ಟ್ಯಾಂಕರ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರು ಪೂರೈಸುತ್ತಿರುವ ರೈತರು,

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ರಾರಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ. ವೇದಾವತಿ ನದಿ ನೀರು ಹಾಗೂ ಕಾಲುವೆಯ ಕೊನೆ ಭಾಗದಲ್ಲಿ ಮೆಣಸಿಕಾಯಿ, ಹತ್ತಿ ಬೆಳದಿರೋ ರೈತರು, ಈಗಾಗಲೇ ಶೇ 60ರಷ್ಟು ಬೆಳೆ ಮಳೆಯಿದ ಕೈಕೊಟ್ಟಿದೆ, ಉಳಿದ ಶೇ 40ರಷ್ಟು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಒಂದು ಎಕರೆಗೆ ಟ್ಯಾಂಕರ್ ಮೂಲಕ ನೀರು ಹರಿಸಲು 10ರಿಂದ 15ಸಾವಿರ ವೆಚ್ಚ ಮಾಡುತ್ತಿದ್ದಾರೆ.

3 ಸಾವಿರ ಲೀಟರ್ ಹಾಲು ಸುರಿದು ಜೆಸ್ಕಾಂ ಕಚೇರಿಗೆ ಅಭಿಷೇಕ: ಆಕ್ರೋಶ ಹೊರಹಾಕಿದ ಹಾಲಿನ ಡೈರಿ ವ್ಯಾಪಾರಿ

0

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದ ಹಾಲಿನ ಡೇರಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಸುಮಾರು ಮೂರು ಸಾವಿರ ಲೀಟರ ಹಾಲು ಹಾಳಾಗಿವೇ ಡೇರಿ ಮಾಲೀಕರು ನಗರದ ಜೆಸ್ಕಾಂ ಕಚೇರಿ ಎದುರು ತಡ ರಾತ್ರಿ ಹಾಲು ಚೆಲ್ಲಿ ಆಕ್ರೋಶ.

ನಗರದ ಲೋಕಲ್‌ ಫಾರ್ಮ್‌ ಡೇರಿ ಜೆಸ್ಕಾಂಗೆ ₹1.30 ಲಕ್ಷ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿತ್ತು.

ಸೋಮವಾರ ಬೆಳಿಗ್ಗೆ ಡೇರಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಮೂರು ಸಾವಿರ ಲೀಟರ್‌ ಹಾಲು ಕೆಟ್ಟು ಹೋಗಿದೆ. ತೀವ್ರ ನಷ್ಟವಾಗಿದ್ದಕ್ಕೆ ಟಂಟಂ ಮೂಲಕ 25 ಕ್ಯಾನ್‌ಗಳಲ್ಲಿ ಹಾಲು ತಂದು ಜೆಸ್ಕಾಂ ಕಚೇರಿ ಆವರಣದಲ್ಲಿ ಸುರಿದ ಜೆಸ್ಕಾಂ ಅಧಿಕಾರಿ ಈ ಅವಾಂತರಕ್ಕೆ ಕಾರಣ ಎಂದು ಆಕ್ರೋಶ.ನಮ್ಮ ಡೇರಿಯಿಂದ ₹1.30 ಲಕ್ಷ ವಿದ್ಯುತ್‌ ಬಿಲ್‌ ಕಟ್ಟಬೇಕಿತ್ತು.

₹45 ಸಾವಿರ ಕಟ್ಟಿದೆವೆ. ಶುಕ್ರವಾರ ₹50 ಸಾವಿರ ಮೊತ್ತದ ಚೆಕ್‌ ನೀಡಿದ್ದೇವೆ. ಚೆಕ್‌ ಕ್ಲೇಮ್‌ ಮಾಡಿಕೊಳ್ಳದೆ ಏಕಾಏಕಿ ಬಂದು ಬೆಳಿಗ್ಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ನೋಟಿಸ್‌ ಕೂಡ ನೀಡಿಲ್ಲ. ನಿತ್ಯ 25 ಹಳ್ಳಿಗಳ ರೈತರು ನಮಗೆ ಹಾಲು ಮಾರಾಟ ಮಾಡುತ್ತಾರೆ.

