Home Blog Page 38

ಮುಂಡರಗಿ ಪೊಲೀಸರ ಕಾರ್ಯಾಚರಣೆ: ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ – 7 ಬೈಕ್ ಜಪ್ತಿ

ಗದಗ: ಮುಂಡರಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಅಂತರ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 18/03/2026 ರಂದು ದಾಖಲಾಗಿದ್ದ ಗುನ್ನಾ ಸಂಖ್ಯೆ 50/2026, ಕಲಂ 303(2) ಬಿ.ಎನ್.ಎಸ್-2023 ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ನಿರ್ದೇಶನದಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ನರಗುಂದ ಉಪವಿಭಾಗದ ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಠಾಣೆಯ ಸಬ್ ಇನ್ಸಪೆಕ್ಟರ್‌ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಕಾರ್ಯಾಚರಣೆ ನಡೆಸಿದರು.

ದಿನಾಂಕ 20/03/2026 ರಂದು ಮುಂಡರಗಿ ಪಟ್ಟಣದ ಗೋಂದಳಿ ಓಣಿಯ ಕಾರ್ ಡ್ರೈವರ್ ರವಿ ತಂದೆ ಪರಶುರಾಮ ಕುಕನೂರು (34) ಎಂಬಾತನನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆತ ಮುಂಡರಗಿ, ಕೊಪ್ಪಳ ಹಾಗೂ ಗದಗ ನಗರ ಪ್ರದೇಶಗಳಲ್ಲಿ ಒಟ್ಟು 7 ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ ಸುಮಾರು ₹2.05 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 7 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಾದ ಜೆ.ಐ ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಮಹೇಶ ಗೊಳಗೊಳಕಿ, ವಿನಾಯಕ ಬಾಲರಡ್ಡಿ, ನಾಗರಾಜ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ, ನಿಂಗಪ್ಪ ಪೂಜಾರ ಹಾಗೂ ಪರಶುರಾಮ ಧಾರವಾಡ ಅವರ ಶ್ರಮವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪ್ರಶಂಸಿ, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಬೆಂಗಳೂರು: ತ್ಯಾಜ್ಯ ಸಂಗ್ರಹಣೆ ಸ್ಥಗಿತ – 50 ವಾರ್ಡ್‌ಗಳಲ್ಲಿ ಕಸದ ಅಡಚಣೆ!

ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆಯಲ್ಲಿ ಗಂಭೀರ ಅಡಚಣೆ ಉಂಟಾಗಿದೆ.

ಕನಿಷ್ಠ 50 ವಾರ್ಡ್‌ಗಳಲ್ಲಿ ಸೋಮವಾರ ಕಸದ ಸಂಗ್ರಹಣೆ ಸ್ಥಗಿತಗೊಂಡಿತ್ತು. ಮೂಲಗಳ ಪ್ರಕಾರ, ವೇತನ ಬಾಕಿ ಮತ್ತು ಕಸ ವಿಂಗಡಣೆ ಕುರಿತ ಹೊಸ ನಿಯಮದ ವಿರುದ್ಧ ಆಟೋ ಟಿಪ್ಪರ್ ಚಾಲಕರು ಮತ್ತು ಲೋಡರ್‌ಗಳು ಸಾಮೂಹಿಕ ರಜೆ ತೆಗೆದುಕೊಂಡಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂಲದಲ್ಲೇ ಕಸದ ವಿಂಗಡಣೆ ಕಡ್ಡಾಯವಾಗಬೇಕು ಎಂದು ಒತ್ತಾಯಿಸುತ್ತಿದ್ದು, ಕಸ ವಿಂಗಡಿಸುವ ಜವಾಬ್ದಾರಿ ಕಸ ಉತ್ಪಾದಕರದ್ದು, ಸಂಗ್ರಹಿಸುವವರದ್ದಲ್ಲ ಎಂದು ವಾದಿಸಿದ್ದಾರೆ.

