Home Blog Page 3196

ಪುನೀತ್ ಪುಣ್ಯಸ್ಮರಣೆ: ಅಪ್ಪು ನೆನೆದು ಫ್ಯಾನ್ಸ್ ಭಾವುಕ

0

ಬೆಂಗಳೂರು;- ಸರಳ ವ್ಯಕ್ತಿತ್ವದಿಂದಲೇ ರಾಜ್ಯದ ಮನೆಮಾತಾಗಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ಇಂದಿಗೆ ಎರಡು ವರ್ಷ ತುಂಬಿದೆ. ಹಾಗಾಗಿ, ಕರ್ನಾಟಕದಾದ್ಯಂತ ಅಭಿಮಾನಿಗಳು ಅಪ್ಪು ನೆನಪಿನಲ್ಲಿ ಮಿಂದೇಳುತ್ತಿದ್ದಾರೆ. ಅಲ್ಲದೆ, ಸೇವಾ ಕಾರ್ಯಕ್ರಮಗಳ ಮೂಲಕವೂ ನೆಚ್ಚಿನ ನಟನ ಸ್ಮರಣೆಯಲ್ಲಿ ತೊಡಗಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ

ಪುನೀತ್‌ ರಾಜ್‌ಕುಮಾರ್‌ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಐವತ್ತರಿಂದ ಅರವತ್ತು ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಕೇಸರಿ ಬಾತ್, ಟೊಮೇಟೊ ಬಾತ್ ಮತ್ತು ಪಲಾವ್ ಇರಲಿದೆ. ಅಪ್ಪು ಸಮಾಧಿ ಬಳಿ ಬರೋ ಅಷ್ಟೂ ಅಭಿಮಾನಿಗಳು ಊಟ ಮಾಡಿಯೇ ಹೋಗಬೇಕು ಅನ್ನೋ ಉದ್ದೇಶ ಹೊಂದಲಾಗಿದ್ದು, ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯೇ ಅಪ್ಪು ಪುಣ್ಯ ಭೂಮಿಯಲ್ಲಿ ಫ್ಯಾನ್ಸ್ ನೆರೆದಿದ್ದಾರೆ. ಇನ್ನೂ ಮತ್ತೊಂದೆಡೆ ಪ್ರತಿಬಾರಿಯಂತೆ ಕಡ್ಲೆಪುರಿ ಹಾರ ತರುವ ಅಜ್ಜಿ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ.

ಬೆಂಗಳೂರಿನಲ್ಲಿರುವ ಹಜ್ ಭವನವೊಂದಕ್ಕೆ ಬೆಂಕಿ ಅವಘಡ

0

ದೇವನಹಳ್ಳಿ;- ಸಿಲಿಕಾನ್ ಸಿಟಿ ಬೆಂಗಳೂರಿನ ಥಣಿಸಂದ್ರದಲ್ಲಿರುವ ಹಜ್ ಭವನಕ್ಕೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಘಟನೆ ಜರುಗಿದೆ. ನಿನ್ನೆ ಸಂಜೆ 5ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ.

ಬೆಂಕಿ ಹಿನ್ನಲೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹಜ್ ಭವನದಲ್ಲಿ ಪೀಠೋಪಕರಣ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಬೆಂಕಿ ಬಿದ್ದ ಹಿನ್ನಲೆ ಹತ್ತಾರು ದಾಖಲೆ ಸುಟ್ಟಿರುವ ಸಾಧ್ಯತೆ..!? ಇದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿದೆ ಎಂದು‌ ಹೇಳಲಾಗ್ತಿದೆ.

