Home Blog Page 3194

ರಾಯಚೂರು: ನಿರ್ಮಿತಿ ಕೇಂದ್ರದ ಯೋಜನಾ ನಿದೇರ್ಶಕನ ಮನೆ ಮೇಲೆ ದಾಳಿ

0

ರಾಯಚೂರು: ಕರ್ನಾಟಕದ ಹಲವೆಡೆ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಜ್ಯದಲ್ಲಿ ಏಕಕಾಲದಲ್ಲಿ 90 ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅದೇ ರೀತಿ ನಿರ್ಮಿತಿ ಕೇಂದ್ರದ ಯೋಜನಾ ನಿದೇರ್ಶಕನ ಶರಣ ಬಸವ ಪಟ್ಟೇದ್ ಮನೆ ಮೇಲೆ ದಾಳಿ ನಡೆಸಲಾಗಿದೆ.

ಕ್ಯಾಶೋಟಕ್ ಯೋಜನ ನಿರ್ದೇಶಕ ಶರಣಬಸವ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ರೇಡ್ ಮಾಡಲಾಗಿದ್ದು, ಗಂಗಾಪರಮೇಶ್ವರಿ ಕಾಲೋನಿ, ಐಡಿಎಸ್ ಎಂಟಿ ಲೇಔಟ್ ಮನೆ ಸೇರಿ ಲೋಕಾಯುಕ್ತ ಎಸ್ಪಿ ಡಾ. ರಾಮ್ ಎಲ್ ಅರಸಿ ಅವರ ನೇತೃತ್ವದಲ್ಲಿ ನಾಲ್ಕು ಕಡೆ ದಾಳಿ ಮಾಡಲಾಗಿದೆ.

ಬೆಳ್ಳಂಬೆಳ್ಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್..!

0

ಮಂಡ್ಯ :- ಸೋಮವಾರ ಬೆಳ್ಳಂಬೆಳ್ಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಆಸ್ತಿ ಮೀರಿ ಆದಾಯ ಗಳಿಸಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲೂ ಕೂಡ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗೆ ಶಾಕ್ ನೀಡಿದ್ದಾರೆ.

ಬೆಂಗಳೂರಿನ ಕೆಐಎಡಿಬಿ ಇಂಜಿನಿಯರ್ ಶಶಿಕುಮಾರ್ ಅವರ ಮನೆ ಹಾಗೂ ತೋಟದ ಮನೆಗಳಿಗೆ 10 ಕ್ಕೂ ಹೆಚ್ಚು ಅಧಿಕಾರಿಗಳೂ ಬೆಳಿಗಿನ ಜಾವ 4.30 ರ ವೇಳೆಗೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿಯ ಕೊಳಚೆ ನಿರ್ಮೂಲನಾ ಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಾಲರಾಜ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕಲಬುರಗಿಯಲ್ಲಿ ನಡೆಯಲಿದೆ ಪ್ರಿಯಾಂಕ್ ಖರ್ಗೆ ಕಪ್ ಕ್ರಿಕೆಟ್ ಪಂದ್ಯಾವಳಿ

0

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಕ್ರಿಕೆಟ್ ಕಪ್ ಪಂದ್ಯಾವಳಿ ಕಲಬುರಗಿಯಲ್ಲಿ ನಡೆಯಲಿದೆ. ನವೆಂಬರ್ 3 ರಂದು ಬೆಳಿಗ್ಗೆ 10 ಗಂಟೆಗೆ ಎನ್ ವಿ ಕಾಲೇಜ್ ಮೈದಾನದಲ್ಲಿ ಪಂದ್ಯ ಉದ್ಘಾಟನೆಯಾಗಲಿದೆ.. KKRDB ಅಧ್ಯಕ್ಷ ಹಾಗು ಜೇವರ್ಗಿ ಶಾಸಕ ಡಾ ಅಜಯ್ ಸಿಂಗ್ ಪಂದ್ಯಕ್ಕೆ ಚಾಲನೆ ಕೊಡಲಿದ್ದಾರೆ.