BSWML ಸಿಇಒ ಕರೀಗೌಡ ಮಾಹಿತಿ ನೀಡಿದ್ದು, “ಸುಮಾರು 40–50 ವಾರ್ಡ್‌ಗಳಲ್ಲಿ ಮಾತ್ರ ಸಮಸ್ಯೆ ಉಂಟಾಗಿದೆ, ನಗರದ ಉಳಿದ ಭಾಗಗಳಲ್ಲಿ ಸಂಗ್ರಹಣೆ ಸಾಮಾನ್ಯವಾಗಿದೆ. ಕಳೆದ ನಾಲ್ಕು ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಕಸ ಸಂಗ್ರಹಿಸದ ಗುತ್ತಿಗೆದಾರರ ವಿರುದ್ಧ ಅಗತ್ಯ ಸೇವೆಗಳ ಕಾಯ್ದೆ ಅಡಿಯಲ್ಲಿ 35 ಎಫ್‌ಐಆರ್‌ಗಳು ದಾಖಲಾಗಿವೆ. ಗುತ್ತಿಗೆದಾರರ ಸಂಘವು ಹೊಸ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್‌ಎನ್ ಬಾಲಸುಬ್ರಮಣಿಯನ್, ತ್ಯಾಜ್ಯವನ್ನು ಬೇರ್ಪಡಿಸುವ ಜವಾಬ್ದಾರಿ ತ್ಯಾಜ್ಯ ಉತ್ಪಾದಕರ ಮೇಲಿದೆ ಎಂದು ಹೇಳಿದ್ದಾರೆ.

ಮಸೀದಿ‌ ವಿಚಾರಕ್ಕೆ ಕಿರಿಕ್: ಕತ್ತಿ, ದೊಣ್ಣೆಯಿಂದ 2 ತಂಡಗಳ ಮಾರಾಮಾರಿ, ದೂರು-ಪ್ರತಿದೂರು ದಾಖಲು!

ಮಂಗಳೂರು: ಮಂಗಳೂರಿನ ಉಳ್ಳಾಲ ಸಜೀಪ‌ನಡು ಎಂಬಲ್ಲಿ ಮಸೀದಿ‌ ವಿಚಾರಕ್ಕೆ ಗಲಾಟೆ ನಡೆದು ಎರಡು ತಂಡಗಳ‌ ಸದಸ್ಯರು ಬಡಿದಾಡಿಕೊಂಡ ಘಟನೆ ಜರುಗಿದೆ.

ಸಜಿಪ ಪಡು ತಲೆಮೊಗರು ಬದ್ರಿಯಾ ಜುಮ್ಮಾ ಮಸೀದಿ ಬಳಿ ಈ ಮಾರಾಮಾರಿ ನಡೆದಿದೆ. ಕತ್ತಿ, ದೊಣ್ಣೆ, ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ. ಮಸೀದಿ ಬಳಿ ಹಲ್ಲೆ ನಡೆದ ಬಳಿಕ ಓರ್ವನ ಮನೆಗೆ ಬಂದು ಅಲ್ಲಿದ್ದ ಮಹಿಳೆಯರು ಮಕ್ಕಳ‌ ಮುಂದೆ ಹಲ್ಲೆ‌ ನಡೆಸಲಾಗಿದೆ. ಮಸೀದಿ‌ ಅಧ್ಯಕ್ಷನೂ ಈ‌ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.

ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಮತ್ತು ಆರ್ಮ್ಸ್‌ ಆಕ್ಟ್‌ ಅಡಿ ದಾಖಲಾಗಿದೆ.

ಪೋಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.

ಬೆಳಗಾವಿ| ಪೆಟ್ರೋಲ್ ಸಿಗಲ್ಲ ಎಂಬ ಫೇಕ್ ಮೆಸೇಜ್: ಬಂಕ್‌ಗೆ ಮುಗಿಬಿದ್ದ ಜನ!