ಆದರೆ ಯಾವ ಕಾರಣದಿಂದ ಬಿಂಕಿ‌ಕಾಣಿಸಿಕೊಂಡಿದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಹೆಗಡೇನಗರದಲ್ಲಿನ ಹಜ್ ಭವನಕ್ಕೆ ಬೆಂಕಿ‌ಬಿದ್ದ ಹಿನ್ನಲೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ‌ನದ ಬೆಂಕಿ‌ ಬಿದ್ದಿದೆಯಾ..!? ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರಾ..! ?ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ‌ ಬೆಂಕಿ ಬಿದ್ದಿದೆಯಾ ಎನ್ನುವ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕಿದೆ

ಸ್ಥಳಕ್ಕೆ 8ಅಗ್ನಿಶಾಮಕ ವಾಹನ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ‌ ನಂದಿಸುವ ಯತ್ನ ನಡೆದಿದೆ. ಸತತ ಎರಡೂವರೆ ಗಂಟೆಯಿಂದ ಸಿಬ್ಬಂದಿ ಬೆಂಕಿ ನಂದಿಸುತ್ತಿದೆ. ಇನ್ನು ನಿಯಂತ್ರಣಕ್ಕೆ ಬೆಂಕಿ ಬಂದಿಲ್ಲ.

ಹೆಚ್ಚಾಗಿ ಪೀಠೋಪಕರಣ ಇದ್ದ ಕಾರಣ ನಿಯಂತ್ರಣಕ್ಕೆ ಬೆಂಕಿ ಬಂದಿಲ್ಲ. ಸದ್ಯ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್, ಎಸಿಪಿ, ಸಂಪಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಈರುಳ್ಳಿ ದರ ಕೇಳಿ ಗ್ರಾಹಕರು ಶಾಕ್- ಕೆಜಿಗೆ ಎಷ್ಟು ಗೊತ್ತಾ!?

0

ಬೆಂಗಳೂರು;- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಯಿಂದ ಗ್ರಾಹಕರು ಕಣ್ಣೀರಿಡುತ್ತಿದ್ದಾರೆ. ಆದರೆ, ಈರುಳ್ಳಿ ಬೆಳೆದ ರೈತರು ಮಾತ್ರ ಫುಲ್ ಖುಷ್ ಆಗಿದ್ದಾರೆ.

ಟೊಮ್ಯಾಟೋಗೆ ಪರ್ಯಾಯವಾಗಿ ಹುಣಸೆಹಣ್ಣು ಇತ್ತೆಂಬ ಸಮಾಧಾನವಾದರೂ ಇತ್ತು. ಆದರೆ, ಈರುಳ್ಳಿ ವಿಚಾರದಲ್ಲಿ ಹಾಗಲ್ಲ. ಏಕೆಂದರೆ, ಯಾವುದೇ ಅಡುಗೆ ಮಾಡಿದರೂ ಈರುಳ್ಳಿ ಪ್ರಧಾನವಾಗಿ ಬೇಕೇ ಬೇಕು. ಹೀಗಾಗಿ ಗ್ರಾಹಕರು ಬಹಳ ಚಿಂತೆ ಮಾಡುವಂತಾಗಿದೆ.

ಒಂದು ತಿಂಗಳ ಹಿಂದಷ್ಟೇ 100 ರೂಪಾಯಿ 4 ಕೆಜಿ ಈರುಳ್ಳಿ ದೊರೆಯುತ್ತಿತ್ತು. ಆದರೆ, ಕಳೆದೊಂದು ವಾರದಿಂದ ಈರುಳ್ಳಿ ಬೆಲೆ 25 ರೂಪಾಯಿಯಿಂದ ದಿಢೀರ್ 60 ರಿಂದ 70 ರೂ.ಗೆ ಏರಿಕೆಯಾಗಿದೆ.

ದೇಶದ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೆಜಿಗೆ 70 ರೂ.ನಂತೆ ಮಾರಾಟವಾಗುತ್ತಿದೆ. ಏಕಾಏಕಿ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದು, ಈರುಳ್ಳಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಈರುಳ್ಳಿ ಬಳಕೆಯನ್ನೇ ತುಸು ಕಡಿಮೆ ಮಾಡಿದ್ದಾರೆ.