ಸತತ 19 ದಿನಗಳ ಕಾಲ ಹಲವು ತಂಡಗಳು ಪಂದ್ಯದಲ್ಲಿ ಭಾಗಿಯಾಗಲಿದ್ದು 22 ರಂದು ಸಮಾರೋಪ ನಡೆಯಲಿದೆ.ಯಾರೇ ಭಾಗಿಯಾಗಲು ನೊಂದಣಿ ಉಚಿತವಾಗಿದೆ.. ಗೆದ್ದ ಎರಡು ತಂಡಗಳಿಗೆ ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ.

ಹಳ್ಳಿ ಯುವಕರಲ್ಲಿ ಕ್ರೀಡಾ ಮನೋಭಾವನೆ ಹೆಚ್ಚಿಸಲು ಪಂದ್ಯ ಹಮ್ಮಿಕೊಳ್ಳಲಾಗಿದೆ ಅಂತ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಪ್ರವೀಣ್ ಹರವಾಳ್ & ಕಿರಣ್ ದೇಶಮುಖ್ ತಿಳಿಸಿದ್ದಾರೆ..

ನಮಗೆ ಸಹಕರಿಸಿದ ಸಮಾಜದ ಪರವಾಗಿ ನಾವುಗಳು ಶ್ರಮಿಸಬೇಕು: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಅವಕಾಶ ಸಿಕ್ಕರೆ ಎಲ್ಲರೂ ಮೇಧಾವಿಗಳಾಗ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದಪ್ರೇರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅವಕಾಶ ಸಿಕ್ಕರೆ, ಶಿಕ್ಷಣದ ಅನುಕೂಲಗಳು ಸಿಕ್ಕರೆ ಎಲ್ಲರ ಪ್ರತಿಭೆಗಳೂ ಹೊರಗೆ ಬರುತ್ತದೆ. ಆದ್ದರಿಂದ ಸ್ವಾಭಿಮಾನಿಗಳಾಗಿ, ಉತ್ತಮ ಪ್ರಜೆಗಳಾಗಿ ಬಾಳಲು ಶಿಕ್ಷಣ ಅತ್ಯಂತ ಅಗತ್ಯ. ಎಲ್ಲರೂ ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಪಡೆಯಲು ಸಹಕರಿಸಿ ಎಂದು ಕರೆ ನೀಡಿದರು.

ನಮಗೆ ಸಹಕರಿಸಿದ ಸಮಾಜದ ಪರವಾಗಿ ನಾವುಗಳು ಶ್ರಮಿಸಬೇಕು. ಶ್ರಮ ಮತ್ತು ಗುರಿ ಇಲ್ಲದೇ ಹೋದರೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. ಬ್ರಿಟೀಷರು ಬರುವ ಮೊದಲು ಶೂದ್ರ ಸಮುದಾಯಗಳಿಗೆ ಶಿಕ್ಷಣ, ವಿದ್ಯೆ ನಿಷೇಧಿಸಲಾಗಿತ್ತು‌.

ಮುಂದುವರೆದ ಜಾತಿಗಳ ಹೆಣ್ಣುಮಕ್ಕಳಿಗೂ ಮೊದಲು ವಿದ್ಯೆ ಕೊಡುವಂತಿರಲಿಲ್ಲ. ಅಂಬೇಡ್ಕರ್ ಅವರು ಶೂದ್ರ ಸಮುದಾಯ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಿದರು. ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ: ವೀರಪ್ಪ ಮೊಯ್ಲಿ

0

ಬೆಳಗಾವಿ: ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಯುವನಿಧಿಯನ್ನ ಜನವರಿಯಿಂದ ಜಾರಿ ಮಾಡುತ್ತೇವೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸುಭದ್ರವಾಗಿದೆ, ಚಟುವಟಿಕೆ ಇದ್ದ ಪಕ್ಷ ನಮ್ಮದು, ವಿರೋಧ ಪಕ್ಷದ ನಾಯಕರಿಲ್ಲದೇ ಬಿಜೆಪಿ ಡೆಡ್ ಆಗಿದೆ ಎಂದರು. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮೊಯ್ಲಿ, ನಾನು ಹೈಕಮಾಂಡ್ ಅಲ್ಲ. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ ದುಬೈ ಪ್ರವಾಸಕ್ಕೆ ಹೋಗುವ ವಿಚಾರದ ಬಗ್ಗೆ ಮಾತನಾಡಿ, ಸತೀಶ ಜಾರಕಿಹೊಳಿ ಜೊತೆ ನಾನು ಯಾವುದೇ ಚರ್ಚೆ ನಡೆಸಿಲ್ಲ. ಅವರ ವೈಯಕ್ತಿಕ ವಿಚಾರಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಾನು ಅಧಿಕ ಪ್ರಸಂಗದ ರಾಜಕಾರಣಿ ಅಲ್ಲ ಎಂದು ಹೇಳಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ ಮನೆಯಲ್ಲಿ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ಹೇಳಿಕೆ ನೀಡಿ, ಡಿನ್ನರ್ ಗೆ ಎಲ್ಲರನ್ನೂ ಕರೆಯಬೇಕು ಅಂತೇನಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿದ ಬಗ್ಗೆ ಪರಮೇಶ್ವರ್ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.

