Home Blog Page 3284

ಮಹಾಮಾರಿಗೆ 421 ಜನ ಪೋಷಕರು ಬಲಿ? ತಬ್ಬಲಿಯಾದ ಮಕ್ಕಳೆಷ್ಟು?

ವಿಜಯಸಾಕ್ಷಿ ಸುದ್ದಿ, ಬೀದರ್

ಮಹಾಮಾರಿಯಿಂದಾಗಿ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಗಡಿ ಜಿಲ್ಲೆಯಲ್ಲಿ ಈ ಸೋಂಕಿಗೆ ಬರೋಬ್ಬರಿ 420 ಜನ ಪಾಲಕರು ಬಲಿಯಾಗಿದ್ದಾರೆ. ಹೀಗಾಗಿ ಹಲವು ಮಕ್ಕಳು ತಬ್ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಮಕ್ಕಳು ಈ ರೀತಿ ಅನಾಥರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 143 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕಡು ಬಡತನದ 42 ಮಕ್ಕಳನ್ನು ಬಾಲ ಸ್ವರಾಜ್ಯ ಯೋಜನೆಯಲ್ಲಿ ಸೇರಿಸಲಾಗಿದೆ.

ಸಂಪೂರ್ಣವಾಗಿ ಪೋಷಕರನ್ನು ಕಳೆದುಕೊಂಡ 5 ಅನಾಥ ಮಕ್ಕಳು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹುಮ್ನಬಾದ್ ತಾಲೂಕಿನಲ್ಲಿ 4 ಹಾಗೂ ಬೀದರ್ ನಗರದ ಓರ್ವ ಬಾಲಕ ಸೇರಿ ಜಿಲ್ಲೆಯಲ್ಲಿ ಒಟ್ಟು ಐದು ಬಾಲಕರು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಇಂತಹ ಅನಾಥ ಮಕ್ಕಳಿಗೆ ಸರ್ಕಾರದಿಂದ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕಾಗಿದ್ದು, ಸರ್ಕಾರದ ಬಾಲ ಸ್ವರಾಜ್ಯ ಯೋಜನೆಗೆ ಈ ಅನಾಥ ಮಕ್ಕಳ ಎಲ್ಲಾ ಮಾಹಿತಿ ನೀಡಲಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗಾ ಹಿರೇಮಠ ಹೇಳಿದ್ದಾರೆ.

ಇಸ್ರೇಲ್, ಪ್ಯಾಲಿಸ್ತೇನ್ ಮಧ್ಯೆ ಮತ್ತೊಮ್ಮೆ ಯುದ್ದದ ಭೀತಿ!

ವಿಜಯಸಾಕ್ಷಿ ಸುದ್ದಿ, ಜೆರುಸಲೇಂ

ಪ್ಯಾಲೆಸ್ತೀನ್ ಪ್ರದೇಶದಿಂದ ಸ್ಫೋಟಕ ಬಲೂನ್ ಗಲು ಹಾರಿ ಬಂದ ಬೆನ್ನಲ್ಲಿಯೇ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ.
11 ದಿನಗಳ ಕಾಲ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಭಯ ಆವರಿಸಿತ್ತು. ನಂತರ ಮೇ 21ರಂದು ಉಭಯ ದೇಶದವರು ಕದನ ವಿರಾಮ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಯುದ್ಧದ ಭಯ ಆವರಿಸುತ್ತಿದೆ.

ಬೆಂಕಿಯ ಬಲೂನ್ ಗಳು ದಕ್ಷಿಣ ಇಸ್ರೇಲ್‌ ನ ಸುಮಾರು 20 ಕಡೆ ಬೆಂಕಿ ಬೀಳಲು ಕಾರಣವಾಗಿವೆ ಎಂದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಇಸ್ರೇಲ್ ನಲ್ಲಿ ಬೆಂಜಮಿನ್ ನೆತನ್ಯಾಹು ಸರ್ಕಾರ ಉರುಳಿ ನೆಫ್ಟಾಲಿ ಬೆನ್ನೆಟ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದಾಳಿ ನಡೆದಿದೆ.

ದಕ್ಷಿಣ ಗಾಜಾನಗರದ ಖಾನ್ ಯೂನೆಸ್ ನ ಪೂರ್ವ ಭಾಗ ಗುರಿಯಾಗಿಸಿಕೊಂಡು ಇಸ್ರೇಲ್ ವಾಯುಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ತಿನ್ ಮೂಲಗಳು ತಿಳಿಸಿವೆ.
ಈ ದಾಳಿ ಬಗ್ಗೆ ಪ್ರತ್ರಿಕ್ರಿಯೆ ನೀಡಿದ ಇಸ್ರೇಲ್, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಇದಕ್ಕೆ ಪ್ರತಿಯಾಗಿ ಖಾನ್ ಯೂನೆಸ್ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ಪರೀಕ್ಷೆಯಿಲ್ಲದೆ ವಿದ್ಯಾರ್ಥಿಗಳ ಪಾಸ್ – ಸಂಭ್ರಮಾಚರಣೆ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ.
ತಿಪಟೂರು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಸ್ ಆಗಿದ್ದಕ್ಕೆ ಸಂಭ್ರಮಾಚರಣೆ ಆಚರಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ.

