Home Blog Page 3197

ಅಬಕಾರಿ ಪೊಲೀಸರ ಕಾರ್ಯಾಚರಣೆ; ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಫೋಟೋಗ್ರಾಫರ್ ಬಂಧನ

ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಅಬಕಾರಿ ಪೊಲೀಸರು…….

ವಿಜಯಸಾಕ್ಷಿ ಸುದ್ದಿ, ಗದಗ

ಗೋವಾ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ ಫೋಟೋಗ್ರಾಫರ್ ಒಬ್ಬನನ್ನು ಅಬಕಾರಿ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಬೆಳಧಡಿ ತಾಂಡಾದ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಕೇಶವ ಗುರುನಾಥ ಚವ್ಹಾಣ ಬಂಧಿತ ಆರೋಪಿ.

ಗುರುವಾರ ರಾತ್ರಿ ಗದಗನಿಂದ ನಾಗಾವಿ ಗ್ರಾಮದ ಕಡೆ ಗೋವಾದ ಎಮ್ ಸಿ ಡುವೆಲ್ಸ್ ನಂ.1 ವಿಸ್ಕಿ, ಗೋಲ್ಡನ್ ಏಸ್ ಬ್ಲ್ಯೂ ಫೈನ್ ವಿಸ್ಕಿ ಹಾಗೂ ರಾಯಲ್ ಸ್ಟ್ಯಾಗ್ ರಿಸರ್ವ್ ವಿಸ್ಕಿ ಸೇರಿದಂತೆ 12,960 ರೂ ಮೌಲ್ಯದ ಮದ್ಯ, ಹಾಗೂ ಬೈಕ್ ಬಂಧಿತನಿಂದ ಜಪ್ತಿ ಮಾಡಲಾಗಿದೆ.

ಖಚಿತ ‌ಮಾಹಿತಿ ಆಧರಿಸಿ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ, ಸಿಬ್ಬಂದಿಗಳಾದ ಮಂಜುನಾಥಗೌಡ ರಾಯನಗೌಡ, ಗಿರೀಶ್ ಮುದರಡ್ಡಿ, ನಜೀರ್ ಖುದಾವಂದ, ಸಂತೋಷ ನೆಲ್ಲೂರು ಹಾಗೂ ರಮೇಶ್ ಬೆಣಗಿ ದಾಳಿ ಮಾಡಿದ್ದರು.

ಈ ಕುರಿತು 1965ರ ಕಲಂ 11,14 ಮತ್ತು 15 ಹಾಗೂ ಕರ್ನಾಟಕ ಅಬಕಾರಿ ನಿಯಮಾವಳಿ 1985ರ ನಿಯಮ 3ರ ಉಲ್ಲಂಘನೆಯಾಗಿದ್ದು, 1985ರ ಕಲಂ 32(1), 38 (ಎ) ಮತ್ತು 43ರ ಅನ್ವಯ ಪ್ರಕರಣ ದಾಖಲಾಗಿದೆ.

ಹಲ್ಲೆ, ಜೀವ ಬೆದರಿಕೆ ಆರೋಪ; ನಗರಸಭೆ ಸದಸ್ಯ ಸೇರಿ ಐವರ ವಿರುದ್ಧ ಕೇಸ್

ವಿ.ಡಿ.ಎಸ್.ಟಿ.ಸಿ ಮೈದಾನದಲ್ಲಿ ಘಟನೆ….. ವಿಷ ಸೇವಿಸಿದ ಉದ್ಯಮಿ….ಜಮೀನಿನ ಹಣ ಕೇಳಲು ಹೋದಾಗ ಜೀವ ಬೆದರಿಕೆ… ಹಲ್ಲೆ ಆರೋಪ…..ಆರೋಪ ನಿರಾಕರಿಸಿದ ನಗರಸಭೆ ಸದಸ್ಯ….

ವಿಜಯಸಾಕ್ಷಿ ಸುದ್ದಿ, ಗದಗ

ಜಮೀನು ಬರೆದುಕೊಟ್ಟಿದ್ದಕ್ಕೆ ಕೊಡಬೇಕಾಗಿದ್ದ 8,50,000ರೂ.ಗಳನ್ನು ಕೇಳಲು ಹೋದಾಗ ಆರೋಪಿ ಗೂಳಪ್ಪ ಮುಶಿಗೇರಿ ಹಾಗೂ ನಾಲ್ವರು ಸೇರಿ ಗದಗನ ವಿ.ಡಿ.ಎಸ್. ಟಿ.ಸಿ ಮೈದಾನದಲ್ಲಿ ಹೊಡೆದು, ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಇರಾನಿಯ ಕಾಲೋನಿಯ ಮಲ್ಲಯ್ಯ ರುದ್ರಯ್ಯ ಹಿರೇಮಠ ಎಂಬುವರು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ1860 (u/s-143,147,323,341,504,506,149) 003/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಫಿರ್ಯಾದಿ ಮಲ್ಲಯ್ಯ ಎಂಬುವರು ಕಳೆದ ಎರಡು ವರ್ಷಗಳ ಹಿಂದೆ ಚಂದ್ರಪ್ಪ ಹುಬ್ಬಳ್ಳಿ ಎಂಬುವರ ಕಡೆಯಿಂದ ಚುರ್ಚಿಹಾಳದಲ್ಲಿರುವ 3 ಎಕರೆ07 ಗುಂಟೆ ಜಮೀನನ್ನು 16,00,000,=00ರೂ.ಗಳಿಗೆ ಖರೀದಿ ಮಾಡಿದ್ದು, ಆ ವೇಳೆ 3,50,000=00ರೂ.ಗಳನ್ನು ಕೊಟ್ಟು ಉಳಿದ 12,50,000=00 ಗಳನ್ನು ಒಂದು ವರ್ಷದಲ್ಲಿ ಕೊಡುತ್ತೇನೆ ಅಂತ ಒಪ್ಪಂದ ಮಾಡಿಕೊಂಡು, ಭದ್ರತೆಗಾಗಿ ಎರಡು ಖಾಲಿ ಚೆಕ್ ಹಾಗೂ ಬಾಂಡ್ ಕೊಟ್ಟಿದ್ದು, ಅವಧಿ ಮುಗಿದರೂ ಹಣ ಕೊಡಲು ಆಗಲಿಲ್ಲ.

