Home Blog Page 3275

ಬಾಹುಬಲಿಯಾದ ಸಿಪಿಐ ಸಾಹೇಬ್ರು!; ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳಪೊಲೀಸರು ಅಂದ್ರೆ ತೊಂದರೆಗೊಳಗಾದ ನಾಗರಿಕರಿಗೆ ರಕ್ಷಣೆ‌ ಕೊಡೋರು ಅನ್ನೋದು ಎಲ್ರಗೂ ಗೊತ್ತು. ಪೊಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಜೀಪಿನಲ್ಲಿ ಓಡಾಡ್ತಾರೆ. ದಾರಿ ಮಧ್ಯೆ ರಸ್ತೆ ನಡುವೆ ಜೀಪ್ ನಿಂತ್ಕೊಂಡ್ ಬಿಟ್ರೆ..?ಆಗ ಏನ್ ಮಾಡೋದು..? ಇಂಥದ್ದೊಂದು ಸಮಸ್ಯೆ ಗುರುವಾರ ಯಲಬುರ್ಗಾದ ಸಾರ್ವಜನಿಕರ ಆಸ್ಪತ್ರೆ ಬಳಿ ನಡೆದಿದೆ. ಯಲಬುರ್ಗಾ ಸಿಪಿಐ ಸಾಹೇಬ್ರು ಕರ್ತವ್ಯದ ಮೇಲೆ ಆಸ್ಪತ್ರೆಯ ಶವಾಗಾರದ ಬಳಿ ಬಂದಿದ್ದಾರೆ. ಕೆಲಸ ಮುಗಿಸಿಕೊಂಡು ಜೀಪ್‌‌ನಲ್ಲಿ ಹೊರಡುವ ವೇಳೆ ವಾಹನ ಕೈ ಕೊಟ್ಟಿದೆ. ವಾಹನ ಚಾಲಕ ಮೆಕಾನಿಕ್ ಕರೆದುಕೊಂಡು ಬರಲು ಹೋಗಿದ್ದಾನೆ. ರಸ್ತೆ ನಡುವೆ ಇದ್ದ ಜೀಪ್‌ನ್ನು ಪಕ್ಕಕ್ಕೆ ನಿಲ್ಲಿಸಬೇಕೆಂದರೆ ವಾಹನ ತಳ್ಳಲು ಸುತ್ತ ಮುತ್ತ ಯಾರೂ ಇರಲಿಲ್ಲ. ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಆಗದಿರಲೆಂದು ಸಿಪಿಐ ನಾಗರೆಡ್ಡಿ ಅವರೊಬ್ಬರೇ ಬಾಹುಬಲಿ ಸಿನಿಮಾದಲ್ಲಿ ಆನೆ ರಥ ಎಳೆದಂತೆ ತಮ್ಮ ವಾಹನದ ಮುಂಭಾಗವನ್ನು ಹಿಡಿದೆಳೆದು ಪಕ್ಕಕ್ಕೆ ನಿಲ್ಲಿಸಿದ್ದಾರೆ. ಪೊಲೀಸರು ಅಂದ್ರೆ ಸುಮ್ನೆನಾ..? ಹೀಗೆ ವಾಹನ ತಳ್ಳುತ್ತಿರುವುದನ್ನ ಮೊಬೈಲ್ ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬೆಂಕಿ ಅವಘಡ – 18 ವಿದ್ಯಾರ್ಥಿಗಳು ಸಾವು, 16 ಜನರಿಗೆ ಗಂಭೀರ ಗಾಯ!