ತಾವೆಲ್ಲ ಪಾಸ್ ಆಗಿದ್ದಕ್ಕೆ ಕುಂಬಳಕಾಯಿ, ತೆಂಗಿನಕಾಯಿ ಒಡೆದು ವಿದ್ಯಾರ್ಥಿಗಳು ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ. ಅಲ್ಲದೇ, ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕಾಲೇಜಿನ‌ ಗೇಟ್ ಮುಂದೆ ವಿದ್ಯಾರ್ಥಿಗಳು ಸಂಭ್ರಮಾಚರಣೆ ಆಚರಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಜಯಕಾರ ಹಾಕಿದ್ದಾರೆ.

ಮಹಾಮಾರಿಗೆ ಬಲಿಯಾದ ಐದು ದಿನಗಳ ಬಾಣಂತಿ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಮಹಾಮಾರಿಗೆ 5 ದಿನಗಳ ಬಾಣಂತಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಸೋಂಕಿಗೆ ಬಲಿಯಾದ ಮಹಿಳೆ. ನಗರದಲ್ಲಿನ ಮಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ತಾಯಿಯನ್ನು ಕಳೆದುಕೊಂಡು ಐದು ದಿನದ ಮಗು ತಬ್ಬಲಿಯಾಗಿದೆ. ಶಿಲ್ಪಶ್ರೀ (32) ಕೊರೊನಾಗೆ ಬಲಿಯಾದ ಬಾಣಂತಿ. ಮಹಿಳೆಯಲ್ಲಿ ಕಳೆದ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಐದು ದಿನಗಳ ಹಿಂದೆಯೇ ಮಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಶಿಲ್ಪಶ್ರೀ ಜನ್ಮ ನೀಡಿದ್ದರು. ಸದ್ಯ 5 ದಿನಗಳ ಮಗುವನ್ನು ಬಿಟ್ಟು ತಾಯಿ ಇಹಲೋಕ ತ್ಯಜಿಸಿದ್ದು, ಮಗು ತಬ್ಬಲಿಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಧಾನಿ ಮೋದಿ ಭೇಟಿ ಮಾಡಿದ ಡಿವಿಎಸ್! ಕುತೂಹಲಕ್ಕೆ ಕಾರಣವಾದ ಭೇಟಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ವಿಚಾರ ಬಹಳ ಸದ್ದು ಮಾಡುತ್ತಿರುವ ಕಾರಣಕ್ಕೆ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಭೇಟಿ ನೀಡಿದ್ದಾರೆ. ಅದಕ್ಕೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಪ್ರಧಾನಿ ಮೋದಿ ಅವರು ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೆಲ ಸಚಿವರ, ಶಾಸಕರ ಅಸಮಾಧಾನ, ನಾಯಕತ್ವ ಬದಲಾವಣೆ ಮಟ್ಟದಲ್ಲಿನ ಚರ್ಚೆ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಅರುಣ್ ಸಿಂಗ್ ಅವರು ಇಂದು ಮಧ್ಯಾಹ್ನ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನವೇ ಡಿವಿಎಸ್ ರಿಂದ ಪ್ರಧಾನಿ ಮೋದಿ ಭೇಟಿಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಭೇಟಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂದು ಹೇಳಲಾಗುತ್ತಿದೆ.

ಅಪಘಾತದಲ್ಲಿ ಒಂದೇ ಕುಟುಂಬದ 10 ಜನ ಸಾವು!

