Home Blog Page 3207

ಶ್ರೀನಿವಾಸ್ ಕೊಲೆ ಕೇಸ್- ಆರೋಪಿಗಳ ಮೇಲೆ ಫೈರಿಂಗ್

0

ಕೋಲಾರ;- ಕೋಲಾರದ ಕಾಂಗ್ರೆಸ್ ಮುಖಂಡ, ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಪ್ರಮುಖ ಆರೋಪಿ ವೇಣುಗೋಪಾಲ್ ಹಾಗೂ ಮನೀಂದ್ರ ಕಾಲಿಗೆ ಗುಂಡೇಟು ಬಿದ್ದಿದೆ. ಮತ್ತೊಬ್ಬ ಆರೋಪಿ ಸಂತೋಷ್‌ಗೂ ಗಾಯಗಳಾಗಿವೆ. ಕೋಲಾರ ಜಿಲ್ಲೆ‌ ವೇಮಗಲ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರು ಫೈರಿಂಗ್ ಮಾಡಿದ್ದಾರೆ.

ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಲಕ್ಷ್ಮೀಸಾಗರ ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಯಿತು. ಹಲ್ಲೆ ವೇಳೆ ಇನ್‌ಸ್ಪೆಕ್ಟರ್ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಮತ್ತು ನಾಗೇಶ್ ಅವರಿಗೂ ಗಾಯಗಳಾಗಿವೆ. ಗಾಯಾಳುಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬರ ಇದ್ದರೂ ಸಾಲ ಕಟ್ಟಲು ಬ್ಯಾಂಕು ನೋಟಿಸ್‌: ಕಂಗಾಲಾದ ರೈತ

0

ಧಾರವಾಡ;- ಬರಗಾಲದಿಂದ ತತ್ತರಿಸಿರುವ ರೈತರಿಗೆ ಇದೀಗ ಶಾಕ್ ಎದುರಾಗಿದ್ದು, ಬೆಳೆಸಾಲ ತುಂಬುವಂತೆ ಬ್ಯಾಂಕ್‌ ಗಳಿಂದ ನೋಟಿಸ್‌ ಬರುತ್ತಿದೆ. ಇನ್ನೂ ಇಂತಹದೊಂದು ನೋಟಿಸ್‌ಗೆ ನವಲಗುಂದ ತಾಲೂಕಿನ ರೈತನೋರ್ವ ಭಯಗೊಂಡು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿಯುವಂತಾಗಿದೆ.

ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ರೈತ ಮಹಾದೇವಪ್ಪ ಜಾವೂರು ಎಂಬುವರು ತಮ್ಮ 19 ಎಕರೆ ಹೊಲದ ಮೇಲೆ ಬೆಳೆ ಸಾಲ ತೆಗೆದುಕೊಂಡಿದ್ದಾರೆ. ಅವರಿಗೀಗ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ. ಮೊರಬ ಗ್ರಾಮದಲ್ಲಿರುವ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ.

2017ರಲ್ಲಿ ₹14.50 ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದು, ಈ ಸಾಲ ಇದೀಗ ₹34.50 ಲಕ್ಷಕ್ಕೆ ಏರಿಕೆಯಾಗಿದೆ. ಜತೆಗೆ ಬ್ಯಾಂಕಿನ ನಿಯಮಾವಳಿಯಂತೆ ಲಭ್ಯವಿರುವ ಏಕಕಂತು ಸಾಲ ಪರಿಹಾರ ಯೋಜನೆ ಮೂಲಕ ಸಾಲ ತೀರಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಇದೂ ಆಗದೇ ಹೋದಲ್ಲಿ ನಿಯಮಾವಳಿ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ಯಾಂಕ್‌ ತನ್ನ ನೋಟಿಸ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ.