ವಿಜಯಸಾಕ್ಷಿ ಸುದ್ದಿ, ಬೀಜಿಂಗ್

ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, 18 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 16 ಜನ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು 7 ರಿಂದ 16 ವರ್ಷದೊಳಗಿನವರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆ ನಡೆದ ಸ್ಥಳಕ್ಕೆ ಅಗ್ನಿ ಶಾಮಕದ ಳದ ಸಿಬ್ಬಂದಿ ಭೇಟಿ ನೀಡಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ 34 ವಿದ್ಯಾರ್ಥಿಗಳು ಇದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎತ್ತುಗಳಂತೆ ನೊಗಕ್ಕೆ ಹೆಗಲು‌ ಕೊಟ್ಟ ಸಹೋದರರು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬೆಳೆ ನಡುವಿನ ಕಳೆ ತೆಗೆಯಲು ಬಳಕೆ‌ ಮಾಡುವ ಎಡೆಕುಂಟೆಗೆ (ನೊಗ) ವಿದ್ಯಾರ್ಥಿ ಸಹೋದರರಿಬ್ಬರು ಎತ್ತುಗಳಂತೆ ಹೆಗಲು ಕೊಟ್ಟು ಹೊಲದ ಕಳೆ ಕೀಳುತ್ತಿರುವ ಕಮಾಲ್ ಕೊಪ್ಪಳ ತಾಲೂಕಿನ ಭೀಮನೂರು ಗ್ರಾಮದಲ್ಲಿ ನಡೆದಿದೆ.

ಕೇವಲ 2 ಗಂಟೆಯಲ್ಲಿ ಒಟ್ಟೂ 1.5 ಎಕರೆ ಹೊಲದಲ್ಲಿ ಎಡೆ ಹೊಡೆದ ಸಹೋದರರಾದ ಬಸವರಾಜ ಮತ್ತು ಮಂಜುನಾಥ, ಕಳೆ ಕೀಳಲು ಹೆಗಲು ಕೊಟ್ಟದ್ದು
ಮೆಕ್ಕೆಜೋಳ ಬೆಳೆ‌ ಚಿಕ್ಕದಿದ್ದು ಎತ್ತನಿಂದ ಉಳುಮೆ ಮಾಡಿದ್ರೆ ಮಣ್ಣಲ್ಲಿ ಸಸಿ ಮುಚ್ಚುವ‌ ಆತಂಕದ ಕಾರಣಕ್ಕಷ್ಟೇ.

ಬಸವರಾಜ ಮತ್ತು ಮಂಜುನಾಥ ಸಹೋದರರ ತಂದೆ ಫಕೀರಪ್ಪ ಬೀಡನಾಳರ ಕೃಷಿ ಕಾಯಕಕ್ಕೆ ಈ ಸಹೋದರರು ಹಾಗೂ
ಅತ್ತಿಗೆ ಲಕ್ಷ್ಮೀಯವರೂ ಸಾತ್ ನೀಡಿದ್ದಾರೆ.

ಕಾರವಾರ ಜಿಲ್ಲೆಯ 166 ಹಳ್ಳಿಗಳು ಪ್ರವಾಹ ಭೀತಿಯಲ್ಲಿ!

ವಿಜಯಸಾಕ್ಷಿ ಸುದ್ದಿ, ಕಾರವಾರ

ಮಳೆಯಿಂದಾಗಿ ಕರಾವಳಿ ಪ್ರದೇಶ ತತ್ತರಿಸಿ ಹೋಗಿದೆ. ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಚೇತರಿಸಿಕೊಳ್ಳುವ ಮೊದಲೇ ಇಲ್ಲಿಯ ಜನರು ಪ್ರವಾಹಕ್ಕೆ ತುತ್ತಾಗುವ ಭೀತಿಯಲ್ಲಿ ಇದ್ದಾರೆ. ಹೀಗಾಗಿ ಜಿಲ್ಲೆಯ 166 ಗ್ರಾಮಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, 234  ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 16,826 ಜನರಿಗೆ ಆಶ್ರಯ ಕಲ್ಪಿಸಬಹುದಾಗಿದೆ.