 

ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿಯ ಕೊಲೆ..! ನಾಲ್ವರು ಅರೆಸ್ಟ್

0

ಚಿಕ್ಕಬಳ್ಳಾಪುರ: ಬೈಕ್ ರಿಪೇರಿ ಹಣದ ವಿಚಾರದಲ್ಲಿ ನಡೆದ ಗಲಾಟೆ ಬೈಕ್ ಮಾಲೀಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಗೌರಿಬಿದನೂರಿನ ಚನ್ನಬೈರನಹಳ್ಳಿಯಲ್ಲಿ ನಡೆದಿದೆ.

ಚನ್ನಬೈರನಹಳ್ಳಿಯ ಸತ್ಯನಾರಾಯಣ (45) ಹತ್ಯೆಯಾದ ವ್ಯಕ್ತಿ. ಮೆಕ್ಯಾನಿಕ್ ಚೇತನ್ ಆತನ ಸ್ನೇಹಿತ ಜ್ವಾಲೇಂದ್ರ, ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಲ್ಲೋಡಿ ಎಂಬಲ್ಲಿ ಚೇತನ್ ಗ್ಯಾರೆಜ್ ನಡೆಸುತ್ತಿದ್ದ. ಈತನ ಬಳಿ ಹತ್ಯೆಗೀಡಾದ ಸತ್ಯನಾರಾಯಣ ಬೈಕ್ ರಿಪೇರಿ ಮಾಡಿಸಿ ಹಣ ಕೊಟ್ಟಿರಲಿಲ್ಲ. ತನಗೆ ಬರಬೇಕಿದ್ದ ಹಣದ ವಸೂಲಿಗೆ ಚೇತನ್ ಹಾಗೂ ಸ್ನೇಹಿತರು ಆತನ ಮನೆಯ ಬಳಿಗೆ ಹೋಗಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸತ್ಯನಾರಾಯಣ ದೊಣ್ಣೆಯಿಂದ ಚೇತನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಅದೇ ದೊಣ್ಣೆಯನ್ನು ಚೇತನ್‍‌ನ ಸ್ನೇಹಿತ ಜ್ವಾಲೇಂದ್ರ ಎಂಬಾತ ಕಸಿದುಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಸತ್ಯನಾರಾಯಣ ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಆತ ಸಾವಿಗೀಡಾಗಿದ್ದಾನೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ರಿಪೇರಿ ಹಣ ವಿಚಾರಕ್ಕೆ ‌ನಡೆದ ಗಲಾಟೆ ಸಾವಿನಲ್ಲಿ ಅತ್ಯವಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ..

ಅತಿ ದೊಡ್ಡ ಹೈಪರ್ ಮಾರ್ಕೆಟ್ ಗೆ ಸಚಿವ ಕೃಷ್ಣ ಭೈರೇಗೌಡ ಚಾಲನೆ

0

ಲಾಯಲ್ ವರ್ಲ್ಡ್ ಮಾರ್ಕೆಟ್ ನ ಎರಡನೇ ಶಾಖೆ ಬೆಂಗಳೂರಿನ ಹೆಬ್ಬಾಳದ ಫೀನಿಕ್ಸ್ ಮಾಲ್ ಆಫ್ ಏಷ್ಯಾ ನಲ್ಲಿಂದು ಶುಭಾರಂಭಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಲಾಯಲ್ ವರ್ಲ್ಡ್ ಮಾರ್ಕೆಟ್ ಗೆ ಚಾಲನೆ‌ ನೀಡಿದರು.