ಏತನ್ಮಧ್ಯೆ ಮಹಾದೇವಪ್ಪ ಅವರ ಪುತ್ರ ಷಣ್ಮುಖ ಜಾವೂರ ಅವರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಬ್ಯಾಂಕ್‌ ಸಿಬ್ಬಂದಿ ಕಡ್ಡಾಯವಾಗಿ ಸಾಲ ತುಂಬಲು ಒತ್ತಾಯಿಸುತ್ತಿದ್ದಾರೆ. ತಂದೆಯವರು ಇದನ್ನು ಕೇಳಿ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ತಂದೆಗೆ ಪ್ರಜ್ಞೆ ಬಂದಿಲ್ಲ. ಈಗಾಗಲೇ ₹3 ಲಕ್ಷ ವೆಚ್ಚ ಮಾಡಿದ್ದೇನೆ. ತಂದೆಯವರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಇತ್ತ ಬ್ಯಾಂಕ್‌ನವರು ಹಣ ತುಂಬಲು ತಾಕೀತು ಮಾಡುತ್ತಿದ್ದಾರೆ. ಆದ್ದರಿಂದ ತಾವು ಮಧ್ಯೆ ಪ್ರವೇಶಿಸಿ ಸಾಲ ಮನ್ನಾ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ವಿಜಯದಶಮಿ ಹಿನ್ನೆಲೆ: ಇಂದು ಬನಶಂಕರಿಗೆ ವಿಶೇಷ ಅಲಂಕಾರ

0

ಬೆಂಗಳೂರು;- ವಿಜಯದಶಮಿ ಹಿನ್ನೆಲೆ, ಸಿಲಿಕಾನ್ ಸಿಟಿ ಬೆಂಗಳೂರಿನ ಬನಶಂಕರಿಗೆ ಇಂದು ವಿಶೇಷ ಅಲಂಕಾರ ಮಾಡಲಾಗಿದೆ. ವಿಶೇಷ ಅಲಂಕಾರವನ್ನ ಮಾಡಿ ನಂತರ ಭಕ್ತದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಚಂಡಿಕಾಹೋಮ ಇರಲಿದ್ದು, ಮಧ್ಯಹ್ನದ ನಂತರ ಬನ್ನಿ ಪೂಜೆ ಆರಂಭವಾಗಲಿದೆ. ಇಂದು ದೇವಸ್ಥಾನಕ್ಕೆ 40 ಸಾವಿರಕ್ಕು ಹೆಚ್ಚು ಜನರು ಬರುವ ನಿರೀಕ್ಷೆ ಇದ್ದು, ಬರುವ ಭಕ್ತದಿಗಳಿಗೆ ಅನ್ನ, ಪ್ರಸಾದ, ಪ್ರಸಾದ ವಿತರಣೆ ನಡೆಯಲಿದೆ. ಬನಶಂಕರಿ ದೇವಸ್ಥಾನಕ್ಕೆ ಜನಸಾಗರ ಬರುತ್ತಿದೆ.

ಬೀದರ್ ಪೊಲೀಸ್‌ರಿಂದ ದಸರಾ ಹಬ್ಬದ ಭರ್ಜರಿ ಭೇಟೆ: ಒಂಬತ್ತು ಪ್ರಕರಣ ಭೇದಿಸಿದ ಪೋಲಿಸರು

0

ಬೀದರ್: ಬೀದರ್ ಪೊಲೀಸರು (Bidar Police) ಅಂತರ್ ರಾಜ್ಯ ದರೋಡೆಕೋರರ (Robbery) ಹೆಡೆ ಮುರಿ ಕಟ್ಟಿದ್ದಾರೆ. ಬೀದರ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ, ದರೋಡೆ, ಮನೆಗಳ್ಳತನ ಸೇರಿ ಒಟ್ಟು ಐದು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 9 ದರೋಡೆಕೋರರನ್ನು ಬಂಧಿಸಿದ್ದಾರೆ. ಹಾಗೂ 94 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕಂಟೆನರ್ ಡ್ರೈವರ್‌ಗೆ ಮತ್ತು ಬರುವ ಇಂಜೆಕ್ಷನ್ ಚುಚ್ಚಿ ಲಾರಿ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲಾರಿಯಲ್ಲಿ ಸಾಗಿಸುತ್ತಿದ್ದ 50 ಲಕ್ಷ 76 ಸಾವಿರ ಮೌಲ್ಯದ 694 ಫ್ಯಾನ್ ಬಾಕ್ಸ್ ಹಾಗೂ ಲಾರಿ ವಶಕ್ಕೆ ಪಡೆಯಲಾಗಿದೆ. 12 ಲಕ್ಷ 82 ಸಾವಿರ ಮೌಲ್ಯದ 180 ಗ್ರಾಮ್ ಬಂಗಾರದ ಆಭರಣ, ಎರಡು ಕೆಜಿಯಷ್ಟು ಬೆಳ್ಳಿಯ ಆಭರಣ ಒಂದು ಬೈಕ್ 20 ಸಾವಿರ ನಗದು ಹಣ ವಶಕ್ಕೆ ಪಡೆಯಲಾಗಿದೆ.

ಸಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಗಾಂಜಾ ಪ್ರಕರಣ ಭೇದಿಸಿದ್ದಾರೆ. ಔರಾದ್ ತಾಲೂಕಿನ ವಿಜಯನಗರ ತಾಂಡಾದಲ್ಲಿ ರೈತ ತೊಗರಿ ಹೊಲದಲ್ಲಿ ಅಕ್ರಮವಾಗಿ 63.86 ಕೆಜಿಯಷ್ಟು 79 ಗಾಂಜಾ ಗಿಡಗಳನ್ನು ಬೆಳೆಸಿದ್ದ. ದಾಳಿ ಮಾಡಿದ ಪೊಲೀಸರು 25 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಒಟ್ಟು ಐದು ಪ್ರಕರಣದಲ್ಲಿ 94 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.

ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗ್ತಾರೆ ಎಂಬ ಚರ್ಚೆ ವಿಚಾರ: ಎಂಪಿ ರೇಣುಕಾಚಾರ್ಯ ಹೇಳಿದ್ದೇನು..?

0

 ದಾವಣಗೆರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತಾದ ಸುದ್ದಿಗಳ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಅವರು, “ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡೋಣ. ಒಟ್ಟಾರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕುಎಂದು ತಿಳಿಸಿದರು.

ನಾನು ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಮೊನ್ನೆ ಚುನಾವಣೆ ವೇಳೆ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಹಳಬರ ಕಾಲು ಏನಾದರೂ ಬಿದ್ದು ಹೋಗಿದ್ದವಾ? ಚುನಾವಣೆ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಆದರೆ, ಅದು ಆಗಲಿಲ್ಲಎಂದರು.

ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯಕ್ಕೆ ಅವರಂತಹ ಜಾತ್ಯತೀತ ಹಾಗೂ ಸಮರ್ಥ ನಾಯಕ ಬೇಕು. ವಿಜಯದಶಮಿ ದಿನ ಒಂದು ಮಾತು ಹೇಳುತ್ತಿದ್ದೇನೆ; ರಾಜ್ಯದಲ್ಲಿ ಬಿಎಸ್ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಸೂಕ್ತ. ಬಿಎಸ್ವೈ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಹಿಂದೆ ನಿಲ್ಲುತ್ತಾರೆಎಂದರು.

ಕಾಂಗ್ರೆಸ್ ಮುಖಂಡನ ಹತ್ಯೆ ಕೇಸ್: ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು ಗೊತ್ತಾ!?

0

ಕೋಲಾರ : ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯ ಬಳಿ ಮಾತನಾಡಿದ ಅವರು, ಮೃತ ಶ್ರೀನಿವಾಸ ,ಜಿ.ಪಂ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಜನಮನ್ನಣೆ ಗಳಿಸಿದ್ದ ವ್ಯಕ್ತಿಯ ನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಪೋಲಿಸರು ಟೀಂ ರೆಡಿ ಮಾಡಿ ತನಿಖೆ ಶುರು ಮಾಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೊಲೆಗೆ ಯಾವುದರ ಲಿಂಕ್ ಇದೆ ಅನ್ನೋದು ಈಗಲೇ ಹೇಳೋಕೆ ಆಗಲ್ಲ. ಶೀಘ್ರವೇ ಬಂಧಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