ಕಾಳಿ, ಶರಾವತಿ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಜನರನ್ನು ತೀರ ಪ್ರದೇಶದಿಂದ ಬೇರೆಡೆ ಸ್ಥಳಾಂತರಿಸಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮಲೆನಾಡು ಭಾಗದಲ್ಲಿ ಸಹ ಅಲ್ಲಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಹೆಚ್ಚು ಮಳೆ ಸುರಿದಿದ್ದರಿಂದ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಶಿಕ್ಷಣ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ನಾರಾಯಣ ಇ- ಟೆಕ್ನೊ ಶಾಲಾ ಮಕ್ಕಳ ಪೋಷಕರು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನಮ್ಮ ರಾಜ್ಯದ ಶಿಕ್ಷಣ ಸಚಿವರ ಪಂಚೇಂದ್ರಿಯಗಳೇ ಸತ್ತು ಹೋಗಿವೆ. ಹೀಗಾಗಿ ಅವರ ತೇವಲನ್ನು ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸುವುದಿಲ್ಲ ಎಂದರೆ ಸಚಿವ ಸ್ಥಾನದಲ್ಲಿ ಏಕೆ ಮುಂದುವರೆದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಸಚಿವ ಸ್ಥಾನ ನಿಭಾಯಿಸಲು ಆಗುವುದಿಲ್ಲ ಎಂದರೆ ಕಳಗೆ ಇಳಿಯಿರಿ. ಸಮಸ್ಯೆಯನ್ನ ಪೋಷಕರು ಮತ್ತು ಖಾಸಗಿ ಶಾಲೆಗಳೇ ಬಗೆಹರಿಸಿಕೊಳ್ಳಬೇಕು ಎಂದು ಹೇಳುತ್ತಿದ್ದೀರಿ. ನೀವೇನು ಗೆಣಸು ಕೀಳೋಕೆ ಇದ್ದೀರಾ? ಎಂದು ಶಿಕ್ಷಣ ಸಚಿವರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಕಿವಿ ಇಲ್ಲದಾಗಿದೆ. ಸಚಿವರು ಜವಾಬ್ದಾರಿಯುತ ನಿರ್ಧಾರ ಕೈಗೊಳ್ಳಬೇಕು. ಪೋಷಕರ ಸಮಸ್ಯೆ ಬಗೆಹರಿಸಲು ಶಿಕ್ಷಣ ಸಚಿವರು ವಿಫಲರಾಗಿದ್ದಾರೆ. ಕೂಡಲೇ ಆನ್ ಲೈನ್ ಕ್ಲಾಸ್ ವ್ಯವಸ್ಥೆ ಮಾಡಿಸಬೇಕು. ಪೂರ್ಣ ಶುಲ್ಕ ಕಟ್ಟುವುದಕ್ಕೆ ಒತ್ತಾಯಿಸದಂತೆ ಶಾಲೆಗೆ ಸೂಚನೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿ ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ನೊ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಮತ್ತೊಬ್ಬ ಸಿದ್ದರಾಮಯ್ಯ ಹುಟ್ಟಿ ಬಂದ…!

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸಿದ್ದರಾಮಯ್ಯ ಎಂಬ ಹೆಸರು‌ ಕೇಳುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಮುಖಂಡ ಸಿದ್ದರಾಮಯ್ಯ ಕಣ್ಮುಂದೆ ಬರುತ್ತಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದ ಮಂಜುನಾಥ ಮುರಡಿ ಎಂಬ ವ್ಯಕ್ತಿ ತನ್ನ ಮಗುವಿಗೆ ಸಿದ್ದರಾಮಯ್ಯ ಎಂದೇ ನಾಮಕರಣ ಮಾಡಿ, ಸಂಚಲನ ಮೂಡಿಸಿದ್ದಾನೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಲ್ಲಿ ಇದೀಗ ಮುಂದಿನ “ಸಿಎಂ” ವಿಚಾರವೇ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ‘ಸಿದ್ದರಾಮಯ್ಯ’ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.

ಮಂಜುನಾಥ್‌ ಮುರಡಿ ಎಂಬಾತ ಸಿದ್ದರಾಮಯ್ಯ ಮೇಲಿನ ಅಪಾರ ಅಭಿಮಾನದಿಂದ ತಮ್ಮ ಮಗನಿಗೆ ಅವರ ಹೆಸರನ್ನೇ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಮಂಜುನಾಥ್ ಅವರು ಮಗ ಜನಿಸಿದ 21 ದಿನಗಳ ಬಳಿಕ ಶಾಸ್ತ್ರೋಕ್ತವಾಗಿ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದು, ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಸರಳವಾಗಿ ನಾಮಕರಣ ಸಮಾರಂಭ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳಿಂದ ಪ್ರೇರೇಪಿತನಾಗಿ ಮಗನಿಗೆ ಸಿದ್ದರಾಮಯ್ಯ ಅವರ ಹೆಸರಿಟ್ಟೆ. ಇಡೀ ರಾಜ್ಯಕ್ಕೆ ಅನ್ನ ಹಾಕಿದ್ದು ಸಿದ್ದರಾಮಯ್ಯ. ಆ ಕಾರಣಕ್ಕೆ ನಾನು ನನ್ನ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದೇನೆ.