ಸಂಗ್ರಹವಾಗಿದ್ದ ಹಾಲು ಹಾಗೂ ಹಾಲಿನ ಇತರೆ ಉತ್ಪನ್ನಗಳು ಹಾಳಾಗಿದ್ದು, ಕನಿಷ್ಟ ₹4 ಲಕ್ಷ ನಷ್ಟವಾಗಿದೆ. ಮಂಗಳವಾರ ಪುನಃ ರೈತರು ಹಾಲು ತೆಗೆದುಕೊಂಡು ಬರುತ್ತಾರೆ. ಕರೆಂಟ್‌ ಇಲ್ಲದ ಕಾರಣ ಸಂಗ್ರಹಿಸಲು ಆಗುವುದಿಲ್ಲ.

ಇದಕ್ಕೆ ಯಾರು ಹೊಣೆ? ನಷ್ಟವನ್ನು ಜೆಸ್ಕಾಂ ಅಧಿಕಾರಿಗಳು ಭರಿಸಬೇಕು ಎಂದು ಡೇರಿ ಮಾಲೀಕರಾದ ಶಾಂತಬಾಯಿ ಹಾಗೂ ಅಜಯ್ ಬಿರಾದಾರ್ ಆಗ್ರಹಿಸಿದ್ದಾರೆ.

ಬೈಕ್ʼಗೆ ಪಿಕಪ್ ವಾಹನ ಡಿಕ್ಕಿ: ಬೈಕ್ ಸವಾರ ಸಾವು

0

ಚಾಮರಾಜನಗರ: ಬೈಕ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್  ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಟರುವ ಘಟನೆ ಚಾಮರಾಜನಗರ ತಾಲೂಕಿನ ತಮಡಹಳ್ಳಿ ಬಳಿ ನಡೆದಿದೆ.ತಾಲೂಕಿನ ತಮ್ಮಡಳ್ಳಿ ಗ್ರಾಮದ ಬಳಿ  ಹೊನ್ನಹಳ್ಳಿಹುಂಡಿ ಗ್ರಾಮದ ದೊಡ್ಡಶೆಟ್ಟಿ( 33) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಕುಟುಂಬ ಸಮೇತರಾಗಿ ಮಾವನ ಮನೆಗೆ ಬಂದು ಸ್ವಗ್ರಾಮ ಹೊನ್ನಹಳ್ಳಿಹುಂಡಿಗೆ ಬೈಕ್‌ನಲ್ಲಿ  ದೊಡ್ಡಶೆಟ್ಟಿ ತೆರಳುತ್ತಿರುವ ಸಂದರ್ಭದಲ್ಲಿ ಪಿಕಪ್ ವಾಹನ ಡಿಕ್ಕಿ ಹಿಡೆದಿದೆ.ಅಪಘಾತದ ವೇಳೆ ಸ್ಥಳದಲ್ಲೇ ಬೈಕ್ ಸಾವರ  ಸಾವನ್ನಪ್ಪಿದ್ದು, ಜೊತೆಯಲ್ಲಿದ್ದ  ಪತ್ನಿ ಹಾಗೂ ಮಗನಿಗೆ ಯಾವುದೇ ಅಪಾಯವಾಗಿಲ್ಲ.ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ.

ಅಂಕಲ್’ನಿಂದ ಲೈಂಗಿಕ ಕಿರುಕುಳ ಪ್ರಕರಣ: ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್