ಆಗ ಮತ್ತೆ ಚಂದ್ರಪ್ಪ ಹುಬ್ಬಳ್ಳಿ ಇವರು ಮೂರು ತಿಂಗಳ ಕಾಲಾವಕಾಶ ಕೊಟ್ಟಿದ್ದರು. ನಂತರ ದಿ.23-06-2022 ರಂದು ಮುಂಜಾನೆ 11ಗಂಟೆಗೆ ಎರಡನೇ ಆರೋಪಿ ಆಗಿರುವ ಲೋಹಿತ್ ಚಲವಾದಿ ಎಂಬಾತ ಸಿದ್ದಾರ್ಥ ನಗರದಲ್ಲಿ ಫಿರ್ಯಾದಿ ಮಲ್ಲಯ್ಯನಿಗೆ ಅಡ್ಡಗಟ್ಟಿ ಹೆದರಿಸಿ, ಗೂಳಪ್ಪ ಮುಶಿಗೇರಿ ಅವರ ಆಫೀಸಗೆ ಕರೆದುಕೊಂಡು ಬಂದು, ಚಂದ್ರಪ್ಪ ಹುಬ್ಬಳ್ಳಿ ಕಡೆಯಿಂದ ಖರೀದಿ ಮಾಡಿದ ಜಮೀನನ್ನು ನನ್ನ ಹೆಸರಿಗೆ ಬರೆದುಕೊಡು. ನಾನು 12,50,000=00 ರೂ. ಗಳನ್ನು ಬಿಟ್ಟು ಉಳಿದ 8,50,000=00ರೂ.ಗಳನ್ನು ಕೊಡುತ್ತೇನೆ ಎಂದು ಹೇಳಿ, ಇದಕ್ಕೆ ನೀನು ಒಪ್ಪದಿದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಅಲ್ಲಿಯೇ ಇದ್ದ ಗುರುರಾಜ್ ತಿಳ್ಳಿಹಾಳ, ಕೊಟೇಶ್ ಬಗಲಿ ಹಾಗೂ ಶಿವರಾಜ್ ಶಿವಪುರ ಎಂಬುವರು ಹೆದರಿಸಿದ್ದು, ಹೆದರಿದ ಮಲ್ಲಯ್ಯ ಅಂದೇ ಮುಂಡರಗಿಗೆ ಹೋಗಿ ಜಮೀನನ್ನು ಗೂಳಪ್ಪ ಮುಶಿಗೇರಿ ಎಂಬುವರ ಹೆಸರಿಗೆ ಮಾಡಿಕೊಡಲಾಗಿದೆ.

ಹೀಗಾಗಿ ಗೂಳಪ್ಪ ಮುಶಿಗೇರಿ ಅವರು ಕೊಟ್ಟ ಮಾತಿನಂತೆ ಉಳಿದ 8,50,000=00ರೂ. ಗಳನ್ನು ಕೇಳಲು ಹೋದಾಗ ಮತ್ತೆ ಆರೋಪಿತರೆಲ್ಲರೂ ಸೇರಿ ವಿ.ಡಿ.ಎಸ್. ಟಿ.ಸಿ ಮೈದಾನದಲ್ಲಿ ಹೊಡೆದು, ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ.

ದಿ.16-01-2023 ರಂದು ಮಲ್ಲಯ್ಯ ಹಿರೇಮಠ ಆರೋಪಿತರ ಜೊತೆಗೆ ಹಿರಿಯರ ಸಮಕ್ಷಮ ವ್ಯವಹಾರ ಸರಿ ಮಾಡಿಕೊಂಡರಾಯಿತು ಎಂದು ಹೋಗಿ ಕೇಳಿದಾಗ, ಆರೋಪಿತರು 200000=00ರೂ.ಗಳನ್ನು ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಬೇಜಾರ ಆದ ಮಲ್ಲಯ್ಯ ಹಿರೇಮಠ ಬೇರೆ ಹಣಕಾಸಿನ ವ್ಯವಹಾರ ಇರುವುದರಿಂದ ಆರೋಪಿತರು ಹಣ ಕೊಟ್ಟಿದ್ದರೇ ಉಳಿದ ವ್ಯವಹಾರ ಸರಿ ಆಗುತ್ತಿತ್ತು ಅಂತ ಬೇಜಾರ ಮಾಡಿಕೊಂಡು ವಿ.ಡಿ.ಎಸ್. ಟಿ.ಸಿ ಮೈದಾನದಲ್ಲಿ ವಿಷ ಸೇವಿಸಿದ್ದಾನೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದಾನೆ.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾನೂನು ಪ್ರಕಾರ ಖರೀದಿ ಮಾಡಲಾಗಿದೆ

ಈ ಕುರಿತು ನಗರಸಭೆ ಸದಸ್ಯ ಗೂಳಪ್ಪ ಮುಶಿಗೇರಿ ಎಂಬವರು ಪ್ರತಿಕ್ರಿಯೆ ನೀಡಿದ್ದು, ಎಲ್ಲವೂ ಕಾನೂನು ಪ್ರಕಾರ ನಡೆದುಕೊಳ್ಳಲಾಗಿದೆ. ಖರೀದಿ ಮಾಡಿದ ಬಗ್ಗೆ ನಮ್ಮಲ್ಲಿ ಕಾಗದ ಪತ್ರಗಳಿವೆ. ಹಿರಿಯರ ಸಮ್ಮುಖದಲ್ಲಿ ಮಾತಾಡಿ ಸರಿ ಮಾಡಿಕೊಳ್ಳಲು ಅವಕಾಶ ಇದೆ ಎಂದರು.

ಕಾಂಗ್ರೆಸ್ ಟಿಕೆಟ್‍ಗೆ ಭಾರಿ ಪೈಪೋಟಿ; ಹೆಚ್ಚಾದ ಟಿಕೆಟ್ ಆಕಾಂಕ್ಷಿಗಳ ಹೃದಯಬಡಿತ,  ಗೆಲುವೊಂದೇ ಅಸ್ತ್ರ

ಬಂಡಾಯದ ನೆಲ ನವಲಗುಂದ..ನರಗುಂದ ಕ್ಷೇತ್ರ ಗೆಲ್ಲಲೇಬೇಕು ಅನ್ನೊ ಹಠಕ್ಕೆ ಬಿದ್ದಿರೋ ಕಾಂಗ್ರೆಸ್

ವಿಜಯಸಾಕ್ಷಿ ಸುದ್ದಿ, ನವಲಗುಂದ

ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆಗೆ ಭಾರಿ ರಣತಂತ್ರ ರೂಪಿಸುತ್ತಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಹೃದಯಬಡಿತ ಹೆಚ್ಚಾಗುತ್ತಿದೆ.

ನವಲಗುಂದ-ನರಗುಂದ ಎಂದರೆ ಅದು ರೈತ ಬಂಡಾಯದ ನಾಡು ಎಂಬುದು ಈಡೀ ರಾಜ್ಯಕ್ಕೆ ಗೊತ್ತಿರುವ ವಿಷಯ.  ಇದೇ ಬಂಡಾಯದ ನೆಲದ ರೈತರು ರೊಚ್ಚಿಗೆದ್ದಾಗ 1981 ರಲ್ಲಿ ಮುಖ್ಯಮಂತ್ರಿ ಗುಂಡುರಾಯರ ನೇತ್ರತ್ವದ ಕಾಂಗ್ರೆಸ್  ಸರ್ಕಾರವನ್ನೇ  ಕಿತ್ತೊಗೆದು ಕಾಂಗ್ರೆಸ್ಸೇತರ ಸರ್ಕಾರವನ್ನು ಆಡಳಿತಕ್ಕೆ ತಂದಂತಹ ಕೆಚ್ಚೆದೆಯ ನಾಡು ಇದಾಗಿದೆ.

ಆದರೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸತತ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಈ ವಿಷಯವನ್ನು ಅರಿತುಕೊಂಡಿರುವ ಹೈಕಮಾಂಡ್ ಹೇಗಾದರೂ ಮಾಡಿ ರೈತ ಬಂಡಾಯದ ನಾಡಾಗಿರುವ ನವಲಗುಂದ ಹಾಗೂ ನರಗುಂದ ಎರಡೂ ವಿಧಾನಸಭಾ ಕ್ಷೇತ್ರಗಳನ್ನು ಹೇಗಾದರೂ ಮಾಡಿ ಈ ಭಾರಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಂತೆ ಕಾಣುತ್ತಿದ್ದು ಟಿಕೆಟ್ ಹಂಚಿಕೆಗೆ ಭಾರಿ ರಣತಂತ್ರ ರೂಪಿಸುತ್ತಿರುವುದು ಕಂಡುಬಂದಿದೆ.

ನವಲಗುಂದ ಕ್ಷೇತ್ರದಲ್ಲಿ ಸಂಘಟನೆಯ ಬಗ್ಗೆ ಈಗಾಗಲೇ ಎರಡು ಭಾರಿ ಸಮೀಕ್ಷೆ ಕೈಗೊಳ್ಳಲಾಗಿದ್ದು ಗುಪ್ತ ಸಮೀಕ್ಷಾ ವರದಿಯನ್ನು ಹೈಕಮಾಂಡ್ ಪಡೆದುಕೊಂಡಿದೆ. ಕಾಂಗ್ರೆಸ್ ಚುನಾವಣಾ ಸಮಿತಿ ಅರ್ಜಿ ಹಾಕಿರುವ ಆಕಾಂಕ್ಷಿಗಳ ಜೊತೆ ನಿರಂತರ ಸಂಪರ್ಕ ಹೊಂದಿ ಮಾಹಿತಿ ಪಡೆದುಕೊಳ್ಳುತ್ತಿದ್ದು ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕವಾಗಿ ಸಭೆ, ಪ್ರಚಾರ ಮಾಡದಂತೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆಂಬುದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿಯವರಿಗೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈತಪ್ಪಿ ಯುವ ಮುಖಂಡನಾಗಿದ್ದ ವಿನೋದ ಅಸೂಟಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಾದರೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಆದರೆ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷದ ಎನ್.ಎಚ್.ಕೋನರಡ್ಡಿ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಟಿಕೆಟ್ ಯಾರಿಗೆ ಕೊಡಬೇಕೆಂಬುದು ಹೈಕಮಾಂಡ್‍ಗೆ ತಲೆಬಿಸಿ ಮಾಡಿದೆ.

ಪಕ್ಷದಲ್ಲಿ ಹಿರಿಯರಾಗಿರುವ ಕೆ.ಎನ್.ಗಡ್ಡಿಯವರು 1994, 1999 ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.  ನಂತರದ 2004, 2008 ಹಾಗೂ 2013 ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದರಾದರೂ ಹ್ಯಾಟ್ರಿಕ್ ಸೋಲು ಅನುಭವಿಸಿದ ಕಾರಣ 2018ರ ಚುನಾವಣೆಯಲ್ಲಿ ಯುವ ಮುಖಂಡ ವಿನೋದ ಅಸೂಟಿಯವರಿಗೆ ಟಿಕೆಟ್ ನೀಡಲಾಗಿತ್ತಾದರೂ ಅವರು ಕೂಡ ಸೋಲು ಅನುಭವಿಸಿದರು.  

ವಿಶೇಷವೆಂದರೆ ನಾಲ್ಕು ಚುನಾವಣೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಮಣಿ ಹಾಕಿದ್ದರೂ ಗೆಲುವಿನ ದಡ ಸೇರುವಲ್ಲಿ ವಿಫಲರಾದ ಕಾರಣದಿಂದಲೇ ಜೆಡಿಎಸ್ ಪಕ್ಷದಲ್ಲಿದ್ದ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಟಿಕೆಟ್ ನನಗೇ ಕೊಟ್ಟರೆ ಭಾರಿ ಬಹುಮತದಿಂದ ಗೆಲ್ಲುತ್ತೇನೆಂದು ಹೈಕಮಾಂಡ್ ಮುಂದೆ ತಮ್ಮ ಅಹವಾಲು ಇಟ್ಟಿದ್ದಾರೆ.

ಪ್ರತ್ಯೇಕ ಸಭೆ, ಪ್ರಚಾರ ಮಾಡದಂತೆ ಆಕಾಂಕ್ಷಿಗಳಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೇ ನೀಡಿದ್ದರೂ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಯುವ ಮುಖಂಡ ವಿನೋದ ಅಸೂಟಿ ಮೂವರು ಆಕಾಂಕ್ಷಿಗಳು ಪ್ರತ್ಯೇಕವಾಗಿ ತಮ್ಮದೇ ಆದ ಗುಂಪುಗಳನ್ನು ಕಟ್ಟಿಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಮೂವರು ಆಕಾಂಕ್ಷಿಗಳು ಈಗಾಗಲೇ ಪ್ರತ್ಯೇಕವಾಗಿ ತಮ್ಮದೇ ಭಾವಚಿತ್ರ ಹೊಂದಿರುವ ಕ್ಯಾಲೆಂಡರ್‍ಗಳನ್ನು, ಕರಪತ್ರಗಳನ್ನು ಹೊರಡಿಸಿದರೇ, ಸಂಕ್ರಮಣದ ಸಂದರ್ಭದಲ್ಲಿ ‘ಕುಸರೆಳ್ಳಿನ’ ಪ್ಯಾಕೆಟ್‍ಗಳನ್ನು ಮನೆ ಮನೆಗೆ ತಲುಪಿಸಿ ನಮಗೇ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿ ಮೊದಲ ಸುತ್ತಿನ ಪ್ರಚಾರ ಮುಗಿಸಿದ್ದಾರೆ.