ಮಂಜುನಾಥ್ ಮುರಡಿ, ಸಿದ್ದರಾಮಯ್ಯ ಅಭಿಮಾನಿ, ದ್ಯಾಂಪುರ.

ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತಸಿದ್ಧ: ಎಸ್.ಆರ್.ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕಾಂಗ್ರೆಸ್‌ನಲ್ಲಿ ಮೂಲ, ವಲಸಿಗ ಎಂಬ ಬೇಧ ಇಲ್ಲ. ಅದೇನಿದ್ದರೂ ಬಿಜೆಪಿಗೆ ಸೀಮಿತ. ಬಿಜೆಪಿಯಲ್ಲಿ ಈಗಾಗಲೇ ಸಿಎಂ ಗದ್ದುಗೆಗೆ ಗುದ್ದಾಟ ಆರಂಭ ಆಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರ‌ ಜೊತೆ ಮಾತನಾಡಿ, ಹಾದಿ ಬೀದಿಯಲ್ಲಿ ಸಿಎಂ ಯಾರಾಗ್ತಾರೆ ಎಂದು ಹೇಳುವುದು ಮತ್ತು‌ ಚರ್ಚಿಸುವುದು ಸರಿಯಲ್ಲ. ನಮ್ಮಲ್ಲೂ ಸಿಎಂ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಅದಕ್ಕೂ ಮೊದಲು ಚುನಾವಣೆ ನಡೆಯಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು, ಆನಂತರ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ಸೇರಿ ಸಿಎಂ ಯಾರು ಎಂಬುದನ್ನು ನಿರ್ಧರಿಸುತ್ತಾರೆ. ಎಲ್ಲಕ್ಕಿಂತ ಮೊದಲು ರಾಜ್ಯದಲ್ಲಿರಯವ ಬಿಜೆಪಿ ಸರಕಾರವನ್ನು‌ ಕಿತ್ತೆಸೆಯಬೇಕು ಎಂದರು.
ಕಾಂಗ್ರೆಸ್‌ನಲ್ಲಿ ನಾಯಕರಿಗೇನು ಕೊರತೆ‌ ಇಲ್ಲ. ಸಮಯ, ಸಂದರ್ಭ ಬಂದಾಗ ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗುತ್ತೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ ತತ್ವದಡಿ ಬೆಳೆದು ಬಂದಿರುವ ಪಕ್ಷ. ಬಿಜೆಪಿಯಂತೆ ಜಾತಿ-ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ಸದ್ಯ ರಾಜ್ಯದಲ್ಲಿ ಕೋವಿಡ್-19ನ ಮೂರನೇ ಅಲೆಯ ಆತಂಕ ಎದುರಾಗಿದೆ. ವೈರಸ್‌ನ ಎರಡು ಅಲೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ಸದ್ಯ ವಿಶೇಷ ಅಧಿವೇಶನ ಕರೆದರೂ ತಪ್ಪಿಲ್ಲ. ಆದರೆ ಬಿಜೆಪಿಗೆ ಪಂಚೇಂದ್ರೀಯಗಳೇ ಇಲ್ಲ. ವಿರೋಧ ಪಕ್ಷದವರು ಏನು ಹೇಳಿದರೂ ಕೇಳಿಸಲ್ಲ, ಕಾಣಿಸಲ್ಲ ಎಂದು ಹರಿಹಾಯ್ದರು.