ಬೆಳಗಾವಿ: ಮಧ್ಯಪ್ರಾಚ್ಯ ದೇಶಗಳ ಯುದ್ಧದ ಸಂಘರ್ಷದಿಂದ ದೇಶದಲ್ಲಿ ತೈಲದ ಬಿಕ್ಕಟ್ಟು ಹೆಚ್ಚಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ಬಿಕ್ಕಟ್ಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಭೀತಿ ಶುರುವಾಗಿದೆ. ಹೀಗಾಗಿ ಬಂಕ್ ಮುಂದೆ ಸಾರ್ವಜನಿಕರು ಮುಗಿಬಿದ್ದ ಘಟನೆ ಬೆಳಗಾವಿಯಲ್ಲಿ ಜರುಗಿದೆ.

ಸೋಮವಾರ ರಾತ್ರಿ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿದ್ದರು. ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್, ವೈಭವ ನಗರ ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಬೈಕ್‌, ಕಾರುಗಳಿಗೆ ಪೆಟ್ರೋಲ್‌ ಹಾಕಿಸಿದ್ದಾರೆ. ಕೆಲವರು ನೀರಿನ ಬಾಟಲಿಗಳಲ್ಲಿ ಪೆಟ್ರೋಲ್‌ ತುಂಬಿಸಿದ್ದಾರೆ. ದಿಢೀರ್‌ ದಟ್ಟಣೆಯಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಬಂಕ್‌ ಸಿಬ್ಬಂದಿಯೂ ಪರದಾಟ ನಡೆಸಿದರು.

ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ವಿತರಣೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜನರು ಯಾವುದೇ ಸುಳ್ಳು ವದಂತಿಯನ್ನು ನಂಬುವ ಅಗತ್ಯವಿಲ್ಲ. ಆದರೂ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಸುಳ್ಳು ಸುದ್ದಿಗೆ ಜನ ಭಯಗೊಂಡು ಬಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲಿ ಇಂದಿನಿಂದ ಟೋಯಿಂಗ್ ಮತ್ತೆ ಆರಂಭ: ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಟೋಯಿಂಗ್ ಕಾರ್ಯಾಚರಣೆ ಪುನರ್ ಪ್ರಾರಂಭವಾಗಲಿದೆ.

ಜಿಬಿಎ ಮತ್ತು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು, ವಾಹನಗಳು ಹಾಗೂ ಸಿಬ್ಬಂದಿ ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗಿದೆ.

ಟೋಯಿಂಗ್ ಇಲ್ಲದ ಕಾರಣ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡೋದು, ಅಡ್ಡಾದಿಡ್ಡಿ ನಿಲ್ಲಿಸಿ ಹೋಗೋದು, ಹಳೆಯ ವಾಹನಗಳನ್ನು ಪಾರ್ಕ್ ಮಾಡಿ, ತಿಂಗಳಗಟ್ಟಲೇ ರಸ್ತೆಯಲ್ಲೇ ಬಿಡ್ತಿದ್ದ ಕಾರಣದಿಂದಾಗಿ ನಗರದಲ್ಲಿ ಇತ್ತೀಚಿಗೆ ಟ್ರಾಫಿಕ್ ಜಾಸ್ತಿಯಾಗಿದೆ. ಇದರ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕೆಲ ದಿನಗಳ ಹಿಂದಷ್ಟೆ ಡಿಸಿಎಂ ಡಿಕೆ ಶಿವಕುಮಾರ್ ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸೋ ಬಗ್ಗೆ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ, ಟೋಯಿಂಗ್ ಮಾಡೋಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.

ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ತಲಾ ಎರಡು ಟೋಯಿಂಗ್ ವಾಹನಗಳು ನೀಡಲಿದ್ದು, ಪ್ರತಿ ತಂಡದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಕಾನ್‌ಸ್ಟೇಬಲ್ ಮತ್ತು ನಾಲ್ಕು ಜಿಬಿಎ ಸಿಬ್ಬಂದಿ ನೇಮಕಗೊಂಡಿದ್ದಾರೆ. ಟೋಯಿಂಗ್ ವಾಹನಗಳಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಯಾವುದೇ ಗಲಾಟೆ ಅಥವಾ ಅವಘಡವನ್ನು ದಾಖಲು ಮಾಡಲಾಗುತ್ತದೆ.

