Homekoppalಕಾರ್ಖಾನೆಗಳೆ ವಿರುದ್ಧ `ಪೇಂಟ್ ಅಭಿಯಾನ’

ಕಾರ್ಖಾನೆಗಳೆ ವಿರುದ್ಧ `ಪೇಂಟ್ ಅಭಿಯಾನ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಎಂಎಸ್‌ಪಿಎಲ್ ಅಥವಾ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನಕ್ಕೆ ಮತ್ತೊಂದು ರೀತಿಯ ಹೋರಾಟ ಸೇರ್ಪಡೆಯಾಗಿದ್ದು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ವತಿಯಿಂದ `ಪೇಂಟ್ ಅಭಿಯಾನ’ವನ್ನು ಆರಂಭಿಸಲಾಗಿದೆ.

ಕೊಪ್ಪಳದ ವಿವಿಧೆಡೆ ಮತ್ತು ಬಾಧಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಗೋಡೆ ಬರಹಗಳನ್ನು ಬರೆಯುವ ಉದ್ದೇಶ ಈ ಪೇಂಟ್ ಅಭಿಯಾನ ಹೊಂದಿದ್ದು, ಈ ಅಭಿಯಾನವನ್ನು ಜನಾಂದೋಲನವಾಗಿ ಸಹಕಾರದ ತತ್ವದಲ್ಲಿ ಮಾಡುವ ಉದ್ದೇಶದಿಂದ ಗೋಡೆ ಬರಹಕ್ಕೆ ಅಗತ್ಯ ಇರುವ ಬಣ್ಣಗಳನ್ನು ಕೊಪ್ಪಳ ಭಾಗ್ಯನಗರದ ವಿವಿಧ ಬಣ್ಣದ ವ್ಯಾಪಾರಿಗಳಿಂದ ದೇಣಿಗೆ ರೂಪದಲ್ಲಿ ಪಡೆದು ಗೋಡೆ ಬರಹಗಳನ್ನು ಬರೆಯಲು ಸಮಿತಿ ನಿರ್ಧರಿಸಿ ಚಾಲನೆ ನೀಡಲಾಗಿದೆ.

ಮೊದಲು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಿರಣ್ ಪೇಂಟ್ಸ್ ನ ಮಾಲೀಕರಾದ ಗವಿಸಿದ್ದಪ್ಪ ಚಿನ್ನೂರ್ ಮತ್ತು ಹುಲಿಗಮ್ಮ ದೇವಿ ಪೇಂಟ್ಸ್ನ ಮಾರುತಿ ದೇಣಿಗೆ ನೀಡಿದರು. ಈ ಅಭಿಯಾನದಲ್ಲಿ ಗೋಡೆ ಬರಹ ಬರೆಯಲು ಹಿರಿಯ ಚಿತ್ರ ಕಲಾವಿದರಾದ ರಾಜು ತೇರದಾಳ್ ಮತ್ತು ಕೃಷ್ಣ ಚಿತ್ರಗಾರವರು ಒಪ್ಪಿಕೊಂಡಿದ್ದು, ಇನ್ನೂ ಅನೇಕ ಬಣ್ಣದ ಅಂಗಡಿ ಮಾಲೀಕರು ಮತ್ತು ಚಿತ್ರ ಕಲಾವಿದರು ಸಹಕಾರ ನೀಡುವ ನಿರೀಕ್ಷೆಯಿದೆ. ಕೊಪ್ಪಳದಿಂದ ಕಾರ್ಖಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಆಂದೋಲನವನ್ನು ತೀವ್ರಗೊಳಿಸಲು ಜನರು ಅಳುಕದೆ ಸಹಕಾರ ನೀಡಲು ಕೋರಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಪ್ರೊ. ಅಲ್ಲಮಪ್ರಭು ಬೆಟ್ಟದೂರ್, ಬಸವರಾಜ ಶೀಲವಂತರ್, ಮಹಾಂತೇಶ್ ಕೊತಬಾಳ, ಮಂಜುನಾಥ ಜಿ.ಗೊಂಡಬಾಳ, ಶರಣು ಗಡ್ಡಿ ಇತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!