ಸಿಎಂ ಯಾರದ್ರೇನು? ಶಾಸಕರು ಬೇಜವಾಬ್ದಾರಿ ಹೇಳಿಕೆ ಕೊಡೋದನ್ನ ನಿಲ್ಲಿಸಲಿ: ಎಚ್.ಆರ್ ಶ್ರೀನಾಥ್

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ
ಯಾರೇ ಮುಂದಿನ ಸಿಎಂ ಆಗಲಿ, ಬಿಡಲಿ, ಮೊದಲು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಈ ವಿಷಯದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಡೋದನ್ನ ನಿಲ್ಲಿಸಲಿ ಎಂದು ಮಾಜಿ ಎಂಎಲ್‌ಸಿ ಎಚ್.ಆರ್ ಶ್ರೀನಾಥ್ ಹೇಳಿದರು.
ಜಿಲ್ಲೆಯ ಗಂಗಾವತಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸಿಎಂ ಆಗಬೇಕು, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡ್ತಾ ಇದ್ರೆ, ಇತ್ತ ಬಿಜೆಪಿಯವರು ಸಿಎಂ ಬದಲಾವಣೆಗಾಗಿ ಕಿತ್ತಾಟ ನಡೆಸ್ತಾ ಇದ್ದಾರೆ. ಮೊದಲು ಶಾಸಕರು ಜನಸೇವೆಯ ಕಾಳಜಿ ತೋರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸದ್ಯಕ್ಕೆ ಜೆಡಿಎಸ್ ನನ್ನ ಪಕ್ಷ; ಮುಂದಿನ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ
ಇದೇ ವೇಳೆ ನೀವು ಕಾಂಗ್ರೆಸ್‌ಗೆ ಹೋಗ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್.ಆರ್ ಶ್ರೀನಾಥ್, ನಾನು ಹಾಗೂ ನಮ್ಮ ತಂದೆಯವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಇಂದಿರಾಗಾಂಧಿಯವರ ಗರಡಿ ಮನೆಯಲ್ಲಿ ಬೆಳೆದಿದ್ದೇವೆ. ಆದರೆ ಇದೀಗ ನಾನು ಜೆಡಿಎಸ್ ಪಕ್ಷದಲ್ಲಿ ಇದ್ದು, ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ. ಆದರೆ ಸದ್ಯ ಜೆಡಿಎಸ್ ಪಕ್ಷದ ಸಂಘಟನೆ ಮಾಡುತ್ತೀದ್ದೇವೆ ಎಂದು ಕಾಂಗ್ರೆಸ್‌ಗೆ ಹೋಗುವ ಸುಳಿವು ನೀಡಿದರು.
ಅನ್ಸಾರಿ ಎದುರಾಗಬಹುದು ಇಲ್ಲವೇ ಇಬ್ಬರೂ ಒಂದಾಗಬಹುದು
ಅನ್ಸಾರಿಯವರು ಜೆಡಿಎಸ್‌ಗೆ ಬಂದ್ರೆ ಸ್ವಾಗತ ಮಾಡ್ತಿರಾ ಎಂದಾಗ ಪ್ರತಿಕ್ರಿಯಿಸಿದ ಎಚ್.ಆರ್ ಶ್ರೀನಾಥ್, ಜೆಡಿಎಸ್ ಸ್ವಾಗತ ಮಾಡೋದು ಬಿಡೋದು ದೇವೆಗೌಡ್ರು ನಿರ್ಧಾರ ಮಾಡ್ತಾರೆ. ಆದ್ರೆ ಮುಂದಿನ ಚುನಾವಣೆಯಲ್ಲಿ ನನಗೆ ಅನ್ಸಾರಿ ಎದುರಾಗಬಹುದು ಅಥವಾ ನಾವಿಬ್ಬರು ಒಂದಾಗಬಹುದು. ಆದ್ರೆ ಸದ್ಯ ಅನ್ಸಾರಿ ಹಾಗೂ ನನ್ನ ನಡುವೆ ಹೊಂದಾಣಿಕೆ ಸರಿ ಇಲ್ಲ.‌ ಈ ಹಿಂದೆ ಕಾಂಗ್ರೆಸ್‌ಗೆ ಅನ್ಸಾರಿ ಬಂದಾಗ ನನಗೆ ಮಾತು ಕೊಟ್ಟು ಇಕ್ಬಾಲ್ ಅನ್ಸಾರಿ ತಪ್ಪಿದ್ರು. ಇದರಿಂದ ಅವರನ್ನು ನಂಬೋದು ಅಸಾಧ್ಯ ಎಂದರು.

ಬಂಧನದ ಭೀತಿಯಲ್ಲಿ ಸಿಡಿ ಲೇಡಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಸಿಡಿಯಲ್ಲಿನ ಯುವತಿಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು.  ಎಸ್ ಐಟಿ ತಂಡ ಯುವತಿಯನ್ನು ಬಂಧಿಸಲು ಮುಂದಾಗಿದ್ದರಿಂದ, ಬಂದಿಸದಂತೆ ನಿರ್ದೇಶಿಸಬೇಕು ಎಂದು ಸಂತ್ರಸ್ತ ಯುವತಿ ಹೈಕೋರ್ಟ್ ಗೆ ಮನವಿ ಮಾಡಿದ್ದಳು. ಇದೀಗ ಯುವತಿಯ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ. ಹೀಗಾಗಿ ಯುವತಿಗೆ ಬಂಧನದ ಬೀತಿ ಎದುರಾಗಿದೆ.