ಮುಖ್ಯವಾಗಿ ಅತಿ ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳು ಮತ್ತು ನೋ ಪಾರ್ಕಿಂಗ್ ಜಾಗಗಳು ಟೋಯಿಂಗ್ ಕಾರ್ಯಾಚರಣೆಯ ಕೇಂದ್ರವಾಗಿವೆ. ಹಿರಿಯ ಅಧಿಕಾರಿಗಳು ಸಿಬ್ಬಂದಿಯ ವರ್ತನೆ ಮೇಲೂ ಕಣ್ಣಿಡಲಿದ್ದಾರೆ.

 

ಕಾರು ಡ್ರಿಫ್ಟಿಂಗ್ ಪ್ರಕರಣ: ವಿಚಾರಣೆ ಬಳಿಕ ರಿಕ್ಕಿ ರೈಯನ್ನ ಹಿಂಬಾಗಿಲಿನಿಂದ ಕಳುಹಿಸಿದ ಪೊಲೀಸರು

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ಸಂಬಂಧ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಅವರನ್ನು ಹಿಂಬಾಗಿಲಿನಿಂದ ಹೊರಬಿಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಕ್ರಮವು ತೀವ್ರ ಚರ್ಚೆಗೆ ಕಾರಣವಾಗಿದೆ.

ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಕೀಲರೊಂದಿಗೆ ಹಾಜರಾದ ರಿಕ್ಕಿ ರೈ ವಿಚಾರಣೆಗೆ ಒಳಗಾದರು. ವಿಚಾರಣೆ ಮುಗಿದ ನಂತರ ಮಾಧ್ಯಮದ ಕಣ್ಣಿಗೆ ತಪ್ಪಿಸಿ, ಹಿಂಬಾಗಿಲು ಮೂಲಕ ಬಿಡುಗಡೆ ಮಾಡಲಾಗಿದೆ. ಈ ಕ್ರಮ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟಿಸಿದೆ.

ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಎಸಿಎಂಎಂ ಕೋರ್ಟ್ ರಿಕ್ಕಿ ರೈಗೆ ನಿರೀಕ್ಷಣಾ ಜಾಮೀನು ನೀಡಿದೆ. ಬಿಎನ್‌ಎಸ್ 184 ಅಡಿ ಎಫ್‌ಐಆರ್ ದಾಖಲಾಗಿದ್ದ ಹಿನ್ನೆಲೆ, ಕೋರ್ಟ್‌ನಲ್ಲಿ ಖುದ್ದಾಗಿ ಹಾಜರಾಗಿರುವ ರಿಕ್ಕಿ ರೈ 1 ಲಕ್ಷ ರೂ. ಬಾಂಡ್ ಮತ್ತು ಶ್ಯೂರಿಟಿ ಹೊಂದಿ ಜಾಮೀನು ಪಡೆದಿದ್ದಾರೆ. ತನಿಖೆಗೆ ಸಹಕರಿಸಲು ಸೂಚನೆ ನೀಡಲಾಗಿದೆ.

ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ವಿವರಿಸಿದರು: “ಕಾರಿನಲ್ಲಿ ಬ್ರೇಕ್ ತೊಂದರೆ ಆಗಿದ್ದು, ಡ್ರೈವರ್‌ನ ತಪ್ಪು. ರಿಕ್ಕಿ ರೈ ಯಾವುದೇ ಡ್ರಿಫ್ಟಿಂಗ್ ಮಾಡಿದ್ದಾರೆ ಅಥವಾ ಉದ್ದೇಶಪೂರ್ವಕ ಕ್ರೇಜ್ ಹೊಂದಿಲ್ಲ. ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.

ರಾಜ್ಯದೆಲ್ಲೆಡೆ ಇಂದು ಮಳೆ ಆರ್ಭಟ? 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ರಾಜ್ಯದ ಕರಾವಳಿ ಸೇರಿ ಹತ್ತಾರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಭೀಕರ ರಸ್ತೆ ಅಪಘಾತ| ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಹುಬ್ಬಳ್ಳಿ:- ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಗೋಕುಲ್ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ ಸಮೀಪ ಜರುಗಿದೆ.