ಮುಂದುವರಿದ ಬಿಬಿಎಂಪಿ ಅಧಿಕಾರಿಗಳ ಕಾರ್ಯಚರಣೆ: ಪಬ್, ಬಾರ್ ಮೇಲೆ ದಾಳಿ

0

ಬೆಂಗಳೂರು;- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳಿಂದ ಕಾರ್ಯಚರಣೆ ಮುಂದುವರಿದಿದ್ದು, ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದ ಪಬ್ ,ಬಾರ್ ನೋಟಿಸ್ ಜಾರಿ ಮಾಡಿದ್ದು, 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ನಿನ್ನೆ ಪಾಲಿಕೆ ವ್ಯಾಪ್ತಿಯಲ್ಲಿ 79 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 26 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಗಿದೆ. 05 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ. ಇಂದು ಪರಿಶೀಲನೆ ಕಾರ್ಯವನ್ನ ಅಧಿಕಾರಿಗಳು ಮುಂದುವರೆಸಿದ್ದಾರೆ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ – ಯು.ಟಿ.ಖಾದರ್

0

ತೀರ್ಥಹಳ್ಳಿ;- ಸ್ಪೀಕರ್ ಆದವರು ಹೆಚ್ಚು ಮಾತನಾಡದೇ ಪ್ರತಿಪಕ್ಷದ ಸ್ನೇಹಿತರಂತೆ ಕಾರ್ಯನಿರ್ವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಆಗುಂಬೆ ಸಮೀಪದ ಹಸಿರುಮನೆ ಗ್ರಾಮದ ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಮಹಾಬಲೇಶ್ ಮನೆ ಆವರಣದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನವೇ ನಮ್ಮ ಪಕ್ಷ ಮತ್ತು ಧರ್ಮವಾಗಿದ್ದು, ಅದಕ್ಕೆ ನಿಷ್ಠರಾಗಿ ಶಿಷ್ಠಾಚಾರಕ್ಕೆ ಅಪಚಾರವಾಗದಂತೆ ಕಾರ್ಯನಿರ್ವಹಿಸುವ ಬದ್ಧತೆ ನಮ್ಮ ಮೇಲಿದೆ. ಆಡಳಿತವನ್ನು ಎಚ್ಚರಿಸುವ ಸಲುವಾಗಿ ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶವನ್ನೂ ಕಲ್ಪಿಸಬೇಕಾಗುತ್ತದೆ ಎಂದರು.

ಇನ್ನೂ ವಿಧ್ಯಾರ್ಥಿಗಳ ಕೊರತೆಯಿಂದ ಬಡವಿದ್ಯಾರ್ಥಿಗಳು ಓದುವ ಸರ್ಕಾರಿ ಶಾಲೆಗಳು ಸೊರಗದಂತೆ ಅಭಿವೃದ್ಧಿಪಡಿಸಲು ಎಸ್‍ಡಿಎಂಸಿ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅನಿವಾರ್ಯವಾಗಿದೆ. ಶೈಕ್ಷಣಿಕ ಅಭಿವೃದ್ದಿಯಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ ಎಂದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತಾಲೂಕಿನ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಸಾರ್ವಜನಿಕರ ಸಹಕಾರದಿಂದ ಶಾಲೆಯೊಂದು ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಗುಡ್ಡೇಕೇರಿಯ ಈ ಶಾಲೆ ಮಾದರಿಯಾಗಿದೆ ಎಂದರು.

ಬರಗಾಲ ಸ್ಥಿತಿ: ರಾಜಕಾರಣಿಗಳು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಿ – ಬಸವರಾಜ ಹೊರಟ್ಟಿ

