ಪಹಲ್ಗಾಮ್ ದಾಳಿ: ಈಗಲಾದ್ರೂ ಹಿಂದುಗಳು ಅರ್ಥ ಮಾಡಿಕೊಳ್ಳಿ. ಜಾತಿ ಜಾತಿ ಎಂದು ಕಿತ್ತಾಡಬೇಡಿ – ಪ್ರತಾಪ್ ಸಿಂಹ

0
Spread the love

ಮೈಸೂರು: ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 40 ಕನ್ನಡಿಗರು ಸಿಲುಕಿರುವ ಶಂಕೆ ಇದೆ. ಉಗ್ರರ ಪೈಶಾಚಿಕ ಕೃತ್ಯದಲ್ಲಿ ಮೂವರು ಕನ್ನಡಿಗರ ಜೀವ ಹೋಗಿದೆ. ಇನ್ನೂ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

Advertisement

ಧರ್ಮವನ್ನ ಕೇಳಿ ಹತ್ಯೆ ಮಾಡಿರುವುದು ಬಹಳ ದುಃಖವಾಗಿದೆ. ಮುಸಲ್ಮಾನರು ಧರ್ಮಾಂಧರು ಅಂತ ಹೇಳಲ್ಲ. ಹಿಂದುಗಳಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಲು ಬಯಸುತ್ತೇನೆ. ನಿರಭಿಮಾನಿ ಹಿಂದುಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು. ಹೆಸರನ್ನ ಕೇಳಿ ಹತ್ಯೆ ಮಾಡಿದ್ದಾರೆ ಎಂದರೆ ಅಲ್ಲಿ ಮೊಹಮದ್ ಅಂತ ಹೆಸರೇಳಿದ್ರೆ ಕೊಲ್ಲುತ್ತಿರಲಿಲ್ಲ. ಈಗಲಾದರೂ ಹಿಂದುಗಳು ಅರ್ಥ ಮಾಡಿಕೊಳ್ಳಿ. ಜಾತಿ ಜಾತಿ ಎಂದು ಕಿತ್ತಾಡಬೇಡಿ ಎಂದರು.

ಯಾರ ಸಹಕಾರ ಇಲ್ಲದೆ ಇಂತಹ ಘಟನೆ ನಡೆಯಲ್ಲ. ಇದರಲ್ಲಿ ಸ್ಥಳೀಯ ಮುಸ್ಲಿಮರ ಸಹಕಾರ ಇದೆ. ಇವತ್ತು ಜಗತ್ತಿನಲ್ಲಿ ನಡೆಯುವ ಅವಘಡಗಳನ್ನ ನೋಡಿದ್ರೆ ಗೊತ್ತಾಗುತ್ತದೆ. ಮುಸ್ಲಿಮರ ಮನಸ್ಥಿತಿ ಏನು ಅಂತ. ಅದಕ್ಕೆ ಅಂಬೇಡ್ಕರ್ ಅವರು ಪರಿ ಪರಿಯಾಗಿ ಹೇಳಿದ್ರು. ನಮ್ಮ ದೇಶದಲ್ಲಿ ಮುಸ್ಲಿಮರು ಇರೋದು ಬೇಡ ಅಂತ ಹೇಳಿದ್ರು. ತಿಳಿಗೇಡಿ ಹಿಂದುಗಳಿಗೆ ಹೇಳಲು ಬಯಸುತ್ತೇನೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಒಗ್ಗಟ್ಟು ಇಲ್ಲದ ಹಿಂದುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.  


Spread the love

LEAVE A REPLY

Please enter your comment!
Please enter your name here