ಫಯಾಜ್ (25) ಮತ್ತು ಮೋಹಿದ್ ಮೃತರು. ರಸ್ತೆ ಮೇಲೆ ಕೇಬಲ್ ವೈರ್ ಹರಿದು ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು, ಆ ವೈರ್‌ಗೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

125 ಜನರಿದ್ದ ವಿಮಾನ ಪತನ: 34 ಜನ ಸಾವು ಶಂಕೆ!? 20ಕ್ಕೂ ಅಧಿಕ ಮಂದಿ ನಾಪತ್ತೆ!

0

ಕೊಲಂಬಿಯಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ವಾಯುಪಡೆಯ ವಿಮಾನ ಪತನಗೊಂಡು ಕನಿಷ್ಠ ಮೂವತ್ತನಾಲ್ಕು ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಸೋಮವಾರ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ತೀವ್ರವಾಗಿದೆ. ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿ ನಂತರ ಅದು ಸ್ಫೋಟಗೊಂಡಿತು ಮತ್ತು ಪರಿಣಾಮವಾಗಿ, ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ವರದಿ ತಿಳಿಸಿದೆ.

ದಾವಣಗೆರೆ ದಕ್ಷಿಣ: ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಮುಸ್ಲಿಮ್ ನಾಯಕರಿಂದ ಪ್ರತಿಭಟನೆ

0

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನಿಯೋಜನೆ ಸಂಬಂಧಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸ್ ವಿರುದ್ಧ ಬಂಡಾಯ ಸೂಚಿಸಿದ್ದಾರೆ. 23 ಮಂದಿ ಮುಸ್ಲಿಮ್ ನಾಯಕರು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸಮುದಾಯದ ಬೇಡಿಕೆಗೆ ಸ್ಪಂದಿಸದೇ, ಎಸ್‌ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರಿಗೆ ಟಿಕೆಟ್ ನೀಡಿರುವುದು ಈ ಪ್ರಚಂಡ ಪ್ರತಿಭಟನೆಯ ಕಾರಣವಾಗಿದೆ. ನಾಮಪತ್ರ ಸಲ್ಲಿಸಿದ ಮುಖಂಡರು, “ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂದು ನಾವು ವೀಕ್ಷಿಸುತ್ತಿದ್ದೆವು, ಆದರೆ ನಮ್ಮ ಬೇಡಿಕೆ ನಿರಾಕರಿಸಲಾಗಿದೆ” ಎಂದು ಹೇಳಿದರು.

ಕಟ್ಟುನಿಟ್ಟಿನ ಪ್ರಸ್ತುತಿಯಲ್ಲಿ, 100ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಬೇಕೆಂದು ಮುಸ್ಲಿಮ್ ಸಮುದಾಯ ಕರೆ ನೀಡಿದ್ದು, 23 ಮಂದಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಪ್ರತಿಕ್ರಿಯಿಸಿ, “ಎಲ್ಲಾವತ್ತು ನಾವು ಹಿಂದೆಗೆ ಸರಿಯುವುದಿಲ್ಲ. ಶಿಷ್ಯತ್ವದಲ್ಲಿ ಶ್ರಮಿಸಿದ್ದೇವೆ, ಗುರುಗಳ ಮಾರ್ಗದರ್ಶನದಲ್ಲಿ ಮುಂದೆ ಸಾಗುತ್ತೇವೆ” ಎಂದು ಹೇಳಿದರು.

ಈ ಘಟನೆ ದಾವಣಗೆರೆ ದಕ್ಷಿಣದ ಚುನಾವಣಾ ಹವಾಮಾನದಲ್ಲಿ ಪ್ರಮುಖ ತಾತ್ಸಾರವನ್ನು ಹುಟ್ಟಿಸಿದೆ.

error: Content is protected !!