ಈ ಸಂದರ್ಭದಲ್ಲಿಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. ದೈನಂದಿನ ಅಗತ್ಯ ವಸ್ತುಗಳ ಲಾಯಲ್ ವರ್ಲ್ಡ್ ಮಾರ್ಕೆಟ್ ಈಗಾಗಲೇ ಬೆಂಗಳೂರಿನ ವೈಟ್ ಫೀಲ್ಡ್ ಹಾಗೂ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಫೀನಿಕ್ಸ್ ಮಾಲ್ ಆಫ್ ಏಷ್ಯಾ ದಲ್ಲಿರುವ ಲಾಯಲ್ ವರ್ಲ್ಡ್ ಮಾರ್ಕೆಟ್ 25 ಸಾವಿರ ಚದರ ಅಡಿಯಷ್ಟು ವಿಸ್ತಾರವಿದ್ದು, ಒಂದು ಲಕ್ಷಕ್ಕೂ ಅಧಿಕ 100 ವಿಭಾಗಗಳ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬ್ರ್ಯಾಂಡ್ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ.ಲಾಯಲ್ ವರ್ಲ್ಡ್ ಮಾರ್ಕೆಟ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಇದು ಬ್ರೆಡ್, ಟೋಸ್ಟ್‌ಗಳು, ಚೌಕ್ಸ್ ಪೇಸ್ಟ್ರಿಗಳು ಮತ್ತು ಖಾರದ ಟ್ರೀಟ್‌ಗಳಂತಹ ವಿವಿಧ ತಾಜಾ ಉತ್ಪನ್ನಗಳು.

ಹಾಗೆಯೇ ಪ್ರಪಂಚದಾದ್ಯಂತದ ಅತ್ಯುತ್ತಮ ಹಣ್ಣುಗಳು ಇಲ್ಲಿ ದೊರೆಯುತ್ತವೆ. ಯಾವುದೇ ವಯೋಮಾನದವರು ಬಂದರು ವಸ್ತುಗಳನ್ನು ಕೊಂಡುಕೊಳ್ಳಲು ಗೊಂದಲವಾಗುವುದಿಲ್ಲ. ಕ್ವಾಲಿಟಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಮೇಯ ಇಲ್ಲಿ ಇಲ್ಲವೇ ಇಲ್ಲ.

ಒಂದೇ ಸೂರಿನಡಿ ವಿವಿಧ ರೀತಿಯ ದೈನಂದಿನ ವಸ್ತುಗಳ ದೊರೆಯುತ್ತದೆ. ಅದರಲ್ಲೂ ಬೇಕರಿ ಉತ್ಪನ್ನಗಳಾದ ಕೇಕ್, ಬನ್, ಬ್ರೆಡ್ ಹಾಗೂ ಐಸ್ ಕ್ರೀಮ್ ರುಚಿ ಅದ್ಭುತವಾಗಿದೆ. ಹೊರಗಡೆ ಮಾರುಕಟ್ಟೆಗಿಂತ ಇಲ್ಲಿ ಕಡಿಮೆ ದರದಲ್ಲಿ ತರಕಾರಿಗಳು ಸಿಗುತ್ತವೆ.

ಸಖತ್ ಫ್ರೆಶ್ ಎನಿಸುವ ಉತ್ಪನ್ನಗಳು ದೊರೆಯುತ್ತಿವೆ. ದುಬೈ ಮಾಲ್ ರೀತಿ ಲಾಯಲ್ ವರ್ಲ್ಡ್ ಮಾರ್ಕೆಟ್ ಫೀಲ್ ಕೊಡುತ್ತದೆ ಎನ್ನುತ್ತಾರೆ ಗ್ರಾಹಕರು.

ಖ್ಯಾತ ಕಬ್ಬಡಿ ಆಟಗಾರ ’ಅರ್ಜುನ್ ಚಕ್ರವರ್ತಿ’ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್

ಅರ್ಜುನ್ ಚಕ್ರವರ್ತಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿ ನಿಂತು, ಪದಕವನ್ನು ಹಿಡಿದುಕೊಂಡು ಮೈಕ್ ಮುಂದೆ ತಮ್ಮ ಗೆಲುವಿನ ಕ್ಷಣವನ್ನು ಅರ್ಜುನ್ ಚಕ್ರವರ್ತಿ ವಿವರಿಸಿದ್ದಾರೆ.