ರಮೇಶ್‌ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಿಸಲಾಗಿತ್ತು. ಆ ದೂರು ರದ್ದುಪಡಿಸುವಂತೆ ಕೋರಿ ಯುವತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಯುವತಿ ಪರ ವಕೀಲ ಸಂಕೇತ್‌ ಏಣಗಿ ವಾದ ಮಂಡಿಸಿ, ಅತ್ಯಾಚಾರ ಆರೋಪ ಸಂಬಂಧ ಯುವತಿ ದಾಖಲಿಸಿದ ದೂರಿನ ಸಂಬಂಧ ಆರೋಪಿ ರಮೇಶ್‌ ಜಾರಕಿಹೊಳಿ ಅವರನ್ನು ತನಿಖಾಧಿಕಾರಿಗಳು ಬಂಧಿಸಿಲ್ಲ. ಆದರೆ, ರಮೇಶ್‌ ಜಾರಕಿಹೊಳಿ ದಾಖಲಿಸಿರುವ ದೂರಿನ ಸಂಬಂಧ ಯುವತಿ ಬಂಧಿಸುವ ಸಾಧ್ಯತೆಯಿದೆ. ಹೀಗಾಗಿ ಆಕೆಗೆ ಬಂಧನದ ಭೀತಿಯಿದ್ದು, ಅರ್ಜಿದಾರ ಯುವತಿಯನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಮೇಶ್‌ ಜಾರಕಿಹೊಳಿ ದಾಖಲಿಸಿರುವ ದೂರನ್ನು ರದ್ದುಪಡಿಸಲು ಕೋರಿ ಸಿಆರ್‌ಪಿಸಿ 482 ಅಡಿ ಸಲ್ಲಿಸಿದ ಅರ್ಜಿ ಇದಾಗಿದೆ. ಹಾಗಾಗಿ, ಅರ್ಜಿದಾರಳನ್ನು ಬಂಧಿಸದಂತೆ ಈ ಅರ್ಜಿಯಲ್ಲಿ ಸೂಚಿಸಲಾಗುವುದಿಲ್ಲ. ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ ಯುವತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಯಿತು.

ಹು-ಧಾ ಪಾಲಿಕೆ ಚುನಾವಣೆ ಹೊಸ ಅಲೆ ಸೃಷ್ಟಿಸಲು ಸಿದ್ಧ:ಆಮ್ ಆದ್ಮಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷವು ಹೊಸ ಸಂಚಲನ ಸೃಷ್ಟಿಸುವ ಉದ್ದೇಶದಿಂದ ಈ ಭಾರಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕೆಲಸವನ್ನು ಅರವಿಂದ ಕೇಜ್ರಿವಾಲ್ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡರಾದ ಪೃಥ್ವಿರಾಜ್‌ ರೆಡ್ಡಿ ತಿಳಿಸಿದರು‌.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಅಂದರೇ ಸರ್ಕಾರದ ಕಣ್ಣಿಗೆ ಬೀಳುವುದು ಬೆಂಗಳೂರು ಮಾತ್ರ ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಬಾರಿ ಪಾಲಿಕೆ ಚುನಾವಣೆಯ ಮೂಲಕ ರೂಪರೇಷಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳನ್ನು ಕೂಡ ಅಂತಿಮಗೊಳಿಸಲಾಗುತ್ತಿದೆ ಎಂದರು.

ಹುಬ್ಬಳ್ಳಿ- ಧಾರವಾಡ ಮಹಾನಗರಗಳನ್ನು ವಿಶ್ವದರ್ಜೆಯ ಮಾದರಿಯ ನಗರಗಳನ್ನಾಗಿ ಮಾಡುವ ಪರಿಕಲ್ಪನೆಯೊಂದಿಗೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತರೆ ಪಕ್ಷಗಳ ಹಾಗೇ ನಾವು ಬ್ಯಾಂಕ್ ಬ್ಯಾಲೆನ್ಸ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲಾ, ಪಕ್ಷದಿಂದ ಉತ್ತಮವಾದ, ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುತ್ತೆವೆ ಎಂದು ಅವರು ಹೇಳಿದರು

error: Content is protected !!