ಪ್ರಮುಖವಾಗಿ ಈರುಳ್ಳಿ ಬೆಳೆಯುವಂತಹ ಪ್ರದೇಶಗಳಲ್ಲಿ ಅಕಾಲಿಕ ಮಳೆ, ಅತಿವೃಷ್ಟಿ ಮತ್ತು ಮಳೆಯ ಕೊರತೆ ಹಾಗೂ ಪ್ರತಿಕೂಲ ವಾತಾವರಣದ ಪರಿಣಾಮದಿಂದ ಈರುಳ್ಳಿ ಬೆಳೆ ನಾಶವಾಗಿದ್ದು, ಮಾರುಕಟ್ಟೆಗಳಿಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ದಿಢೀರ್ ಬೆಲೆ ಏರಿಕೆಯು ಗ್ರಾಹಕರಿಗೆ ಮಾತ್ರವಲ್ಲ ವ್ಯಾಪಾರಿಗೂ ಸಂಕಷ್ಟ ತಂದೊಡ್ಡಿದೆ. ಏಕೆಂದರೆ, ಈರುಳ್ಳಿ ಸೇವಿಸುತ್ತಿರುವ ಮತ್ತು ಖರೀದಿಸುತ್ತಿರುವ ಪ್ರಮಾಣ ತೀವ್ರ ಕುಸಿದೆ.

ಅಂದಹಾಗೆ ಮಾರುಕಟ್ಟೆಯಲ್ಲಿ ಮೂರು ವಿಭಿನ್ನ ಗುಣ್ಣಮಟ್ಟದ ಈರುಳ್ಳಿ ದೊರೆಯುತ್ತವೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 70 ರೂ.ನಂತೆ ಮಾರಾಟವಾಗುತ್ತಿದ್ದರೆ, ಸಾಧಾರಣ ಗುಣಮಟ್ಟದ ಈರುಳ್ಳಿ 60 ರೂ.ನಂತೆ ಮಾರಾಟವಾಗುತ್ತಿದೆ. ಕಳಪೆ ಮಟ್ಟದ ಈರುಳ್ಳಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಈರುಳ್ಳಿಯ ಸಗಟು ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಹವಾಮಾನ ವೈಪರೀತ್ಯದಿಂದ ಈರುಳ್ಳಿ ಗುಣಮಟ್ಟವೂ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು. ಮುಂಬರುವ ತಿಂಗಳುಗಳಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ರು: ಸುಧೀರ್ ಅತ್ತಾವರ

0

ಚಿಕ್ಕಮಗಳೂರು: ಸುಧೀರ್‌ ಅತ್ತಾವರ ನಿರ್ದೇಶನದಲ್ಲಿ ʼಕೊರಗಜ್ಜʼ ಸಿನಿಮಾದ ಹಾಡಿನ ಶೂಟಿಂಗ್‌ ಸಂದರ್ಭದಲ್ಲಿ  ದೈವಾರಾಧನೆ ಮಾಡುವ ಸಮುದಾಯದಿಂದ ದಾಂಧಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಘಟನೆ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ ಹೇಳಿಕೆ ನೀಡಿದ್ದಾರೆ. ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದ ಘಟನೆ.

ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ರು. ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ  50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ರು ಎಂದಿದ್ದಾರೆ.

 

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ: ರೇವಣ ಸಿದ್ದಪ್ಪ ಅರೆಸ್ಟ್

0

ಬಳ್ಳಾರಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಎಂಜಿನಿಯರ್ ಒಬ್ಬರಿಗೆ ಕೋಟಿ ಕೋಟಿ ಹಣ ವಂಚಿಸಿದ ಆರೋಪದ ಮೇಲೆ ಬಿಜೆಪಿಯ ಮಾಜಿ ಮುಖಂಡ ಹಾಗೂ ಹಾಲಿ ಕೆಆರ್‌ಪಿಪಿ ಪಕ್ಷದ ನಾಯಕ ರೇವಣ ಸಿದ್ದಪ್ಪನನ್ನು ಕೊಟ್ಟೂರು ಪೊಲೀಸರು ಬಂಧಿಸಿದ್ದಾರೆ.

ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆರೋಪಿ ರೇವಣ ಸಿದ್ದಪ್ಪ, ಪುತ್ತೂರು ಮೂಲದ ಶೇಖರ್ ಜೊತೆ ಸೇರಿ ಕೊಟ್ಟೂರಿನ ನಿವೃತ್ತ ಎಂಜಿನಿಯರ್ ಶಿವಮೂರ್ತಿ ಅವರಿಗೆ 1.95 ಕೋಟಿ ರೂ. ಪಡೆದು ವಂಚಿಸಿದ್ದಾನೆ. ಬೇರೆಯವರಿಗೆ ಟಿಕೆಟ್ ಘೋಷಣೆಯಾದ ಬಳಿಕ ವಿಚಾರ ತಿಳಿದ ಶಿವಮೂರ್ತಿ ಪ್ರಶ್ನಿಸಿದಾಗ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದಾದ ಬಳಿಕ ಊರಿನ ಮುಖಂಡರು ರಾಜಿ ಕೂಡ ಮಾಡಿಸಿದ್ದರು. ಈ ವೇಳೆ ಆರೋಪಿ ಹಣ ವಾಪಸ್ ನೀಡುವುದಾಗಿ ಎರಡು ಚೆಕ್‍ಗಳನ್ನು ನೀಡಿದ್ದ. ಈ ಚೆಕ್‍ಗಳು ಬೌನ್ಸ್ ಆಗಿದ್ದವು. ಬಳಿಕ ಈ ಬಗ್ಗೆ ಶಿವಮೂರ್ತಿ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಾದ ದಿನದಿಂದ ಪ್ರಕರಣದ ಪ್ರಮುಖ ಆರೋಪಿ ರೇವಣ ಸಿದ್ದಪ್ಪ ತಲೆ ಮರೆಸಿಕೊಂಡಿದ್ದ. ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನವನ್ನು ವಿಜಯನಗರ ಎಸ್‍ಪಿ ಶ್ರೀಹರಿಬಾಬು ಅವರು ಖಚಿತಪಡಿಸಿದ್ದಾರೆ.

ಬೇಸತ್ತು ಹೋಗಿರುವವರು ಮುಂದೆ ಪಕ್ಷ ಬಿಡಬಹುದು: ಎಂಪಿ ರೇಣುಕಾಚಾರ್ಯ

0

ಬೆಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ಕೆಲವರಿಗೆ ದುರಹಂಕಾರ ಬಂದಿದೆ. ಈ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪಕ್ಷದವರ ವಿರುದ್ಧವೇ ಹರಿಹಾಯ್ದರು. ಪಕ್ಷ ಸೋತ ನಂತರ ಎಲ್ಲರನ್ನೂ ಕರೆದು ಮಾತಾಡಿಸಬೇಕು. ಯಡಿಯೂರಪ್ಪ ಹಿಂದೆಲ್ಲ ಆ ಕೆಲಸ ಮಾಡಿದ್ರು.

ಆದರೆ ಬಿಜೆಪಿಯಲ್ಲಿ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತು ಹೋಗಿದ್ದಾರೆ ಎಂದು ಕಿಡಿಕಾರಿದರು. ಬೇಸತ್ತು ಹೋಗಿರುವವರು ಮುಂದೆ ಪಕ್ಷ ಬಿಡಬಹುದು.

ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಅಂತ ಜನ ಮಾತಾಡ್ತಿದ್ದಾರೆ. ನಾನು ಹೇಳ್ತಿಲ್ಲ, ಜನ ಹಾಗೆ ಹೇಳ್ತಿದ್ದಾರೆ. ಹಲವರು ಪಕ್ಷದಲ್ಲಿ ಮಾತಾಡಲು ಭಯಪಡುತ್ತಿದ್ದಾರೆ. ಬಿಜೆಪಿಗೆ ಮಧ್ಯದಲ್ಲಿ ಯಾರು ಬಂದಿದ್ದಾರೋ ಅವರ ಆಟವೇ ಜಾಸ್ತಿ ಆಗ್ತಿದೆ ಎಂದರು.

ನನ್ನ ಬಳಿ ಇರೋ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಹೇಳುತ್ತೇನೆ: ಶಾಸಕ ಗಣಿಗ ರವಿ

0

ಮಂಡ್ಯ: ಸರ್ಕಾರ ಕೆಡವಲು ನಮ್ಮ ಶಾಸಕರ ಬಳಿ ಮಾತನಾಡಿ 50 ಕೋಟಿ ಆಫರ್ (Offer) ನೀಡಿ ಬಿಜೆಪಿಗೆ (BJP) ಬಂದರೆ ಮಂತ್ರಿಗಿರಿ ಕೊಡ್ತೀವಿ ಎಂದು ಹೇಳಿದ್ದಾರೆ.