ವಿಕ್ರಾಂತ್ ರುದ್ರ ನಿರ್ದೇಶನದ ವಿಜಯ ರಾಮರಾಜು ಅರ್ಜುನ್ ಚಕ್ರವರ್ತಿಯಾಗಿ ನಟಿಸಿದ್ದು, ಸಿಜಾ ರೋಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಅರ್ಜುನ್ ಚಕ್ರವರ್ತಿ , 1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಬಡ್ಡಿ ಆಟಗಾರ ನೈಜ ಕಥೆಯನ್ನು ಆಧರಿಸಿದೆ. ಒಬ್ಬ ಕ್ರೀಡಾಪಟುವಿನ ಜೀವನದ ಹೋರಾಟಗಳು ಮತ್ತು ಗೆಲುವಿನ ಸುತ್ತಾ ಸಿನಿಮಾ ಸಾಗುತ್ತದೆ.

ಪೋಷಕ ಪಾತ್ರಗಳಲ್ಲಿ ಅಜಯ್, ದಯಾನಂದ ರೆಡ್ಡಿ, ಅಜಯ್ ಘೋಷ್ ಮತ್ತು ದುರ್ಗೇಶ್ ಇದ್ದಾರೆ.

ವಿಘ್ನೇಶ್ ಬಾಸ್ಕರನ್ ಸಂಗೀತ ಮತ್ತು ಜಗದೀಶ್ ಚೀಕಾಟಿ ಛಾಯಾಗ್ರಹಣವಿದೆ. ಗ್ಯಾನೆಟ್ ಸೆಲ್ಯುಲಾಯ್ಡ್ ಅಡಿಯಲ್ಲಿ ನಿರ್ಮಾಪಕ ಶ್ರೀನಿ ಗುಬ್ಬಾಳ ಚಿತ್ರಕ್ಕೆ ಹಣ ಹಾಕಿದ್ದಾರೆ. ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಲಾಗುತ್ತದೆ.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಶ್ರೀನಿ ಗುಬ್ಬಾಳ, ಅರ್ಜುನ್ ಚಕ್ರವರ್ತಿ: ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್” ಕೇವಲ ಸಿನಿಮಾವಲ್ಲ. ಸವಾಲುಗಳನ್ನು ಮೀರಿ ಎದ್ದುನಿಲ್ಲುವ ಮತ್ತು ನಮಗೆಲ್ಲರಿಗೂ ಸ್ಫೂರ್ತಿ ನೀಡುವ ವ್ಯಕ್ತಿಗಳ ಅದಮ್ಯ ಮನೋಭಾವಕ್ಕೆ ಗೌರವವಾಗಿದೆ.

ಅರ್ಜುನ್ ಚಕ್ರವರ್ತಿ ಸಿನಿಮಾ ಮೂಲಕ ನಾವು ಮಾನವ ಇಚ್ಛೆಯ ಶಕ್ತಿಯನ್ನು ಮತ್ತು ಮಾನವ ಆತ್ಮದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

‘TRP ರಾಮ’ ಸಿನಿಮಾದಿಂದ ಬಂತು ಧರೆಗೆ ದೊಡ್ಡವಳು ಹಾಡು…ನ.3ಕ್ಕೆ ತೆರೆಗೆ ಬರ್ತಿದೆ ಮಹಾಲಕ್ಷ್ಮಿ ಕಂಬ್ಯಾಕ್ ಚಿತ್ರ

0

ಟ್ರೇಲರ್ ಮೂಲಕ ಭಾರೀ ಸದ್ದು ಮಾಡಿರುವ TRP ರಾಮ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ನವೆಂಬರ್ 3ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಹಿರಿಯ ನಟಿ ಮಹಾಲಕ್ಷ್ಮಿ ಕಂಬ್ಯಾಕ್ ಮಾಡ್ತಿರುವ TRP ರಾಮ ಸಿನಿಮಾದ ಧರೆಗೆ ದೊಡ್ಡವಳು ಎಂಬ ಹಾಡು ಅನಾವರಣಗೊಂಡಿದೆ.