ಒಂದು ಹೆಜ್ಜೆ ಮುಂದಿಟ್ಟಿರುವ ಎನ್.ಎಚ್.ಕೋನರಡ್ಡಿಯವರು ಪ್ರತಿ ಗ್ರಾಮಗಳಲ್ಲಿಯೂ ತಾವು ಮಾಡಿರುವ ಸಾಧನೆಗಳು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಬಗ್ಗೆ ಮಾಡಿರುವ ಹೋರಾಟದಂತಹ  ಪಟ್ಟಿಯ ದೊಡ್ಡ ದೊಡ್ಡ ಕಟೌಟ್‍ಗಳನ್ನು ಹಾಕಿಕೊಂಡು ಪ್ರಚಾರದಲ್ಲಿ ಮುಂಚೂಣಿ ಪಡೆದುಕೊಂಡಿದ್ದಾರೆ.

ಎನ್.ಎಚ್.ಕೋನರಡ್ಡಿ ಬೆಂಬಲಿಗರಂತೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮುಂಚೆಯೇ ಟಿಕೆಟ್ ಖಚಿತಪಡಿಸಿಕೊಂಡೇ ಬಂದಿದ್ದೇವೆಂದು ಹೇಳುತ್ತಿರುವುದು ಮೂಲ ಕಾಂಗ್ರೆಸ್ಸಿಗರ ತಲೆಬಿಸಿ ಮಾಡಿದ್ದಂತು ಸತ್ಯ.

ಗೆಲುವೊಂದೇ ಅಸ್ತ್ರ – ಏನಿದು ಕಾಂಗ್ರೆಸ್ ಪಕ್ಷದ ರಣತಂತ್ರ

ದುರ್ಬಲ ಅಭ್ಯರ್ಥಿ, ಸರ್ವೆಯಲ್ಲಿ ಸೋಲುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೆ ಟಿಕೆಟ್ ಕೊಡಬಾರದೆಂಬುದು ಸ್ಥಳಿಯ ನಾಯಕರ, ಕಾರ್ಯಕರ್ತರ ಒತ್ತಡವಾದರೆ, ಕುರುಬ ಸಮಾಜದವರು ನಮಗೇ ಟಿಕೆಟ್ ಕೊಟ್ಟರೇ ಮಾತ್ರ ಗೆಲುವು ಸಾಧ್ಯ ಇಲ್ಲದಿದ್ದರೇ ಸೋಲು ಖಚಿತ ಎಂಬ ಲೆಕ್ಕಾಚಾರ, ಇನ್ನು ಲಿಂಗಾಯತರಿಗೆ ಒಮ್ಮೆ ಕೊಟ್ಟು ನೋಡಿ ಎಂಬುದಾಗಿ ಹೈಕಮಾಂಡ್‍ಗೆ ಬಲವಾದ ಒತ್ತಡ ಹಾಕುತ್ತಿರುವುದು ಕಂಡುಬಂದಿದೆ. ವಲಸೆ ಬಂದಿರುವ ಎನ್.ಎಚ್.ಕೋನರಡ್ಡಿಯವರಿಗೆ ಹೈಕಮಾಂಡ್ ಯಾವ ವಚನ ನೀಡಿದೇ ಎಂಬುದು ಇನ್ನು ಬಹಿರಂಗಪಡಿಸಿಲ್ಲವಾದರೂ ಕಾರ್ಯಕರ್ತರಲ್ಲಿ ಚರ್ಚೆ ಮಾತ್ರ ಜೋರಾಗಿಯೇ ನಡೆಯುತ್ತಿದೆ. ವಲಸೆ ಬಂದಿರುವ ಕೋನರಡ್ಡಿಯವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ಮಾನದಂಡ ಯಾವುದು,  ಒಂದುವೇಳೆ ಮೂಲ ಕಾಂಗ್ರೆಸ್ಸಿಗರು ಬಂಡಾಯವೆದ್ದರೇ ಕಾಂಗ್ರೆಸ್ ಪಕ್ಷ ಹೇಗೆ ಗೆಲ್ಲಲಿದೆ ಎಂಬ ತಲೆಬಿಸಿಯಂತೂ ಹೈಕಮಾಂಡ ಮುಂದಿದೆ.  ಈಗಾಗಲೇ ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಎಲ್ಲರೂ ಹೊಂದಾಣಿಕೆ ಮಾಡಿಕೊಳ್ಳಬೇಕು,  ಸ್ಥಳೀಯ ಮಟ್ಟದ ನಾಯಕರು, ಟಿಕೆಟ್ ಆಕಾಂಕ್ಷಿಗಳ ಮನವೊಲಿಕೆ ಮಾಡಿ ರಾಜೀ ಸೂತ್ರ ಸಿದ್ದಪಡಿಸುವುದು,  ಅಂತಿಮವಾಗಿ ರೇಸ್‍ನಲ್ಲಿ ಯಾವ ಕುದುರೆ ಗೆಲ್ಲಲಿದೇ ಎಂಬ ಲೆಕ್ಕಾಚಾರ ಹಾಕಿಯೇ ಟಿಕೆಟ್ ಘೋಷಣೆ ಮಾಡುವಂತೆ ರಣತಂತ್ರ ರೂಪಿಸಲಾಗುತ್ತಿದ್ದು, ಕೊನೆಗೆ ಹೈಕಮಾಂಡ್ ಯಾವ ಹೆಜ್ಜೆ ಇಡಲಿದೆ ಎಂಬುದೇ ಕುತೂಹಲ ಮೂಡಿಸಿದ್ದು ಆಕಾಂಕ್ಷಿಗಳಲ್ಲಿ ಹೃದಯ ಬಡಿತ ಹೆಚ್ಚಾಗುವಂತೆ ಮಾಡಿದೆ.
ಒಟ್ಟಾರೆ ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಯುವ ಮುಖಂಡ ವಿನೋದ ಅಸೂಟಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು ಕೊನೆಗಳಿಗೆಯಲ್ಲಿ ಟಿಕೆಟ್ ಯಾರು ಗಿಟ್ಟಿಸಿಕೊಳ್ಳುತ್ತಾರೆಂಬುದೇ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಅರ್ಜಿ ಸಲ್ಲಿಸಿರುವ 8 ಆಕಾಂಕ್ಷಿಗಳು :
ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಯುವ ಮುಖಂಡ ವಿನೋದ ಅಸೂಟಿ, ಮಾಜಿ ಜಿ.ಪಂ.ಉಪಾಧ್ಯಕ್ಷ ಶಿವಾನಂದ ಕರಿಗಾರ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡ ಪಾಟೀಲ, ವಿಜಯಲಕ್ಷ್ಮೀ ಪಾಟೀಲ ಹಾಗೂ ಚಂಬಣ್ಣ ಹಾಳದೋಟರ.

ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಕಂಡು ಬೆರಗಾದ ಜನ!