ಹಳೆ ಮೈಸೂರು ಭಾಗದ ಒಬ್ಬ ಎಂಎಲ್‌ಸಿ, ಬೆಳಗಾವಿಯ ಮಾಜಿ ಸಚಿವ ಹಾಗೂ ಸಂತೋಷ್, ಗೋಲ್ಡ್ ಫಿಂಚ್‌ನಲ್ಲಿ ನಮ್ಮ ಶಾಸಕರನ್ನು ಮೀಟ್ ಮಾಡಿದ್ದಾರೆ.

ಎರಡು ದಿನದ ಬಳಿಕ ನಾನು ಸಿಎಂ, ಡಿಸಿಎಂ ಜೊತೆ ಮಾತನಾಡಿ ಮಾಧ್ಯಮದ ಮುಂದೆ ಬರುತ್ತೇನೆ ಎಂದು ಮಂಡ್ಯದಲ್ಲಿ (Mandya) ಶಾಸಕ ಗಣಿಗ ರವಿ ಹೇಳಿದ್ದಾರೆ.

ಶುಕ್ರವಾರ ಹೇಳಿದ್ದನ್ನು ಮತ್ತೆ ರಿಪೀಟ್ ಮಾಡಲು ನಂಗೆ ಇಷ್ಟ ಇಲ್ಲ. ಶಾಸಕರನ್ನು ಸೆಳೆಯಲು ಪ್ರಯತ್ನ ಪಡುತ್ತಿರೋದಕ್ಕೆ ಸಾಕ್ಷಿ ಇದೆ. ಮೂರು ಅಲ್ಲ ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ ಅಂತಾ ನಮ್ಮ ಡಿಸಿಎಂ ಹೇಳಿದ್ದಾರೆ. ನನ್ನ ಬಳಿ ಇರೋ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಹೇಳುತ್ತೇನೆ. ಅವರ ಬಳಿ ಇರುವ ಮಾಹಿತಿ ತೆಗೆದುಕೊಂಡು ಮಾಧ್ಯಮದ ಮುಂದೆ ಬರುತ್ತೇನೆ.

ಒಂದು ವೇಳೆ ನನಗೆ ಆಫರ್ ನೀಡಲು ಬಂದಿದ್ದರೆ ಲೈವ್ ಮಾಡಿ ತೋರಿಸುತ್ತಾ ಇದ್ದೆ. ಸಂತೋಷ್ ಪಕ್ಷಕ್ಕೆ ಕರೆದಿರೋದು ಬೇರೆ ವಿಚಾರ ಅಂತಾ ಈಗಾಗಲೇ ಹೇಳಿದ್ದಾರೆ. ಪಕ್ಷಕ್ಕೆ ಕರೆದಿರೋದು ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದರು.

5 ವರ್ಷದವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಇರೋ ವಿಚಾರ ಅವರನ್ನೇ ಕೇಳಿ: ಸಚಿವ ಸಂತೋಷ್ ಲಾಡ್

0

ಧಾರವಾಡ: 5 ವರ್ಷದವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಇರೋ ವಿಚಾರ ಅವರನ್ನೆ ಕೇಳಿ ಎಂದು ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.‌

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 30 ವರ್ಷದಿಂದ ಸತೀಶ್ ಜಾರಕಿಹೊಳಿ ಅವರನ್ನು ನೋಡ್ತಾ ಇದೀನಿ. ಅವರು ಅಂಬೇಡ್ಕರ್, ಬಸವ ವಾದ ಇರೋ ನಾಯಕರು, ಅದಲ್ಲದೆ ಸಿಂಪಲ್ ಹ್ಯೂಮನ್ ಬಿಯಿಂಗ್ ಕೂಡ ಇದಾರೆ. ಯಾವುದೇ ರೀತಿಯಾಗಿ ರಾಜಕೀಯವಾಗಿ ಡಿಪೆರೆನ್ಸ್‌ಗಳನ್ನ ಬಹರಂಗವಾಗಿ ಹೇಳಲ್ಲ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಬಿಜೆಪಿ ಆಪರ್ ವಿಚಾರ