A2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಈ ಗೀತೆ ರಿಲೀಸ್ ಆಗಿದ್ದು, ಲಿಂಗರಾಜು-ರವಿ ಪ್ರಸಾದ್ ಹಾಗೂ ಪ್ರವೀಣ್ ಸೂಡ ಸಾಹಿತ್ಯ ಬರೆದಿದ್ದು, ತಾಯಿ ಕುರಿತ ಈ ಹಾಡಿಗೆ ಸಾಧು ಕೋಕಿಲ ಧ್ವನಿಯಾಗಿದ್ದಾರೆ. ರಾಜ್ ಗುರು ಹೊಸಕೋಟೆ ಟ್ಯೂನ್ ಕೂಡ ಗಮನಾರ್ಹ.

ಹಾಡು ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿತ್ರತಂಡ ಮಾಧ್ಯಮದರೊಟ್ಟಿಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.

ಹಿರಿಯ ನಟಿ ಮಹಾಲಕ್ಷ್ಷೀ ಮಾತನಾಡಿ, ,30 ವರ್ಷ ಆದ್ಮೇಲೆ ಒಂದೊಳ್ಳೆ ತಂಡದ ಜೊತೆ ಅಭಿನಯಿಸಿರುವ ಖುಷಿ ಇದೆ. ತಾಯಿ ಪಾತ್ರ ಮಾತ್ರವಲ್ಲ, ಇಡೀ ತಂಡ ತಾಯಿ ತರ ನೋಡಿಕೊಂಡರು.

ಪ್ರಪಂಚದಲ್ಲಿ ಎರಡು ತರಹದ ಕುಟುಂಬ ಇರುತ್ತದೆ. ಒಂದು ನಾರ್ಮಲ್ ಫ್ಯಾಮಿಲಿ.. ಇನ್ನೊಂದು ಅಬ್ ನಾರ್ಮಲ್ ಫ್ಯಾಮಿಲಿ. ಅಬ್ ನಾರ್ಮಲ್ ಫ್ಯಾಮಿಲಿ ಎದುರಿಸುವ ಕಷ್ಟವನ್ನು ಕಟ್ಟಿಕೊಡುವುದೇ ಸಿನಿಮಾ ಕಥೆ.

ಇದೊಂದು ಎಮೋಷನಲ್ ಸ್ಟೋರಿ. ಪ್ರತಿಯೊಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆ ಪರಿಶ್ರಮಕ್ಕೆ ಬೆಲೆ ಸಿಗಲಿದೆ ಎಂಬ ನಂಬಿಕೆ ಇದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಸಿನಿಮಾ ಇದು ಎಂದರು.

ನಿರ್ದೇಶಕ‌ ಕಂ ನಟ ರವಿ ಪ್ರಸಾದ್ ಮಾತನಾಡಿ, ಕಥೆ ಸಮಯದಿಂದಲೂ, ಸಾಂಗ್ ಬರೆಯುವಾಗಲೂ ಕಣ್ಣೀರು ಬಂದಿದೆ. ಬರೆದು ರಿಪೀಟ್ ಮಾಡುವಾಗ ಎಮೋಷನಲ್ ಆಗಿದ್ದೇನೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ.

ನವೆಂಬರ್ 3ಕ್ಕೆ ತೆರೆಗೆ ಬರ್ತಿದೆ. ಕನ್ನಡ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ನಾವು ಅದರಲ್ಲಿ ಒಂದು ಭಾಗವಾಗಿರುವುದಕ್ಕೆ ಖುಷಿ ಇದೆ. ತೆಲುಗು, ಮಲಯಾಳಂ, ತಮಿಳು ಭಾಷೆಗೆ ಡಬ್ ಮಾಡುವ ಪ್ಲಾನ್ ನಲ್ಲಿದ್ದೇವೆ.

ಪ್ರಪಂಚದಲ್ಲಿ ನಡೆಯುವ ಸತ್ಯವನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಸೋಷಿಯಲ್ ಜೊತೆಗೆ ಕಮರ್ಷಿಯಲ್ ಅಂಶಗಳು ಸಿನಿಮಾದಲ್ಲಿವೆ ಎಂದರು.