0

ಕೆಲಕಾಲ ಗೊಂದಲಕ್ಕೀಡಾದ ಪಲಾನುಭವಿಗಳು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿವೆ ಎಂಬ ತಪ್ಪು ಮಾಹಿತಿ ಹರಡುವಿಕೆಯಿಂದಾಗಿ ಗುರುವಾರ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಫಲಾನುಭವಿಗಳು ಆತಂಕಕ್ಕೀಡಾದ ಪ್ರಸಂಗ ನಡೆಯಿತು. ಪಡಿತರ ಅಕ್ಕಿಯಲ್ಲಿ ಸೌತೆಬೀಜದಂತಹ ಅಕ್ಕಿ ಕಂಡು ಬಂದ ಹಿನ್ನೆಲೆ ಇದು ಪ್ಲಾಸ್ಟಿಕ್ ಅಕ್ಕಿಯೇ ಎಂಬ ಅನುಮಾನ ಹರಡಿ ಪಡಿತರ ಪಡೆಯಲು ಸಾಲುಗಟ್ಟಿ ನಿಂತ ಫಲಾನುಭವಿಗಳು ಪರಸ್ಪರ ಆಂತಕದಿಂದ ಮಾತನಾಡಿಕೊಂಡರು.

ಈ ಸುದ್ದಿ ತಿಳಿದ ಆಹಾರ ನಿರೀಕ್ಷಕ ಜಗದೀಶ ಕುರುಬರ, ಮಂಜುಳಾ ಆಕಳದ ಸ್ಥಳಕ್ಕೆ ಆಗಮಿಸಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿ, ಜನಸಾಮಾನ್ಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಸಾರಯುಕ್ತ ಅಕ್ಕಿ ವಿತರಣೆ ಮಾಡುತ್ತಿದೆ. ಪ್ರತಿ ೫೦ ಕೆಜಿ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿ ಕಾಂಪ್ಲೆಕ್ಸ್, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿ ಬೆರೆಸಿ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ನೆನೆದು ಉಬ್ಬಿದ ರೀತಿಯಲ್ಲಿರುವುದು ಆತಂಕ ಮೂಡಿಸುತ್ತದೆ. ಆದರೆ ಇದು ರಕ್ತಹೀನತೆ, ಅಪೌಷ್ಟಿಕತೆ ನಿವಾರಣೆ. ಮಧುಮೇಹ, ಬಿಪಿಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗರ್ಭಿಣಿಯರಿಗೆ, ಬಾಣಂತಿ ಮಹಿಳೆಯರಿಗೆ, ಚಿಕ್ಕಮಕ್ಕಳಿಗೆ ಈ ಪಡಿತರ ಅಕ್ಕಿ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹವನ್ನು ತಂಪಾಗಿಡುತ್ತದೆ ಯಾರೂ ಆತಂಕಕ್ಕೀಡಾಬಾರದು. ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಫಲಾನುಭವಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಪಡಿತರ ಫಲಾನುಭವಿಗಳು ಈ ಹಿಂದೆ ಅನ್ನಭಾಗ್ಯ ಅಕ್ಕಿಯಲ್ಲಿ ಪಾಸ್ಟಿಕ್ ಅಕ್ಕಿ ಬರುತ್ತದೆ ಎಂಬ ಸುದ್ದಿ ಈಗಲೂ ಜನರ ಮನಸ್ಸಿನಲ್ಲಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಅಕ್ಕಿಯಲ್ಲಿ ಪೌಷ್ಟಿಕಾಂಶದ ಅಕ್ಕಿ ಸೇರಿಸಲಾಗಿದೆ ಎಂಬ ಮಾಹಿತಿ ನೀಡದೇ ಇರುವುದು ನಮ್ಮಲ್ಲಿ ಆತಂಕ, ಗಾಬರಿ ಮೂಡಿಸಿದೆ. ಈ ಬಗ್ಗೆ ಇಲಾಖೆಯವರು ಪ್ರತಿ ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಪಡಿತರ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು ಎಂದು ಪಡಿತರದಾರ ಮಂಜುನಾಥ ಗೊರವರ, ಲಕ್ಷ್ಮವ್ವ ಹಳ್ಳಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚನೆ…..? ಶಿವಕುಮಾರ್ ಬಣಕಾರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ತಾಲೂಕಿನ ಛಬ್ಬಿ ತಾಂಡಾದ ರೈತರು ಬೆಳೆದ ಮೆಕ್ಕೆಜೋಳವನ್ನು ಖರೀದಿದಾರರು ಖರೀದಿಸಿ ರೈತರಿಗೆ ಬರಬೇಕಾದ ಹಣವನ್ನು ಇಲ್ಲಿಯವರೆಗೂ ಕೊಟ್ಟಿರುವದಿಲ್ಲ. ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಎಸ್‌ಸಿ/ಎಸ್‌ಟಿ ದೌರ್ಜನ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಜಾನು ಲಮಾಣಿ ಹಾಗೂ ಮಹೇಶ ಲಮಾಣಿ ನೇತೃತ್ವದಲ್ಲಿ ತಹಸೀಲ್ದಾರ ಕೆ.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಾನು ಲಮಾಣಿ, ಮಹೇಶ ಲಮಾಣಿ, 2-12-2022ರಂದು ಹಾವೇರಿ ಜಿಲ್ಲೆಯ ಶಿವಕುಮಾರ ಬಣಕಾರ ಎಂಬುವವರು ನಮ್ಮ ಗ್ರಾಮದ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ೨೧೫೦ ರೂ.ಗಳಂತೆ ಖರೀದಿ ಮಾಡುವುದಾಗಿ ೧೫ ದಿನಗಳ ಒಳಗಾಗಿ ಹಣವನ್ನು ಕೊಡುತ್ತೇನೆ ಎಂದು ಒಪ್ಪಿ ರೈತರಿಂದ ಮೆಕ್ಕೆಜೋಳವನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಹಣ ಕೇಳಿದರೆ ಸುಳ್ಳು ಭರವಸೆಗಳನ್ನು ನೀಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ರೈತರಿಗಾದ ಅನ್ಯಾಯವನ್ನು ಸರಿಪಡಿಸಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕೆಂದು ಮನವಿ ಮೂಲಕ ಆಗ್ರಹಿಸಿದ್ದಾರೆ.

ಈ ಕೂಡಲೇ ಪೋಲೀಸ್ ಇಲಾಖೆಯ ಅಧಿಕಾರಿಗಳು ಇಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮೋಸಕ್ಕೆ ಒಳಗಾದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಪಿ ಯುವ ಮುಖಂಡ ಮಹೇಶ ಲಮಾಣಿ ಒತ್ತಾಯಿಸಿದರು.