ಬಿಜೆಪಿ ಕಳೆದ 10 ವರ್ಷದಲ್ಲಿ 2500 ಶಾಸಕರನ್ನ ಖರೀದಿ ಮಾಡಿದ್ದಾರೆ. ಬಿಜೆಪಿ ದುಡ್ಡಿನ ಪಾರ್ಟಿ, ಅವರು ಶಾಸಕರುಗಳಿಗೆ ಆಫರ್ ಮಾಡೆ ಮಾಡ್ತಾರೆ. ಬಿಜೆಪಿಯ ಪಕ್ಷದ್ದು ಆಫಿಶಿಯಲ್ ಆಗಿ 7,500 ಕೋಟಿ ಇದೆ ಎಂದು ಅವರೆ ಡಿಕ್ಲೇರ್ ಮಾಡಿದ್ದಾರೆ.

ಕಳೆದ 10 ವರ್ಷದಿಂದ ಅವರು ಹಣ ಹೆಚ್ಚಳ ಮಾಡಿಕೊಂಡಿದ್ದಾರೆ. ಪಿ ಎಮ್ ರಿಲೀಫ್‌ ಫಂಡ್ ಅದಕ್ಕೆ 30 ಸಾವಿರ ಕೋಟಿ ಆಗಿದೆ. ಪಿಎಮ್ ರಿಲೀಫ್‌ ಫಂಡ್‌‌ನಲ್ಲಿ ನಾವು ಗುಜರಾತಿನಲ್ಲಿ ಸ್ಟೇಡಿಯಂ ಕಟ್ಟಿದ್ದೆವೆ. ಆದ್ರೆ ಅವರು ಒಂದು ಆಸ್ಪತ್ರೆಯನ್ನ ಕೂಡ ಕಟ್ಟಲಿಲ್ಲ ಎಂದು ಸಂತೋಷ್ ಲಾಡ್‌ ಹೇಳಿದರು.

ಲೋಕಾಯುಕ್ತ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಖೆಡ್ಡಾಗೆ

0

ದಾವಣಗೆರೆ: ಇ-ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಪಿಡಿಒ ಹಾಗೂ ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಕೆಚ್ಚೇನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ನಂದಿ ಅಂಗೇಶ ಸಾರಂಗಮಠ ಹಾಗೂ ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಆರ್. ಎಂಬಿಬ್ಬರು ಭ್ರಷ್ಟ ಬಂಧಿತ ಸಿಬ್ಬಂದಿಗಳಾಗಿದ್ದಾರೆ.

ಬಸವನಗೌಡ ಎಂಬವರು ಜಿಲ್ಲೆಯ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿರುವ ಮನೆ ಖಾತೆ ನಂ. 23ಕ್ಕೆ ಇ-ಸ್ವತ್ತು ಮಾಡಿಕೊಡಲು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಇ-ಸ್ವತ್ತು ಮಾಡಿಕೊಡಲು ಪಿಡಿಒ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅರ್ಜಿದಾರರು ಅ. 21ರಂದು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಇಂದು ಬಸವನಗೌಡ ಅವರಿಂದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಲಂಚ ಪಡೆಯುವಾಗ ಟ್ರ್ಯಾಪ್ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಬರಕ್ಕೆ ಬೆಳೆ ಹಾನಿ, ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

0

ಗದಗ: ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಮೀನಿನಲ್ಲಿ ನೇಣು ಹಾಕಿಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರಸಪ್ಪ ಉಮಚಗಿ (25) ಆತ್ಮಹತ್ಯೆ ಮಾಡಿಕೊಂಡ ರೈತ. ಸಾಲ ಮಾಡಿ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ, ಮೆಣಸಿನಕಾಯಿ ಬಿತ್ತನೆ ಮಾಡಿದ್ದ. ಭೀಕರ ಬರಕ್ಕೆ ಯಾವ ಬೆಳೆಯೂ ಬಾರದ ಹಿನ್ನಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

error: Content is protected !!