0

ಹುಬ್ಬಳ್ಳಿ;-ರಾಜಕಾರಣಿಗಳು ಕೇವಲ ಆರೋಪ, ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುತ್ತಿರುವುದು ಆತಂಕಕಾರಿ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಮಾತನಾಡಿದ ಅವರು, ಇಂದು ರಾಜಕೀಯ ಸಂಪೂರ್ಣವಾಗಿ ಕಲುಷಿತಗೊಂಡಿದೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸದೇ ಕೇವಲ ಆರೋಪ, ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುತ್ತಿರುವುದು ಆತಂಕಕಾರಿ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈಗಾಗಲೇ ಅನಾವೃಷ್ಟಿ ಉದ್ಭವವಾಗಿದೆ. ಇಂತಹ ಸಮಯದಲ್ಲಿ ಜನಪ್ರತಿನಿಧಿಗಳು ರಾಜಕಾರಣ ಮಾಡುವುದನ್ನು ಕೈ ಬಿಡಬೇಕು. ರಾಜ್ಯದ ಅಭಿವೃದ್ಧಿಯ ಬಗ್ಗೆ, ಜನರ ಹಿತಾಸಕ್ತಿಯ ಬಗ್ಗೆ ಗಮನಹರಿಸಬೇಕಿದೆ. ಆದರೆ, ಇದು ಆಗದಿರುವುದು ಕಳವಳಕಾರಿ ಸಂಗತಿ ಎಂದು ವಿಷಾಧಿಸಿದರು.

ಮುಳುಗಡೆ ರೈತರಿಗೆ ಭೂಮಿ ನೀಡದಿದ್ದರೆ ತಿನ್ನುವ ಅನ್ನಕ್ಕೆ ದ್ರೋಹ ಬಗೆದಂತೆ – ಮಧು ಬಂಗಾರಪ್ಪ

0

ಬ್ಯಾಕೋಡ;- ಮುಳುಗಡೆ ರೈತರಿಗೆ ಭೂಮಿ ನೀಡದಿದ್ದರೆ ತಿನ್ನುವ ಅನ್ನಕ್ಕೆ ದ್ರೋಹ ಬಗೆದಂತೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಮಲೆನಾಡಿಗರು ಫಲವತ್ತಾದ ಹೊಲ- ಗದ್ದೆಗಳನ್ನು ಮತ್ತು ತಮ್ಮ ಬದುಕನ್ನು ನೀರಿನಲ್ಲಿ ಮುಳುಗಿಸಿ ನಾಡಿಗೆ ಬೆಳಕು ನೀಡಲು ಕಾರಣರಾಗಿದ್ದಾರೆ. ಅವರಿಗೆ ಭೂಮಿ ಹಕ್ಕನ್ನು ನೀಡದೇ ಹೋದರೆ, ನಾವು ತಿನ್ನುವ ಅನ್ನಕ್ಕೆ ದ್ರೋಹ ಬಗೆದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಮುಳುಗಡೆ ರೈತರಿಗೆ, ಅರಣ್ಯ ಹಕ್ಕು ಕಾಯಿದೆ ಸಂಬಂಧಿತ ಅರ್ಜಿಗಳನ್ನು ಪುನರ್ ಪರಿಶೀಲಿಸಿ, 94 ಸಿಸಿ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸಲಾಗುವುದು. ಕೃಷಿಗೆ ಸಂಬಂಧಿಸಿದಂತೆ ನಿರಂತರ 5 ಗಂಟೆ ಉಚಿತ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ.

ಮಂತ್ರಿಯಾದ ನಂತರ ಶೈಕ್ಷಣಿಕವಾಗಿ ₹35 ಸಾವಿರ ಕೋಟಿ ಖರ್ಚು ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು. ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದ್ದು, ಈಗಾಗಲೇ 9000 ಶಿಕ್ಷಕರ ಆಯ್ಕೆ ಪ್ರಕ್ರಿಯೆ ಮುಗಿದಿದೆ.

ದಸರಾ ರಜೆ ಮುಗಿಸಿ ಶಾಲೆಗಳನ್ನು ಪುನರಾರಂಭ ಮಾಡುವ ಹೊತ್ತಿನಲ್ಲಿ ಶಿಕ್ಷಕರು ಶಾಲೆಗೆ ಹಾಜರಾಗಲಿದ್ದಾರೆ. ಅತಿ ಶೀಘ್ರದಲ್ಲಿ ಉಳಿದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

error: Content is protected !!