ಗಂಗವ್ವ ಅಂಗಡಿ, ಚನ್ನಪ್ಪ ಪವಾರ, ಕೊಟ್ರೇಶ ಲಮಾಣಿ, ಕೇಶಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ಸಕ್ರಪ್ಪ ಲಮಾಣಿ, ರವಿ ಲಮಾಣಿ, ಮಂಜುನಾಥ ಭಜಂತ್ರಿ, ಮಾನಪ್ಪ ನಾಯಕ ರಾಮಪ್ಪ ಲಮಾಣಿ, ಮಲ್ಲೇಶ ಲಮಾಣಿ, ಪಾಂಡಪ್ಪ ಲಮಾಣಿ, ಮಂಜುನಾಥ ವಡ್ಡರ ಮುಂತಾದವರು ಉಪಸ್ಥಿತರಿದ್ದರು.

ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು..!

0

ವಿಷ ಹಾಕಿ ಕೊಲೆಗೈದು ನೇಣಿಗೆ ಶರಣಾದ ತಾಯಿ…….

ವಿಜಯಸಾಕ್ಷಿ ಸುದ್ದಿ, ಬೀದರ

ಇಬ್ಬರು ಹೆಣ್ಣು ಮಕ್ಕಳಿಗೆ ವಿಷಹಾಕಿ ಕೊಲೆಗೈದು ತಾಯಿಯೊಬ್ಬಳು ನೇಣಿಗೆ ಶರಣಾದ ಮನ ಕಲುಕುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಹಳ್ಳಿ ತಾಂಡಾದಲ್ಲಿ ಮೀರಾಬಾಯಿ (24) ಎಂಬ ಮಹಿಳೆ ತನ್ನಿಬ್ಬರ ಮಕ್ಕಳಿಗೆ ವಿಷ ಹಾಕಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲ್ಕು ವರ್ಷದ ನಚ್ಚುಬಾಯಿ‌ ಹಾಗೂ ಎರಡೂವರೆ ವರ್ಷದ ಗೋಲುಬಾಯಿ‌ಯನ್ನು ಕೊಲೆಗೈದು ತಾನಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಸುದ್ದಿ ಗೊತ್ತಾದ ನಂತರ ಮೃತ ಮಹಿಳೆ ಮೀರಾಬಾಯಿ ಪತಿ ಹಾಗೂ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೀರಾಬಾಯಿ ಹಾಗೂ ಮಕ್ಕಳ‌ ಸಾವಿಗೆ ಪತಿ ಕುಟುಂಬದವರೇ ಕಾರಣ ಎಂದು ಮೀರಾಬಾಯಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಭಾಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟಂಟಂ ರಿಕ್ಷಾ ಬೈಕ್ ಗೆ ಡಿಕ್ಕಿ; ಇಬ್ಬರು ಯುವಕರು ಸಾವು

ಬೈಕ್ ಸವಾರ ಸ್ಥಳದಲ್ಲಿಯೇ ಸಾವು….ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು

ವಿಜಯಸಾಕ್ಷಿ ಸುದ್ದಿ, ರೋಣ/ಗದಗ

ವೇಗವಾಗಿ ಹೊರಟಿದ್ದ ಟಂಟಂ ರಿಕ್ಷಾ ವಾಹನವು ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ, ರಿಕ್ಷದಲ್ಲಿದ್ದ ಮತ್ತೊಬ್ಬ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ರೋಣ ಪಟ್ಟಣದ ಸಮೀಪ ಬದಾಮಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತರನ್ನು ರೋಣ ತಾಲೂಕಿನ ಹಿರೇಹಾಳ ಗ್ರಾಮದ ಅಮರಗೌಡ ತಂದೆ ಬಸನಗೌಡ ಗೌಡರ (30) ಹಾಗೂ ಶಾಂತಗೇರಿ ಗ್ರಾಮದ ಮುತ್ತಪ್ಪ ತಂದೆ ಬಾಳಪ್ಪ ಜಾಲಿಹಾಳ (27)ಎಂದು ಗುರುತಿಸಲಾಗಿದೆ.

ರೋಣ ಪಟ್ಟಣದಿಂದ ಬದಾಮಿ‌ ಕಡೆ ಹೊರಟಿದ್ದ ಟಂಟಂ ರಿಕ್ಷಾ ವಾಹನವು ಎದುರಿಗೆ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಅಮರಗೌಡಗೆ ಬಲವಾದ ಪೆಟ್ಟು ಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಟಂಟಂ ರಿಕ್ಷಾದಲ್ಲಿದ್ದ ಮುತ್ತಪ್ಪ ಜಾಲಿಹಾಳಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ರೋಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ‌ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮುತ್ತಪ್ಪ ಜಾಲಿಹಾಳ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ರೋಣ ಠಾಣೆಯ ಪಿಎಸ್ಐ ಚಂದ್ರಶೇಖರ ಹೆರಕಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ 279, 304 (ಎ)10/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲೋಕಾಯುಕ್ತರ ದಾಳಿ; ಲಂಚ ಪಡೆಯುವಾಗ ಹೋಮ್ ಗಾರ್ಡ್ಸ್ ಅಧಿಕಾರಿಗಳು ಬಲೆಗೆ

0

ವರ್ಗಾವಣೆಗೆ ಲಂಚ ನೀಡುವಾಗ ಲೋಕಾಯುಕ್ತ ದಾಳಿ: ಗೃಹರಕ್ಷಕ ದಳದ ಸಮಾದೇಷ್ಠ ಸೇರಿ ಇಬ್ಬರು ಬಲೆಗೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಗೃಹರಕ್ಷಕನನ್ನು ಮುನಿರಾಬಾದಿನಿಂದ ಗಂಗಾವತಿಗೆ ವರ್ಗಾವಣೆ ಮಾಡಲು ಗೃಹ ರಕ್ಷಕ ದಳದ  ಸಮಾದೇಷ್ಠ ಹಾಗೂ ನೌಕರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ಕೊಪ್ಪಳದಲ್ಲಿ ನಡೆದಿದೆ.

ಮುನಿರಾಬಾದ್‌ನಲ್ಲಿ ಗೃಹರಕ್ಷಕನಾಗಿ ಕಾರ್ಯ‌ನಿರ್ವಹಿಸುತ್ತಿದ್ದ ಮೆಹಬೂಬಪಾಷಾ ಮಿಸ್ಕಿನ್‌ಸಾಬ್ ಅವರು ಜನವರಿ 14ರಂದು ಕೊಪ್ಪಳದಲ್ಲಿ ಇರುವ ಗೃಹ ರಕ್ಷಕ ದಳದ ಸಮೇದೇಷ್ಠ ಗವಿಸಿದ್ದಪ್ಪ ಅವರನ್ನು ಭೇಟಿಯಾಗಿ ಗಂಗಾವತಿಗೆ ವರ್ಗಾವಣೆ ಮಾಡಲು‌ ಕೋರಿದ್ದಾರೆ. ಗವಿಸಿದ್ದಪ್ಪ ಅವರು ವರ್ಗಾವಣೆ ಮಾಡು 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ.