0

ಬೆಂಗಳೂರು: ಲೂಲೂ ಮಾಲ್ ನಲ್ಲಿ ಯುವತಿಗೆ ಅಂಕಲ್’ನಿಂದ ಲೈಂಗಿಕ ಕಿರುಕುಳ ಪ್ರಕರಣ ಹಿನ್ನೆಲೆಯಲ್ಲಿ  ಲುಲು ಮಾಲ್ ಅಧಿಕಾರಿಯಿಂದ ಎಫ್ ಐಆರ್ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ವಿಡಿಯೋ ಆಧರಿಸಿ ದೂರು ನೀಡಲಾಗಿದೆ. ಮಾಲ್ ನ ಎರಡನೇ ಮಹಡಿಯ ಫಂಚುರ್ ಗೇಮ್ ಫ್ಲೋರ್ ನಲ್ಲಿ ನಡೆದ ಘಟನೆಯಾಗಿದ್ದು  ಅಕ್ಟೋಬರ್ 29ರ ಸಂಜೆ 6:30 ರ ಸುಮಾರಿಗೆ ಘಟನೆ ನಡೆದಿದ್ದು,

ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿ ಯುವತಿ ಹಿಂಬದಿಯಲ್ಲಿ ಬಂದು ಅಸಭ್ಯ ವರ್ತನೆ ತೋರಿದ ಕಾಮುಕ ಅಂಕಲ್, ಇದನ್ನು ಮತ್ತೊಬ್ಬ ಗ್ರಾಹಕರು ವಿಡಿಯೋ ಚಿತ್ರಿಕರಿಸಿದ್ದಾರೆ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಹೀಗಾಗಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಗಡಿರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ ಅಧಿಕಾರಿ ದೂರು ಹಿನ್ನಲೆ ಮಾಗಡಿರಸ್ತೆ ಠಾಣೆಯಲ್ಲಿ ಎಫ್ ಐ ಆರ್  ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಾಗಡಿರಸ್ತೆ ಪೊಲೀಸರು.

ಹುಬ್ಬಳ್ಳಿ- ಧಾರವಾಡ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟ: ಪರೋಕ್ಷವಾಗಿ ಅಬ್ಬಯ್ಯ ಅಸಮಾಧಾನ

0

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್‌ ಸಮಿತಿಯಲ್ಲಿ ಭಿನ್ನಮತ ಸ್ಪೋಟ್ ಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಮಾಡೋರ ವಿರುದ್ದ ಕೈ ಶಾಸಕ ಪ್ರಸಾದ್ ಅಬ್ಬಯ್ಯ ಗರಂ ಆದ ಬೆನ್ನಲ್ಲೇ ಪಕ್ಷದ ವಿರೋಧಿಗಳ ನಿದ್ದೆಗೆಡಿಸಿದೆ.

ಒಂದು ಕಡೆ ರಾಜ್ಯ ನಾಯಕರ ನಡುವೆ ಬಂಡಾಯ, ಇತ್ತ ಲೋಕಲ್‌ನಲ್ಲೂ ಭಿನ್ನಮತ ಸ್ಪೋಟಗೊಂಡಿದೆ.

ಕಾಂಗ್ರೆಸ್‌ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಕೆಲ ಬ್ಲಾಕ್ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ನಾಯಕರ ವಿರುದ್ದ ಪರೋಕ್ಷವಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಅಬ್ಬಯ್ಯ ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ 2024 ಹಾಗೂ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಬೆನ್ನಲ್ಲೇ ಸಾಕಷ್ಟು ಆಕ್ರೋಶಕ್ಕೆ ಸಹ ಕಾರಣವಾಗಿದೆ.

ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ಒಂದು ಕಡೆ ಭಿನ್ನಮತ ಸ್ಪೋಟ್ ಆಗಿದ್ದು, ಇನ್ನೊಂದು ಕಡೆ ಶಾಸಕರ ನಡೆ ಕುರಿತು ಸಹ ಕಾರ್ಯಕರ್ತರಲ್ಲಿ ಒಳಗೊಳಗೆ ಆಕ್ರೋಶಕ್ಕೆ ಕಾರಣವಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಮಾಡೋರನ್ನ ನಾನು ಬಿಡೋದಿಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ ಶಾಸಕ ಅಬ್ಬಯ್ಯ, ಪಕ್ಷದಲ್ಲಿ ಇದ್ದು ದ್ರೋಹ‌ ಮಾಡಿದವರನ್ನು ನಾನು ಕ್ಷಮಿಸೋದಿಲ್ಲ.