ವಿಜಯಸಾಕ್ಷಿ ಸುದ್ದಿ, ಆನಂದ

ಕಾರ್-ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 10 ಜನರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೆಳ್ಳಂಬೆಳಿಗ್ಗೆ ಗುಜರಾತ್‌ನ ಆನಂದ್ ಜಿಲ್ಲೆಯ ಇಂದ್ರನಾಜ್ ಗ್ರಾಮದ ಸಮೀಪ ನಡೆದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ 10 ಜನರು ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ ಮಕ್ಕಳೂ ಇದ್ದರು. ವೇಗವಾಗಿ ಬಂದ ಟ್ರಕ್ ಎದುರಿಗೆ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘತಾಕ್ಕೊಳಗಾದ ಕಾರು ವಾಟಾಮನ್ ಗೆ ಹೋಗುತ್ತಿತ್ತು. ಇನ್ನು ಡಿಕ್ಕಿ ಹೊಡೆದ ಈ ಟ್ರಕ್ ವಾಟಾಮನ್ ಕಡೆಯಿಂದ ಬರುತ್ತಿತ್ತು. ಈ ವೇಳೆ ಮುಖಾಮುಖಿಯಾಗಿದ್ದರಿಂದ ಕಾರು ನುಜ್ಜುಗುಜ್ಜಾಗಿದೆ. ಕಾರಿನೊಳಗೆ ಸಿಲುಕಿರುವ ಶವಗಳನ್ನು ಹೊರತೆಗೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದೀಗ ಮೃತರ ಗುರುತು ಪತ್ತೆಹಚ್ಚುವ ಕೆಲಸ ನಡೆದಿದೆ.

ಶಿಕ್ಷಕಿಯರು ಮನೆಯಲ್ಲಿಯೇ ಕುಳಿತು ಕಾರ್ಯ ನಿರ್ವಹಿಸಬೇಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಿಕ್ಷಕಿಯರಿಗೆ ಸರ್ಕಾರದಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಶಿಕ್ಷಕಿಯರಿಗೆ ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ಸಂಚಾರಕ್ಕೆ ಅನಾನುಕೂಲತೆ ಇರುವ ಹಿನ್ನೆಲೆಯಲ್ಲಿ ಶಿಕ್ಷಕಿಯರಿಗೆ ಸರ್ಕಾರ ಈ ರೀತಿಯ ಅವಕಾಶ ಮಾಡಿಕೊಟ್ಟಿದೆ.
ಅಲ್ಲದೇ, ಕೊರೊನಾ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಓಡಾಟಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಶಿಕ್ಷಕರಿಗೆ ಸಾಲೆಗಳ ಹಾಜರಾತಿಗೆ ಕಾಲಾವಕಾಶ ನೀಡಲಾಗಿದೆ. ಸಂಚಾರಕ್ಕೆ ಅನಾನುಕೂಲತೆ ಇರುವ ಕಾರಣ ಶಿಕ್ಷಕಿಯರಿಗೆ ವಿನಾಯಿತಿ ನೀಡಲಾಗಿದೆ.

ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರನ್ನು ಹೊರತು ಪಡಿಸಿ ಸಂಚಾರಕ್ಕ ಅನಾನುಕೂಲತೆ ಇರುವ ಶಿಕ್ಷಕಿಯರು ಜೂ. 21ರ ವರೆಗೆ ಮನೆಯಿಂದಲೇ ಕುಳಿತು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಲಾಕ್ ಡೌನ್ ತೆರವುಗೊಂಡ ಜಿಲ್ಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ಸೂಚಿಸಿದೆ.

ಪೊಲೀಸ್ ಠಾಣೆಯಲ್ಲಿ ಹಾವು ಪ್ರತ್ಯಕ್ಷ; ಬೆಚ್ಚಿಬಿದ್ದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ವಿಷಕಾರಿ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಪೊಲೀಸರು ಆತಂಕಗೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ‌ ನಡೆದಿದೆ.

ಠಾಣೆಯಲ್ಲಿ ಆರೋಪಿಗಳನ್ನು ಇಡುವ ಸೆಲ್ ಬಳಿಯ ಶೌಚಾಲಯದಲ್ಲಿ ಹುರುಪಂಜರ್ ಎಂಬ ವಿಷಕಾರಕ ಹಾವು ಪೇದೆಯೊಬ್ಬರಿಗೆ ಕಾಣಿಸಿಕೊಂಡಿದೆ. ಗಾಬರಿ ಬಿದ್ದ ಪೇದೆ ಎಲ್ಲ ಸಿಬ್ಬಂದಿಗೆ ಹೇಳಿದಾಗ ಕೆಲಕಾಲ‌ ಆತಂಕದ ವಾತಾವರಣ ‌ನಿರ್ಮಾಣವಾಯಿತು.