ಜನವರಿ 17ರಂದು (ಮಂಗಳವಾರ) ವರ್ಗಾವಣೆಗೆ ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ಚೌಕಾಸಿ ನಡೆದು, ಕೊನೆಗೆ 6 ಸಾವಿರ ರೂಪಾಯಿಗೆ ವರ್ಗಾವಣೆ ಮಾಡಲು ಸಮಾದೇಷ್ಠ ಗವಿಸಿದ್ದಪ್ಪ ಅವರು ಒಪ್ಪಿ ಲಂಚ ಸ್ವೀಕರಿಸುವಾಗ ಸಮಾದೇಷ್ಠ ಗವಿಸಿದ್ದಪ್ಪ ಮತ್ತು ಗೃಹರಕ್ಷಕ ದಳದ ಘಟಕಾಧಿಕಾರಿ ರುದ್ರಪ್ಪ ಗಿರಿಯಪ್ಪ ಪತ್ತಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಹಣ ಜಪ್ತಿ ಮಾಡಿರುವ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಾಳಿಯು ಲೋಕಾಯುಕ್ತ ಅಧೀಕ್ಷಕ ಡಾ.ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ, ಉಪ ಅಧೀಕ್ಷಕ ಸಲೀಂಪಾಷಾ ನೇತೃತ್ವದಲ್ಲಿ ಪಿಐಗಳಾದ ಚಂದ್ರಪ್ಪ ಈಟಿ, ರಾಜೇಶ್ ಬಟಗುರ್ಕಿ, ಗಿರೀಶ್ ರೋಡ್ಕರ್ ಮತ್ತಿತರ ಸಿಬ್ಬಂದಿಯಿಂದ ನಡೆಯಿತು.

ಭೀಕರ ರಸ್ತೆ ಅಪಘಾತ; ಇಬ್ಬರು ಸ್ಥಳದಲ್ಲಿಯೇ ಸಾವು

0

ಬೊಲೆರೊ-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ..ಟೊಮೆಟೊ ಚೆಲ್ಲಾಪಿಲ್ಲಿ……

ವಿಜಯಸಾಕ್ಷಿ ಸುದ್ದಿ, ನವಲಗುಂದ

ಇಲ್ಲಿಯ ಹುಬ್ಬಳ್ಳಿ – ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಬೆಳವಟಗಿ ಫಾರ್ಮ್ ಹತ್ತಿರ ಟ್ರಕ್ ಹಾಗೂ ಬೊಲೆರೊ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ನರಗುಂದದಿಂದ ನವಲಗುಂದ ಕಡೆಗೆ ಬರುತ್ತಿದ್ದ ಟೊಮೆಟೊ ತುಂಬಿದ ಬೊಲೆರೊ ವಾಹನ ಹಾಗೂ ನವಲಗುಂದ ಕಡೆಯಿಂದ ನರಗುಂದ ಕಡೆಗೆ ಹೊರಟಿದ್ದ ಟ್ರಕ್‍ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೊಲೆರೊ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಾಜು ಹಿರೇಮಠ (21) ಹಾಗೂ ವಿಜಯ ಕಾಶೆ (23) ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಸಿಪಿಐ ಡಿ.ಬಿ ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ‌ಕೈಗೊಂಡಿದ್ದಾರೆ.

ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಇಸ್ಲಾಂ ಧರ್ಮದವರಿಂದ ದಾಸೋಹ

ಅಲ್ಲಮ, ಅಲ್ಲಾ ಎಲ್ಲಾ ಒಂದೇ ಎಂಬ ಮಂತ್ರವನ್ನು ಜಪಿಸಿದ ಸುವರ್ಣ ಕ್ಷಣಕ್ಕೆ ಹಾಲಕೆರೆಮಠದಂಗಳ ಸಾಕ್ಷೀಕರಿಸಿತು.

ವಿಜಯಸಾಕ್ಷಿ ಸುದ್ದಿ, ಗದಗ

ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥ ಬದಲಿಸುವ ಸುಸಮಯದಲ್ಲಿ ಹಾಲಕೆರೆ ಮಠ ಆನಂದಾಶ್ರಮದಲ್ಲಿ ಸೋಮವಾರ ಜರುಗಿದ ಸಾಮರಸ್ಯ ಸಾರುವ ಅಮೋಘ ಪ್ರಸಂಗಕ್ಕೆ ನೆರೆದಿದ್ದ ಸಾವಿರಾರು ಜನರು ಮೂಕವಿಸ್ಮಿತರಾದರು.

ಬಸವ ಪುರಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಇಸ್ಲಾಂ ಧರ್ಮದವರು ನಾವೆಲ್ಲರೂ ಒಂದೇ ಎಂಬ ಭಾವನೆ, ಬದ್ಧತೆಯನ್ನು ಅಪ್ಪಿಕೊಂಡರು, ಒಪ್ಪಿಕೊಂಡರು. ಅಲ್ಲದೇ ಸೇರಿದ್ದ ಸಾವಿರಾರು ಸಂಖ್ಯೆಯ ಭಕ್ತಗಣಕ್ಕೆ ದಾಸೋಹ ಸೇವೆಗೈದದ್ದು ಅಚ್ಚರಿ ಮೂಡಿಸಿತು. ಬಸವ ಪುರಾಣವು ಸಾರ್ಥಕ ಕಂಡ ಗಳಿಗೆ. ಅಲ್ಲಮ, ಅಲ್ಲಾ ಎಲ್ಲಾ ಒಂದೇ ಎಂಬ ಮಂತ್ರವನ್ನು ಜಪಿಸಿದ ಸುವರ್ಣ ಕ್ಷಣಕ್ಕೆ ಹಾಲಕೆರೆಮಠದಂಗಳ ಸಾಕ್ಷೀಕರಿಸಿತು.

ಹಾಲಕೆರೆ ಮಠದ ಲಿಂ. ಶ್ರೀ ಡಾ. ಅಭಿನವ ಅನ್ನದಾನ ಸ್ವಾಮೀಜಿ ಅವರ ಸಂಕಲ್ಪದಂತೆ ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ತಿಂಗಳು ಪರ್ಯಂತ ಬಸವ ಪುರಾಣ ಸಾರ್ಥಕ ಕಂಡ ಗಳಿಗೆ. ಅಲ್ಲಿ ಮೌನವೇ ಮಾತಾಗಿತ್ತು, ವೇದಿಕೆ ಮೇಲಿದ್ದ ಹರಗುರು ಚರಮೂರ್ತಿಗಳು ತಮ್ಮೊಳಗೆ ಅನುಭವಿಸುತ್ತಿರುವ ಸಂಭ್ರಮ ವರ್ಣಿಸಲಾಗದಷ್ಟು.

