ಪಹಲ್ಗಾಮ್ ದಾಳಿ ಎಫೆಕ್ಟ್: ಪಾಕ್ ಮಹಿಳೆಯನ್ನು ಮದುವೆಯಾಗಿದ್ದ CRPF​ ಯೋಧ ಸೇವೆಯಿಂದ ವಜಾ!

0
Spread the love

ನವದೆಹಲಿ:- ಪಹಲ್ಗಾಮ್ ದಾಳಿ ಹಿನ್ನೆಲೆ ಈಗಾಗಲೇ ಪಾಕಿಸ್ತಾನ ಹಾಗೂ ಭಾರತ ದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ ಸಿಆರ್​ಪಿಎಫ್​ ಯೋಧನನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಅವರನ್ನು ಆನ್‌ಲೈನ್‌ನಲ್ಲಿ ಮದುವೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನ್ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Advertisement

ಮದುವೆಯ ಮಾಹಿತಿಯನ್ನು ಮುನೀರ್ ಮರೆಮಾಚಿದ್ದ ಮತ್ತು ಮಹಿಳೆಯ ವೀಸಾ ಅವಧಿ ಮುಗಿದ ನಂತರವೂ ಅವಳನ್ನು ತನ್ನ ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ಆರೋಪಿಸಲಾಗಿದೆ. ಸಿಆರ್‌ಪಿಎಫ್ ಇದನ್ನು ಗಂಭೀರ ದುಷ್ಕೃತ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕರೆಯಲಾಗಿದೆ.

ವಜಾಗೊಳಿಸುವಿಕೆ ಕುರಿತು ಮಾತನಾಡಿರುವ ಮುನೀರ್, ಈ ಕ್ರಮದ ಬಗ್ಗೆ ನನಗೆ ಮೊದಲು ಮಾಧ್ಯಮಗಳಿಂದ ಮಾಹಿತಿ ಸಿಕ್ಕಿತು, ನಂತರ ಸಿಆರ್‌ಪಿಎಫ್‌ನಿಂದ ಪತ್ರ ಬಂದಿತು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ನಾನು ನಿಯಮಗಳನ್ನು ಪಾಲಿಸಿದೆ ಮತ್ತು ಈಗ ನ್ಯಾಯಾಲಯದಿಂದ ನ್ಯಾಯವನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here