ಪತ್ರಕರ್ತೆ ಪಾತ್ರದಲ್ಲಿ ನಟಿಸಿರುವ ಸ್ಪರ್ಶ ಮಾತನಾಡಿ, ನವೆಂಬರ್ 3ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಮಾಡಿರುವ ಚಿತ್ರ. ಚಿತ್ರದ ಗೆಲುವಿನ ಜೊತೆಗೆ ಸಮಾಜಕ್ಕೆ ಗೆಲುವು ಸಿಕ್ಕಿದಾಗ ಹಾಗೇ ಎನ್ನುವುದು ನನ್ನ ಅಭಿಪ್ರಾಯ ಎಂದರು.

‘TRP ರಾಮ’ ಸಿನಿಮಾಗೆ ರವಿಪ್ರಸಾದ್‌ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಅಭಿನಯಿಸಿದ್ದಾರೆ.

ರಾಜ್ ಗುರು ಹೊಸಕೋಟೆ ಅವರು ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಅವರು ಸಂಕಲನ ಮತ್ತು ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗೀತ, ಪ್ರವೀಣ್ ಸೂಡ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

TRP ಸತ್ಯ ಘಟನೆಗಳನ್ನ ಆಧರಿಸಿ ಬರ್ತಿರೋ ಸಿನಿಮಾ ಆಗಿದೆ. ಚಿತ್ರದ ನಿರ್ದೇಶಕ ರವಿ ಪ್ರಸಾದ್ ಇಲ್ಲಿ ಆ ವಿಕೃತ ರಾಮನ ಪಾತ್ರ ಮಾಡಿದ್ದಾರೆ. ಆದರೆ ಇಲ್ಲಿ “TRP” ಅಂದ್ರೇನೂ ಅನ್ನೋ ಪ್ರಶ್ನೆ ಕುತೂಹಲಕ್ಕೆ ನವೆಂಬರ್ 3ರಂದು ಉತ್ತರ ಸಿಗಲಿದೆ.

ಮತ್ತೆ ಶುರು ಸ್ಯಾಂಡಲ್ ವುಡ್ ಕ್ರಿಕೆಟ್ ಹಬ್ಬ..ನವೆಂಬರ್ 28 ರಿಂದ ಡಿಸೆಂಬರ್ 10 ನಡೆಯಲಿದೆ ಡಾ.ರಾಜ್ ಕಪ್ ಸೀಸನ್-6

0

ಈಗ ವರ್ಲ್ಡ್ ಕಪ್ ಫೀವರ್ ಜೋರಾಗಿದೆ. ಸ್ಯಾಂಡಲ್ ವುಡ್ ನಲ್ಲಿಯೂ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗ್ತಿದೆ. ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ ಸೇರಿದಂತೆ ಸೇರಿದಂತೆ ತಂಡದ ಓನರ್ ಪಾಲ್ಗೊಂಡಿದ್ದಾರೆ. ನವೆಂಬರ್ 28ರಿಂದ ಡಿಸೆಂಬರ್ 10ರವೆಗೆ ಡಾ.ರಾಜ್ ಕಪ್ ಸೀಸನ್-6 ನಡೆಯುತ್ತಿದ್ದು, ಸ್ಥಳ ಹಾಗೂ ತಂಡದ ಓನರ್ ಹಾಗೂ ಇನ್ನಿತರ ಅಪ್ ಡೇಟ್ ಬಗ್ಗೆ ರಾಜೇಶ್ ಬ್ರಹ್ಮಾವರ ಮಾಹಿತಿ ನೀಡಿದರು.

ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, ಇಷ್ಟು ವರ್ಷ ನಡೆದಿದ್ದ ರಾಜ್ ಕಪ್ ಬೇರೆ. ಈ ವರ್ಷ ಆಗುತ್ತಿರುವುದೇ ಬೇರೆ. ಇದಕ್ಕೆ ಕಾರಣ ಆನಂದ್ ಆಡಿಯೋ.. ಎಂಟರ್ ಟೈನ್ಮೆಂಟ್ ನಲ್ಲಿ ಪರ್ಮಿಷನ್ ಸಿಗದೇ ಇದಿದ್ದಕ್ಕೆ ರಾಜ್ ಕಪ್ ಗೆ ತೊಂದರೆ ಆಗಬಾರದು ಎಂದು ಸ್ಪೋರ್ಟ್ ಚಾನೆಲ್ ಮಾಡಿ ಲೈವ್ ಮಾಡುತ್ತಿದ್ದಾರೆ. ಎಲ್ಲಾ ರೀತಿಯಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ. ರಾಜ್ ಕಪ್ ಸಂಸ್ಥಾಪಕರಾದ ಎಲ್ಲರೂ ಬೆಂಬಲ ಕೊಡುತ್ತಿದ್ದಾರೆ. ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿ. 3 ಮತ್ತು 4 ಸಿಂಗಾಪಿರ್, ಡಿ. 7 ಮತ್ತು 8 ಮಸ್ಕತ್ ನಲ್ಲಿ ಲೀಗ್ ಮ್ಯಾಚ್, ಫೈನಲ್ ಕರ್ನಾಟಕದಲ್ಲಿ ಮಾಡುತ್ತೇವೆ. ಇನ್ನೂ ದುಬೈನಲ್ಲಿ ಲೈವ್ ಕಾಯುತ್ತಿದ್ದೇವೆ. ಅಲ್ಲಿ ಸಿಕ್ಕಿದ್ರೆ ಮಾಡುತ್ತೇವೆ ಎಂದರು.

ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿದೆ. ಸಮೃದ್ದಿ ಫೈಟರ್ಸ್ ತಂಡಕ್ಕೆ ಸಮೃದ್ಧಿ ಮಂಜುನಾಥ್ ಓನರ್ ಆಗಿದ್ದು, DX ಮ್ಯಾಕ್ಸ್ ಲೈನ್ಸ್ ತಂಡಕ್ಕೆ ದಯಾನಂದ್ ಓನರ್, ರಾಮನಗರ ರಾಕರ್ಸ್ ತಂಡಕ್ಕೆ ಮಹೇಶ್ ಗೌಡ ಓನರ್, ELV ಲಯನ್ ಕಿಂಗ್ಸ್ ತಂಡಕ್ಕೆ ಪುರುಷೋತ್ತಮ್ ಭಾಸ್ಕರ್ ಓನರ್, AVR ಟಸ್ಕರ್ಸ್ ತಂಡಕ್ಕೆ ಅರವಿಂದ್ ರೆಡ್ಡಿ ಓನರ್, KKR ಕಿಂಗ್ಸ್ ತಂಡಕ್ಕೆ ಲಕ್ಷ್ಮೀ ಕಾಂತ್ ರೆಡ್ಡಿ ಓನರ್, Rabit ರೇಸರ್ಸ್ ತಂಡಕ್ಕೆ ಅರು ಗೌಡ ಓನರ್, ಮಯೂರ ರಾಯಲ್ಸ್ ತಂಡಕ್ಕೆ ಸೆಂಥಿಲ್ ಓನರ್, ರಾಯಲ್ ಕಿಂಗ್ಸ್ ತಂಡಕ್ಕೆ ಶ್ರೀರಾಮ್ ಮತ್ತು ಮುಖೇಶ್ ಓನರ್, ಕ್ರಿಕೆಟ್ ನಕ್ಷತ್ರ ತಂಡಕ್ಕೆ ನಕ್ಷತ್ರ ಮಂಜು ಓನರ್, ಅಶು ಸೂರ್ಯ ಸೂಪರ್ ಸ್ಟಾರ್ ತಂಡಕ್ಕೆ ರಂಜಿತ್ ಪಯಾಜ್ ಖಾನ್ ಓನರ್ ಹಾಗೂ ರುಚಿರಾ ರೇಂಜರ್ಸ್ ತಂಡಕ್ಕೆ ರಾಮ್ ಒಡೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ ಮಸ್ಕತ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಫ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ. ಡಾ,ರಾಜ್ ಕಪ್ ಗಾಗಿ ಆನಂದ್ ಆಡಿಯೋ ಹೊಸ ಹೆಜ್ಜೆ ಇಟ್ಟಿದ್ದು, ಈ ಪಂದ್ಯಾವಳಿಗಾಗಿ ಸ್ಪೋರ್ಟ್ ಯೂಟ್ಯೂಬ್ ಪ್ರಾರಂಭ ಮಾಡ್ತಿದ್ದು, ಲೈವ್ ಮ್ಯಾಚ್ ಗಳನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.

error: Content is protected !!