ತಕ್ಷಣವೇ ಸಮೀಪದಲ್ಲಿ ಇರುವ ಸ್ನೇಕ್ ರಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವು ಹಿಡಿದರು. ಸುಮಾರು ಅರ್ಧ ಗಂಟೆಗಳ ಕಾಲ‌ ಕಾಡಿಸಿದ ಹಾವು ಕೊನೆಗೂ ಸ್ನೇಕ್ ರೆಹಮಾನ್ ಕೈಗೆ ಸಿಕ್ಕಿಬಿತ್ತು. ಹಾವು ಸಿಕ್ಕ ನಂತರ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ‌ನೀಡಿರುವ ಸ್ನೇಕ್ ರೆಹಮಾನ್, ಈ ಹಾವು ಸುಮಾರು ದಿನಗಳಿಂದ ಶೌಚಾಲಯದಲ್ಲಿ ನೆಲೆಸಿತ್ತು. ಆದರೆ ಯಾರ ಗಮನಕ್ಕೂ ‌ಬಂದಿಲ್ಲ. ಆದರೆ ಇವತ್ತು ರಾತ್ರಿ ಹೊರಗೆ ಬಿದ್ದಿದ್ದರಿಂದ ಪೊಲೀಸರ ಕಣ್ಣಿಗೆ ಬಿದ್ದಿದೆ. ಕರೆ ಬಂದ ತಕ್ಷಣವೇ ಹಾಜರಾಗಿ‌ ಹಾವು ಹಿಡಿದು ನರೇಗಲ್ ರಸ್ತೆಯ ಎಕ್ಕಿಹಳ್ಳದ ಸರುವಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದರು.

ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಹಾವು ಪ್ರತ್ಯಕ್ಷ; ಬೆಚ್ಚಿಬಿದ್ದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ವಿಷಕಾರಿ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಪೊಲೀಸರು ಆತಂಕಗೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ‌ ನಡೆದಿದೆ.

ಠಾಣೆಯಲ್ಲಿ ಆರೋಪಿಗಳನ್ನು ಇಡುವ ಸೆಲ್ ಬಳಿಯ ಶೌಚಾಲಯದಲ್ಲಿ ಹುರುಪಂಜರ್ ಎಂಬ ವಿಷಕಾರಕ ಹಾವು ಪೇದೆಯೊಬ್ಬರಿಗೆ ಕಾಣಿಸಿಕೊಂಡಿದೆ. ಗಾಬರಿ ಬಿದ್ದ ಪೇದೆ ಎಲ್ಲ ಸಿಬ್ಬಂದಿಗೆ ಹೇಳಿದಾಗ ಕೆಲಕಾಲ‌ ಆತಂಕದ ವಾತಾವರಣ ‌ನಿರ್ಮಾಣವಾಯಿತು.

ತಕ್ಷಣವೇ ಸಮೀಪದಲ್ಲಿ ಇರುವ ಸ್ನೇಕ್ ರಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವು ಹಿಡಿದರು. ಸುಮಾರು ಅರ್ಧ ಗಂಟೆಗಳ ಕಾಲ‌ ಕಾಡಿಸಿದ ಹಾವು ಕೊನೆಗೂ ಸ್ನೇಕ್ ರೆಹಮಾನ್ ಕೈಗೆ ಸಿಕ್ಕಿಬಿತ್ತು. ಹಾವು ಸಿಕ್ಕ ನಂತರ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ‌ನೀಡಿರುವ ಸ್ನೇಕ್ ರೆಹಮಾನ್, ಈ ಹಾವು ಸುಮಾರು ದಿನಗಳಿಂದ ಶೌಚಾಲಯದಲ್ಲಿ ನೆಲೆಸಿತ್ತು. ಆದರೆ ಯಾರ ಗಮನಕ್ಕೂ ‌ಬಂದಿಲ್ಲ. ಆದರೆ ಇವತ್ತು ರಾತ್ರಿ ಹೊರಗೆ ಬಿದ್ದಿದ್ದರಿಂದ ಪೊಲೀಸರ ಕಣ್ಣಿಗೆ ಬಿದ್ದಿದೆ. ಕರೆ ಬಂದ ತಕ್ಷಣವೇ ಹಾಜರಾಗಿ‌ ಹಾವು ಹಿಡಿದು ನರೇಗಲ್ ರಸ್ತೆಯ ಎಕ್ಕಿಹಳ್ಳದ ಸರುವಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದರು.

ಕೊರೊನಾ; ಗದಗ ಜಿಲ್ಲೆಯ ಜನರಿಗೆ ಮಂಗಳವಾರವೂ ಮುಂದುವರಿದ ಶುಭ ಸುದ್ದಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 21 ಜನರಿಗೆ ಸೋಂಕು ತಗುಲಿದೆ. ಇಂದು ಕೂಡ ಕೋವಿಡ್ ನಿಂದ ಯಾವುದೇ ಸಾವಿನ ವರದಿ ಆಗಿಲ್ಲ.

ಇಂದು 21 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25446 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -09, ಮುಂಡರಗಿ-03, ನರಗುಂದ-02, ರೋಣ-02, ಶಿರಹಟ್ಟಿ-05, ಹೊರಜಿಲ್ಲೆಯ-00 ಸೇರಿದಂತೆ 21 ಪ್ರಕರಣಗಳು ದೃಢಪಟ್ಟಿವೆ.

ಇಂದು 88 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24582 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 576 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 80 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!