ಅವರನ್ನು ನಾನು ಪಕ್ಷದಲ್ಲಿ‌ ಉಳಿಸಿಕೊಳ್ಳುವುದಿಲ್ಲ ಎಂದಿದ್ದು ಮುಂದಿನ ಬೆಳವಣಿಗೆ ಸಹ ಸಾಕಷ್ಟು ಕುತೂಹಲ ಮೂಡಿಸಿದೆ.

ಕೆಲ‌ ಕಾರ್ಪೋರೇಟರ್‌ಗಳು ಭಾರತೀಯ ಜನತಾ ಪಕ್ಷದ ನಾಯಕರ ಸಂಪರ್ಕದಲ್ಲಿರುವ ಹಿನ್ನಲೆಯಲ್ಲಿ ಶಾಸಕ ಅಬ್ಬಯ್ಯ ಗರಂ ಆಗಿದ್ದಾರೆ.

ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಪಕ್ಷ ವಿರೋಧಿ ಚಟುವಟಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನಲೆ: ಪಿಡಬ್ಲೂಡಿ ಇಲಾಖೆಯಿಂದ ಗುಂಡಿ ಮುಚ್ಚುವ ಕೆಲಸ

0

ಮಂಡ್ಯ: ಮಂಡ್ಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಮಂಡ್ಯ ನಗರದ ಖಾಸಗಿ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯುತ್ತಿರುವ ಪತ್ರಕರ್ತರ ಅಂತರ್ ಜಿಲ್ಲಾ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಮಂಡ್ಯಕ್ಕೆ ಸಿಎಂ‌ ಸಿದ್ದರಾಮಯ್ಯ ಆಗಮನ‌ ಹಿನ್ನಲೆ ತರಾತುರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಇಷ್ಟು ದಿನ ಜನರು ಬಿದ್ದು ಎದ್ದರು ಕ್ಯಾರೆ ಎನ್ನದ ಜಿಲ್ಲಾಡಳಿತ ಇದೀಗ ಬರ್ತಾವ್ರೆ ಅಂದಿದ್ದೆ ತಡ ಗುಂಡಿ‌ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ.

ಜಿಲ್ಲಾಡಳಿತದ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಿಎಂ ಸಂಚರಿಸುವ ರಸ್ತೆಯಲ್ಲಿ ಮಾತ್ರ ಗುಂಡು ಮುಚ್ಚುತ್ತಿರುವ ಪಿಡಬ್ಲೂಡಿ ಇಲಾಖೆ.

ಕಾರ್ಮಿಕರಿಗೆ ಕನಿಷ್ಠ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳದೆ ಕೆಲಸ ಮಾಡ್ತಿರುವ PWD ಇಲಾಖೆ, ಆದ್ದರಿಂದ ಜಿಲ್ಲಾಡಳಿತದ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ.

ಚಿನ್ನದ ನಾಡಿನಲ್ಲಿ ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ..!

0

ಕೋಲಾರ: ಕೋಲಾರದಲ್ಲಿ‌ ಶ್ವೇತ ಬಣದ ನಾಗರಹಾವು(ಬಿಳಿ ನಾಗರಹಾವು) ಪತ್ತೆಯಾಗಿದೆ. ಕೋಲಾರದ ಮುನೇಶ್ವರ ನಗರದ ರವೀಂದ್ರ ಮನೆಯಲ್ಲಿ 6 ಅಡಿ ಉದ್ಧದ ಶ್ವೇತ ಬಣ್ಣದ ನಾಗರಹಾವು ಕಾಣಿಸಿಕೊಂಡಿತ್ತು.

ಅಪರೂಪದ‌ ಬಿಳಿನಾಗರ ಹಾವನ್ನು ನೋಡಲು ಜನ ಮುಗಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರುಗರಕ್ಷಕ ರವಿ ನಾಗರವನ್ನು ಸುರಕ್ಷಿತವಾಗಿ ರಕ್ಷಿಸಿ, ಕೋಲಾರದ ಅಂತರಗಂಗೆ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.

error: Content is protected !!