ನಮಾಜ್ ಮಾಡುವ ಬಾಯಿಂದ ವಚನಗಳ ಮಂತ್ರಾಕ್ಷತೆ ಹೊರಹೊಮ್ಮಿದಾಗಲಂತೂ ಇರುವುದೊಂದೇ ಮನುಷ್ಯ ಜಾತಿ ಎಂಬ ಉದ್ಘೋಷ. “ಇವನಾರವ, ಇವನಾರವ ಎನ್ನದಿರಯ್ಯ, ಇವ ಇವ ನಮ್ಮವೆಂದಿನಿಸಯ್ಯ ಕೂಡಲಸಂಗದೇವ” ವಚನ ಅಕ್ಷರಶಃ ಅಲ್ಲಿ ಪಾಲನೆಯಾಗಿತ್ತು.

ಹಾಲಕೆರೆಮಠ ಸಮಾಜಕ್ಕೊಂದು ದಿವ್ಯ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಶ್ರೀ ಮುಪ್ಪಿನ ಬಸವ ಲಿಂಗ ಮಹಾಸ್ವಾಮೀಜಿ ಅವರಿಗಂತೂ ತಮ್ಮ ಗುರುಗಳ ಆಶಯವನ್ನು ನೆರವೇರಿಸಿದ ಸಂತೃಪ್ತಿ ಭಾವ ಅವರಲ್ಲಿ ಕಾಣಿಸುತ್ತಿತ್ತು.

ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ನಾಡಿನಲ್ಲಿ ಬಸವಣ್ಣನವರು ಏನು ಮಾಡಿದರು ಎಂಬುದಕ್ಕೆ ಗದಗ ನಗರದ ಹಾಲಕೆರೆಮಠದಲ್ಲಿ ನಡೆದ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಿದೆ. ಎಲ್ಲ ಸಮಾಜದ ಜನರನ್ನು ಒಂದು ಕಡೆಗೆ ಕೂಡಿಸಿಕೊಂಡು ಬಸವಣ್ಣನವರು ಅನುಭವ ಮಂಟಪ ಮಾಡಿದರು. ಅಂತಹ ಅನುಭವ ಮಂಟಪದ ತದ್ರೂಪ ಎನಿಸಿರುವ ಹಾಲಕೆರೆಮಠದ ಕಾರ್ಯ ಶ್ಲಾಘನೀಯ. ಇಂದು ಅಲ್ಲಮನ ಪ್ರಸಂಗವಿದೆ, ಅಲ್ಲಾನ ದಾಸೋಹವಿದೆ. ಇದಕ್ಕಿಂತ ಸಾಮರಸ್ಯ ಮತ್ತೊಂದಿಲ್ಲ. ಸಮಾಜಜಕ್ಕೆ ಇದಕ್ಕಿಂತ ದೊಡ್ಡ ಸಂದೇಶ ಬೇಕಿಲ್ಲ ಎಂಬ ಅಭಿಪ್ರಾಯ ನನ್ನದಾಗಿದೆ ಎಂದರು.

ಅರೇಬಿಕ್ ಶಿಕ್ಷಕ ಲಾಲ್ ಹುಸೇನ ಕಂದಗಲ್, ಜಾತಿ, ಕುಲ, ಧರ್ಮ, ಗೋತ್ರಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ತಂದೆ ತಾಯಿ ಮಕ್ಕಳೆಂಬ ನೆಲೆಯಲ್ಲಿ ಬದುಕಬೇಕಿದೆ. ಸೌಹಾರ್ದತೆ ಸಂದೇಶ ಈ ಪುರಾಣದ ಮೂಲಕ ಪುಂಖಾನುಪುಂಖವಾಗಿ ಹರಿದು ಬರುತ್ತಿದೆ. ಮತ್ತೊಬ್ಬರನ್ನು ಪ್ರೀತಿಸುವಂತಹ ಹೃದಯ ವೈಶಾಲ್ಯತೆ ಕಲಿಯೋಣ. ಅಂತಹ ಶಿಕ್ಷಣ ಮಠಗಳು, ಮಸೀದಿಗಳ ಮೂಲಕ ಮೊಳಗುತ್ತಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು. ಇಂಥ ಪುಣ್ಯದ ಕೆಲಸ ಬೆಂಬಲಿಸಿ ನನ್ನ ಸಮುದಾಯದ ಪರವಾಗಿ ಮಾತನಾಡುತಿದ್ದೇನೆ ಎಂದು ಹೇಳಿದರು. ಇಸ್ಲಾಂ ಧರ್ಮದವರು ದಾಸೋಹಕ್ಕೆ ಸುರಕೂರ್ಮ, ಪಲಾವ್ ಸೇವೆ ಮಾಡಿದರು.

ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಸ್ವಾಮೀಜಿ, ಕುರಗೋಡದ ನಿರಂಜನ ಪ್ರಭು ದೇವರು, ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡಿ ವಿರಕ್ತಮಠದ ಮರಿಕೊಟ್ಟೂರು ದೇವರು, ಬೂದಗುಂಪದ ಸಿದ್ಧೇಶ್ವರ ದೇವರು, ವ್ಯಾಕರನಾಳು ವಿಶ್ವೇಶ್ವರ ದೇವರು, ವಾಗೀಶ ದೇವರು, ಪ್ರವಚನಕಾರ ಅಬ್ದುಲ್ ಖಾದಿರ್ ಅಣ್ಣಿಗೇರಿ ವೇದಿಕೆ ಮೇಲಿದ್ದರು. ಶಿವಲಿಂಗ ಶಾಸ್ತ್ರಿ ಸಿದ್ದಾಪೂರ ಸ್ವಾಗತಿಸಿದರು. ಇಸ್ಲಾಂ ಧರ್ಮದವರನ್ನು ನಗರದ ಹಾತಲಗೇರಿ ನಾಕಾದಿಂದ ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು.

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಎಲ್ಲ ಧರ್ಮಗಳ ಸಾರ ಒಂದೇ, ಗುರು ಎಲ್ಲರಿಗೂ ಒಬ್ಬನೆ. ಯಾವ ಧರ್ಮವೂ ಕೆಟ್ಟದ್ದನ್ನ ಬೋಧಿಸಿಲ್ಲ, ಎಲ್ಲ ಧರ್ಮಗಳು ಶಾಂತಿಯನ್ನು ಪ್ರತಿಪಾದಿಸಿವೆ. ಇದಕ್ಕೆ ಇಸ್ಲಾಂ ಕೂಡಾ ಹೊರತಲ್ಲ. ಇಸ್ಲಾಂ ಧರ್ಮದವರು ಬಸವ ಪುರಾಣ ದಾಸೋಹ ಸೇವೆಗೂಡಿರುವುದು ಅತ್ಯಂತ ಶ್ಲಾಘನೀಯ. ಸಾಮರಸ್ಯ ಸಾರುವ ಈ ಕ್ಷಣ ಎಲ್ಲರಿಗೂ ಮಾದರಿ ಎಂದರು.

error: Content is protected !!